Tag: ಬ್ಯಾಂಕ್ ಸಿಬ್ಬಂದಿ

  • ಬೆಂಗಳೂರು| ಲೋನ್ ರಿಕವರಿಗೆ ಹೋದ ಬ್ಯಾಂಕ್ ಸಿಬ್ಬಂದಿಗೆ ಕಲ್ಲೇಟು

    ಬೆಂಗಳೂರು| ಲೋನ್ ರಿಕವರಿಗೆ ಹೋದ ಬ್ಯಾಂಕ್ ಸಿಬ್ಬಂದಿಗೆ ಕಲ್ಲೇಟು

    ಬೆಂಗಳೂರು: ಲೋನ್ ರಿಕವರಿಗೆ (Loan Recovery) ಹೋದ ಬ್ಯಾಂಕ್ ಸಿಬ್ಬಂದಿಗೆ (Bank Staff) ಕಲ್ಲಿನಿಂದ ತಲೆಗೆ ಹೊಡೆದಿರುವ ಘಟನೆ ಬೆಂಗಳೂರಿನ (Bengaluru) ಅನ್ನಪೂರ್ಣೇಶ್ವರಿ ನಗರದಲ್ಲಿ ನಡೆದಿದೆ.

    ಚಂದನ್ ಕಲ್ಲೇಟು ತಿಂದ ಬ್ಯಾಂಕ್ ಸಿಬ್ಬಂದಿ. ರಮೇಶ್ ಎಂಬಾತ ಕಳೆದ ಎರಡು ತಿಂಗಳಿನಿಂದ ಇಎಂಐ ಕಟ್ಟಿರಲಿಲ್ಲ. ಫೋನ್ ಮಾಡಿದರೆ ರಿಸೀವ್ ಮಾಡುತ್ತಿರಲಿಲ್ಲ. ಕೊನೆಗೆ ಫೋನ್ ರಿಸಿವ್ ಮಾಡಿದ ರಮೇಶ್ ನಾಗರಭಾವಿಯ ಬಿಡಿಎ ಕಾಂಪ್ಲೆಕ್ಸ್ ಬಳಿ ಬರುವಂತೆ ಸಿಬ್ಬಂದಿಗೆ ಹೇಳಿದ್ದ. ಬ್ಯಾಂಕ್ ಸಿಬ್ಬಂದಿ ಸ್ಥಳಕ್ಕೆ ಹೋದ ವೇಳೆ ಲೋನ್ ವಿಚಾರವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ರಮೇಶ್ ಏಕಾಏಕಿ ಅಲ್ಲೇ ಇದ್ದ ಕಲ್ಲಿನಿಂದ ಬ್ಯಾಂಕ್ ಸಿಬ್ಬಂದಿ ಚಂದನ್ ಮೇಲೆ ಕಲ್ಲೂ ತೂರಿ ಎಸ್ಕೇಪ್ ಆಗಿದ್ದಾನೆ. ಇದನ್ನೂ ಓದಿ: ಹಸೆಮಣೆ ಏರಬೇಕಿದ್ದ ಮಹಿಳೆ ರೋಲರ್‌ ಕೋಸ್ಟರ್‌ ಆಡುವಾಗ ಕೆಳಗೆ ಬಿದ್ದು ಸಾವು

    ಘಟನೆಯಿಂದ ಬ್ಯಾಂಕ್ ಸಿಬ್ಬಂದಿ ಚಂದನ್ ತಲೆಗೆ ಗಂಭೀರವಾದ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆ ಸಂಬಂಧ ಅನ್ನಪೂರ್ಣೇಶ್ವರಿ ನಗರ (Annapoorneshwari Nagar) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕಟೀಲ್‌ಗೆ ಮತ್ತೆ ರಾಜಕೀಯ ಸ್ಥಾನಮಾನ ಸಿಗಲಿ: ಮಧೂರು ದೇವಸ್ಥಾನದಲ್ಲಿ ಡಿಕೆಶಿ ಪ್ರಾರ್ಥನೆ

  • ಬೆಂಗಳೂರಿನಲ್ಲಿ ಬ್ಯಾಂಕ್ ಸಿಬ್ಬಂದಿ ಮನೆ ಮೇಲೆ ಇಡಿ ದಾಳಿ

    ಬೆಂಗಳೂರಿನಲ್ಲಿ ಬ್ಯಾಂಕ್ ಸಿಬ್ಬಂದಿ ಮನೆ ಮೇಲೆ ಇಡಿ ದಾಳಿ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ (Silicon City) ಬೆಳ್ಳಂಬೆಳಗ್ಗೆ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳಿಂದ ದಾಳಿ ನಡೆದಿದೆ.ಇದನ್ನೂ ಓದಿ: ಇಂಟರ್ನ್‌ಶಿಪ್‌ ಯೋಜನೆಗೆ ಚಾಲನೆ, ಸಿಗಲಿದೆ ತಿಂಗಳಿಗೆ 5 ಸಾವಿರ ಭತ್ಯೆ – ಅರ್ಜಿ ಸಲ್ಲಿಸೋದು ಹೇಗೆ? ಮಾನದಂಡ ಏನು?

    ರಾಷ್ಟ್ರೀಕೃತ ಬ್ಯಾಂಕ್ (Nationalized Bank) ಸಿಬ್ಬಂದಿಯ ಮನೆ ಮೇಲೆ ದಾಳಿ ನಡೆದಿದ್ದು, ಸತತವಾಗಿ ಎರಡನೇ ಬಾರಿಗೆ ದಾಳಿ ನಡೆಸಿದ್ದಾರೆ.

    ಸದ್ಯ 5 ಸ್ಥಳಗಳಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ದೆಹಲಿಯಲ್ಲಿ (Delhi) ದಾಖಲಾಗಿದ್ದ ಇಡಿ ಪ್ರಕರಣದ ಹಿನ್ನೆಲೆ ಬೆಂಗಳೂರಿನಲ್ಲಿ ಬ್ಯಾಂಕ್ ಸಿಬ್ಬಂದಿಯ ಮೇಲೆ ಸತತವಾಗಿ ಎರಡು ದಿನಗಳಿಂದ ದಾಳಿ ನಡೆಸಿದ್ದಾರೆ. ಗುರುವಾರ ದಾಳಿ ನಡೆಸಿದ್ದ ಇಡಿ ಅಧಿಕಾರಿಗಳು ಇಂದು (ಅ.4) ಬೆಳಿಗ್ಗೆ ದಾಳಿ ಮಾಡಿದ್ದಾರೆ.ಇದನ್ನೂ ಓದಿ: ದಸರಾ ವಿಶೇಷ; ಉತ್ತರ ಕರ್ನಾಟಕ ಶೈಲಿಯ ತಾಲಿಪಟ್ಟು ರೆಸಿಪಿ ನಿಮಗಾಗಿ

  • ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ – ಮೂವರು ಬ್ಯಾಂಕ್ ಸಿಬ್ಬಂದಿಗೆ ಎಸ್‌ಐಟಿ ನೋಟಿಸ್

    ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ – ಮೂವರು ಬ್ಯಾಂಕ್ ಸಿಬ್ಬಂದಿಗೆ ಎಸ್‌ಐಟಿ ನೋಟಿಸ್

    ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ (Valmiki Development Corporation Scam) ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಬ್ಯಾಂಕ್ ಸಿಬ್ಬಂದಿಗೆ ಎಸ್‌ಐಟಿ ನೋಟಿಸ್ (SIT Notice) ನೀಡಿದೆ.

    ಯೂನಿಯನ್ ಬ್ಯಾಂಕ್‌ನ ಮೂವರು ಸಿಬ್ಬಂದಿಗೆ ಎಸ್‌ಐಟಿ ನೋಟಿಸ್ ಕೊಟ್ಟಿದೆ. ಬ್ಯಾಂಕ್ ಮ್ಯಾನೇಜರ್ ಸುಚಿಸ್ಮಿತ ರೌಲ್, ಬ್ಯಾಂಕ್ ಬ್ರಾಂಚ್ ಹೆಡ್ ದೀಪಾ ಎಸ್, ಕೃಷ್ಣಮೂರ್ತಿಗೆ ನೋಟಿಸ್ ನೀಡಲಾಗಿದೆ. ತುರ್ತಾಗಿ ವಿಚಾರಣೆಗೆ ಹಾಜರಾಗಲು ನೋಟಿಸ್ ಕೊಡಲಾಗಿದೆ. ಇದನ್ನೂ ಓದಿ: ವಾಲ್ಮೀಕಿ ನಿಗಮದ ಹಗರಣ – ಸಿಎಂ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಲಿ: ಎನ್.ರವಿಕುಮಾರ್ ಆಗ್ರಹ

    ಸಿಬಿಐ ಬಳಿಕ ಇ.ಡಿ ಈ ಪ್ರಕರಣಕ್ಕೆ ಎಂಟ್ರಿಕೊಟ್ಟಿದ್ದು, ಯೂನಿಯನ್ ಬ್ಯಾಂಕ್ ನೀಡಿದ ದೂರಿನ ಮಾಹಿತಿ ಪಡೆದಿದೆ. ಸಿಬಿಐ ಬಳಿ ಇ.ಡಿ ಅಧಿಕಾರಿಗಳು ಮಾಹಿತಿ ಪಡೆದುಕೊಂಡಿದ್ದಾರೆ. ಹಣ ಅಕ್ರಮ ವರ್ಗಾವಣೆ (ಹವಾಲ) ನಡೆದಿರೋ ಶಂಕೆ ಹಿನ್ನೆಲೆ ಇ.ಡಿ ಮಾಹಿತಿ ಪಡೆದಿದ್ದು, ಸಿಬಿಐ ಬಳಿ ಎಫ್‌ಐಆರ್ ಬಗೆಗಿನ ಮಾಹಿತಿ ಪಡೆದಿದೆ. ಇದನ್ನೂ ಓದಿ: ರಾಹುಲ್ ಗಾಂಧಿ ವಿಪಕ್ಷ ನಾಯಕ ಆಗಲಿ ಅನ್ನೋದು ನಮ್ಮೆಲ್ಲರ ಆಸೆ: ಜಿ.ಪರಮೇಶ್ವರ್

    ಸಿಬಿಐ ಬಳಿಕ ಇ.ಡಿ ಎಫ್‌ಐಆರ್ ದಾಖಲಿಸುವ ಸಾಧ್ಯತೆಯಿದ್ದು, ಮುಂದಿನ ವಾರ ಎಫ್‌ಐಆರ್ ದಾಖಲು ಮಾಡಲು ತಯಾರಿ ನಡೆಸಿದ್ದಾರೆ ಎಂದು ಉನ್ನತ ಮೂಲಗಳು ‘ಪಬ್ಲಿಕ್ ಟಿವಿ’ಗೆ ಮಾಹಿತಿ ನೀಡಿದೆ. ಈಗಾಗಲೇ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಹಗರಣಕ್ಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯೂನಿಯನ್ ಬ್ಯಾಂಕ್ ತನ್ನ ಮೂವರು ಸಿಬ್ಬಂದಿಯನ್ನು ಅಮಾನತುಗೊಳಿಸಿದೆ. ಇದನ್ನೂ ಓದಿ: ಗ್ಯಾರಂಟಿಗಳನ್ನು ಮತ ಪಡೆಯಲು ನೀಡಿಲ್ಲ, ಯಾವುದೇ ಕಾರಣಕ್ಕೂ ಶಕ್ತಿ ಯೋಜನೆ ನಿಲ್ಲಿಸಲ್ಲ: ರಾಮಲಿಂಗಾ ರೆಡ್ಡಿ

  • ಟಾಯ್ಲೆಟ್‍ನಲ್ಲಿ ಬ್ಯಾಂಕ್ ಸಿಬ್ಬಂದಿಯನ್ನು ಕೂಡಿ ಹಾಕಿ ಕೆಜಿಗಟ್ಟಲೆ ಚಿನ್ನ ಹೊತ್ತೊಯ್ದರು

    ಟಾಯ್ಲೆಟ್‍ನಲ್ಲಿ ಬ್ಯಾಂಕ್ ಸಿಬ್ಬಂದಿಯನ್ನು ಕೂಡಿ ಹಾಕಿ ಕೆಜಿಗಟ್ಟಲೆ ಚಿನ್ನ ಹೊತ್ತೊಯ್ದರು

    ಚೆನ್ನೈ: ಟಾಯ್ಲೆಟ್‍ನಲ್ಲಿ ಬ್ಯಾಂಕ್ ಸಿಬ್ಬಂದಿಯನ್ನು ಕೂಡಿ ಹಾಕಿ ಕೋಟ್ಯಾಂತರ ರೂಪಾಯಿ ಮೌಲ್ಯದ ಮೂವತ್ತೆರಡು ಕೆಜಿ ಚಿನ್ನಾಭರಣವನ್ನು ಖದೀಮರು ಲೂಟಿ ಮಾಡಿರುವ ಘಟನೆ ಚೆನ್ನೈನಲ್ಲಿ ನಡೆದಿದೆ.

    ನಗರದ ಅರುಂಬಕ್ಕಂ ಪ್ರದೇಶದಲ್ಲಿರುವ ಫೆಡ್‍ಬ್ಯಾಂಕ್ ಗೋಲ್ಡ್ ಲೋನ್‍ನಲ್ಲಿ ದರೋಡೆ ಮಾಡಲು ಮಾಸ್ಕ್ ಧರಿಸಿ ನುಗ್ಗಿದ ಕಳ್ಳರು ಸ್ಟ್ರಾಂಗ್ ರೂಮ್‍ನ ಕೀಗಳನ್ನು ತೆಗೆದುಕೊಂಡು ಮೂವರು ಬ್ಯಾಂಕ್ ಉದ್ಯೋಗಿಗಳನ್ನು ಶೌಚಾಲಯದಲ್ಲಿ ಬೀಗ ಹಾಕಿ ಕೂಡಿಹಾಕಿದ್ದಾರೆ. ನಂತರ ಕ್ಯಾರಿ ಬ್ಯಾಗ್‍ನಲ್ಲಿದ್ದ 32 ಕೆಜಿ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ ಎಂದು ಪೊಲೀಸ್ ಕಮಿಷನರ್ ಶಂಕರ್ ಜೀವಲ್ ತಿಳಿಸಿದ್ದಾರೆ.

    ಈ ಕುರಿತಂತೆ ಪ್ರತಿಕ್ರಿಯಿಸಿದ ಸೆಕ್ಯುರಿಟಿ ಗಾರ್ಡ್, ಕಳ್ಳರು ನನಗೆ ನೀಡಿದ ತಂಪು ಪಾನೀಯವನ್ನು ಸೇವಿಸಿದ ನಂತರ ನಾನು ಪ್ರಜ್ಞಾಹೀನನಾಗಿದ್ದೇನೆ. ಎಲ್ಲರೂ ಈಗ ಚೆನ್ನಾಗಿದ್ದಾರೆ. ಯಾವುದೇ ಉದ್ಯೋಗಿ ಪ್ರಜ್ಞಾಹೀನವಾಗಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಂಧಿತ ಉಗ್ರರ ವಿಚಾರಣೆಯ ವೇಳೆ ಮಾಹಿತಿ ಬಹಿರಂಗ- ಗುಪ್ತಚರ ಇಲಾಖೆಯಿಂದ ಎಚ್ಚರಿಕೆ

    ಈ ದರೋಡೆಯನ್ನು ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಯೇ ನಡೆಸಿರಬಹುದು ಎಂಬ ಅನುಮಾನವನ್ನು ಜಂಟಿ ಪೊಲೀಸ್ ಆಯುಕ್ತ ಟಿಎಸ್ ಅನ್ಬು ವ್ಯಕ್ತಪಡಿಸಿದ್ದಾರೆ. ಅಲ್ಲದೇ ಆರೋಪಿಗಳ ಪತ್ತೆಗೆ ಪೊಲೀಸರು ವಿಶೇಷ ತಂಡ ರಚಿಸಿದ್ದಾರೆ. ಇದನ್ನೂ ಓದಿ: ಧ್ವಜಾರೋಹಣಕ್ಕೆ ಈದ್ಗಾ ಮೈದಾನದಲ್ಲಿ ಸಿದ್ಧತೆ- ಅಹಿತಕರ ಘಟನೆ ನಡೆಯದಂತೆ ಖಾಕಿ ಭದ್ರತೆ

    Live Tv
    [brid partner=56869869 player=32851 video=960834 autoplay=true]

  • ಕನ್ನಡ ಮಾತಾಡಲ್ಲವೆಂದ ಬ್ಯಾಂಕ್ ಸಿಬ್ಬಂದಿ – ಮುತ್ತಿಗೆ ಹಾಕಿದ ರಕ್ಷಣಾ ವೇದಿಕೆ ಸದಸ್ಯರು

    ಕನ್ನಡ ಮಾತಾಡಲ್ಲವೆಂದ ಬ್ಯಾಂಕ್ ಸಿಬ್ಬಂದಿ – ಮುತ್ತಿಗೆ ಹಾಕಿದ ರಕ್ಷಣಾ ವೇದಿಕೆ ಸದಸ್ಯರು

    ಚಿಕ್ಕಬಳ್ಳಾಪುರ: ಗ್ರಾಹಕನೊಬ್ಬ ಬ್ಯಾಂಕಿಗೆ ತೆರಳಿದ್ದ ವೇಳೆ ಕನ್ನಡ ಮಾತಾಡುವುದಿಲ್ಲವೆಂದು ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಸಿಬ್ಬಂದಿ ಕಿರಿಕ್ ಮಾಡಿದ್ದ ಹಿನ್ನೆಲೆ, ಇಂದು ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರು ಬ್ಯಾಂಕಿಗೆ ಮುತ್ತಿಗೆ ಹಾಕಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದಲ್ಲಿ ನಡೆದಿದೆ.

    ವಿಜಯ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಎಂ.ಸತೀಶ್, ಉಪಾಧ್ಯಕ್ಷ ವಿನಯ್ ಈ ಕುರಿತು ಮಾತನಾಡಿದ್ದು, ಬ್ಯಾಂಕುಗಳು ಗ್ರಾಹಕರ ಸ್ನೇಹಿಯಾಗಿರಬೇಕಿದೆ. ಆದರೆ ಅನ್ಯ ರಾಜ್ಯದಿಂದ ಬಂದು ಉದ್ಯೋಗ ಮಾಡುತ್ತಾ ಸ್ಥಳೀಯ ಭಾಷೆಗಳ ಬಗ್ಗೆ ಅಸಡ್ಡೆ ತೋಡುವುದು ಖಂಡನೀಯ. ಬ್ಯಾಂಕ್ ಸಿಬ್ಬಂದಿ ‘ಐ ಡೋಂಟ್ ಟಾಕ್ ಕನ್ನಡ’ ಎಂದಿರುವುದು ಅತಿರೇಕದ ಪರಮಾವಧಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನ್ಯೂಯಾರ್ಕ್‍ನಲ್ಲಿ ಗಾಂಧೀಜಿ ವಿಗ್ರಹ ಧ್ವಂಸಗೊಳಿಸಿದ ದುಷ್ಕರ್ಮಿಗಳು!

    ಗ್ರಾಮೀಣ ಭಾಗದ ಜನತೆ ಬ್ಯಾಂಕಿಗೆ ಬರುವುದರಿಂದ ಅವರಿಗೆ ಕನ್ನಡ ಬಿಟ್ಟು ಬೇರೆ ಭಾಷೆ ಬರುವುದಿಲ್ಲ. ಅವರೊಂದಿಗೆ ಸೌಜನ್ಯದಿಂದ ವರ್ತಿಸುವುದನ್ನು ಬಿಟ್ಟು ದುರಂಕಾರದಿಂದ ವರ್ತಿಸಿರುವುದು ಖಂಡನೀಯವಾಗಿದೆ ಎಂದು ವಿರೋಧ ಮಾಡಿದ್ದಾರೆ. ಈ ವೇಳೆ ವೇದಿಕೆಯ ಕಾರ್ಯಕರ್ತರು ಬ್ಯಾಂಕ್ ವಿರುದ್ಧ ಧಿಕ್ಕಾರ ಕೂಗಿದರು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರುವುದನ್ನು ಗಮನಿಸಿದ ಬ್ಯಾಂಕ್ ವ್ಯವಸ್ಥಾಪಕ ಸ್ಥಳಕ್ಕೆ ದೌಡಾಯಿಸಿ ಪ್ರತಿಭಟನಾ ನಿರತರನ್ನು ಸಮಾಧಾನಗೊಳಿಸಿದರು. ಅಲ್ಲದೆ ಸಿಬ್ಬಂದಿಯಿಂದ ಕ್ಷಮೆ ಕೋರಿಸಿದ್ದಾರೆ.

    ಈ ವೇಳೆ ಬ್ಯಾಂಕಿನಲ್ಲಿ ಕನ್ನಡ ಮಾತನಾಡುವ ಸಹಾಯಕನನ್ನು ನೇಮಿಸಿ ಗ್ರಾಹಕರಿಗೆ ತೊಂದರೆ ಉಂಟಾಗದಂತೆ ನೋಡಿಕೊಳ್ಳುವ ಭರವಸೆ ನೀಡಿದಲ್ಲದೆ, ತ್ವರಿತವಾಗಿ ಕನ್ನಡ ಕಲಿಯುವುದಾಗಿ ತಿಳಿಸಿದ್ದಾರೆ. ನಂತರ ಪ್ರತಿಭಟನಾ ನಿರತರು ಸುಮ್ಮನಾಗಿದ್ದಾರೆ. ಇದನ್ನೂ ಓದಿ: ಅಪ್ರಾಪ್ತೆಯನ್ನು ಗರ್ಭಿಣಿ ಮಾಡಿದ ವಿವಾಹಿತನಿಗೆ 10 ವರ್ಷ ಜೈಲು, 25 ಸಾವಿರ ದಂಡ

  • ಒಂದೇ ಗ್ರಾಮದ 10 ವಿದ್ಯಾರ್ಥಿಗಳು, 6 ಬ್ಯಾಂಕ್ ಸಿಬ್ಬಂದಿಗೆ ಕೊರೊನಾ

    ಒಂದೇ ಗ್ರಾಮದ 10 ವಿದ್ಯಾರ್ಥಿಗಳು, 6 ಬ್ಯಾಂಕ್ ಸಿಬ್ಬಂದಿಗೆ ಕೊರೊನಾ

    – ಗ್ರಾಮದೇವತೆ ಜಾತ್ರೆ ರದ್ದು

    ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಭಾವನಸೌಂದತ್ತಿ ಗ್ರಾಮದಲ್ಲಿ ಕೊರೊನಾ ಸ್ಫೋಟಗೊಂಡಿದೆ. ಖಾಸಗಿ ಶಾಲೆಯ 10 ವಿದ್ಯಾರ್ಥಿಗಳು ಹಾಗೂ ಖಾಸಗಿ ಬ್ಯಾಂಕಿನ 6 ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಗ್ರಾಮಸ್ಥರು ಆತಂಕದಲ್ಲೇ ಬದುಕುತ್ತಿದ್ದಾರೆ. ಅಲ್ಲದೆ ಗ್ರಾಮದೇವತೆಯ ಜಾತ್ರೆಯನ್ನು ಸಹ ರದ್ದು ಮಾಡಲಾಗಿದೆ.

    ವಾರದ ಹಿಂದಷ್ಟೇ ಗ್ರಾಮದಲ್ಲಿ 24 ಕೊರೊನಾ ಪಾಸಿಟಿವ್ ಪ್ರಕರಣ ಬೆಳಕಿಗೆ ಬಂದಿದ್ದವು. ಇದರ ಮಧ್ಯೆ ಇದೀಗ ಒಂದೇ ದಿನದಲ್ಲಿ 16 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಮಹಾರಾಷ್ಟ್ರದ ನಂಟಿನಿಂದ ಒಂದೇ ಕುಟುಂಬದ ಐವರಿಗೆ ಇದೇ ಗ್ರಾಮದಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿತ್ತು. ಬಳಿಕ ಗ್ರಾಮದ 1 ಸಾವಿರಕ್ಕೂ ಹೆಚ್ಚು ಜನರ ಗಂಟಲು ದ್ರವ ಪರೀಕ್ಷೆ ಮಾಡಲಾಗಿತ್ತು.

    ಈಗ ಶಾಲಾ ಮಕ್ಕಳಲ್ಲಿಯೂ ಕೊರೊನಾ ಸೋಂಕು ಪತ್ತೆಯಾಗಿದ್ದು, ಪೋಷಕರಲ್ಲಿ ಆತಂಕ ಹೆಚ್ಚಿದೆ. ಕೊರೊನಾ ಸ್ಫೋಟದಿಂದ ಭಾವನಸೌಂದತ್ತಿ ಗ್ರಾಮದಲ್ಲಿ ಏಪ್ರಿಲ್ 2ರಂದು ನಡೆಯಬೇಕಿದ್ದ ಗ್ರಾಮ ದೇವತೆ ಸುಗಂಧಾದೇವಿ ಜಾತ್ರಾ ಮಹೋತ್ಸವ ರದ್ದು ಮಾಡಲು ಗ್ರಾಮದ ಮುಖಂಡರು ತೀರ್ಮಾನಿಸಿದ್ದು, ಕಳೆದ 65 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ದೇವಿ ಜಾತ್ರಾ ಮಹೋತ್ಸವ ರದ್ದಾಗಿದೆ.

  • ರೇಪ್ ಕೇಸ್ ಹಾಕ್ತೀನಿ – ಬ್ಯಾಂಕ್ ಸಿಬ್ಬಂದಿಗೆ ಅವಾಜ್ ಹಾಕಿದ್ದ ಮಹಿಳೆಯ ವಿರುದ್ಧ ದೂರು

    ರೇಪ್ ಕೇಸ್ ಹಾಕ್ತೀನಿ – ಬ್ಯಾಂಕ್ ಸಿಬ್ಬಂದಿಗೆ ಅವಾಜ್ ಹಾಕಿದ್ದ ಮಹಿಳೆಯ ವಿರುದ್ಧ ದೂರು

    ಬೆಂಗಳೂರು: ಹಣ ವಾಪಸ್ ಕೇಳಲು ಬಂದ ಬ್ಯಾಂಕ್ ಸಿಬ್ಬಂದಿಗೆ ಅತ್ಯಾಚಾರದ ಕೇಸ್ ಹಾಕುತ್ತೇನೆ ಎಂದು ಅವಾಜ್ ಹಾಕಿದ್ದ ಮಹಿಳೆಯ ವಿರುದ್ಧ ದೂರು ದಾಖಲಾಗಿದೆ. ಇದನ್ನೂ ಓದಿ: ಅತ್ಯಾಚಾರದ ಕೇಸ್ ಹಾಕ್ತೀನಿ – ಮನೆಗೆ ಬಂದ ಬ್ಯಾಂಕ್ ಸಿಬ್ಬಂದಿಗೆ ಮಹಿಳೆ ಅವಾಜ್

    ಸಂಗೀತಾ ಗೋಪಾಲ್ ವಿರುದ್ಧ ದೂರು ದಾಖಲಾಗಿದೆ. ಸಂಗೀತಾ ಗೋಪಾಲ್ ಡ್ರಗ್ಸ್ ಪೆಡ್ಲರ್ ರಾಹುಲ್ ಆಪ್ತೆ ಎನ್ನಲಾಗುತ್ತಿದೆ. ಇಂದಿರಾನಗರ ಪೊಲೀಸ್ ಠಾಣೆಗೆ ಸಾಮಾಜಿಕ ಕಾರ್ಯಕರ್ತೆ ಪ್ರಿಯಾ ಆರ್ಯಾ ದೂರು ನೀಡಿದ್ದಾರೆ.

    ಸಂಗೀತಾ ಗೋಪಾಲ್ ಬ್ಯಾಂಕ್ ಅಧಿಕಾರಿಗಳಿಗೆ ಸುಳ್ಳು ರೇಪ್ ಕೇಸ್ ಹಾಕುತ್ತೇನೆ ಎಂದು ಧಮ್ಕಿ ಹಾಕಿದ್ದಳು. ಬ್ಯಾಂಕ್ ಅಧಿಕಾರಿಗಳಿಗೆ ಧಮ್ಕಿ ಹಾಕಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

    ಬೆಂಗಳೂರು ಪೊಲೀಸರಿಗೆ ಟ್ವಿಟ್ಟರ್‌ನಲ್ಲೂ ಈ ಬಗ್ಗೆ ಸಾರ್ವಜನಿಕರು ದೂರು ನೀಡಿದ್ದರು. ಇದೀಗ ಬ್ಯಾಂಕ್ ಅಧಿಕಾರಿಯನ್ನ ಅಶ್ಲೀಲವಾಗಿ ನಿಂದಿಸಿದ್ದಾರೆಂದು ದೂರು ನೀಡಲಾಗಿದೆ. ಸದ್ಯ ಸಾಮಾಜಿಕ ಕಾರ್ಯಕರ್ತೆ ದೂರಿನ ಅನ್ವಯ ಸಂಗೀತಾಳನ್ನು ವಿಚಾರಣೆ ಮಾಡುವ ಸಾಧ್ಯತೆ ಇದೆ.

    ಏನಿದು ಪ್ರಕರಣ?
    ಬ್ಯಾಂಕಿನಲ್ಲಿ ಪಡೆದ ಸಾಲವನ್ನು ವಾಪಸ್ ಕೊಡಿ ಎಂದು ಕೇಳಲು ಮೂರು ಜನ ಬ್ಯಾಂಕ್ ಸಿಬ್ಬಂದಿ ಸಂಗೀತಾ ಗೋಪಾಲ್ ಮನೆಗೆ ಬಂದಿದ್ದರು. ಈ ವೇಳೆ ಮಹಿಳೆ ಸುಮ್ಮನೆ ಜಗಳ ಮಾಡಿ ನಿಮ್ಮ ಮೇಲೆ ಅತ್ಯಾಚಾರದ ಕೇಸ್ ಹಾಕುತ್ತೇನೆ ಎಂದು ಅವಾಜ್ ಹಾಕಿದ್ದಳು. ಸಂಗೀತಾ ಗೋಪಾಲ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

    ಬ್ಯಾಂಕ್ ಸಿಬ್ಬಂದಿಯನ್ನು ತಾನೇ ಎಳೆದಾಡಿ ನಿನ್ನ ಮೇಲೆ ಅತ್ಯಾಚಾರ ಕೇಸ್ ಹಾಕುತ್ತೇನೆ. ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರು ನೀಡುತ್ತೇನೆ ಎಂದು ಸಂಗೀತಾ ಬೆದರಿಕೆ ಹಾಕಿದ್ದಳು. ಅಲ್ಲದೇ ನಿಮ್ಮ ಫೋಟೋವನ್ನು ಫೇಸ್‍ಬುಕ್‍ಗೆ ಹಾಕಿ ಅರೆಸ್ಟ್ ಮಾಡಿಸುತ್ತೇನೆ ಎಂದಿದ್ದಳು. ಈ ವೇಳೆ ಸಿಬ್ಬಂದಿಯೋರ್ವರು ಸಂಗೀತಾ ಗೋಪಾಲ್ ಕಾಲಿಗೆ ಬಿದ್ದು ನಮ್ಮನ್ನು ಬಿಟ್ಟು ಬೀಡಿ ಎಂದು ಕೇಳಿಕೊಂಡರು ಮಹಿಳೆ ದರ್ಪ ತೋರಿದ್ದಳು. ಹಿರಿಯ ನಾಗರೀಕರು ಎಂಬ ಅರಿವಿಲ್ಲದೇ ಸಂಗೀತಾ ಗೋಪಾಲ್ ನಡೆದುಕೊಂಡ ರೀತಿಗೆ ನೆಟ್ಟಗರು ಛೀಮಾರಿ ಹಾಕಿದ್ದರು.

  • ಅತ್ಯಾಚಾರದ ಕೇಸ್ ಹಾಕ್ತೀನಿ – ಮನೆಗೆ ಬಂದ ಬ್ಯಾಂಕ್ ಸಿಬ್ಬಂದಿಗೆ ಮಹಿಳೆ ಅವಾಜ್

    ಅತ್ಯಾಚಾರದ ಕೇಸ್ ಹಾಕ್ತೀನಿ – ಮನೆಗೆ ಬಂದ ಬ್ಯಾಂಕ್ ಸಿಬ್ಬಂದಿಗೆ ಮಹಿಳೆ ಅವಾಜ್

    – ಕಾಲು ಹಿಡಿದುಕೊಂಡರೂ ಬಿಡದೆ ದರ್ಪ ತೋರಿದ ಮಹಿಳೆ

    ಬೆಂಗಳೂರು: ಸಾಲ ವಾಪಸ್ ಕೇಳಲು ಬಂದ ಬ್ಯಾಂಕ್ ಸಿಬ್ಬಂದಿಗೆ ಅತ್ಯಾಚಾರದ ಕೇಸ್ ಹಾಕುತ್ತೇನೆ ಎಂದು ಮಹಿಳೆ ಅವಾಜ್ ಹಾಕಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ಬ್ಯಾಂಕಿನಲ್ಲಿ ಪಡೆದ ಸಾಲವನ್ನು ವಾಪಸ್ ಕೊಡಿ ಎಂದು ಕೇಳಲು ಮೂರು ಜನ ಬ್ಯಾಂಕ್ ಸಿಬ್ಬಂದಿ ಮಹಿಳೆಯ ಮನೆಗೆ ಬಂದಿದ್ದಾರೆ. ಈ ವೇಳೆ ಮಹಿಳೆ ಸುಮ್ಮನೆ ಜಗಳ ಮಾಡಿ ನಿಮ್ಮ ಮೇಲೆ ಅತ್ಯಾಚಾರದ ಕೇಸ್ ಹಾಕುತ್ತೇನೆ ಎಂದು ಅವಾಜ್ ಹಾಕಿದ್ದಾಳೆ. ಮಹಿಳೆಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಬ್ಯಾಂಕ್ ಸಿಬ್ಬಂದಿಯನ್ನು ತಾನೇ ಎಳೆದಾಡಿ ನಿನ್ನ ಮೇಲೆ ಅತ್ಯಾಚಾರ ಕೇಸ್ ಹಾಕುತ್ತೇನೆ. ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರು ನೀಡುತ್ತೇನೆ ಎಂದು ಮಹಿಳೆ ಬೆದರಿಕೆ ಹಾಕಿದ್ದಾಳೆ. ಅಲ್ಲದೇ ನಿಮ್ಮ ಫೋಟೋವನ್ನು ಫೇಸ್‍ಬುಕ್‍ಗೆ ಹಾಕಿ ಅರೆಸ್ಟ್ ಮಾಡಿಸುತ್ತೇನೆ ಎಂದಿದ್ದಾಳೆ. ಈ ವೇಳೆ ಸಿಬ್ಬಂದಿಯೋರ್ವರು ಮಹಿಳೆಯ ಕಾಲಿಗೆ ಬಿದ್ದು ನಮ್ಮನ್ನು ಬಿಟ್ಟು ಬೀಡಿ ಎಂದು ಕೇಳಿಕೊಂಡರು ಮಹಿಳೆ ದರ್ಪ ತೋರಿದ್ದಾಳೆ. ಹಿರಿಯ ನಾಗರೀಕರು ಎಂಬ ಅರಿವಿಲ್ಲದೇ ಮಹಿಳೆ ನಡೆದುಕೊಂಡ ರೀತಿಗೆ ನೆಟ್ಟಗರು ಛೀಮಾರಿ ಹಾಕುತ್ತಿದ್ದಾರೆ.

     

  • ಸಿಬ್ಬಂದಿಯನ್ನು ಯಾಮಾರಿಸಿ ಕ್ಯಾಶ್ ವ್ಯಾನ್‍ನಿಂದಲೇ ಬರೋಬ್ಬರಿ 58 ಲಕ್ಷ ರೂ. ದೋಚಿದ್ರು!

    ಸಿಬ್ಬಂದಿಯನ್ನು ಯಾಮಾರಿಸಿ ಕ್ಯಾಶ್ ವ್ಯಾನ್‍ನಿಂದಲೇ ಬರೋಬ್ಬರಿ 58 ಲಕ್ಷ ರೂ. ದೋಚಿದ್ರು!

    ಹೈದರಾಬಾದ್: ಎಟಿಎಂಗೆ ಹಾಕಲು ವಾಹನದಲ್ಲಿ ಕೊಂಡೊಯ್ಯುತ್ತಿದ್ದ ಬರೋಬ್ಬರಿ 58 ಲಕ್ಷ ರೂ. ಹಣವನ್ನು ಖದೀಮರ ಗುಂಪೊಂದು ಬ್ಯಾಂಕ್ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿ ಗಮನವನ್ನು ಬೇರೆಡೆಗೆ ತಿರುಗಿಸಿ ದರೋಡೆ ಮಾಡಿದೆ.

    ಭದ್ರತಾ ಸಿಬ್ಬಂದಿ ಮತ್ತು ಬ್ಯಾಂಕಿನ ಸಿಬ್ಬಂದಿಗಳ ಗಮನವನ್ನು ತಿರುಗಿಸುವ ಮೂಲಕ ಸುಮಾರು 58 ಲಕ್ಷ ರೂಪಾಯಿಗಳನ್ನು ಲೂಟಿ ಮಾಡಲಾಗಿದೆ. ಮಂಗಳವಾರ ವನಸ್ಥಳಿಪುರಂ ಪ್ರದೇಶದಲ್ಲಿನ ಆಕ್ಸಿಸ್ ಬ್ಯಾಂಕ್ ಎಟಿಎಂನಲ್ಲಿ ಹಣವನ್ನು ತುಂಬಲು ಬ್ಯಾಂಕ್ ಸಿಬ್ಬಂದಿ ಹೋಗುತ್ತಿದ್ದರು. ಈ ವೇಳೆ ಚಾಲಾಕಿ ಖದೀಮರು ತಮ್ಮ ಕೈಚಳಕ ತೋರಿದ್ದಾರೆ.

    ವಾಹನದ ಇನ್ನೊಂದು ಕಡೆಯಲ್ಲಿ ಹಣ ಬಿದ್ದಿದೆ ಎಂದು ಭದ್ರತಾ ಸಿಬ್ಬಂದಿ ಮತ್ತು ಬ್ಯಾಂಕ್ ಸಿಬ್ಬಂದಿಯ ಗಮನವನ್ನು ಖದೀಮರ ತಂಡ ಅತ್ತಕಡೆ ತಿರುಗಿಸಿದೆ. ಬಳಿಕ ಅವರ ಕಣ್ತಪ್ಪಿಸಿ ವಾಹನದಿಂದ 58 ಲಕ್ಷ ರೂ. ತುಂಬಿದ್ದ ಬಾಕ್ಸ್ ನ್ನು ಕದ್ದು ಸ್ಥಳದಿಂದ ಕಾರಿನಲ್ಲಿ ಪರಾರಿಯಾಗಿದ್ದಾರೆ.

    ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಎಲ್‍ಬಿ ನಗರ ಡಿಸಿಪಿ ಸುನ್ಪ್ರೀತ್ ಸಿಂಗ್, “ಮಂಗಳವಾರ ಮಧ್ಯಾಹ್ನದ ಹೊತ್ತಿಗೆ 5ರಿಂದ 6 ಮಂದಿ ಖದೀಮರು ಹಣವನ್ನು ಕೊಂಡೊಯ್ಯುತ್ತಿದ್ದ ಭದ್ರತಾ ಮತ್ತು ಬ್ಯಾಂಕ್ ಸಿಬ್ಬಂದಿಯನ್ನು ಯಾಮಾರಿಸಿ, ವಾಹನದಿಂದ 58 ಲಕ್ಷ ರೂಪಾಯಿಗಳು ತಿಂಬಿಟ್ಟಿದ್ದ ಪೆಟ್ಟಿಗೆಯನ್ನು ಕಳವು ಮಾಡಿದ್ದಾರೆ ಎಂದು ತಿಳಿಸಿದರು.

    ಈ ಘಟನೆಗೆ ಸಂಬಂಧಿಸಿದ ಐಪಿಸಿ ಸೆಕ್ಷನ್ ಕಾಯ್ದೆ ಅಡಿಯಲ್ಲಿ ಈಗಾಗಲೇ ಪ್ರಕರಣ ದಾಖಲಿಸಲಾಗಿದೆ ಮತ್ತು ಆರೋಪಿಗಳನ್ನು ಬಂಧಿಸಲು ವಿಶೇಷ ತಂಡಗಳನ್ನು ರಚಿಸಲಾಗಿದೆ. ಅಲ್ಲದೆ ನಾವು ಘಟನೆ ನಡೆದಿದ್ದ ಸ್ಥಳದ ಹತ್ತಿರದಲ್ಲಿದ್ದ ಸಿ.ಸಿ.ಟಿ.ವಿ ದೃಶ್ಯಗಳನ್ನು ಕೂಡ ಪರಿಶೀಲಿಸಿದ್ದೇವೆ ಎಂದು ಸಿಂಗ್ ಹೇಳಿದರು.