Tag: ಬ್ಯಾಂಕು

  • ಬ್ಯಾಂಕುಗಳಿಗೆ ಸ್ಥಳೀಯ ಭಾಷಿಕರನ್ನೇ ನೇಮಿಸಿ- ನಿರ್ಮಲಾ ಸೀತಾರಾಮನ್ ಸಲಹೆ

    ಬ್ಯಾಂಕುಗಳಿಗೆ ಸ್ಥಳೀಯ ಭಾಷಿಕರನ್ನೇ ನೇಮಿಸಿ- ನಿರ್ಮಲಾ ಸೀತಾರಾಮನ್ ಸಲಹೆ

    ನವದೆಹಲಿ: ಇನ್ನುಮುಂದೆ ಬ್ಯಾಂಕುಗಳಿಗೆ (Banks) ಸ್ಥಳೀಯ ಭಾಷೆ (Local Language) ಮಾತನಾಡುವವರನ್ನೇ ಸಿಬ್ಬಂದಿಯಾಗಿ ನೇಮಕ ಮಾಡಿ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಸಲಹೆ ನೀಡಿದ್ದಾರೆ.

    ಮುಂಬೈನಲ್ಲಿ (Mumbai) ನಡೆದ ಭಾರತೀಯ ಬ್ಯಾಂಕುಗಳ ಸಂಘದ (Indian Banks Association) 75ನೇ ವಾರ್ಷಿಕ ಮಹಾಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ನೀವು ಅಲ್ಲಿ ಗ್ರಾಹಕರೊಂದಿಗೆ ವ್ಯವಹರಿಸಲು ಇದ್ದೀರೇ ಹೊರತು, ವ್ಯವಸ್ಥೆಯನ್ನು ಬೆಳೆಸಲು ಅಲ್ಲ ಎಂದು ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ನಾನ್‍ವೆಜ್ ಊಟಕ್ಕೆಂದು ಬಂದವರಿಗೆ ಗೋಮಾಂಸ ಸರ್ವ್ – ಹೋಟೆಲ್ ಮಾಲೀಕ ಅರೆಸ್ಟ್

    sbi bank
    ಸಾಂದರ್ಭಿಕ ಚಿತ್ರ

    ಶಾಖಾ ಮಟ್ಟದ ಬ್ಯಾಂಕುಗಳನ್ನು ನೋಡಿದಾಗ ಕೆಲವರು `ಹೇ ನೀವು ಹಿಂದಿ ಮಾತನಾಡುವುದಿಲ್ಲವೇ, ನೀವೆಲ್ಲೋ ಭಾರತೀಯರಲ್ಲ ಅನ್ನಿಸುತ್ತದೆ’ ಅಂದುಕೊಳ್ಳುತ್ತಾರೆ. ಇದು ಉತ್ತಮ ವ್ಯಾವಹಾರಿಕ (Business) ಸಂಬಂಧದ ಲಕ್ಷಣವಲ್ಲ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಮಳೆಯಲ್ಲೂ ಮೈಚಳಿ ಬಿಡಿಸುವಂತೆ ಮಾದಕ ಲುಕ್ ನೀಡುವ ಹಾಟ್ ನೈಟ್‌ಡ್ರೆಸ್ ಹೇಗಿವೆ ನೋಡಿ

    nirmala sithraman

    ಸ್ಥಳೀಯ ಭಾಷೆಯಲ್ಲಿ ವ್ಯವಹರಿಸಲು ಸಾಧ್ಯವಾಗದ ಸಿಬ್ಬಂದಿಯನ್ನು ಪ್ರಾದೇಶಿಕ ಶಾಖೆಗಳಿಗೆ ನೇಮಕ ಮಾಡಬಾರದು. ಹಾಗಾಗಿ ಉತ್ತಮ ಸಿಬ್ಬಂದಿ ನೇಮಕ ಮಾಡಿಕೊಳ್ಳುವಲ್ಲಿ ಹೆಚ್ಚು ಸಂವೇದನಾ ಶೀಲ ಮಾರ್ಗಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರೈತರ ಬೆಳೆ ಸಾಲ ಮನ್ನಾಕ್ಕೆ ಮಾತ್ರ ಸಿಎಂಪಿ ಸಮ್ಮತಿ – ಭಾನುವಾರದ ಸಮನ್ವಯ ಸಮಿತಿ ಸಭೆ ಗ್ರೀನ್‍ಸಿಗ್ನಲ್ ಕೊಡುತ್ತಾ..?

    ರೈತರ ಬೆಳೆ ಸಾಲ ಮನ್ನಾಕ್ಕೆ ಮಾತ್ರ ಸಿಎಂಪಿ ಸಮ್ಮತಿ – ಭಾನುವಾರದ ಸಮನ್ವಯ ಸಮಿತಿ ಸಭೆ ಗ್ರೀನ್‍ಸಿಗ್ನಲ್ ಕೊಡುತ್ತಾ..?

    ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರ್ಕಾರಕ್ಕೆ ಸವಾಲಾಗಿದ್ದ ಸಾಲಮನ್ನಾಕ್ಕೆ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳ ಅನುಷ್ಠಾನ ಸಮಿತಿ (ಸಿಎಂಪಿ) ಸಮ್ಮತಿ ನೀಡಿದೆ. ಆದರೆ, ಸಂಪೂರ್ಣ ಸಾಲಮನ್ನಾ ಬದಲಿಗೆ ಬೆಳೆ ಸಾಲಮನ್ನಾಕ್ಕೆ ಮಾತ್ರ ಗ್ರೀನ್ ಸಿಗ್ನಲ್ ಸಿಕ್ಕಿದೆ. ಸಮಿತಿ ಅಧ್ಯಕ್ಷ ವೀರಪ್ಪ ಮೊಯ್ಲಿ, ಸಚಿವರಾದ ಡಿ.ಕೆ. ಶಿವಕುಮಾರ್, ಆರ್.ವಿ. ದೇಶಪಾಂಡೆ, ಹೆಚ್. ಡಿ. ರೇವಣ್ಣ, ಬಂಡೆಪ್ಪ ಕಾಶೆಂಪುರ್ ನೇತೃತ್ವದ ಕರಡು ಸಮಿತಿಯ ವರದಿ ನಾಳೆ ಸಮನ್ವಯ ಸಮಿತಿಗೆ ರವಾನೆಯಾಗಲಿದೆ. ನಾಡಿದ್ದು ಭಾನುವಾರ ಮಧ್ಯಾಹ್ನ 3 ಗಂಟೆಗೆ ಸಮನ್ವಯ ಸಮಿತಿಯ ಸಭೆ ನಡೆಯಲಿದ್ದು, ಅಲ್ಲಿ ಒಪ್ಪಿಗೆ ಸಿಕ್ಕರೆ ಅನುಷ್ಠಾನಕ್ಕೆ ಬರಲಿದೆ.

    ಸಿಎಂಪಿ ನಿರ್ಧಾರ ಏನು?
    * ಸದ್ಯಕ್ಕೆ ಸಂಪೂರ್ಣ ಸಾಲಮನ್ನಾ ಇಲ್ಲ
    * ಕೇವಲ ಬೆಳೆ ಸಾಲ ಮಾತ್ರ ಮನ್ನಾ
    * ರಾಷ್ಟ್ರೀಕೃತ, ಸಹಕಾರಿ ಬ್ಯಾಂಕ್‍ಗಳಲ್ಲಿನ ಬೆಳೆ ಸಾಲ ಮನ್ನಾ
    * ಏಪ್ರಿಲ್ 1, 2009ರಿಂದ ಮೇ 31, 2018ರವರೆಗಿನ ಸಾಲ ಮನ್ನಾ
    * ಗರ್ಭಿಣಿಯರಿಗೆ ಮಾಸಿಕ 6,000 ಭತ್ಯೆ
    * ಮಗು ಹುಟ್ಟುವ 3 ತಿಂಗಳು ಮುನ್ನ, ಹುಟ್ಟಿದ 3 ತಿಂಗಳ ನಂತರ ಭತ್ಯೆ
    * ಸದ್ಯಕ್ಕೆ ವೃದ್ಧಾಪ್ಯ ವೇತನ ಹೆಚ್ಚಳ ಇಲ್ಲ.

    ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳ ಅನುಷ್ಠಾನ ಸಮಿತಿ (ಸಿಎಂಪಿ)ಯಲ್ಲಿ ಕಾಂಗ್ರೆಸ್-ಜೆಡಿಎಸ್ ಸದಸ್ಯರ ನಡುವೆ ಮಾತಿನ ಸಮರವೇ ನಡೆದಿದೆ. ಸಾಲಮನ್ನಾಕ್ಕೆ ಜೆಡಿಎಸ್ ಬಿಗಿಪಟ್ಟು ಹಿಡಿದರೆ, ಕಾಂಗ್ರೆಸ್ ಸದಸ್ಯರು ಸಂಪನ್ಮೂಲ ಕ್ರೋಢಿಕರಣ ಹೇಗೆ ಎಂದು ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ಸರ್ಕಾರದ ಯೋಜನೆಗಳಿಗೆ ಅನುದಾನ ಕಡಿತ ಬಗ್ಗೆಯೂ ಚರ್ಚೆ ಆಗಿದೆ. ಇಷ್ಟಕ್ಕೂ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರ ಮಧ್ಯೆ ಚರ್ಚೆಯಾ ಪ್ರಮುಖ ಅಂಶಗಳು ಇಂತಿದೆ.

    ಸಿಎಂಸಿ ಸಭೆ ಪ್ರಮುಖ ಚರ್ಚೆ ವಿಷಯಗಳು:
    * ಸಂಪೂರ್ಣ ಸಾಲಕ್ಕೆ ಜೆಡಿಎಸ್ ಸದಸ್ಯರ ಪಟ್ಟು
    * ಬೆಳೆ ಸಾಲಮನ್ನಾಕ್ಕೆ ಮಾತ್ರ ಸಮ್ಮತಿಸಿದ ಕಾಂಗ್ರೆಸ್
    * ಸಂಪನ್ಮೂಲ ಕ್ರೋಢೀಕರಣ ಪ್ರಶ್ನಿಸಿದ ಕಾಂಗ್ರೆಸ್
    * 34 ಸಾವಿರ ಕೋಟಿ ಬ್ಯಾಂಕುಗಳಿಗೆ ನೇರ ವರ್ಗಾವಣೆ
    * ಉಳಿದ ಹಣ ತೆಲಂಗಾಣ ಸರ್ಕಾರ ಮಾದರಿಯಲ್ಲಿ ಬಾಂಡ್‍ಗಳ ಮೂಲಕ ಸಲ್ಲಿಕೆ
    * ಕಾಂಗ್ರೆಸ್ ಸರ್ಕಾರದ ಯೋಜನೆಗಳಿಗೆ ಅನುದಾನ ಕಡಿತಕ್ಕೆ ಜೆಡಿಎಸ್ ಕಣ್ಣು
    * ಇಂದಿರಾ ಕ್ಯಾಂಟೀನ್‍ಗೂ ಜೆಡಿಎಸ್ ಆಕ್ಷೇಪ
    * ಜನಪ್ರಿಯ ಯೋಜನೆಗೆ ಅಡ್ಡಗಾಲು ಬೇಡ ಅಂದ ಕಾಂಗ್ರೆಸ್.