Tag: ಬ್ಯಾಂಕಿಂಗ್

  • ಬ್ಯಾಂಕಿಂಗ್ ಕ್ಷೇತ್ರವನ್ನು ಬಲಿಷ್ಠವೆಂದು ಪರಿಗಣಿಸಿರುವ ದೇಶಗಳಲ್ಲಿ ಭಾರತವೂ ಒಂದು- ರೋಜ್‌ಗಾರ್ ಮೇಳದಲ್ಲಿ ಮೋದಿ ಮಾತು

    ಬ್ಯಾಂಕಿಂಗ್ ಕ್ಷೇತ್ರವನ್ನು ಬಲಿಷ್ಠವೆಂದು ಪರಿಗಣಿಸಿರುವ ದೇಶಗಳಲ್ಲಿ ಭಾರತವೂ ಒಂದು- ರೋಜ್‌ಗಾರ್ ಮೇಳದಲ್ಲಿ ಮೋದಿ ಮಾತು

    -70,000ಕ್ಕೂ ಹೆಚ್ಚು ಹೊಸ ನೇಮಕಾತಿ ಪತ್ರಗಳ ವಿತರಣೆ

    ನವದೆಹಲಿ: ಮುಂದಿನ 25 ವರ್ಷಗಳು ಭಾರತಕ್ಕೆ (India) ಅತ್ಯಂತ ಮಹತ್ವದ್ದಾಗಿದೆ. ಭಾರತವು ಬ್ಯಾಂಕಿಂಗ್ (Banking) ಕ್ಷೇತ್ರವನ್ನು ಬಲಿಷ್ಠವೆಂದು ಪರಿಗಣಿಸಿರುವ ದೇಶಗಳಲ್ಲಿ ಒಂದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ.

    ರೋಜ್‌ಗಾರ್ ಮೇಳದ (Rozgar Mela) ಅಡಿಯಲ್ಲಿ 70,000ಕ್ಕೂ ಹೆಚ್ಚು ಹೊಸ ನೇಮಕಾತಿ ಪತ್ರಗಳನ್ನು (Appointment Letter) ಪ್ರಧಾನಿ ನರೇಂದ್ರ ಮೋದಿ ವಿತರಿಸಿದರು. ವೀಡಿಯೋ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮದಲ್ಲಿ ಮೋದಿ ಭಾಗಿಯಾಗಿ ನೇಮಕಾತಿ ಪತ್ರಗಳನ್ನು ನೀಡಿದರು. ಬಳಿಕ ಮಾತನಾಡಿದ ಅವರು, 9 ವರ್ಷಗಳ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ. ಹಿಂದಿನ ಸರ್ಕಾರದ ಅವಧಿಯಲ್ಲಿ ನಮ್ಮ ಬ್ಯಾಂಕಿಂಗ್ ಕ್ಷೇತ್ರವು ನಾಶವಾಗಿತ್ತು. ಇಂದು ನಾವು ಡಿಜಿಟಲ್ ವಹಿವಾಟು ಮಾಡಲು ಸಮರ್ಥರಾಗಿದ್ದೇವೆ ಎಂದರು. ಇದನ್ನೂ ಓದಿ: 5 ವರ್ಷಗಳಲ್ಲಿ ಕಾನೂನು ಹೋರಾಟಕ್ಕೆ ಕೇಂದ್ರ ಖರ್ಚು ಮಾಡಿದ್ದೆಷ್ಟು?

    ಆಜಾದಿ ಕಾ ಅಮೃತ ಮಹೋತ್ಸವದಲ್ಲಿ ದೇಶ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ಸಂದರ್ಭದಲ್ಲಿ ಸರ್ಕಾರಿ ನೌಕರನಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿರುವುದು ಹೆಮ್ಮೆಯ ಸಂಗತಿ. ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ಸಂಕಲ್ಪವನ್ನು ದೇಶದ ಜನತೆ ಕೈಗೊಂಡಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಎರಡು ಪ್ರಮುಖ ಮಸೀದಿಗಳ ತೆರವಿಗೆ ರೈಲ್ವೆ ಇಲಾಖೆ ನೋಟೀಸ್

    9 ವರ್ಷಗಳ ಹಿಂದೆ 140 ಕೋಟಿ ಜನರಿಗೆ ಫೋನ್ ಬ್ಯಾಂಕಿಂಗ್ ಇರಲಿಲ್ಲ. 2014ರಿಂದ ನಾವು ನಮ್ಮ ಬ್ಯಾಂಕಿಂಗ್ ಕ್ಷೇತ್ರವನ್ನು ಪುನರುಜ್ಜೀವನಗೊಳಿಸಿದ್ದೇವೆ. ದೇಶದಲ್ಲಿ ಸರ್ಕಾರಿ ಬ್ಯಾಂಕ್‌ಗಳ ನಿರ್ವಹಣೆಯನ್ನು ನಾವು ಬಲಪಡಿಸಿದ್ದೇವೆ. ನಾವು ಹಲವಾರು ಸಣ್ಣ ಬ್ಯಾಂಕ್‌ಗಳನ್ನು ಸಂಯೋಜಿಸಿ ದೊಡ್ಡ ಬ್ಯಾಂಕ್‌ಗಳನ್ನು ರಚಿಸಿದ್ದೇವೆ. ಸರ್ಕಾರವು ‘ದಿವಾಳಿ ಸಂಹಿತೆ’ ಕಾನೂನನ್ನು ಮಾಡಿದೆ. ಇದರಿಂದ ಯಾವುದೇ ಬ್ಯಾಂಕ್ ಕನಿಷ್ಠ ನಷ್ಟವನ್ನು ಮಾತ್ರ ಅನುಭವಿಸಬಹುದು ಎಂದರು. ಇದನ್ನೂ ಓದಿ: ಪ.ಬಂಗಾಳದಲ್ಲಿಯೂ ನಡೆದಿತ್ತು ಮಹಿಳೆಯರಿಬ್ಬರ ಅರೆಬೆತ್ತಲೆ ಮೆರವಣಿಗೆ- ವೀಡಿಯೋ ವೈರಲ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 2023ರ ಆರ್ಥಿಕ ವರ್ಷದಲ್ಲಿ GDP ಬೆಳವಣಿಗೆ ಶೇ.7ಕ್ಕಿಂತ ಹೆಚ್ಚಾಗಲಿದೆ – RBI ಗವರ್ನರ್‌

    2023ರ ಆರ್ಥಿಕ ವರ್ಷದಲ್ಲಿ GDP ಬೆಳವಣಿಗೆ ಶೇ.7ಕ್ಕಿಂತ ಹೆಚ್ಚಾಗಲಿದೆ – RBI ಗವರ್ನರ್‌

    ನವದೆಹಲಿ: 2023ರ ಆರ್ಥಿಕ ವರ್ಷದಲ್ಲಿ ದೇಶದ ಜಿಡಿಪಿ (GDP) ಬೆಳವಣಿಗೆ ಶೇ.7ಕ್ಕಿಂತ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಆರ್‌ಬಿಐ (RBI) ಗವರ್ನರ್‌ ಶಕ್ತಿಕಾಂತ ದಾಸ್ (Shaktikanta Das) ಹೇಳಿದ್ದಾರೆ.

    ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ಕಳೆದ ಹಣಕಾಸು ವರ್ಷದ 3 ಮತ್ತು 4ನೇ ತ್ರೈಮಾಸಿಕದಲ್ಲಿ ಆರ್ಥಿಕ ವೇಗ ಕಾಯ್ದುಕೊಂಡಿರುವ ಹಿನ್ನೆಲೆಯಲ್ಲಿ 2022-23ರ ಬೆಳವಣಿಗೆಯು 7 ಶೇಕಡಕ್ಕಿಂತ ಹೆಚ್ಚಾಗಿರುತ್ತದೆ. ಇದರಿಂದ ಅಚ್ಚರಿ ಪಡಬೇಕಾದುದ್ದಿಲ್ಲ. 2022-23 ರ ತಾತ್ಕಾಲಿಕ ವಾರ್ಷಿಕ ಅಂದಾಜುಗಳನ್ನು ಪ್ರಸಕ್ತ ವರ್ಷದ ಮೇ 31ರಂದು ಬಿಡುಗಡೆ ಮಾಡಲಾಗುತ್ತದೆ ಎಂದಿದ್ದಾರೆ.

    ವಾಸ್ತವವಾಗಿ ಆರ್‌ಬಿಐ ಮೇಲ್ವಿಚಾರಣೆ ಮಾಡಿದಾಗ ಎಲ್ಲಾ ಹೆಚ್ಚಿನ ಆವರ್ತನ ಸೂಚಕಗಳಲ್ಲಿ, 4ನೇ ತ್ರೈಮಾಸಿಕದಲ್ಲಿ ಆರ್ಥಿಕ ವೇಗ ಕಾಯ್ದುಕೊಂಡಿರುವುದು ಗಮನಕ್ಕೆ ಬಂದಿದೆ. ಪ್ರಸಕ್ತ ವರ್ಷದಲ್ಲೇ ಆರ್‌ಬಿಐ ಶೇ.6.5ರಷ್ಟು ಪ್ರಗತಿ ದರ ನಿರೀಕ್ಷಿಸಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬ್ಯಾಂಕ್‌ಗಳಲ್ಲಿ ಶುರುವಾಯ್ತು ಪಿಂಕ್ ನೋಟ್ ವಿನಿಮಯ – RBI ಆದೇಶದ ವಿರುದ್ಧ ಹೈಕೋರ್ಟ್‌ಗೆ ಅರ್ಜಿ

    ಹಣದುಬ್ಬರ, ಬ್ಯಾಂಕಿಂಗ್‌ ಒತ್ತಡಗಳು ಹಾಗೂ ಜಾಗತಿಕ ಅನಿಶ್ಚಿತತೆಯ ನಡುವೆ ಭಾರತೀಯ ಬ್ಯಾಂಕಿಂಗ್‌ ವ್ಯವಸ್ಥೆಯು ಸ್ಥಿರವಾಗಿದೆ. ಉತ್ತಮವಾದ ಬಂಡವಾಳ ಹೂಡಿಕೆ, ಆಸ್ತಿಯ ಗುಣಮಟ್ಟ ಹಾಗೂ‌ ಸುಧಾರಿತ ಲಾಭದಾಯಕತೆ ಇವೆಲ್ಲವೂ ದೇಶದ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಿವೆ ಎಂದಿದ್ದಾರೆ.

    ಆರ್‌ಬಿಐ ಮೇ 2022ರಿಂದ ರೆಪೊ ದರವನ್ನ 250 ಬೇಸಿಸ್‌ ಪಾಯಿಂಟ್‌ಗಳಷ್ಟು ಹೆಚ್ಚಿಸಿದೆ. ಮುಂದಿನ ದಿನಗಳಲ್ಲಿ ಇದಕ್ಕೆ ವಿರಾಮ ನೀಡುವ ಸಾಧ್ಯತೆಗಳಿವೆ. ಆದ್ರೆ ಇದು ನನ್ನ ಕೈಯಲ್ಲಿ ಇಲ್ಲ. ಆರ್ಥಿಕ ಸ್ಥಿತಿಯನ್ನು ಅವಲಂಭಿಸಿರುತ್ತದೆ ಎಂದು ಅವರು ಒತ್ತಿ ಹೇಳಿದ್ದಾರೆ. ಇದನ್ನೂ ಓದಿ: ಹವಾಲಾ ಹಣದ ಮೇಲೆ ED, IT ನಿಗಾ – ಪೆಟ್ರೋಲ್ ಬಂಕ್ ಮೇಲೆ ಕಣ್ಣು

  • SBI ಠೇವಣಿದಾರರಿಗೆ ಗುಡ್‌ನ್ಯೂಸ್ – ಠೇವಣಿ ಮೇಲಿನ ಬಡ್ಡಿ ದರ ಹೆಚ್ಚಳ

    SBI ಠೇವಣಿದಾರರಿಗೆ ಗುಡ್‌ನ್ಯೂಸ್ – ಠೇವಣಿ ಮೇಲಿನ ಬಡ್ಡಿ ದರ ಹೆಚ್ಚಳ

    ಮುಂಬೈ: ದೇಶದಲ್ಲೇ ಅತಿದೊಡ್ಡ ಬ್ಯಾಂಕಿಂಗ್ ಸಂಸ್ಥೆಯಾಗಿರುವ ಭಾರತೀಯ ಸ್ಟೇಟ್ ಬ್ಯಾಂಕ್ (SBI) ಠೇವಣಿಗಳ ಮೇಲಿನ ಬಡ್ಡಿ ದರವನ್ನು ಶೇ.0.40 ರಿಂದ ಶೇ 0.90ರ ವರೆಗೆ ಹೆಚ್ಚಿಸಿದೆ. 2 ಕೋಟಿ ಹಾಗೂ ಅದಕ್ಕಿಂತ ಹೆಚ್ಚಿನ ಮೊತ್ತದ ಠೇವಣಿಗಳಿಗೆ ಅನ್ವಯಿಸುವ ಈ ನೀತಿ ಇಂದಿನಿಂದಲೇ ಜಾರಿಗೆ ಬಂದಿದೆ.

    SBI - Yes Bank

    1 ವರ್ಷಕ್ಕಿಂತ ಹೆಚ್ಚಿನ ಹಾಗೂ 2 ವರ್ಷಕ್ಕಿಂತ ಕಡಿಮೆ ಅವಧಿಯ ಠೇವಣಿ ಮೇಲಿನ ಬಡ್ಡಿ ದರವನ್ನು ಶೇ. 0.40ರಷ್ಟು ಹೆಚ್ಚಿಸಲಾಗಿದೆ. 2 ವರ್ಷಕ್ಕಿಂತ ಹೆಚ್ಚಿನ ಹಾಗೂ 3 ವರ್ಷದವರೆಗಿನ ಠೇವಣಿಯ ಬಡ್ಡಿ ದರ ಶೇ. 0.65ರಷ್ಟು, 3 ವರ್ಷಕ್ಕಿಂತ ಹೆಚ್ಚಿನ ಹಾಗೂ 10 ವರ್ಷದವರೆಗಿನ ಠೇವಣಿ ಬಡ್ಡಿ ದರವನ್ನು ಶೇ. 0.90ರಷ್ಟು ಹೆಚ್ಚಿಸಲಾಗಿದೆ.

    ಈ ನಡುವೆ ಮತ್ತೊಂದು ಸರ್ಕಾರಿ ಸ್ವಾಮ್ಯದ ಸಂಸ್ಥೆಯಾಗಿರುವ ಬ್ಯಾಂಕ್ ಆಫ್ ಬರೋಡಾ (BOB) ಆರ್‌ಬಿಐ ಬಡ್ಡಿದರವನ್ನು ಬಿಗಿಗೊಳಿಸಿದ ನಂತರ ತನ್ನ ಸಾಲದ ದರದಲ್ಲಿ 10 ಬೇಸಿಸ್ ಪಾಯಿಂಟ್‌ಗಳವರೆಗೆ ಹೆಚ್ಚಳ ಘೋಷಿಸಿದೆ.

  • ಬ್ಯಾಂಕಿಂಗ್ ಸಂಬಂಧಿತ ಸಮಸ್ಯೆ ಬಗ್ಗೆ ಚರ್ಚಿಸಿದ ನಿರ್ಮಲಾ ಸೀತಾರಾಮನ್

    ಬ್ಯಾಂಕಿಂಗ್ ಸಂಬಂಧಿತ ಸಮಸ್ಯೆ ಬಗ್ಗೆ ಚರ್ಚಿಸಿದ ನಿರ್ಮಲಾ ಸೀತಾರಾಮನ್

    ನವದೆಹಲಿ: ಪ್ರಯಾಣ, ಪ್ರವಾಸೋದ್ಯಮ ಹಾಗೂ ಆತಿಥ್ಯ ವ್ಯವಹಾರಗಳ ಮೇಲೆ ಕೋವಿಡ್-19 ಪ್ರಭಾವವನ್ನು ಅನುಸರಿಸಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಉದ್ಯಮ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದರು. ಸಭೆಯಲ್ಲಿ ಬ್ಯಾಂಕಿಂಗ್ ಸಂಬಂಧಿತ ಹಲವಾರು ವಿಷಯಗಳ ಬಗ್ಗೆ ಚರ್ಚಿಸಲಾಗಿದೆ.

    ಕೋವಿಡ್-19 ಹಾವಳಿಯಿಂದ ಅನೇಕ ಆತಿಥ್ಯ ಕ್ಷೇತ್ರಗಳಿಗೆ ಭಾರೀ ಹೊಡೆತ ಉಂಟಾಗಿದೆ. ಪ್ರವಾಸೋದ್ಯಮ ಹಾಗೂ ಆತಿಥ್ಯ ಉದ್ಯಮದ ಮೇಲಿನ ಪರಿಣಾಮ ಹೆಚ್ಚು ಆಳವಾಗಿರುವುದರಿಂದ ಈ ವಲಯಗಳಲ್ಲಿ ಕೆಲಸ ಮಾಡುತ್ತಿರುವ ಉದ್ಯಮಕ್ಕೆ ಆರ್ಥಿಕ ನೆರವು ನೀಡುವಂತೆ ಚರ್ಚೆಯಲ್ಲಿ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಇದನ್ನೂ ಓದಿ: ಅಪ್ಪ, ಅಮ್ಮಾ ಐ ಲವ್ ಯೂ – ಯೋಧನ ಕರುಳು ಹಿಂಡುವ ಸಂದೇಶ

    ಕೇಂದ್ರ ಬಜೆಟ್ 2022-23ರಲ್ಲಿ ಹಣಕಾಸು ಸಚಿವೆ ಆತಿಥ್ಯ ಕ್ಷೇತ್ರಕ್ಕೆ ಸಾಕಷ್ಟು ಬೆಂಬಲವನ್ನು ನೀಡಿದ್ದಾರೆ. ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್(ಇಸಿಎಲ್‍ಜಿಎಸ್) ಅಡಿಯಲ್ಲಿ ಹೆಚ್ಚುವರಿ 50 ಸಾವಿರ ರೂ. ವಿಂಡೋವನ್ನು ತೆರೆಯುವ ಯೋಜನೆಯನ್ನು ಘೋಷಿಸಲಾಗಿದೆ. ಇದನ್ನೂ ಓದಿ: ನಾವು ಮಾತುಕತೆಗೆ ಸಿದ್ಧರಿದ್ದೇವೆ ಎಂದ ರಷ್ಯಾ!

    ಸಭೆಯಲ್ಲಿ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಭಾಗವತ್ ಕರದ್, ಹಣಕಾಸು ಕಾರ್ಯದರ್ಶಿ ಟಿ.ವಿ ಸೋಮನಾಥನ್, ಹಣಕಾಸು ಸೇವೆ, ಆರ್ಥಿಕ ವ್ಯವಹಾರ ಹಾಗೂ ಕಂದಾಯ ಕಾರ್ಯದರ್ಶಿ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.