Tag: ಬೌಲಿಂಗ್

  • ಒಂದೇ ಬಾರಿಗೆ ನಾನು ಎಲ್ಲ ಬೈಕ್ ರೈಡ್ ಮಾಡಲಾರೆ: ಭಜ್ಜಿ ಕುರಿತ ಪ್ರಶ್ನೆಗೆ ಧೋನಿ ಉತ್ತರ

    ಒಂದೇ ಬಾರಿಗೆ ನಾನು ಎಲ್ಲ ಬೈಕ್ ರೈಡ್ ಮಾಡಲಾರೆ: ಭಜ್ಜಿ ಕುರಿತ ಪ್ರಶ್ನೆಗೆ ಧೋನಿ ಉತ್ತರ

    ಪುಣೆ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಪತ್ರಿಕಾಗೋಷ್ಠಿಯಲ್ಲಿ ಸಿಎಸ್‍ಕೆ ಬೌಲರ್ ಹರ್ಭಜನ್ ಸಿಂಗ್ ಕುರಿತು ಪ್ರಶ್ನೆಗೆ ಉತ್ತರಿಸಿ ತನ್ನ ಬಳಿ ಇರುವ ಎಲ್ಲಾ ಬೈಕ್‍ಗಳನ್ನು ಒಮ್ಮೆಲೆ ರೈಡ್ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

    ಅಂದಹಾಗೆ ಐಪಿಎಲ್ ಫೈನಲ್ ಪಂದ್ಯದ ಕುರಿತ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದ ಧೋನಿ ಅವರಿಗೆ ಪತ್ರಕರ್ತರು ಹರ್ಭಜನ್ ಸಿಂಗ್ ಅವರಿಗೆ ಟೂರ್ನಿಯಲ್ಲಿ ಹೆಚ್ಚಿನ ಓವರ್ ಬೌಲ್ ಮಾಡಲು ನೀಡದಿರುವ ಕುರಿತು ಪ್ರಶ್ನಿಸಿದ್ದರು. ಈ ವೇಳೆ ಧೋನಿ ಕಾರು ಬೈಕ್ ಗಳ ಉದಾಹಣೆಯೊಂದಿಗೆ ಹೇಳಿಕೆ ನೀಡಿ ಎಲ್ಲರನ್ನು ನಗೆಗಾಡಲಲ್ಲಿ ತೇಲುವಂತೆ ಮಾಡಿದ್ದಾರೆ.

    ನನ್ನ ಮನೆಯಲ್ಲಿ ಹಲವು ಬೈಕ್ ಹಾಗೂ ಕಾರುಗಳಿದೆ. ಆದರೆ ಒಂದೇ ಸಮಯದಲ್ಲಿ ಅವುಗಳೆಲ್ಲವನ್ನು ಚಲಾಯಿಸಲು ಸಾಧ್ಯವಿಲ್ಲ. ತಂಡದಲ್ಲಿ 6 ರಿಂದ 7 ಬೌಲರ್ ಗಳು ಇರುವ ವೇಳೆ ಪಂದ್ಯದ ಪರಿಸ್ಥಿತಿಗಳು, ಎದುರಾಳಿ ಬ್ಯಾಟ್ಸ್ ಮನ್ ಯಾರು ಎಂಬ ಎಲ್ಲ ಅಂಶಗಳನ್ನು ಗಮನಿಸಿ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದು ಉತ್ತರಿಸಿದರು.

    ಈ ಹಿಂದಿನ ಟೂರ್ನಿಗಳಲ್ಲಿ ತಂಡದಲ್ಲಿ ನೇಗಿ ಮತ್ತು ಜಡೇಜಾ ಅವರಿಗೂ ಭಿನ್ನ ಸಂದರ್ಭಗಳಲ್ಲಿ ಬೌಲ್ ಮಾಡಲು ಅವಕಾಶ ನೀಡಿದ್ದೇನೆ. ಪಂದ್ಯದ ಪರಿಸ್ಥಿತಿ ಹಾಗೂ ಎದುರಾಳಿ ಆಟಗಾರರ ಸಾಮರ್ಥ್ಯವನ್ನು ಗಮನಿಸಿ ಬೌಲಿಂಗ್ ನಿರ್ಧರಿಸುತ್ತೇನೆ. ಈ ಹಿಂದಿನ ಪಂದ್ಯದಲ್ಲಿ ಹರ್ಭಜನ್ ಸಿಂಗ್ ಬೌಲಿಂಗ್ ಅಗತ್ಯವಾಗಿದ್ದರಿಂದ ಅವಕಾಶ ನೀಡಿದ್ದೆ. ಆದರೆ ಕ್ರಿಕೆಟ್ ನ ಎಲ್ಲಾ ಮಾದರಿಯ ಪಂದ್ಯಗಳನ್ನು ಗಮನಿಸಿದರೆ ಹರ್ಭಜನ್ ಹೆಚ್ಚಿನ ಅನುಭವ ಪಡೆದ ಆಟಗಾರರಾಗಿದ್ದಾರೆ ಎಂದು ವಿವರಿಸಿದರು.

    ಈ ಬಾರಿ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ಸ್ಪೀನ್ ಬೌಲರ್ ಎನಿಸಿಕೊಂಡಿದ್ದ ಹರ್ಭಜನ್ 13 ಪಂದ್ಯಗಳಲ್ಲಿ ಆಡಿದ್ದು, 8.48 ರ ಸರಾಸರಿಯಲ್ಲಿ 7 ವಿಕೆಟ್ ಪಡೆದಿದ್ದಾರೆ.

  • ಐಪಿಎಲ್ 2018 – ಬ್ಯಾಟಿಂಗ್, ಬೌಲಿಂಗ್, ಸಿಕ್ಸರ್: ಟಾಪ್ 3 ಆಟಗಾರರ ಪಟ್ಟಿ ಇಲ್ಲಿದೆ

    ಐಪಿಎಲ್ 2018 – ಬ್ಯಾಟಿಂಗ್, ಬೌಲಿಂಗ್, ಸಿಕ್ಸರ್: ಟಾಪ್ 3 ಆಟಗಾರರ ಪಟ್ಟಿ ಇಲ್ಲಿದೆ

    ಮುಂಬೈ: ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಆಟಗಾರರು ಭರ್ಜರಿ ಪ್ರದರ್ಶನ ನೀಡುವ ಮೂಲಕ ಅಭಿಮಾನಿಗಳಿಗೆ ಭರಪುರ ಮನರಂಜನೆಯನ್ನು ನೀಡುತ್ತಿದ್ದು, ಇದುವರೆಗೂ ಬ್ಯಾಟಿಂಗ್, ಬೌಲಿಂಗ್, ಸಿಕ್ಸರ್ ಸಿಡಿಸಿದ ಟಾಪ್ 3 ಸ್ಥಾನಗಳನ್ನು ಪಡೆದಿರುವ ಆಟಗಾರರ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.

    ಆರೆಂಜ್ ಕ್ಯಾಪ್
    1. ಅಂಬಟಿ ರಾಯುಡು  – 370 ರನ್ – ಸಿಎಸ್‍ಕೆ
    2. ವಿರಾಟ್ ಕೊಹ್ಲಿ        – 349 ರನ್ – ಆರ್‌ಸಿಬಿ
    3. ಕೇನ್ ವಿಲಿಯಮ್ಸ್    – 322 ರನ್ -ಎಸ್‍ಆರ್ ಎಚ್

    ಪರ್ಪಲ್ ಕ್ಯಾಪ್
    1. ಹಾರ್ದಿಕ್ ಪಾಂಡ್ಯ         – 11 ವಿಕೆಟ್ – ಮುಂಬೈ
    2. ಮಯಾಂಕ್ ಮಾರ್ಕಡೆ  – 11 ವಿಕೆಟ್ – ಮುಂಬೈ
    3. ಸಿದ್ದಾರ್ಥ್ ಕೌಲ್           – 11 ವಿಕೆಟ್ – ಮುಂಬೈ

    ಸಿಕ್ಸರ್
    1. ಕ್ರಿಸ್ ಗೇಲ್             – 23 – ಪಂಜಾಬ್
    2. ಎಬಿಡಿವಿಲಿಯರ್ಸ್   – 23 – ಆರ್‌ಸಿಬಿ
    3. ಆಂಡ್ರೆ ರುಸೆಲ್      – 23 – ಕೆಕೆಆರ್

    ಬೆಸ್ಟ್ ಎಕಾನಮಿ
    1. ಸಂದೀಪ್ ಶರ್ಮಾ    – 4.0 ಇ/ಆರ್ – ಎಸ್‍ಆರ್ ಎಚ್
    2. ಜೋಫ್ರಾ ಆರ್ಚರ್   – 6.00 ಇ/ಆರ್ – ಆರ್ ಆರ್
    3. ಅಂಕಿತ್ ರಜಪೂತ್  – 6.27 ಇ/ಆರ್ – ಪಂಜಾಬ್

    ಕಳೆದ ಬಾರಿಯ ಟೂರ್ನಿಯಲ್ಲಿ ಆಸೀಸ್, ಹೈದರಾಬಾದ್ ತಂಡದ ಆಟಗಾರ ಡೇವಿಡ್ ವಾರ್ನರ್ (641 ರನ್) ಆರೆಂಜ್ ಕ್ಯಾಪ್ ಪಡೆದಿದ್ದರು. ಭುವನೇಶ್ವರ್ ಕುಮಾರ್ 26 ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ಪಡೆದಿದ್ದರು.

  • 1 ವರ್ಷದ ನಂತ್ರ 10 ಓವರ್ ಬೌಲಿಂಗ್ ಮಾಡಿ 1 ವಿಕೆಟ್ ಕಿತ್ತ ಜಾದವ್

    1 ವರ್ಷದ ನಂತ್ರ 10 ಓವರ್ ಬೌಲಿಂಗ್ ಮಾಡಿ 1 ವಿಕೆಟ್ ಕಿತ್ತ ಜಾದವ್

    ನಾಗ್ಪುರ: ಕೇದಾರ್ ಜಾದವ್ 1 ವರ್ಷದ ಬಳಿಕ ಪೂರ್ಣ 10 ಓವರ್ ಬೌಲಿಂಗ್ ನಡೆಸಿ ಒಂದು ವಿಕೆಟ್ ಪಡೆದಿದ್ದಾರೆ.

    ಈ ಹಿಂದೆ ನ್ಯೂಜಿಲೆಂಡ್ ವಿರುದ್ಧ 2016ರ ಅಕ್ಟೋಬರ್ ನಲ್ಲಿ ರಾಂಚಿಯಲ್ಲಿ ನಡೆದ ಪಂದ್ಯದಲ್ಲಿ ಬೌಲಿಂಗ್ ನಡೆಸಿದ್ದರು. ಈ ಪಂದ್ಯದಲ್ಲಿ 8 ಓವರ್ ಎಸೆದು 27 ರನ್ ನೀಡಿದ್ದರು.

    ನಾಗ್ಪುರದಲ್ಲಿ ನಡೆಯುತ್ತಿರುವ ಇಂದಿನ ಪಂದ್ಯದಲ್ಲಿ ಕೇದಾರ್ ಜಾದವ್ ಒಂದು ವಿಕೆಟ್ ಪಡೆದಿದ್ದಾರೆ. 16 ರನ್ ಗಳಿಸಿದ್ದ ನಾಯಕ ಸ್ವೀವ್ ಸ್ಮಿತ್ ಅವರನ್ನು ಕೇದಾರ್ ಜಾದವ್ ಎಲ್‍ಬಿಗೆ ಕೆಡವುವಲ್ಲಿ ಯಶಸ್ವಿಯಾಗಿದ್ದಾರೆ.

    ಇಂದಿನ ಪಂದ್ಯದಲ್ಲಿ ಐದನೇಯವರಾಗಿ ಬೌಲಿಂಗ್ ಮಾಡಿದ ಜಾದವ್ 10 ಓವರ್ ಗಳ ಕೋಟಾದಲ್ಲಿ 48 ರನ್ ನೀಡಿ ಒಂದು ವಿಕೆಟ್ ಪಡೆದಿದ್ದಾರೆ.

  • ಐಸಿಸಿ ಬೌಲಿಂಗ್ ಶ್ರೇಯಾಂಕ ಪಟ್ಟಿಯಲ್ಲಿ ಜಸ್‍ಪ್ರೀತ್ ಬುಮ್ರಾ ಸರ್ವಶ್ರೇಷ್ಠ ಸಾಧನೆ!

    ಐಸಿಸಿ ಬೌಲಿಂಗ್ ಶ್ರೇಯಾಂಕ ಪಟ್ಟಿಯಲ್ಲಿ ಜಸ್‍ಪ್ರೀತ್ ಬುಮ್ರಾ ಸರ್ವಶ್ರೇಷ್ಠ ಸಾಧನೆ!

    ದುಬೈ: ಶ್ರೀಲಂಕಾ ವಿರುದ್ಧ ಏಕದಿನ ಸರಣಿಯಲ್ಲಿ 15 ವಿಕೆಟ್ ಕಿತ್ತು ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಜಸ್‍ಪ್ರೀತ್ ಬುಮ್ರಾ ಐಸಿಸಿ ಪ್ರಕಟಿಸಿದ ನೂತನ ಬೌಲಿಂಗ್ ಶ್ರೇಯಾಂಕ ಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಜಿಗಿದಿದ್ದಾರೆ.

    23 ವರ್ಷದ ಬುಮ್ರಾ ಜೂನ್ ತಿಂಗಳಿನಲ್ಲಿ 24 ಶ್ರೇಯಾಂಕ ಪಡೆಯುವ ಮೂಲಕ ಜೀವನ ಶ್ರೇಷ್ಠ ಸಾಧನೆ ಮಾಡಿದ್ದರು. ಆದರೆ ಈಗ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಉತ್ತಮ ಪ್ರದರ್ಶನವನ್ನು ನೀಡುವ ಮೂಲಕ 687 ರೇಟಿಂಗ್ ಪಡೆಯುವ ಮೂಲಕ 4 ಸ್ಥಾನಕ್ಕೆ ಹಾರಿ ಸರ್ವಶ್ರೇಷ್ಠ ಸಾಧನೆ ಮಾಡಿದ್ದಾರೆ.

    ಕೊನೆಯದಾಗಿ ಸೆಪ್ಟೆಂಬರ್ 3ಕ್ಕೆ ಅಪ್‍ಡೇಟ್ ಆಗಿರುವ ಶ್ರೇಯಾಂಕ ಪಟ್ಟಿಯಲ್ಲಿ ಅಕ್ಷರ್ ಪಟೇಲ್ 645 ರೇಟಿಂಗ್ ಪಡೆಯುವ ಮೂಲಕ 10ನೇ ಸ್ಥಾನವನ್ನು ಪಡೆದರೆ, 613 ರೇಟಿಂಗ್ ಪಡೆಯುವ ಮೂಲಕ ಭುವನೇಶ್ವರ್ ಕುಮಾರ್ 14ನೇ ಸ್ಥಾನವನ್ನು ಗಳಿಸಿದ್ದಾರೆ. ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 23ನೇ ಸ್ಥಾನ, ಅಮಿತ್ ಮಿಶ್ರಾ 25ನೇ ಶ್ರೇಯಾಂಕ ಪಡೆದಿದ್ದಾರೆ.

    ಆಸ್ಟ್ರೇಲಿಯಾದ ಜೋಶ್ ಹ್ಯಾಜಲ್‍ವುಡ್ 732 ರೇಟಿಂಗ್ ಪಡೆಯುವ ಮೂಲಕ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದರೆ, 718 ರೇಟಿಂಗ್ ಪಡೆದಿರುವ ದಕ್ಷಿಣ ಆಫ್ರಿಕಾದ ಇಮ್ರಾನ್ ತಾಹೀರ್ ಎರಡನೇ ಸ್ಥಾನ ಪಡೆದಿದ್ದಾರೆ. 701 ರೇಟಿಂಗ್ ಪಡೆದಿರುವ ಆಸ್ಟ್ರೇಲಿಯಾದ ಮೈಕಲ್ ಸ್ಟ್ರಾಕ್ ಮೂರನೇ ಸ್ಥಾನ ಪಡೆದಿದ್ದಾರೆ.

    ಏಕದಿನ ಬ್ಯಾಟಿಂಗ್ ನಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 887 ರೇಟಿಂಗ್ ಪಡೆಯುವ ಮೂಲಕ ಮೊದಲ ಸ್ಥಾನದಲ್ಲಿ ಮುಂದುವರೆದಿದ್ದಾರೆ. 764 ರೇಟಿಂಗ್ ಪಡೆಯುವ ಮೂಲಕ ರೋಹಿತ್ ಶರ್ಮಾ 9ನೇ ಸ್ಥಾನ ಪಡೆದುಕೊಂಡಿದ್ದಾರೆ.

    ಆಲ್‍ರೌಂಡರ್ ಟಾಪ್ 10 ಪಟ್ಟಿಯಲ್ಲಿ ಸ್ಥಾನಗಳಿಸಲು ಟೀಂ ಇಂಡಿಯಾ ಆಟಗಾರರು ವಿಫಲರಾಗಿದ್ದು, 228 ರೇಟಿಂಗ್ ಪಡೆಯುವ ಮೂಲಕ ರವೀಂದ್ರ ಜಡೇಜಾ 15ನೇ ಸ್ಥಾನಗಳಿಸಿದ್ದಾರೆ.

     

     

  • ಐಪಿಎಲ್ ಕ್ರಿಕೆಟ್: ಟಿವಿ ಸ್ಕ್ರೀನ್‍ನಲ್ಲಿ ಕಾಣೋ ಕೆಂಪು, ಹಸಿರು ಪಟ್ಟಿಯ ಅರ್ಥ ಏನು?

    ಐಪಿಎಲ್ ಕ್ರಿಕೆಟ್: ಟಿವಿ ಸ್ಕ್ರೀನ್‍ನಲ್ಲಿ ಕಾಣೋ ಕೆಂಪು, ಹಸಿರು ಪಟ್ಟಿಯ ಅರ್ಥ ಏನು?

    ಬೆಂಗಳೂರು: ಐಪಿಎಲ್ ಪಂದ್ಯದ ಟಿವಿ ಸ್ಕ್ರೀನ್ ನಲ್ಲಿ ಕಾಣುವ ಲೈವ್ ಸ್ಕೋರ್ ಬೋರ್ಡ್ ಕಳೆದ ಐಪಿಎಲ್‍ಗಳಿಂದ ಈ ಬಾರಿ ಮತ್ತಷ್ಟು ಆಕರ್ಷವಾಗಿ ಕಾಣುತ್ತಿದ್ದು ಇದಕ್ಕೆ ಈಗ ಮತ್ತೊಂದು ಟಿಕ್ಕರ್ ಸೇರಿಸಲಾಗಿದೆ.

    ಇಲ್ಲಿಯವರೆಗೆ ಸ್ಕ್ರೀನ್ ನಲ್ಲಿ ಇಬ್ಬರು ಬ್ಯಾಟ್ಸ್ ಮನ್ ಗಳ ಹೆಸರು, ಅವರ ಹೊಡೆದ ರನ್, ಬೌಲರ್ ಹೆಸರು ಮತ್ತು ಆತನ ಓವರ್, ಒಟ್ಟು ರನ್, ಎಷ್ಟು ವಿಕೆಟ್ ಹೋಗಿದೆ, ಎಷ್ಟು ಓವರ್ ಆಗಿದೆ, ಒಂದು ಓವರ್‍ನಲ್ಲಿ ಎಷ್ಟು ರನ್ ಆಗಿದೆ, ರನ್ ರೇಟ್ ಎಷ್ಟಿದೆ, ಎಷ್ಟು ಬಾಲಿನಲ್ಲಿ ಎಷ್ಟು ರನ್ ಬೇಕು ಎನ್ನುವ ಮಾಹಿತಿಯನ್ನು ತೋರಿಸಲಾಗುತಿತ್ತು. ಆದರೆ ಈಗ ತಂಡದ ಒಟ್ಟು ಮೊತ್ತ ಮತ್ತು ಆ ತಂಡ ಗಳಿಸಬೇಕಾದ ಟಾರ್ಗೆಟ್ ಮಧ್ಯೆ ಕೆಂಪು ಮತ್ತು ಹಸಿರು ಬಣ್ಣಗಳಿರುವ ಹೊಸ ಮೀಟರ್ ಪಟ್ಟಿ ಬಂದಿದೆ.

    ಈ ಹೊಸ ಪಟ್ಟಿ ವಿಶೇಷತೆ ಏನೆಂದರೆ ಕೆಲವೊಮ್ಮೆ ಪ್ರತಿ ಓವರ್‍ಗೆ ಒಮ್ಮೆ ಬದಲಾದರೆ ಒಮ್ಮೊಮ್ಮೆ ಬದಲಾಗದೇ ಇರುತ್ತದೆ. ಹೀಗಾಗಿ ಈ ಪಟ್ಟಿಯನ್ನು ಯಾಕೆ ಸ್ಕ್ರೀನ್ ನಲ್ಲಿ ತೋರಿಸುತ್ತಿದ್ದಾರೆ ಎನ್ನುವುದಕ್ಕೆ ಇಲ್ಲಿ ಮಾಹಿತಿಯನ್ನು ನೀಡಲಾಗಿದೆ.

    #1. ಈ ಮೀಟರ್ ಪಟ್ಟಿ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ ಮಾತ್ರ ಕಾಣುತ್ತದೆ.

    #2. ಮಧ್ಯದಲ್ಲಿರುವ ಪಾಯಿಂಟ್ ಒಂದು ತಂಡ ಗೆಲ್ಲಲು ಆ ಓವರ್ ನಲ್ಲಿ ಎಷ್ಟು ರನ್ ಗಳಿಸಬೇಕು ಎನ್ನುವ ವಿವರವನ್ನು ನೀಡುತ್ತದೆ.

    #3. ಎಡಗಡೆಯ ಭಾಗ ಕೆಂಪು ಬಣ್ಣವನ್ನು ಪ್ರತಿನಿಧಿಸಿದರೆ ಬಲಗಡೆಯ ಭಾಗ ಹಸಿರು ಬಣ್ಣವನ್ನು ಪ್ರತಿನಿಧಿಸುತ್ತದೆ. ಈ ಬಣ್ಣದ ಗೆರೆ ಪ್ರತಿ ಓವರ್‍ಗೆ ಬದಲಾಗುತ್ತಿರುತ್ತದೆ.

    #3 ಈಗ ತಂಡವೊಂದು ಆ ಪಂದ್ಯವನ್ನು ಜಯಗಳಿಸಲು ಪ್ರತಿ ಓವರ್‍ಗೆ 8 ರನ್ ಹೊಡೆಯಬೇಕು ಎಂದು ಭಾವಿಸಿಕೊಳ್ಳಿ. ಆ ತಂಡ ಆ ಓವರ್‍ನಲ್ಲಿ 7 ರನ್ ಗಳಿಸಿದರೆ ಬೇಕಾಗಿರುವ ರನ್ ರೇಟ್‍ಗಿಂತ ಹಿಂದೆ ಇದೆ ಎನ್ನುವುದನ್ನು ವೀಕ್ಷಕರಿಗೆ ವಿವರಿಸಲು ಕೆಂಪು ಪಟ್ಟಿಯನ್ನು ತೋರಿಸುತ್ತದೆ. ಒಂದು ವೇಳೆ ಬೇಕಾಗಿದ್ದ ರನ್ ಗಿಂತಲೂ ಹೆಚ್ಚು ರನ್ ಬಂದರೆ ಉದಾ. ಆ ಓವರ್‍ಗೆ 10 ರನ್ ಬಂದರೆ ಹಸಿರು ಪಟ್ಟಿಯ ಮೀಟರ್ ಕಾಣುತ್ತದೆ.

    #4. ಸಿಕ್ಸರ್, ಬೌಂಡರಿ ಸಿಡಿದಾಗ ಅಥವಾ ಎಸೆತಗಳಿಗೆ ರನ್ ಬಾರದೇ ಇದ್ದಾಗ ಈ ಟಿಕ್ಕರ್ ಬಣ್ಣ ಬದಲಾಗುತ್ತಿರುತ್ತದೆ.