Tag: ಬೌಲಿಂಗ್

  • ಮಯಾಂಕ್‌ ವೇಗಕ್ಕೆ ಐಪಿಎಲ್‌ನಲ್ಲಿ ದಾಖಲೆಗಳು ಪುಡಿ ಪುಡಿ!

    ಮಯಾಂಕ್‌ ವೇಗಕ್ಕೆ ಐಪಿಎಲ್‌ನಲ್ಲಿ ದಾಖಲೆಗಳು ಪುಡಿ ಪುಡಿ!

    ಬೆಂಗಳೂರು: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧ ನಡೆದ ಪಂದ್ಯದಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ ಯುವ ವೇಗಿ ಮಯಾಂಕ್‌ ಯಾದವ್‌ ಅವರ ಭರ್ಜರಿ ಬೌಲಿಂಗ್‌ ಪ್ರದರ್ಶನ ಲಕ್ನೋ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ 17ನೇ ಆವೃತ್ತಿಯ ಐಪಿಎಲ್‌ನಲ್ಲಿ ಅತ್ಯಂತ ವೇಗದ ಎಸೆತ ಎಸೆಯುವ ಮೂಲಕ ತಮ್ಮ ದಾಖಲೆಯನ್ನು ತಾವೇ ಮುರಿದಿದ್ದಾರೆ.

    ಇದಕ್ಕೂ ಮುನ್ನ ಪಂಜಾಬ್‌ ಕಿಂಗ್ಸ್‌ ವಿರುದ್ಧದ ಪಂದ್ಯದಲ್ಲಿ ಗಂಟೆಗೆ 155.8 ಕಿಮೀ ವೇಗದಲ್ಲಿ ಬೌಲಿಂಗ್‌ ಮಾಡಿದ್ದ ಮಯಾಂಕ್, ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಗಂಟೆಗೆ 156.7 ಕಿಮೀ ವೇಗದಲ್ಲಿ ಬೌಲಿಂಗ್‌ ಮಾಡುವ ಮೂಲಕ ಅತೀ ವೇಗದ ಬೌಲರ್ ಎನಿಸಿಕೊಂಡಿದ್ದಾರೆ. ಆರ್‌ಸಿಬಿ ವಿರುದ್ಧ ಸಮರ ಸಾರಿದ ಮಯಾಂಕ್‌ ಆಲ್‌ರೌಂಡರ್‌ಗಳಾದ ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮೆರೂನ್ ಗ್ರೀನ್ ಮತ್ತು ರಜತ್ ಪಾಟಿದಾರ್ ವಿಕೆಟ್‌ ಕಬಳಿಸುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು. ಇದರೊಂದಿಗೆ ಆತಿಥೇಯ ಆರ್‌ಸಿಬಿ ಎದುರು 4 ಓವರ್‌ಗಳಲ್ಲಿ 14 ರನ್‌ ಕೊಟ್ಟು 3 ವಿಕೆಟ್‌ ಪಡೆಯುವ ಮೂಲಕ ಐಪಿಎಲ್‌ ಇತಿಹಾಸದಲ್ಲಿ ಪದಾರ್ಪಣೆ ಬಳಿಕ ಸತತ ಪಂದ್ಯಶ್ರೇಷ್ಠ ಪಡೆದ ಮೊದಲ ಆಟಗಾರ ಎಂಬ ದಾಖಲೆಯನ್ನೂ ತಮ್ಮ ಹೆಗಲಿಗೇರಿಸಿಕೊಂಡರು.

    ಐಪಿಎಲ್‌ನಲ್ಲಿ ಐತಿಹಾಸಿಕ ದಾಖಲೆ:
    21 ವರ್ಷ ವಯಸ್ಸಿನ ಮಯಾಂಕ್‌ ಯಾದವ್‌ ಗಂಟೆಗೆ 156.7 ಕಿಮೀ ವೇಗದಲ್ಲಿ ಬೌಲಿಂಗ್‌ ಮಾಡುವ ಮೂಲಕ ಐಪಿಎಲ್‌ ಇತಿಹಾಸದಲ್ಲಿ ಹೊಸ ದಾಖಲೆಯನ್ನೂ ಬರೆದಿದ್ದಾರೆ. 150 ಕಿಮೀಗಿಂತಲೂ ಅಧಿಕ ವೇಗದಲ್ಲಿ ಬೌಲಿಂಗ್‌ ಮಾಡಿದ 4ನೇ ಬೌಲರ್‌ ಎನಿಸಿಕೊಂಡಿದ್ದಾರೆ. ಇದನ್ನೂ ಓದಿ: IPL 2024: ತವರಿನಲ್ಲೇ ಆರ್‌ಸಿಬಿಗೆ ಹೀನಾಯ ಸೋಲು – ಲಕ್ನೋಗೆ 28 ರನ್‌ಗಳ ಸೂಪರ್‌ ಜಯ

    ವೇಗದ ಬೌಲಿಂಗ್‌ ಮಾಡಿದ ಟಾಪ್‌-5 ಆಟಗಾರರು:
    * ಶಾನ್‌ ಟೈಟ್‌ – 2011ರಲ್ಲಿ – 157.7 ಕಿಮೀ
    * ಲಾಕಿ ಫರ್ಗೂಸನ್‌ – 2022ರಲ್ಲಿ – 157.3 ಕಿಮೀ
    * ಉಮ್ರಾನ್‌ ಮಲಿಕ್‌ – 2022ರಲ್ಲಿ – 157.0 ಕಿಮೀ
    * ಮಯಾಂಕ್‌ ಯಾದವ್‌ – 2024ರಲ್ಲಿ – 156.7 ಕಿಮೀ
    * ಅನ್‌ರಿಚ್‌ ನಾರ್ಟೆ – 2020ರಲ್ಲಿ – 156.2 ಕಿಮೀ

    ತನ್ನದೇ ದಾಖಲೆ ಬಗ್ಗೆ ಮಯಾಂಕ್‌ ಹೇಳಿದ್ದೇನು?
    ಆರ್‌ಸಿಬಿ ವಿರುದ್ಧ ಪಂದ್ಯ ಗೆದ್ದ ಬಳಿಕ ಪೋಸ್ಟ್‌ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ ಮಯಾಂಕ್‌, ವಿಕೆಟ್‌ ಪಡೆಯುವುದಕ್ಕಿಂತಲೂ ತಂಡಕ್ಕೆ ಪಂದ್ಯಗಳನ್ನು ಗೆದ್ದುಕೊಡುವುದೇ ನನ್ನ ಮುಖ್ಯಗುರಿ. 2 ಪಂದ್ಯಗಳಲ್ಲಿ ನಾನು 6 ವಿಕೆಟ್‌ ಪಡೆದಿರುವುದು ನನಗೆ ಮುಖ್ಯವಲ್ಲ. ನನ ಗುರಿ ಏನಿದ್ದರೂ ನನ್ನ ಫ್ರಾಂಚೈಸಿಗೆ ಸಾಧ್ಯವಾದಷ್ಟು ಪಂದ್ಯಗಳನ್ನು ಗೆದ್ದುಕೊಡುವುದು. ಇದೇ ನನ್ನ ಮುಖ್ಯ ಗುರಿ ಕೂಡ. ಪಂಜಾಬ್‌ ಕಿಂಗ್ಸ್‌ ಮತ್ತು ಆರ್‌ಸಿಬಿ ವಿರುದ್ಧದ ಪಂದ್ಯಗಳಲ್ಲಿ ತಂಡಕ್ಕೆ ಗೆಲುವು ತಂದುಕೊಡಲು ನೆರವಾಗಿರುವುದಕ್ಕೆ ಬಹಳ ಸಂತಸವಿದೆ ಎಂದಿದ್ದಾರೆ.

    ಅಲ್ಲದೇ ನನ್ನ ದೇಹವನ್ನು ಬಹಳ ಎಚ್ಚರಿಕೆಯಿಂದ ನೋಡಿಕೊಳ್ಳುತ್ತಿದ್ದೇನೆ. ಸೇವಿಸುವ ಆಹಾರದ ಕಡೆಗೆ ಗಮನ ಕೊಟ್ಟು ನಂತರ ನಿದ್ರೆ ಮತ್ತು ಕಸರತ್ತಿನ ಕಡೆಗೆ ಗಮನ ನೀಡುತ್ತೇನೆ. ಫಾಸ್ಟ್‌ ಬೌಲರ್‌ ಒಬ್ಬನಿಗೆ ವಿಶ್ರಾಂತಿ ಅತ್ಯಗತ್ಯ. ಈ ಕಡೆಗೆ ಹೆಚ್ಚಿ ಆದ್ಯತೆ ಕೊಡುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಳಪೆ ಪ್ರದರ್ಶನದಿಂದ ಶಾಹೀನ್‌ ಶಾಗೆ ತಲೆದಂಡ – ಮತ್ತೆ ನಾಯಕನ ಪಟ್ಟಕ್ಕೇರಿದ ಬಾಬರ್‌ ಆಜಂ

  • ಇಂಡೋ-ಆಸೀಸ್‌ ಕದನಕ್ಕೆ ಮಳೆ ಭೀತಿ – ಸತತ 2ನೇ ಜಯಕ್ಕೆ ಭಾರತ ತವಕ

    ಇಂಡೋ-ಆಸೀಸ್‌ ಕದನಕ್ಕೆ ಮಳೆ ಭೀತಿ – ಸತತ 2ನೇ ಜಯಕ್ಕೆ ಭಾರತ ತವಕ

    – ಭಾರತಕ್ಕೆ ಬೇಕಿದೆ ಬೌಲಿಂಗ್‌ ಬಲ
    – ಇತ್ತಂಡಗಳ ಪ್ಲೇಯಿಂಗ್‌-11ನಲ್ಲಿ ಬದಲಾವಣೆ ಸಾಧ್ಯತೆ

    ತಿರುವನಂತಪುರಂ: ಭಾರತ ಮತ್ತು ಆಸ್ಟ್ರೇಲಿಯಾ (Ind vs Aus) ನಡುವಿನ 5 ಪಂದ್ಯಗಳ ಟಿ20 ಸರಣಿ ಆರಂಭಗೊಂಡಿದ್ದು, ಮೊದಲ ಪಂದ್ಯದಲ್ಲಿ ಭಾರತ ದಾಖಲೆಯ ಜಯ ಸಾಧಿಸಿದೆ. 2ನೇ T20 ಪಂದ್ಯವು (T20 Match) ಇಂದು (ನ.26) ಕೇರಳದ ತಿರುವನಂತಪುರಂ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಮಳೆ ಅಡ್ಡಿಯುಂಟುಮಾಡುವ ಆತಂಕ ಎದುರಾಗಿದೆ.

    ಸಂಜೆ 7 ಗಂಟೆಗೆ ಪಂದ್ಯ ಆರಂಭವಾಗಲಿದ್ದು, 55% ಮಳೆ (Rain) ಸಾಧ್ಯತೆ ಇರುವುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಗರಿಷ್ಠ ತಾಪಮಾನ 32 ಡಿಗ್ರಿ ಸಲ್ಸಿಯಸ್‌ ಮತ್ತು ಕನಿಷ್ಠ ತಾಪಮಾನ 25 ಡಿಗ್ರಿ ಸೆಲ್ಸಿಯಸ್‌ ಇರಲಿದೆ. ಇದನ್ನೂ ಓದಿ: IPL 2024 Auction: ಮತ್ತೆ ಮುಂಬೈ ಸೇರಲಿದ್ದಾರೆ ಪಾಂಡ್ಯ?

    ಮೊದಲ ಪಂದ್ಯದಲ್ಲಿ 209ರನ್‌ ಬಾರಿಸಿ ದಾಖಲೆಯ ಜಯ ಸಾಧಿಸಿರುವ ಭಾರತಕ್ಕೆ ಬೌಲಿಂಗ್‌ (Bowling) ಚಿಂತೆ ಎದುರಾಗಿದೆ. ಮೊದಲ ಪಂದ್ಯದಲ್ಲಿ ಪ್ರಸಿದ್ಧ್‌ ಕೃಷ್ಣ (Prasidh Krishna) 4 ಓವರ್‌ಗಳಲ್ಲಿ 50 ರನ್‌, ರವಿ ಬಿಷ್ಣೋಯಿ (Ravi Bishnoi) 4 ಓವರ್‌ಗಳಲ್ಲಿ 54 ರನ್‌ ಚಚ್ಚಿಸಿಕೊಂಡಿದ್ದರು. ಅಲ್ಲದೇ ಅರ್ಷ್‌ದೀಪ್‌ ಸಿಂಗ್‌ ಸಹ 41 ರನ್‌ ಹೊಡೆಸಿಕೊಂಡಿದ್ದರು. ಬ್ಯಾಟಿಂಗ್‌ನಲ್ಲಿ ನಾಯಕ ಸೂರ್ಯಕುಮಾರ್‌ ಯಾದವ್‌, ಇಶಾನ್‌ ಕಿಶನ್‌, ರಿಂಕು ಸಿಂಗ್‌ ಅವರ ಜವಾಬ್ದಾರಿ ಇನ್ನಿಂಗ್ಸ್‌ನಿಂದ ಗೆಲುವು ಸಾಧ್ಯವಾಗಿತ್ತು.

    2ನೇ ಪಂದ್ಯದಲ್ಲಿ ಭಾರತ ಬೌಲಿಂಗ್‌ ಸುಧಾರಣೆ ಕಂಡುಕೊಳ್ಳಬೇಕಿದೆ. ಹಾಗಾಗಿ ಮೊದಲ ಪಂದ್ಯದಲ್ಲಿ ಪ್ಲೇಯಿಂಗ್‌-11 ನಿಂದ ಹೊರಗುಳಿದಿದ್ದ ವಾಷಿಂಗ್ಟನ್‌ ಸುಂದರ್‌ ಮತ್ತು ಶಿವಂ ದುಬೆಗೆ ತಂಡಕ್ಕೆ ಮರಳುವ ಸಾಧ್ಯತೆಯಿದೆ. ಇನ್ನೂ ಆರಂಭಿಕ ಯಶಸ್ವಿ ಜೈಸ್ವಾಲ್‌, ಋತುರಾಜ್‌ ಗಾಯಕ್ವಾಡ್, ಮಧ್ಯಮ ಕ್ರಮಾಂಕದಲ್ಲಿ ತಿಲಕ್‌ ವರ್ಮಾ ಜವಾಬ್ದಾರಿಯನ್ನರಿತು ಆಡಬೇಕಿದೆ. ಇದನ್ನೂ ಓದಿ: T20 ಕದನಕ್ಕೆ ವಿಶ್ವಕಪ್‌ ದಾಖಲೆ ಉಡೀಸ್‌ – ಏಕಕಾಲಕ್ಕೆ ಕರ್ನಾಟಕದ ಜನಸಂಖ್ಯೆಗಿಂತಲೂ ಅಧಿಕ ಮಂದಿ ವೀಕ್ಷಣೆ

    ಮತ್ತೆ ಹೆಡ್ಡೇಕ್‌ ಆಗುತ್ತಾ?
    ಮೊದಲ ಪಂದ್ಯದಲ್ಲಿ ಆಸೀಸ್‌ ತಂಡ ವಿರೋಚಿತ ಸೋಲನುಭವಿಸಿದ ಬಳಿಕ ಆಸೀಸ್‌ ತಂಡ ಬದಲಾವಣೆ ತರಲು ಮುಂದಾಗಿದೆ. ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ 137 ರನ್‌ ಸಿಡಿಸಿ ಭಾರತದ ಗೆಲುವಿಗೆ ಅಡ್ಡಗೋಡೆಯಾಗಿದ್ದ ಟ್ರಾವಿಸ್‌ ಹೆಡ್‌ ಪ್ಲೇಯಿಂಗ್‌-11ನಲ್ಲಿ ಕಣಕ್ಕಿಳಿಯುವ ಸಾಧ್ಯತೆಗಳಿವೆ. ಜೊತೆಗೆ ಸ್ಪಿನ್‌ ಮಾಂತ್ರಿಕ ಆಡಂ ಝಂಪಾ ಕೂಡ ಕಣಕ್ಕಿಳಿಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

  • ಬೌಲಿಂಗ್‌ನಲ್ಲೂ ಕಮಾಲ್‌ – ರೋಹಿತ್‌ ಫಸ್ಟ್‌, ಶಮಿ ಸೆಕೆಂಡ್‌

    ಬೌಲಿಂಗ್‌ನಲ್ಲೂ ಕಮಾಲ್‌ – ರೋಹಿತ್‌ ಫಸ್ಟ್‌, ಶಮಿ ಸೆಕೆಂಡ್‌

    ಅಹಮದಾಬಾದ್‌: ಸಿಕ್ಸರ್‌ ಸಿಡಿಸಿ ವಿಶ್ವ ದಾಖಲೆ ಬರೆದಿರುವ ರೋಹಿತ್‌ ಶರ್ಮಾ (Rohit Sharma) ಈ ವಿಶ್ವಕಪ್‌ ಕ್ರಿಕೆಟ್‌ನಲ್ಲಿ (World Cup Cricket) ಬೌಲಿಂಗ್‌ನಲ್ಲೂ ದಾಖಲೆ ಬರೆದಿದ್ದಾರೆ.

    ಹೌದು. ಬೌಲರ್‌ಗಳ ಸರಾಸರಿ ಬೌಲಿಂಗ್‌ ರ‍್ಯಾಂಕ್‌ನಲ್ಲಿ ರೋಹಿತ್‌ ಶರ್ಮಾ ಮೊದಲ ಸ್ಥಾನ ಪಡೆದಿದ್ದಾರೆ. ರೋಹಿತ್‌ ಶರ್ಮಾ ಬೆಂಗಳೂರಿನ (Bengaluru) ಚಿನ್ನಸ್ವಾಮಿ ಮೈದಾನದಲ್ಲಿ ನೆದರ್‌ಲ್ಯಾಂರ್ಡ್ಸ್‌ ವಿರುದ್ಧ 1 ಓವರ್‌ ಎಸೆದು 7 ರನ್‌ ಬಿಟ್ಟುಕೊಟ್ಟು 1 ವಿಕೆಟ್‌ ಪಡೆದಿದ್ದರು.   ಇದನ್ನೂ ಓದಿ: ಇದೇ ಕೊನೆಯಲ್ಲ, ನಾವು ಕಪ್‌ ಗೆಲ್ಲೋವರೆಗೂ ಇದು ಮುಗಿಯಲ್ಲ – ಗಿಲ್‌ ಭಾವುಕ

     

    ರೋಹಿತ್‌ ಶರ್ಮಾ ಸರಾಸರಿ 7.00 ಬೌಲ್‌ ಮಾಡಿದ ಪರಿಣಾಮ ಮೊದಲ ಸ್ಥಾನ ಪಡೆದರೆ ನಂತರದ ಎರಡು ಸ್ಥಾನಗಳನ್ನು ಶಮಿ (Mohammad Shami) ಮತ್ತು ಕೊಹ್ಲಿ (Virat Kohli) ಪಡೆದಿದ್ದಾರೆ. ಮೊಹಮ್ಮದ್‌ ಶಮಿ ಅವರ ಬೌಲಿಂಗ್‌ ಸರಾಸರಿ 10.70 ಇದ್ದು ಎರಡನೇ ಸ್ಥಾನ ಪಡೆದಿದ್ದರೆ ವಿರಾಟ್‌ ಕೊಹ್ಲಿ 15.00 ಇದ್ದು ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ.  ಇದನ್ನೂ ಓದಿ: ಅಪ್ಪಿಕೊಂಡು ಸಮಾಧಾನ ಹೇಳಿದ ಮೋದಿ – ಮತ್ತೆ ನಾವು ಪುಟಿದೇಳುತ್ತೇವೆ ಎಂದ ಶಮಿ

    ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಆಟಗಾರರ ಪೈಕಿ ವಿರಾಟ್‌ ಕೊಹ್ಲಿ 765 ರನ್‌ ಹೊಡೆದು ಮೊದಲ ಸ್ಥಾನ ಪಡೆದರೆ 597 ರನ್‌ ಹೊಡೆಯುವ ಮೂಲಕ ರೋಹಿತ್‌ ಶರ್ಮಾ ಎರಡನೇ ಸ್ಥಾನ ಪಡೆದಿದ್ದಾರೆ.

     

  • Six In Six – ಒಂದೇ ಓವರ್‌ನಲ್ಲಿ 6 ವಿಕೆಟ್‌ ಕಿತ್ತು ಇತಿಹಾಸ ಸೃಷ್ಟಿಸಿದ ಆಸೀಸ್‌ ಕ್ರಿಕೆಟಿಗ

    Six In Six – ಒಂದೇ ಓವರ್‌ನಲ್ಲಿ 6 ವಿಕೆಟ್‌ ಕಿತ್ತು ಇತಿಹಾಸ ಸೃಷ್ಟಿಸಿದ ಆಸೀಸ್‌ ಕ್ರಿಕೆಟಿಗ

    ಕ್ಯಾನ್ಬೆರಾ: ಆಸ್ಟ್ರೇಲಿಯಾದಲ್ಲಿ (Australia) ನಡೆದ ಗೋಲ್ಡ್ ಕೋಸ್ಟ್‌ನ ಪ್ರೀಮಿಯರ್ ಲೀಗ್‌ನಲ್ಲಿ (Gold Coast’s Premier League) 3ನೇ ಡಿವಿಷನ್ ಕ್ಲಬ್ ಕ್ರಿಕೆಟಿಗನೊಬ್ಬ ಒಂದೇ ಓವರ್‌ನಲ್ಲಿ 6 ವಿಕೆಟ್‌ ಕಿತ್ತು ಹಲವು ದಾಖಲೆಗಳನ್ನ ಉಡೀಸ್‌ ಮಾಡಿದ್ದಾರೆ.

    3ನೇ ಡಿವಿಷನ್ ಕ್ಲಬ್‌ ಕ್ರಿಕೆಟಿಗ ಡಿಸ್ಟ್ರಿಕ್ಟ್ ಕ್ರಿಕೆಟ್ ಕ್ಲಬ್‌ನ ನಾಯಕ ಗರೆಥ್ ಮಾರ್ಗನ್ 6 ವಿಕೆಟ್‌ ಪಡೆದು ಸಾಧನೆ ಮಾಡಿದ್ದಾರೆ. ಗೋಲ್ಡ್‌ ಕೋಸ್ಟ್‌ ಲೀಗ್‌ನಲ್ಲಿ ಸರ್ಫರ್ಸ್ ಪ್ಯಾರಡೈಸ್ ಸಿಸಿ (Surfers Paradise CC) ವಿರುದ್ಧ ನಡೆದ ಪಂದ್ಯದಲ್ಲಿ ಡಿಸ್ಟ್ರಿಕ್‌ ಕ್ರಿಕೆಟ್‌ ಕ್ಲಬ್‌ ರೋಚಕ 4 ರನ್‌ಗಳ ಜಯ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಇದನ್ನೂ ಓದಿ: World Cup 2023: ಅರ್ಧಶತಕ ಸಿಡಿಸಿದ್ರೂ ಸಚಿನ್‌ ದಾಖಲೆ ಸರಿಗಟ್ಟಿದ ಚೇಸ್‌ ಮಾಸ್ಟರ್‌

    40 ಓವರ್‌ಗಳ ಪಂದ್ಯ ಇದಾಗಿತ್ತು. ಎದುರಾಳಿ ತಂಡ ನೀಡಿದ 17‌8 ರನ್‌ಗಳ ಗುರಿ ಬೆನ್ನತ್ತಿದ್ದ ಪ್ಯಾರಡೈಸ್‌ ಸಿಸಿ 39 ಓವರ್‌ಗಳಲ್ಲಿ 174 ರನ್‌ ಕಲೆಹಾಕಿ, 4 ವಿಕೆಟ್‌ ಕಳೆದುಕೊಂಡಿತ್ತು. ಕೊನೆಯ ಓವರ್‌ನಲ್ಲಿ ಗೆಲುವಿಗೆ 4 ರನ್‌ಗಳ ಅಗತ್ಯವಿತ್ತು. ಈ ವೇಳೆ ಬೌಲಿಂಗ್‌ನಲ್ಲಿ ಚಾಣಾಕ್ಷತೆ ಪ್ರದರ್ಶಿಸಿದ ಮಾರ್ಗನ್‌ ಒಂದೇ ಓವರ್‌ನಲ್ಲಿ 6 ವಿಕೆಟ್‌ಗಳನ್ನ ಕಬಳಿಸಿದರು. ಈ ಮೂಲಕ ತಂಡಕ್ಕೆ ನಾಲ್ಕು ರನ್‌ಗಳ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾದರು.

    ಮಾರ್ಗನ್‌ ಅವರ ಸ್ಪಿನ್‌ ದಾಳಿಯಲ್ಲಿ ನಾಲ್ಕು ಮಂದಿ ಕ್ಯಾಚ್‌ ನೀಡಿದರೆ, ಇಬ್ಬರು ಕ್ಲೀನ್‌ ಬೌಲ್ಡ್‌ ಆದರು. ಈ ಪಂದ್ಯದಲ್ಲಿ ಒಟ್ಟು ಐವರು ಆಟಗಾರರು ಗೋಲ್ಡನ್‌ ಡಕ್‌ಗೆ ತುತ್ತಾದರು. ಅಲ್ಲದೇ ಮಾರ್ಗನ್‌ ಬ್ಯಾಟಿಂಗ್‌ನಲ್ಲೂ 39 ರನ್‌ ಬಾರಿಸಿದ್ದರು. ಇದನ್ನೂ ಓದಿ: ಕೊಹ್ಲಿ ಬಗ್ಗೆ ನಾನು ಹಾಗೆ ಮಾತಾಡಬಾರದಿತ್ತು – ಕ್ಷಮೆ ಯಾಚಿಸಿದ ಮೆಂಡಿಸ್

    ಆಸ್ಟ್ರೇಲಿಯಾ ಕ್ರಿಕೆಟ್‌ ಕ್ಲಬ್‌ ಮಾಹಿತಿ ಪ್ರಕಾರ, ಇದುವರೆಗೆ ಒಂದೇ ಓವರ್‌ನಲ್ಲಿ ಅತಿಹೆಚ್ಚು ವಿಕೆಟ್‌ ಆಗಿದ್ದು ಎಂದರೆ 5 ಮಾತ್ರ. 2011 ರಲ್ಲಿ ವೆಲ್ಲಿಂಗ್ಟನ್‌ನಲ್ಲಿ ಒಟಾಗೋ ವಿರುದ್ಧದ ನ್ಯೂಜಿಲೆಂಡ್‌ನ ನೀಲ್‌ ವ್ಯಾಗ್ನರ್‌, 2013ರಲ್ಲಿ ಯುಸಿಬಿ-ಬಿಸಿಬಿ ವಿರುದ್ಧ ಬಾಂಗ್ಲಾದೇಶದ ಅಲ್-ಅಮಿನ್ ಹೊಸೈನ್ ಮತ್ತು 2019ರಲ್ಲಿ ಭಾರತದ ಅಭಿಮನ್ಯು ಮಿಥುನ್ ಒಂದೇ ಓವರ್‌ನಲ್ಲಿ ಅತಿಹೆಚ್ಚು ವಿಕೆಟ್‌ ಪಡೆದ ಸಾಧನೆ ಮಾಡಿದ್ದರು. ಆದ್ರೆ ಮಾರ್ಗನ್‌ ಇವರೆಲ್ಲರ ದಾಖಲೆಯನ್ನ ಚಿಂದಿ ಮಾಡಿದ್ದಾರೆ.

  • World Cup 2023: ಲಂಕಾಗೆ ಬೆಂಕಿ ಹಚ್ಚಿ ನಂ.1 ಪಟ್ಟಕ್ಕೇರಿದ ಶಮಿ

    World Cup 2023: ಲಂಕಾಗೆ ಬೆಂಕಿ ಹಚ್ಚಿ ನಂ.1 ಪಟ್ಟಕ್ಕೇರಿದ ಶಮಿ

    ಮುಂಬೈ: 2023ರ ಐಸಿಸಿ ಏಕದಿನ ವಿಶ್ವಕಪ್‌ (World Cup 2023) ಟೂರ್ನಿಯಲ್ಲಿ ಮೊದಲ ತಂಡವಾಗಿ ಟೀಂ ಇಂಡಿಯಾ ಸೆಮಿಫೈನಲ್​ಗೆ ಲಗ್ಗೆಯಿಟ್ಟಿದೆ. ಕೇವಲ 55 ರನ್‌ಗಳಿಗೆ ಶ್ರೀಲಂಕಾ ತಂಡವನ್ನು ಧೂಳಿಪಟ ಮಾಡಿದ ಭಾರತ, 302 ರನ್​​ಗಳ ವಿಶ್ವದಾಖಲೆಯ ಜಯ ಸಾಧಿಸಿತು. ಅದರಲ್ಲೂ ಲಂಕಾ ವಿರುದ್ಧ ಬೆಂಕಿ ಬೌಲಿಂಗ್‌ ದಾಳಿ ಮಾಡಿದ ಮೊಹಮ್ಮದ್ ಶಮಿ (Mohammed Shami) 5 ವಿಕೆಟ್ ಕಿತ್ತು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಇದರೊಂದಿಗೆ ವಿಶ್ವಕಪ್​​ನಲ್ಲಿ ದಾಖಲೆಯೊಂದನ್ನು ನಿರ್ಮಿಸಿದರು.

    ಲಂಕಾ (Sri Lanka) ವಿರುದ್ಧ ಕೇವಲ 5 ಓವರ್‌ ಬೌಲಿಂಗ್‌ ಮಾಡಿದ ಶಮಿ, 18 ರನ್‌ ಬಿಟ್ಟುಕೊಟ್ಟು 5 ವಿಕೆಟ್‌ ಕಿತ್ತರು. ಇದರೊಂದಿಗೆ ಟೀಂ ಇಂಡಿಯಾ ಪರ ಏಕದಿನ ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಅತಿಹೆಚ್ಚು ವಿಕೆಟ್​ ಕಿತ್ತ ಮೊದಲ ಬೌಲರ್​ ಎಂಬ ಖ್ಯಾತಿ ಗಳಿಸಿದ್ರು. ಪ್ರಸ್ತುತ ಟೂರ್ನಿಯಲ್ಲಿ ತಾನು ಆಡಿದ ಮೂರೇ ಪಂದ್ಯಗಳಲ್ಲಿ 14 ವಿಕೆಟ್ ಪಡೆದ ಶಮಿ, ಆ ಮೂಲಕ ವಿಶ್ವಕಪ್​​ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾ ಪರ ಅತಿಹೆಚ್ಚು ವಿಕೆಟ್​ ಪಡೆದ ಜಹೀರ್​ ಖಾನ್ ಮತ್ತು ಜಾವಗಲ್ ಶ್ರೀನಾಥ್ (Zaheer Khan And Javagal Srinath) ಅವರ 44 ವಿಕೆಟ್​ಗಳ ಜಂಟಿ ದಾಖಲೆಯನ್ನ ನುಚ್ಚು ನೂರು ಮಾಡಿದ್ರು. ಇದನ್ನೂ ಓದಿ: World Cup 2023: ಗಿಲ್‌ ಕೈ ತಪ್ಪಿದ ಶತಕ – ಸಾರಾಗೆ ಬೇಸರ 

    ಸದ್ಯ 14 ವಿಶ್ವಕಪ್​ ಪಂದ್ಯಗಳನ್ನಾಡಿರುವ ಶಮಿ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಒಟ್ಟು 45 ವಿಕೆಟ್‌ ಪಡೆದು ನಂ.1 ಸ್ಥಾನದಲ್ಲಿದ್ದರೆ, 44 ವಿಕೆಟ್​ ಪಡೆದ ಜಹೀರ್ ಖಾನ್, ಜಾವಗಲ್ ಶ್ರೀನಾಥ್ ಕ್ರಮವಾಗಿ 2-3ನೇ ಸ್ಥಾನದಲ್ಲಿದ್ದಾರೆ. 33 ವಿಕೆಟ್​ ಜಸ್ಪ್ರೀತ್ ಬುಮ್ರಾ 4ನೇ ಸ್ಥಾನ ಮತ್ತು 31 ವಿಕೆಟ್​ ಪಡೆದಿರುವ ಅನಿಲ್ ಕುಂಬ್ಳೆ 5ನೇ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: 48 ವರ್ಷಗಳಲ್ಲೇ ಮೊದಲು! ಕ್ರಿಕೆಟ್‌ ವಿಶ್ವಕಪ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿದ ಬುಮ್ರಾ

    ಇದೇ ಟೂರ್ನಿಯಲ್ಲಿ ನ್ಯೂಜಿಲೆಂಡ್ ವಿರುದ್ಧ 5 ವಿಕೆಟ್, ಇಂಗ್ಲೆಂಡ್ ವಿರುದ್ಧ 4 ವಿಕೆಟ್ ಉಡೀಸ್‌ ಮಾಡಿದ್ದ ಶಮಿ ಶ್ರೀಲಂಕಾ ವಿರುದ್ಧವೂ ಪ್ರಮುಖ 5 ವಿಕೆಟ್‌ಗಳನ್ನ ಪಡೆಯುವ ಮೂಲಕ ಲಂಕಾ ದಹನಕ್ಕೆ ಕಾರಣವಾದರು. ಇದರೊಂದಿಗೆ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 45 ವಿಕೆಟ್​​ ಪಡೆದ ಸಾಧನೆ ಮಾಡಿದರು. ಜೊತೆಗೆ ಏಕದಿನ ಕ್ರಿಕೆಟ್​ ಇತಿಹಾಸದಲ್ಲಿ ಸತತ 2 ಬಾರಿ 4ಕ್ಕೂ ಹೆಚ್ಚು ವಿಕೆಟ್‌ ಪಡೆದ ವಿಶ್ವದ 2ನೇ ಬೌಲರ್ ಎಂಬ ವಿಶೇಷ ಸಾಧನೆಗೂ ಪಾತ್ರರಾದರು. ಇದನ್ನೂ ಓದಿ: ಬೌಲಿಂಗ್ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಿದ ಆಫ್ರಿದಿ – ಟಾಪ್ 10 ರಲ್ಲಿ ಇಬ್ಬರು ಟೀಂ ಇಂಡಿಯಾ ಆಟಗಾರರು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪ್ಲೇ ಆಫ್ಸ್‌ನಲ್ಲಿ ಒಂದೊಂದು ಡಾಟ್‌ ಬಾಲ್‌ಗೂ 500 ಗಿಡ ನೆಡಲಿದೆ BCCI – ಏಕೆ ಗೊತ್ತೇ?

    ಪ್ಲೇ ಆಫ್ಸ್‌ನಲ್ಲಿ ಒಂದೊಂದು ಡಾಟ್‌ ಬಾಲ್‌ಗೂ 500 ಗಿಡ ನೆಡಲಿದೆ BCCI – ಏಕೆ ಗೊತ್ತೇ?

    ಚೆನ್ನೈ/ಮುಂಬೈ: 16ನೇ ಆವೃತ್ತಿಯ ಐಪಿಎಲ್‌ ಪ್ಲೇ ಆಫ್‌ (IPL Playoffs) ಪಂದ್ಯ ಆರಂಭಗೊಂಡಿದ್ದು, ಪ್ಲೇ ಆಫ್‌ನಲ್ಲಿ ಬೌಲಿಂಗ್‌ ಮಾಡುವ ಪ್ರತಿಯೊಂದು ಡಾಟ್‌ ಬಾಲ್‌ಗೆ (Dot Ball) 500 ಗಿಡಗಳನ್ನು (500 Trees) ನೆಡುವುದಾಗಿ ಬಿಸಿಸಿಐ (BCCI) ಮಹತ್ತರ ನಿರ್ಧಾರ ಪ್ರಕಟಿಸಿದೆ.

    ಪಂದ್ಯಾವಳಿಯ ಅಧಿಕೃತ ಪ್ರಸಾರಕರು ಅದಕ್ಕಾಗಿ ವಿಶೇಷ ಗ್ರಾಫಿಕ್ ಅನ್ನು ಡಿಜಿಟಲ್‌ ಸ್ಕೂರ್‌ ಬೋರ್ಡ್‌ನಲ್ಲಿ ಪ್ರದರ್ಶಿಸುತ್ತಿದ್ದಾರೆ, ಡಾಟ್ ಬಾಲ್‌ಗಳನ್ನು ಕಪ್ಪುಯ ಬದಲಾಗಿ ʻಗಿಡದʼ ಚಿತ್ರಗಳನ್ನು ತೋರಿಸಲಾಗುತ್ತಿದೆ.

    ಮಂಗಳವಾರ ನಡೆಯುತ್ತಿರುವ ಸಿಎಸ್‌ಕೆ ಹಾಗೂ ಗುಜರಾತ್‌ ಟೈಟಾನ್ಸ್‌ ನಡುವಿನ ಪಂದ್ಯದಲ್ಲಿ ಪ್ರತಿ ಡಾಟ್‌ ಬಾಲ್‌ ಮಾಡಿದಾಗಲೆಲ್ಲಾ ಡಾಟ್‌ ಬದಲಿಗೆ ಗಿಡದ ಚಿತ್ರದ ಗ್ರಾಫಿಕ್‌ಗಳನ್ನ ತೋರಿಸಲಾಗುತ್ತಿದೆ. ಇದನ್ನೂ ಓದಿ: ನಿವೃತ್ತಿ ಘೋಷಣೆ ಬಳಿಕ ಮತ್ತೆ ಐಪಿಎಲ್‍ನಲ್ಲಿ ಬ್ಯಾಟ್ ಬೀಸುವ ಸೂಚನೆ ಕೊಟ್ಟ ಗೇಲ್

    ಏಕೆ ಈ ನಿರ್ಧಾರ?
    ಪ್ರತಿ ಐಪಿಎಲ್‌ನಲ್ಲೂ ಅಭಿಮಾನಿಗಳಿಗೆ ಮನರಂಜನೆ ಸಿಗುವಂತೆ ಮಾಡುವ ಬಿಸಿಸಿಐ ಪರಿಸರ ಕಾಳಜಿ ದೃಷ್ಟಿಯಿಂದ ಗಿಡಗಳನ್ನ ನೆಡುವ ನಿರ್ಧಾರಕ್ಕೆ ಬಂದಿದೆ. ಪರಿಸರ ಸಂರಕ್ಷಣೆಗಾಗಿ ತನ್ನ ಕೈಲಾದಷ್ಟು ಸೇವೆ ಮಾಡಲು ಭಾರತದಾದ್ಯಂತ ಗಿಡಗಳನ್ನು ನೆಡುವ ಮಹತ್ತರ ನಿರ್ಧಾರವನ್ನು ಬಿಸಿಸಿಐ ತೆಗೆದುಕೊಂಡಿದೆ.

    ಚೆನ್ನೈನ ಚೇಪಾಕ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಪ್ಲೇ ಆಫ್‌ ಪಂದ್ಯದಲ್ಲಿ ಟಾಸ್‌ ಗೆದ್ದ ಗುಜರಾತ್‌ ಟೈಟಾನ್ಸ್‌ ನಾಯಕ ಹಾರ್ದಿಕ್‌ ಪಾಂಡ್ಯ ಫೀಲ್ಡಿಂಗ್‌ ಆಯ್ದುಕೊಂಡರು. ಮೊದಲು ಬ್ಯಾಟಿಂಗ್‌ ಮಾಡಿದ ಸಿಎಸ್‌ಕೆ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 172 ರನ್‌ ಗಳಿಸಿದೆ. ಇದನ್ನೂ ಓದಿ: IPL 2023: ಶುಭಮನ್‌ ಗಿಲ್‌ ಶತಕದಾಟ, ಗುಜರಾತ್‌ ಟೈಟಾನ್ಸ್‌ಗೆ ಜಯ – RCB ಮನೆಗೆ, ಮುಂಬೈ ಪ್ಲೇ ಆಫ್‌ಗೆ

  • ಇಂದು ಏಕದಿನ ಸರಣಿ ಕೊನೆಯ ಪಂದ್ಯ, ಸರಣಿ ಗೆಲ್ಲುವ ತವಕದಲ್ಲಿ ಭಾರತ

    ಇಂದು ಏಕದಿನ ಸರಣಿ ಕೊನೆಯ ಪಂದ್ಯ, ಸರಣಿ ಗೆಲ್ಲುವ ತವಕದಲ್ಲಿ ಭಾರತ

    ಲಂಡನ್: ಏಕದಿನ ಸರಣಿಯಲ್ಲಿ 1-1 ಅಂತರದಲ್ಲಿ ಗೆಲುವು ಸಾಧಿಸಿರುವ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಇಂದು ಸರಣಿ ಜಯಕ್ಕಾಗಿ ಸೆಣಸಲಿವೆ.

    ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಕ್ರಿಕೆಟ್ ಮೈದಾನದಲ್ಲಿ ಮಧ್ಯಾಹ್ನ 3:30ರ ವೇಳೆಗೆ ಪಂದ್ಯ ಆರಂಭವಾಗಲಿದ್ದು, 2ನೇ ಪಂದ್ಯದಲ್ಲಿ ಇಂಗ್ಲೆಂಡ್ ನೀಡಿದ ಶಾಕ್‌ನಿಂದ ಕಂಗೆಟ್ಟಿರುವ ಭಾರತ ಅಂತಿಮ ಪಂದ್ಯದಲ್ಲಿ ತನ್ನ ಬ್ಯಾಟಿಂಗ್ ಪ್ಲಾನ್ ಬದಲಿಸಿಕೊಂಡು ಸರಣಿ ಜಯದ ಎದುರು ನೋಡುತ್ತಿದೆ. ಇದನ್ನೂ ಓದಿ: ಈ ಸಮಯ ಕಳೆದು ಹೋಗುತ್ತದೆ ಕೊಹ್ಲಿ ಬೆಂಬಲಕ್ಕೆ ನಿಂತ ಬಾಬರ್ ಅಜಮ್

    ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಬಗ್ಗುಬಡಿದ ಭಾರತ 2ನೇ ಪಂದ್ಯದಲ್ಲಿ ಸೋಲು ಕಂಡಿತು. 247 ಸಾಧಾರಣ ರನ್‌ಗಳ ಗುರಿ ಬೆನ್ನತ್ತಿದ ರೋಹಿತ್ ಶರ್ಮಾ ಪಡೆ 100 ರನ್‌ಗಳ ಅಂತರದಲ್ಲಿ ಸೋಲನ್ನು ಅನುಭವಿಸಿತು. ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಹಾರ್ದಿಕ್ ಪಾಂಡ್ಯ, ಜಡೇಜಾ ಹೋರಾಡಿದರೂ ಅವರ ಬ್ಯಾಟಿಂಗ್ ಟೀಂ ಇಂಡಿಯಾ ಗೆಲುವಿಗೆ ಸಹಕಾರಿಯಾಗಲಿಲ್ಲ. ಇದೀಗ ಅಂತಿಮ ಪಂದ್ಯದಲ್ಲಿ ಟಿ20 ಮಾದರಿಯಂತೆ ಭರ್ಜರಿ ಪ್ರದರ್ಶನ ನೀಡುವ ಮೂಲಕ ಸರಣಿ ಕೈವಶ ಮಾಡಿಕೊಳ್ಳಲು ಭಾರತ ಮುಂದಾಗಿದೆ.

    ಮೊದಲ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾರೊಂದಿಗೆ ಉತ್ತಮ ಬ್ಯಾಟಿಂಗ್ ನಡೆಸಿದ ಶಿಖರ್ ಧವನ್ 2ನೇ ಪಂದ್ಯದಲ್ಲಿ ನಿರೀಕ್ಷಿತ ಆಟವಾಡದೇ ಇರುವುದು ತಂಡಕ್ಕೆ ಹಿನ್ನಡೆ ಉಂಟು ಮಾಡಿತು. ಅಲ್ಲದೆ ವಿರಾಟ್ ಕೊಹ್ಲಿ ಸಹ ಅಲ್ಪಮೊತ್ತಕ್ಕೆ ನಿರ್ಗಮಿಸಿದ್ದರು. ಅಂತಿಮ ಪಂದ್ಯದಲ್ಲಿ ಮಧ್ಯಮ ಕ್ರಮಾಂಕದಿಂದ ಆಟಗಾರರಿಂದಲೂ ಉತ್ತಮ ಪ್ರದರ್ಶನ ನಿರೀಕ್ಷಿಸಲಾಗಿದೆ. ಇದನ್ನೂ ಓದಿ: 2ನೇ ಪಂದ್ಯದಲ್ಲಿ ಎಡವಿದ ಭಾರತ – ಇಂಗ್ಲೆಂಡ್‌ಗೆ 100 ರನ್‌ಗಳ ಭರ್ಜರಿ ಜಯ

    ಜಸ್ಪ್ರಿತ್‌ ಬುಮ್ರಾ ನೇತೃತ್ವದ ಬೌಲಿಂಗ್ ಪಡೆ ಉತ್ತಮ ಲಯದಲ್ಲಿದೆಯಾದರೂ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜಾ ಪರಿಣಾಮಕಾರಿಯಾಗುತ್ತಿಲ್ಲ. ಹೀಗಾಗಿ ಇನ್ನಿಂಗ್ಸ್ ಮಧ್ಯದಲ್ಲಿ ಜೊತೆಯಾಟಗಳನ್ನು ಮುರಿಯುವುದರಲ್ಲಿ ಭಾರತ ಹಿಂದೆ ಬೀಳುತ್ತಿದೆ.

    ಮತ್ತೊಂದೆಡೆ ಇಂಗ್ಲೆಂಡ್ ಅಂತಿಮ ಪಂದ್ಯದಲ್ಲಿ ಸುಧಾರಿತ ಪ್ರದರ್ಶನ ನೀಡಲು ಕಾಯುತ್ತಿದೆ. ಟಿ20 ನಲ್ಲಿ ಭಾರತದ ವಿರುದ್ಧ ಸೋಲು ಕಂಡ ಇಂಗ್ಲೆಂಡ್ ಇದೀಗ ಏಕದಿನ ಸರಣಿಯನ್ನು ಕೈವಶ ಮಾಡಿಕೊಳ್ಳುವ ಮೂಲಕ ಭಾರತದ ವಿರುದ್ಧ ಸೇಡು ತೀರಿಕೊಳ್ಳಲು ಕಾತರವಾಗಿದೆ.

    Live Tv

    [brid partner=56869869 player=32851 video=960834 autoplay=true]

  • ಶಮಿ ಮಿಂಚಿನ ಬೌಲಿಂಗ್‌ಗೆ ಪೂಜಾರ ಡಕ್‌ಔಟ್ – ತಬ್ಬಿ ಸಂಭ್ರಮಿಸಿದ ಟೀಂ ಇಂಡಿಯಾ ವೇಗಿ

    ಶಮಿ ಮಿಂಚಿನ ಬೌಲಿಂಗ್‌ಗೆ ಪೂಜಾರ ಡಕ್‌ಔಟ್ – ತಬ್ಬಿ ಸಂಭ್ರಮಿಸಿದ ಟೀಂ ಇಂಡಿಯಾ ವೇಗಿ

    ಮುಂಬೈ: ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಜುಲೈ 1 ರಿಂದ 5ರ ವರೆಗೆ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿಯನ್ನಾಡಲು ಸಮರಾಭ್ಯಾಸದಲ್ಲಿ ತೊಡಗಿದೆ.

    ಅದಕ್ಕಾಗಿ ಕೌಂಟಿ ಕ್ರಿಕೆಟ್ ಚಾಂಪಿಯನ್‌ಷಿಪ್‌ನ ಲೈಸ್ಟರ್‌ಶೈರ್ ತಂಡದ ವಿರುದ್ಧ ಅಭ್ಯಾಸ ಪಂದ್ಯವನ್ನು ಆಡುತ್ತಿದೆ. ಈ ಪಂದ್ಯದಲ್ಲಿ ಲೈಸ್ಟರ್‌ಶೈರ್ ತಂಡದ ಪರ ಆಡಿದ್ದ ಭಾರತ ತಂಡದ ಅನುಭವಿ ಬ್ಯಾಟರ್ ಚೇತೇಶ್ವರ್ ಪೂಜಾರ ಅವರನ್ನು ವೇಗಿಯ ಬೌಲರ್ ಮೊಹಮ್ಮದ್ ಶಮಿ ಶೂನ್ಯಕ್ಕೆ ಡಕ್‌ಔಟ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಅಲ್ಲದೆ ಔಟಾದ ಬಳಿಕ ಪೂಜಾರಾ ಅವರನ್ನು ತಬ್ಬಿ ಕುಣಿದಾಡುವ ಮೂಲಕ ಸಂಭ್ರಮಿಸಿದ್ದಾರೆ. ಇದನ್ನೂ ಓದಿ: ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆ ಬಿಸಿಸಿಐಗೆ ರಣಜಿ ಟ್ರೋಫಿಯಲ್ಲಿ DRS ಬಳಸಲು ಹಣವಿಲ್ಲ!

    ಅಭ್ಯಾಸ ಪಂದ್ಯದ 2ನೇ ದಿನವಾದ ಶುಕ್ರವಾರ ಭಾರತ ತಂಡ ತನ್ನ ಮೊದಲ ಇನಿಂಗ್ಸ್‌ನಲ್ಲಿ 246/8 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಶ್ರೀಕರ್ ಭರತ್ 111 ಎಸೆತಗಳಲ್ಲಿ ಅಜೇಯ 70 ರನ್ ಗಳಿಸಿ ತಂಡವನ್ನು 250ರ ಗಡಿ ತಲುಪುವಂತೆ ಮಾಡಿದರು. ಬಳಿಕ ಬ್ಯಾಟಿಂಗ್ ಆರಂಭಿಸಿದ ಲೈಸ್ಟರ್‌ಶೈರ್ ತಂಡ ಚಹಾ ವಿರಾಮಕ್ಕೆ 7 ವಿಕೆಟ್‌ಗಳ ನಷ್ಟದಲ್ಲಿ 213 ರನ್ ಗಳಿಸಿತ್ತು. ಲೈಸ್ಟರ್‌ಶೈರ್ ಪರ ಆಡಿದ್ದ ರಿಷಭ್ ಪಂತ್ 87 ಎಸೆತಗಳಲ್ಲಿ 76 ರನ್ ಗಳಿಸಿ ಔಟಾದರು. ಇದನ್ನೂ ಓದಿ: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 15 ವರ್ಷ ಪೂರೈಸಿದ ಹಿಟ್‌ಮ್ಯಾನ್ – ಭಾವುಕ ಪತ್ರ ಬರೆದ ರೋಹಿತ್ ಶರ್ಮಾ

    ಇದಕ್ಕೂ ಮುನ್ನ ಕ್ರೀಸ್‌ನಲ್ಲಿದ್ದ ಪೂಜಾರಾ ಎಚ್ಚರಿಕೆ ಆಟವಾಡುವ ಸೂಚನೆ ನೀಡಿದ್ದರು. ಈ ವೇಳೆ ಉತ್ತಮ ಬೌಲಿಂಗ್ ಪ್ರದರ್ಶನದಿಂದ ಪೂಜಾರಾ ಅವರನ್ನು ಪೆವಿಲಿಯನ್ ಸೇರುವಂತೆ ಮಾಡಿದರು. 6 ಎಸೆತಗಳನ್ನು ಎದುರಿಸಿದ ಚೇತೇಶ್ವರ್ ಖಾತೆ ಕೂಡ ತೆರೆಯಲಾಗದೆ ಪೆವಿಲಿಯನ್ ಸೇರಿದರು.

    Live Tv

  • ಟೀಂ ಇಂಡಿಯಾದ ಈ ಬೌಲರ್ ದಕ್ಷಿಣ ಆಫ್ರಿಕಾಗೆ ಕಂಟಕ

    ಟೀಂ ಇಂಡಿಯಾದ ಈ ಬೌಲರ್ ದಕ್ಷಿಣ ಆಫ್ರಿಕಾಗೆ ಕಂಟಕ

    ಮುಂಬೈ: ಇದೇ ತಿಂಗಳ ಜೂನ್ 9 ರಿಂದ 19ರ ವರೆಗೆ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಟಿ20 5 ಪಂದ್ಯಗಳ ಸರಣಿ ನಡೆಯಲಿದೆ. ಈ ಸರಣಿಗೆ ವೇಗಿಯ ಬೌಲರ್ ಅವೇಶ್ ಖಾನ್ ಟೀಂ ಇಂಡಿಯಾಕ್ಕೆ ಆಯ್ಕೆಯಾಗಿದ್ದು, ದಕ್ಷಿಣ ಆಫ್ರಿಕಾಗೆ ಕಂಟಕವಾಗಿ ಕಾಡಲಿದ್ದಾರೆ.

    ಅವೇಶ್ ಖಾನ್ ಟೀಂ ಇಂಡಿಯಾದ ಅಪಾಯಕಾರಿ ಬೌಲರ್‌ಗಳಲ್ಲಿ ಒಬ್ಬರು. ಡೆತ್ ಓವರ್‌ಗಳಲ್ಲಿ ಮಾರಕ ಯಾರ್ಕರ್‌ಗಳನ್ನು ಎಸೆಯುವುದರಲ್ಲಿ ಅವೇಶ್ ಖಾನ್ ನಿಪುಣರಾಗಿದ್ದಾರೆ. ಇದನ್ನೂ ಓದಿ: ಭಾರತ, ದಕ್ಷಿಣ ಆಫ್ರಿಕಾ T20 ಪಂದ್ಯ ರದ್ದುಗೊಳಿಸುವಂತೆ ಹೈಕೋರ್ಟ್‌ಗೆ ಅರ್ಜಿ

    ಈಚೆಗಷ್ಟೇ ಮುಗಿದ 15ನೇ ಆವೃತ್ತಿಯ ಐಪಿಎಲ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿದ್ದ ಅವೇಶ್ ಖಾನ್ ಬೌಲಿಂಗ್‌ಗೆ ಎದುರಾಳಿ ತಂಡದ ಬ್ಯಾಟ್ಸ್‌ಮನ್‌ಗಳು ಸಿಕ್ಸ್ ಹೊಡೆಯಲು ಹೆಣಗಾಡಿದ್ದಾರೆ. ಅದಕ್ಕಾಗಿಯೇ ಟೀಂ ಇಂಡಿಯಾದ T20 ಸರಣಿಯಲ್ಲಿ ಅವೇಶ್‌ಖಾನ್‌ಗೆ ಅವಕಾಶ ನೀಡಲಾಗಿದೆ. ಇದನ್ನೂ ಓದಿ: ಎಂ.ಎಸ್ ಧೋನಿ ಸೇರಿ 8 ಮಂದಿ ವಿರುದ್ಧ FIR

    Avesh

    ಯಾರ್ಕರ್ ಮಾಸ್ಟರ್ ಖಾನ್: ಟೀಂ ಇಂಡಿಯಾದಲ್ಲಿ ಡೆತ್ ಓವರ್ ಸ್ಪೆಷಲಿಸ್ಟ್ ಎಂದೇ ಖ್ಯಾತಿಯಾಗಿರುವ ಅವೇಶ್ ಖಾನ್ ನನ್ನ ಆಯ್ಕೆಗಾರರು ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಆಯ್ಕೆ ಮಾಡಿದ್ದಾರೆ. ಅವೇಶ್ ಖಾನ್ ಐಪಿಎಲ್ 2022ರ 13 ಪಂದ್ಯಗಳಲ್ಲಿ 18 ವಿಕೆಟ್‌ಗಳನ್ನು ಪಡೆದಿದ್ದಾರೆ. ಅವೇಶ್ ಖಾನ್ ಎಕಾನಮಿ ರೇಟ್ 8.72 ಇದೆ. ಐಪಿಎಲ್‌ನಲ್ಲಿ ಅವರ ಅತ್ಯುತ್ತಮ ಪ್ರದರ್ಶನವು ಟೀಂ ಇಂಡಿಯಾದಲ್ಲಿ ಅವಕಾಶ ಕಲ್ಪಿಸಿಕೊಟ್ಟಿದೆ. ಇದನ್ನೂ ಓದಿ: ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಗಂಗೂಲಿ ರಾಜೀನಾಮೆ ನೀಡಿಲ್ಲ: ಜಯ್ ಶಾ ಸ್ಪಷ್ಟನೆ

    ಅಲ್ಲದೆ ಖಾನ್ ಎಂತಹ ಒತ್ತಡದ ಪರಿಸ್ಥಿತಿಯಲ್ಲೂ ಉತ್ತಮ ಬೌಲಿಂಗ್ ಪ್ರದರ್ಶನ ನೀಡುತ್ತಾರೆ, ಶಾಂತವಾಗಿ ವರ್ತಿಸುತ್ತಾರೆ. ಇದರಿಂದ ಟೀಂ ಇಂಡಿಯಾದಲ್ಲಿ ಅವಕಾಶ ಸಿಕ್ಕಿದ್ದು, ಮುಂದೆ ಉತ್ತಮ ಆಟಗಾರರಾಗಿ ಬೆಳೆಯುವ ವಿಶ್ವಾಸ ಹೊಂದಿದ್ದಾರೆ.

  • ಐಪಿಎಲ್‍ನಲ್ಲಿ ವೇಗಿಗಳ ಮಿಂಚಿನ ಎಸೆತಗಳ ದಾಖಲೆ

    ಐಪಿಎಲ್‍ನಲ್ಲಿ ವೇಗಿಗಳ ಮಿಂಚಿನ ಎಸೆತಗಳ ದಾಖಲೆ

    ಮುಂಬೈ: 15ನೇ ಆವೃತ್ತಿ ಐಪಿಎಲ್‍ನಲ್ಲಿ ಹೈದರಾಬಾದ್ ತಂಡದ ವೇಗದ ಬೌಲರ್ ಉಮ್ರಾನ್ ಮಲಿಕ್ ತಮ್ಮ ವೇಗದ ಎಸೆತಗಳ ಮೂಲಕ ಎದುರಾಳಿ ತಂಡದ ಆಟಗಾರರಲ್ಲಿ ನಡುಕ ಹುಟ್ಟಿಸುತ್ತಿದ್ದಾರೆ.

    ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಗಂಟೆಗೆ 157 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಿ 2022ರ ಐಪಿಎಲ್‍ನಲ್ಲಿ ವೇಗದ ಎಸೆತ ಎಸೆದ ಬೌಲರ್ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಈ ಹಿಂದಿನ ಪಂದ್ಯಗಳಲ್ಲಿ ಗಂಟೆಗೆ 155.60 ಮತ್ತು 154.80 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಿ ಸದ್ದು ಮಾಡಿದ್ದರು. ಇದನ್ನೂ ಓದಿ: ವಾರ್ನರ್ ಬಿಂದಾಸ್ ಬ್ಯಾಟಿಂಗ್ – ಟ್ರೋಲ್ ಕ್ವೀನ್ ಆದ ಕಾವ್ಯಾ ಮಾರನ್

    15ನೇ ಆವೃತ್ತಿ ಐಪಿಎಲ್‍ನಲ್ಲಿ ಉಮ್ರಾನ್ ಮಲಿಕ್ 10 ಪಂದ್ಯಗಳಿಂದ 15 ವಿಕೆಟ್ ಕಿತ್ತು ಉದಯೋನ್ಮುಖ ಆಟಗಾರನಾಗಿ ಕಾಣಿಸಿಕೊಂಡಿದ್ದಾರೆ. 25 ರನ್ ನೀಡಿ 5 ವಿಕೆಟ್ ಕಿತ್ತಿರುವುದು ಮಲಿಕ್ ಬೆಸ್ಟ್ ಬೌಲಿಂಗ್ ಆಗಿದೆ. ಈ ಮೂಲಕ 15ನೇ ಆವೃತ್ತಿ ಐಪಿಎಲ್‍ನಲ್ಲಿ ಟೀಂ ಇಂಡಿಯಾಗೆ ವೇಗದ ಬೌಲರ್ ಒಬ್ಬನ ಪರಿಚಯವಾಗಿದೆ. ಇದನ್ನೂ ಓದಿ: ಆರ್‌ಸಿಬಿ ಅಭಿಮಾನಿಗೆ ಪ್ರಪೋಸ್ ಮಾಡಿ ಮನಗೆದ್ದ ಹುಡುಗಿ – ನೆಟ್ಟಿಗರು ಫುಲ್ ಆಕ್ಟಿವ್

    ಐಪಿಎಲ್‍ನ ಇತಿಹಾಸವನ್ನು ಗಮನಿಸಿದಾಗ ರಾಜಸ್ಥಾನ ತಂಡದ ಪರ ಆಡುತ್ತಿದ್ದ ಆಸ್ಟ್ರೇಲಿಯಾದ ಶಾನ್ ಟೈಟ್ ಗಂಟೆಗೆ 157.71 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಿ ದಾಖಲೆ ಬರೆದಿದ್ದು, ಆ ಬಳಿಕ ಇದೀಗ ಮಲಿಕ್ ಗಂಟೆಗೆ 157 ಕಿ.ಮೀ. ವೇಗದಲ್ಲಿ ಮಿಂಚಿನ ಬೌಲಿಂಗ್ ಮಾಡಿ ಗಮನಸೆಳೆದಿದ್ದಾರೆ. ಇವರಿಬ್ಬರ ಬಳಿಕ ಆನ್ರಿಚ್ ನಾರ್ಟ್ಜೆ ಗಂಟೆಗೆ 156.22 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಿ ತಮ್ಮ ಉರಿ ಚೆಂಡಿನ ಮೂಲಕ ಬ್ಯಾಟ್ಸ್‌ಮ್ಯಾನ್‌ಗಳನ್ನು ಕಕ್ಕಾಬಿಕ್ಕಿಯಾಗಿಸಿದ್ದರು.