Tag: ಬೌನ್ಸ್ ಬೈಕ್

  • ಕೋವಿಡ್ ಯೋಧರ ಓಡಾಟಕ್ಕೆ ‘ಬೌನ್ಸ್’ ಬೈಕ್

    ಕೋವಿಡ್ ಯೋಧರ ಓಡಾಟಕ್ಕೆ ‘ಬೌನ್ಸ್’ ಬೈಕ್

    – ಯಾರುಬೇಕಾದರೂ ಸಹಾಯಕ್ಕೆ ನಿಲ್ಲಬಹುದು

    ಬೆಂಗಳೂರು: ಕೋವಿಡ್-19 ಯೋಧರ ಓಡಾಟಕ್ಕೆ ನೆರವಾಗಲು ‘ಬೌನ್ಸ್’ ಬಾಡಿಗೆ ಬೈಕ್‍ಗಳ ಸಂಸ್ಥೆ ಮುಂದಾಗಿದ್ದು, ಸ್ಕೂಟರ್ ಹೀರೋ ಸೇವೆಯನ್ನು ಆರಂಭಿಸಿದೆ.

    ಕೊರೊನಾ ವಾರಿಯರ್ಸ್‌ಗಳಿಗೆ ಸಹಾಯ ಮಾಡಲು ಇಚ್ಛಿಸುವವರು ಮುಂದೆ ಬರಬಹುದು ಎಂದು ಬೌನ್ಸ್ ಸಂಸ್ಥೆ ಕೇಳಿಕೊಂಡಿದೆ. ಈ ನಿಟ್ಟಿನಲ್ಲಿ ಯಾರು ಬೇಕಾದರೂ scooterhero.bounceshare.com ನಲ್ಲಿ ಸೈನ್ ಅಪ್ ಆಗಿ ತಮ್ಮ ದ್ವಿಚಕ್ರ ವಾಹನಗಳನ್ನು ಕೋವಿಡ್-19   ಬಳಕೆಗೆ ಒದಗಿಸಬಹುದು.

    ಜನ ತಮ್ಮ ಬೈಕ್, ಸ್ಕೂಟರ್‌ಗಳನ್ನು ‘ಸ್ಕೂಟರ್ ಹೀರೋ’ ಪಟ್ಟಿಗೆ ಸೇರಿಸಿ, ಹಂಚಿಕೊಳ್ಳುವ ಅವಕಾಶವನ್ನು ಬೌನ್ಸ್ ಒದಗಿಸಿದೆ. ಈ ಪಟ್ಟಿಗೆ ಸೇರಿಸುವ ಪ್ರತಿಯೊಬ್ಬರು ತಮ್ಮ ಬೈಕನ್ನು ಉಚಿತವಾಗಿ ಬಳಕೆಗೆ ಕೊಡಬಹುದು. ಇಲ್ಲವೆ ದಿನಕ್ಕೆ 80 ರೂ. ಶುಲ್ಕ ವಿಧಿಸುವ ಆಯ್ಕೆಯನ್ನು ಹೊಂದಬಹುದಾಗಿದೆ. ಇದರಿಂದ ಆರ್ಥಿಕವಾಗಿ ಕುಗ್ಗಿರುವ ಸಾವಿರಾರು ಮಂದಿಗೆ, ಸುಮ್ಮನೆ ನಿಂತಿರುವ ತಮ್ಮ ವಾಹನದಿಂದ ಸ್ವಲ್ಪ ಹಣಗಳಿಸಲು ಸಹಾಯವಾಗಲಿದೆ.

    ಈ ಮೂಲಕ ಕೋವಿಡ್-19 ಯೋಧರಿಗೂ ಓಡಾಡಲು ಸಹಾಯವಾಗಬಹುದು ಎಂದು ಕಂಪನಿ ಕಂಪನಿ ಅಭಿಪ್ರಾಯ ವ್ಯಕ್ತಪಡಿಸಿದೆ. ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ 99724 17454 ನಂಬರಿಗೆ ಸಂಪರ್ಕಿಸಬಹುದು ಎಂದು ತಿಳಿಸಿದೆ.

  • ಬೌನ್ಸ್ ಬೈಕ್‍ನಲ್ಲಿ ಬರ್ತಾರೆ, ತಲೆಗೆ ಹಿಂಬದಿಯಿಂದ ಹೊಡೀತಾರೆ- ಬೆಂಗ್ಳೂರಲ್ಲಿ ಸರಗಳ್ಳರ ಕಾಟ

    ಬೌನ್ಸ್ ಬೈಕ್‍ನಲ್ಲಿ ಬರ್ತಾರೆ, ತಲೆಗೆ ಹಿಂಬದಿಯಿಂದ ಹೊಡೀತಾರೆ- ಬೆಂಗ್ಳೂರಲ್ಲಿ ಸರಗಳ್ಳರ ಕಾಟ

    ಬೆಂಗಳೂರು: ನಗರದಲ್ಲಿ ಸರಗಳ್ಳರ ಹಾವಳಿ ಹೆಚ್ಚಾಗಿದ್ದು, ಬೈಕಿನಲ್ಲಿ ಬರುತ್ತಾ ಇದ್ದ ಸರಗಳ್ಳರು ಈಗ ಲಾಂಗ್ ಹಿಡಿಕೊಂಡು ಕೃತ್ಯಕ್ಕೆ ಮುಂದಾಗಿದ್ದಾರೆ. ಅದು ಬಾಡಿಗೆ ಬೌನ್ಸ್ ಸ್ಕೂಟರ್ ಪಡೆದು ಕೃತ್ಯ ನಡೆಸಿರುವ ಘಟನೆ ನಗರದ ಕೆ.ಆರ್.ಪುರಂನಲ್ಲಿ ನಡೆದಿದೆ.

    ಕಳೆದ ಎರಡು ದಿನಗಳ ಹಿಂದೆಯಷ್ಟೇ ಕೆ.ಆರ್.ಪುರಂನ ಟಿ.ಸಿ.ಪಾಳ್ಯದ ಸರೋಜಮ್ಮ ಎಂಬುವವವರು ತಮ್ಮ ಮೊಮ್ಮಕ್ಕಳ ಜೊತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಹಿಂಬದಿಯಿಂದ ಬಂದ ಇಬ್ಬರು ದುಷ್ಕರ್ಮಿಗಳು ಮಹಿಳೆಗೆ ಲಾಂಗ್ ನಲ್ಲಿ ಹಿಂಬದಿಯಿಂದ ಹಲ್ಲೆ ನಡೆಸಿದ್ದಾರೆ.

    ಬೌನ್ಸ್‍ನ ಬಾಡಿಗೆ ಸ್ಕೂಟರಿನಲ್ಲಿ ಬಂದ ದುಷ್ಕರ್ಮಿಗಳು ಹಲ್ಲೆ ನಡೆಸಿ ಬಳಿಕ ಮಹಿಳೆಯನ್ನು ನೆಲಕ್ಕೆ ಬೀಳುವಂತೆ ಮಾಡಿದ್ದಾರೆ. ಆ ಬಳಿಕ ನೆಲಕ್ಕೆ ಬಿದ್ದ ಮಹಿಳೆ ಬಳಿ ಬಂದು ಹಲ್ಲೆ ನಡೆಸಿ ಚಿನ್ನಾಭರಣ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಬೌನ್ಸ್ ಗಾಡಿಯಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ನಡೆಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಳ ಪತ್ತೆಗೆ ಬೌನ್ಸ್ ಕಂಪನಿಯ ಜೊತೆ ಸಂಪರ್ಕವನ್ನು ಮಾಡಿದ್ದಾರೆ.

  • ಬಸ್, ಸೇತುವೆ ಮಧ್ಯೆ ಬೌನ್ಸ್ ಬೈಕ್ ಸರ್ಕಸ್..!

    ಬಸ್, ಸೇತುವೆ ಮಧ್ಯೆ ಬೌನ್ಸ್ ಬೈಕ್ ಸರ್ಕಸ್..!

    ಬೆಂಗಳೂರು: ಬೌನ್ಸ್ ಬೈಕ್‍ಗಳ ಬಳಕೆಗಿಂತ ದುರುಪಯೋಗಗಳೇ ಹೆಚ್ಚಾಗುತ್ತಿದೆ. ಬೌನ್ಸ್ ಬೈಕ್‍ಗಳನ್ನ ಎಲ್ಲೆಂದರಲ್ಲಿ ನಿಲ್ಲಿಸಿ ಹೋಗುವುದು, ಬೈಕ್‍ಗಳ ಹೆಲ್ಮೆಟ್, ಟಯರ್ ಕಳ್ಳತನ ನೋಡಿಯುತ್ತಲೇ ಇರುತ್ತದೆ. ಆದರೆ ಸುಮಾರು 14 ವರ್ಷದ ಬಾಲಕ ಬೌನ್ಸ್ ಬೈಕ್ ಅನ್ನು ರಸ್ತೆ ಮಧ್ಯೆದಲ್ಲಿ ಅಡ್ಡಾದಿಡ್ಡಿ ಚಲಾಯಿಸಿದ್ದಾನೆ.

    ನಗರದಲ್ಲಿ ಮೂರ್ನಾಲ್ಕು ದಿನಗಳ ಹಿಂದೆ ಘಟನೆ ನಡೆದಿದ್ದು, ಈ ದೃಶ್ಯವನ್ನು ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ಸೆರೆ ಹಿಡಿದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ನಗರದ ರಾಜರಾಜೇಶ್ವರಿ ನಗರದಿಂದ ಮೆಜೆಸ್ಟಿಕ್‍ಗೆ ಕೆಎ 1, ಎಫ್ 9567 ನಂಬರ್ ನ 225 ಸಿ ಬಸ್ ತೆರಳುತಿತ್ತು. ಈ ವೇಳೆ ಸುಮಾರು 14 ವರ್ಷದ ಬಾಲಕ ಬೌನ್ಸ್ ಕಂಪನಿಗೆ ಸೇರಿದ ಕೆಎ-51, ಎಇ-5357 ಬೈಕ್ ಅನ್ನು ವೇಗವಾಗಿ ಚಲಾಯಿಸಿಕೊಂಡು ಬಂದಿದ್ದ. ಅಷ್ಟೇ ಅಲ್ಲದೆ ಸೇತುವೆ ಮೇಲೆ ಹೋಗುತ್ತಿದ್ದ ಬಸ್ ಓವರ್ ಟೇಕ್ ಮಾಡಲು ಮುಂದಾಗಿದ್ದ. ಒಂದು ಕಡೆ ಸೇತುವೆ ಗೋಡೆ ಮತ್ತೊಂದು ಕಡೆ ಬಿಎಂಟಿಸಿ ಬಸ್‍ಗಳ ಮಧ್ಯೆ ಇದ್ದ ಎರಡು ಅಡಿಯಷ್ಟು ಜಾಗದಲ್ಲಿ ಸವಾರ ಬೈಕ್ ನುಗ್ಗಿಸಿದ್ದಾನೆ.

    ಫಜೀತಿಗೆ ಸಿಕ್ಕಿದ್ದ ಸವಾರನನ್ನು ಗಮನಿಸಿದ ಬಿಎಂಟಿಸಿ ಚಾಲಕ ಕೂಡಲೇ ಎಚ್ಚೆತ್ತು ಬಸ್ ನಿಲ್ಲಿಸಿದ್ದಾನೆ. ಆದರೆ ಬಾಲಕ ಮಾತ್ರ ಅಲ್ಲೇ ನಿಂತು ಮುಂದೆ ಹೋಗಲು ಸಾಧ್ಯವಾಗದೆ ಸರ್ಕಸ್ ಮಾಡುತ್ತಾ, ಹೊಗುತ್ತೇ ಮುಂದೆ ಹೋಗ್ರಿ ಅಂತ ಬಸ್ ಚಾಲಕನಿಗೆ ಹೇಳಿದ್ದಾನೆ. ನಂತರ ಬಿಎಂಟಿಸಿ ಚಾಲಕ ನಿಧಾನಕ್ಕೆ ಬಸ್ಸನ್ನು ಮುಂದಕ್ಕೆ ಚಾಲನೆ ಮಾಡಿದ್ದಾರೆ. ಬಸ್ ಮುಂದಕ್ಕೆ ಹೋಗುತ್ತಿದ್ದಂತೆಯೇ ಬಾಲಕ ಓವರ್ ಸ್ಪೀಡ್‍ನಲ್ಲಿ ಹೆಲ್ಮೇಟ್ ಇಲ್ಲದೆ ಬೈಕ್‍ನಲ್ಲಿ ಹೋಗಿದ್ದಾನೆ.

    ಈ ಘಟನೆಯು ಅಪ್ರಾಪ್ತರ ಕೈಗೆ ಆ್ಯಪ್ ಆಧಾರಿತ ಬೈಕ್‍ಗಳು ಸಲಿಸಾಗಿ ಸಿಗುತ್ತಿವೆ ಎಂಬುದನ್ನು ಸಾಬಿತುಪಡಿಸುತ್ತಿದೆ. ಈ ಬಗ್ಗೆ ಸಂಚಾರ ಪೊಲೀಸರು ಹಾಗೂ ಪೋಷಕರು ಎಚ್ಚೆತ್ತುಕೊಳ್ಳಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.