Tag: ಬೌದ್ಧ ಸನ್ಯಾಸಿ

  • ಬೌದ್ಧ ಸನ್ಯಾಸಿಯ ವೇಷ ಧರಿಸಿ ದೇಶ ವಿರೋಧಿ ಚಟುವಟಿಕೆಯ ಶಂಕೆ – ಚೀನೀ ಮಹಿಳೆ ಬಂಧನ

    ಬೌದ್ಧ ಸನ್ಯಾಸಿಯ ವೇಷ ಧರಿಸಿ ದೇಶ ವಿರೋಧಿ ಚಟುವಟಿಕೆಯ ಶಂಕೆ – ಚೀನೀ ಮಹಿಳೆ ಬಂಧನ

    ನವದೆಹಲಿ: ಉತ್ತರ ದೆಹಲಿಯಲ್ಲಿ (Delhi) ಟಿಬೆಟಿಯನ್ ನಿರಾಶ್ರಿತರು ವಾಸವಿದ್ದ ಸ್ಥಳದಲ್ಲಿ ದೇಶ ವಿರೋಧಿ ಚಟುವಟಿಕೆ ನಡೆಸುತ್ತಿದ್ದ ಶಂಕೆಯ ಮೇಲೆ ಚೀನಾದ ಮಹಿಳೆಯನ್ನು (Chinese woman) ಪೊಲೀಸರು (Delhi Police) ಬಂಧಿಸಿರುವುದಾಗಿ ತಿಳಿಸಿದ್ದಾರೆ.

    ವರದಿಗಳ ಪ್ರಕಾರ ಮಹಿಳೆಯ ಗುರುತಿನ ಪತ್ರದಲ್ಲಿ ಆಕೆಯ ಹೆಸರು ಡೋಲ್ಮಾ ಲಾಮಾ ಎಂದು ಬರೆಯಲಾಗಿದೆ. ಆಕೆಯ ವಿಳಾಸ ನೇಪಾಳದ (Nepal) ರಾಜಧಾನಿ ಕಠ್ಮಂಡು ಎಂದು ತೋರಿಸಿದೆ. ಆದರೆ ಆಕೆಯ ನಿಜ ಹೆಸರು ಕೈ ರೂವೋ ಎಂದು ಪೊಲೀಸರು ತಿಳಿಸಿದ್ದಾರೆ.

    ದೆಹಲಿ ವಿಶ್ವವಿದ್ಯಾಲಯದ ಉತ್ತರ ಕ್ಯಾಂಪಸ್ ಬಳಿ ಇರುವ ಟಿಬೆಟಿಯನ್ ನಿರಾಶ್ರಿತರ ಕಾಲೋನಿ ಮಜ್ನು ಕಾ ತಿಲ್ಲಾದಲ್ಲಿ ಆಕೆ ವಾಸವಿದ್ದಳು. ಆಕೆ ಬೌದ್ಧ ಸನ್ಯಾಸಿಗಳಂತೆ ಸಾಂಪ್ರದಾಯಿಕ ಕೆಂಪು ನಿಲುವಂಗಿ ಧರಿಸಿಕೊಂಡು, ಕೂದಲನ್ನೂ ಚಿಕ್ಕದಾಗಿ ಕತ್ತರಿಸಿಕೊಂಡಿದ್ದಳು. ಇದನ್ನೂ ಓದಿ: ಬೆಂಗ್ಳೂರಲ್ಲಿ ಆಯೋಧ್ಯೆ ತೀರ್ಪು ವಿರೋಧಿಸಿ, ಗಲಾಟೆಗೆ ಕರಪತ್ರ ಹಂಚಿಕೆ – PFI ಸಂಘಟನೆಯ ಕುತಂತ್ರ ಮತ್ತಷ್ಟು ಬಯಲು

    ಈ ಬಗ್ಗೆ ಮಹಿಳೆಯ ವಿದೇಶಿ ಪ್ರಯಾಣದ ದಾಖಲೆಗಳನ್ನು ಹುಡುಕಿದಾಗ ಆಕೆ 2019ರಲ್ಲಿ ಚೀನಾದ ಪಾಸ್‌ಪೋರ್ಟ್ ಬಳಸಿ ಭಾರತಕ್ಕೆ ಬಂದಿರುವುದು ತಿಳಿದುಬಂದಿದೆ. ಆಕೆಯನ್ನು ವಿಚಾರಿಸಿದಾಗ ಚೀನಾದ ಕಮ್ಯೂನಿಸ್ಟ್ ಪಕ್ಷದ ಕೆಲ ನಾಯಕರು ತನ್ನನ್ನು ಕೊಲ್ಲಲು ಬಯಸಿದ್ದರು ಎಂದು ಹೇಳಿಕೊಂಡಿದ್ದಾಳೆ.

    ಮಹಿಳೆ ಇಂಗ್ಲಿಷ್, ಮ್ಯಾಂಡರಿನ್ ಹಾಗೂ ನೇಪಾಳಿ ಭಾಷೆಗಳನ್ನು ತಿಳಿದಿದ್ದಾಳೆ. ಆಕೆ ಬೇಹುಗಾರಿಕೆ ಕೆಲಸಗಳಲ್ಲಿ ಭಾಗಿಯಾಗಿದ್ದಾಳೆಯೇ ಎಂಬುದನ್ನು ತಿಳಿಯಲು ಅಧಿಕಾರಿಗಳು ತನಿಖೆ ನಡೆಸುತ್ತಿದಾರೆ. ಇದನ್ನೂ ಓದಿ: ಕುರಾನ್ ಮಾತ್ರವಲ್ಲ, ಭಗವದ್ಗೀತೆ ಕೂಡಾ ಜಿಹಾದ್ ಕಲಿಸುತ್ತದೆ: ಶಿವರಾಜ್ ಪಾಟೀಲ್

    Live Tv
    [brid partner=56869869 player=32851 video=960834 autoplay=true]

  • ಮರಣಹೊಂದಿ ಹತ್ತು ದಿನ ಕಳೆದರೂ ಕೊಳೆಯದೇ ಉಳಿದ ಬೌದ್ಧ ಸನ್ಯಾಸಿ ದೇಹ

    ಮರಣಹೊಂದಿ ಹತ್ತು ದಿನ ಕಳೆದರೂ ಕೊಳೆಯದೇ ಉಳಿದ ಬೌದ್ಧ ಸನ್ಯಾಸಿ ದೇಹ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಟಿಬೇಟಿಯನ್ ಕಾಲೋನಿಯಲ್ಲಿ ಬೌದ್ಧ ಸನ್ಯಾಸಿಯೊಬ್ಬರು ಮೃತರಾಗಿ ಹತ್ತು ದಿನ ಕಳೆದರೂ ದೇಹ ಕೊಳೆಯದೇ ಯಥಾಸ್ಥಿತಿಯಲ್ಲಿರುವ ಮೂಲಕ ವಿಸ್ಮಯ ಮೂಡಿಸಿದೆ.

    ಕಾಲೋನಿಯ ನಂ.1 ಕ್ಯಾಂಪ್‍ನ ಶೇರ್ ಗಾಂದೇನ್ ಬೌದ್ಧ ಮಂದಿರದ ಹಿರಿಯ ಸನ್ಯಾಸಿ ಯಾಸಿ ಪೋಂಟ್ಸ್(90) ಸೆ. 9 ರಂದು ಕೊಠಡಿಯಲ್ಲಿ ಧ್ಯಾನದಲ್ಲಿ ಇರುವಾಗ ಮೃತರಾಗಿದ್ದರು. ಅವರ ದೇಹವನ್ನು ಅದೇ ಕೊಠಡಿಯಲ್ಲಿ ಹಾಗೆಯೇ ಇರಿಸಲಾಗಿದೆ. ಇದೀಗ ಹತ್ತು ದಿನ ಕಳೆದರೂ ಕೂಡ ಮೃತದೇಹದಲ್ಲಿ ನೀರು ಒಡೆಯುವುದಾಗಲಿ, ವಾಸನೆ ಬರುವುದಾಗಲಿ, ಕೊಳೆಯುವುದಾಗಲಿ ಆಗದೇ ಯಥಾಸ್ಥಿತಿಯಲ್ಲಿದ್ದು ಇದೀಗ ಅವರ ದೇಹಕ್ಕೆ ಕಿರಿಯ ಬೌದ್ಧ ಸನ್ಯಾಸಿಗಳು ದೀಪ ಬೆಳಗಿಸುವ ಮೂಲಕ ಪೂಜೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಪ್ರೇಮ ವೈಫಲ್ಯ- ರೈಲ್ವೇ ಹಳಿಗೆ ತಲೆಕೊಟ್ಟು ವಿದ್ಯಾರ್ಥಿ ಆತ್ಮಹತ್ಯೆ

    ಈ ಸನ್ಯಾಸಿಯು ಕ್ಯಾಂಪ್‍ನಲ್ಲಿ ಇರುವ ಕಿರಿಯ ಸನ್ಯಾಸಿಗಳಿಗೆ ಧರ್ಮ ಭೋದನೆ ಮಾಡುತಿದ್ದರು. ಇದೀಗ ಅವರು ಮೃತಪಟ್ಟಿದ್ದರೂ ದೇಹ ಯಥಾಸ್ಥಿತಿಯಲ್ಲಿ ಇರುವುದರಿಂದ ದೇಹ ಕೊಳೆಯುವವರೆಗೂ ಅಂತ್ಯಸಂಸ್ಕಾರ ಮಾಡದಿರಲು ಟಿಬೇಟಿಯನ್ ಮುಖಂಡರು ತೀರ್ಮಾನಿಸಿದ್ದಾರೆ.

    ಅಂತ್ಯ ಸಂಸ್ಕಾರ ಹೇಗಿರುತ್ತೆ?
    ಬೌದ್ಧ ಸನ್ಯಾಸಿಗಳು ಮರಣ ಹೊಂದಿದ ನಂತರ ಅವರ ದೇಹವನ್ನು ಊರಿನ ದೂರದ ಬೆಟ್ಟ ಪ್ರದೇಶದಲ್ಲಿ ಇಡಲಾಗುತ್ತದೆ. ಆ ದೇಹವನ್ನು ರಣ ಹದ್ದುಗಳು ತಿನ್ನಲು ಬಿಡುವುದು ಟಿಬೇಟಿಯನ್‍ರ ಸಂಪ್ರದಾಯ. ಆದರೆ ಇಂದಿನ ದಿನದಲ್ಲಿ ಆ ರೀತಿಯಲ್ಲಿ ವ್ಯವಸ್ಥೆಗಳು ಇಲ್ಲದ ಕಾರಣ ದೇಹವನ್ನು ಹೂತು ಹಾಕಿ ಆ ಸ್ಥಳದಲ್ಲಿ ಮಂಟಪವನ್ನು ನಿರ್ಮಿಸುತ್ತಾರೆ. ಅಂತ್ಯ ಸಂಸ್ಕಾರದ ವೇಳೆ ಬೌದ್ಧ ಧರ್ಮದ ರಿವಾಜುಗಳ ಮೂಲಕ ಮೆರವಣಿಗೆ ಮಾಡಿ ನಂತರ ಜನರಿಗೆ ನಮಸ್ಕರಿಸಲು ಅವಕಾಶ ಮಾಡಿಕೊಡಲಾಗುತ್ತದೆ. ಇದನ್ನೂ ಓದಿ: ಒಂದು ಕೆಜಿ ಮೋದಕದ ಬೆಲೆ ಬರೋಬ್ಬರಿ 12,000 ರೂಪಾಯಿ