Tag: ಬೌದ್ಧ ಧರ್ಮ

  • 2 ವರ್ಷಗಳ ನಂತ್ರ ಸಾರ್ವಜನಿಕವಾಗಿ ಕಾಣಿಸಿಕೊಂಡ ಬೌದ್ಧ ಗುರು

    2 ವರ್ಷಗಳ ನಂತ್ರ ಸಾರ್ವಜನಿಕವಾಗಿ ಕಾಣಿಸಿಕೊಂಡ ಬೌದ್ಧ ಗುರು

    ಶಿಮ್ಲಾ: ಕೋವಿಡ್ ಸಾಂಕ್ರಾಮಿಕ ರೋಗ ಹರಡಿ ಮಾನವರು ಒಬ್ಬರನ್ನೊಬ್ಬರು ಸಂಪರ್ಕ ಮಾಡುವುದು ಕಡಿಮೆಯಾಗಿತ್ತು. ಎರಡಕ್ಕೂ ಹೆಚ್ಚು ವರ್ಷಗಳಕಾಲ ಬೌದ್ಧ ಧರ್ಮ ಗುರು ದಲೈ ಲಾಮಾ (Dalai Lama) ಕಾಣಿಸಿಕೊಂಡಿರಲಿಲ್ಲ. ಆದರೆ ಇದೀಗ ಕೊರೊನಾ ನಂತರ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.

    ಬಳಿಕ ಪ್ರತಿಕ್ರಿಯಿಸಿರುವ ಅವರು, ನಾನೀಗ ಆರೋಗ್ಯವಂತನಾಗಿದ್ದು, ವೈದ್ಯರೊಂದಿಗೆ ಬಾಕ್ಸಿಂಗ್ ಕೂಡಾ ಆಡಬಹುದು. ನಾನು ನಿಯಮಿತವಾಗಿ ವೈದ್ಯಕೀಯ ತಪಾಸಣೆಗಾಗಿ ದೆಹಲಿಯ ಆಸ್ಪತ್ರೆಗೆ ಹೋಗಬೇಕಿತ್ತು. ಆದರೆ ಉತ್ತಮ ಆರೋಗ್ಯ ಹೊಂದಿರುವುದರಿಂದ ಈಗ ಹೋಗುತ್ತಿಲ್ಲ ಎಂದು ಹೇಳಿದ್ದಾರೆ.

    ಟಿಬೆಟಿಯನ್ ದೇವಾಲಯದಲ್ಲಿ ಅನುಯಾಯಿಗಳಿಗೆ ‘ಜಟಕ’ ಕಥೆಗಳ ಕಿರು ಬೋಧನೆಯನ್ನು ನೀಡಿದರು. ಕೇಂದ್ರ ಟಿಬೆಟಿಯನ್ ಆಡಳಿತದ (ಸಿಟಿಎ) ಸದಸ್ಯರು ಹಾಗೂ ಸಾವಿರಾರು ಬಿಕ್ಕುಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

    ಸನ್ಯಾಸಿಗಳು ಮತ್ತು ಕೇಂದ್ರದ ಸದಸ್ಯರು ಸೇರಿದಂತೆ ಸಾವಿರಾರು ಟಿಬೆಟಿಯನ್ನರು, ಟಿಬೆಟಿಯನ್ ಅಡ್ಮಿನಿಸ್ಟ್ರೇಷನ್ (CTA), ಕೂಟದ ಭಾಗವಾಗಿದ್ದಾರೆ. (CTA) ಚಾರ್ಟರ್ ಆಫ್ ದಿ ಟಿಬೆಟಿಯನ್ಸ್ ಇನ್-ಎಕ್ಸೈಲ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಇದನ್ನೂ ಓದಿ: ಗುಜರಾತ್ ಶಾಲಾ, ಕಾಲೇಜ್‍ಗಳಲ್ಲಿ ಭಗವದ್ಗೀತೆ ಕಡ್ಡಾಯ

    (CTA) ಸದಸ್ಯ ತೇನ್ಸಿಂಗ್ ಜಿಗ್ಮೆ ಮಾತನಾಡಿ, ಇದು ಅತ್ಯಂತ ಸುಂದರವಾದ ದಿನ. ನಾವು ಎರಡು ವರ್ಷಗಳ ನಂತರ ಅವರನ್ನು ನೋಡುತ್ತಿದ್ದೇವೆ. ಇದು ಇಂದಿನ ಅತ್ಯಂತ ಅದೃಷ್ಟದ ಸಂಗತಿಯಾಗಿದೆ. ಅವರು ಆರೋಗ್ಯವಾಗಿದ್ದಾರೆ ಆದ್ದರಿಂದ ನಾವು ಅವರ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತೇವೆ ಎಂದು ಹೇಳಿದರು. ನಾವು ನಿಜವಾಗಿಯೂ ಸಂತೋಷವನ್ನು ಅನುಭವಿಸುತ್ತಿದ್ದೇವೆ ಮತ್ತು ಅವರ ಪವಿತ್ರತೆಯನ್ನು ಉತ್ತಮವಾಗಿ ನೋಡಲು ಆಶೀರ್ವದಿಸುತ್ತೇವೆ ಎಂದು ಹೇಳಿದ್ದಾರೆ.

  • ಕೋಟೆನಾಡಲ್ಲಿ ಅಸ್ಪೃಶ್ಯತೆ, ಕೋಮುವಾದ ವಿರೋಧಿಸಿ 101 ಜನ ಬೌದ್ಧ ಧರ್ಮಕ್ಕೆ ಮತಾಂತರ

    ಕೋಟೆನಾಡಲ್ಲಿ ಅಸ್ಪೃಶ್ಯತೆ, ಕೋಮುವಾದ ವಿರೋಧಿಸಿ 101 ಜನ ಬೌದ್ಧ ಧರ್ಮಕ್ಕೆ ಮತಾಂತರ

    ಚಿತ್ರದುರ್ಗ: ಹಿಂದೂ ಧರ್ಮದಲ್ಲಿನ ಅಸ್ಪೃಶ್ಯತೆ ಅಸಮಾನತೆ ಹಾಗೂ ಕೋಮುವಾದವನ್ನು ಸಹಿಸಲಾಗದೇ ಕೋಟೆನಾಡು ಚಿತ್ರದುರ್ಗದ 101 ಜನ ಹಿಂದೂಗಳು ಬೌದ್ಧ ಧರ್ಮಕ್ಕೆ ಮತಾಂತರವಾಗಿದ್ದಾರೆ.

    ಚಿತ್ರದುರ್ಗದ ಸ್ಟೇಡಿಯಂ ರಸ್ತೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಗೌತಮ ಬುದ್ಧನ ಪ್ರತಿಮೆಯನ್ನು ಬೆಂಗಳೂರಿನ ಮಹಾಬೋಧಿ ಸಂಸ್ಥೆ ಪೀಠಾಧಿಪತಿಗಳಾದ ಆನಂದ ಬಂತೇಜಿಯವರು ಲೋಕಾರ್ಪಣೆ ಮಾಡಿದರು. ಪ್ರತಿಮೆ ಅನಾವರಣದ ಬಳಿಕ ತರಾಸು ರಂಗಮಂದಿರದಲ್ಲಿ ಬೌದ್ಧ ಧರ್ಮ ದೀಕ್ಷೆ ನೀಡಲಾಯಿತು. ಇದನ್ನೂ ಓದಿ: ಕರ್ನಾಟಕವು ಯಶಸ್ಸಿನ ಹೊಸ ಎತ್ತರವನ್ನು ಏರಲಿ: ಮೋದಿ ಶುಭಾಶಯ

    ಬುದ್ಧನ ಪ್ರತಿಮೆ ಅನಾವರಣ ಸ್ವಾಗತ ಸಮಿತಿ ಅಧ್ಯಕ್ಷ ತಿಪ್ಪೇಸ್ವಾಮಿ ನೇತೃತ್ವದಲ್ಲಿ 101 ಜನ ಹಿಂದೂಗಳು ಬೌದ್ಧ ಧರ್ಮಕ್ಕೆ ಮತಾಂತರವಾದರು. ಈ ವೇಳೆ ಮಾತನಾಡಿದ ತಿಪ್ಪೇಸ್ವಾಮಿ ಅವರು, ಬೌದ್ಧ ಧರ್ಮದ ಅಹಿಂಸೆ, ಸ್ವತಂತ್ರ ಹಾಗೂ ಸಮಾನತಾ ತತ್ವ ಒಪ್ಪಿ ಬೌದ್ಧ ಧರ್ಮಕ್ಕೆ ಮತಾಂತರ ಆಗ್ತಿದ್ದೇವೆ. ನಮಗಿಂತಲೂ ಮುಂಚೆಯೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಸಹ ಈ ಹಿಂದೂ ಧರ್ಮದ ಆಚರಣೆಗಳನ್ನು ವಿರೋಧಿಸಿ ಬೌದ್ಧ ಧರ್ಮ ದೀಕ್ಷೆ ಪಡೆದಿದ್ದರು ಎಂದರು.

    ಕೋಟೆನಾಡು ಚಿತ್ರದುರ್ಗ ಜಿಲ್ಲೆ ಸಹ ಬೌದ್ಧರ ಅನುಯಾಯಿಗಳ ನೆಲೆಬೀಡಾಗಿದ್ದು, ಮೌರ್ಯರ ದೊರೆ ಅಶೋಕ ಸೇರಿದಂತೆ ಅನೇಕ ಬೌದ್ಧ ಧರ್ಮದ ಅನುಯಾಯಿಗಳು ಕೋಟೆನಾಡಿನೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು. ಇದಕ್ಕೆ ಕುರುಹುಗಳು ಕೂಡ ಜಿಲ್ಲೆಯಲ್ಲಿವೆ. ಹೀಗಾಗಿ ನಾವುಗಳು ಸಹ ಆನಂದ ಬಂತೇಜಿ ಶ್ರೀಗಳಿಂದ ಇಂದು ಬೌದ್ಧ ಧರ್ಮ ದೀಕ್ಷೆ ಪಡೆದಿದ್ದೇವೆ. ಮುಂಬರುವ ದಿನಗಳಲ್ಲಿ ಚಿತ್ರದುರ್ಗದ 2000ಕ್ಕೂ ಅಧಿಕ ಹಿಂದೂಗಳು ಬೌದ್ಧ ಧರ್ಮ ದೀಕ್ಷೆ ಪಡೆಯಲಿದ್ದಾರೆಂದು ತಿಳಿಸಿದರು. ಇದನ್ನೂ ಓದಿ: ಅಮೇಜಾನ್‌ಗೆ ಸೇರಿದ ಕಂಟೇನರ್‌ನಿಂದ ಲಕ್ಷಾಂತರ ರೂ.ಮೌಲ್ಯದ ವಸ್ತುಗಳು ರಾಬರಿ

    ಇದೇ ವೇಳೆ ಮಹಾಭೊದಿ ಸಂಸ್ಥೆಯ ಶ್ರೀಗಳಾದ ಆನಂದ ಬಂತೇಜಿ ಅವರು ಮಾತನಾಡಿ, ಬೌದ್ಧ ಧರ್ಮ ದೀಕ್ಷೆ ಅನ್ನೋದು ಜಾತಿ, ಧರ್ಮ ಹಾಗೂ ರಾಜ್ಯ ದೇಶಕ್ಕೆ ಸೀಮಿತವಲ್ಲ. ಇಡೀ ಜಗತ್ತಿಗೆ ಭಗವಾನ್ ಬುದ್ಧರ ಸಂದೇಶ ಇಂದು ಅನಿವಾರ್ಯವಾಗಿದೆ. ನಮಗೆ ಯುದ್ಧ ಬೇಡ, ಬುದ್ಧ ಬೇಕೆಂಬ ಪ್ರಚಾರ ನಡೆಯುತ್ತಿದೆ. ಹೀಗಾಗಿ ಬೌದ್ಧ ಧರ್ಮದ ಪಂಚಶೀಲಗಳನ್ನು ತೆಗೆದುಕೊಳ್ಳುವ ಪ್ರಕ್ರಿಯೆಯೇ ಧಮ್ಮ ದೀಕ್ಷೆಯಾಗಿದೆ ಎಂದರು.

  • ಬೌದ್ಧ ಧರ್ಮ ಸ್ವೀಕರಿಸಿದ ಹೈದರಾಬಾದ್ ಮೂಲದ ಮುಸ್ಲಿಂ ವ್ಯಕ್ತಿ

    ಬೌದ್ಧ ಧರ್ಮ ಸ್ವೀಕರಿಸಿದ ಹೈದರಾಬಾದ್ ಮೂಲದ ಮುಸ್ಲಿಂ ವ್ಯಕ್ತಿ

    ಚಾಮರಾಜನಗರ: ಮುಸ್ಲಿಂ ವ್ಯಕ್ತಿಯೊಬ್ಬರು ಇಂದು ಚಾಮರಾಜನಗರದ ಸಾರನಾಥ ಬೌದ್ಧ ವಿಹಾರದಲ್ಲಿ ಬೌದ್ಧ ಧರ್ಮ ಸ್ವೀಕರಿಸಿ, ಭಿಕ್ಕು ದೀಕ್ಷೆ ಪಡೆದರು.

    ತೆಲಂಗಾಣದ ಹೈದರಾಬಾದ್ ನಿವಾಸಿ ಶಹವನಾಜ್ ಆಲಿ (40) ಬುದ್ಧನ ಪಂಚಶೀಲತತ್ವಗಳಿಗೆ ಆಕರ್ಷಿತರಾಗಿ ಬಂತೇ ಭೋಧಿದತ್ತ ಅವರ ಸಮ್ಮುಖದಲ್ಲಿ ಬೌದ್ಧ ಭಿಕ್ಕು ದೀಕ್ಷೆ ಪಡೆದರು. ಧಮ್ಮ ಕ್ರಾಂತಿ ಬಂತೇಜಿಯಾಗಿ ಮರು ನಾಮಕರಣಗೊಂಡರು. ಧಮ್ಮ ಕ್ರಾಂತಿ ಬಂತೇಜಿ ಅವರು ಆಟೋಮೊಬೈಲ್ಸ್ ನಲ್ಲಿ ಡಿಪ್ಲೊಮಾ ಪದವಿ ಪಡೆದಿದ್ದಾರೆ.

    ಈ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಕಳೆದ 10 ವರ್ಷದಿಂದ ಬೌದ್ಧ ಧರ್ಮವನ್ನು ಅಧ್ಯಯನ ಮಾಡಿದೆ. 5 ವರ್ಷದ ಹಿಂದೆ ನಾಗಪುರದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಧಮ್ಮ ದೀಕ್ಷೆ ಸ್ಥಳಕ್ಕೆ ಭೇಟಿ ನೀಡಿ ನಾನು ಗಡ್ಡವನ್ನು ತೆಗೆದೆ. ಅಂದಿನಿಂದಲೇ ಧ್ಯಾನವನ್ನು ಅಭ್ಯಸಿಸುತ್ತಿದ್ದೇನೆ. ಬೌದ್ಧ ಧರ್ಮ ಸ್ವೀಕಾರಕ್ಕೆ ಯಾರದೇ ವಿರೋಧವಿದ್ದರೂ ನನಗೆ ಭಯವಿಲ್ಲ. ಸಂವಿಧಾನಕ್ಕಾಗಿ, ಸಮಾಜಕ್ಕಾಗಿ ಜೀವನದಲ್ಲಿ ಶಾಂತಿ ಬಯಸಿ ಭಿಕ್ಕುವಾಗಿದ್ದೇನೆ ಎಂದು ತಿಳಿಸಿದರು.

  • ಪುತ್ರಿ ಅಕ್ಷರಾ ಮತಾಂತರಗೊಂಡಿದ್ದಾರೆಂಬ ವದಂತಿಗೆ ಕಮಲ್ ಹಾಸನ್ ಪ್ರತಿಕ್ರಿಯಿಸಿದ್ದು ಹೀಗೆ

    ಪುತ್ರಿ ಅಕ್ಷರಾ ಮತಾಂತರಗೊಂಡಿದ್ದಾರೆಂಬ ವದಂತಿಗೆ ಕಮಲ್ ಹಾಸನ್ ಪ್ರತಿಕ್ರಿಯಿಸಿದ್ದು ಹೀಗೆ

    ಚೆನ್ನೈ: ನಟ ಕಮಲ್ ಹಾಸನ್ ಪುತ್ರಿ ಅಕ್ಷರಾ ಬೌದ್ಧ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮಗಳು ಅಕ್ಷರಾ ಮತಾಂತರಗೊಂಡಿದ್ದಾರೆಂಬ ವದಂತಿ ಹಬ್ಬಿದ ಹಿನ್ನೆಲೆಯಲ್ಲಿ ಕಮಲ್ ಹಾಸನ್ ಟ್ವಿಟ್ಟರ್‍ನಲ್ಲಿ ಇದಕ್ಕೆ ತಕ್ಕ ಪ್ರತಿಕ್ರಿಯೆ ನೀಡಿದ್ದಾರೆ.

    ಈ ಕುರಿತು ಕಮಲ್ ಹಾಸನ್ ತಮ್ಮ ಪುತ್ರಿ ಅಕ್ಷರಾಗೆ ಟ್ವೀಟ್ ಮಾಡಿದ್ದಾರೆ. ಟ್ವೀಟ್‍ನಲ್ಲಿ ಈ ರೀತಿ ಬರೆಯಲಾಗಿದೆ. `ಹಾಯ್ ಅಕ್ಷು, ಏನು ನೀನು ಮತಾಂತರಗೊಂಡಿದ್ದೀಯಾ? ಒಂದು ವೇಳೆ ನೀನು ಮತಾಂತರಗೊಂಡಿದ್ರೂ ನಿನ್ನನ್ನು ಪ್ರೀತಿಸುತ್ತೇನೆ. ಧರ್ಮದಲ್ಲಿರುವಂತೆ ಪ್ರೀತಿಯಲ್ಲಿ ಯಾವುದೇ ಇತಿಮಿತಿಗಳಿರುವುದಿಲ್ಲ. ಜೀವನವನ್ನು ಎಂಜಾಯ್ ಮಾಡು. ನನ್ನ ಪ್ರೀತಿ ಯಾವಗಲೂ ನಿನ್ನ ಜೊತೆಯಲ್ಲಿರುತ್ತದೆ. ನಿನ್ನ ಬಾಪು!’

    ತಂದೆಯ ಟ್ವೀಟ್‍ಗೆ ಮಗಳು ಅಕ್ಷರಾ, `ಹಾಯ್ ಬಾಪೂಜಿ. ಇಲ್ಲ, ನಾನು ಇನ್ನೂ ನಾಸ್ತಿಕಳಾಗಿದ್ದೇನೆ. ಆದ್ರೂ ಬೌದ್ಧ ಧರ್ಮ ಬದುಕಿನ ಹಾದಿಯಾಗಿರುವುದರಿಂದ ನಾನು ಅದನ್ನು ಒಪ್ಪುತ್ತೇನೆ ಎಂದು ಉತ್ತರ ನೀಡಿದ್ದಾರೆ.

    ಅಕ್ಷರಾಳ ಒಬ್ಬ ಫ್ರೆಂಡ್ ಬಹುದಿನಗಳಿಂದ ಬೌದ್ಧ ಧರ್ಮವನ್ನು ಪಾಲನೆ ಮಾಡುತ್ತಿದ್ದು, ಇದು ನೇರವಾಗಿ ಅಕ್ಷರಾಳ ಮೇಲೆ ಪ್ರಭಾವ ಬೀರಿದೆ. ಇನ್ನೂ ಫ್ರೆಂಡ್ ಪೋಷಕರು ಸಹ ಅಕ್ಷರಾಳಿಗೆ ಬೌದ್ಧ ಧರ್ಮದ ಬಗ್ಗೆ ಪರಿಚಯ ನೀಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

    ಅಕ್ಷರಾ ಹಾಸನ್ `ಶಮಿತಾಬ್’ ಚಿತ್ರದ ಮೂಲಕ ಬಾಲಿವುಡ್ ಅಂಗಳಕ್ಕೆ ಪಾದರ್ಪಣೆ ಮಾಡಿದ್ದರು. ನಂತರ ಲಾಲಿ ಕೀ ಶಾದಿ ಮೇ ಲಡ್ಡು ದಿವಾನಾ ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ. ಸದ್ಯ ವಿವಿಗೇಮ್ ಚಿತ್ರದಲ್ಲಿ ನಟಿಸಿದ್ದು, ಸಿನಿಮಾದ ಪ್ರಮೋಷನ್‍ದಲ್ಲಿ ಬ್ಯೂಸಿಯಾಗಿದ್ದಾರೆ. ವಿವಿಗೇಮ್‍ನಲ್ಲಿ ಅಜೀತ್ ಕುಮಾರ್ ಜೊತೆಯಾಗಿ ಅಕ್ಷರಾ ನಟಿಸಿದ್ದಾರೆ.

     

    https://www.instagram.com/p/BW-aYoIFod6/?taken-by=aksharaa.haasan

    https://www.instagram.com/p/BW-Z5JqlugV/?taken-by=aksharaa.haasan

    https://www.instagram.com/p/BWN5-sxFhv6/?taken-by=aksharaa.haasan

    https://www.instagram.com/p/BRAfuwNF-xp/?taken-by=aksharaa.haasan