Tag: ಬೋಲ್ಡ್

  • ಹೀರೋಗಳು ಶರ್ಟ್ ತೆಗೆದು ‘ಆಬ್ಸ್’ ತೋರಿಸ್ತಾರೆ, ನಮಗೂ ಫ್ರೀಡಂ ಬೇಕು ಎಂದ ನಟಿ ಪೂಜಾ ಭಾಲೇಕರ್

    ಹೀರೋಗಳು ಶರ್ಟ್ ತೆಗೆದು ‘ಆಬ್ಸ್’ ತೋರಿಸ್ತಾರೆ, ನಮಗೂ ಫ್ರೀಡಂ ಬೇಕು ಎಂದ ನಟಿ ಪೂಜಾ ಭಾಲೇಕರ್

    ರಾಮ್ ಗೋಪಾಲ್ ವರ್ಮಾ ನಿರ್ದೇಶನದ ‘ಲಡಕಿ’ ಸಿನಿಮಾ ವಿಶ್ವದಾದ್ಯಂತ ಬಿಡುಗಡೆ ಆಗುತ್ತಿದೆ. ಈ ಸಿನಿಮಾದ ನಾಯಕಿ ಪೂಜಾ ಭಾಲೇಕರ್ ಅಂತೂ ಅಚ್ಚರಿ ಮೇಲೆ ಅಚ್ಚರಿ ಪಡುವಷ್ಟು ಬೋಲ್ಡ್, ಸೆಕ್ಸಿಯಾಗಿ ಕಾಣಿಸಿಕೊಂಡಿದ್ದಾರೆ. ಬಹುತೇಕ ಬಿಕಿನಿಯ ಫೋಟೋಗಳನ್ನು ರಾಮ್ ಗೋಪಾಲ್ ವರ್ಮಾ ಸಿನಿಮಾದ ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಹಾಗಾಗಿ ಪೂಜಾ ಭಾಲೇಕರ್ ಅವರನ್ನು ಹಲವು ರೀತಿಯಲ್ಲಿ ಪ್ರಶ್ನೆಗಳನ್ನು ಕೇಳುತ್ತಿದ್ದಾರಂತೆ ಅಭಿಮಾನಿಗಳು.

    ಈ ಸಿನಿಮಾದಲ್ಲಿ ನೀವು ಬಿಕಿನಿ ಹಾಗೂ ಬಹುತೇಕ ತುಂಡುಡುಗೆಯಲ್ಲೇ ಕಾಣಿಸಿಕೊಂಡಿದ್ದೀರಿ. ಇಂತಹ ಕಾಸ್ಟ್ಯೂಮ್ ಹಾಕಿ ಶೂಟ್ ಮಾಡುವಾಗ ಮುಜುಗರ ಅನಿಸಲಿಲ್ಲವಾ? ಎಂದು ಪ್ರಶ್ನೆ ಮಾಡಿದ್ದಾರೆ. ಈ ಪ್ರಶ್ನೆಗೆ ಅಷ್ಟೇ ಹಾಟ್ ಹಾಟ್ ಆಗಿಯೇ ಉತ್ತರ ನೀಡಿರುವ ಪೂಜಾ ಭಾಲೇಕರ್, ‘ಸಿನಿಮಾದ ಹೀರೋಗಳು ಆದರೆ ಟಿಶರ್ಟ್ ತೆಗೆದು ಆಬ್ಸ್ ತೋರಿಸುತ್ತಾರೆ. ಇಂತಹ ಸ್ವಾತಂತ್ರ್ಯವನ್ನು ನಮಗೂ ಏಕೆ ಕೊಡಬಾರದು. ನೀವು ಯಾಕೆ ಅದನ್ನು ಬೇರೆ ರೀತಿಯಲ್ಲಿ ತೆಗೆದುಕೊಳ್ಳುತ್ತೀರಿ ಎಂದು ಉತ್ತರಿಸಿದ್ದಾರೆ. ಇದನ್ನೂ ಓದಿ:ಆಗಸ್ಟ್ ನಲ್ಲಿ ‘ಅವನೇ ಶ್ರೀಮನ್ನಾರಾಯಣ’ ನಿರ್ದೇಶಕರ ಸಿನಿಮಾ ಟೈಟಲ್ ಲಾಂಚ್ : ಶಿವರಾಜ್ ಕುಮಾರ್ ಹೀರೋ

    ಯಾವ ದೃಶ್ಯದಲ್ಲಿ ಯಾವ ರೀತಿಯ ಬಟ್ಟೆ ಹಾಕಿಕೊಳ್ಳಬೇಕು ಎಂದು ನಾನು ಮತ್ತು ನಿರ್ದೇಶಕರು ಒಟ್ಟಿಗೆ ಕೂತು ಚರ್ಚೆ ಮಾಡುತ್ತಿದ್ದೆವು. ಸೀರೆ ಹಾಕಿಕೊಂಡು ಫೈಟ್ ಮಾಡುವುದಕ್ಕೆ ಆಗುತ್ತಾ? ಎಂದೂ ಪ್ರಶ್ನೆ ಮಾಡಿರುವ ಪೂಜಾ, ನಾನು ಯಾವ ರೀತಿಯ ಸಿನಿಮಾಗಳಲ್ಲಿ ನಟಿಸುತ್ತೇನೆ ಮತ್ತು ಎಂತಹ ಪಾತ್ರವನ್ನು ಮಾಡುತ್ತೇನೆ ಅದು ನನ್ನ ಆಯ್ಕೆ. ಸಮಾಜ ಏನೇ ಹೇಳಿದರೂ,  ನಾನು ಅದಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಬೋಲ್ಡ್ ಸ್ಟೇಟ್‍ ಮೆಂಟ್ ಕೊಟ್ಟಿದ್ದಾರೆ ಪೂಜಾ.

    Live Tv
    [brid partner=56869869 player=32851 video=960834 autoplay=true]

  • ಹಾಟ್ ಸೀನ್ ಒಪ್ಪಿಕೊಂಡಿದ್ದು ಯಾಕೆ – ರಿವೀಲ್ ಮಾಡಿದ್ರು ರಚಿತಾ ರಾಮ್

    ಹಾಟ್ ಸೀನ್ ಒಪ್ಪಿಕೊಂಡಿದ್ದು ಯಾಕೆ – ರಿವೀಲ್ ಮಾಡಿದ್ರು ರಚಿತಾ ರಾಮ್

    ಬೆಂಗಳೂರು: ನಟ ಉಪೇಂದ್ರ ಮತ್ತು ರಚಿತಾ ರಾಮ್ ಅಭಿನಯ ‘ಐ ಲವ್ ಯೂ’ ಸಿನಿಮಾದ ಟ್ರೇಲರ್ ಕಳೆದ ದಿನ ಬಿಡುಗಡೆಯಾಗಿದೆ. ಇದರಲ್ಲಿ ರಚಿತಾ ಅವರು ಮೊದಲ ಬಾರಿಗೆ ತುಂಬಾ ಹಾಟ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಬಗ್ಗೆ ಸ್ವತಃ ರಚಿತಾ ರಾಮ್ ಮಾತನಾಡಿದ್ದಾರೆ.

    ರಚಿತಾ ಅವರು ‘ಐ ಲವ್ ಯೂ’ ಸಿನಿಮಾದಲ್ಲಿ ಉಪೇಂದ್ರ ಅವರ ಜೊತೆ ಸಖತ್ ಹಾಟ್ ಆಗಿ ಅಭಿನಯಸಿದ್ದಾರೆ. ಆ ದೃಶ್ಯವನ್ನು ಚಿತ್ರೀಕರಣ ಮಾಡುವಾಗ ನಡೆದ ಸಂಪೂರ್ಣ ಘಟನೆಯನ್ನು ಟ್ರೇಲರ್ ಲಾಂಚ್ ವೇಳೆ ಹಂಚಿಕೊಂಡಿದ್ದಾರೆ.

    ನಾನು ಟ್ರೇಲರ್ ನಲ್ಲಿ ಆ ದೃಶ್ಯವನ್ನು ನೋಡಿದಾಗ ಭಯಪಟ್ಟೆ. ಸಿನಿಮಾಗಾಗಿ ಚಿತ್ರೀಕರಣ ಮಾಡುವಾಗ ನಾನು ಸಾಮಾನ್ಯದ ಪಾತ್ರವೆಂದುಕೊಂಡು ಅಭಿನಯಸಿದ್ದೆ. ಆದರೆ ಈಗ ಅದನ್ನು ದೊಡ್ಡ ಪರದೆಯ ಮೇಲೆ ನೋಡಿದಾಗ ನಾನು ಏನು ಮಾಡಿದ್ದೇನೆಂದು ತಿಳಿಯುತ್ತದೆ ಎಂದರು.

    ಇದೊಂದು ಹೊಸ ಪ್ರಯತ್ನವಾಗಿದೆ. ಇದರಲ್ಲಿ ನಾನು ತುಂಬಾ ಬೋಲ್ಡ್ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಒಂದು ಹೊಸ ಪ್ರಯತ್ನ ಮಾಡಲು ಸವಾಲಾಗಿ ಈ ಸಿನಿಮಾವನ್ನು ಒಪ್ಪಿಕೊಂಡಿದ್ದೆ. ಅದರಲ್ಲೂ ಹಾಟ್ ದೃಶ್ಯದ ಚಿತ್ರೀಕರಣದ ಸಮಯದಲ್ಲಿ, ನಾನು ಚಿತ್ರೀಕರಣ ಸ್ಥಳದಿಂದ ನಿರ್ದೇಶಕ ಮತ್ತು ಛಾಯಾಗ್ರಾಹಕರನ್ನು ಹೋಗುವಂತೆ ಪ್ರತಿಯೊಬ್ಬರನ್ನು ಕೇಳಿಕೊಂಡಿದ್ದೆ ಎಂದು ರಚಿತಾ ಹೇಳಿದ್ದಾರೆ.

    ನಾನು ಮೊದಲು ಚಿನ್ನಿ ಪ್ರಕಾಶ್ ಮಾಸ್ಟರ್ (ಮಾತಾನಡಿ ಮಾಯಾವಾದೆ.. ಹಾಡಿನ ನೃತ್ಯ ಸಂಯೋಜಕ) ಜೊತೆ ಕೆಲಸ ಮಾಡಿದ್ದೇನೆ. ಆದರೆ ಈ ರೀತಿಯ ಪಾತ್ರವನ್ನು ಮಾಡಿಲ್ಲ. ಈ ಹಾಡನ್ನು ನಾವು ಚಿತ್ರೀಕರಿಸಿದ ನಂತರ ಅವರು ರೊಮ್ಯಾಂಟಿಕ್ ಹಾಡುಗಳಿಗೆ ಪ್ರಸಿದ್ಧರಾಗಿದ್ದಾರೆ ಎಂದು ತಿಳಿದುಕೊಂಡೆ ಎಂದಿದ್ದಾರೆ.