Tag: ಬೋರ್ ಗನ್

  • ನಲಪಾಡ್ ಬಳಿ ಇವೆ ಪೊಲೀಸರು, ಮಿಲಿಟರಿಯವರು ಬಳಸೋ ಬೋರ್ ಗನ್!

    ನಲಪಾಡ್ ಬಳಿ ಇವೆ ಪೊಲೀಸರು, ಮಿಲಿಟರಿಯವರು ಬಳಸೋ ಬೋರ್ ಗನ್!

    ಬೆಂಗಳೂರು: ವಿದ್ವತ್ ಮೇಲಿನ ಹಲ್ಲೆ ಘಟನೆ ಕುರಿತು ಪ್ರಕರಣ ದಾಖಲಾದ ಬಳಿಕ ನಲಪಾಡ್ ನ ರೌಡಿಸಂ ಕುರಿತ ಒಂದೊಂದೆ ಸ್ಫೋಟಕ ಮಾಹಿತಿಗಳು ಪಬ್ಲಿಕ್ ಟಿವಿಗೆ ಲಭ್ಯವಾಗುತ್ತಿದೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ನಲಪಾಡ್ ಬಳಿ ಪೊಲೀಸರು ಮತ್ತು ಮಿಲಿಟರಿ ಅವರು ಬಳಕೆ ಮಾಡುವ ಗನ್ ಇದೆ ಎನ್ನುವ ಎಂಬ ಮಾಹಿತಿ ಲಭ್ಯವಾಗಿದೆ.

    ನಲಪಾಡ್ ಬಳಿ ಇರುವಂತಹ ಗನ್ ಗಳು ಬೋರ್ ಗನ್ ಗಳಾಗಿದ್ದು, ಇವುಗಳನ್ನು ಪೊಲೀಸರು ಹಾಗೂ ಮಿಲಿಟರಿಯಲ್ಲಿ ಮಾತ್ರ ಬಳಕೆ ಮಾಡುತ್ತಾರೆ. ಕಾನೂನು ಬಾಹಿರವಾಗಿ ಬೋರ್ ಗನ್ ಹೊಂದಿರುವ ನಲಪಾಡ್ ಅವುಗಳನ್ನು ಹಿಡಿದು ಫೋಟೋ ಮತ್ತು ವಿಡಿಯೋ ಗಳಲ್ಲಿ ಪೋಸ್ ಕೊಟ್ಟು ಸಾಮಾಜಿಕ ಜಾಲತಾಣಗಳಿಗೆ ವಿಡಿಯೋ ಆಪ್‍ಲೋಡ್ ಮಾಡುವ ಶೋಕಿ ಹೊಂದಿದ್ದ.

    ಸಾರ್ವಜನಿಕವಾಗಿ ಗನ್ ಹಿಡಿದು ಶೋಕಿ ಮಾಡುತ್ತಿದ್ದರೂ ಪೊಲೀಸರು ಇದೂವರೆಗೂ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.

    https://www.youtube.com/watch?v=IBc7ChOEbxg

    https://www.youtube.com/watch?v=IHwUP3mtZXQ