Tag: ಬೋರ್ಡ್

  • ಭಿಕ್ಷುಕರಿಗಾಗಿ ಮಹಿಳೆಯಿಂದ ಮಹತ್ವದ ಕಾರ್ಯ

    ಭಿಕ್ಷುಕರಿಗಾಗಿ ಮಹಿಳೆಯಿಂದ ಮಹತ್ವದ ಕಾರ್ಯ

    ವಾಷಿಂಗ್ಟನ್: ನಾವು ವಾಸಿಸುವ ನಗರಗಳಲ್ಲಿ ಪ್ರತಿನಿತ್ಯ ಬಹುತೇಕ ಭಿಕ್ಷುಕರು ಮತ್ತು ನಿರಾಶ್ರಿತರನ್ನು ನೋಡುತ್ತಿರುತ್ತೇವೆ. ಅವರು ಆಹಾರಕ್ಕಾಗಿ ಟ್ರಾಫಿಕ್ ಸಿಗ್ನಲ್ ನಿಂದ ರೆಸ್ಟೋರೆಂಟ್ ಗಳ ಮುಂದೆಯೂ ಇರುತ್ತಾರೆ. ಆದರೆ ಇಲ್ಲೊಬ್ಬ ಮಹಿಳೆ ಭಿಕ್ಷುಕರಿಗಾಗಿ ಒಂದು ಮಹತ್ವದ ಕಾರ್ಯವನ್ನು ಮಾಡಿದ್ದಾರೆ.

    ಮಿಶೆಲ್ ಲುಸಿಯರ್ ಎಂಬ ಮಹಿಳೆ ಉತ್ತರ ಡಕೋಟಾದ ಫಾರ್ಗೋದಲ್ಲಿ ಪಿಜ್ಜಾ ರೆಸ್ಟೋರೆಂಟ್ ನಲ್ಲಿ ಕೆಲಸ ಮಾಡುತ್ತಿದ್ದರು. ಇವರ ಅಂಗಡಿಗೆ ನಿತ್ಯವೂ ನೂರಾರು ಜನರು ಪಿಜ್ಜಾ ತಿನ್ನಲು ಬರುತ್ತಿದ್ದರು. ಅವರು ಪಿಜ್ಜಾವನ್ನು ಅರ್ಧಂಬರ್ಧ ತಿಂದು ಉಳಿದನ್ನು ಕಸದ ತೊಟ್ಟಿಯಲ್ಲಿ ಬಿಸಾಕಿ ಹೋಗುತ್ತಿದ್ದರು. ಇದೇ ವೇಳೆ ಆಹಾರಕ್ಕಾಗಿ ಕಾಯುತ್ತಿದ್ದ ಭಿಕ್ಷುಕರು ಕಸದ ತೊಟ್ಟಿಯಿಂದ ಅದನ್ನು ಎತ್ತಿಕೊಂಡು ತಿನ್ನುತ್ತಿದ್ದರು.

    ಕೆಲವು ನಿರಾಶ್ರಿತರು ಕಸದ ತೊಟ್ಟಿಯಲ್ಲಿ ಬಿಸಾಡಿದ್ದ ತುಂಡುಗಳನ್ನು ಎತ್ತಿಕೊಂಡು ತಿನ್ನುತ್ತಿದ್ದರು. ಇದನ್ನು ಗಮನಿಸಿದ ಮಿಶೆಲ್ ಲುಸಿಯರ್ ಅವರು ಭಿಕ್ಷುಕರಿಗಾಗಿ ಒಂದು ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದರು. ಮಿಶೆಲ್ ಅವರು ಕೂಡಲೇ ತಮ್ಮ ಅಂಗಡಿ ಹೊರಗೆ ಬೋರ್ಡ್ ಹಾಕಿ, ಪಿಜ್ಜಾವನ್ನು ನಿರಾಶ್ರಿತರಿಗೆ ಉಚಿತವಾಗಿ ನೀಡಲಾರಂಭಿಸಿದ್ದರು. ಆ ಬೋರ್ಡಿ ನಲ್ಲಿ “ಕಸದ ತೊಟ್ಟಿಯಲ್ಲಿ ಎತ್ತಿಕೊಂಡು ತಿನ್ನುವ ವ್ಯಕ್ತಿಗಳೇ, ನೀವೂ ನಮ್ಮಂತೆ ಮನುಷ್ಯರು, ಆದ್ದರಿಂದ ಕಸದ ಬುಟ್ಟಿಯಲ್ಲಿ ಹಾಕಿರುವ ಆಹಾರಕ್ಕಿಂತ ಉತ್ತಮ ಆಹಾರ ತಿನ್ನಲು ನೀವು ಯೋಗ್ಯರಾಗಿದ್ದೀರಿ. ನೀವು ಬೇರೊಬ್ಬರ ಪಿಜ್ಜಾ ತಿನ್ನಬೇಡಿ, ನಮ್ಮ ಅಂಗಡಿಯೊಳಗೆ ಬಂದು ಉಚಿತವಾಗಿ ಪಿಜ್ಜಾ ಮತ್ತು ನೀರನ್ನು ತೆಗೆದುಕೊಂಡು ಹೋಗಿ” ಎಂದು ಮನವಿ ಮಾಡಿಕೊಂಡಿದ್ದಾರೆ.

    ಯಾವುದೇ ಹಿಂಜರಿತ ಸಂಕೋಚವಿಲ್ಲದೇ ನಮ್ಮ ಅಂಗಡಿಗೆ ಬಂದು ಪಿಜ್ಜಾ ತಿಂದು ಹೋಗಿ. ನೀವು ಅಂಗಡಿಗೆ ಬಂದರೆ ನಿಮ್ಮನ್ನು ಇಲ್ಲಿ ಯಾರೂ ಪ್ರಶ್ನೆ ಮಾಡಲ್ಲ ಎಂದು ಮಿಶೆಲ್ ಬೋರ್ಡ್ ಹಾಕಿದ್ದಾರೆ. ಈ ರೀತಿ ಬರೆದಿರುವ ಫೋಟೋವನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಲಾಗಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಹಾರಾಷ್ಟ್ರದಲ್ಲಿ ಹೊಸ ಆಂದೋಲನ- ಮನೆಗಳ ಮುಂದೆ ಮಗಳ ಹೆಸರಿನ ಬೋರ್ಡ್

    ಮಹಾರಾಷ್ಟ್ರದಲ್ಲಿ ಹೊಸ ಆಂದೋಲನ- ಮನೆಗಳ ಮುಂದೆ ಮಗಳ ಹೆಸರಿನ ಬೋರ್ಡ್

    ಮುಂಬೈ: ಮಹಾರಾಷ್ಟ್ರದಲ್ಲಿ ಹೊಸ ಆಂದೋಲನ ಆರಂಭವಾಗಿದ್ದು, ಗ್ರಾಮಗಳ ಜನತೆ ಮನೆಯ ಮುಂಭಾಗದಲ್ಲಿ ಮನೆಯ ವರಸುದಾರನ ಹೆಸರಿನ ಫಲಕ ಹಾಕದೇ ತಮ್ಮ ಹೆಣ್ಣು ಮಕ್ಕಳ ಹೆಸರಿನ ಬೋರ್ಡ್ ಹಾಕಲಾಗುತ್ತಿದೆ.

    ಸಾಮಾನ್ಯವಾಗಿ ಮನೆಯ ಮುಂಭಾಗದಲ್ಲಿ ಹಿರಿಯ ವ್ಯಕ್ತಿಯ ಹೆಸರಿನ ಬೋರ್ಡ್ ಹಾಕುತ್ತಾರೆ. ಆದ್ರೆ ಮಹಾರಾಷ್ಟ್ರದ ನಾಸಿಕ್, ಪುತಾಂಬ ಮತ್ತು ಅಹಮದ್ ನಗರದ ಸುತ್ತಲಿನ ಗ್ರಾಮಸ್ಥರು ತಮ್ಮ ಮನೆಯ ಮುಂದೆ ಮಗಳ ಹೆಸರಿನ ಫಲಕ ಹಾಕುತ್ತಿದ್ದಾರೆ.

    ಮಹಾರಾಷ್ಟ್ರದಲ್ಲಿ ಜನಸಂಖ್ಯೆ ಅನುಗುಣವಾಗಿ ಲಿಂಗಾನುಪಾತದಲ್ಲಿ ಭಾರೀ ವ್ಯತ್ಯಾಸವಿದೆ. ಈ ಹಿನ್ನೆಲೆಯಲ್ಲಿ ಹೆಣ್ಣು ಮಕ್ಕಳನ್ನು ಪ್ರೋತ್ಸಾಹಿಸುವುದಕ್ಕಾಗಿ ಈ ರೀತಿಯ ಫಲಕಗಳನ್ನು ಹಾಕಲಾಗುತ್ತಿದೆ. ಈಗಾಗಲೇ 80 ಗ್ರಾಮಗಳ 6,500 ಮನೆಗಳ ಮುಂಭಾಗದಲ್ಲಿ ಮಗಳ ಹೆಸರಿನ ಬೋರ್ಡ್ ಗಳು ರಾರಾಜಿಸುತ್ತಿವೆ.

    ಈ ಆಂದೋಲನ ಮೊದಲಿಗೆ ಶಾಲೆಯೊಂದರಿಂದ ಆರಂಭವಾಗಿದೆ. ಪೋಮಡ್ ಎಂಬವರು ತಮ್ಮ ಮಕ್ಕಳ ಆಸೆ ಪೂರೈಸುವುದಕ್ಕಾಗಿ ಮನೆಯ ಮುಂದೆ ಅವರ ಹೆಸರಿನ ಫಲಕ ಹಾಕಿದ್ದರು. ನಂತರ ಪೋಮಡ್ ಇದೂವರೆಗೂ 80 ಗ್ರಾಮಗಳಿಗೆ ಭೇಟಿ ನೀಡಿ, ಅವರ ಮನೆಯ ಮುಂದೆ ಹೆಣ್ಣು ಮಕ್ಕಳ ಹೆಸರಿನ ಫಲಕ ಹಾಕುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಆರಂಭದಲ್ಲಿ ಕೆಲವರು ಈ ಆಂದೋಲನಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಎಲ್ಲರೂ ತಮ್ಮ ಮಕ್ಕಳ ಹೆಸರಿನ ಬೋರ್ಡ್ ಹಾಕುತ್ತಿದ್ದಂತೆ ಈ ಆಂದೋಲನ ಸ್ವಾಗತಿಸಿದ್ದಾರೆ.

    2011ರ ಜನಗಣತಿ ಪ್ರಕಾರ ಮಹಾರಾಷ್ಟ್ರದ ಲಿಂಗಾನುಪಾತ 1000 ಪುರುಷರಿಗೆ 929 ಮಹಿಳೆಯರಿದ್ದು, ‘ಬೇಟಿ ಬಚಾವೋ, ಬೇಟಿ ಪಡಾವೋ’ ಯೋಜನೆ ಅಡಿಯಲ್ಲಿ ಈ ಆಂದೋಲನ ನಡೆಸಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಿಧಾನಸೌಧದಲ್ಲಿ ಇನ್ನೂ ಬದಲಾಗಿಲ್ಲ ಸಿಎಂ ಬೋರ್ಡ್!

    ವಿಧಾನಸೌಧದಲ್ಲಿ ಇನ್ನೂ ಬದಲಾಗಿಲ್ಲ ಸಿಎಂ ಬೋರ್ಡ್!

    ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿ ಯಾರು..? ಎಚ್‍ಡಿಕೆನಾ…? ಸಿದ್ದರಾಮಯ್ಯನಾ..? ಎಂಬ ಗೊಂದಲ ಮೂಡುತ್ತದೆ. ಯಾಕಂದ್ರೆ ವಿಧಾನಸೌಧದಲ್ಲಿ ಇನ್ನೂ ಬೋರ್ಡ್ ಬದಲಾಗಿಲ್ಲ.

    ಯಾಕಂದ್ರೆ ವಿಧಾನಸೌಧದಲ್ಲಿನ ಮೊದಲ ಮಹಡಿಯಲ್ಲಿ ಕೊಠಡಿ ನಂಬರ್ 112ರ ಎದುರುಗಡೆ ಇರುವ ಬೋರ್ಡ್ ನಲ್ಲಿ ಇನ್ನೂ ಏನೂ ಅಪ್‍ಡೇಟ್ ಆಗಿಲ್ಲ. ಈ ಬೋರ್ಡ್ ನೋಡೋರಿಗೆ ಫುಲ್ ಕನ್‍ಫ್ಯೂಶನ್ನು ಆಗುತ್ತೆ.

    ರಾಜ್ಯದ ಮುಖ್ಯಮಂತ್ರಿಗಳ ಹೆಸರು ಹಾಗೂ ಅಧಿಕಾರವಧಿ ಮಾಹಿತಿಯುಳ್ಳ ಬೋರ್ಡ್ ನಲ್ಲಿ ಈಗಲೂ ಸಿದ್ದರಾಮಯ್ಯನೇ ಮುಖ್ಯಮಂತ್ರಿ. ಮೂರು ದಿನ ಸಿಎಂ ಆಗಿದ್ದ ಯಡಿಯೂರಪ್ಪನವರ ಹೆಸರೂ ಇಲ್ಲ. ಹಾಲಿ ಸಿಎಂ ಎಚ್‍ಡಿ ಕುಮಾರಸ್ವಾಮಿ ಹೆಸರೂ ಕೂಡ ಇಲ್ಲ. ಅದೂ ಅಲ್ಲದೇ ಆಡಳಿತ ಭಾಷೆ ಕನ್ನಡದಲ್ಲೇ ಮುಖ್ಯಮಂತ್ರಿಗಳ ಹೆಸರಿಲ್ಲ. ಈ ಬಗ್ಗೆ ಸಿಎಸ್, ಕನ್ನಡ ಪ್ರಾಧಿಕಾರಕ್ಕೆ ಸಾಮಾಜಿಕ ಕಾರ್ಯಕರ್ತ ನರಸಿಂಹಮೂರ್ತಿ ದೂರು ನೀಡಿದ್ದಾರೆ.

  • ಬೆಂಗ್ಳೂರಿನ ಪ್ರತಿಷ್ಠಿತ ಮಾಲ್ ನಲ್ಲಿ ಬೃಹದಾಕಾರದ ಬೋರ್ಡ್ ಕುಸಿತ!

    ಬೆಂಗ್ಳೂರಿನ ಪ್ರತಿಷ್ಠಿತ ಮಾಲ್ ನಲ್ಲಿ ಬೃಹದಾಕಾರದ ಬೋರ್ಡ್ ಕುಸಿತ!

    ಬೆಂಗಳೂರು: ರಾಜಧಾನಿ ಬೆಂಗಳೂರಿನ ಪ್ರತಿಷ್ಠಿತ ಮಾಲ್ ಗಳಲ್ಲಿ ಒಂದಾದ ಯು.ಬಿ ಸಿಟಿಯಲ್ಲಿ ಬೃಹದಾಕಾರದ ಬೋರ್ಡ್ ಕುಸಿತವಾದ ಪ್ರಕರಣ ತಡರಾತ್ರಿ ನಡೆದಿದೆ.

    ಶನಿವಾರ ರಾತ್ರಿ 10 ಗಂಟೆ ಸಮಯದಲ್ಲಿ ಯು.ಬಿ. ಸಿಟಿ ಮೊದಲ ಮಹಡಿಯಲ್ಲಿರುವ ಅಂಗಡಿ ಮೇಲಿನ ಬೋರ್ಡ್ ಬಿದ್ದಿದೆ. ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ ಅಂತ ತಿಳಿದುಬಂದಿದೆ.

    ಬೋರ್ಡ್ ಕೆಳಗೆ ಬಿದ್ದಿರೋದಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.

  • ಗುರುವಾರದಿಂದ ದ್ವಿತೀಯ ಪಿಯುಸಿ ಎಕ್ಸಾಂ ಪ್ರಾರಂಭ- ಪಿಯು ಬೋರ್ಡ್ ತಯಾರಿ ಹೀಗಿದೆ

    ಗುರುವಾರದಿಂದ ದ್ವಿತೀಯ ಪಿಯುಸಿ ಎಕ್ಸಾಂ ಪ್ರಾರಂಭ- ಪಿಯು ಬೋರ್ಡ್ ತಯಾರಿ ಹೀಗಿದೆ

    ಬೆಂಗಳೂರು: ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ ದ್ವಿತೀಯ ಪಿಯುಸಿ ಎಕ್ಸಾಂ ಗುರುವಾರದಿಂದ ಆರಂಭವಾಗಲಿದೆ. ಎಕ್ಸಾಂಗೆ ಪಿಯುಸಿ ಬೋರ್ಡ್ ಸಿದ್ಧತೆ ಮಾಡಿಕೊಂಡಿದ್ದು, ಸಿಸಿಟಿವಿ ಕಣ್ಗಾವಲಲ್ಲಿ ಎಕ್ಸಾಂ ನಡೆಯಲಿದೆ.

    ನಾಳೆಯಿಂದ ಮಾರ್ಚ್ 17 ವರೆಗೆ ಪರೀಕ್ಷೆಗಳು ನಡೆಯಲಿದ್ದು, ಮೊದಲ ದಿನವಾದ ನಾಳೆ ಅರ್ಥಶಾಸ್ತ್ರ ಹಾಗೂ ಭೌತಶಾಸ್ತ್ರ ಪರೀಕ್ಷೆ ನಡೆಯಲಿವೆ. ಕಳೆದ ವರ್ಷದಂತೆ ಕರ್ನಾಟಕ ಎಕ್ಸಾಮೀನೇಷನ್ ಸೆಕ್ಯೂರ್ ಸಿಸ್ಟಮ್‍ನಲ್ಲಿ ಪರೀಕ್ಷೆ ನಡೆಯಲಿದ್ದು, ಬಿಗಿ ಭದ್ರತೆಯಲ್ಲಿ ಪರೀಕ್ಷೆ ನಡೆಯುತ್ತಿದೆ. ಇದೇ ಮೊದಲ ಬಾರಿಗೆ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲೂ ಸಿಸಿಟಿವಿ ಅಳವಡಿಸಲಾಗಿದ್ದು, ಪ್ರಶ್ನೆ ಪತ್ರಿಕೆ ಸಾಗಿಸುವ ವಾಹನಗಳಿಗೆ ಜಿಪಿಆರ್ ಎಸ್ ಅಳವಡಿಕೆ ಮಾಡಲಾಗುತ್ತಿದೆ.

    ಈ ಬಾರಿ ಒಟ್ಟು 6,90,152 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಇದರಲ್ಲಿ 3,52,292 ವಿದ್ಯಾರ್ಥಿಗಳು ಹಾಗೂ 3,37,860 ವಿದ್ಯಾರ್ಥಿನಿಯರು ಪರೀಕ್ಷೆ ಬರೆಯುತ್ತಿದ್ದಾರೆ. ರಾಜ್ಯಾದ್ಯಂತ 1,004 ಪರೀಕ್ಷೆ ಕೇಂದ್ರಗಳಿವೆ. 1,004 ಕೇಂದ್ರಗಳಲ್ಲೂ ಸಿಸಿಟಿವಿ ಅಳವಡಿಸಲಾಗಿದೆ. 32 ಜಿಲ್ಲಾ ಹಾಗೂ 286 ತಾಲೂಕು ಜಾಗೃತ ದಳಗಳ ನೇಮಕ. ಸಿಟ್ಟಿಂಗ್ ಸ್ಕ್ವಾಡ್, ಸಂಚಾರಿ ಸ್ಕ್ವಾಡ್‍ಗಳ ನೇಮಕ ಮಾಡಲಾಗಿದೆ. ವಿದ್ಯಾರ್ಥಿಗಳ ಹಿತಕ್ಕಾಗಿ ಕೆಎಸ್‍ಆರ್ ಟಿಸಿ, ಬಿಎಂಟಿಸಿ ಬಸ್‍ಗಳಲ್ಲಿ ವಿದ್ಯಾರ್ಥಿಗಳು ಪ್ರವೇಶ ಪತ್ರ ತೋರಿಸಿ ಪರೀಕ್ಷಾ ಕೇಂದ್ರಕ್ಕೆ ಸಂಚಾರ ಮಾಡುವ ಅನುಕೂಲ ಮಾಡಿಕೊಡಲಾಗಿದ್ದು, ಸೂಕ್ಷ್ಮ, ಅತಿ ಸೂಕ್ಷ್ಮ ಕೇಂದ್ರಗಳಲ್ಲಿ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗುತ್ತದೆ.

    ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಸಲಹೆ
    * ಪರೀಕ್ಷಾ ಹಿಂದಿನ ದಿನ ರಾತ್ರಿ ಹೆಚ್ಚು ನಿದ್ರೆ ಕೆಡಬೇಡಿ.
    * ಪಾಯಿಂಟ್ಸ್ ಗಳ ರೂಪದಲ್ಲಿ ಪಠ್ಯವನ್ನ ಮನಸ್ಸಿನಲ್ಲಿ ಓದಿಕೊಳ್ಳಿ.
    * ಪರೀಕ್ಷಾ ಹಿಂದಿನ ದಿನವೇ ಹಾಲ್ ಟಿಕೆಟ್, ಪೆನ್ನು ಇನ್ನಿತರ ಸಾಮಗ್ರಿಗಳನ್ನ ರೆಡಿ ಮಾಡಿಕೊಳ್ಳಿ
    * ಪರೀಕ್ಷಾ ಕೇಂದ್ರಕ್ಕೆ ಅರ್ಧಗಂಟೆ ಮುಂಚಿತವಾಗಿಯೇ ಹೋಗಿ ನಿಮ್ಮ ಪರೀಕ್ಷಾ ಕೇಂದ್ರವನ್ನ ಖಚಿತ ಪಡಿಸಿಕೊಳ್ಳಿ.
    * ಪ್ರಶ್ನೆ ಪತ್ರಿಕೆಯನ್ನ ಮೊದಲು 15 ನಿಮಿಷ ಆರಾಮವಾಗಿ ಓದಿ ಅರ್ಥ ಮಾಡಿಕೊಳ್ಳಿ.
    * ಮೊದಲು ಸ್ಪಷ್ಟವಾಗಿ ಗೊತ್ತಿರುವ ಉತ್ತರಗಳನ್ನ ಬರೆಯಿರಿ. ಪ್ರತಿ ಪ್ರಶ್ನೆಗೆ ಇಂತಿಷ್ಟೆ ಅವಧಿಯಲ್ಲಿ ಉತ್ತರ ನೀಡುವ ಪ್ಲಾನ್ ಮಾಡಿಕೊಳ್ಳಿ.
    * ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಿದ ಮೇಲೆ ಮತ್ತೊಮ್ಮೆ ಸಂಪೂರ್ಣವಾಗಿ ಗಮನಿಸಿ ಉತ್ತರ ಪತ್ರಿಕೆಯನ್ನ ನೀಡಿ.

    ಇಷ್ಟೆಲ್ಲದರ ಮಧ್ಯೆ ವೇತನ ತಾರತಮ್ಯ ಸರಿಪಡಿಸುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡಲು ನಿರ್ಧರಿಸಿದ್ದ ಪಿಯುಸಿ ಉಪನ್ಯಾಸಕರು ಪ್ರತಿಭಟನೆ ವಾಪಸ್ ಪಡೆದಿದ್ದು, ತಮ್ಮ ಆಕ್ರೋಶ ವ್ಯಕ್ತಪಡಿಸಲು ಕಪ್ಪು ಪಟ್ಟಿ ಧರಿಸಿ ಎಕ್ಸಾಂ ಕೆಲಸದಲ್ಲಿ ಭಾಗವಹಿಸುತ್ತಿದ್ದಾರೆ. ಒಟ್ಟಾರೆ ಈ ಬಾರಿ ಯಾವುದೇ ಗೊಂದಲ ಇಲ್ಲದೆ ಪರೀಕ್ಷೆಗೆ ಸಿದ್ದತೆ ನಡೆದಿದೆ.

  • ಮಂತ್ರಿಮಾಲ್‍ನಲ್ಲಿ ಮಹಿಳೆ ತಲೆ ಮೇಲೆ ಬಿತ್ತು ಬೃಹತ್ ಬೋರ್ಡ್ – ರಕ್ತ ಸೋರುತ್ತಿದ್ರೂ ಆಸ್ಪತ್ರೆಗೆ ಸೇರಿಸದ ಸಿಬ್ಬಂದಿ

    ಮಂತ್ರಿಮಾಲ್‍ನಲ್ಲಿ ಮಹಿಳೆ ತಲೆ ಮೇಲೆ ಬಿತ್ತು ಬೃಹತ್ ಬೋರ್ಡ್ – ರಕ್ತ ಸೋರುತ್ತಿದ್ರೂ ಆಸ್ಪತ್ರೆಗೆ ಸೇರಿಸದ ಸಿಬ್ಬಂದಿ

    ಬೆಂಗಳೂರು: ಮಂತ್ರಿಮಾಲ್‍ನಲ್ಲಿ ಮತ್ತೆ ಎಡವಟ್ಟಾಗಿದೆ. ಶಾಪಿಂಗ್‍ಗೆ ಹೋಗಿದ್ದ ಮಹಿಳೆ ಮೇಲೆ ಬೃಹತ್ ಬೋರ್ಡ್ ಬಿದ್ದ ಘಟನೆ ಗುರುವಾರ ರಾತ್ರಿ ನಡೆದಿದೆ.

    ಯಲಹಂಕದ ಗುಣಶೀಲ ಎಂಬವರು ಮಾಲ್‍ಗೆ ಹೋಗಿದ್ದಾಗ ಬಟ್ಟೆಗಳ ಆಫರ್ ಪ್ರದರ್ಶನದ ಬೃಹತ್ ಬೋರ್ಡ್ ಅವರ ತಲೆಯ ಮೇಲೆ ಬಿದ್ದಿದೆ. ಇದರ ಪರಿಣಾಮ ಗುಣಶೀಲ ಅವರ ತಲೆಗೆ ಗಾಯವಾಗಿದ್ದು, ಏಳು ಸ್ಟಿಚ್ ಹಾಕಲಾಗಿದೆ.

     

    ಘಟನೆ ನಡೆದು ರಕ್ತ ಸೋರುತ್ತಿದ್ದರೂ ಮಂತ್ರಿ ಮಾಲ್‍ನವರು ಪ್ರಥಮ ಚಿಕಿತ್ಸೆ ಮಾಡಿ ಬಿಟ್ಟಿದ್ದು, ಆಸ್ಪತ್ರೆಗೆ ಕರೆದುಕೊಂಡು ಹೋಗದೇ ಅಮಾನವೀಯತೆ ಮೆರೆದಿದ್ದಾರೆ. ತಮ್ಮ ಕಡೆಯಿಂದ ತಪ್ಪಾಗಿದ್ರೂ ಮುಚ್ಚಿಕೊಳ್ಳುವ ಯತ್ನ ನಡೆಸಿದ್ದಾರೆ.

     

    ನಂತರ ಗುಣಶೀಲ ಅವರ ಪತಿ ಸ್ಥಳಕ್ಕೆ ಬಂದು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಗುಣಶೀಲ ಅವರ ತಲೆಯ ಮುಂಭಾಗಕ್ಕೆ ಏಟು ಬಿದ್ದಿದ್ದು ಎರಡು ದಿನ ಬಿಟ್ಟು ಎಂಆರ್‍ಐ ಮಾಡಿಸೋದಕ್ಕೆ ವೈದ್ಯರು ಸೂಚಿಸಿದ್ದಾರೆ ಅಂತ ತಿಳಿದುಬಂದಿದೆ.