Tag: ಬೋರ್ಡ್ ಪರೀಕ್ಷೆ

  • ಬ್ಲಡ್  ಕ್ಯಾನ್ಸರ್ ನಿಂದ ಬಳಲುತ್ತಿದ್ದ ಸಿಬಿಎಸ್‍ಇ ವಿದ್ಯಾರ್ಥಿ 96% ಅಂಕ ಪಡೆದ!

    ಬ್ಲಡ್ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಸಿಬಿಎಸ್‍ಇ ವಿದ್ಯಾರ್ಥಿ 96% ಅಂಕ ಪಡೆದ!

    ನವದೆಹಲಿ: ಬ್ಲಡ್ ಕ್ಯಾನ್ಸರ್ ನಿಂದ ಬಳಲುತ್ತಿರುವ 16 ವರ್ಷದ ವಿದ್ಯಾರ್ಥಿಯೊಬ್ಬ ಸಿಬಿಎಸ್‍ಇ ಬೋರ್ಡ್ ಪರೀಕ್ಷೆಯಲ್ಲಿ 96% ಫಲಿತಾಂಶ ಪಡೆದಿದ್ದು, ಇತರ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾನೆ.

    ದೆಹಲಿಯ ಪ್ರಿಯೇಶ್ ತಾಯಲ್ ಬ್ಲಡ್ ಕ್ಯಾನ್ಸರ್ ನಿಂದ ಬಳಲುತ್ತಿರುವ ಬಾಲಕ. 10ನೇ ತರಗತಿ ಪರೀಕ್ಷೆ ಸಮಯದಲ್ಲಿಯೇ ಅವನನ್ನು ಕೀಮೋಥೆರಪಿ ಚಿಕಿತ್ಸೆಗಾಗಿ ಆಸ್ಪತ್ರೆ ದಾಖಲಿಸಲಾಯಿತು. ಅಲ್ಲಿನ ಹಾಸಿಗೆಯ ಮೇಲೆ ಮಲಗಿದ್ದ ಅವನು, ಒಂದು ಕೈಯಲ್ಲಿ ಪುಸ್ತಕ ಮತ್ತೊಂದು ಕೈಯಲ್ಲಿ ಚಿಕಿತ್ಸೆ (ಸಲೈನ್) ಪಡೆದುಕೊಂಡು ಓದಿದ್ದ.

    ಮಗನಿಗೆ ಬೋರ್ಡ್ ಪರೀಕ್ಷೆ ಕಾಲದಲ್ಲಿಯೇ ಬ್ಲಡ್ ಕ್ಯಾನ್ಸರ್ ಇರುವುದು ಗೊತ್ತಾಯಿತು. ಇತರಿಂದ ಅವನ ಭವಿಷ್ಯಕ್ಕೆ ತೊಂದರೆ ಉಂಟಾಯಿತು ಎಂದು ನಾವು ಚಿಂತಿಸಬೇಕಾಯಿತು. ಆದರೆ, ಅವನು ಧೈರ್ಯ ಹಾಗೂ ಆತ್ಮವಿಶ್ವಾಸ ಕಳೆದುಕೊಳ್ಳಲಿಲ್ಲ. 2017 ಡಿಸೆಂಬರ್‍ನಲ್ಲಿ ಪೂರ್ವಭಾವಿ ಪರೀಕ್ಷೆಗಳು ಪ್ರಾರಂಭವಾಗಿದ್ದವು. ಆದರೆ ಆ ಸಮಯದಲ್ಲಿಯೇ ಪ್ರಿಯೇಶ್‍ಗೆ ಜ್ವರ ಮತ್ತು ನೀಲಿ ಮಚ್ಚೆಗಳು ಕಾಣಿಸಿಕೊಂಡವು. ಇದರಿಂದಾಗಿ ಆತನನ್ನು ಆಸ್ಪತ್ರೆಗೆ ದಾಖಲಿಸಿ, ಪರೀಕ್ಷೆ ಮಾಡಿಸಿದಾಗ ಅವನಿಗೆ ಬ್ಲಡ್ ಕ್ಯಾನ್ಸರ್ ಇರುವುದು ತಿಳಿದು ಬಂತು ಎಂದು ಬಾಲಕನ ತಾಯಿ ಹೇಳಿದ್ದಾರೆ.

    ಲ್ಯುಕೇಮಿಯಾ ರೋಗಿಗಳಿಗೆ ಕನಿಷ್ಠ ಎರಡುವರೆ ವರ್ಷ ಚಿಕಿತ್ಸೆ ನೀಡಬೇಕಾಗುತ್ತದೆ. ರೋಗಿಯು ಕಿಮೊಥೆರಪಿಗಾಗಿ ಆಸ್ಪತ್ರೆಗೆ ಬರಬೇಕು ಮತ್ತು ಮನೆಯಲ್ಲಿ ಔಷಧಿಗಳನ್ನು ತಗೆದುಕೊಳ್ಳಬೇಕು. ಈ ಚಿಕಿತ್ಸೆ ಕಠಿಣವಾಗಿದ್ದು, ರೋಗಿಯು ಕಾಲು ನೋವು, ನಿದ್ರೆಯ ಕೊರತೆಯಂತಹ ಭೌತಿಕ ಅಸ್ವಸ್ಥತೆಗಳನ್ನ ಎದುರಿಸಬೇಕಾಗುತ್ತದೆ ಎಂದು ಇಂದ್ರಪ್ರಸ್ಥ ಅಪೋಲೊ ಆಸ್ಪತ್ರೆಯ ಕ್ಯಾನ್ಸರ್ ವೈದ್ಯ ಡಾ. ಮಾನಸ್ ಕಾರ್ಲಾ ಹೇಳಿದ್ದಾರೆ.

    ನಾನು ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಲಾಜಿಯಲ್ಲಿ ಅಧ್ಯಯನ ಮಾಡಿ ಎಂಜಿನಿಯರ್ ಆಗಬೇಕು. ನಾನು ಕ್ಯಾನ್ಸರ್ ಮೆಟ್ಟಿನಿಲ್ಲುತ್ತೇನೆ ಮತ್ತು ನನ್ನ ಹೆಸರನ್ನು ದೇಶ ನೆನಪಿಡುವಂತಹ ಸಾಧನೆ ಮಾಡುತ್ತೇನೆ. ಎಲ್ಲಕ್ಕಿಂತ ಹೆಚ್ಚಾಗಿ ನಾನು ಉತ್ತಮ ಮಾನವನಾಗಿ ಬಾಳುತ್ತೇನೆ ಎಂದು ಪ್ರಿಯೇಶ್ ಹೇಳಿದ್ದಾನೆ.

    ಸಿಬಿಎಸ್‍ಇ 10ನೇ ತರಗತಿ ಬೋರ್ಡ್ ಪರೀಕ್ಷೆ ಫಲಿತಾಂಶ ಮಂಗಳವಾರ ಪ್ರಕಟವಾಗಿತ್ತು. ಒಟ್ಟು 86.70% ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಅದರಲ್ಲಿ 88.67% ಬಾಲಕಿಯರು ಮತ್ತು 85.32% ಬಾಲಕರು ಉತ್ತೀರ್ಣರಾಗಿದ್ದಾರೆ. ಈ ವರ್ಷ 4,460 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 16,24,682 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.

  • ಬೋರ್ಡ್ ಎಕ್ಸಾಂನಲ್ಲಿ `ಐ ಲವ್ ಯೂ ಪೂಜಾ’ ಎಂದು ಬರೆದ ವಿದ್ಯಾರ್ಥಿ!

    ಬೋರ್ಡ್ ಎಕ್ಸಾಂನಲ್ಲಿ `ಐ ಲವ್ ಯೂ ಪೂಜಾ’ ಎಂದು ಬರೆದ ವಿದ್ಯಾರ್ಥಿ!

    ಲಕ್ನೋ: ವಿದ್ಯಾರ್ಥಿಯೊಬ್ಬ ತಾನು ಪ್ರೀತಿಯಲ್ಲಿ ಬಿದ್ದ ಕಾರಣ ಪರೀಕ್ಷೆಗೆ ಓದಲು ಸಾಧ್ಯವಾಗಿಲ್ಲ ಎಂದು ಉತ್ತರ ಪತ್ರಿಕೆಯಲ್ಲಿ ಬರೆದಿಟ್ಟು ಉತ್ತೀರ್ಣಗೊಳಿಸುವಂತೆ ಮನವಿ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶ ಬೋರ್ಡ್ ಪರೀಕ್ಷೆ ಮೌಲ್ಯ ಮಾಪನದ ವೇಳೆ ಬೆಳಕಿಗೆ ಬಂದಿದೆ.

    ಉತ್ತರ ಪ್ರದೇಶದ ಶಿಕ್ಷಣ ಕ್ಷೇತ್ರದಲ್ಲಿ ಕಟ್ಟುನಿಟ್ಟಿನ ಪರೀಕ್ಷೆ ನಡೆಸಲು ಸೂಚಿಸಿದ್ದ ಸಿಎಂ ಯೋಗಿ ಆದಿತ್ಯನಾಥ್ ಅದೇಶದ ಬಳಿಕ ಲಕ್ಷ ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದರು. ಸದ್ಯ ಬೋರ್ಡ್ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯ ಮಾಪನ ಆಂಭವಾಗಿದ್ದು, ವಿದ್ಯಾರ್ಥಿಗಳು ವಿಚಿತ್ರ ಉತ್ತರಗಳನ್ನು ಬರೆದು ಪರೀಕ್ಷೆಯಲ್ಲಿ ಉತೀರ್ಣ ಮಾಡಲು ಕೇಳಿಕೊಂಡಿದ್ದಾರೆ.

    ಕೆಲ ವಿದ್ಯಾರ್ಥಿಗಳು ಉತ್ತರ ಪತ್ರಿಕೆಯೊಂದಿಗೆ ಹಣವನ್ನು ಇಟ್ಟು ಉತೀರ್ಣ ಮಾಡಲು ಅಮಿಷ ಒಡ್ಡಿದ್ದಾರೆ. ಅಲ್ಲದೇ ತನಗೆ ತಾಯಿ ಇಲ್ಲ, ಈ ಬಾರಿ ಪರೀಕ್ಷೆಯಲ್ಲಿ ನಾನು ಅನುತ್ತೀರ್ಣವಾದರೆ ತಂದೆ ತನ್ನನ್ನು ಕೊಲೆ ಮಾಡುವುದಾಗಿ ಮತ್ತೊಬ್ಬ ವಿದ್ಯಾರ್ಥಿ ಬರೆದಿದ್ದಾನೆ. ರಸಾಯನಶಾಸ್ತ್ರ ಪರೀಕ್ಷೆಯಲ್ಲಿ ತನ್ನ ಪ್ರೇಮದ ಬಗ್ಗೆ ಬರೆದಿದ್ದು, ತಾನು ಪ್ರೀತಿ ಮಾಡುವ ಯುವತಿಯ ಹೆಸರು ಹಾಗೂ ಹೃದಯದ ಚಿಹ್ನೆ ಬರೆದಿಟ್ಟಿದ್ದಾನೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಶಿಕ್ಷಕರೊಬ್ಬರು ಎಲ್ಲಾ ವಿದ್ಯಾರ್ಥಿಗಳು ಶಿಕ್ಷಕರ ಅನುಕಂಪ ಪಡೆಯಲು ಈ ರೀತಿ ಮಾಡಿದ್ದಾರೆ. ಹೆಚ್ಚಿನ ವಿದ್ಯಾರ್ಥಿಗಳು ಹಣ ಅಮಿಷ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

    ಉತ್ತರ ಪ್ರದೇಶದ 10 ಮತ್ತು 12ನೇ ತರಗತಿ ಬೋರ್ಡ್ ಪರೀಕ್ಷೆಗೆ ಮಾರ್ಚ್ 17 ರಿಂದ ಮಾಲ್ಯ ಮಾಪನ ಆರಂಭವಾಗಿದ್ದು, 248 ಕೇಂದ್ರಗಳಲ್ಲಿ ನಡೆಯುತ್ತಿದೆ. ಸುಮಾರು 5.5 ಕೋಟಿ ಉತ್ತರ ಪತ್ರಿಗಳನ್ನು 1.46 ಲಕ್ಷ ಶಿಕ್ಷಕರು ಮೌಲ್ಯ ಮಾಪನ ಮಾಡುತ್ತಿದ್ದಾರೆ.

    ಬೋರ್ಡ್ ಪರೀಕ್ಷೆಯ ಫಲಿತಾಂಶ ಏಪ್ರಿಲ್ ಮೂರನೇ ವಾರದಲ್ಲಿ ಬಿಡುಗಡೆಯಾಗುವ ಸಂಭವವಿದೆ ಎಂದು ಯುಪಿ ಶಿಕ್ಷಣ ಇಲಾಖೆ ತಿಳಿಸಿದೆ. ಇದನ್ನೂ ಓದಿ: ಉತ್ತರ ಪ್ರದೇಶ ಬೋರ್ಡ್ ಪರೀಕ್ಷೆಯ ಸ್ಟ್ರಿಕ್ಟ್ ರೂಲ್ಸ್ ಗೆ ಹೆದರಿ 10 ಲಕ್ಷ ವಿದ್ಯಾರ್ಥಿಗಳು ಗೈರು!

  • ಹಾಲ್‍ ಟಿಕೆಟ್ ಹರಿದ ಸಹಪಾಠಿಗಳು- ಮನನೊಂದು 12ನೇ ಕ್ಲಾಸ್ ವಿದ್ಯಾರ್ಥಿನಿ ಆತ್ಮಹತ್ಯೆ

    ಹಾಲ್‍ ಟಿಕೆಟ್ ಹರಿದ ಸಹಪಾಠಿಗಳು- ಮನನೊಂದು 12ನೇ ಕ್ಲಾಸ್ ವಿದ್ಯಾರ್ಥಿನಿ ಆತ್ಮಹತ್ಯೆ

    ಚೆನ್ನೈ: ಸಹಪಾಠಿಗಳು ತನ್ನ ಬೋರ್ಡ್ ಪರೀಕ್ಷೆಯ ಹಾಲ್ ಟಿಕೆಟ್ ಹರಿದರು ಎಂಬ ಕಾರಣಕ್ಕೆ ಮನನೊಂದು 12ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ಕೃಷ್ಣಗಿರಿಯಲ್ಲಿ ನಡೆದಿದೆ.

    17 ವರ್ಷ ವಯಸ್ಸಿನ ತಮಿಳರಸಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ದೇವೀರಹಳ್ಳಿ ಗ್ರಾಮದ ತನ್ನ ಮನೆಯಲ್ಲಿ ತಮಿಳರಸಿ ಮಂಗಳವಾರದಂದು ಸೀಲಿಂಗ್ ಫ್ಯಾನ್‍ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

    ತಮಿಳರಸಿ ಬೋರ್ಡ್ ಪರೀಕ್ಷೆಗೆ ಹಾಜರಾಗಬೇಕಿತ್ತು. ಆದ್ರೆ ಶಾಲೆಯಲ್ಲಿ ಇಬ್ಬರು ಹುಡುಗರು ಆಕೆಯ ಹಾಲ್ ಟಿಕೆಟ್ ಹರಿದು ಹಾಕಿದ್ದರು. ಅವರಲ್ಲೊಬ್ಬ ತಮಿಳರಸಿಗೆ ತನ್ನ ಪ್ರೀತಿಯನ್ನ ಒಪ್ಪಿಕೊಳ್ಳುವಂತೆ ಕಿರುಕುಳ ನೀಡುತ್ತಿದ್ದ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

     

    ಹಾಲ್ ಟಿಕೆಟ್ ಹರಿದ ಹಿನ್ನೆಲೆಯಲ್ಲಿ ತನ್ನ ಭವಿಷ್ಯ ಹಾಳಾಯಿತು ಎಂದು ಮನನೊಂದು ತಮಿಳರಸಿ ಮನೆಗೆ ಹೋಗಿ ನೇಣು ಬಿಗಿದುಕೊಂಡಿದ್ದಾಳೆ. ಆಕೆಯನ್ನ ಅಕ್ಕಪಕ್ಕದ ಮನೆಯವರು ಕೂಡಲೇ ಆಸ್ಪತ್ರೆಗೆ ಕೊಂಡೊಯ್ದರಾದ್ರೂ ಅಷ್ಟರಲ್ಲಾಗಲೇ ಆಕೆ ಮೃತಪಟ್ಟಿದ್ದಾಳೆಂದು ವೈದ್ಯರು ಹೇಳಿದ್ದಾರೆ. ವಿದ್ಯಾರ್ಥಿನಿಯ ಕುಟುಂಬಸ್ಥರು ಇಬ್ಬರು ಹುಡುಗರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

    ತಮಿಳರಸಿಗೆ ಪ್ರೇಮ ನಿವೇದನೆ ಮಾಡಿಕೊಂಡಿದ್ದ ಹುಡುಗ, ತನ್ನ ಪ್ರೀತಿಯನ್ನ ಒಪ್ಪಿಕೊಳ್ಳದಿದ್ದರೆ ಆಕೆಯ ಮೇಲೆ ಆ್ಯಸಿಡ್ ಹಾಕುವುದಾಗಿ ಬೆದರಿಕೆ ಹಾಕಿದ್ದ ಎಂದು ವಿದ್ಯಾರ್ಥಿನಿಯ ಕುಟುಂಬಸ್ಥರೊಬ್ಬರು ಆರೋಪಿಸಿದ್ದಾರೆ. ಸದ್ಯ ಪೊಲೀಸರು ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.