Tag: ಬೋಯಿಂಗ್ 787

  • ಏರ್ ಇಂಡಿಯಾ ವಿಮಾನ ದುರಂತ – ಅವಶೇಷಗಳ ತೆರವು ಕಾರ್ಯ ಆರಂಭ

    ಏರ್ ಇಂಡಿಯಾ ವಿಮಾನ ದುರಂತ – ಅವಶೇಷಗಳ ತೆರವು ಕಾರ್ಯ ಆರಂಭ

    ಅಹಮದಾಬಾದ್: ಏರ್ ಇಂಡಿಯಾ ವಿಮಾನ (Air India Flight) ದುರಂತದಲ್ಲಿ ಸಾವಿನ ಸಂಖ್ಯೆ 274ಕ್ಕೇರಿದ್ದು, ಪತನವಾದ ಸ್ಥಳದಲ್ಲಿ ಅವಶೇಷಗಳ ತೆರವು ಕಾರ್ಯ ಆರಂಭಗೊಂಡಿದೆ.

    ವಿಮಾನದ ಒಳಭಾಗವನ್ನು ಪರಿಶೀಲಿಸಿ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ. ಒಳಗಡೆ ಮೃತ ದೇಹಗಳಿವೆಯೇ ಎಂದು ಪರಿಶೀಲಿಸಿ ತೆರವು ಕಾರ್ಯ ನಡೆಸಲಾಗುತ್ತಿದ್ದು, ಇಂದು ಇಡೀ ದಿನ ವಿಮಾನ ಟೇಲ್ ಭಾಗ (ವಿಮಾನದ ಹಿಂಭಾಗ) ತೆರವು ಕಾರ್ಯ ನಡೆಯಲಿದೆ.ವಿಮಾನ ತೆರವಿಗೆ ಮತ್ತೊಂದು ಕ್ರೇನ್ ಕೂಡ ಆಗಮಿಸಿದ್ದು, ಕಾರ್ಯಾಚರಣೆ ಚುರುಕುಗೊಂಡಿದೆ. ಇದನ್ನೂ ಓದಿ: ಆಗುಂಬೆ ಘಾಟಿಯಲ್ಲಿ ಭಾರೀ ವಾಹನಗಳ ಸಂಚಾರ ನಿಷೇಧ

    ಎರಡು ಕ್ರೇನ್ ಮೂಲಕ ವಿಮಾನ ಮೇಲೆತ್ತುವ ಪ್ರಯತ್ನ ನಡೆಸಲಾಗುತ್ತಿದ್ದು, ಬಳಿಕ ಅದನ್ನು ನೆಲಕ್ಕಿಳಿಸಿ ಹಾಸ್ಟೆಲ್ ಪ್ರದೇಶದಿಂದ ಸ್ಥಳಾಂತರ ಮಾಡಲಾಗುತ್ತದೆ. ಇಂದು ಸಂಜೆ ತನಕ ಕಾರ್ಯಚರಣೆ ನಡೆಯುವ ಸಾಧ್ಯತೆಯಿದೆ. ಇದನ್ನೂ ಓದಿ: Mayday… unable to lift: ಕ್ಯಾಪ್ಟನ್‌ ಸುಮಿತ್‌ ಕೊನೆ ಕ್ಷಣದ ಆಡಿಯೋ ಲಭ್ಯ

    ವಿಮಾನ ಪತನಗೊಂಡ ಪರಿಣಾಮ ವಿಮಾನದ ಹಿಂಭಾಗ ಟೇಲ್ ಹೊರತುಪಡಿಸಿ ಇನ್ನೇನು ಉಳಿದಿಲ್ಲ. ಇಡೀ ವಿಮಾನ ಸಂಪೂರ್ಣ ನಾಶವಾಗಿದೆ. ವಿಮಾನದ 90% ಭಾಗ ಸುಟ್ಟು ಕರಕಲಾಗಿದ್ದು, ಹಿಂಬದಿಯ ಟೇಲ್ ಅವಶೇಷಗಳು ಮಾತ್ರ ಹಾಗೇ ಉಳಿದಿದೆ. ಬಾಕಿ ಉಳಿದ ವಿಮಾನ ಸಂಪೂರ್ಣ ನಾಶವಾಗಿದೆ. ವಿಮಾನದಲ್ಲಿದ್ದ ಇಂಧನ ಒಮ್ಮೆಲೇ ದಹಿಸಿದ ಹಿನ್ನೆಲೆ ಸುತ್ತಮುತ್ತಲಿನ ಪ್ರದೇಶ ಎಲ್ಲವೂ ಸುಟ್ಟು ಕರಕಲಾಗಿದೆ. ಇದನ್ನೂ ಓದಿ: 100 ಕೋಟಿ ಪ್ರಯಾಣಿಕರನ್ನ ಸೇಫ್ ಲ್ಯಾಂಡ್ ಮಾಡಿದ್ದ ವಿಮಾನಕ್ಕೆ ಏನಾಯ್ತು?

  • 100 ಕೋಟಿ ಪ್ರಯಾಣಿಕರನ್ನ ಸೇಫ್ ಲ್ಯಾಂಡ್ ಮಾಡಿದ್ದ ವಿಮಾನಕ್ಕೆ ಏನಾಯ್ತು?

    100 ಕೋಟಿ ಪ್ರಯಾಣಿಕರನ್ನ ಸೇಫ್ ಲ್ಯಾಂಡ್ ಮಾಡಿದ್ದ ವಿಮಾನಕ್ಕೆ ಏನಾಯ್ತು?

    – ಬೋಯಿಂಗ್ ಮಾರುಕಟ್ಟೆಗೆ ಬಹುದೊಡ್ಡ ಆರ್ಥಿಕ ಹೊಡೆತ ಸಾಧ್ಯತೆ!

    ಅಹಮದಾಬಾದ್: ಬೋಯಿಂಗ್‌ನ 787-ಡ್ರೀಮ್ ಲೈನರ್ (Dreamliner 787) ಮಾಡೆಲ್ ಅತ್ಯಂತ ವಿಶ್ವಾಸಾರ್ಹದ ಜೊತೆಗೆ ಇಂಧನ ದಕ್ಷತೆ, ಸುರಕ್ಷತೆ, ಆರಾಮದಾಯಕ ಪ್ರಯಾಣಕ್ಕೆ ಹೆಸರುವಾಸಿಯಾಗಿದೆ. 14 ವರ್ಷಗಳಲ್ಲಿ ಸುಮಾರು 1 ಸಾವಿರ ಡ್ರೀಮ್ ಲೈನರ್ ವಿಮಾನಗಳನ್ನ ಮಾರಾಟ ಮಾಡುವ ಮೂಲಕ ಬೋಯಿಂಗ್ ದಾಖಲೆ ಬರೆದಿದೆ.

    ಸಾರ್ವಕಾಲಿಕ ಅತ್ಯುತ್ತಮ ಮಾರಾಟ ಕಂಡ ವೈಡ್-ಬಾಡಿ ಪ್ಯಾಸೆಂಜರ್ ವಿಮಾನ ಡ್ರೀಮ್ ಲೈನರ್ 100 ಕೋಟಿಗೂ ಹೆಚ್ಚು ಪ್ರಯಾಣಿಕರನ್ನ ಸಾಗಿಸಿದ ವಿಮಾನ ಎಂಬ ಬ್ರ‍್ಯಾಂಡ್ ಅನ್ನು ಅಲ್ಪಾವಧಿಯಲ್ಲಿಯೇ ಪಡೆದಿತ್ತು. ಇದನ್ನೂ ಓದಿ: ದುರಂತಕ್ಕೀಡಾದ ಏರ್ ಇಂಡಿಯಾ ವಿಮಾನದ 12ರಲ್ಲಿ 9 ಸಿಬ್ಬಂದಿ ಮುಂಬೈ ವಾಸಿಗಳು

    ಈ ಹಿಂದೆ ಸುರಕ್ಷತೆಯ ಕುರಿತು ಬೋಯಿಂಗ್ (Boeing) ಕಂಪನಿಗೆ ಹಲವು ಸವಾಲುಗಳು ಎದುರಾಗಿದ್ದವು. ಹಲವು ಆರೋಪಗಳನ್ನ ಎದುರಿಸಿದ್ದ ಬೋಯಿಂಗ್‌ನ ಡ್ರೀಮ್ ಲೈನರ್ ಹಾರಾಟವನ್ನ 3 ತಿಂಗಳ ಕಾಲ ವಿಶ್ವದಾದ್ಯಂತ ನಿಷೇಧಿಸಲಾಗಿತ್ತು. ಆರೋಪ, ಸವಾಲುಗಳನ್ನ ಎದುರಿಸಿ ಮತ್ತೆ ವಿಶ್ವಾಸಾರ್ಹತೆ ಗಳಿಸಿದ್ದ ಬೋಯಿಂಗ್ ಪುನಃ ಆಕಾಶಕ್ಕೆ ಚಿಮ್ಮಿತ್ತು. ಆದ್ರೆ ಈಗ ಕಂಡು ಕೇಳರಿಯದ ದುರಂತಕ್ಕೆ ಸಾಕ್ಷಿಯಾಗಿದೆ. ಇದನ್ನೂ ಓದಿ: Plane Crash – ನಗುಮೊಗದ ಗಗನಸಖಿ ಮನೀಷಾ ಥಾಪಾ ದುರಂತ ಅಂತ್ಯ

    ಡ್ರೀಮ್ ಲೈನರ್ ವಿಮಾನದ ಆಯಸ್ಸು 30 ರಿಂದ 50 ವರ್ಷ ಎನ್ನಲಾಗಿದೆ. 210-250 ಸೀಟ್‌ಗಳೊಂದಿಗೆ 9,800 ಮೈಲುಗಳು ಪ್ರಯಾಣಿಸಬಲ್ಲವು. ಆದ್ರೆ ಅಹಮದಾಬಾದ್‌ನಲ್ಲಿ ಉರುಳಿದ ವಿಮಾನ ಆಯಸ್ಸು ಕೇವಲ 11 ವರ್ಷ. ಈ ಹಿಂದೆ ಸುರಕ್ಷತೆ ವಿಚಾರದಲ್ಲಿ ಎದ್ದ ಆರೋಪ, ಸವಾಲುಗಳನ್ನ ಮೆಟ್ಟಿ ನಿಂತು ವ್ಯಾಪಾರವನ್ನ ವಿಸ್ತರಿಸಿಕೊಳ್ತಿದ್ದ ವೇಳೆಯೇ ಬೋಯಿಂಗ್ ಕಂಪನಿಗೆ ಈ ದುರಂತ ದೊಡ್ಡ ಆರ್ಥಿಕ ಹೊಡೆತ ಕೊಡುವ ಭೀತಿ ಶುರುವಾಗಿದೆ. ಅದೇನೇ ಇರಲಿ ಅತಿ ಸುರಕ್ಷತೆಯ ವಿಮಾನ ಎಂದು ಹೇಳಿಕೊಂಡಿದ್ದ ವಿಮಾನ ಪತನಕ್ಕೆ (Plane Crash) ಸಾಕ್ಷಿಯಾಗಿರೋದು ನಿಜಕ್ಕೂ ದುರಂತವೇ ಸರಿ.

  • ಅಹಮದಾಬಾದ್ ವಿಮಾನ ಪತನ – 5 ತಂಡಗಳಿಂದ ತನಿಖೆ

    ಅಹಮದಾಬಾದ್ ವಿಮಾನ ಪತನ – 5 ತಂಡಗಳಿಂದ ತನಿಖೆ

    ಅಹಮದಾಬಾದ್: ಎಂಜಿನ್‌ನಲ್ಲಿ ತಾಂತ್ರಿಕ ದೋಷ ಉಂಟಾಗಿ ಅಹಮದಾಬಾದ್‌ನ (Ahmedabad) ವಿಮಾನ ನಿಲ್ದಾಣದ ಬಳಿಯ ಮೇಘಾನಿ ಜನವಸತಿ ಪ್ರದೇಶದಲ್ಲಿ ಏರ್ ಇಂಡಿಯಾ (Air India) ವಿಮಾನ ಪತನಗೊಂಡ (Plane Crash) ಪರಿಣಾಮ ವಿಮಾನದಲ್ಲಿದ್ದ 241 ಮಂದಿ ಸೇರಿದಂತೆ ಒಟ್ಟು 274 ಮಂದಿ ಮೃತಪಟ್ಟಿದ್ದಾರೆ. 100 ಕೋಟಿ ಪ್ರಯಾಣಿಕರನ್ನು ಸೇಫ್ ಲ್ಯಾಂಡ್ ಮಾಡಿ ಬ್ರ‍್ಯಾಂಡ್ ಸೃಷ್ಟಿಸಿದ್ದ ಏರ್ ಲೈನ್ಸ್‌ನಲ್ಲಿ ಏನು ತಾಂತ್ರಿಕದೋಷ ಉಂಟಾಯಿತು ಎಂಬ ಕುರಿತು ತನಿಖೆ ಆರಂಭಗೊಂಅಡಿದೆ.

    ಸುರಕ್ಷತೆ, ದಕ್ಷತೆ, ಆರಾಮದಾಯಕ ಬೋಯಿಂಗ್ 787 ವಿಮಾನಕ್ಕೆ ಏನಾಯಿತು? ಸೇಫ್ ಲ್ಯಾಂಡ್‌ಗೆ ಹೆಸರುವಾಸಿಯಾಗಿದ್ದ ವಿಮಾನ ಪತನ ಆಗಿದ್ದು ಹೇಗೆ ಎಂಬ ಕುರಿತು ತನಿಖೆ ತೀವ್ರಗೊಂಡಿದೆ. ವಿಮಾನ ಪತನಕ್ಕೆ ಕಾರಣ ಏನು ಎಂಬ ಕುರಿತು ಐದು ತಂಡಗಳು ತನಿಖೆ ಆರಂಭಿಸಿವೆ.

    ಎಎಐಬಿ (ಏರ್ ಕ್ರಾಫ್ಟ್ ಆಕ್ಸಿಡೆಂಟ್ ಇನ್ವೆಸ್ಟಿಗೇಷನ್ ಬ್ಯೂರೋ):
    ನಾಗರಿಕ ವಿಮಾನಯಾನ ಸಚಿವಾಲಯದ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಎಎಐಬಿ ದೇಶದಲ್ಲಿ ನಡೆಯುವ ವಿಮಾನ ದುರಂತಗಳ ಅಧಿಕೃತ ತನಿಖಾ ಸಂಸ್ಥೆಯಾಗಿದೆ.

    ಉನ್ನತ ಮಟ್ಟದ ಸಮಿತಿ:
    ಅಪಘಾತಕ್ಕೆ ನಿಖರ ಕಾರಣ ಪತ್ತೆ ಹಚ್ಚಿ, ವಿಮಾನಯಾನ ಸುರಕ್ಷತೆ ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ವಿವಿಧ ಕ್ಷೇತ್ರಗಳ ತಜ್ಞರನ್ನು ಒಳಗೊಂಡ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ. ಈ ತಂಡ ತನಿಖಾ ತಂಡಗಳ ಸಹಯೋಗದೊಂದಿದೆ ಕಾರ್ಯ ನಿರ್ವಹಿಸಲಿದೆ.

    ಅಮೆರಿಕ ಮತ್ತು ಬ್ರಿಟನ್ ತಂಡಗಳು:
    ಅಮೆರಿಕ ಮತ್ತು ಬ್ರಿಟನ್ ತಂಡಗಳನ್ನು ಏರ್ ಇಂಡಿಯಾ ವಿಮಾನ ಪತನದ ತನಿಖೆಗೆ ನಿಯೋಜಿಸಲಾಗಿದೆ. ಅಮೆರಿಕ ಮೂಲದ ಬೋಯಿಂಗ್ ತಜ್ಞರು ಈ ತಂಡದಲ್ಲಿ ಇರಲಿದ್ದಾರೆ.

    ಎನ್‌ಐಎ:
    ಮತ್ತೊಂದಡೆ ರಾಷ್ಟ್ರೀಯ ತನಿಖಾ ದಳ ಕೂಡ ತನಿಖೆಗೆ ಇಳಿದಿದೆ. ವಿದ್ವಾಂಸಕ ಕೃತ್ಯ ದೃಷ್ಟಿಕೋನದಿಂದಲೂ ತನಿಖೆ ಆರಂಭಿಸಿದೆ.

    ಗುಜರಾತ್ ಪೊಲೀಸ್:
    ಗುಜರಾತ್ ಸರ್ಕಾರ 40 ಸದಸ್ಯರ ವಿಶೇಷ ತಂಡ ರಚಿಸಿದೆ. ಈ ತಂಡವು ನಾಗರಿಕ ವಿಮಾನಯಾನ ಸಚಿವಾಲಯದ ತನಿಖಾ ತಂಡಕ್ಕೆ ನೆರವು ನೀಡಲಿದೆ.