Tag: ಬೋನು

  • ಬಳ್ಳಾರಿಯಲ್ಲಿ ಬೋನಿಗೆ ಬಿತ್ತು ಮತ್ತೊಂದು ನರಭಕ್ಷಕ ಚಿರತೆ!

    ಬಳ್ಳಾರಿಯಲ್ಲಿ ಬೋನಿಗೆ ಬಿತ್ತು ಮತ್ತೊಂದು ನರಭಕ್ಷಕ ಚಿರತೆ!

    ಬಳ್ಳಾರಿ: ಮಕ್ಕಳನ್ನು ಹೊತ್ತೊಯ್ದು ಬಲಿ ಪಡೆದಿದ್ದ ನರಭಕ್ಷಕ ಚಿರತೆಗಳನ್ನು ಸೆರೆಹಿಡಿಯಲು ಜಿಲ್ಲೆಯ ಕಂಪ್ಲಿ ಭಾಗದ ದೇವಲಾಪುರ ಹೊರವಲಯದಲ್ಲಿ ಅರಣ್ಯ ಇಲಾಖೆಯವರು ಇಟ್ಟಿದ್ದ ಬೋನಿನಲ್ಲಿ ಮತ್ತೊಂದು ಚಿರತೆ ಸೆರೆಯಾಗಿದೆ. ನಿನ್ನೆಯಷ್ಟೇ ಒಂದು ಚಿರತೆಯನ್ನು ಸೆರೆಹಿಡಿಯಲಾಗಿತ್ತು.

    ಕಂಪ್ಲಿ ಭಾಗದ ಸುತ್ತಮುತ್ತ ಚಿರತೆಗಳ ಹಾವಳಿ ಹೆಚ್ಚಾಗಿದ್ದು, ಇದೂವರೆಗೆ ಇಬ್ಬರು ಮಕ್ಕಳನ್ನು ಚಿರತೆ ಬಲಿ ಪಡೆದುಕೊಂಡಿದೆ. ಇದರಿಂದ ಈ ಭಾಗದ ಜನರು ಮನೆಯಿಂದ ಹೊರಬರಲು ಹೆದರುವಂತ ಪರಿಸ್ಥಿತಿ ಎದುರಾಗಿತ್ತು. ಕಂಪ್ಲಿ ಭಾಗದ ಸೋಮಲಾಪುರ ಹಾಗೂ ದೇವಾಲಾಪುರವು ಕಾಡಂಚಿನ ಗ್ರಾಮವಾಗಿರುವುದರಿಂದ ಇಲ್ಲಿ ಚಿರತೆಗಳು ಗ್ರಾಮಕ್ಕೆ ಆಹಾರ ಅರಸಿಕೊಂಡು ಬರುತ್ತದೆ. ಹೀಗೆ ಬಂದಾಗ ಜನರ ಮೇಲೆ ದಾಳಿಯೂ ಕೂಡ ನಡೆಸುತ್ತದೆ. ಇದನ್ನೂ ಓದಿ:ಕೊನೆಗೂ ಬೋನಿಗೆ ಬಿದ್ದ ಎರಡನೇ ನರಭಕ್ಷಕ ಚಿರತೆ

    ಡಿ.25ರಂದು ಜಯಸುಧಾ(13) ಬಾಲಕಿಯನ್ನು ಚಿರತೆಯೊಂದು ಹೊತ್ತೊಯ್ದು ಬಲಿ ಪಡೆದಿತ್ತು. ಶಾಲೆಗೆ ಕಿಸ್ಮಸ್ ರಜೆಯಿದ್ದ ಕಾರಣ ಜಮೀನಿಗೆ ಪೋಷಕರ ಜೊತೆ ಹೋಗುತ್ತಿದ್ದ ಜಯಸುಧಾ ಮೇಲೆ ಚಿರತೆ ಏಕಾಏಕಿ ದಾಳಿ ನಡೆಸಿ ಆಕೆಯನ್ನು ಹೊತ್ತೊಯ್ದಿತ್ತು. ಚಿರತೆ ದಾಳಿ ನಡೆಸುತ್ತಿದ್ದಂತೆಯೇ ಪೋಷಕರ ಚೀರಾಟ ಕೇಳಿ ಬಾಲಕಿಯನ್ನು ತುಸು ದೂರದಲ್ಲೇ ಬಿಟ್ಟು ಹೋಗಿತ್ತು. ತಕ್ಷಣ ಕಂಪ್ಲಿ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಜಯಸುಧಾ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಳು.

    ಡಿ.12ರಂದು ಬಾಲಕ ವೆಂಕಟಸಾಯಿಯನ್ನು ಚಿರತೆ ಬಲಿ ಪಡೆದಿತ್ತು. ಸಂಜೆ ಆಟವಾಡುವಾಗ ಮನೆಯವರು ನೋಡ ನೋಡುತ್ತಿದ್ದಂತೆಯೇ ಚಿರತೆ ಬಾಲಕನನ್ನು ಎಳೆದೊಯ್ದಿತ್ತು. ಬಳಿಕ ಆತನ ಪೋಷಕರು ಹಾಗೂ ಗ್ರಾಮಸ್ಥರು ಬಾಲಕನನ್ನ ಹುಡುಕಾಡಿದಾಗ ಗ್ರಾಮದ ಹೊರವಲಯದಲ್ಲಿ ಆತ ಶವವಾಗಿ ಪತ್ತೆಯಾಗಿದ್ದನು. ಆದರೆ ಅರಣ್ಯ ಇಲಾಖೆಯವರು ಈ ಭಾಗದಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿದೆ ಅಂತ ತಿಳಿದಿದ್ದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಅಂತ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು.

    ಈ ಸರಣಿ ಸಾವುಗಳಿಂದ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಗಳನ್ನು ಸೆರೆಹಿಡಿಯಲು ಸೋಮಲಾಪುರ ಹಾಗೂ ದೇವಾಲಾಪುರವು ಗ್ರಾಮದ ಸುತ್ತಮುತ್ತ ಒಟ್ಟು 11 ಕಡೆ ಬೋನು ಅಳವಡಿಸಿದ್ದರು. ಈ ಹಿಂದೆ ಸೋಮಲಾಪುರ ಗ್ರಾಮದಲ್ಲಿ ಎರಡು ಚಿರತೆಗಳು ಹಾಗೂ ಇಂದು ದೇವಾಲಪುರದಲ್ಲಿ ಮತ್ತೊಂದು ಚಿರತೆ ಬೋನಿಗೆ ಬಿದ್ದಿದೆ. ಇದುವರೆಗೂ ಒಟ್ಟು ಮೂರು ಚಿರತೆಗಳನ್ನು ಅರಣ್ಯ ಇಲಾಖೆ ಅವರು ಯಶಸ್ವಿಯಾಗಿ ಸೆರೆಹಿಡಿದು ಜನರ ಆತಂಕವನ್ನು ಕೊಂಚ ಮಟ್ಟಿಗೆ ದೂರ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೊನೆಗೂ ಬೋನಿಗೆ ಬಿದ್ದ ಎರಡನೇ ನರಭಕ್ಷಕ ಚಿರತೆ

    ಕೊನೆಗೂ ಬೋನಿಗೆ ಬಿದ್ದ ಎರಡನೇ ನರಭಕ್ಷಕ ಚಿರತೆ

    ಬಳ್ಳಾರಿ: ಜಿಲ್ಲೆಯ ಕಂಪ್ಲಿ ತಾಲೂಕಿನ ಸೋಮಲಾಪುರ ಗ್ರಾಮಸ್ಥರ ನಿದ್ದೆಗೆಡೆಸಿದ್ದ ಎರಡನೇ ನರಭಕ್ಷಕ ಚಿರತೆ ಕೊನೆಗೂ ಬೋನಿಗೆ ಬಿದ್ದಿದೆ.

    ಕಳೆದ ಎರಡು ವಾರದಿಂದ ಸುತ್ತಮುತ್ತಲಿನ ಗ್ರಾಮದಿಂದ ಎರಡು ಮಕ್ಕಳನ್ನು ಚಿರತೆಗಳು ಹೊತ್ತೊಯ್ದಿದ್ದವು. ಈ ಚಿರತೆಗಳ ಕಾಟ ಅರಣ್ಯ ಇಲಾಖೆಗೆ ದೊಡ್ಡ ತಲೆನೋವಾಗಿತ್ತು. ಹೀಗಾಗಿ ಕಳೆದ ಎರಡು ವಾರದಿಂದ ಚಿರತೆ ಹಿಡಿಯಲು ಕೂಂಬಿಂಗ್ ಕಾರ್ಯಾಚರಣೆ ಮಾಡಿದ್ದರೂ ಪ್ರಯೋಜನವಾಗಿರಲಿಲ್ಲ.

    ಹೀಗಾಗಿ ಸೋಮಲಾಪುರ ಗುಡ್ಡದ ಬಳಿ ನಾಯಿ ಹಾಕಿ 11 ಬೋನುಗಳನ್ನು ಅರಣ್ಯ ಇಲಾಖೆ ಅಳವಡಿಸಿತ್ತು. ಈ ಹಿಂದೆ ಒಂದು ಚಿರತೆ ಸೆರೆಸಿಕ್ಕಿತ್ತು. ಅಲ್ಲದೇ ಇಂದು ಮುಂಜಾನೆ ಆಹಾರ ಅರಸಿ ಬಂದ ಮತ್ತೊಂದು ಚಿರತೆಯೂ ಬೋನಿಗೆ ಬಿದ್ದಿದೆ.

    ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದು, ಚಿರತೆ ಸ್ಥಳಾಂತರ ಕಾರ್ಯ ಕೈಗೊಂಡಿದ್ದಾರೆ. ಬೋನಿನಲ್ಲಿ ಬಿದ್ದ ಚಿರತೆ ನೋಡಲು ಸೋಮಲಾಪುರ ಸುತ್ತಮುತ್ತಲಿನ ಗ್ರಾಮದ ಜನರು ತಂಡೋಪ ತಂಡವಾಗಿ ಗ್ರಾಮದತ್ತ ಆಗಮಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬೋನಿಗೆ ಬಿತ್ತು ಗ್ರಾಮಸ್ಥರ ನಿದ್ದೆ ಗೆಡಿಸಿದ್ದ ಚಿರತೆ

    ಬೋನಿಗೆ ಬಿತ್ತು ಗ್ರಾಮಸ್ಥರ ನಿದ್ದೆ ಗೆಡಿಸಿದ್ದ ಚಿರತೆ

    ದಾವಣಗೆರೆ: ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಮತ್ತೂರು ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆಯೊಂದು ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿದೆ.

    ಕಳೆದ ಕೆಲವು ದಿನಗಳಿಂದ ಮತ್ತೂರು ಗ್ರಾಮದಲ್ಲಿ ಚಿರತೆಯೊಂದು ಪದೇ ಪದೇ ಪ್ರತ್ಯಕ್ಷವಾಗಿ ಗ್ರಾಮಸ್ಥರ ನಿದ್ದೆಗಡೆಸಿತ್ತು. ಇದರಿಂದ ಭಯಭೀತಿಗೊಂಡಿದ್ದ ಜನ ಅರಣ್ಯ ಇಲಾಖೆ ಬಳಿ ಚಿರತೆ ಹಿಡಿಯುವಂತೆ ಮನವಿ ಮಾಡಿಕೊಂಡಿದ್ದರು.

    ಗ್ರಾಮಸ್ಥರ ದೂರು ಹಿನ್ನಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಇಟ್ಟಗಿ ಹನುಮಂತಪ್ಪ ಎಂಬವರ ಕಬ್ಬಿನ ಗದ್ದೆಯಲ್ಲಿ ಅರಣ್ಯ ಇಲಾಖೆ ಬೋನನ್ನು ಇಟ್ಟಿತ್ತು. ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಇಂದು ಬೋನಿಗೆ ಬಿದ್ದಿದೆ. ಚಿರತೆ ಬೋನಿಗೆ ಬಿದ್ದಿದ್ದರಿಂದ ಆತಂಕದಲ್ಲಿದ್ದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

    ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಚಿರತೆಯನ್ನು ತೆಗೆದುಕೊಂಡು ಹೋಗಿದ್ದಾರೆ. 10 ದಿನಗಳ ಹಿಂದೆ ಇದೇ ಪ್ರದೇಶದಲ್ಲಿ ಚಿರತೆಯೊಂದು ಬೋನಿಗೆ ಬಿದ್ದಿತ್ತು. ಈಗ ಮತ್ತೊಂದು ಚಿರತೆಯೂ ಬೋನಿಗೆ ಬಿದ್ದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕುಡಿದ ಮತ್ತಿನಲ್ಲಿ ಚಿರತೆ ಬೋನಿನಲ್ಲಿ ಸೆರೆಯಾದ!

    ಕುಡಿದ ಮತ್ತಿನಲ್ಲಿ ಚಿರತೆ ಬೋನಿನಲ್ಲಿ ಸೆರೆಯಾದ!

    ಗಾಂಧಿನಗರ: ಗುಜರಾತಿನ ಗಿರ್ ಅರಣ್ಯದಲ್ಲಿ ಚಿರತೆಯನ್ನು ಹಿಡಿಯಲು ಇಟ್ಟಿದ್ದ ಬೋನಿಗೆ ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಒಳಗೆ ಸೆರೆಯಾಗಿರುವ ಫೋಟೋ ಈಗ ಸಾಮಾಜಿಕ ಜಾತಾಣದಲ್ಲಿ ವೈರಲ್ ಆಗಿದೆ.

    ಗಿರ್ ತಾಲೂಕಿನಲ್ಲಿ ಈ ಘಟನೆ ನಡೆದಿದ್ದು, ಬೋನಿನೊಳಗೆ ಸೆರೆಯಾಗಿ ಕೆಲವು ಗಂಟೆಗಳು ಕಳೆದರೂ ಆ ವ್ಯಕ್ತಿಗೆ ಸಹಾಯ ಮಾಡಲು ಯಾರೊಬ್ಬರು ಮುಂದಾಗಲಿಲ್ಲ.

    ವ್ಯಕ್ತಿಯು ನನ್ನನ್ನು ಹೊರಗೆ ಬಿಡಿ, ಹಸಿವಾಗುತ್ತಿದೆ, ಕುಡಿಯಲು ನೀರು ಕೊಡಿ ಎಂದು ಬೇಡಿಕೊಂಡರೂ ಸ್ಥಳಿಯರು ಮೊಬೈಲ್ ನಲ್ಲಿ ದೃಶ್ಯವನ್ನು ಸೆರೆ ಹಿಡಿಯುತ್ತಿದ್ದರು ಎಂದು ವರದಿಯಾಗಿದೆ.

    ಸ್ವಯಂಚಾಲಿತ ತಂತ್ರಜ್ಞಾನವನ್ನು ಹೊಂದಿರುವ ಈ ಬೋನ್ ಒಳಗಡೆ ಯಾರೆ ಪ್ರವೇಶಿಸಿದರೂ ತಕ್ಷಣ ಲಾಕ್ ಆಗುತ್ತದೆ. ಬಳಿಕ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.  ಅಧಿಕಾರಿಗಳು ಸ್ಥಳಕ್ಕೆ  ಬಂದು  ಬೋನಿನ ಲಾಕ್ ತೆಗೆದಿದ್ದು, ಬಳಿಕ ವೈಕ್ತಿ  ಹೊರಗೆ  ಬಂದಿದ್ದಾನೆ.