ದಿವಂಗತ ಬಾಲಿವುಡ್ ನಟಿ ಶ್ರೀದೇವಿ ಅವರ ಇಂದು (ಆ.13) 61ನೇ ವರ್ಷದ ಹುಟ್ಟುಹಬ್ಬದ ಹಿನ್ನೆಲೆ ಪುತ್ರಿ ಜಾನ್ವಿ ಕಪೂರ್ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಬಾಯ್‌ಫ್ರೆಂಡ್ ಶಿಖರ್ ಜೊತೆ ತಿರುಪತಿಗೆ ನಟಿ ಭೇಟಿ ನೀಡಿದ್ದಾರೆ. ಇಬ್ಬರ ದೇವಸ್ಥಾನದ ಭೇಟಿಯ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ:ರಶ್ಮಿಕಾ ಮಂದಣ್ಣ ಅದ್ಭುತ ವ್ಯಕ್ತಿ ಎಂದು ಹೊಗಳಿದ ವಿಕ್ಕಿ ಕೌಶಲ್
ಅಮ್ಮನ ಹುಟ್ಟುಹಬ್ಬದಂದು ಬಾಯ್‌ಫ್ರೆಂಡ್ ಶಿಖರ್ ಜೊತೆ ತಿರುಪತಿಗೆ ಭೇಟಿ ನೀಡಿ ಜಾನ್ವಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕೆಲ ಸಮಯ ದೇವಸ್ಥಾನದಲ್ಲಿ ಕಳೆದಿದ್ದಾರೆ. ತಿಮ್ಮಪ್ಪನ ದರ್ಶನ ಪಡೆಯುವ ಮೂಲಕ ಅಮ್ಮನ ಹುಟ್ಟುಹಬ್ಬವನ್ನು ನಟಿ ಸೆಲೆಬ್ರೇಟ್ ಮಾಡಿದ್ದಾರೆ. ಸದ್ಯ ಜಾನ್ವಿ ಕಪೂರ್ ಮತ್ತು ಶಿಖರ್ ಜೊತೆಯಾಗಿ ಕಾಣಿಸಿಕೊಂಡಿರೋದು ಮತ್ತೆ ಚರ್ಚೆಗೆ ಗ್ರಾಸವಾಗಿದೆ.
ಅಂದಹಾಗೆ, ಇತ್ತೀಚೆಗೆ ಜ್ಯೂ.ಎನ್‌ಟಿಆರ್ ಜೊತೆಗಿನ ‘ದೇವರ’ ಸಿನಿಮಾದ ಸಾಂಗ್ ರಿಲೀಸ್ ಆಗಿ ಮಿಲಿಯನ್‌ಗಟ್ಟಲೇ ವಿವ್ಸ್ ಪಡೆದುಕೊಂಡಿತ್ತು. ಜಾನ್ವಿ ಮತ್ತು ತಾರಕ್ ಕೆಮಿಸ್ಟ್ರಿ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಸಿನಿಮಾಗಾಗಿ ಎದುರು ನೋಡ್ತಿದ್ದಾರೆ.
ಶ್ರೀದೇವಿ ನಿಧನರಾಗಿ 6 ವರ್ಷಗಳು ಕಳೆದಿವೆ. ಇಂದಿಗೂ ಶ್ರೀದೇವಿಯನ್ನು ಅವರ ಕುಟುಂಬ ಸ್ಮರಿಸುತ್ತಿದೆ. ಇದೀಗ ಪತ್ನಿ ಶ್ರೀದೇವಿಗೆ ‘ಹುಟ್ಟುಹಬ್ಬದ ಶುಭಾಶಯಗಳು ಮೈ ಜಾನ್’ ಎಂದು ಭಾವುಕವಾಗಿ ಬೋನಿ ಕಪೂರ್ ಪೋಸ್ಟ್ ಮಾಡಿದ್ದಾರೆ. ನೆಚ್ಚಿನ ನಟಿಯನ್ನು ಅಭಿಮಾನಿಗಳು ಕೂಡ ಸ್ಮರಿಸಿದ್ದಾರೆ.ಇದನ್ನೂ ಓದಿ:ಆಲಿಯಾ ಭಟ್ ನಟನೆಯ ‘ಹೈವೇ’ ಚಿತ್ರಕ್ಕೆ ಹಾಡಿದ್ದ ಪಾಕಿಸ್ತಾನಿ ಗಾಯಕಿ ನಿಧನ
ಅಂದಹಾಗೆ, ಬಹುಭಾಷಾ ನಟಿಯಾಗಿ ಮಿಂಚಿ ಮರೆಯಾದ ಶ್ರೀದೇವಿ ಕನ್ನಡದಲ್ಲೂ ಹಲವು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ತಮ್ಮ 11ನೇ ವಯಸ್ಸಿಗೆ ‘ಭಕ್ತ ಕುಂಬಾರ’ ಸಿನಿಮಾದಲ್ಲಿ ನಟಿಸಿದರು. ಬಾಲ ಭಾರತ, ಸಂಪೂರ್ಣ ರಾಮಾಯಣ, ಯಶೋಧ ಕೃಷ್ಣ ಸಿನಿಮಾಗಳಲ್ಲಿ ಬಾಲ ಕಲಾವಿದೆಯಾಗಿ ಗುರುತಿಸಿಕೊಂಡರು.
ಬಳಿಕ 1975ರಲ್ಲಿ ‘ಹೆಣ್ಣು ಸಂಸಾರದ ಕಣ್ಣು’ ಸಿನಿಮಾದಲ್ಲಿ ಶ್ರೀದೇವಿ ನಟಿಸಿದರು. ‘ಪ್ರಿಯಾ’ ಎಂಬ ಚಿತ್ರದಲ್ಲಿ ರಜನಿಕಾಂತ್ ಮತ್ತು ಅಂಬರೀಶ್ ಜೊತೆ ಶ್ರೀದೇವಿ ತೆರೆಹಂಚಿಕೊಂಡಿದ್ದರು. ಇಂದಿಗೂ ಅವರು ಮಾಡಿದ ಪ್ರತಿಯೊಂದು ಪಾತ್ರವನ್ನು ಅಭಿಮಾನಿಗಳು ಸ್ಮರಿಸುತ್ತಾರೆ.
ನಿನ್ನೆಯಷ್ಟೇ ರಾಮ್ ಚರಣ್ (Ram Charan) ಮತ್ತು ಜಾಹ್ನವಿ ಕಪೂರ್ (Jahnavi Kapoor) ಕಾಂಬಿನೇಷನ್ ನ ಹೊಸ ಚಿತ್ರಕ್ಕೆ ಚಾಲನೆ ಸಿಕ್ಕಿದೆ. ಈ ಮುಹೂರ್ತ ಸಮಾರಂಭಕ್ಕೆ ರಾಮ್ ಚರಣ್ ತಂದೆ ಚಿರಂಜೀವಿ (Chiranjeevi), ಜಾಹ್ನವಿ ಕಪೂರ್ ತಂದೆ ಬೋನಿ ಕಪೂರ್ (Boney Kapoor) ಸಾಕ್ಷಿಯಾಗಿದ್ದು ವಿಶೇಷವಾಗಿತ್ತು. ತಮ್ಮ ಮಕ್ಕಳಿಗೆ ಈ ಸಿನಿಮಾ ಸಾಕಷ್ಟು ಗೆಲುವು ತಂದು ಕೊಡಲಿ ಎಂದು ಇಬ್ಬರೂ ತಮ್ಮ ತಮ್ಮ ಮಕ್ಕಳಿಗೆ ಹಾರೈಸಿದ್ದಾರೆ.
ತ್ರಿಬಲ್ ಆರ್ ಸಿನಿಮಾದ ಯಶಸ್ಸಿನ ಬಳಿಕ ರಾಮ್ ಚರಣ್ ಗ್ಲೋಬಲ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಸದ್ಯ ಚೆರ್ರಿ ಶಂಕರ್ ನಿರ್ದೇಶನದ ಗೇಮ್ ಚೇಂಜರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಪ್ರಾಜೆಕ್ಟ್ ನಲ್ಲಿ ಬ್ಯುಸಿಯಾಗಿರುವ ರಾಮ್ ಚರಣ್ ಬುಚ್ಚಿ ಬಾಬು ಜೊತೆ ಕೈ ಜೋಡಿಸಿದ್ದಾರೆ. ಈ ಚಿತ್ರಕ್ಕೆ RC 16 ಎಂದು ಟೈಟಲ್ ಇಡಲಾಗಿದೆ. ಈ ಹೊಸ ಸಿನಿಮಾದ ಮುಹೂರ್ತ ಸಮಾರಂಭ ನಿನ್ನೆ ಹೈದ್ರಾಬಾದ್ ನಲ್ಲಿ ನೆರವೇರಿದೆ.
ನಿರ್ಮಾಪಕ ಅಲ್ಲು ಅರವಿಂದ್ ಅವರು ಬೌಂಡ್ ಸ್ಕ್ರಿಪ್ಟ್ ಅನ್ನು ನಿರ್ದೇಶಕ ಬುಚ್ಚಿ ಬಾಬು ಸನಾ ಅವರಿಗೆ ಹಸ್ತಾಂತರಿಸಿದರು. ರಾಮ್ ಚರಣ್ ಅವರ ಗೇಮ್ ಚೇಂಜರ್ ಚಿತ್ರವನ್ನು ನಿರ್ದೇಶಿಸುತ್ತಿರುವ ಸ್ಟಾರ್ ನಿರ್ದೇಶಕ ಶಂಕರ್ ಅವರು ಬೋನಿ ಕಪೂರ್ ಮತ್ತು ಅನ್ಮೋಲ್ ಶರ್ಮಾ ಕ್ಯಾಮೆರಾ ಚಾಲನೆ ನೀಡಿದರು. ಮೆಗಾ ಸ್ಟಾರ್ ಚಿರಂಜೀವಿ ಕ್ಲಾಪ್ ಬೋರ್ಡ್ ಮಾಡಿ ಇಡೀ ತಂಡಕ್ಕೆ ಶುಭ ಹಾರೈಸಿದರು.
ಇದು ರಾಮ್‌ಚರಣ್ ನಟನೆಯ 16ನೇ ಸಿನಿಮಾ. ಇನ್ನು ಟೈಟಲ್ ಫಿಕ್ಸ್ ಆಗಿಲ್ಲ. ಬುಚ್ಚಿಬಾಬು ನಿರ್ದೇಶನದ ಇನ್ನು ಹೆಸರಿಡದ ಈ ಚಿತ್ರ ಭಾರೀ ನಿರೀಕ್ಷೆ ಮೂಡಿಸಿದೆ. ಚಿತ್ರದಲ್ಲಿ ರಾಮ್‌ಚರಣ್ ಜೋಡಿಯಾಗಿ ಜಾನ್ವಿ ಕಪೂರ್ ನಟಿಸುತ್ತಿದ್ದಾರೆ. ಎ. ಆರ್ ರೆಹಮಾನ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಆರ್.ರತ್ನವೇಲು ಛಾಯಾಗ್ರಹಣ, ಆಂಟೋನಿ ರುಬಿನ್ ಸಂಕಲನ ಚಿತ್ರಕ್ಕಿದೆ. ಚಂದ್ರಬೋಸ್, ಆನಂತಶ್ರೀರಾಮ್, ಬಾಲಾಜಿ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ.
ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್‌ನಲ್ಲಿ RC16 ಸಿನಿಮಾ ನಿರ್ಮಾಣವಾಗುತ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡ ಈ ಚಿತ್ರದಲ್ಲಿ ಅಭಿನಯಿಸುತ್ತಿರುವುದು ವಿಶೇಷ.
ಬಾಲಿವುಡ್ ನ ಲೇಡಿ ಸೂಪರ್ ಸ್ಟಾರ್ ಶ್ರೀದೇವಿ ನಿಧನರಾಗಿ ನಾಲ್ಕು ವರ್ಷಗಳ ನಂತರ ಪತ್ನಿಯ ಬಗ್ಗೆ ಹಲವಾರು ವಿಚಾರಗಳನ್ನು ಮಾತನಾಡುತ್ತಿದ್ದಾರೆ ಬೋನಿ ಕಪೂರ್. ಶ್ರೀದೇವಿ ಅವರ ನಿಗೂಢ ನಿಧನದ ನಂತರ ಸಾರ್ವಜನಿಕವಾಗಿ ಅಷ್ಟೇನೂ ಕಾಣಿಸಿಕೊಳ್ಳದ ಬೋನಿ ಕಪೂರ್ ವಾಹಿನಿಯೊಂದರ ಜೊತೆ ಮಾತನಾಡುತ್ತಾ, ಪತ್ನಿಯ ಹಲವಾರು ವಿಚಾರಗಳನ್ನು ಬಹಿರಂಗ ಪಡಿಸಿದ್ದಾರೆ.
ತೊಂಬತ್ತರ ದಶಕದಲ್ಲಿ ಶ್ರೀದೇವಿ ಯಾವ ಸ್ಟಾರ್ ನಟರಿಗೂ ಕಡಿಮೆ ಇರಲಿಲ್ಲ. ಸೌಂದರ್ಯಕ್ಕೆ ಮತ್ತೊಂದು ಪದವೇ ಅವರಾಗಿದ್ದರು. ಈ ಸಮಯದಲ್ಲಿ ಬೋನಿ ಕಪೂರ್ ಅವರನ್ನು ಮದುವೆ ಆಗಿ ಎಲ್ಲರಿಗೂ ಶಾಕ್ ನೀಡಿದ್ದರು. ಬೋನಿ ಕಪೂರ್ ಅವರಿಗೆ ಅದು ಎರಡನೇ ಮದುವೆ ಆಗಿತ್ತು. 1996 ಜೂನ್ 2ರಂದು ಶಿರಡಿಯಲ್ಲಿ ಮದುವೆ ಆಗುವುದರ ಮೂಲಕ ಹೊಸ ಜೀವನಕ್ಕೆ ಕಾಲಿಟ್ಟಿದ್ದರ ಶ್ರೀದೇವಿ. ಕೆಲ ತಿಂಗಳ ಬಳಿಕ ಶ್ರೀದೇವಿ ಗರ್ಭಿಣಿ (Pregnant) ಆಗಿರುವ ವಿಚಾರವನ್ನು ಕಪೂರ್ ಕುಟುಂಬ ಬಹಿರಂಗಪಡಿಸಿತ್ತು.
ಮದುವೆಗೂ ಮುನ್ನ ಶ್ರೀದೇವಿ ಪ್ರಗ್ನೆಂಟ್ ಆಗಿದ್ದರು. ಆ ಕಾರಣಕ್ಕಾಗಿ ಬೇಗ ಬೇಗ ಮದುವೆಯಾದರು ಎನ್ನುವ ಸುದ್ದಿ ಬಾಲಿವುಡ್ ನಲ್ಲಿ ಭಾರೀ ಸದ್ದು ಮಾಡಿತ್ತು. ಮದುವೆಗೂ ಮುನ್ನ ಜಾನ್ವಿ ಕಪೂರ್ ಹುಟ್ಟಿದ್ದು ಅಂತ ಈಗಲೂ ಬಿಟೌನ್ ಮಾತನಾಡಿಕೊಳ್ಳುತ್ತಿದೆ. ಇದಕ್ಕೆ ಇದೀಗ ಸ್ಪಷ್ಟನೆ ಕೊಟ್ಟಿದ್ದಾರೆ ಬೋನಿ ಕಪೂರ್.
ಮದುವೆಗೂ ಮುನ್ನ ಶ್ರೀದೇವಿ ಗರ್ಭಿಣಿ ಆಗಿದ್ದರು ಎನ್ನುವುದು ಸುಳ್ಳು. 1996 ಜೂನ್ ನಲ್ಲಿ ನಮ್ಮಿಬ್ಬರ ಮದುವೆ ಆಯಿತು. ಶ್ರೀದೇವಿ ಪ್ರಗ್ನೆಂಟ್ ಆಗಿದ್ದು 1997 ಜನವರಿಯಲ್ಲಿ. ಶ್ರೀದೇವಿ ಅವರ ಬಗ್ಗೆ ಸುಖಾಸುಮ್ಮನೆ ಅಪಪ್ರಚಾರ ಮಾಡಿದರು. ಅದೆಲ್ಲವೂ ಸುಳ್ಳು. ಮದುವೆ ನಂತರವೇ ಜಾನ್ವಿ ಹುಟ್ಟಿದ್ದು ಎಂದು ಹೇಳಿದ್ದಾರೆ ಬೋನಿ ಕಪೂರ್.
ಶ್ರೀದೇವಿ ಸತ್ತದ್ದು ಹೇಗೆ?
ಬರೋಬ್ಬರಿ ಐದು ವರ್ಷಗಳ ಬಳಿಕ ಬಾಲಿವುಡ್ ನಟಿ ಶ್ರೀದೇವಿ (Sridevi) ಅವರ ಸಾವಿನ ರಹಸ್ಯ ಬಯಲಾಗಿದೆ. ಭಾರತೀಯ ಸಿನಿಮಾ ರಂಗ ಕಂಡ ಲೇಡಿ ಸೂಪರ್ ಸ್ಟಾರ್ ದುಬೈನಲ್ಲಿ (Dubai) 2018ರಂದು ಹಠಾತ್ ಸಾವನ್ನಪ್ಪಿದ್ದರು. ತಾವು ಉಳಿದುಕೊಂಡಿದ್ದ ಹೋಟೆಲ್ ನ ಬಾತ್ ಟಬ್ ನಲ್ಲಿ ಶ್ರೀದೇವಿ ಅವರ ಮೃತದೇಹ ಪತ್ತೆಯಾಗಿತ್ತು.
ಆರೋಗ್ಯವಾಗಿದ್ದ ಶ್ರೀದೇವಿ ಹಠಾತ್ ನಿಧನರಾದ ಸುದ್ದಿಯನ್ನು ಸಹಜ ಸಾವು ಎಂದು ಯಾರೂ ನಂಬಲು ತಯಾರಿರಲಿಲ್ಲ. ಹಾಗಾಗಿ ಆ ಸಾವಿಗೆ ರೆಕ್ಕಪುಕ್ಕಗಳು ಹುಟ್ಟುಕೊಂಡವು. ಅತಿಯಾದ ಮದ್ಯ ಸೇವನೆಯಿಂದ ಶ್ರೀದೇವಿ ನಿಧನರಾಗಿದ್ದಾರೆ ಎಂದು ಕೆಲವರು ಪುಕಾರು ಹಬ್ಬಿಸಿದರೆ, ಇನ್ನೂ ಕೆಲವರು ಬಾತ್ ಟಬ್ ನಲ್ಲಿ ಮುಳುಗಿಸಿ ಸಾಯಿಸಲಾಗಿದೆ ಎಂದೂ ಮಾತನಾಡಿಕೊಂಡರು. ಹಾಗಾಗಿ ಅವರ ಸಾವು ನಿಗೂಢವಾಗಿ ಉಳಿದಿತ್ತು.
ಇದೇ ಮೊದಲ ಬಾರಿಗೆ ಪತ್ನಿಯ ಸಾವಿನ ಬಗ್ಗೆ ಬೋನಿ ಕಪೂರ್ (Boney Kapoor) ಮಾತನಾಡಿದ್ದಾರೆ. ಶ್ರೀದೇವಿ ಅವರ ಸಾವಿಗೆ ವಿಪರೀತವಾಗಿ ಅವರು ಪಥ್ಯ ಮಾಡುತ್ತಿದ್ದರು ಎಂದು ಹೇಳಿದ್ದಾರೆ. ಸದಾ ತಾನು ಸುಂದರವಾಗಿಯೇ ಇರಬೇಕು ಎಂದು ಶ್ರೀದೇವಿ ಪಥ್ಯ ಮಾಡುತ್ತಿದ್ದರು. ಹಲವಾರು ಬಾರಿ ಉಪವಾಸ ಇರುತ್ತದೆ. ಕಡಿಮೆ ರಕ್ತದೊತ್ತಡವಿದೆ ಎಂದು ವೈದ್ಯರು ತಿಳಿಸಿದ್ದರು ಅದನ್ನು ಶ್ರೀದೇವಿ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ ಎಂದಿದ್ದಾರೆ.
ಶ್ರೀದೇವಿ ಅವರ ನಿಧನರಾದಾಗ ತಮ್ಮನ್ನು ದುಬೈ ಪೊಲೀಸರು ಹಲವು ಗಂಟೆಗಳ ಕಾಲ ತನಿಖೆಗೆ ಒಳಪಡಿಸಿದ್ದರು ಎನ್ನುವ ಸಂಗತಿಯನ್ನೂ ಅವರು ಹಂಚಿಕೊಂಡಿದ್ದಾರೆ. ಸುಳ್ಳು ಪತ್ತೆ ಸೇರಿದಂತೆ ಹಲವಾರು ರೀತಿಯ ತನಿಖೆಗಳನ್ನೂ ಪೊಲೀಸರು ಮಾಡಿದ್ದಾರೆ ಎನ್ನವ ಮಾಹಿತಿಯನ್ನು ಬಹಿರಂಗ ಪಡಿಸಿದ್ದಾರೆ ಬೋನಿ ಕಪೂರ್.
ಬರೋಬ್ಬರಿ ಐದು ವರ್ಷಗಳ ಬಳಿಕ ಬಾಲಿವುಡ್ ನಟಿ ಶ್ರೀದೇವಿ (Sridevi) ಅವರ ಸಾವಿನ ರಹಸ್ಯ ಬಯಲಾಗಿದೆ. ಭಾರತೀಯ ಸಿನಿಮಾ ರಂಗ ಕಂಡ ಲೇಡಿ ಸೂಪರ್ ಸ್ಟಾರ್ ದುಬೈನಲ್ಲಿ (Dubai) 2018ರಂದು ಹಠಾತ್ ಸಾವನ್ನಪ್ಪಿದ್ದರು. ತಾವು ಉಳಿದುಕೊಂಡಿದ್ದ ಹೋಟೆಲ್ ನ ಬಾತ್ ಟಬ್ ನಲ್ಲಿ ಶ್ರೀದೇವಿ ಅವರ ಮೃತದೇಹ ಪತ್ತೆಯಾಗಿತ್ತು.
ಆರೋಗ್ಯವಾಗಿದ್ದ ಶ್ರೀದೇವಿ ಹಠಾತ್ ನಿಧನರಾದ ಸುದ್ದಿಯನ್ನು ಸಹಜ ಸಾವು ಎಂದು ಯಾರೂ ನಂಬಲು ತಯಾರಿರಲಿಲ್ಲ. ಹಾಗಾಗಿ ಆ ಸಾವಿಗೆ ರೆಕ್ಕಪುಕ್ಕಗಳು ಹುಟ್ಟುಕೊಂಡವು. ಅತಿಯಾದ ಮದ್ಯ ಸೇವನೆಯಿಂದ ಶ್ರೀದೇವಿ ನಿಧನರಾಗಿದ್ದಾರೆ ಎಂದು ಕೆಲವರು ಪುಕಾರು ಹಬ್ಬಿಸಿದರೆ, ಇನ್ನೂ ಕೆಲವರು ಬಾತ್ ಟಬ್ ನಲ್ಲಿ ಮುಳುಗಿಸಿ ಸಾಯಿಸಲಾಗಿದೆ ಎಂದೂ ಮಾತನಾಡಿಕೊಂಡರು. ಹಾಗಾಗಿ ಅವರ ಸಾವು ನಿಗೂಢವಾಗಿ ಉಳಿದಿತ್ತು.
ಇದೇ ಮೊದಲ ಬಾರಿಗೆ ಪತ್ನಿಯ ಸಾವಿನ ಬಗ್ಗೆ ಬೋನಿ ಕಪೂರ್ (Boney Kapoor) ಮಾತನಾಡಿದ್ದಾರೆ. ಶ್ರೀದೇವಿ ಅವರ ಸಾವಿಗೆ ವಿಪರೀತವಾಗಿ ಅವರು ಪಥ್ಯ ಮಾಡುತ್ತಿದ್ದರು ಎಂದು ಹೇಳಿದ್ದಾರೆ. ಸದಾ ತಾನು ಸುಂದರವಾಗಿಯೇ ಇರಬೇಕು ಎಂದು ಶ್ರೀದೇವಿ ಪಥ್ಯ ಮಾಡುತ್ತಿದ್ದರು. ಹಲವಾರು ಬಾರಿ ಉಪವಾಸ ಇರುತ್ತದೆ. ಕಡಿಮೆ ರಕ್ತದೊತ್ತಡವಿದೆ ಎಂದು ವೈದ್ಯರು ತಿಳಿಸಿದ್ದರು ಅದನ್ನು ಶ್ರೀದೇವಿ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ ಎಂದಿದ್ದಾರೆ.
ಶ್ರೀದೇವಿ ಅವರ ನಿಧನರಾದಾಗ ತಮ್ಮನ್ನು ದುಬೈ ಪೊಲೀಸರು ಹಲವು ಗಂಟೆಗಳ ಕಾಲ ತನಿಖೆಗೆ ಒಳಪಡಿಸಿದ್ದರು ಎನ್ನುವ ಸಂಗತಿಯನ್ನೂ ಅವರು ಹಂಚಿಕೊಂಡಿದ್ದಾರೆ. ಸುಳ್ಳು ಪತ್ತೆ ಸೇರಿದಂತೆ ಹಲವಾರು ರೀತಿಯ ತನಿಖೆಗಳನ್ನೂ ಪೊಲೀಸರು ಮಾಡಿದ್ದಾರೆ ಎನ್ನವ ಮಾಹಿತಿಯನ್ನು ಬಹಿರಂಗ ಪಡಿಸಿದ್ದಾರೆ ಬೋನಿ ಕಪೂರ್.
ಶ್ರೀದೇವಿ ಅವರು ಹಾಗೆ ಕುಸಿದು ಬೀಳುವುದು ಅದೇ ಮೊದಲೇನೂ ಆಗಿರಲಿಲ್ಲ ಎನ್ನುವ ಸಂಗತಿಯನ್ನೂ ಹಂಚಿಕೊಂಡಿದ್ದಾರೆ. ಹಲವಾರು ಬಾರಿ ಶೂಟಿಂಗ್ ಸಂದರ್ಭದಲ್ಲಿ ಹಾಗೆ ಕುಸಿದು ಬಿದ್ದಿದ್ದರು ಎಂದು ಹೇಳಿಕೊಂಡಿದ್ದಾರೆ. ನಿರ್ಮಾಪಕ ನಾಗಾರ್ಜುನ ಕೂಡ ತಮ್ಮದೇ ಸಿನಿಮಾದ ಶೂಟಿಂಗ್ ನಲ್ಲಿ ಶ್ರೀದೇವಿ ನಿಶ್ಯಕ್ತಿಯಿಂದ ಬಿದ್ದಿದ್ದ ಸಂಗತಿಯನ್ನೂ ತಮಗೆ ತಿಳಿಸಿದ್ದರು ಎಂದು ಬೋನಿ ಕಪೂರ್ ಮಾತನಾಡಿದ್ದಾರೆ.
ದಾವಣಗೆರೆ: ಬಾಲಿವುಡ್ ಖ್ಯಾತ ನಟಿ ದಿವಂಗತ ಶ್ರೀದೇವಿ (Sridevi) ಪತಿ ಬೋನಿ ಕಪೂರ್ (Boni Kapoor) ಕುಟುಂಬಕ್ಕೆ ಸೇರಿದ ಬೆಳ್ಳಿ ಹಾಗೂ ಕಾರನ್ನು ಪೊಲೀಸರು ದಾವಣಗೆರೆಯಲ್ಲಿ ವಶಕ್ಕೆ ಪಡೆದಿದ್ದಾರೆ.
ಚುನಾವಣೆ ಹೊತ್ತಲ್ಲೆ ದಾವಣಗೆರೆ ತಾಲೂಕಿನ ಹೆಬ್ಬಾಳ ಟೋಲ್ ಬಳಿ ಒಟ್ಟು 66 ಕೆಜಿಯ 39 ಲಕ್ಷ ಮೌಲ್ಯದ ಬೆಳ್ಳಿ (Silver) ವಶಕ್ಕೆ ಪಡೆಯಲಾಗಿದೆ. ತಹಶೀಲ್ದಾರ್ ಡಾ. ಅಶ್ವತ್ ಟೋಲ್ ಸಿಬ್ಬಂದಿಯಿಂದ ವಶಕ್ಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ನಿಷೇಧಿತ ಪಿಎಫ್‍ಐನ ಇಬ್ಬರು ಮುಖಂಡರ ಬಂಧನ
ಬಿಎಂಡಬ್ಲ್ಯು ಕಾರ್ (BMW Car) ನಲ್ಲಿ ಚಾಲಕ ದಾಖಲೆ ಇಲ್ಲದೆ ಬೆಳ್ಳಿ ಸಾಗಿಸುತ್ತಿದ್ದನು. ಈ ವೇಳೆ ಚುನಾವಣೆ ಅಧಿಕಾರಿ ಅಶ್ವತ್ ತಪಾಸಣೆ ನಡೆಸಿದಾಗ ಬೆಳ್ಳಿ ಪತ್ತೆಯಾಗಿದೆ. ಇದಕ್ಕೆ ಯಾವುದೇ ದಾಖಲೆ ಇಲ್ಲದ ಕಾರಣ ಬೆಳ್ಳಿ ಮತ್ತು ಕಾರನ್ನು ವಶಕ್ಕೆ ಪಡೆದಿದ್ದಾರೆ.
ಬೋನಿ ಕಪೂರ್ ಕುಟುಂಬಕ್ಕೆ ಸೇರಿದ ಬೆಳ್ಳಿ ಹಾಗೂ ಕಾರ್ ಇದಾಗಿದ್ದು, ಆದ್ರೆ ಕಾರಿನಲ್ಲಿ ಅವರು ಇರಲಿಲ್ಲ. ಬೆಳ್ಳಿ ವಸ್ತುಗಳು ಅವರ ಕುಟುಂಬಕ್ಕೆ ಸೇರಿದ್ದಾಗೆ ಎಂದು ಡಾ. ಅಶ್ವಥ್ ಮಾಹಿತಿ ನೀಡಿದ್ದಾರೆ.
ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಬಾಲಿವುಡ್ ನಟಿ, ದಿವಂಗತ ಶ್ರೀದೇವಿ (Sridevi) ಪುತ್ರಿ ಜಾಹ್ನವಿ ಕಪೂರ್ ಇದೀಗ ಬಂಗಲೆ ಕಾರಣದಿಂದಾಗಿ ಸಖತ್ ಸುದ್ದಿಯಾಗಿದ್ದಾರೆ. ಜಾಹ್ನವಿ ಈಗೀಗ ಬಾಲಿವುಡ್ ಗೆ ಕಾಲಿಟ್ಟ ನಟಿ. ಮಾಡಿದ್ದು ಕೇವಲ ನಾಲ್ಕೇ ನಾಲ್ಕು ಸಿನಿಮಾ. ಆದರೂ, ನೂರು ಕೋಟಿಗೆ ಬೆಲೆಬಾಳುವ ಬಂಗಲೆ ಖರೀದಿಸಿ ಅಚ್ಚರಿ ಮೂಡಿಸಿದ್ದಾರೆ. ಈಕೆ ಪಡೆಯುತ್ತಿರುವ ಸಂಭಾವನೆಯನ್ನು ಲೆಕ್ಕ ಹಾಕಿದರೆ, ದುಬಾರಿ ಕಾರು ಖರೀದಿಸುವುದು ಕಷ್ಟ. ಆದರೆ, ನೂರು ಕೋಟಿಯ ಐಷಾರಾಮಿ ಬಂಗಲೆ ಹೇಗೆ ಖರೀದಿಸಿದರು ಎನ್ನುವ ಕುರಿತು ಬಿಟೌನ್ ನಲ್ಲಿ ಸದ್ದು ಮಾಡುತ್ತಿದೆ.
ಜಾಹ್ನವಿ (Jahnavi Kapoor) ಖರೀದಿಸಿರುವ ಮನೆ ಮುಂಬೈನ ಬಾದ್ರಾ ಪ್ರದೇಶದಲ್ಲಿದೆ. ಪಾಲಿ ಹಿಲ್ ನಲ್ಲಿರುವ ಕುಬೆಲೆಸ್ಕ್ ಬಿಲ್ಡಿಂಗನ್ ನ ಮೊದಲ ಮತ್ತು ಎರಡನೇ ಮಹಡಿಯಲ್ಲಿರುವ ಫ್ಲಾಟ್ ಅನ್ನು ಜಾಹ್ನವಿ ಖರೀದಿಸಿದ್ದಾರೆ. ಇನ್ನೂ ಅಚ್ಚರಿಯ ಸಂಗತಿ ಅಂದರೆ, ಈಗಾಗಲೇ ಅದೇ ಪ್ರದೇಶದಲ್ಲೇ ಜಾಹ್ನವಿ ಐಷಾರಾಮಿ ಮನೆಯನ್ನೂ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ. ಆರು ತಿಂಗಳ ಹಿಂದೆಯಷ್ಟೇ 40 ಕೋಟಿ ಕೊಟ್ಟು ಮನೆಯೊಂದನ್ನು ಖರೀದಿಸಿದ್ದರು. ಇದೀಗ ಬಂದ್ರಾದಲ್ಲಿ 65 ಕೋಟಿ ರೂಪಾಯಿ ಕೊಟ್ಟು ಮತ್ತೊಂದು ಬಂಗಲೆ ಖರೀದಿಸಿದ್ದಾರೆ. ಇದನ್ನೂ ಓದಿ:ಶೂಟಿಂಗ್‌ಗೆ ಬ್ರೇಕ್, ತಾಂಜಾನಿಯಾ ಕಾಡಿನಲ್ಲಿ ಪತ್ನಿ ಜೊತೆ ರಾಮ್‌ಚರಣ್
ನಟಿ ಜಾಹ್ನವಿಗೆ ಅಷ್ಟೊಂದು ಹಣ ಎಲ್ಲಿಂದ ಬರುತ್ತದೆ ಎಂದು ಕೇಳುವವರಿಗೆ ತಂದೆಯತ್ತ ಬೊಟ್ಟು ಮಾಡಿ ತೋರಿಸುತ್ತಾರೆ ನಟಿ. ತಂದೆ ಬೋನಿ ಕಪೂರ್ (Boney Kapoor) ಇಂಡಸ್ಟ್ರಿ ನಡೆಸುತ್ತಾರೆ. ಅದರಿಂದ ಭಾರಿ ಲಾಭ ಕೂಡ ಬರುತ್ತದೆ. ಜಾಹ್ನವಿ ಹಲವು ಉತ್ಪನ್ನಗಳ ರಾಯಭಾರಿ ಕೂಡ. ಈ ಎಲ್ಲದರಿಂದ ಬರುವ ಹಣದಿಂದ ಅವರು ಮನೆಯನ್ನು ಖರೀದಿಸಿದ್ದಾರಂತೆ.
Live Tv
[brid partner=56869869 player=32851 video=960834 autoplay=true]
ಬಾಲಿವುಡ್ ನಟಿ ದಿವಗಂತ ಶ್ರೀದೇವಿ (Sridevi) ಪುತ್ರಿ ಜಾನ್ವಿ ಕಪೂರ್ ಸಖತ್ ಟ್ರೋಲ್ ಆಗುತ್ತಿದ್ದಾರೆ. ಟ್ರೋಲಿಗರು ಅವರನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡಿದ್ದಾರೆ. ಜಾನ್ವಿ ಕಪೂರ್ ಇತ್ತೀಚಿಗಷ್ಟೇ ಮಿಲಿ ಚಿತ್ರದ ಪ್ರಚಾರಕ್ಕಾಗಿ ದೆಹಲಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಅವರು ಮಲ್ಟಿಫ್ಲೆಕ್ಸ್ ನಲ್ಲಿ ಪಾಪ್ ಕಾರ್ನ್ (Popcorn) ಮಾರಾಟ ಮಾಡಿದ್ದರು. ಸಿನಿಮಾದ ಈ ವಿಭಿನ್ನ ಪ್ರಚಾರಕ್ಕೆ ಅಭಿಮಾನಿಗಳು ಮೆಚ್ಚಿಕೊಂಡಿದ್ದರೆ, ಉಳಿದಂತೆ ಟ್ರೋಲಿಗರು ಕಾಲೆಳೆದಿದ್ದರು.
ಜಾನ್ವಿ ಕಪೂರ್ (Janhvi Kapoor) ಸದ್ಯ ಮಿಲಿ ಸಿನಿಮಾದ ಪ್ರಚಾರದಲ್ಲಿ ತೊಡಗಿದ್ದಾರೆ. ಈಗಾಗಲೇ ಜಾನ್ವಿ ಕೆಲ ಸಿನಿಮಾಗಳನ್ನು ಮಾಡಿದ್ದರು, ಅವರಿಗೆ ಹೇಳಿಕೊಳ್ಳುವಂತಹ ಗೆಲುವು ಸಿಕ್ಕಿಲ್ಲ. ಮಿಲಿ ಸಿನಿಮಾ ಅವರ ವೃತ್ತಿ ಬದುಕಿಗೆ ಬ್ರೇಕ್ ನೀಡಬಹುದು ಎಂದು ಹೇಳಲಾಗುತ್ತಿದೆ. ಹಾಗಾಗಿಯೇ ಅವರು ಭರ್ಜರಿ ಪ್ರಚಾರವನ್ನು ಮಾಡುತ್ತಿದ್ದಾರೆ. ಈ ಸಿನಿಮಾ ಇದೇ ನವೆಂಬರ್ 4 ರಂದು ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಇದನ್ನೂ ಓದಿ: ಬೀದಿ ನಾಯಿ ರಾನುಗೆ ʻಐ ಲವ್ ಯೂʼ ಹೇಳಿದ ರಮ್ಯಾ: ರಾನು ಜೊತೆಗಿನ ವರ್ಷದ ನೆನಪು
ಸಿನಿಮಾ ಪ್ರಚಾರಕ್ಕಾಗಿ ಪಾಪ್ ಕಾರ್ನ್ ಮಾರೋದು, ಮತ್ತೊಂದು ಮಾಡೋದು ಸರಿಯಾದದ್ದು ಅಲ್ಲ. ಖ್ಯಾತ ನಟಿ ಮತ್ತು ಖ್ಯಾತ ನಿರ್ಮಾಪಕರ ಪುತ್ರಿಯಾಗಿ ಜಾನ್ವಿ ಪಾಪ್ ಕಾರ್ನ್ ಮಾರುವುದು ಒಂದು ರೀತಿಯಲ್ಲಿ ಗಿಮಿಕ್. ಸಿನಿಮಾ ಚೆನ್ನಾಗಿದ್ದಾರೆ ಟಿಕೆಟ್ ಮಾರಬಹುದು, ಪಾಪ್ ಕಾರ್ನ್ ಅಲ್ಲ ಎಂದು ಕೆಲವರು ಟ್ರೋಲ್ ಮಾಡಿದ್ದಾರೆ. ಈ ವಿಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಅಲ್ಲದೇ ಕೆಲವರು ಇನ್ನೂ ಕೆಟ್ಟದ್ದಾಗಿ ಕಾಮೆಂಟ್ ಕೂಡ ಮಾಡಿದ್ದರು.
ಇದು ಹೆಲನ್ ಸಿನಿಮಾದ ರಿಮೇಕ್ ಚಿತ್ರವಾಗಿದ್ದು, ಇದೀಗ ಹಿಂದಿಯಲ್ಲಿ ರಿಮೇಕ್ ಆಗಿದೆ. ಈ ಸಿನಿಮಾವನ್ನು ಜಾನ್ವಿ ತಂದೆ ಬೋನಿ ಕಪೂರ್ (Boney Kapoor) ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಟ್ರೇಲರ್ ರಿಲೀಸ್ ಮಾಡಿದ್ದು, ಒಳ್ಳೆಯ ಮಾತುಗಳು ಕೂಡ ಕೇಳಿ ಬಂದಿವೆ. ಸನ್ನಿ ಕೌಶಲ್ಯ ಹಾಗೂ ಮನೋಜ್ ಪಾಹ್ವಾ ಸೇರಿದಂತೆ ಹಲವರು ಈ ಸಿನಿಮಾದ ತಾರಾಗಣದಲ್ಲಿ ಇದ್ದಾರೆ.
Live Tv
[brid partner=56869869 player=32851 video=960834 autoplay=true]
ಮುಂಬೈ: ಬಾಲಿವುಡ್ ಖ್ಯಾತ ನಿರ್ಮಾಪಕ ಮತ್ತು ಉದ್ಯಮಿ ಬೋನಿ ಕಪೂರ್ ಅವರ ಕ್ರೆಡಿಟ್ ಕಾರ್ಡ್ ನಕಲು ಮಾಡಿ ಅಪರಿಚಿತ ವ್ಯಕ್ತಿಯೊಬ್ಬ 3.82 ಲಕ್ಷ ರೂ. ವಂಚಿಸಿದ್ದಾನೆ.
ಆರೋಪಿಯ ವಿರುದ್ಧ ಐಪಿಸಿ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಬುಧವಾರ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಕಪೂರ್ ಆಪ್ತರೊಬ್ಬರು ದೂರು ದಾಖಸಿದ್ದಾರೆ. ದೂರಿನಲ್ಲಿ ಬೋನಿ ಕಪೂರ್ ಅವರ ಕ್ರೆಡಿಟ್ ಕಾರ್ಡ್ ನಕಲು ಮಾಡಲಾಗಿದೆ ಎಂದು ವಿವರಿಸಲಾಗಿದೆ.
ದೂರಿನಲ್ಲಿ ಏನಿದೆ?
ಈ ದೂರಿನಲ್ಲಿ, ಅಪರಿಚಿತ ವ್ಯಕ್ತಿ ಫೆಬ್ರವರಿ 9 ರಂದು ಕಪೂರ್ ಅವರ ವಿವರಗಳು ಮತ್ತು ಪಾಸ್‍ವರ್ಡ್ ಪಡೆಯುವ ಮೂಲಕ ಐದು ಬಾರಿ ಆನ್‍ಲೈನ್ ವಹಿವಾಟುಗಳನ್ನು ನಡೆಸಲು ಕ್ರೆಡಿಟ್ ಕಾರ್ಡ್ ಬಳಸಿದ್ದಾನೆ. ಮಾರ್ಚ್ 30 ರಂದು ತಮ್ಮ ಬ್ಯಾಂಕ್ ಕಾರ್ಯ ನಿರ್ವಾಹಕರು ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಗೆ ಕರೆ ಮಾಡಿದಾಗ ಕಪೂರ್ ಅವರಿಗೆ ವಂಚನೆಯ ಬಗ್ಗೆ ತಿಳಿದುಬಂದಿದೆ ಎಂದು ದೂರುದಾರರು ಪೊಲೀಸರಿಗೆ ತಿಳಿಸಿದ್ದಾರೆ. ಇದನ್ನೂ ಓದಿ: ರೋಮಿಯೋನ ಭಾವನೆಗಳ ಕಥನ – ಡೈಲಾಗ್‍ನಲ್ಲಿ ಕಾಮಿಡಿ ಹೂರಣ
ಪ್ರಸ್ತುತ ತನಿಖೆ ಆರಂಭವಾಗಿದ್ದು, ಆರೋಪಿಯನ್ನು ಬಂಧಿಸುವ ಪ್ರಯತ್ನ ನಡೆಯುತ್ತಿದೆ ಎಂದು ಅಂಬೋಲಿ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.
ಬಾಲಿವುಡ್ ಅತಿಲೋಕ ಸುಂದರಿ ಶ್ರೀದೇವಿ ಮಗಳು ಜಾಹ್ನವಿ ಕಪೂರ್ ಬ್ಯೂಟಿ ಮತ್ತು ಡ್ರೆಸ್ ಮೂಲಕ ಸಖತ್ ಟ್ರೋಲ್ ಆಗುತ್ತಿರುತ್ತಾರೆ. ‘ಧಡಕ್’ ಸಿನಿಮಾ ಮೂಲಕ ಬಾಲಿವುಡ್‍ಗೆ ಪಾದರ್ಪಣೆ ಮಾಡಿದ ಈ ನಟಿ ಸಿನಿಮಾಗಿಂತ ಹೆಚ್ಚು ಟ್ರೋಲ್ ಮೂಲಕ ಸುದ್ದಿಯಾಗುತ್ತ ಇರುತ್ತಾರೆ. ಬೋಲ್ಡ್ ಫೋಟೋಶೂಟ್ ಮಾಡಿಸುತ್ತಿದ್ದ ಈ ನಟಿ ಈಗ ಸೀರೆಯುಂಟು ಮುದ್ದು-ಮುದ್ದಾಗಿ ಕಾಣಿಸುತ್ತಿದ್ದಾರೆ. ಈ ಪೋಸ್ಟ್ ನೋಡಿದ ಜಾಹ್ನವಿ ಕಪೂರ್ ತಂದೆ ಬೋನಿ ಕಪೂರ್ ಕಾಮೆಂಟ್ ಮಾಡುವ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ.
ಸಿನಿಮಾಗಳಲ್ಲಿ ಸಖತ್ ಚ್ಯೂಸಿಯಾಗಿರುವ ಈ ನಟಿ ಟ್ರಿಪ್ ಮತ್ತು ಮೋಜು, ಮಸ್ತಿಯಲ್ಲಿ ಬ್ಯುಸಿಯಾಗಿದ್ದಾರೆ. ತಮ್ಮ ಬ್ಯೂಟಿಫುಲ್ ಫೋಟೋಗಳನ್ನು ಅಭಿಮಾನಿಗಳೊಂದಿಗೆ ಶೇರ್ ಮಾಡುವ ಈ ನಟಿ ಸೀರೆಯುಂಟು ಸಿಂಪಲ್ ಲುಕ್‍ನಲ್ಲಿ ಎಲ್ಲರ ಮನ ಗೆದ್ದಿದ್ದಾರೆ. ಇನ್‍ಸ್ಟಾನಲ್ಲಿ ಜಾಹ್ನವಿ ಹಸಿರು ಸೀರೆಯುಂಟ ಫೋಟೋ ಶೇರ್ ಮಾಡಿದ್ದಾರೆ. ಇದನ್ನೂ ಓದಿ: ಫಿನ್‍ಲ್ಯಾಂಡ್ ಪ್ರಧಾನಿಯನ್ನು ಭೇಟಿ ಮಾಡಿದ ಮೋದಿ – ಕಾರಣವೇನು?
ಈ ಫೋಟೋಗೆ ಅಭಿಮಾನಿಗಳು ಮಾತ್ರವಲ್ಲ ಸೆಲೆಬ್ರೆಟಿಗಳು ಸಹ ಸಖತ್ ಖುಷ್ ಆಗಿ ಕಾಮೆಂಟ್ ಮಾಡಿದ್ದಾರೆ. ಅದರಲ್ಲಿ ಹೆಚ್ಚು ವಿಶೇಷ ಎನಿಸಿದ್ದು ಬೋನಿ ಕಪೂರ್ ಕಾಮೆಂಟ್. ಅವರು ‘ಅತೀ ಲೋಕಸುಂದರಿ’ ಎಂದು ಕಾಮೆಂಟ್ ಮಾಡಿದ್ದಾರೆ. ಈ ಪದವನ್ನು ಜಾಹ್ನವಿ ಅವರ ಅಮ್ಮ ಶ್ರೀದೇವಿಯನ್ನು ಕರೆಯುತ್ತಿದ್ದರು. ಆದರೆ ಈಗ ಅವರು ಇಲ್ಲ. ಅವರ ಸೌಂದರ್ಯವನ್ನು ಜಾಹ್ನವಿ ಒತ್ತು ಬಂದಿದ್ದಾರೆ ಎಂದು ಹೇಳುವ ವಿಶೇಷ ಪದವನ್ನು ಬೋನಿ ಬಳಸಿದ್ದಾರೆ.
ಪ್ರಸ್ತುತ ಜಾಹ್ನವಿ ‘ಭೇದಿಯಾ’ ಸಿನಿಮಾ ಶೂಟಿಂಗ್ ಮುಗಿದಿದ್ದು, ಬಿಡುಗಡೆಗೆ ಸಿದ್ಧವಾಗಿದೆ. ಪ್ರಸ್ತುತ ಈ ಬ್ಯೂಟಿ ‘ಗುಡ್ ಲಕ್ ಜೆರ್ರೀ’, ‘ದೊಸ್ತಾನಾ 2’ ಹಾಗೂ ‘ಮಿ’ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದನ್ನೂ ಓದಿ: ಆತಂಕದಿಂದ ಲಗೇಜ್ ತೆಗೆದುಕೊಂಡು ಎಲ್ಲಿಗೆ ಓಡಿದರು ಆಲಿಯಾ ಭಟ್