Tag: ಬೋಟ್ ಮುಳುಗಡೆ

  • ಯೆಮೆನ್‌ನಲ್ಲಿ ವಲಸಿಗರಿದ್ದ ಬೋಟ್ ಮುಳುಗಡೆ – 76 ಮಂದಿ ಸಾವು

    ಯೆಮೆನ್‌ನಲ್ಲಿ ವಲಸಿಗರಿದ್ದ ಬೋಟ್ ಮುಳುಗಡೆ – 76 ಮಂದಿ ಸಾವು

    ಸನಾ: ಇಥಿಯೋಪಿಯನ್ ವಲಸಿಗರಿದ್ದ (Ethiopian Migrants) ಬೋಟ್ ಮುಳುಗಡೆಯಾದ (Boat Capsize) ಪರಿಣಾಮ 76 ಮಂದಿ ವಲಸಿಗರು ಸಾವನ್ನಪ್ಪಿದ್ದು, ಅನೇಕರು ನಾಪತ್ತೆಯಾಗಿರುವ ಘಟನೆ ಯೆಮೆನ್ (Yemen) ಕರಾವಳಿಯಲ್ಲಿ ನಡೆದಿದೆ.

    ಯೆಮೆನ್‌ನ ದಕ್ಷಿಣ ಅಬ್ಯಾನ್ (Abyan) ಪ್ರಾಂತ್ಯದ ಕರಾವಳಿಯಲ್ಲಿ ದೋಣಿ ಮುಳುಗಡೆಯಾಗಿದ್ದು, 32 ಮಂದಿಯನ್ನು ರಕ್ಷಿಸಲಾಗಿದೆ. ಘಟನೆಯಲ್ಲಿ 76 ಮಂದಿ ವಲಸಿಗರ ಮೃತದೇಹ ಪತ್ತೆಯಾಗಿದೆ ಎಂದು ಯೆಮೆನ್ ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ. ಒಟ್ಟು 157 ಜನರು ಹಡಗಿನಲ್ಲಿದ್ದರು ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಶಿಬು ಸೊರೇನ್ ಇಡೀ ಜೀವನವನ್ನು ಬುಡಕಟ್ಟು ಸಮುದಾಯದ ಕಲ್ಯಾಣಕ್ಕಾಗಿ ಮೀಸಲಿಟ್ಟಿದ್ದರು: ಮೋದಿ ಸಂತಾಪ

    ಕಡುಬಡತನದಿಂದ ಆಫ್ರಿಕಾದಿಂದ ನೂರಾರು ವಲಸಿಗರು ಗಲ್ಫ್ ಅರಬ್ ರಾಷ್ಟ್ರಕ್ಕೆ ತೆರಳುತ್ತಿದ್ದರು. ಯೆಮೆನ್‌ಗೆ ಅನಧಿಕೃತ ವಲಸಿಗರ ಹರಿವು ಹೆಚ್ಚಾಗುತ್ತಿದೆ ಎಂದು ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ವಲಸೆ ಸಂಘಟನೆ ತಿಳಿಸಿದೆ. ಕಳೆದ ವರ್ಷ ಯೆಮೆನ್‌ಗೆ 60 ಸಾವಿರಕ್ಕೂ ಹೆಚ್ಚು ಮಂದಿ ವಲಸೆ ಹೋಗಿದ್ದರು ಎಂದು ಐಓಎಂ ಮಾಹಿತಿ ನೀಡಿದೆ. ಇದನ್ನೂ ಓದಿ: KRS ಡ್ಯಾಂ ಮೈಸೂರು ರಾಜಮನೆತನದ ತ್ಯಾಗದಿಂದ ನಿರ್ಮಾಣವಾಗಿದೆ – ಮಂತ್ರಾಲಯ ಶ್ರೀ

  • ಅರಬ್ಬಿ ಸಮುದ್ರದಲ್ಲಿ ಬೋಟ್ ಮುಳುಗಡೆ- 8 ಮಂದಿ ಮೀನುಗಾರರ ರಕ್ಷಣೆ

    ಅರಬ್ಬಿ ಸಮುದ್ರದಲ್ಲಿ ಬೋಟ್ ಮುಳುಗಡೆ- 8 ಮಂದಿ ಮೀನುಗಾರರ ರಕ್ಷಣೆ

    ಕಾರವಾರ: ಅರಬ್ಬಿ ಸಮುದ್ರದಲ್ಲಿ ಬೋಟ್ ಒಂದು ಮುಳುಗಡೆಯಾಗಿದ್ದು, 8 ಮಂದಿ ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ.

    ಉತ್ತರ ಕನ್ನಡ ಜಿಲ್ಲೆಯ ಮುರಡೇಶ್ವರ ಸಮೀಪದ ನೇತ್ರಾಣಿ ದ್ವೀಪದ ಬಳಿ ಈ ಘಟನೆ ಸಂಭವಿಸಿದೆ. ಮಂಗಳೂರು ಮೂಲದ ಬೋಟ್ ಇದಾಗಿದ್ದು, ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗಾಗಿ ಬೋಟ್ ತೆರಳಿತ್ತು. ಮೀನುಗಾರಿಕೆಯಿಂದ ಮರಳಿ ಮಂಗಳೂರಿಗೆ ವಾಪಸ್ ಹೋಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

    ನೇತ್ರಾಣಿ ದ್ವೀಪದ ಸಮೀಪ ಬೋಟ್ ಬರುತ್ತಿದ್ದಾಗ ಅಲ್ಲಿ ಕಲ್ಲು ಬಂಡೆಗೆ ಬೋಟ್ ಗುದ್ದಿದೆ. ಪರಿಣಾಮ ಬೋಟಿಗೆ ಹಾನಿಯಾಗಿ, ಸಮುದ್ರದಲ್ಲಿ ಮುಳುಗಿದೆ. ಬೋಟ್ ಮುಳುಗುತ್ತಿದ್ದಂತೆ ಎಚ್ಚೆತ್ತುಕೊಂಡ ಮೀನುಗಾರರು ಬೋಟ್‍ನಿಂದ ನೀರಿಗೆ ಹಾರಿ ದ್ವೀಪದ ದಡ ಸೇರಲು ಮುಂದಾಗಿದ್ದಾರೆ. ಈ ವೇಳೆ ಅವರನ್ನು ಕಂಡ ಸ್ಥಳೀಯ ಮೀನುಗಾರರು ರಕ್ಷಣೆ ಮಾಡಿ ಸಹಾಯ ಮಾಡಿದ್ದಾರೆ.

    ಈ ಬೋಟ್ ಸಮುದ್ರದಲ್ಲಿ ಮುಳುಗುತ್ತಿರುವ ದೃಶ್ಯವನ್ನು ಸ್ಥಳದಲ್ಲಿದ್ದವರು ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ. ಈ ಬೋಟಿನಲ್ಲಿದ್ದ ಮೀನುಗಾರರು ಮೂಲತಃ ತಮಿಳುನಾಡಿನವರು ಎಂಬ ಮಾಹಿತಿ ಲಭ್ಯವಾಗಿದ್ದು, ಸದ್ಯ ಎಲ್ಲಾ ಮೀನುಗಾರರು ಸುರಕ್ಷಿತವಾಗಿದ್ದಾರೆ. ಸ್ಥಳಕ್ಕೆ ಮೀನುಗಾರಿಕಾ ಇಲಾಖೆ ಅಧಿಕಾರಿಗಳು ಬಂದು ಈ ಸಂಬಂಧ ಪರಿಶೀಲನೆ ನಡೆಸಲಿದ್ದಾರೆ ಎನ್ನಲಾಗಿದ್ದು, ಇನ್ನೂ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.