Tag: ಬೋಗಿಗಳು

  • ಮಹಾರಾಷ್ಟ್ರ: ಹಳಿ ತಪ್ಪಿದ 3 ಬೋಗಿಗಳು – 53 ಮಂದಿಗೆ ಗಾಯ

    ಮಹಾರಾಷ್ಟ್ರ: ಹಳಿ ತಪ್ಪಿದ 3 ಬೋಗಿಗಳು – 53 ಮಂದಿಗೆ ಗಾಯ

    ಮುಂಬೈ: ರೈಲಿನ ಮೂರು ಬೋಗಿಗಳು ಹಳಿ ತಪ್ಪಿದ ಪರಿಣಾಮ 50ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ಗೊಂಡಿಯಾ ನಗರದಲ್ಲಿ ನಡೆದಿದೆ.

    ಮಹಾರಾಷ್ಟ್ರದ ಗೊಂಡಿಯಾ ನಗರದಲ್ಲಿ ಬುಧವಾರ ಮುಂಜಾನೆ ಭಗತ್ ಕಿ ಕೋಥಿ ಎಂಬ ಪ್ಯಾಸೆಂಜರ್ ರೈಲು ಸಿಗ್ನಲ್ ಸಿಗದ ಕಾರಣ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದು ರೈಲಿನ ಮೂರು ಬೋಗಿಗಳು ಹಳಿತಪ್ಪಿ 53 ಮಂದಿ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಜಮ್ಮು-ಕಾಶ್ಮೀರ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾಗ್ತಿದ್ದಂತೆಯೇ ಸ್ಥಾನ ತೊರೆದ ಗುಲಾಂ ನಬಿ ಆಜಾದ್

    ಬುಧವಾರ ಮುಂಜಾನೆ 2.30ರ ಸುಮಾರಿಗೆ ಈ ಅಪಘಾತದ ಸಂಭವಿಸಿದ್ದು, ಘಟನೆಯಲ್ಲಿ 53 ಮಂದಿ ಗಾಯಗೊಂಡಿದ್ದರೆ, 13 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ಯಾಸೆಂಜರ್ ರೈಲು ರಾಯ್‍ಪುರದಿಂದ ನಾಗ್ಪುರಕ್ಕೆ ತೆರಳುತ್ತಿತ್ತು. ಇದನ್ನೂ ಓದಿ: 500 ರೂ.ಗಾಗಿ ಸ್ನೇಹಿತನ ಶಿರಚ್ಛೇದ- ತಲೆಯನ್ನು ಪೊಲೀಸ್ ಠಾಣೆಗೆ ತೆಗೆದೊಯ್ದ

    ಇದೀಗ ಗಾಯಗೊಂಡಿರುವ ಪ್ರಯಾಣಿಕರನ್ನು ಗೊಂಡಿಯಾದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಕೆಲವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಎರಡೂ ರೈಲುಗಳು ಒಂದೇ ದಿಕ್ಕಿನಲ್ಲಿ ಅಂದರೆ ನಾಗ್ಪುರ ಕಡೆಗೆ ಹೋಗುತ್ತಿದ್ದ ಕಾರಣ ಅಪಘಾತ ಸಂಭವಿಸಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಸಾವು ಸಂಭವಿಸಿಲ್ಲ.

    Live Tv
    [brid partner=56869869 player=32851 video=960834 autoplay=true]