Tag: ಬೋಗಿ

  • Shivamogga | ಕಳಚಿದ ತಾಳಗುಪ್ಪ – ಮೈಸೂರು ರೈಲು ಬೋಗಿ; ತಪ್ಪಿದ ಭಾರೀ ಅನಾಹುತ

    Shivamogga | ಕಳಚಿದ ತಾಳಗುಪ್ಪ – ಮೈಸೂರು ರೈಲು ಬೋಗಿ; ತಪ್ಪಿದ ಭಾರೀ ಅನಾಹುತ

    – ಮೈಸೂರಿಗೆ 45 ನಿಮಿಷ ತಡವಾಗಿ ತೆರಳಿದ ರೈಲು

    ಶಿವಮೊಗ್ಗ: ಅನ್‌ಕಪ್ಲಿಂಗ್ ಆಗಿ ತಾಳಗುಪ್ಪ – ಮೈಸೂರು ರೈಲಿನ (Talaguppa-Mysuru Train) ಬೋಗಿ ಕಳಚಿ (Coach Derail) ದೊಡ್ಡ ಅನಾಹುತವೊಂದು ತಪ್ಪಿದ ಘಟನೆ ಶಿವಮೊಗ್ಗ (Shivamogga) ರೈಲು ನಿಲ್ದಾಣದ ಬಳಿ ನಡೆದಿದೆ.

    16 ಬೋಗಿಗಳಿದ್ದ ರೈಲು ತಾಳಗುಪ್ಪದಿಂದ ಮೈಸೂರಿಗೆ ಹೊರಟಿತ್ತು. ಈ ವೇಳೆ ಅನ್‌ಕಪ್ಲಿಂಗ್ ಆಗಿ ರೈಲಿನ ಆರು ಬೋಗಿಗಳು ಕಳಚಿದ್ದು, ರೈಲು ತುಂಗಾ ಸೇತುವೆ ಮೇಲೆ ನಿಂತಿದೆ. 45 ನಿಮಿಷಗಳ ನಂತರ ರೈಲ್ವೆ ಸಿಬ್ಬಂದಿ ಅನ್‌ಕಪ್ಲಿಂಗ್ ಸರಿ ಮಾಡಿದ್ದಾರೆ. ಇದನ್ನೂ ಓದಿ: ಕೈಗಾ ಅಣುಸ್ಥಾವರದ ವಿಕಿರಣದಿಂದ ಜನರಲ್ಲಿ ಕ್ಯಾನ್ಸರ್ ಪತ್ತೆಯಾಗಿಲ್ಲ: ಅಣು ವಿದ್ಯುತ್ ಸ್ಥಾವರದ ನಿರ್ದೇಶಕ ಸ್ಪಷ್ಟನೆ

    ರೈಲು ಬೋಗಿ ಕಳಚಿದ ಪರಿಣಾಮ ಪ್ರಯಾಣಿಕರು ಆತಂಕಕ್ಕೊಳಗಾಗಿದ್ದರು. ಬಳಿಕ 45 ನಿಮಿಷ ತಡವಾಗಿ ರೈಲು ಮೈಸೂರಿಗೆ ತೆರಳಿದೆ. ಇದನ್ನೂ ಓದಿ: ಯೂಟ್ಯೂಬರ್‌ಗಳಿಗೆ ಥಳಿತ, ಅಪಪ್ರಚಾರಿಗಳನ್ನು ಬಂಧಿಸಿ – ಸಿಡಿದ ಧರ್ಮಸ್ಥಳದ ಭಕ್ತರು

  • ಮಹಾರಾಷ್ಟ್ರದ ರೈಲಿನ 5 ಬೋಗಿಗಳಲ್ಲಿ ಹಠಾತ್ ಬೆಂಕಿ – ಪ್ರಯಾಣಿಕರು ಸೇಫ್

    ಮಹಾರಾಷ್ಟ್ರದ ರೈಲಿನ 5 ಬೋಗಿಗಳಲ್ಲಿ ಹಠಾತ್ ಬೆಂಕಿ – ಪ್ರಯಾಣಿಕರು ಸೇಫ್

    ಮುಂಬೈ: ನ್ಯೂ ಅಷ್ಟಿಯಿಂದ (New Ashti) ಅಹಮದ್‌ನಗರಕ್ಕೆ (Ahmednagar) ತೆರಳುತ್ತಿದ್ದ ರೈಲಿನ (Train) 5 ಬೋಗಿಗಳಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯ ವರದಿಯಾಗಿಲ್ಲ ಎಂದು ರೈಲ್ವೆ ಅಧಿಕಾರಿಗಳು (Railway Officials) ತಿಳಿಸಿದ್ದಾರೆ.

    ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಘಟನೆ ಸಂಭವಿಸಿದ್ದು, ನಾರಾಯಣೋಹ್ (Narayandoh)ಮತ್ತು ಅಹಮದ್‌ನಗರ ವಿಭಾಗದ ನಡುವೆ ಘಟನೆ ನಡೆದಿದೆ. ಮೊದಲಿಗೆ ಗಾರ್ಡ್ ಸೈಡ್ ಬ್ರೇಕ್ ವ್ಯಾನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬಳಿಕ ನಾಲ್ಕು ಬೋಗಿಗಳಿಗೆ ಬೆಂಕಿ ವ್ಯಾಪಿಸಿದೆ. ಇದನ್ನೂ ಓದಿ: ಕರ್ತವ್ಯದ ವೇಳೆ ಆತ್ಮಹತ್ಯೆ ಮಾಡಿಕೊಂಡರೆ ಅಂತ್ಯಕ್ರಿಯೆಯಲ್ಲಿ ಮಿಲಿಟರಿ ಗೌರವ ಇಲ್ಲ: ಭಾರತೀಯ ಸೇನೆ

    ಘಟನೆ ಕುರಿತು ಮಾಹಿತಿ ಪಡೆದ ಅಗ್ನಿಶಾಮಕ ದಳದವರು ಕೂಡಲೇ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದ್ದಾರೆ. ಅಲ್ಲದೇ ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಬೆಂಕಿ ಹರಡುವ ಮೊದಲು ಎಲ್ಲಾ ರೈಲು ಪ್ರಯಾಣಿಕರು ಸುರಕ್ಷಿತವಾಗಿ ಕೆಳಗಿಳಿದರು ಎಂದು ಕೇಂದ್ರ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ (CPRO) ಡಾ. ಶಿವರಾಜ್ ಮನಸ್ಪುರೆ ತಿಳಿಸಿದ್ದಾರೆ. ಇದನ್ನೂ ಓದಿ: ಮಿಷನ್‌ ಗಗನಯಾನ; ಅ.21 ಕ್ಕೆ ಮೊದಲ ಪರೀಕ್ಷಾರ್ಥ ಉಡಾವಣೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರೈಲು ದುರಂತದ ಬಳಿಕ ಒಡಿಶಾದಲ್ಲಿ ಒಂದಿಲ್ಲೊಂದು ಅವಘಡ – ರೈಲು ಬೋಗಿಯಲ್ಲಿ ಆಕಸ್ಮಿಕ ಬೆಂಕಿ

    ರೈಲು ದುರಂತದ ಬಳಿಕ ಒಡಿಶಾದಲ್ಲಿ ಒಂದಿಲ್ಲೊಂದು ಅವಘಡ – ರೈಲು ಬೋಗಿಯಲ್ಲಿ ಆಕಸ್ಮಿಕ ಬೆಂಕಿ

    ಭುವನೇಶ್ವರ: ಒಡಿಶಾದ (Odisha) ನುವಾಪಾದ (Nuvapada) ಜಿಲ್ಲೆಯಲ್ಲಿ ಗುರುವಾರ ರೈಲಿನ ಹವಾನಿಯಂತ್ರಿತ ಬೋಗಿಯಲ್ಲಿ (Coach) ಆಕಸ್ಮಿಕವಾಗಿ ಬೆಂಕಿ (Fire) ಕಾಣಿಸಿಕೊಂಡಿದ್ದು, ಒಂದು ಗಂಟೆಯಲ್ಲಿ ಸಮಸ್ಯೆಯನ್ನು ಬಗೆಹರಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

    ರೈಲಿನ ಬ್ರೇಕ್ ಸ್ಟಕ್ ಆಗಿದ್ದ ಕಾರಣ ಈ ಅವಘಡ ಸಂಭವಿಸಿದೆ. ಯಾವುದೇ ಪ್ರಾಣಹಾನಿ ಉಂಟಾಗಿಲ್ಲ. ರೈಲಿನ ಬ್ರೇಕ್‌ಪಾಡ್‌ಗಳ (Brake Pad) ಸಮಸ್ಯೆಯಿಂದಾಗಿ ಬೆಂಕಿ ಕಾಣಿಸಿಕೊಂಡಿದೆ. ಘಟನೆಯಿಂದಾಗಿ ಪ್ರಯಾಣಿಕರು ಭಯಭೀತರಾಗಿ ರೈಲಿನಿಂದ ಹೊರಬಂದಿದ್ದಾರೆ. ಇದನ್ನೂ ಓದಿ: ದಲಿತರ ಪ್ರವೇಶಕ್ಕೆ ನೋ ಎಂದ ಜನ – ದೇವಸ್ಥಾನಕ್ಕೆ ಬೀಗ ಜಡಿದ ತಹಶಿಲ್ದಾರ್

    ಗುರುವಾರ ಸಂಜೆ ದುರ್ಗ್- ಪುರಿ ಎಕ್ಸ್‌ಪ್ರೆಸ್‌ (Durg-Puri Express) ರೈಲು ಖರಿಯಾರ್ ರೋಡ್ ನಿಲ್ದಾಣವನ್ನು ತಲಪುತ್ತಿದ್ದಂತೆ ರೈಲಿನ ಬಿ3 ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದರಿಂದ ಜನರಲ್ಲಿ ಭಯವುಂಟಾಗಿದೆ ಎಂದು ಪೂರ್ವ ಕರಾವಳಿ ರೈಲ್ವೆ ತಿಳಿಸಿದೆ. ಒಂದು ಗಂಟೆಯಲ್ಲಿ ಸಮಸ್ಯೆಯನ್ನು ಬಗೆಹರಿಸಲಾಗಿದ್ದು, ರಾತ್ರಿ 11 ಗಂಟೆಯ ವೇಳೆಗೆ ಮತ್ತೆ ರೈಲು ಸಂಚಾರ ಪ್ರಾರಂಭವಾಗಿದೆ. ಇದನ್ನೂ ಓದಿ: ಮುಂಬೈನಲ್ಲಿ ಡೆಡ್ಲಿ ಮರ್ಡರ್ – ಗೆಳತಿಯನ್ನು ಕೊಂದು ಕುಕ್ಕರ್‌ನಲ್ಲಿ ಕುದಿಸಿದ ಪ್ರಿಯತಮ

  • ರೈಲಿಗೆ ಬೆಂಕಿ – ಬೋಗಿಯನ್ನೇ ತಳ್ಳಿದ ಪ್ರಯಾಣಿಕರ ವೀಡಿಯೋ ವೈರಲ್

    ರೈಲಿಗೆ ಬೆಂಕಿ – ಬೋಗಿಯನ್ನೇ ತಳ್ಳಿದ ಪ್ರಯಾಣಿಕರ ವೀಡಿಯೋ ವೈರಲ್

    ಮೀರತ್: ರೈಲಿಗೆ ಬೆಂಕಿ ಬಿದ್ದ ಹಿನ್ನೆಲೆಯಲ್ಲಿ ಪ್ರಯಾಣಿಕರು ಬೋಗಿಯನ್ನು ತಳ್ಳಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಉತ್ತರಪ್ರದೇಶದ ಮೀರತ್ ಜಿಲ್ಲೆಯ ದೌರಾಲಾ ರೈಲ್ವೆ ಸ್ಟೇಶನ್‍ನಲ್ಲಿ ಬೆಂಕಿ ತಗುಲಿದ್ದ ರೈಲಿನ ಎಂಜಿನ್‍ನಿಂದ ಬೇರ್ಪಡಿಸಲು ಉಳಿದ ಕೋಚ್‍ಗಳನ್ನು ತಳ್ಳಿದ್ದಾರೆ.

    ದೆಹಲಿಯಿಂದ ಸಹರಾನ್‍ಪುರಕ್ಕೆ ರೈಲು ಚಲಿಸುತ್ತಿತ್ತು. ಈ ವೇಳೆ ಉತ್ತರಪ್ರದೇಶದ ಮೀರತ್ ಜಿಲ್ಲೆಯ ದೌರಾಲಾ ರೈಲ್ವೆ ಸ್ಟೇಶನ್‍ನಲ್ಲಿ ಇಂಜಿನ್ ಹಾಗೂ ಎರಡು ಬೋಗಿಗಳಿಗೆ ಬೆಂಕಿ ತಗಲಿತ್ತು. ಇದರಿಂದ ಬೇರೆ ಬೋಗಿಗಳಿಗೂ ಬೆಂಕಿ ಹತ್ತಿಕೊಳ್ಳುವ ಸಾಧ್ಯತೆಯಿತ್ತು.

    ಬೆಂಕಿ ಹೊತ್ತಿಕೊಂಡಿದ್ದ ಇಂಜಿನ್ ಮತ್ತು ಎರಡು ಬೋಗಿಗಳನ್ನು ಉಳಿದ ಕೋಚ್‍ಗಳಿಂದ ಬೇರ್ಪಡಿಸಲು ಪ್ರಯಾಣಿಕರೆಲ್ಲರೂ ಸೇರಿ ರೈಲನ್ನು ತಳ್ಳಿದರು. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಆದರೆ ಬೆಂಕಿ ಅನಾಹುತಕ್ಕೆ ಕಾರಣವೇನು ಎಂಬುದು ಈವರೆಗೆ ತಿಳಿದುಬಂದಿಲ್ಲ. ಇದನ್ನೂ ಓದಿ: ಮಗನಿಗಾಗಿ 1,400 ಕಿ.ಮೀ ಸ್ಕೂಟರ್ ಓಡಿಸಿದ್ದ ತಾಯಿಗೆ ಟೆನ್ಶನ್ – ಮೋದಿಗೆ ಪತ್ರ

    ರೈಲ್ವೆಯ ಟ್ರಾಫಿಕ್ ಇನ್ಸ್‍ಪೆಕ್ಟರ್ ವೈಕೆ ಝಾ ಮಾತನಾಡಿ, ಘಟನೆಯಲ್ಲಿ ಯಾವುದೇ ಸಾವು, ನೋವುಗಳು ಆಗಿಲ್ಲ. ನಾಲ್ಕನೇ ಮೋಟಾರು ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಇದರಿಂದಾಗಿ ರೈಲನ್ನು ನಿಲ್ಲಿಸಿದ ನಂತರ ಉಳಿದ ಕೋಚ್‍ಗಳನ್ನು ಪ್ರತ್ಯೇಕಿಸಲಾಗಿದೆ. ಪ್ರಯಾಣಿಕರನ್ನು ಮುಂದಿನ ರೈಲಿನಲ್ಲಿ ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಕಾಂಗ್ರೆಸ್ ಮುಖಂಡನ ಮಗನ ಮದುವೆಯ ಊಟ ಸೇವಿಸಿ 1,200 ಮಂದಿ ಅಸ್ವಸ್ಥ

  • ಬೋಗಿಯ ಕೆಳಗಡೆ ಜೋಡಿಯ ಡೇಟಿಂಗ್

    ಬೋಗಿಯ ಕೆಳಗಡೆ ಜೋಡಿಯ ಡೇಟಿಂಗ್

    – ಖಡಕ್ ವಾರ್ನಿಂಗ್ ನೀಡಿದ ರೈಲ್ವೇ ಇಲಾಖೆ

    ನವದೆಹಲಿ: ಕೆಲವೊಮ್ಮೆ ಈ ರೀತಿಯ ಘಟನೆಗಳು ನಡೆಯುತ್ತಾ ಎಂಬ ಸಂಶಯ ಹುಟ್ಟಿಕೊಳ್ಳುತ್ತದೆ. ಭಾರತೀಯ ರೈಲ್ವೇ ಇಲಾಖೆ ಮಂಗಳವಾರ ತನ್ನ ಟ್ವಿಟ್ಟರ್ ಖಾತೆಯಲ್ಲಿ ಫೋಟೋವೊಂದನ್ನು ಅಪ್ಲೋಡ್ ಮಾಡಿಕೊಂಡಿತ್ತು. ಈ ಫೋಟೋದಲ್ಲಿ ಜೋಡಿಯೊಂದು ಗೂಡ್ಸ್ ರೈಲಿನ ಬೋಗಿ (ವ್ಯಾಗನ್) ಕೆಳಗೆ ಕುಳಿತಿದ್ದಾರೆ. ಫೋಟೋವನ್ನು ಟ್ವೀಟ್ ಮಾಡಿಕೊಂಡಿರುವ ರೈಲ್ವೇ ಇಲಾಖೆ ಜೋಡಿಗೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ.

    ರೈಲಿನ ಟ್ರ್ಯಾಕ್ ಮೇಲೆ ಈ ರೀತಿ ಕುಳಿತುಕೊಳ್ಳುವುದು ಅಪಾಯಕಾರಕ ಮತ್ತು ಶಿಕ್ಷಾರ್ಹ. ರೈಲುಗಳ ನಿಂತಾಗ ಬೋಗಿಯ ಕೆಳಗೆ ಕುಳಿತುಕೊಳ್ಳಲು ಪ್ರಯತ್ನಿಸಬೇಡಿ. ರೈಲು ಯಾವುದೇ ಸುಳಿವು ನೀಡದೇ ಚಲಿಸಲು ಆರಂಭಿಸಿದ್ರೆ ನಿಮ್ಮ ಜೀವಕ್ಕೆ ಅಪಾಯ. ನಿಗದಿತ ಸ್ಥಳದಲ್ಲಿಯೇ ರೈಲು ಹಳಿಗಳನ್ನು ಕ್ರಾಸ್ ಮಾಡಿ ಎಂದು ರೈಲ್ವೇ ಇಲಾಖೆಯಲ್ಲಿ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದೆ.

    ಕೆಲ ಪ್ರೇಮಿಗಳು ಜನಸಂದಣಿ ಇಲ್ಲದ ಸ್ಥಳಗಳನ್ನು ತಮ್ಮ ಏಕಾಂತಕ್ಕಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಕುಟುಂಬದ ಸದಸ್ಯರು ಆಗಮಿಸಿದ ಸ್ಥಳಗಳತ್ತ ಮುಖ ಮಾಡುತ್ತಾರೆ. ಈ ಜೋಡಿ ರೈಲಿನ ಬೋಗಿಯ ಕೆಳಗೆ ಕುಳಿತು ತಮ್ಮ ಜೀವಕ್ಕೆ ಅಪಾಯ ತಂದುಕೊಂಡಿತ್ತು. ಈ ಜೋಡಿ ಯಾರು ಮತ್ತು ಫೋಟೋ ಯಾವ ಸ್ಥಳದಲ್ಲಿ ಸೆರೆ ಹಿಡಿಯಲಾಗಿದೆ ಎಂಬುದರ ಮಾಹಿತಿ ಲಭ್ಯವಾಗಿಲ್ಲ.

  • ಭುವನೇಶ್ವರ ಬೌಂಡ್ ರಾಜಧಾನಿ  ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬೆಂಕಿ – ಸುಟ್ಟು ಕರಕಲಾದ ಬೋಗಿ

    ಭುವನೇಶ್ವರ ಬೌಂಡ್ ರಾಜಧಾನಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬೆಂಕಿ – ಸುಟ್ಟು ಕರಕಲಾದ ಬೋಗಿ

    ನವದೆಹಲಿ: ಭುವನೇಶ್ವರ ಬೌಂಡ್ ರಾಜಧಾನಿ ಎಕ್ಸ್‌ಪ್ರೆಸ್‌ನಲ್ಲಿ ಇಂದು ಮಧ್ಯಾಹ್ನ 1 ಗಂಟೆ ಸಮಯದಲ್ಲಿ ಬೆಂಕಿ ಕಾಣಿಸಿಕೊಂಡು ಒಂದು ಬೋಗಿ ಸಂಪೂರ್ಣ ಸುಟ್ಟು ಕರಕಲಾಗಿದೆ.

    ಎಂದಿನಂತೆ ರಾಜಧಾನಿ ಎಕ್ಸ್‌ಪ್ರೆಸ್‌ ನವದೆಹಲಿಯಿಂದ ಭುವನೇಶ್ವರ್ ನತ್ತ ಪ್ರಯಾಣ ಬೆಳೆಸಿತ್ತು. ಈ ವೇಳೆ ಮಾರ್ಗ ಮಧ್ಯೆ ಒಡಿಶಾದ ಬಾಲಸೋರ್ ಮತ್ತು ಸೊರೊ ನಿಲ್ದಾಣಗಳ ನಡುವೆ ರೈಲಿಗೆ ವಿದ್ಯುತ್ ಪೂರೈಕೆ ಮಾಡುವ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಆ ಬೋಗಿಯನ್ನು ಅಧಿಕಾರಿಗಳು ರೈಲಿನಿಂದ ಬೇರೆ ಮಾಡಿದ ಕಾರಣ ಉಳಿದ ಯಾವ ಬೋಗಿಗೂ ಬೆಂಕಿ ತಗುಲಿಲ್ಲ. ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

    ಖರಗಪುರದ ಆಗ್ನೇಯ ರೈಲ್ವೆ ವಿಭಾಗದ ಖಂತಪಾಡ ಎಂಬ ಊರಿನಲ್ಲಿ ಈ ಘಟನೆ ನಡೆದಿದೆ. ಈ ರೈಲಿನಲ್ಲಿ ಕೇವಲ ಒಂದು ವಿದ್ಯುತ್ ಪೂರೈಕೆ ಮಾಡುವ ಘಟಕ ಮಾತ್ರ ಇದ್ದು ಆ ಬೋಗಿಯಲ್ಲೇ ಬೆಂಕಿ ಕಾಣಿಸಿಕೊಂಡಿದೆ. ಸುರಕ್ಷತೆಯ ಕ್ರಮವಾಗಿ ವಿದ್ಯುತ್ ಘಟಕದಿಂದ ರೈಲಿಗೆ ನೀಡಲಾದ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ.

    ಈ ಘಟನೆ ತಿಳಿದು ತಕ್ಷಣ ಸ್ಥಳಕ್ಕೆ ಬಂದ ಮೂರು ಅಗ್ನಿಶಾಮಕ ದಳದ ವಾಹನಗಳು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದೆ. ರೈಲು ಬೇರೆ ಜನರೇಟರ್ ಘಟಕದ ಸಹಾಯದಿಂದ 2:59 ಕ್ಕೆ ಖಂತಪಾಡದಿಂದ ಎಲ್ಲಾ ಪ್ರಯಾಣಿಕರೊಂದಿಗೆ ಭುವನೇಶ್ವರ್‍ನತ್ತ ಹೊರಟಿದೆ.

  • ಬೆಂಗ್ಳೂರಿಗರಿಗೆ ಸಿಹಿ ಸುದ್ದಿ- ಆರು ಬೋಗಿಗಳ ಮೆಟ್ರೋ ರೈಲಿಗೆ ಇಂದು ಚಾಲನೆ

    ಬೆಂಗ್ಳೂರಿಗರಿಗೆ ಸಿಹಿ ಸುದ್ದಿ- ಆರು ಬೋಗಿಗಳ ಮೆಟ್ರೋ ರೈಲಿಗೆ ಇಂದು ಚಾಲನೆ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿನ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ. ಬೈಯಪ್ಪನಹಳ್ಳಿ ಮತ್ತು ಮೈಸೂರು ರಸ್ತೆ ನಡುವೆ 6 ಬೋಗಿಗಳ ಹೊಸ ರೈಲು ಇಂದಿನಿಂದ ಸಂಚಾರ ಆರಂಭಿಸಲಿದೆ.

    ನೇರಳೆ ಮಾರ್ಗದಲ್ಲಿ ಓಡಾಡೋ ಮೂರು ಬೋಗಿಗಳ ರೈಲಿಗೆ ಹೊಸದಾಗಿ ಖರೀದಿಸಿರೋ ಮೂರು ಬೋಗಿಗಳನ್ನು ಜೋಡಿಸಲಾಗಿದೆ. ಇಂದು ಸಂಜೆ 5.30ಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಚಾಲನೆ ಕೊಡ್ತಾರೆ.

    ಉದ್ಘಾಟನೆ ಹಿನ್ನೆಲೆಯಲ್ಲಿ ಈ ರೈಲು ಮೆಜೆಸ್ಟಿಕ್‍ವರೆಗೆ ಪ್ರಯಾಣ ಬೆಳೆಸಲಿದ್ದು, ಅದರಲ್ಲೇ ಕುಮಾರಸ್ವಾಮಿ ವಿಧಾನಸೌಧದವರೆಗೂ ಹೋಗ್ತಾರೆ. ರೈಲಿನ ಮೊದಲ ಬೋಗಿಯನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ.

    ಸಾರಿಗೆ ಸಾಮರ್ಥ್ಯ  ಹೆಚ್ಚಳ ಹಿನ್ನೆಲೆ, ಮೆಟ್ರೋ ರೈಲಿಗೆ ಹೆಚ್ಚುವರಿ 6 ಬೋಗಿ ಅಳವಡಿಕೆ ಮಾಡಲಾಗಿದೆ.

  • ಪಾಟ್ನಾದಲ್ಲಿ ಧಗಧಗನೆ ಹೊತ್ತಿ ಉರಿದ ರೈಲು

    ಪಾಟ್ನಾದಲ್ಲಿ ಧಗಧಗನೆ ಹೊತ್ತಿ ಉರಿದ ರೈಲು

    ಪಾಟ್ನಾ: ಪಾಟ್ನಾ-ಮೊಕಾಮಾ ನಡುವಿನ ಮೆಮು ರೈಲಿನಲ್ಲಿ ಅವಘಢ ಸಂಭವಿಸಿದೆ. ರೈಲು ನಿಲ್ಲಿಸಿದ್ದ ಜಾಗದಲ್ಲೇ ಬೆಂಕಿ ಹೊತ್ತು ಉರಿದಿದೆ.

    ಪಾಟ್ನಾ-ಮೊಕಾಮಾ ರೈಲು ಮಂಗಳವಾರ ರಾತ್ರಿ 11 ಗಂಟೆಗೆ ಮೊಕಾಮಾ ಸ್ಟೇಷನ್ ತಲುಪಿತ್ತು. ಬುಧವಾರ ಮಧ್ಯರಾತ್ರಿ 1 ಗಂಟೆಗೆ 2 ಬೋಗಿಗಳಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿತ್ತು. ಆ ಬೋಗಿಯ ಬೆಂಕಿ ಆರಿಸುವಾಗ ಇನ್ನೂ 2 ಬೋಗಿಗಳಿಗೆ ಬೆಂಕಿ ಹತ್ತಿಕೊಂಡಿತು ಎಂದು ಸಿಪಿಆರ್‍ಒ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

    ಸಮಯಕ್ಕೆ ಸರಿಯಾಗಿ ಬೆಂಕಿ ನಂದಿಸಿದ್ದು, ಯಾವುದೇ ಪ್ರಾಣಪಾಯ ಸಂಭವಿಸಿಲ್ಲ ಎಂದು ತಿಳಿಸಿದ್ದಾರೆ. ಆದ್ರೆ ರೈಲಿನಲ್ಲಿ ಬೆಂಕಿ ಹತ್ತಿಕೊಳ್ಳಲು ನಿಖರ ಕಾರಣ ತಿಳಿದು ಬಂದಿಲ್ಲ.