Tag: ಬೊಲೆರೋ

  • ರೋಡ್ ಹಂಪ್ಸ್ ಕಾಣದೇ 2 ಲಾರಿ, ಬೊಲೆರೋ ನಡುವೆ ಭೀಕರ ಅಪಘಾತ – ಮೂವರು ಗಂಭೀರ

    ರೋಡ್ ಹಂಪ್ಸ್ ಕಾಣದೇ 2 ಲಾರಿ, ಬೊಲೆರೋ ನಡುವೆ ಭೀಕರ ಅಪಘಾತ – ಮೂವರು ಗಂಭೀರ

    ಆನೇಕಲ್: ರಸ್ತೆಯಲ್ಲಿರುವ ಹಂಪ್ಸ್ (Road Humps) ಕಾಣದೇ ಎರಡು ಲಾರಿ (Lorry) ಹಾಗೂ ಬೊಲೆರೋ (Bolero) ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಮೂವರು ಗಂಭೀರ ಗಾಯಗೊಂಡಿರುವ ಘಟನೆ ಬೆಂಗಳೂರು-ಚೆನೈ ರಾಷ್ಟ್ರೀಯ ಹೆದ್ದಾರಿಯ ಬೊಮ್ಮಸಂದ್ರ (Bommasandra) ಸಮೀಪದ ಹೆನ್ನಾಗರ ಗೇಟ್ (Hennagara Gate) ಬಳಿ ನಡೆದಿದೆ.

    ಹಂಪ್ಸ್ ಕಾಣದೆ ಮುಂಬದಿ ಹೋಗುತ್ತಿದ್ದ ಲಾರಿಗೆ ಬೊಲೆರೋ ವಾಹನ ಡಿಕ್ಕಿ ಹೊಡೆದಿದೆ. ಇದೇ ವೇಳೆ ಬೊಲೆರೋ ವಾಹನಕ್ಕೆ ಹಿಂಬದಿಯಿಂದ ಮತ್ತೊಂದು ಲಾರಿ ಡಿಕ್ಕಿ ಹೊಡೆದಿದ್ದು, ಎರಡು ಲಾರಿಗಳ ಮಧ್ಯೆ ಬೊಲೆರೋ ವಾಹನ ಸಿಲುಕಿ ಭೀಕರ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಬೊಲೆರೋ ವಾಹನದಲ್ಲಿದ್ದ ಮುಷ್ತಾಕ್ (37), ಸಾಧಿಕ್ (45) ಹಾಗೂ ಮುದಾಸಿರ್ (30) ಗಂಭೀರ ಗಾಯಗೊಂಡಿದ್ದಾರೆ. ಇನ್ನುಳಿದಂತೆ ಲಾರಿಯಲ್ಲಿದ್ದ ಮೂರ್ನಾಲ್ಕು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇದನ್ನೂ ಓದಿ: ಧರ್ಮಸ್ಥಳ ಫೈಲ್ಸ್; ಪ್ರಮುಖ ಘಟ್ಟ ತಲುಪಿದ ತನಿಖೆ – ಇಂದು ಮತ್ತಷ್ಟು ಜಾಗಗಳ ಗುರುತು

    ಘಟನಾ ಸ್ಥಳಕ್ಕೆ ಎಲೆಕ್ಟ್ರಾನಿಕ್ ಸಿಟಿ ಅಗ್ನಿಶಾಮಕ ತಂಡ ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆ ನಡೆಸಿದೆ. ಬೊಲೆರೋ ವಾಹನದಲ್ಲಿದ್ದ ಗಾಯಾಳುಗಳನ್ನ ಹೊರತೆಗೆಯಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸಪಟ್ಟಿದ್ದಾರೆ. ಸೂರ್ಯಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಅಕ್ರಮ ಸಂಬಂಧ; ಟಾಪ್‌-20 ನಗರಗಳ ಪಟ್ಟಿ ರಿಲೀಸ್‌; ಬೆಂಗಳೂರಿಗೆ ಎಷ್ಟನೇ ಸ್ಥಾನ? – ನಂ.1 ನಗರ ಯಾವುದು?

  • ಉತ್ತರಾಖಂಡ | 150 ಅಡಿ ಆಳದ ಕಂದಕಕ್ಕೆ ಬಿದ್ದ ಬೊಲೆರೋ – 8 ಮಂದಿ ದುರ್ಮರಣ, ಐವರು ಗಂಭೀರ

    ಉತ್ತರಾಖಂಡ | 150 ಅಡಿ ಆಳದ ಕಂದಕಕ್ಕೆ ಬಿದ್ದ ಬೊಲೆರೋ – 8 ಮಂದಿ ದುರ್ಮರಣ, ಐವರು ಗಂಭೀರ

    ಡೆಹ್ರಾಡೂನ್: ಬೊಲೆರೋ ವಾಹನವೊಂದು 150 ಮೀಟರ್ ಆಳದ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ 8 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, ಐವರು ಗಂಭೀರ ಗಾಯಗೊಂಡ ಘಟನೆ ಉತ್ತರಾಖಂಡದ (Uttarakhand) ಪಿಥೋರಗಢ ( Pithoragarh) ಜಿಲ್ಲೆಯ ಸುನಿ ಸೇತುವೆ (Suni Bridge) ಬಳಿ ನಡೆದಿದೆ.

    13 ಪ್ರಯಾಣಿಕರಿದ್ದ ಬೊಲೆರೋ ವಾಹನವು ಸುತಿ ಸೇತುವೆ ಕಂದಕಕ್ಕೆ ಉರುಳಿದೆ. ಅಪಘಾತದ ಭೀಕರತೆಗೆ ಬೊಲೆರೋ ಸಂಪೂರ್ಣ ನಜ್ಜುಗುಜ್ಜಾಗಿದ್ದು, 8 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ರಕ್ಷಣಾ ತಂಡಗಳು ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಇದನ್ನೂ ಓದಿ: ಗಂಡನನ್ನು ಕೊಲ್ಲದಿದ್ರೆ ಆತ್ಮಹತ್ಯೆ ಮಾಡ್ಕೋತಿನಿ – ಪ್ರಿಯಕರನನ್ನು ಬ್ಲ್ಯಾಕ್‍ಮೇಲ್ ಮಾಡಿ ಕೊಲೆ ಮಾಡಿಸಿದ್ದ ಲೇಡಿ ಅಂದರ್

    ಅಪಘಾತದಲ್ಲಿ ಮೃತಪಟ್ಟವರಿಗೆ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಸಂತಾಪ ಸೂಚಿಸಿದ್ದಾರೆ. ಅಪಘಾತಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಅಲ್ಲದೇ ಮೃತರ ಗುರುತು ಸಹ ಪತ್ತೆಯಾಗಿಲ್ಲ. ಈ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • ಯಶವಂತಪುರ ಫ್ಲೈಓವರ್ ಮೇಲೆ ಟಯರ್ ಬ್ಲಾಸ್ಟ್‌ – ಗೆಣಸು ತುಂಬಿದ್ದ ಬೊಲೆರೋ ಪಲ್ಟಿ

    ಯಶವಂತಪುರ ಫ್ಲೈಓವರ್ ಮೇಲೆ ಟಯರ್ ಬ್ಲಾಸ್ಟ್‌ – ಗೆಣಸು ತುಂಬಿದ್ದ ಬೊಲೆರೋ ಪಲ್ಟಿ

    – ಮೂವರಿಗೆ ಗಾಯ, ಭಾರೀ ಟ್ರಾಫಿಕ್ ಜಾಮ್

    ಬೆಂಗಳೂರು: ಟಯರ್ ಬ್ಲಾಸ್ಟ್‌ಗೊಂಡು (Tyre Blast) ಗೆಣಸು ತುಂಬಿದ್ದ ಬೊಲೆರೋ (Bolero) ಪಲ್ಟಿಯಾದ ಘಟನೆ ಬೆಂಗಳೂರಿನ ಯಶವಂತಪುರ ಫ್ಲೈಓವರ್ (Yeshwanthpur Flyover) ಮೇಲೆ ನಡೆದಿದೆ.

    ಇಂದು ಮುಂಜಾನೆ 5:30ರ ಸುಮಾರಿಗೆ ಘಟನೆ ನಡೆದಿದೆ. ಬೊಲೆರೋ ವಾಹನ ಹುಬ್ಬಳಿಯಿಂದ ತಮಿಳುನಾಡಿನ ಕೃಷ್ಣಗಿರಿಗೆ ಗೆಣಸು ತುಂಬಿಕೊಂಡು ಹೋಗುತ್ತಿದ್ದ ಸಂದರ್ಭ ಘಟನೆ ಸಂಭವಿಸಿದೆ. ಟಯರ್ ಬ್ಲಾಸ್ಟ್‌ಗೊಂಡ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾಗಿದೆ. ಅಪಘಾತದ ಪರಿಣಾಮ ರಸ್ತೆ ತುಂಬೆಲ್ಲಾ ಗೆಣಸು ತುಂಬಿದ್ದ ಚೀಲಗಳು ಹರಡಿದೆ. ಇದನ್ನೂ ಓದಿ: ಸಿ.ಟಿ ರವಿ ಹರಕು ಬಾಯಿ ಮನುಷ್ಯ – ಪ್ರಿಯಾಂಕ್‌ ಖರ್ಗೆ ಸಿಡಿಮಿಡಿ

    ಘಟನೆಯಲ್ಲಿ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಗಾಯಾಳುಗಳನ್ನು ಸ್ಥಳಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಪರಿಣಾಮ ಸ್ಥಳದಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನಗಳು ನಿಧಾನಗತಿಯಲ್ಲಿ ಸಾಗುತ್ತಿವೆ. ಕಳೆದ ನಾಲ್ಕೈದು ತಿಂಗಳ ಅಂತರದಲ್ಲಿ ಫ್ಲೈಓವರ್‌ ಮೇಲೆ ನಡೆದ ಮೂರನೇ ಅಪಘಾತ ಇದಾಗಿದೆ. ಯಶವಂತಪುರ ಸಂಚಾರಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಇದನ್ನೂ ಓದಿ: ಮರ ಕತ್ತರಿಸುವ ಯಂತ್ರದಿಂದ ಮನೆಯಲ್ಲಿ ಮಲಗಿದ್ದ ವ್ಯಕ್ತಿಯ ಬರ್ಬರ ಹತ್ಯೆ – ಅಪರಿಚಿತನಿಂದ ಕೃತ್ಯ

  • ಬೈಕ್‌ಗೆ ಬೊಲೆರೋ ಕಾರು ಡಿಕ್ಕಿ – ಭೀಕರ ಅಪಘಾತದಲ್ಲಿ ಮಹಿಳೆ ಸಾವು

    ಬೈಕ್‌ಗೆ ಬೊಲೆರೋ ಕಾರು ಡಿಕ್ಕಿ – ಭೀಕರ ಅಪಘಾತದಲ್ಲಿ ಮಹಿಳೆ ಸಾವು

    ಚಿಕ್ಕಬಳ್ಳಾಪುರ: ಬೊಲೆರೋ (Bolero) ವಾಹನವೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದು ಹಲವರಿಗೆ ಗಂಭೀರ ಗಾಯಗಳಾಗಿರುವ ಘಟನೆ ಕೆಂಚಾರ್ಲಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯ ದಂಡುಪಾಳ್ಯ ಗೇಟ್ ಬಳಿ ಸಂಭವಿಸಿದೆ.

    ಬೊಲೆರೋ ವಾಹನದಲ್ಲಿ ಮದನಪಲ್ಲಿ ಕಡೆಯಿಂದ ಆಂಧ್ರ ಪ್ರದೇಶದ ಕದರಿ ಮೂಲದವರು ವಿಜಯಪುರ (Vijayapura) ಕಡೆಗೆ ಹೋಗುತ್ತಿದ್ದು, ದ್ವಿಚಕ್ರ ವಾಹನದಲ್ಲಿ ಆಯಾಜ್(33ವರ್ಷ) ಹಾಗೂ ತನ್ನ ಹೆಂಡತಿ ತರನ್ನುಂ (22ವರ್ಷ) ಇಬ್ಬರು ಬೇತಮಂಗಲ ಕಡೆ ಹೋಗುತ್ತಿದ್ದು, ಬೊಲೆರೋ ವಾಹನ ಚಾಲಕ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಹೆಂಡತಿ ತರನ್ನುಂ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಇದನ್ನೂ ಓದಿ: Chikkamagaluru | 17 ಕುಟುಂಬಗಳಿಗೆ ಗುಡ್ಡ ಕುಸಿತದ ಆತಂಕ – ಸ್ಥಳಾಂತರಕ್ಕೆ ಡೆಡ್‌ಲೈನ್ ಕೊಟ್ಟ ಗ್ರಾಮಸ್ಥರು

    ಇನ್ನೂ ಗಂಡ ಆಯಾಜ್‌ಗೆ ಗಂಭೀರ ಗಾಯಗಳಾಗಿದ್ದು ಬೊಲೆರೋ ವಾಹನದಲ್ಲಿ ಇದ್ದ ಕದರಿ ಮೂಲದ ಅದಲ್ಲಪ್ಪ ಬೀದಿಯ ಫಕ್ರುದ್ದೀನ್, ಆಜದ್, ಜಬೀನ, ಹಮೀದ್, ಶೋಯಿಬ್, ಸಲೀಮಾ, ಶಕೀರಾ, ಶಬ್ನಂಗೆ ಸಣ್ಣಪುಟ್ಟ ಗಾಯಗಳಾಗಿದ್ದು ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.

    ಗಂಭೀರ ಗಾಯಗೊಂಡಿರುವ ಅಯಾಜ್‌ನನ್ನ ಕೋಲಾರ ಆಸ್ಪತ್ರೆಗೆ ರವಾನಿಸಲಾಗಿದೆ. ಕೆಂಚಾರ್ಲಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಉಪಚುನಾವಣೆಗಾಗಿ ಬಿಎಸ್‌ವೈ ಜೊತೆ ಚರ್ಚೆ, ಯಾರಿಗೆ ಟಿಕೆಟ್ ಕೊಟ್ಟರೂ ಗೆಲ್ಲಿಸಲು ತೀರ್ಮಾನ: ಬೊಮ್ಮಾಯಿ

  • ಮರಕ್ಕೆ ಡಿಕ್ಕಿ ಹೊಡೆದ ಬೊಲೆರೋ- ಮದುವೆ ಮುಗಿಸಿ ವಾಪಸ್ಸಾಗ್ತಿದ್ದ 6 ಮಂದಿ ಸಾವು

    ಮರಕ್ಕೆ ಡಿಕ್ಕಿ ಹೊಡೆದ ಬೊಲೆರೋ- ಮದುವೆ ಮುಗಿಸಿ ವಾಪಸ್ಸಾಗ್ತಿದ್ದ 6 ಮಂದಿ ಸಾವು

    ಮೈಸೂರು: ಅರಮನೆ ನಗರಿ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಕಲ್‍ಬೆಟ್ಟ ಬಳಿ ಭೀಕರ ಅಪಘಾತ ಸಂಭವಿಸಿದ್ದು,  6 ಮಂದಿ ದಾರುಣವಾಗಿ ಮೃತಪಟ್ಟಿದ್ದಾರೆ.

    ಮೃತರನ್ನು ಅನಿಲ್ (44), ಸಂತೋಷ್ (42) (ಜೀಪ್ ಚಲಾಯಿಸುತ್ತಿದ್ದವನು), ಬಾಬು (48), ರಾಜೇಶ್ (40), ದಯಾನಂದ್ (42) ಹಾಗೂ ವಿನೀತ್ (37) ಎಂದು ಗುರುತಿಸಲಾಗಿದೆ. ಮೃತರೆಲ್ಲರು ಮಡಿಕೇರಿಯ ಪಾಲಿಬೆಟ್ಟ ನಿವಾಸಿಗಳು. ಮೈಸೂರು – ಹುಣಸೂರು ರಸ್ತೆಯಲ್ಲಿ ಅಪಘಾತ ನಡೆದಿದೆ. ಇದನ್ನೂ ಓದಿ: ಅಮಿತ್‌ ಶಾ ಮನೆ ಕೆಡವಲು ಬುಲ್ಡೋಜರ್‌ ಬಳಸಿ: ರಾಘವ್‌ ಛಡ್ಡಾ

    ಹುಣಸೂರಿನಿಂದ ಸ್ನೇಹಿತನ ಮದುವೆ ಮುಗಿಸಿಕೊಂಡು ಕೊಡಗಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಈ ಅವಘಡ ನಡೆದಿದೆ. ವೇಗವಾಗಿ ಚಲಿಸುತ್ತಿದ್ದ ವಾಹನ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಮೂವರ ಸ್ಥಿತಿ ಗಂಭೀರವಾಗಿದ್ದು, ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

  • ಕಿಕ್‌ ಸ್ಟಾರ್ಟ್‌ ಜೀಪ್‌ ತಯಾರಿಸಿದ ಬಡ ಪ್ರತಿಭೆಗೆ ಬೊಲೆರೋ ಗಿಫ್ಟ್‌ ನೀಡಿದ ಆನಂದ್‌ ಮಹೀಂದ್ರಾ

    ಕಿಕ್‌ ಸ್ಟಾರ್ಟ್‌ ಜೀಪ್‌ ತಯಾರಿಸಿದ ಬಡ ಪ್ರತಿಭೆಗೆ ಬೊಲೆರೋ ಗಿಫ್ಟ್‌ ನೀಡಿದ ಆನಂದ್‌ ಮಹೀಂದ್ರಾ

    ಮುಂಬೈ: ಕಿಕ್-ಸ್ಟಾರ್ಟಿಂಗ್ ಜೀಪ್ ತಯಾರಿಸಿದ ಬಡ ಪ್ರತಿಭೆಗೆ ಆನಂದ್ ಮಹೀಂದ್ರಾ ಬೊಲೆರೋ ಗಿಫ್ಟ್ ನೀಡುವ ಮೂಲಕವಾಗಿ ಮೆಚ್ಚುಗೆಗೆ ಪಾತ್ರವಾಗಿದೆ.

    ಮಹಾರಾಷ್ಟ್ರದ ವ್ಯಕ್ತಿಯೊಬ್ಬರು ತಯಾರಿಸಿದ ಕಿಕ್-ಸ್ಟಾರ್ಟಿಂಗ್  ಜೀಪ್‍ನ ವೀಡಿಯೋ ಹಂಚಿಕೊಂಡು, ಅವರಿಗೆ ಬೊಲೆರೋ ಕಾರು ಗಿಫ್ಟ್ ನೀಡುವುದಾಗಿ ಭರವಸೆ ನೀಡಿದ್ದ ಆನಂದ್ ಮಹೀಂದ್ರಾ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ.

    ಮಹಾರಾಷ್ಟ್ರ ಮೂಲದ ದತ್ತಾತ್ರೇಯ ಲೋಹರ್ ಹಳೆಯ ವಾಹನದ ಬಿಡಿ ಭಾಗಗಳನ್ನ ಬಳಸಿ, ದ್ವಿ-ಚಕ್ರ ವಾಹನ ಸಿದ್ಧಪಡಿಸಿದ್ದರು. ಇದಕ್ಕಾಗಿ 60 ಸಾವಿರ ರೂ. ಖರ್ಚು ಮಾಡಿದ್ದರು. ಇದರ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಶಿವಸೇನಾ ಹಿಂದುತ್ವದ ಹೆಸರಲ್ಲಿ ಚುನಾವಣೆ ಎದುರಿಸಿದ ಮೊದಲ ಪಕ್ಷ: ಸಂಜಯ್ ರಾವತ್

    ನಮ್ಮ ಜನರ ಜಾಣ್ಮೆ ಮತ್ತು ಕನಿಷ್ಠ ಸಂಪನ್ಮೂಲಗಳನ್ನು ಬಳಸಿಕೊಂಡಿರುವ ಈ ಕ್ರೀಯಾಶೀಲತೆಯನ್ನು ನಾನು ಪ್ರಶಂಸಿಸುತ್ತೇನೆ. ಪ್ರೋತ್ಸಾಹಿಸುವುದನ್ನು ಮುಂದುವರಿಸುತ್ತೇನೆ ಎಂದು ಮಹೀಂದ್ರಾ ಕಂಪನಿ ಮುಖ್ಯಸ್ಥ ಆನಂದ್ ಮಹೀಂದ್ರಾ ಅವರು ಟ್ವೀಟ್‌ ಮಾಡಿದ್ದಾರೆ. ಇದರ ಜೊತೆಗೆ ಹಳೆಯ ವಾಹನದ ಬದಲಾಗಿ ಬೊಲೆರೋ ಕಾರನ್ನು ಗಿಫ್ಟ್ ಆಗಿ ನೀಡುವುದಾಗಿ ತಿಳಿಸಿದ್ದರು. ಇದೀಗ ಕೊಟ್ಟ ಮಾತಿನಂತೆ ದತ್ತಾತ್ರೇಯ ಅವರಿಗೆ ಹೊಸ ಕಾರು ನೀಡಿದ್ದಾರೆ. ಇದನ್ನೂ ಓದಿ: ಆಟೋ ಚಾಲಕನಿಂದ ಮಹಿಳೆಗೆ ಕಿರುಕುಳ – ಆರೋಪಿ ಅರೆಸ್ಟ್

    ಪ್ರತಿಭೆಗಳಿಗೆ ಕೊರತೆ ಇಲ್ಲ, ವಿವಿಧ ಕ್ಷೇತ್ರಗಳಲ್ಲಿ ಅಪ್ರತಿಮ ಸಾಧನೆ ತೋರಿರುವ ಅನೇಕ ನಿದರ್ಶನಗಳಿವೆ. ಗ್ರಾಮೀಣ ಪ್ರದೇಶಗಳಲ್ಲೂ ಅನೇಕರು ಎಲೆಮರೆಕಾಯಿಯಂತೆ ವಿಭಿನ್ನ ರೀತಿಯ ಅನ್ವೇಷಣೆ ಮಾಡುತ್ತಿರುತ್ತಾರೆ. ಬಡ ಪ್ರತಿಭೆಗೆ ಇದೀಗ ಮಹೀಂದ್ರಾ ಕಂಪನಿ ಎಂಡಿ ಆನಂದ್ ಮಹೀಂದ್ರಾ ಬೊಲೆರೋ ಕಾರು ಗಿಫ್ಟ್ ನೀಡುವ ಮೂಲಕ ಪ್ರತಿಭೆಯನ್ನು ಪ್ರೋತ್ಸಾಹಿಸಿದ್ದಾರೆ. ಇದನ್ನೂ ಓದಿ: ಪ್ರತಿಪಕ್ಷಗಳು ಮಾಫಿಯಾವನ್ನು ರಕ್ಷಿಸುತ್ತಿದೆ: ಮಾಯಾವತಿ

  • ಬೊಲೆರೋ, ಬೈಕ್ ಅಪಘಾತ – ಸವಾರ ಸ್ಥಳದಲ್ಲೇ ಸಾವು, ಪತ್ನಿ ಗಂಭೀರ

    ಬೊಲೆರೋ, ಬೈಕ್ ಅಪಘಾತ – ಸವಾರ ಸ್ಥಳದಲ್ಲೇ ಸಾವು, ಪತ್ನಿ ಗಂಭೀರ

    ರಾಯಚೂರು: ಬೊಲೆರೋ ಹಾಗೂ ಬೈಕ್ ಡಿಕ್ಕಿಯಾಗಿ 40 ವರ್ಷದ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ನಡೆದಿದೆ.

    ರಂಗ್ರೇಜ್ (40) ಮೃತ ಬೈಕ್ ಸವಾರ. ರಂಗ್ರೇಜ್ ಅತೀ ವೇಗವಾಗಿ ಬಂದ ಹಿನ್ನೆಲೆ ಬೊಲೆರೋಗೆ ಡಿಕ್ಕಿಯಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೈಕ್ ಸವಾರನ ಪತ್ನಿ ಗಂಭೀರವಾಗಿದ್ದು, ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಆಸ್ತಿಗಾಗಿ ತಂದೆ, ತಮ್ಮನಿಂದಲೇ ಅಣ್ಣನ ಕೊಲೆಗೆ ಯತ್ನ

    ಅಪಘಾತದ ಬಳಿಕ ಬೊಲೆರೋ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾರೆ. ಈ ಸಂಬಂಧ ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಚಾಲಕನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಇದನ್ನೂ ಓದಿ: ಬೈಕ್‌ಗೆ ನಕಲಿ ನಂಬರ್ ಪ್ಲೇಟ್ – ವಿಕ್ಕಿ ಕೌಶಲ್ ವಿರುದ್ಧ ಕೇಸ್

  • ಬೈಕಿಗೆ ಬೊಲೆರೋ ಡಿಕ್ಕಿ- ಮೂವರು ಯುವಕರ ದುರ್ಮರಣ

    ಬೈಕಿಗೆ ಬೊಲೆರೋ ಡಿಕ್ಕಿ- ಮೂವರು ಯುವಕರ ದುರ್ಮರಣ

    ದಾವಣಗೆರೆ: ಬೈಕಿಗೆ ಬೊಲೆರೋ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ದುರ್ಮರಣಕ್ಕೀಡಾದ ಘಟನೆ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಹೊನ್ನೇಭಾಗಿಯಲ್ಲಿ ನಡೆದಿದೆ.

    ಮೃತರನ್ನು ಅಜ್ಜಯ್ಯ (18) ಮಂಜುನಾಥ್ (17) ಹಾಗೂ ದೇವರಾಜ್ (17) ಎಂದು ಗುರುತಿಸಲಾಗಿದೆ. ಮೃತ ಯುವಕರು ಚನ್ನಗಿರಿ ತಾಲ್ಲೂಕ್ ಮಲ್ಲೇಶಪುರ ನಿವಾಸಿಗಳು.

    ಈ ಮೂವರು ಗಣಪತಿ ಪ್ರತಿಷ್ಠಾನ ಕ್ಕೆ ಅನುಮತಿ ಪಡೆಯಲು ಚನ್ನಗಿರಿಗೆ ಒಂದೇ ಬೈಕ್ ನಲ್ಲಿ ಚಲಿಸುತ್ತಿದ್ದರು. ಈ ವೇಳೆ ಬೈಕಿಗೆ ಬೊಲೆರೋ ಡಿಕ್ಕಿಯಾಗಿದೆ. ಘಟನೆಯಿಂದ ತೀವ್ರ ಗಾಯಗೊಂಡಿದ್ದ ಯುವಕರನ್ನ ಶಿವಮೊಗ್ಗ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತಿತ್ತು. ಆದರೆ ರಸ್ತೆ ಮಧ್ಯೆ ಓರ್ವ ಯುವಕ ಸಾವನ್ನಪ್ಪಿದ್ದು, ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಚನ್ನಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಬೊಲೆರೋ – ಲಾರಿ ಡಿಕ್ಕಿ ಹೊಸಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಾಣಾಪಾಯದಿಂದ ಪಾರು

    ಬೊಲೆರೋ – ಲಾರಿ ಡಿಕ್ಕಿ ಹೊಸಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಾಣಾಪಾಯದಿಂದ ಪಾರು

    ಬಳ್ಳಾರಿ: ಹೊಸಪೇಟೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ-50ರ ಟನಲ್ ಬಳಿ ಬೊಲೆರೋ ವಾಹನ ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿ ಹೊಸಪೇಟೆಯ ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ಸುನಂದಾ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ರಾಷ್ಟ್ರೀಯ ಹೆದ್ದಾರಿ-50ರ ಟನಲ್ ಬಳಿ ಶಿಕ್ಷಣಾಧಿಕಾರಿ ಪಿ. ಸುನಂದಾ ಬೊಲೆರೋ ವಾಹನದಲ್ಲಿ ಚಲಿಸುತ್ತಿದ್ದ ವೇಳೆ ಅಪರಿಚಿತ ಲಾರಿ ಏಕಾಏಕಿ ಬಂದು ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಬೊಲೆರೋ ವಾಹನ ಪಲ್ಟಿಯಾಗಿ ಬಿದ್ದಿದೆ. ಲಾರಿ ಚಾಲಕ ಅಪಘಾತ ನಡೆದ ತಕ್ಷಣ ಸ್ಥಳದಿಂದ ಪರಾರಿಯಾಗಿದ್ದಾನೆ.

    ಅಪಘಾತದಲ್ಲಿ ಬಿಇಒ ಸುನಂದಾ ಸೇರಿದಂತೆ ನಾಲ್ವರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಗಾಯಾಳುಗಳನ್ನು ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊಸಪೇಟೆ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಡಿವೈಡರ್‌ಗೆ ಡಿಕ್ಕಿ – ಬಾಳೆಹಣ್ಣು ಸಾಗಿಸುತ್ತಿದ್ದ ಬೊಲೆರೋ ಪಲ್ಟಿ

    ಡಿವೈಡರ್‌ಗೆ ಡಿಕ್ಕಿ – ಬಾಳೆಹಣ್ಣು ಸಾಗಿಸುತ್ತಿದ್ದ ಬೊಲೆರೋ ಪಲ್ಟಿ

    ಚಿಕ್ಕಬಳ್ಳಾಪುರ: ಬಾಳೆಹಣ್ಣು ಸಾಗಿಸುತ್ತಿದ್ದ ಬೊಲೆರೋ ಗೂಡ್ಸ್ ವಾಹನದ ಟೈರ್ ಪಂಕ್ಚರ್ ಆದ ಪರಿಣಾಮ ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 07 ರ ನಂದಿ ಕ್ರಾಸ್ ಬಳಿ ನಡೆದಿದೆ.

    ಆಂಧ್ರಪ್ರದೇಶದಿಂದ ಬೆಂಗಳೂರಿಗೆ ಬಾಳೆಹಣ್ಣು ತುಂಬಿಕೊಂಡು ಸಾಗುತ್ತಿದ್ದ ಬೊಲೆರೋ ವಾಹನ ಚಲಿಸುತ್ತಿದ್ದಾಗಲೇ ಟೈರ್ ಪಂಕ್ಚರ್ ಆಗಿ ಏಕಾಏಕಿ ಬ್ಲಾಸ್ಟ್ ಆದ ಪರಿಣಾಮ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಬೊಲೆರೋ ಚಾಲಕ ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾನೆ.

     

    ನಂದಿಗಿರಿಧಾಮ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಚಾಲಕನಿಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಪಘಾತದಿಂದಾಗಿ ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಕೆಲ ಹೊತ್ತು ಟ್ರಾಫಿಕ್ ಜಾಮ್ ಉಂಟಾಗಿತ್ತು. ನಂತರ ಪೊಲೀಸರು ಪಲ್ಟಿಯಾದ ವಾಹನ ತೆರವು ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.