Tag: ಬೊಮ್ಮಾಯಿ ಬಜೆಟ್‌

  • ಇದು ಡಬಲ್ ಧೋಕಾ ಬಜೆಟ್ – ಪ್ರಿಯಾಂಕ್ ಖರ್ಗೆ ವ್ಯಂಗ್ಯ

    ಇದು ಡಬಲ್ ಧೋಕಾ ಬಜೆಟ್ – ಪ್ರಿಯಾಂಕ್ ಖರ್ಗೆ ವ್ಯಂಗ್ಯ

    ಕಲಬುರಗಿ: ಶುಕ್ರವಾರ ಸಿಎಂ ಬಸವರಾಜ ಬೊಮ್ಮಾಯಿ ಮಂಡಿಸಿದ ಬಜೆಟ್ ಅನ್ನು ಮಾಜಿ ಸಚಿವ ಹಾಗೂ ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಡಬಲ್ ಇಂಜಿನ್ ಬಜೆಟ್ ಅಲ್ಲ ಇದು ಡಬಲ್ ಧೋಕಾ ಬಜೆಟ್ ಎಂದು ವ್ಯಂಗ್ಯವಾಡಿದ್ದಾರೆ.

    ರಾಜ್ಯಸರ್ಕಾರದ ಬಜೆಟ್ ಬಗ್ಗೆ ಟ್ವೀಟ್ ಮಾಡಿದ ಖರ್ಗೆ ಬಿಜೆಪಿಯವರು ನವ ಕರ್ನಾಟಕ ನಿರ್ಮಿಸುತ್ತೇವೆ ಎಂದಿದ್ದರು. ಇವರ ಯೋಗ್ಯತೆಗೆ ಕರ್ನಾಟಕದಲ್ಲಿ ಈಗಾಗಲೇ ಇರುವುದನ್ನು ಉಳಿಸಿಕೊಂಡು ಹೋದರೆ ಸಾಕಾಗಿದೆ. ಕರ್ನಾಟಕವನ್ನು ಸಾಲದಲ್ಲಿ ಮುಳುಗಿಸಿದ್ದಾರೆ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಹೊಸ ಯೋಚನೆಗಳು ಬಜೆಟ್‌ನಲ್ಲಿ ಇಲ್ಲ: ಚಲುವರಾಯಸ್ವಾಮಿ

    ಇದೊಂದು ಎಕನಮಿ ರಿಕವರಿ ಬಜೆಟ್ ಅಲ್ಲ. ಇದು ಎಲೆಕ್ಷನ್ ಸರ್ವೈವಲ್ ಬಜೆಟ್ ಎಂದು ಲೇವಡಿ ಮಾಡಿರುವ ಶಾಸಕರು ರಾಜ್ಯದ ಆರ್ಥಿಕ ಪುನಶ್ಛೇತನಕ್ಕೆ ಸಹಕಾರಿಯಾಗುವಂತಹ, ರೈತರಿಗೆ, ಯುವಕರಿಗೆ, ಮಹಿಳೆಯರಿಗೆ ಹಾಗೂ ಜನಸಾಮಾನ್ಯರಿಗೆ ಅನುಕೂಲವಾಗುವಂತಹ ಯಾವುದೇ ಅಂಶ ಈ ಬಜೆಟ್ ಹೊಂದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಬರೀ ಪುಸ್ತಕದ ಲೆಕ್ಕಾಚಾರದ ಜೊಳ್ಳು ಬಜೆಟ್: ಶರವಣ

  • ಹೊಸ ಯೋಚನೆಗಳು ಬಜೆಟ್‌ನಲ್ಲಿ ಇಲ್ಲ: ಚಲುವರಾಯಸ್ವಾಮಿ

    ಹೊಸ ಯೋಚನೆಗಳು ಬಜೆಟ್‌ನಲ್ಲಿ ಇಲ್ಲ: ಚಲುವರಾಯಸ್ವಾಮಿ

    ಮಂಡ್ಯ: ರಾಜ್ಯಸರ್ಕಾರದ ಬಜೆಟ್ ನೀರಸ ಬಜೆಟ್ ಆಗಿದ್ದು, ಯಾವುದೇ ಹೊಸ ಯೋಚನೆಗಳು, ಆಲೋಚನೆಗಳು ಇದರಲ್ಲಿ ಕಾಣುತ್ತಿಲ್ಲ ಎಂದು ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಕಿಡಿಕಾರಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಇಂದಿನ ಬಜೆಟ್ ಮೇಲೆ ರೈತರು ಸಾಕಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು. ಆದರೆ ಅವೆಲ್ಲವೂ ಈ ಸರ್ಕಾರ ಹುಸಿಗೊಳಿಸಿದೆ. ಮಂಡ್ಯ ಜಿಲ್ಲೆಗೆ ಈ ಬಜೆಟ್‍ನಿಂದ ಯಾವುದೇ ರೀತಿಯಾದ ಉಪಯೋಗವಾಗಿಲ್ಲ ಎಂದು ಟೀಕಿಸಿದರು.

    ಮೈಸೂರು ಸಕ್ಕರೆ ಕಾರ್ಖಾನೆಗೆ ನೀಡಿರುವ 50 ಕೋಟಿ ರೂ. ಅನುದಾನ ಸಾಲದು, ಮುಖ್ಯಮಂತ್ರಿಗಳು ಇದರ ಬಗ್ಗೆ ಪರಾಮರ್ಶಿಸಿ ಅನುದಾನವನ್ನು ಹೆಚ್ಚಿಸಬೇಕು. ರೈತರ ಆರ್ಥಿಕ ಪರಿಸ್ಥಿತಿ ಹಾಗೂ ಜೀವನಮಟ್ಟವನ್ನು ಸುಧಾರಿಸವಂತಹ ಯಾವುದೇ ಯೋಜನೆಗಳನ್ನೂ ಘೋಷಿಸದೇ ಇರುವುದು ನಿರಾಸೆ ತಂದಿದೆ. ಬೆಂಬಲ ಬೆಲೆ ಬಗ್ಗೆಯೂ ಯಾವುದೇ ಪ್ರಸ್ತಾಪ ಮಾಡಿಲ್ಲ. ನಮ್ಮದು ರೈತಪರ ಸರ್ಕಾರ ಎಂದು ಹೇಳಿದರೆ ಸಾಲದು ಅದರಂತೆ ನಡೆಯಬೇಕು ಎಂದು ವಾಗ್ದಾಳಿ ನಡೆಸಿದರು.  ಇದನ್ನೂ ಓದಿ: ಸರ್ವ ವ್ಯಾಪಿ ಸರ್ವ ಸ್ಪರ್ಶಿ ಬಜೆಟ್: ಆರ್. ಅಶೋಕ್

    ಹವಾಮಾನ ವೈಪರೀತ್ಯ, ಅತಿವೃಷ್ಟಿ, ಅನಾವೃಷ್ಟಿಗಳಂತಹ ಸಂದರ್ಭದಲ್ಲಿ ಬೆಳೆ ನಷ್ಟಕ್ಕೆ ಒಳಗಾಗುವ ರೈತರಿಗೆ ಕೆಲವು ಸಂದರ್ಭದಲ್ಲಿ ತಾವು ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗುವುದಿಲ್ಲ. ಹೀಗೆ ಬೆಲೆ ಕುಸಿತವಾದ ಸಂದರ್ಭದಲ್ಲಿ ಸರ್ಕಾರ ರೈತರ ನೆರವಿಗೆ ಧಾವಿಸಬೇಕು. ಇದಕ್ಕೆ ಕನಿಷ್ಠ ಬೆಂಬಲ ಬೆಲೆಯನ್ನು ಘೋಷಣೆ ಮಾಡಬೇಕು. ಹೀಗಾಗಿ ಸರ್ಕಾರ ಬೆಂಬಲ ಬೆಲೆಗೆ ಹಣವನ್ನು ಘೋಷಣೆ ಮಾಡಬೇಕಿದೆ. ಅಲ್ಲದೆ ಪ್ರಾಕೃತಿಕ ವಿಕೋಪಗಳಿಗೆ ಸಂಬಂಧಪಟ್ಟಂತೆ ನಡೆಯುವ ಅವಘಡಗಳಿಗೆ ನಿಧಿ ಸ್ಥಾಪನೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಬಜೆಟ್ ಮೇಲಿನ ಚರ್ಚೆಯ ಸಂದರ್ಭದಲ್ಲಿ ಆದರೂ ಗಮನ ಹರಿಸಲಿ ಎಂದು ಸಲಹೆ ನೀಡಿದರು. ಇದನ್ನೂ ಓದಿ: ಬರೀ ಪುಸ್ತಕದ ಲೆಕ್ಕಾಚಾರದ ಜೊಳ್ಳು ಬಜೆಟ್: ಶರವಣ

  • ಸರ್ವ ವ್ಯಾಪಿ ಸರ್ವ ಸ್ಪರ್ಶಿ ಬಜೆಟ್: ಆರ್. ಅಶೋಕ್

    ಸರ್ವ ವ್ಯಾಪಿ ಸರ್ವ ಸ್ಪರ್ಶಿ ಬಜೆಟ್: ಆರ್. ಅಶೋಕ್

    ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅತ್ಯುತ್ತಮ ಜನಸ್ನೇಹಿ ಬಜೆಟ್ ನೀಡಿದ್ದಾರೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.

    ಬಜೆಟ್ ಕುರಿತು ಸುದ್ದಿಗಾರರ ಜತೆ ಮಾತನಾಡಿದ ಅವರು, ಎಲ್ಲ ಜಾತಿ, ಜನಾಂಗದವರಿಗೂ ಅನುಕೂಲ ಮಾಡಿಕೊಟ್ಟಿದ್ದಾರೆ. ಮುಖ್ಯಮಂತ್ರಿಯವರು ಅತ್ಯುತ್ತಮ ಜನಸ್ನೇಹಿ ಬಜೆಟ್ ನೀಡಿದ್ದಾರೆ. ನಗರ ಹಾಗೂ ಗ್ರಾಮೀಣ ಭಾಗಗಳ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಕುಡಿಯುವ ನೀರು, ಶಿಕ್ಷಣ ಎಲ್ಲದಕ್ಕೂ ಅನುದಾನ ನೀಡಲಾಗಿದೆ ಎಂದಿದ್ದಾರೆ.

    ಕಂದಾಯ ಇಲಾಖೆಗೆ ಸಂಬಂಧಿಸಿದಂತೆ
    * ಕಂದಾಯ ದಾಖಲೆ ಮನೆ ಬಾಗಿಲಿಗೆ ಯೋಜನೆ – ಪಹಣಿ, ಅಟ್ಲಾಸ್ ಮತ್ತು ಜಾತಿ ಹಾಗೂ ಆದಾಯ ಪ್ರಮಾಣಪತ್ರ ವಿತರಣೆ

    *ಆಸಿಡ್ ದಾಳಿಗೊಳಗಾದ ಮಹಿಳೆಯರ ಮಾಸಿಕ ಪಿಂಚಣಿ 3000 ದಿಂದ 10,000 ಹೆಚ್ಚಳ

    *ಮನಸ್ವಿನಿ ಮತ್ತು ಮೈತ್ರಿ ಯೋಜನೆಯಡಿಯಲ್ಲಿ ಅವಿವಾಹಿತ, ವಿಚ್ಚೇದಿತ ಮಹಿಳೆಯರಿಗೆ, ಲಿಂಗತ್ವ ಅಲ್ಪಸಂಖ್ಯಾತರ ಪಿಂಚಣಿ 600 ರಿಂದ 800 ಹೆಚ್ಚಳ (1.32 ಲಕ್ಷ ಫಲಾನುಭವಿಗಳು)

    * ಗ್ರಾಮಸಹಾಯಕರ ಮಾಸಿಕ ಗೌರವಧನ ರೂ 1,000 ಹೆಚ್ಚಳ ಇದನ್ನೂ ಓದಿ: ಪುಟಿನ್ ನಮ್ಮ ಚಿಕ್ಕಪ್ಪ, ಯುದ್ಧ ನಡೆಯಲ್ಲ – ಸರ್ಕಾರದ ಸೂಚನೆಯನ್ನು ಲೇವಡಿ ಮಾಡಿದ್ದ ವಿದ್ಯಾರ್ಥಿಗಳು

    * ಉಪನೋಂದಣಾಧಿಕಾರಿ ಕಚೇರಿ ಮೂಲಸೌಕರ್ಯ ಮತ್ತು ಐಟಿ ಉಪಕರಣಗಳನ್ನು 406 ಕೋಟಿ ವೆಚ್ಚದಲ್ಲಿ ಉನ್ನತೀಕರಣ

    * ರಾಜ್ಯಾದ್ಯಂತ ಡ್ರೊನ್ ಆಧಾರಿತ ಸರ್ವೇ ಗಾಗಿ 287 ಕೋಟಿ, 3 ವರ್ಷಗಳಲ್ಲಿ ವಿದ್ಯನ್ಮಾನ ಪಹಣಿ ಮತ್ತು ನಕ್ಷೆ ಇದನ್ನೂ ಓದಿ: ಬಿಸಿಯೂಟ ತಯಾರಕರಿಗೆ 1,000 ರೂ. ಗೌರವಧನ ಹೆಚ್ಚಳ

    * ಬಿಬಿಎಂಪಿ ಮತ್ತು ರಾಜ್ಯದ ಎಲ್ಲ ಮಹಾನಗರಪಾಲಿಕೆಗಳಲ್ಲಿ ಕಂದಾಯ ದಾಖಲೆಗಳ ಸ್ಕಾನಿಂಗ್ ಗಾಗಿ 15 ಕೋಟಿ

  • ಕಾಮನ್ ಮ್ಯಾನ್ ಸಿಎಂ ಎನ್ನುವುದನ್ನು ಬೊಮ್ಮಾಯಿ ಮತ್ತೆ ನಿಜ ಮಾಡಿದ್ದಾರೆ: ಪ್ರತಾಪ್‍ಸಿಂಹ

    ಕಾಮನ್ ಮ್ಯಾನ್ ಸಿಎಂ ಎನ್ನುವುದನ್ನು ಬೊಮ್ಮಾಯಿ ಮತ್ತೆ ನಿಜ ಮಾಡಿದ್ದಾರೆ: ಪ್ರತಾಪ್‍ಸಿಂಹ

    ಮೈಸೂರು: ತಾವು ಕಾಮನ್ ಮ್ಯಾನ್ ಸಿಎಂ ಎನ್ನುವುದನ್ನು ಬಸವರಾಜ ಬೊಮ್ಮಾಯಿ ಮತ್ತೆ ನಿಜ ಮಾಡಿದ್ದಾರೆ ಎಂದು ಸಂಸದ ಪ್ರತಾಪ್‍ಸಿಂಹ ತಿಳಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೊಮ್ಮಾಯಿ ಅವರು ಜನಪರವಾದ ಬಜೆಟ್ ಮಂಡಿಸಿದ್ದಾರೆ. ರಾಜ್ಯದ ಸಮಗ್ರ ಅಭಿವೃದ್ಧಿ ದೃಷ್ಟಿ ಇಟ್ಟುಕೊಂಡು ಬಜೆಟ್ ಮಂಡಿಸಿದ್ದಾರೆ. ಮೈಸೂರಿಗೆ ಹೆಚ್ಚಿನ ಕೊಡುಗೆ ಕೊಟ್ಟಿದ್ದಾರೆ. ಇದು ಸರ್ವ ವ್ಯಾಪಿ, ಸರ್ವಸ್ಪರ್ಶಿ ಬಜೆಟ್ ಆಗಿದೆ. ಸಂಸದನಾಗಿ ನನಗೆ ಅತಿ ಹೆಚ್ಚು ಖುಷಿ ತಂದಿದೆ ಎಂದು ತಿಳಿಸಿದರು.

    ಕೆ.ಆರ್. ಆಸ್ಪತ್ರೆಯ ಉನ್ನತೀಕರಣಕ್ಕೆ ಅನುದಾನ: ಮೈಸೂರು ವಿಮಾನ ನಿಲ್ದಾಣ ರನ್ ವೇ ವಿಸ್ತರಣೆಗೆ ಹಣ ಕೇಳಿದ್ದೆ. ಈಗ ಆ ಹಣ ನೀಡಿದ್ದಾರೆ. ಹೆಚ್ಚು ಕಡಿಮೆ 400 ಕೋಟಿ ರೂ. ಯೋಜನೆ ಇದಾಗಿದೆ. ಕೆ.ಆರ್. ಆಸ್ಪತ್ರೆಯ ಉನ್ನತೀಕರಣಕ್ಕೆ ಹಣ ನೀಡುವಂತೆ ಕೇಳಿದ್ದೆ. ಬಜೆಟ್‍ನಲ್ಲಿ ಅದಕ್ಕೆ 89 ಕೋಟಿ ರೂ. ನಿಗದಿ ಮಾಡಿದ್ದಾರೆ. ನನ್ನ ಮನವಿಗಳಿಗೆ ಸಿಎಂ ಸ್ಪಂದಿಸಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಅವರೇ ಸಿಎಂ ಆಗಿದ್ದರು. ಆದರೆ ಕೆ.ಆರ್. ಆಸ್ಪತ್ರೆಯ ಉನ್ನತೀಕರಣಕ್ಕೆ ಹಣ ಕೊಟ್ಟಿರಲಿಲ್ಲ. ಆದರೆ, ಬಸವರಾಜ ಬೊಮ್ಮಾಯಿ ಕೊಟ್ಟಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಮೀನುಗಾರಿಕೆಗೆ ಬೆಂಬಲ – ಮತ್ಸ್ಯ ಸಿರಿ ಯೋಜನೆ ಆರಂಭ

    ಮೈಸೂರಿಗೆ ಅಭಿವೃದ್ಧಿ ವಿಚಾರದಲ್ಲಿ ಗ್ರಹಣ ಹಿಡಿದಿತ್ತು. ಈ ಗ್ರಹಣವನ್ನು ಬೊಮ್ಮಾಯಿ ಬಿಡಿಸಿದ್ದಾರೆ. 2023ರಲ್ಲೂ ಬಿಜೆಪಿ ಯಾಕೆ ಗೆಲ್ಲಿಸಬೇಕು. ಬೊಮ್ಮಾಯಿ ಅವರೆ ಸಿಎಂ ಆಗಬೇಕು ಎಂಬುದಕ್ಕೆ ಈ ಬಜೆಟ್ ಉತ್ತರವಾಗಿದೆ. ಜನ ಈ ಬಜೆಟ್ ನೋಡಿ ಖಂಡಿತ ಬಿಜೆಪಿಗೆ ಮತ ಹಾಕುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಕೆ.ಆರ್ ಆಸ್ಪತ್ರೆಯ ಉನ್ನತೀಕರಣಕ್ಕೆ ಹಣ ಬಿಡುಗಡೆ ವಿಚಾರವಾಗಿ ಮಾತನಾಡಿದ ಅವರು, ಇದರ ಕ್ರೇಡಿಟ್ ಸ್ಥಳೀಯ ಬಿಜೆಪಿ ಶಾಸಕರಿಗೋ ಅಥವಾ ನನಗೆ ಸಲ್ಲಬೇಕು ಎಂಬುದೇನೂ ಇಲ್ಲ. ಇದರ ಒಟ್ಟಾರೆ ಕ್ರೇಡಿಟ್ ಬಿಜೆಪಿ ಸರ್ಕಾರಕ್ಕೆ ಸಲುತ್ತದೆ. ಏನೇ ಅಭಿವೃದ್ಧಿ ಅದರೂ ಅದರ ಕ್ರೇಡಿಟ್ ಬಿಜೆಪಿ ಸರ್ಕಾರಕ್ಕೆ ಸಲುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: 1 ರೂ. ಬಂದಿದ್ದು ಹೇಗೆ? ಹೋಗಿದ್ದು ಹೇಗೆ? – ಯಾವ ವಲಯಕ್ಕೆ ಎಷ್ಟು ಕೋಟಿ?

    ರಿಸ್ಕ್ ತೆಗೆದುಕೊಂಡು ಮೋದಿಯಿಂದ ಜನರ ರಕ್ಷಣೆ: ಉಕ್ರೇನ್‍ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ರಕ್ಷಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮೋದಿ ಅವರಿಗೆ ಗಟ್ಸ್ ಇರುವುದಕ್ಕೆ ರಿಸ್ಕ್ ತೆಗೆದುಕೊಂಡು ದೇಶದ ಜನರನ್ನು ಉಕ್ರೇನ್‍ನಿಂದ ರಕ್ಷಿಸುತ್ತಿದ್ದಾರೆ. ರಕ್ಷಣಾ ಕಾರ್ಯ ಬಹಳ ಚುರುಕಾಗಿ ನಡೆಯುತ್ತಿದೆ. ಉಕ್ರೇನ್ ಗಡಿ ದಾಟಿದ ಕೂಡಲೇ ಅಲ್ಲಿಂದ ಸುರಕ್ಷಿತವಾಗಿ ಕರೆದುಕೊಂಡು ಬರುತ್ತಿದ್ದೇವೆ. ಉಕ್ರೇನ್‍ನಿಂದ ಹೊರಡಿ ಎಂದು ಮೂರು ಬಾರಿ ಸಲಹೆ ಕೊಟ್ಟಿದ್ದೇವು. ಆದರೆ ಯಾರು ಕೇಳಲಿಲ್ಲ. ತೆರಿಗೆ ಹಣದಿಂದ ಅವರನ್ನು ವಿಮಾನದಲ್ಲಿ ಕರೆದುಕೊಂಡು ಬರಲಾಗಿದೆ. ಕೆಲವರು ಕೃತಜ್ಞತೆ ಇಲ್ಲದೆ ಮಾತಾಡಿದ್ದಾರೆ. ಅವರ ಮಟ್ಟಕ್ಕೆ ಇಳಿದು ನಾನು ಅವರನ್ನು ಟೀಕೆ ಮಾಡಲ್ಲ ಎಂದು ವಾಗ್ದಾಳಿ ನಡೆಸಿದರು.

  • ಬಿಸಿಯೂಟ ತಯಾರಕರಿಗೆ 1,000 ರೂ. ಗೌರವಧನ ಹೆಚ್ಚಳ

    ಬಿಸಿಯೂಟ ತಯಾರಕರಿಗೆ 1,000 ರೂ. ಗೌರವಧನ ಹೆಚ್ಚಳ

    ಬೆಂಗಳೂರು: ಬಿಸಿಯೂಟ ತಯಾರಕರಿಗೆ ಹಾಗೂ ಸಹಾಯಕರಿಗೆ ಗೌರವಧನವನ್ನು 1,000 ರೂ.ಗಳಷ್ಟು ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಕಟಿಸಿದ್ದಾರೆ.

    ಬಜೆಟ್ ಭಾಷಣದಲ್ಲಿ ಬೊಮ್ಮಾಯಿ ಅವರು, ಅಕ್ಷರ ದಾಸೋಹ ಯೋಜನೆಯಡಿ ಬಿಸಿಯೂಟ ಕಾರ್ಯಕರ್ತರ ಸೇವೆಯನ್ನು ಗುರುತಿಸಿ ಬಿಸಿಯೂಟ ತಯಾರಕರಿಗೆ ಹಾಗೂ ಸಹಾಯಕರಿಗೆ ನೀಡುವ ಗೌರವಧನವನ್ನು 1,000 ರೂ.ಗಳಷ್ಟು ಹೆಚ್ಚಿಸಲಾಗುವುದು ಘೋಷಿಸಿದರು.

    ಬಜೆಟ್‍ನಲ್ಲಿ ಏನಿದೆ?
    * ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣಾ ಕ್ರಮಗಳೊಂದಿಗೆ ರಾಷ್ಟ್ರೀಯ ಶಿಕ್ಷಣ ನೀತಿ 2020ನ್ನು ರಾಷ್ಟ್ರದಲ್ಲಿ ಜಾರಿಗೊಳಿಸಿದ ಮೊದಲ ರಾಜ್ಯ ನಮ್ಮದಾಗಿದೆ. ಉನ್ನತ ಶಿಕ್ಷಣದ ಗುಣಮಟ್ಟವನ್ನು ಉತ್ತಮಪಡಿಸಿ, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವುದಕ್ಕೆ ನಮ್ಮ ಸರ್ಕಾರವು ಬದ್ಧವಾಗಿದೆ. ಇದನ್ನೂ ಓದಿ: Karnataka Budget: ಈ ವರ್ಷ ಯಾವುದೇ ತೆರಿಗೆ ಹೆಚ್ಚಳ ಇಲ್ಲ

    * ಅತ್ಯುನ್ನತ ಗುಣಮಟ್ಟದ ತಾಂತ್ರಿಕ ಬೋಧನೆ-ಕಲಿಕೆಗಳಿಗೆ ಹಾಗೂ ಸಂಶೋಧನೆಯನ್ನು ಉತ್ತೇಜಿಸಲು ರಾಜ್ಯದ ಏಳು ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳನ್ನು Karnataka Institute of Technology ಗಳನ್ನಾಗಿ ಉನ್ನತೀಕರಿಸಿ, ಪ್ರತಿಷ್ಠಿತ ವಿದೇಶಿ ವಿಶ್ವವಿದ್ಯಾಲಯಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗುವುದು.

    * ಕಾಲೇಜುಗಳ ಮೇಲ್ವಿಚಾರಣೆಯನ್ನು ಸುಧಾರಿಸಲು ರಾಜ್ಯದ ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶಗಳಲ್ಲಿ ವಿನೂತನ ಮಾದರಿಯ ಏಳು ವಿಶ್ವವಿದ್ಯಾಲಯಗಳನ್ನು ಚಾಮರಾಜನಗರ, ಬೀದರ್, ಹಾವೇರಿ, ಹಾಸನ, ಕೊಡಗು, ಕೊಪ್ಪಳ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಸ್ಥಾಪಿಸಲಾಗುವುದು. ಈ ವಿಶ್ವವಿದ್ಯಾಲಯಗಳು ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳಿಗಿಂತ ಭಿನ್ನವಾಗಿ ತಂತ್ರಜ್ಞಾನದ ಗರಿಷ್ಠ ಬಳಕೆಯೊಂದಿಗೆ ಹೆಚ್ಚುವರಿ ಮಾನವ ಸಂಪನ್ಮೂಲ ಉಪಯೋಗಿಸದೇ ಕಾರ್ಯನಿರ್ವಹಿಸಲಿದೆ. ಸ್ನಾತಕೋತ್ತರ ಕೇಂದ್ರಗಳಲ್ಲಿ ಲಭ್ಯವಿರುವ ಸೌಲಭ್ಯಗಳನ್ನು ಬಳಸುವ ಈ ವಿಶ್ವವಿದ್ಯಾಲಯಗಳಿಗೆ ವಾರ್ಷಿಕ ತಲಾ 2 ಕೋಟಿ ರೂ.ಗಳ ಆವರ್ತಕ ವೆಚ್ಚ ಬಳಸಿ ಕಾರ್ಯನಿರ್ವಹಿಸಲಿವೆ. ಇದನ್ನೂ ಓದಿ: ಬೆಂಗಳೂರು ಸಮಗ್ರ ಅಭಿವೃದ್ಧಿಗೆ 8,409 ಕೋಟಿ ರೂ.: ಬೊಮ್ಮಾಯಿ

    * ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ ಬೋಧನಾ ಅವಧಿಯನ್ನು ಹೆಚ್ಚಿಸಿ ಮಾಸಿಕ ಗೌರವಧನವನ್ನು ಹಾಲಿ 11,000 ರೂ. ಗಳಿಂದ 32,000 ರೂ. ವರೆಗೆ ಹೆಚ್ಚಿಸಲಾಗಿದೆ.

  • ಶಿಡ್ಲಘಟ್ಟ, ಮೊಳಕಾಲ್ಮೂರಿನಲ್ಲಿ ಸೀರೆ ಕ್ಲಸ್ಟರ್

    ಶಿಡ್ಲಘಟ್ಟ, ಮೊಳಕಾಲ್ಮೂರಿನಲ್ಲಿ ಸೀರೆ ಕ್ಲಸ್ಟರ್

    ಬೆಂಗಳೂರು: ಆಯ್ದ ಸ್ವ-ಸಹಾಯ ಸಂಘಗಳಿಗೆ ತಲಾ 1.5 ಲಕ್ಷ ರೂ. ನೆರವು, 500 ಕೋಟಿ ರೂ. ಅನುದಾನ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.

    ಬಜೆಟ್ ಘೋಷಣೆ ಏನು?:
    * ಪರಿಶಿಷ್ಟ ಜಾತಿ ಮತ್ತು ಪಂಗಡದವರ ಗುಂಪುಗಳಿಗೆ ವಿಶೇಷ ಆದ್ಯತೆ ನೀಡಲಾಗುವುದು. 3.9ಲಕ್ಷ ಮಹಿಳೆಯರಿಗೆ ಅನುಕೂಲ.

    * ಮಹಿಳಾ ಸ್ವ-ಸಹಾಯ ಸಂಘಗಳಿಗೆ ವಾಣಿಜ್ಯ ಬ್ಯಾಂಕುಗಳಿಂದ ಸಾಲ ಸೌಲಭ್ಯ ಒದಗಿಸಲು ಏಕಗವಾಕ್ಷಿ ಸಾಲ ಸೌಲಭ್ಯ ವ್ಯವಸ್ಥೆ. ಇದನ್ನೂ ಓದಿ: ಒಲಂಪಿಕ್ಸ್‌ಗೆ ಸಿದ್ಧತೆ – 75 ಕ್ರೀಡಾಪಟುಗಳಿಗೆ ತಲಾ 10 ಲಕ್ಷ

    * ಸ್ವ-ಸಹಾಯ ಗುಂಪಿನ ಮಹಿಳೆಯರ ಉತ್ಪನ್ನಗಳ ಬ್ರ್ಯಾಂಡಿಂಗ್, ಮೌಲ್ಯವರ್ಧನೆ, ಪ್ಯಾಕಿಂಗ್ ಸೌಲಭ್ಯ ಒದಗಿಸಿ, ಮಾರುಕಟ್ಟೆ ಒದಗಿಸಲು ಅಸ್ಮಿತೆ ಹೆಸರಿನಡಿ ಎಲ್ಲಾ ಉತ್ಪನ್ನಗಳ ಮಾರಾಟ ಮಾಡಲಾಗುವುದು. ಹೋಬಳಿ, ಜಿಲ್ಲೆ, ರಾಜ್ಯ ಮಟ್ಟದಲ್ಲಿ ಮಾರಾಟ ಮೇಳ ಆಯೋಜನೆ. ಇದನ್ನೂ ಓದಿ: ಜಿಎಸ್‍ಟಿ ಪರಿಹಾರ 3 ವರ್ಷ ವಿಸ್ತರಿಸಿ: ರಾಜ್ಯದ ಹಣಕಾಸು ಪರಿಸ್ಥಿತಿಯ ಬಗ್ಗೆ ಸಿಎಂ ಹೇಳಿದ್ದೇನು?

    * ವೇತನ, ವಹಿವಾಟು, ಉದ್ಯೋಗ ಮತ್ತು ರಫ್ತು ಹೆಚ್ಚಳ ಗುರಿಯೊಂದಿಗೆ ಚಿಕ್ಕಬಳ್ಳಾಪುರದಲ್ಲಿ ಚರ್ಮದ ಬೊಂಬೆ, ಧಾರವಾಡದಲ್ಲಿ ಕಸೂತಿ, ಕೊಪ್ಪಳದಲ್ಲಿ ಕೌದಿ ಮತ್ತು ಕಿನ್ಹಾಳ ಬೊಂಬೆ, ಮೈಸೂರಿನಲ್ಲಿ ಅಗರಬತ್ತಿ, ನವಲಗುಂದದಲ್ಲಿ ಜಮಖಾನಾ, ಚನ್ನಪಟ್ಟಣದಲ್ಲಿ ಆಟಿಕೆ ಹಾಗೂ ಇಳಕಲ್, ಗುಳೇದಗುಡ್ಡ, ಬೆಳಗಾವಿ – ಶಹಾಪುರ, ಶಿಡ್ಲಘಟ್ಟ ಮತ್ತು ಮೊಳಕಾಲ್ಮುರುನಲ್ಲಿ ಸೀರೆ ಮೈಕ್ರೋಕ್ಲಸ್ಟರ್ ಅಭಿವೃದ್ಧಿ ಮಾಡಲಾಗುವುದು ಎಂದು ಬಜೆಟ್‍ನಲ್ಲಿ ಮಂಡನೆ ಮಾಡಿದರು.

  • ಜಿಎಸ್‍ಟಿ ಪರಿಹಾರ 3 ವರ್ಷ ವಿಸ್ತರಿಸಿ: ರಾಜ್ಯದ ಹಣಕಾಸು ಪರಿಸ್ಥಿತಿಯ ಬಗ್ಗೆ ಸಿಎಂ ಹೇಳಿದ್ದೇನು?

    ಜಿಎಸ್‍ಟಿ ಪರಿಹಾರ 3 ವರ್ಷ ವಿಸ್ತರಿಸಿ: ರಾಜ್ಯದ ಹಣಕಾಸು ಪರಿಸ್ಥಿತಿಯ ಬಗ್ಗೆ ಸಿಎಂ ಹೇಳಿದ್ದೇನು?

    ಬೆಂಗಳೂರು: ರಾಜ್ಯದ ಹಣಕಾಸು ಪರಿಸ್ಥಿತಿ ಉತ್ತಮವಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಬಜೆಟ್ ಭಾಷಣದಲ್ಲಿ ರಾಜ್ಯಗಳಿಗೆ ಜಿಎಸ್‍ಟಿ ಪರಿಹಾರಗಳನ್ನು ಕನಿಷ್ಠ ಮೂರು ವರ್ಷಗಳವರೆಗೆ ವಿಸ್ತರಿಸಲು ಮನವಿ ಮಾಡಿದ್ದಾರೆ.

    ಸಿಎಂ ಹೇಳಿದ್ದೇನು?:
    ರಾಜ್ಯದ ರಾಜಸ್ವ ಸಂಪನ್ಮೂಲಗಳೂ ರಾಜ್ಯದ ಸ್ವಂತ ತೆರಿಗೆ, ತೆರಿಗೆಯೇತರ ಸ್ವೀಕೃತಿಗಳು, ಕೇಂದ್ರ ತೆರಿಗೆಗಳಿಂದ ರಾಜ್ಯದ ಪಾಲು ಮತ್ತು ಕೇಂದ್ರ ಸರ್ಕಾರದ ಸಹಾಯಾನುದಾನವನ್ನು ಒಳಗೊಂಡಿರುತ್ತದೆ. ವರ್ಷದ ಆರಂಭದಲ್ಲಿ ಕೋವಿಡ್ ಸಾಂಕ್ರಾಮಿಕದ ಎರನೇ ಅಲೆಯಿಂದಾಗಿ ರಾಜಸ್ವ ಸಂಗ್ರಹವು ಮಂದಗತಿಯಲ್ಲಿ ಪ್ರಾರಂಭವಾಯಿತು. ಆದಾಗ್ಯೂ, ಮುಂದಿನ ದಿನಗಳಲ್ಲಿ ಅದು ಹೆಚ್ಚಿದ್ದು, ಆಯವ್ಯಯದಲ್ಲಿ ಅಂದಾಜು ಮಾಡಿದ ಗುರಿಗಳನ್ನು ನಾವು ತಲುಪಲಿದ್ದೇವೆ.

    2021-2022ನೇ ಆರ್ಥಿಕ ವರ್ಷದಲ್ಲಿ ಕೇಂದ್ರ ಸರ್ಕಾರದ ರಾಜಸ್ವ ಸಂಗ್ರಹಣೆಗಳು ಸಹ ಹೆಚ್ಚಿವೆ. ಇದರಿಂದಾಗಿ ರಾಜ್ಯಕ್ಕೆ ಕೇಂದ್ರ ತೆರಿಗೆಗಳ ಪಾಲನ್ನು ಪರಿಷ್ಕೃತ ಅಂದಾಜಿನಲ್ಲಿ, ಆಯವ್ಯಯದಲ್ಲಿ ಅಂದಾಜು ಮಾಡಿದ 24,273 ಕೋಟಿ ರೂ.ಗಳಿಂದ 27,145 ಕೋಟಿ ರೂ. ಗಳಿಗೆ ಹೆಚ್ಚಸಲಾಗಿದೆ. ಕೇಂದ್ರ ಸರ್ಕಾರವು 2022-23ನೇ ಸಾಲಿನ ತನ್ನ ಆಯವ್ಯಯದಲ್ಲಿ ಕರ್ನಾಟಕಕ್ಕೆ ತೆರಿಗೆ ಹಂಚಿಕೆಯಾಗಿ 29,783ಕೋಟಿ ರೂ.ಗಳನ್ನು ಅಂದಾಜು ಮಾಡಿದೆ.

    ಹಿಂದಿನ ವರ್ಷಕ್ಕೆ ಹೋಲಿಸಿದರೆ 2021-22ನೇ ಸಾಲಿನಲ್ಲಿ ರಾಜ್ಯದ ಜಿಎಸ್‍ಟಿ ಸಂಗ್ರಹಣೆಯು ಹೆಚ್ಚಾಗಿದೆ ಮತ್ತು ಚೇತರಿಕೆಯ ಹಾದಿಯಲ್ಲಿದೆ ಎಂಬುದನ್ನು ತೋರಿಸುತ್ತದೆ. ಕೇಂದ್ರ ಸರ್ಕಾರವು 2021-22ನೇ ಸಾಲಿಗೆ ಜಿಎಸ್‍ಟಿ ಪರಿಹಾರ ಮೊತ್ತ 7,158 ಕೋಟಿ ರೂ.ಗಳ ಜೊತೆಗೆ ಜಿಎಸ್‍ಟಿ ಪರಿಹಾರದ ಬದಲಾಗಿ 18,1089 ಕೋಟಿ ರೂ.ಗಳನ್ನು ಜಿಎಸ್‍ಟಿ ಸಾಲವಾಗಿ ನೀರುವ ಮೂಲಕ ರಾಜ್ಯವನ್ನು ಬೆಂಬಲಿಸಿದೆ. ಇದನ್ನು ಓದಿ: ಮೇಕೆದಾಟು ಯೋಜನೆಗೆ 1,000 ಕೋಟಿ ರೂ. ಅನುದಾನ

    ಇದು ಕೋವಿಡ್ ಮತ್ತು ಅದಕ್ಕೆ ಸಂಬಂಧಿಸಿದ ವೆಚ್ಚಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಮಾತ್ರವಲ್ಲದೆ ಬೆಳವಣಿಗೆಗೆ ಉತ್ತೇಜನೆಯನ್ನು ಒದಗಿಸುವ ಎಲ್ಲಾ ಅಭಿವೃದ್ಧಿ ಕಾರ್ಯಗಳು ಮತ್ತು ಕಾರ್ಯಕ್ರಮಗಳಿಗೆ ಸಮರ್ಪಕವಾಗಿ ಹಣವನ್ನು ಒದಗಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ಸಹ ನಮಗೆ ಸಹಾಯ ಮಾಡಿದೆ.

    ಜಿಎಸ್‍ಟಿ ಪರಿಹಾರವು ಜೂನ್ 2022ಕ್ಕೆ ಕೊನೆಗೊಳ್ಳಲಿದೆ. ಇದರರ್ಥ ರಾಜ್ಯವು ಹೆಚ್ಚುವರಿ ಸಂಪನ್ಮೂಲಗಳನ್ನು ಒಟ್ಟುಗೂಡಿಸಬೇಕು ಎಂಬುದಾಗಿದೆ. ನಾವು ಸ್ವಂತ ತೆರಿಗೆ ಸಂಗ್ರಹಗಳನ್ನು ಮತ್ತು ತೆರಿಗೆಯೇತರ ಸಂಗ್ರಹಗಳನ್ನು ಹೆಚ್ಚಸಲು ಪ್ರಯತ್ನಿಸಿದ್ದೇವೆ. ಭವಿಷ್ಯದ ಹೊಣೆಗಾರಿಕೆಯನ್ನು ನಿರ್ವಹಿಸಲು ರಾಜ್ಯಗಳಿಗೆ ಜಿಎಸ್‍ಟಿ ಪರಿಹಾರಗಳನ್ನು ಕನಿಷ್ಠ ಮೂರು ವರ್ಷಗಳವರೆಗೆ ವಿಸ್ತರಿಸಲು ನಾನು ಕೇಂದ್ರ ಸರ್ಕಾರವನ್ನು ವಿನಂತಿಸಿದ್ದೇನೆ. ಇದನ್ನು ಓದಿ: Karnataka Budget: ಈ ವರ್ಷ ಯಾವುದೇ ತೆರಿಗೆ ಹೆಚ್ಚಳ ಇಲ್ಲ

    ಕೋವಿಡ್ ಪ್ರಭಾವದಿಂದಾಗಿ ಆರ್ಥಿಕ ಹಿಂಜರಿಕೆಯನ್ನು ನಿವಾರಿಸಲುಯ ರಾಜ್ಯಗಳಿಗೆ ಬೆಂಬಲವಾಗಿ 2021-22ನೇ ಸಾಲಿನ ಅವಧಿಯಲ್ಲಿ ಜಿಎಸ್‍ಡಿಪಿಯ ಶೇ.4ರವರೆಗೆ ಸಾಲವನ್ನು ಪಡೆಯಲುಯ ಕೇಂದ್ರ ಸರ್ಕಾರವು ರಾಜ್ಯಗಳಿಗೆ ಅನುಕೂಲ ಕಲ್ಪಿಸಿದೆ. ಅದರಂತೆ, ಈ ಸೌಲಭ್ಯವನ್ನು ಪಡೆಯಲು ರಾಜ್ಯ ಸರ್ಕಾರವು ಕರ್ನಾಟಕ ವಿತ್ತಿಯ ಹೊಣೆಗಾರಿಕೆ ಅಧಿನಿಯಮ, 2002ಅನ್ನು ತಿದ್ದುಪಡಿ ಮಾಡಿದೆ. 2022-23ನೇ ಸಾಲಿಗೆ ಕೇಮದ್ರ ಸರ್ಕಾರವು ತನ್ನ ಕೇಂದ್ರ ಆಯವ್ಯಯದಲ್ಲಿ ವಿತ್ತೀಯ ಕೊರತೆಯನ್ನು ಶೇ. 3.5ರವರೆಗೆ ಹೆಚ್ಚಿಸಲು ರಾಜ್ಯಗಳಿಗೆ ಅವಕಾಶ ನೀಡಿದ್ದರೂ ಸಹ ನಮ್ಮ ಸರ್ಕಾರವು ಇದನ್ನು ಶೇ.3.26ಕ್ಕೆ ಸಿಮೀತಗೊಳಿಸುವ ಮೂಲಕ ಆರ್ಥಿಕ ಶಿಸ್ತು ಮತ್ತು ಮುಂದಾಲೋಚನೆಯನ್ನು ಪ್ರದರ್ಶಿಸಿದೆ ಎಂದು ತಿಳಿಸಿದರು.

    ಕೇಂದ್ರ ಸರ್ಕಾರವು ಕಳೆದ 2 ವರ್ಷಗಳಲ್ಲಿ ಹೆಚ್ಚುವರಿ ಸಾಲವನ್ನು ಅನುಮತಿಸಿದಾಗ ನಾವು ಸಾಲವನ್ನು ನಿಯಂತ್ರಣದಲ್ಲಿಡುವಲ್ಲಿ ಯಶಸ್ವಿಯಾಗಿದ್ದೇವೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಆಯವ್ಯದ 67,100 ಕೋಟಿ ರೂ.ಗಳ ಬದಲಿಗೆ 63,100ಕೀಓಟಿ ರೂ.ಗಳಿಗೆ ಸಾಲವನ್ನು ನಿರ್ಬಂಧಿಸಲು ಪ್ರಸ್ತಾಪಿಸಿದ್ದೇನೆ. 2022-23ನೇ ಸಾಲಿನಲ್ಲಿ 72,000ಕೋಟಿ ರೂ.ಗಳ ಸಾಲವನ್ನು ಪಡೆಯಲು ಯೋಜಿಸಿದ್ದೇವೆ ಎಂದರು.

    2021-22ನೇ ಸಾಲಿಗೆ ಮಂಡಿಸಲಾದ ಆಯವ್ಯ ಆಗ ಇದ್ದ ನಿರ್ಬಂಧಗಳಿಂದಾಗಿ ವೆಚ್ಚವನ್ನು ಕಡಿಮೆ ಮಾಡುವ ಮತ್ತು ಹೊಸ ಯೋಜನೆಗಳನ್ನು ಘೋಷಿಸುವಲ್ಲಿ ಸಂಯಮವನ್ನು ಪ್ರದರ್ಶಿಸುವ ಮೂಲಕ ತೊಂದರೆಗಳನ್ನು ಎದುರಿಸುವ ಆಯವ್ಯಯ ಆಗಿತ್ತು. 2022-23ನೇ ಆಯವ್ಯಯವು ಒಂದು ಭರವಸೆಯಾಗಿದ್ದು, ಇದು ಅಭಿವೃದ್ಧಿ ಮತ್ತು ಉತ್ತಮ ಭವಿಷ್ಯದ ಭರವಸೆಯಾಗಿದೆ ಎಂದು ತಿಳಿಸಿದರು.

  • ಚೊಚ್ಚಲ ಬಜೆಟ್‌ ಮಂಡನೆಗೂ ಮುನ್ನ ದೇಗುಲಗಳಿಗೆ ಭೇಟಿ ನೀಡಿದ ಸಿಎಂ ಬೊಮ್ಮಾಯಿ

    ಚೊಚ್ಚಲ ಬಜೆಟ್‌ ಮಂಡನೆಗೂ ಮುನ್ನ ದೇಗುಲಗಳಿಗೆ ಭೇಟಿ ನೀಡಿದ ಸಿಎಂ ಬೊಮ್ಮಾಯಿ

    ಬೆಂಗಳೂರು: ಇಂದು ತಮ್ಮ ಚೊಚ್ಚಲ ಬಜೆಟ್ ಮಂಡಿಸಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಬೆಂಗಳೂರಿನ ಶ್ರೀಕಂಠೇಶ್ವರ ದೇವಸ್ಥಾನ ಹಾಗೂ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಇದೇ ವೇಳೆ ಅವರು ಸಮಸ್ತ ಕರ್ನಾಟಕದ ಜನತೆಯ ಹೆಸರಿನಲ್ಲಿ ಅರ್ಚನೆ ಮಾಡಿಸಿದರು.

    ಬೆಂಗಳೂರಿನ ಆರ್ ಟಿ ನಗರ ನಿವಾಸದ ಬಳಿ ಇರುವ ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಪೌರ ಕಾರ್ಮಿಕರ ಜೊತೆ ಮಾತನಾಡಿ, ಅವರ ಕುಶಲ ಕ್ಷೇಮ ವಿಚಾರಿಸಿದರು. ಇದನ್ನೂ ಓದಿ: ಸಿಎಂ ಬೊಮ್ಮಾಯಿ ಚೊಚ್ಚಲ ಬಜೆಟ್‍ಗೆ ಕೌಂಟ್‍ಡೌನ್

    ಇಂದು ಮಧ್ಯಾಹ್ನ 12.30ಕ್ಕೆ ಸಿಎಂ ತಮ್ಮ ಮೊದಲ ಪೂರ್ಣ ಬಜೆಟ್ ಮಂಡಿಸುತ್ತಿದ್ದು, ಹತ್ತು ಹಲವು ನಿರೀಕ್ಷೆಗಳನ್ನು ಹುಟ್ಟಿಸಿದೆ.ಈ ಬಜೆಟ್ ಸಿಎಂಗೂ, ಸರ್ಕಾರಕ್ಕೂ ಸವಾಲಿನ ಬಜೆಟ್ ಆಗಿದೆ. ರೈತಪರ, ಜನಪರ, ಜನಪ್ರಿಯ ಬಜೆಟ್ ಮಾಡುವ ಹುಮ್ಮಸ್ಸಿನಲ್ಲಿರೋ ಸಿಎಂ, ಎಲ್ಲ ವರ್ಗದವರಿಗೆ, ಎಲ್ಲ ವಲಯಗಳಿಗೆ ಮುಟ್ಟುವ ಬಜೆಟ್ ಮಾಡಬೇಕೆಂಬ ಹಂಬಲ ಹೊಂದಿದ್ದಾರೆ. ಗ್ರಾಮೀಣಾಭಿವೃದ್ಧಿ, ಲೋಕೋಪಯೋಗಿ, ಕೃಷಿ, ನೀರಾವರಿ, ಆರೋಗ್ಯ, ಮೂಲ ಸೌಕರ್ಯ, ಪ್ರವಾಸೋದ್ಯಮ ವಲಯಗಳಿಗೆ ಹೆಚ್ಚಿನ ಆದ್ಯತೆ ನೀಡುವ ಸಾಧ್ಯತೆಯಿದೆ. ಇದನ್ನೂ ಓದಿ: ಹಿಂದಿನ ಸರ್ಕಾರಗಳ ವೈದ್ಯಕೀಯ ಶಿಕ್ಷಣ ನೀತಿ ಸರಿಯಿದ್ದಿದ್ದರೆ ನೀವು ವಿದೇಶಗಳಿಗೆ ಹೋಗುತ್ತಿರಲಿಲ್ಲ: ಮೋದಿ