Tag: ಬೊಮ್ಮಸಂದ್ರ

  • ಕಿತ್ತಗಾನಹಳ್ಳಿ ಸಿಲಿಂಡರ್ ಸ್ಫೋಟದಲ್ಲಿ ಗಾಯಗೊಂಡಿದ್ದ ಓರ್ವ ಚಿಕಿತ್ಸೆ ಫಲಿಸದೇ ಸಾವು

    ಕಿತ್ತಗಾನಹಳ್ಳಿ ಸಿಲಿಂಡರ್ ಸ್ಫೋಟದಲ್ಲಿ ಗಾಯಗೊಂಡಿದ್ದ ಓರ್ವ ಚಿಕಿತ್ಸೆ ಫಲಿಸದೇ ಸಾವು

    ಆನೇಕಲ್: ಇಲ್ಲಿನ ಕಿತ್ತಗಾನಹಳ್ಳಿಯಲ್ಲಿ (Kittaganahalli) ನಡೆದಿದ್ದ ಸಿಲಿಂಡರ್ ಸ್ಫೋಟದಲ್ಲಿ ಗಾಯಗೊಂಡಗೊಂಡಿದ್ದ ಓರ್ವ ವ್ಯಕ್ತಿ ಇಂದು (ಜ.10) ಸಾವನ್ನಪ್ಪಿದ್ದಾನೆ.

    ಮೃತ ವ್ಯಕ್ತಿಯನ್ನು ತಮಿಳುನಾಡು ಮೂಲದ ವಿಷ್ಣು ಜಯರಾಜ್(30) ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಬಿಜೆಪಿ ಕಾರ್ಯಕರ್ತೆ ಶಂಕುತಲಾ ನಟರಾಜ್ ಪುತ್ರ ಆತ್ಮಹತ್ಯೆ

    ಸಿಲಿಂಡರ್ ಸ್ಫೋಟದ ವೇಳೆ ಮನೆಯಲ್ಲಿ ವಾಸವಾಗಿದ್ದ ಇಬ್ಬರು ಗಾಯಗೊಂಡಿದ್ದರು. ಇಬ್ಬರ ಪೈಕಿ ಓರ್ವ ಕಟ್ಟಡದ ಎರಡನೇ ಮಹಡಿಯಿಂದ ಬಿದ್ದು ಗಾಯಗೊಂಡಿದ್ದ. ಗಾಯಾಳುಗಳಿಗೆ ನಾರಾಯಣ ಹೆಲ್ತ್ ಸಿಟಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ವಿಷ್ಣು ದೇಹದ ಬಹುತೇಕ ಭಾಗಗಳಿಗೆ ಗಾಯವಾಗಿ, ಚಿಂತಾಜನಕ ಸ್ಥಿತಿಯಲ್ಲಿದ್ದ. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.

    ಘಟನೆ ಏನು?
    ಜ.06 ರಂದು ಬೊಮ್ಮಸಂದ್ರ (Bommasandra) ಸಮೀಪದ ಕಿತ್ತಗಾನ ಹಳ್ಳಿಯಲ್ಲಿ ಸಿಲಿಂಡರ್ ಸ್ಫೋಟಗೊಂಡಿತ್ತು. ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಕಟ್ಟಡದ ಒಂದು ಮಹಡಿ ಸಂಪೂರ್ಣ ಛಿದ್ರವಾಗಿತ್ತು. ಜಯನಗರ ಮೂಲದ ಸುನಿಲ್ ಎಂಬವರಿಗೆ ಸೇರಿದ್ದ ಕಟ್ಟಡದಲ್ಲಿ ಇಬ್ಬರು ವಾಸವಾಗಿದ್ದರು. ಕೆಲಸಕ್ಕೆ ಹೋಗಲು ಒಬ್ಬರು ಸ್ನಾನ ಮಾಡುತ್ತಿದ್ದರಂತೆ. ಇದೇ ವೇಳೆ ಸಿಲಿಂಡರ್ ಸ್ಫೋಟಗೊಂಡಿದ್ದು, ಇನ್ನೋರ್ವ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಎರಡನೇ ಅಂತಸ್ತಿನಿಂದ ಕೆಳಗೆ ಬಿದ್ದಿದ್ದ. ಸ್ಫೋಟದ ತೀವ್ರತೆಗೆ ಕಟ್ಟಡದ ಹಾಲೋ ಬ್ಲಾಕ್‌ಗಳು ಹಾರಿಹೋಗಿದ್ದವು. ಜೊತೆಗೆ ಬಿಲ್ಡಿಂಗ್ ನಾಲ್ಕು ಪಿಲ್ಲರ್‌ಗಳು ಕೂಡ ಛಿದ್ರಗೊಂಡಿದ್ದವು. ಇದರ ಪರಿಣಾಮ ನಾಲ್ಕು ಬಿಲ್ಡಿಂಗ್, 3 ಕಾರು, 6 ದ್ವಿಚಕ್ರ ವಾಹನಗಳು ಹಾನಿಗೊಳಗಾಗಿದ್ದವು.ಇದನ್ನೂ ಓದಿ: ವೈಕುಂಠ ಏಕಾದಶಿ- ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್‌ಕುಮಾರ್

     

  • ಆನೇಕಲ್‌ನಲ್ಲಿ ಸಿಲಿಂಡರ್ ಸ್ಫೋಟ – ತೀವ್ರತೆಗೆ ಕಟ್ಟಡದ ಒಂದು ಮಹಡಿ ಸಂಪೂರ್ಣ ಛಿದ್ರ

    ಆನೇಕಲ್‌ನಲ್ಲಿ ಸಿಲಿಂಡರ್ ಸ್ಫೋಟ – ತೀವ್ರತೆಗೆ ಕಟ್ಟಡದ ಒಂದು ಮಹಡಿ ಸಂಪೂರ್ಣ ಛಿದ್ರ

    – ನಾಲ್ಕು ಬಿಲ್ಡಿಂಗ್, 3 ಕಾರು, 6 ದ್ವಿಚಕ್ರವಾಹನಗಳಿಗೆ ಹಾನಿ

    ಆನೇಕಲ್: ಸಿಲಿಂಡರ್ ಸ್ಫೋಟಗೊಂಡ (Cylinder Blast) ಪರಿಣಾಮ ಕಟ್ಟಡದ ಒಂದು ಮಹಡಿ ಸಂಪೂರ್ಣ ಛಿದ್ರವಾಗಿರುವ ಘಟನೆ ಬೊಮ್ಮಸಂದ್ರ (Bommasandra) ಸಮೀಪದ ಕಿತ್ತಗಾನ ಹಳ್ಳಿಯಲ್ಲಿ ನಡೆದಿದೆ.

    ಗಾಯಾಳುಗಳನ್ನು ಕೇರಳ ಮೂಲದ ವಿಶ್ವ ಹಾಗೂ ತಮಿಳುನಾಡು ಮೂಲದ ಸುನಿಲ್ ಜಾದವ್ ಎಂದು ಗುರುತಿಸಲಾಗಿದ್ದು, ನಾರಾಯಣ ಹೃದಯಾಲಯದಲ್ಲಿ ಕೆಲಸ ಮಾಡುತ್ತಿದ್ದರು. ಮನೆಯಲ್ಲಿದ್ದ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಇದನ್ನೂ ಓದಿ: ಯಶ್ ಫ್ಯಾನ್ಸ್‌ಗೆ ಸರ್ಪ್ರೈಸ್- ‘ಟಾಕ್ಸಿಕ್’ ಟೀಮ್‌ನಿಂದ ಸಿಕ್ತು ಸಿಹಿ ಸುದ್ದಿ

    ಇಂದು (ಜ.06 ) 8:30ರ ಸುಮಾರಿಗೆ ಈ ಅವಘಡ ಸಂಭವಿಸಿದೆ. ಜಯನಗರ ಮೂಲದ ಸುನಿಲ್ ಎಂಬುವವರಿಗೆ ಸೇರಿದ್ದ ಕಟ್ಟಡದಲ್ಲಿ ಇಬ್ಬರು ವಾಸವಾಗಿದ್ದರು. ಕೆಲಸಕ್ಕೆ ಹೋಗಲು ಒಬ್ಬರು ಸ್ನಾನ ಮಾಡುತ್ತಿದ್ದರಂತೆ. ಇದೇ ವೇಳೆ ಸಿಲಿಂಡರ್ ಸ್ಫೋಟಗೊಂಡಿದ್ದು, ಇನ್ನೋರ್ವ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಎರಡನೇ ಅಂತಸ್ತಿನಿಂದ ಕೆಳಗೆ ಬಿದ್ದಿದ್ದಾನೆ. ಸ್ಫೋಟದ ತೀವ್ರತೆಗೆ ಕಟ್ಟಡದ ಹಾಲೋ ಬ್ಲಾಕ್‌ಗಳು ಹಾರಿಹೋಗಿವೆ. ಬಿಲ್ಡಿಂಗ್ ನಾಲ್ಕು ಪಿಲ್ಲರ್‌ಗಳು ಕೂಡ ಛಿದ್ರಗೊಂಡಿವೆ. ಇದರ ಪರಿಣಾಮ ನಾಲ್ಕು ಬಿಲ್ಡಿಂಗ್, 3 ಕಾರು, 6 ದ್ವಿಚಕ್ರವಾಹನಗಳು ಹಾನಿಗೊಳಗಾಗಿವೆ.

    ಸದ್ಯ ಗಾಯಾಳುಗಳನ್ನ ಸ್ಥಳೀಯ ನಾರಾಯಣ ಹೃದಯಾಲಯಕ್ಕೆ ಶಿಫ್ಟ್ ಮಾಡಲಾಗಿದೆ. ಬೆಳಗ್ಗೆ ಲೈಟ್ ಹಾಕಿದಾಗ ಸ್ಫೋಟ ಆಗಿರಬಹುದು ಎಂದು ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ, 15ಕ್ಕೂ ಹೆಚ್ಚು ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಸೂರ್ಯ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.ಇದನ್ನೂ ಓದಿ: 2 ಬಡಾವಣೆ ವಿಸ್ತರಣೆಗೆ ಮುಂದಾಗುತ್ತಿದ್ದಂತೆ ಅಕ್ರಮ ಕಟ್ಟಡ ಕಟ್ಟಲು ಆರಂಭಿಸಿದ ಭೂ ಮಾಲೀಕರು

  • ಬೊಮ್ಮಸಂದ್ರದಲ್ಲಿ ಭಾರೀ ಅಗ್ನಿ ಅವಘಡ – ಹೊತ್ತಿ ಉರಿದ ಬಟ್ಟೆ ಕಾರ್ಖಾನೆ

    ಬೊಮ್ಮಸಂದ್ರದಲ್ಲಿ ಭಾರೀ ಅಗ್ನಿ ಅವಘಡ – ಹೊತ್ತಿ ಉರಿದ ಬಟ್ಟೆ ಕಾರ್ಖಾನೆ

    ಆನೇಕಲ್: ಇಲ್ಲಿನ ಬೊಮ್ಮಸಂದ್ರದಲ್ಲಿ (Bommasandra) ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಬಟ್ಟೆ ಕಾರ್ಖಾನೆ ಹೊತ್ತಿ ಉರಿದಿದೆ.ಇದನ್ನೂ ಓದಿ: ಹೊಸ ವರ್ಷಕ್ಕೆ ಶಾಕ್‌ – ಜ.5 ರಿಂದ ಬಸ್‌ ಪ್ರಯಾಣ ದರ ಏರಿಕೆ

    ಅಗ್ನಿ ದುರಂತದ (Fire Accident) ಹಿನ್ನೆಲೆ ಇಡೀ ಕೈಗಾರಿಕಾ ಪ್ರದೇಶ ಹೊಗೆಯಿಂದ ಆವರಿಸಿದ್ದು, ಅಕ್ಕಪಕ್ಕದಲ್ಲಿಯೂ ಬೆಂಕಿ ಆವರಿಸುತ್ತಿದೆ. ಹೀಗಾಗಿ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

    ಕಾರ್ಖಾನೆಯಲ್ಲಿ ಬೆಂಕಿ ಆವರಿಸಿರುವ ಪರಿಣಾಮ ಒಳಗೆ ಇರುವ ಯಂತ್ರಗಳು ಸ್ಫೋಟಗೊಳ್ಳುತ್ತಿವೆ. ಕಾರ್ಖಾನೆಯೊಳಗೆ ಯಾರಾದರೂ ಕಾರ್ಮಿಕರು ಇದ್ದಾರಾ ಎನ್ನುವ ಪ್ರಶ್ನೆ ಎಲ್ಲರಲ್ಲಿ ಮೂಡಿದೆ. ಜೊತೆಗೆ ಸುತ್ತಮುತ್ತಲಿರುವ ಕಂಪನಿಗಳಿಗೆ ಹಾಗೂ ಹೋಟೆಲ್‌ಗಳಿಗೆ ಆತಂಕ ಸೃಷ್ಟಿಯಾಗಿದೆ.ಇದನ್ನೂ ಓದಿ: ಸೈಬರ್‌ ಕ್ರೈಂ ಪೇದೆಗೆ ಹನಿಟ್ರ್ಯಾಪ್‌ – ಪತ್ನಿ ಆತ್ಮಹತ್ಯೆಗೆ ಯತ್ನ

     

  • ಬೊಮ್ಮಸಂದ್ರದಲ್ಲಿ ಸರಣಿ ಅಪಘಾತ – ದ್ವಿಚಕ್ರ ವಾಹನ ಸವಾರರಿಗೆ ಗಾಯ

    ಬೊಮ್ಮಸಂದ್ರದಲ್ಲಿ ಸರಣಿ ಅಪಘಾತ – ದ್ವಿಚಕ್ರ ವಾಹನ ಸವಾರರಿಗೆ ಗಾಯ

    – ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್

    ಬೆಂಗಳೂರು: ಇನ್ನೋವಾ ಕಾರೊಂದು ಗೂಡ್ಸ್ ಆಟೋ ಹಾಗೂ ಎರಡು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದು ಸರಣಿ ಅಪಘಾತ (Serial Accident) ಉಂಟಾದ ಘಟನೆ ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿಯ ಬೊಮ್ಮಸಂದ್ರ (Bommasandra) ಸರ್ವಿಸ್ ರಸ್ತೆಯಲ್ಲಿ (Service Road) ನಡೆದಿದೆ.

    ಇನ್ನೋವಾ ಕಾರು ಬೆಂಗಳೂರು (Bengaluru) ಕಡೆಯಿಂದ ಚಂದಾಪುರ ಮಾರ್ಗವಾಗಿ ಬರುತ್ತಿತ್ತು. ಈ ವೇಳೆ ಚಾಲಕನ ಅತಿಯಾದ ವೇಗ ಹಾಗೂ ಅಜಾಗರೂಕತೆಯ ಚಾಲನೆಯಿಂದ ಮುಂದೆ ಬರುತ್ತಿದ್ದ ಗೂಡ್ಸ್ ಆಟೋ, ಎರಡು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಇದನ್ನೂ ಓದಿ: ಜಮ್ಮು, ಕಾಶ್ಮೀರದಲ್ಲಿ ಪ್ರವಾಹ- ಐವರ ದುರ್ಮರಣ

    ಘಟನೆಯಿಂದ ಹೆದ್ದಾರಿಯಲ್ಲಿದ್ದ ಬ್ಯಾರಿಕೇಡ್ ಮುರಿದು ಬಿದ್ದು ವಾಹನಗಳು ಜಖಂ ಆಗಿದ್ದು, ದ್ವಿಚಕ್ರ ವಾಹನ ಸವಾರರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ಅಪಘಾತ ಹಿನ್ನೆಲೆ ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿದೆ. ಸ್ಥಳಕ್ಕೆ ಹೆಬ್ಬಗೋಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಛತ್ತೀಸ್‍ಗಢದಲ್ಲಿ ಎನ್‍ಕೌಂಟರ್ – ಇಬ್ಬರು ಮಹಿಳೆಯರು ಸೇರಿ 9 ಮಂದಿ ನಕ್ಸಲರ ಹತ್ಯೆ

  • ಆರ್‌ವಿ ರಸ್ತೆ, ಬೊಮ್ಮಸಂದ್ರ ಪ್ರಯಾಣಿಕರಿಗೆ ಗುಡ್ ನ್ಯೂಸ್ – ವರ್ಷಾಂತ್ಯಕ್ಕೆ ಹಳದಿ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭ

    ಆರ್‌ವಿ ರಸ್ತೆ, ಬೊಮ್ಮಸಂದ್ರ ಪ್ರಯಾಣಿಕರಿಗೆ ಗುಡ್ ನ್ಯೂಸ್ – ವರ್ಷಾಂತ್ಯಕ್ಕೆ ಹಳದಿ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭ

    ಬೆಂಗಳೂರು: ಸಿಲಿಕಾನ್ ಸಿಟಿ (Bengaluru) ಜನರಿಗೆ ಮತ್ತೊಂದು ಗುಡ್ ನ್ಯೂಸ್ ನೀಡಲು ಬಿಎಂಆರ್‌ಸಿಎಲ್ (BMRCL) ಮುಂದಾಗಿದೆ. ನಮ್ಮ ಮೆಟ್ರೋವಿನ ಹಳದಿ ಮಾರ್ಗ (Metro Yellow Line) ಈ ವರ್ಷಾಂತ್ಯಕ್ಕೆ ಕಾರ್ಯಾಚರಣೆಗೊಳ್ಳಲಿದೆ.

    ಬಹು ನಿರೀಕ್ಷಿತ ಆರ್‌ವಿ ರಸ್ತೆಯಿಂದ (RV Road) ಬೊಮ್ಮಸಂದ್ರ (Bommasandra) ಮೆಟ್ರೋ (Metro) ಮಾರ್ಗವನ್ನು ಈ ವರ್ಷದ ಅಂತ್ಯಕ್ಕೆ ಆರಂಭಿಸಲು ಬಿಎಂಆರ್‌ಸಿಎಲ್ ಸಜ್ಜಾಗಿದೆ. ಪ್ರಸಕ್ತ ವರ್ಷಾಂತ್ಯಕ್ಕೆ ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ಬೆಂಗಳೂರು ಮೆಟ್ರೋ ರೈಲು ನಿಗಮವು ತಿಳಿಸಿದೆ.

     

    ಬಿಎಂಆರ್‌ಸಿಎಲ್ ಈ ಮೊದಲು ಎರಡು ಹಂತಗಳಲ್ಲಿ ಮೆಟ್ರೋ ರೈಲು ಕಾರ್ಯಾಚರಣೆ ಆರಂಭಿಸಲು ನಿರ್ಧರಿಸಿತ್ತು. ಮೊದಲ ಹಂತದಲ್ಲಿ ಜೂನ್ ತಿಂಗಳಲ್ಲಿ ಬೊಮ್ಮಸಂದ್ರದಿಂದ ಸಿಲ್ಕ್‌ಬೋರ್ಡ್‌ವರೆಗೆ ಮತ್ತು ಎರಡನೇ ಹಂತದಲ್ಲಿ ಡಿಸೆಂಬರ್‌ನಲ್ಲಿ ಸೆಂಟ್ರಲ್ ಸಿಲ್ಕ್‌ಬೋರ್ಡ್‌ನಿಂದ ಆರ್‌ವಿ ರಸ್ತೆವರೆಗೆ ರೈಲುಗಳ ಸಂಚಾರಕ್ಕೆ ಉದ್ದೆಶಿಸಿತ್ತು. ಈ ಕ್ರಮದಿಂದ ಪ್ರಯಾಣಿಕರನ್ನು ಆಕರ್ಷಿಸುವುದು ಕಷ್ಟವೆಂದು ಅರಿತು ಒಂದೇ ಹಂತದಲ್ಲಿ ಪೂರ್ಣಗೊಳಿಸಲು ನಿರ್ಧರಿಸಿದೆ.

    ಆರ್‌ವಿ ರಸ್ತೆ-ಬೊಮ್ಮಸಂದ್ರ ನಡುವಿನ ಮಾರ್ಗವು ಅತ್ಯಧಿಕ ವಾಹನ ದಟ್ಟಣೆಯಿಂದ ಕೂಡಿದೆ. ಇದರಿಂದ ವಾಹನ ಸವಾರರು ಬಹುಪಾಲು ಸಮಯವನ್ನು ರಸ್ತೆಯಲ್ಲಿಯೇ ಕಳೆಯುವಂತಾಗಿದೆ. ಈ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರ ಶುರುವಾದರೆ ಸಾಕಷ್ಟು ಉದ್ಯೋಗಿಗಳಿಗೆ ಅನುಕೂಲವಾಗಲಿದೆ. ಬೊಮ್ಮಸಂದ್ರ ಕೈಗಾರಿಕಾ ಪ್ರದೇಶಕ್ಕೆ ಪ್ರಮುಖ ಸಂಪರ್ಕ ಸೇತುವೆಯಾಗಲಿದೆ.

     

    namma metro

    ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರವರೆಗಿನ ಮೆಟ್ರೋ ಮಾರ್ಗ ನಿರ್ಮಾಣಕ್ಕೆ 4,255 ಕೋಟಿ ರೂ. ವೆಚ್ಚವಾಗಿದೆ ಎಂದು ಅಂದಾಜಿಸಲಾಗಿದೆ. ಸದ್ಯ ಶೇ.50 ಕ್ಕೂ ಅಧಿಕ ಕಾಮಗಾರಿ ಮುಗಿದಿದ್ದು, ಉಳಿದಂತೆ ಬಾಕಿ ಇರುವ ಕಾಮಗಾರಿಯನ್ನು ಮುಂದಿನ 6 ತಿಂಗಳಲ್ಲಿ ಪೂರೈಸಿಕೊಳ್ಳಲು ಬಿಎಂಆರ್‌ಸಿಎಲ್ ಮುಂದಾಗಿದೆ. ಇದನ್ನೂ ಓದಿ: ಗ್ಯಾರಂಟಿ ಲಾಭ ಪಡೆಯಲು ದುಂಬಾಲು – ಬೆಂಗಳೂರಿನಲ್ಲಿ ಬಿಪಿಎಲ್ ಕಾರ್ಡ್‍ಗೆ ಫುಲ್‌ ಡಿಮ್ಯಾಂಡ್‌

    ನಿಲ್ದಾಣಗಳು:
    ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರವರೆಗೆ ಬರುವ ಮೆಟ್ರೋ ನಿಲ್ದಾಣಗಳೆಂದರೆ, ಆರ್‌ವಿ ರಸ್ತೆ, ರಾಗಿಗುಡ್ಡ, ಜಯದೇವ ಆಸ್ಪತ್ರೆ, ಬಿಟಿಎಂ ಲೇಔಟ್, ಸೆಂಟ್ರಲ್ ಸಿಲ್ಕ್ ಬೋರ್ಡ್, ಬೊಮ್ಮನಹಳ್ಳಿ, ಹೊಂಗಸಂದ್ರ, ಕೂಡ್ಲುಗೇಟ್, ಸಿಂಗಸಂದ್ರ, ಬೆರಟೇನ ಅಗ್ರಹಾರ, ಎಲೆಕ್ಟ್ರಾನಿಕ್ ಸಿಟಿ, ಇನ್ಫೋಸಿಸ್ ಫೌಂಡೇಶನ್, ಕೋನಪ್ಪನ ಅಗ್ರಹಾರ, ಹೊಸೂರು ರಸ್ತೆ, ಹೆಬ್ಬಗೋಡಿ ಮತ್ತು ಬೊಮ್ಮಸಂದ್ರ.

    ಐಟಿ-ಬಿಟಿ ಕಂಪನಿಗಳಿಗೆ ಸಂಪರ್ಕ ಕಲ್ಪಿಸುವ ಮಾರ್ಗ ಇದಾಗಿದ್ದು, ನಮ್ಮ ಮೆಟ್ರೋ ಉತ್ತಮ ಆದಾಯವನ್ನೂ ತಂದುಕೊಡಲಿದೆ. ಈ ಮಾರ್ಗದಲ್ಲಿ ಸುಮಾರು 3.70 ಲಕ್ಷ ಮಂದಿ ಪ್ರಯಾಣಿಸಬಹುದೆಂದು ಅಂದಾಜಿಸಲಾಗಿದೆ. ಇದನ್ನೂ ಓದಿ: ಕಳೆದ 5 ವರ್ಷಗಳಲ್ಲೇ ಕಡಿಮೆ ಮಟ್ಟಕ್ಕೆ ಕುಸಿದ ಕೆಆರ್‌ಎಸ್‌ ಡ್ಯಾಂ ನೀರು ಸಂಗ್ರಹ

  • ಬೆಳ್ಳಂಬೆಳಗ್ಗೆ ಕೈಗಾರಿಕಾ ಸಂಘದ ಅಧ್ಯಕ್ಷರ ಮನೆ ಮೇಲೆ IT ದಾಳಿ

    ಬೆಳ್ಳಂಬೆಳಗ್ಗೆ ಕೈಗಾರಿಕಾ ಸಂಘದ ಅಧ್ಯಕ್ಷರ ಮನೆ ಮೇಲೆ IT ದಾಳಿ

    – 20ಕ್ಕೂ ಹೆಚ್ಚು ಅಧಿಕಾರಿಗಳಿಂದ ರೇಡ್, ಪರಿಶೀಲನೆ

    ಆನೇಕಲ್: ಶನಿವಾರ ಬೆಳ್ಳಂಬೆಳಗ್ಗೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಬೊಮ್ಮಸಂದ್ರ ಕೈಗಾರಿಕಾ ಸಂಘದ (Industrial Association) ಅಧ್ಯಕ್ಷರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ (IT Raid) ನಡೆದಿದೆ.

    20ಕ್ಕೂ ಹೆಚ್ಚು ಅಧಿಕಾರಿಗಳು ಬೊಮ್ಮಸಂದ್ರ ಪುರಸಭಾ ಸದಸ್ಯರಾಗಿರುವ ಎ. ಪ್ರಸಾದ್ ಹಾಗೂ ಸಹೋದರ ಛಲಪ್ರಸಾದ್ ಅವಳಿ ಸಹೋದರರ ಮನೆ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಧಮ್‌ ಇದ್ರೆ ನನ್‌ ಬಗ್ಗೆ ಒಂದು ಮಾತಾಡಲಿ; ಮನೆಗೆ ನುಗ್ತೀನಿ – ಬಿಜೆಪಿ ಸಚಿವರೊಬ್ಬರ ವಿರುದ್ಧ ನಾಲಿಗೆ ಹರಿಬಿಟ್ಟ ಜಮೀರ್‌

    ಎ. ಪ್ರಸಾದ್ ಅವರ ಬೊಮ್ಮಸಂದ್ರ ನಿವಾಸ, ಸಹೋದರ ಛಲಪ್ರಸಾದ್ ಅವರ ಆರ್‌ಎಸ್ ಗಾರ್ಡೇನಿಯ ನಿವಾಸ, ಬೊಮ್ಮಸಂದ್ರ ಕೈಗಾರಿಕಾ ಸಂಘದ ಕಚೇರಿ ಹಾಗೂ ಕಂಪನಿ ಮೇಲೆ ದಾಳಿ ಮಾಡಿದ್ದಾರೆ. ಇದನ್ನೂ ಓದಿ: Exclusive- ಸುದೀಪ್ ಮುಂದಿನ ಸಿನಿಮಾ ‘ಬಿಲ್ಲ ರಂಗ ಬಾಷಾ’: ಜೂನ್ 1 ರಿಂದ ಶೂಟಿಂಗ್

    ಬೊಮ್ಮಸಂದ್ರದಲ್ಲಿ ಪ್ರಭಾವಿ ನಾಯಕರಾಗಿರುವ ಎ.ಪ್ರಸಾದ್ ಹಾಗೂ ಛಲಪ್ರಸಾದ್ ಬಿಜೆಪಿಯಿಂದ (BJP) ಬೊಮ್ಮಸಂದ್ರ ಪುರಸಭೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.

  • ಬೆಂಗಳೂರು: ಬಿಜೆಪಿ ಮುಖಂಡನನ್ನು ಬರ್ಬರವಾಗಿ ಕೊಚ್ಚಿ ಕೊಂದ ದುಷ್ಕರ್ಮಿಗಳು

    ಬೆಂಗಳೂರು: ಬಿಜೆಪಿ ಮುಖಂಡನನ್ನು ಬರ್ಬರವಾಗಿ ಕೊಚ್ಚಿ ಕೊಂದ ದುಷ್ಕರ್ಮಿಗಳು

    ಬೆಂಗಳೂರು: ಬಿಜೆಪಿ ಮುಖಂಡರೊಬ್ಬರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರೋ ಘಟನೆ ಹೊಸೂರು ಮುಖ್ಯ ರಸ್ತೆಯ ಬಿಟಿಎಲ್ ಕಾಲೇಜು ಮುಂಭಾಗದಲ್ಲಿ ನಡೆದಿದೆ.

    35 ವರ್ಷದ ವಾಸು ಕೊಲೆಯಾದ ಬಿಜೆಪಿ ಮುಖಂಡ. ಇಂದು ಬೆಳಗಿನ ಜಾವ ಸುಮಾರು 5 ಗಂಟೆ ವೇಳೆಯಲ್ಲಿ ಈ ಘಟನೆ ನಡೆದಿದೆ. ವಾಸು ಬೊಮ್ಮಸಂದ್ರ ಪುರಸಭೆಯ ಬಿಜೆಪಿಯ ಸದಸ್ಯರಾಗಿದ್ದರು. ರಾಜಕೀಯ ವೈಷಮ್ಯದಿಂದ ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

    ವಾಸು ಬೊಮ್ಮಸಂದ್ರ ಪುರಸಭೆಯ ಅಧ್ಯಕ್ಷ ಸ್ಥಾನದ ರೇಸ್‍ನಲ್ಲಿ ಮುಂಚೂಣಿಯಲ್ಲಿದ್ದರು. ಇನ್ನು ವಾಸು ರಾಜಕೀಯವಾಗಿ ಬೆಳಯತೊಡಗಿದ್ದು, ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ತಮ್ಮ ಪತ್ನಿಯನ್ನು ಗೆಲ್ಲಿಸಿದ್ದರು. ವಾಸು ರಾಜಕೀಯವಾಗಿ ಪ್ರಬಲ ಮುಖಂಡರಾಗಿ ಗುರುತಿಸಿಕೊಂಡಿದ್ದರು.

    ಇಂದು ಬೆಳಗಿನ ಜಾವ ವಾಸು ಅವರಿಗೆ ಒಂದು ಫೋನ್ ಕಾಲ್ ಬಂದಿತ್ತು. ಕಾಲ್ ಬಂದ ನಂತರ ತಮ್ಮ ಇನ್ನೋವಾ ಕಾರು ತೆಗೆದುಕೊಂಡು ಬಿಟಿಎಲ್ ಕಾಲೇಜು ಮುಂಭಾಗದ ಪಾರ್ಕಿಂಗ್ ಜಾಗದಲ್ಲಿ ನಿಂತಿದ್ದಾಗ ಕೊಲೆ ನಡೆದಿದೆ.

    ಸ್ಥಳಕ್ಕೆ ಬೆಂಗಳೂರು ಗ್ರಾಮಂತರ ಎಸ್‍ಪಿ ಅಮಿತ್ ಸಿಂಗ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಇತ್ತ ವಾಸು ಸಾವಿನ ಸುದ್ದಿ ತಿಳಿದ ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರು ಆಗಮಿಸುತ್ತಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.