Tag: ಬೊಮ್ಮನ್

  • ನಿರ್ಮಾಪಕಿಗೆ 2 ಕೋಟಿ ರೂ. ಮೊತ್ತದ ನೋಟಿಸ್ ಕಳುಹಿಸಿದ ಬೆಳ್ಳಿ-ಬೊಮ್ಮನ್

    ನಿರ್ಮಾಪಕಿಗೆ 2 ಕೋಟಿ ರೂ. ಮೊತ್ತದ ನೋಟಿಸ್ ಕಳುಹಿಸಿದ ಬೆಳ್ಳಿ-ಬೊಮ್ಮನ್

    ಸ್ಕರ್ (Oscar) ಪ್ರಶಸ್ತಿ ವಿಜೇತ ನಿರ್ಮಾಪಕಿ, ದಿ ಎಲಿಫೆಂಟ್ ವಿಸ್ಪರರ್ಸ್ (The Elephant Whisperers) ಡಾಕ್ಯುಮೆಂಟರಿ ನಿರ್ಮಾಣ ಮಾಡಿರುವ ಕಾರ್ತಿಕಿ ಗೊನ್ಸಾಲ್ವೆನ್ಸ್ (Karthiki Gonsalves) ಅವರಿಗೆ ಈ ಸಾಕ್ಷ್ಯ ಚಿತ್ರದ ನಿಜವಾದ ಹೀರೋಗಳಾದ ಬೆಳ್ಳಿ (Belli) ಮತ್ತು ಬೊಮ್ಮನ್ (Bomman) ಎರಡು ಕೋಟಿ ರೂಪಾಯಿಯ ನೆರವು ಕೋರಿ ನೋಟಿಸ್ ಕಳುಹಿಸಿದ್ದಾರೆ. ಜೊತೆಗೆ ಕೆಲವು ಆರೋಪಗಳನ್ನೂ ಅವರು ಮಾಡಿದ್ದಾರೆ.

    ದಿ ಎಲಿಫೆಂಟ್ ವಿಸ್ಪರರ್ಸ್ ಸಾಕ್ಷ್ಯಚಿತ್ರವು ಕಾವಾಡಿಗಳಾದ ಬೊಮ್ಮನ್ ಮತ್ತು ಬೆಳ್ಳಿ ಕುರಿತಾದದ್ದು. ಆನೆಯೊಂದನ್ನು ಸಾಕಿದ ಈ ಜೋಡಿಯ ಕಥನವನ್ನೇ ಇಟ್ಟುಕೊಂಡು ಈ ಸಾಕ್ಷ್ಯ ಚಿತ್ರವನ್ನು ತಯಾರು ಮಾಡಲಾಗಿತ್ತು. ಈ ಸಮಯದಲ್ಲಿ ಬೊಮ್ಮನ್ ಮತ್ತು ಬೆಳ್ಳಿ ದಂಪತಿಗೆ ನಿರ್ಮಾಪಕಿ ಕಾರ್ತಿಕಿ ಹಲವು ಆಮಿಷಗಳನ್ನು ಒಡ್ಡಿದ್ದರು ಎಂದು ಹೇಳಲಾಗುತ್ತಿದೆ. ಆದರೆ, ಇದುವರೆಗೂ ಅವುಗಳನ್ನು ಈಡೇರಿಸಿಲ್ಲ ಎನ್ನುವುದು ಬೆಳ್ಳಿ ಆರೋಪ.

    ಸಾಕ್ಷ್ಯ ಚಿತ್ರ ತಯಾರಿಸುವಾಗ ಬೆಳ್ಳಿಗೆ ಮನೆ ಕಟ್ಟಿಕೊಡುವುದಾಗಿ ಭರವಸೆ ಕೊಟ್ಟಿದ್ದರಂತೆ ನಿರ್ಮಾಪಕಿ. ಅಲ್ಲದೇ ಒಂದು ವಾಹನದ ವ್ಯವಸ್ಥೆ ಮತ್ತು ಹಣವನ್ನೂ ನೀಡುವುದಾಗಿ ಹೇಳಿದ್ದರಂತೆ. ತಮ್ಮ ಹೆಸರು ಹೇಳಿಕೊಂಡು ಸಾಕಷ್ಟು ಸವಲತ್ತುಗಳನ್ನು ಪಡೆದಿರುವ ನಿರ್ಮಾಪಕಿ ಇದೀಗ ತಮ್ಮ ಕರೆಯನ್ನು ಸ್ವೀಕರಿಸುತ್ತಿಲ್ಲ ಎಂದು ಬೆಳ್ಳಿ ಹೇಳಿಕೊಂಡಿದ್ದಾರೆ.

     

    ಆಸ್ಕರ್ ಪ್ರಶಸ್ತಿ ಪಡೆದದ್ದಷ್ಟೇ ಅಲ್ಲದೇ, ಸರಕಾರಗಳಿಂದಲೂ ನಿರ್ಮಾಪಕಿ ಆರ್ಥಿಕ ನೆರವು ಪಡೆದಿದ್ದಾರಂತೆ. ಆದರೆ, ಬೆಳ್ಳಿ ಮತ್ತು ಬೊಮ್ಮನ್ ಗೆ ನಯಾಪೈಸೆಯನ್ನೂ ನೀಡಿಲ್ಲ ಎನ್ನುವುದು ಬೆಳ್ಳಿ ದಂಪತಿಯ ಆರೋಪ. ಈ ಕಾರಣದಿಂದಾಗಿ 2 ಕೋಟಿ ರೂಪಾಯಿ ನೆರವಿನ ನೋಟಿಸ್ ಕಳುಹಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ದಿ ಎಲಿಫೆಂಟ್ ವಿಸ್ಪರರ್ಸ್’ ಖ್ಯಾತಿಯ ಬೆಳ್ಳಿಗೆ ಸರಕಾರಿ ನೌಕರಿ ನೀಡಿದ ತಮಿಳುನಾಡು ಸರಕಾರ

    ‘ದಿ ಎಲಿಫೆಂಟ್ ವಿಸ್ಪರರ್ಸ್’ ಖ್ಯಾತಿಯ ಬೆಳ್ಳಿಗೆ ಸರಕಾರಿ ನೌಕರಿ ನೀಡಿದ ತಮಿಳುನಾಡು ಸರಕಾರ

    ದಿ ಎಲಿಫೆಂಟ್ ವಿಸ್ಪರರ್ಸ್’ (The Elephant Whisperers) ಸಿನಿಮಾದ ಮೂಲಕ ಜಗತ್ತಿಗೆ ಪರಿಚಯವಾಗಿದ್ದ ಬೊಮ್ಮನ್ (Bomman) ಮತ್ತು ಬೆಳ್ಳಿಯ (Belli) ಮುಖದಲ್ಲಿ ಮಂದಹಾಸ ಮೂಡಿಸಿದೆ ತಮಿಳುನಾಡು  (Tamil Nadu) ಸರಕಾರ. ಆರ್ಥಿಕ ಸಂಕಷ್ಟದಿಂದ  ಈ ದಂಪತಿ ಬಳಲುತ್ತಿದ್ದರು ಎನ್ನುವ ಮಾಹಿತಿ ಸಿಕ್ಕ ತಕ್ಷಣವೇ ಬೆಳ್ಳಿಗೆ ಸರಕಾರಿ ನೌಕರಿಯನ್ನು ನೀಡಿದೆ ಸರಕಾರ. ಮೊದಲ ಸರಕಾರಿ ಕಾವಡಿಯಾಗಿ ಬೆಳ್ಳಿ ಇದೀಗ ನೇಮಕಗೊಂಡಿದ್ದಾರೆ.

    ದಿ ಎಲಿಫೆಂಟ್ ವಿಸ್ಪರರ್ಸ್ ಡಾಕ್ಯುಮೆಂಟರಿ ಆಸ್ಕರ್ ಅವಾರ್ಡ್ ಗೆಲ್ಲುವ ಮೂಲಕ ಭಾರತೀಯರು ಹೆಮ್ಮೆಪಡುವಂತೆ ಮಾಡಿತ್ತು. ಇದರಲ್ಲಿ ಪ್ರಮುಖವಾಗಿ ನಟಿಸಿದ್ದ ಬೊಮ್ಮನ್- ಬೆಳ್ಳಿ ಅವರಿಗೆ ಈ ಹಿಂದೆ ರಾಷ್ಟ್ರಪತಿ ದ್ರೌಪದಿ ಮುರ್ಮು ಸನ್ಮಾನ ಮಾಡಿದ್ದರು. ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ಕೂಡ ಭೇಟಿ ಮಾಡಿ ಅಭಿನಂದಿಸಿದ್ದರು. ಇದನ್ನೂ ಓದಿ:ಟೆಂಪಲ್ ರನ್ ಮುಗಿಸಿ ಫೋಟೋಶೂಟ್ ನಲ್ಲಿ ಭಾಗಿಯಾದ ಸಾರಾ ಅಲಿ ಖಾನ್

    ಬೊಮ್ಮನ್-ಬೆಳ್ಳಿ ಅವರು ತಮಿಳುನಾಡಿನ ಮುದುಮಲೈ ಹುಲಿ ಸಂರಕ್ಷಿತ ಅರಣ್ಯದ ತೆಪ್ಪಕಾಡು ಆನೆ ಶಿಬಿರದಲ್ಲಿ ವಾಸವಾಗಿದ್ದಾರೆ. ಇಲ್ಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 9ರಂದು ಭೇಟಿ ನೀಡಿದ್ದರು. ಬೆಳ್ಳಿ ಮತ್ತು ಬೊಮ್ಮನ್ ದಂಪತಿ ಜೊತೆ ಭೇಟಿಯಾದ ಮೋದಿ ಅವರ ಫೋಟೋ ಸಖತ್ ವೈರಲ್ ಆಗಿತ್ತು.

    ಈ ವರ್ಷದ 95ನೇ ಸಾಲಿನ ಅಕಾಡೆಮಿ ಅವಾರ್ಡ್‌ನಲ್ಲಿ ‘ದಿ ಎಲಿಫೆಂಟ್ ವಿಸ್ಪರರ್ಸ್ʼ ಸಾಕ್ಷ್ಯಚಿತ್ರ ಆಸ್ಕರ್ ಪ್ರಶಸ್ತಿ ಗೆದ್ದಿತು. ದೀಪಿಕಾ ಪಡುಕೋಣೆ ಅವರು ಭಾರತವನ್ನು ಪ್ರತಿನಿಧಿಸಿದ ಆಸ್ಕರ್ ಅಂಗಳದಲ್ಲಿ ನಿರೂಪಣೆ ಮಾಡಿದ್ದರು. ಆಸ್ಕತ್ ಪ್ರಶಸ್ತಿಯ ಬಳಿಕ ಬೊಮ್ಮನ್- ಬೆಳ್ಳಿ ಜನಪ್ರಿಯತೆ ಪಡೆದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೊಮ್ಮನ್-ಬೆಳ್ಳಿ ಜೋಡಿಯನ್ನು ಸನ್ಮಾನಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು

    ಬೊಮ್ಮನ್-ಬೆಳ್ಳಿ ಜೋಡಿಯನ್ನು ಸನ್ಮಾನಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು

    ಟಿಟಿ ಮೂಲಕ ‘ದಿ ಎಲಿಫೆಂಟ್ ವಿಸ್ಪರರ್ಸ್’ (The Elephant Whisperers) ಸಿನಿಮಾ ಸಿನಿ ಪ್ರೇಕ್ಷಕರ ಮನಗೆದ್ದಿದೆ. ಈ ಡಾಕ್ಯುಮೆಂಟರಿ ಆಸ್ಕರ್ ಅವಾರ್ಡ್ ಗೆಲ್ಲುವ ಮೂಲಕ ಭಾರತೀಯರು ಹೆಮ್ಮೆಪಡುವಂತೆ ಮಾಡಿದ್ದರು. ಇದರಲ್ಲಿ ಪ್ರಮುಖವಾಗಿ ನಟಿಸಿದ್ದ ಬೊಮ್ಮನ್- ಬೆಳ್ಳಿ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಸನ್ಮಾನ ಮಾಡಿದ್ದಾರೆ. ಈ ಕುರಿತ ಫೋಟೋವನ್ನ ರಾಷ್ಟ್ರಪತಿ ದ್ರೌಪದಿ ಅವರು, ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಭಾವಿ ಪತ್ನಿ ಲಾವಣ್ಯ ಜೊತೆ ವರುಣ್ ತೇಜ್ ಕಾಫಿ ಡೇಟ್

    ಈ ವರ್ಷದ 95ನೇ ಸಾಲಿನ ಅಕಾಡೆಮಿ ಅವಾರ್ಡ್‌ನಲ್ಲಿ ‘ದಿ ಎಲಿಫೆಂಟ್ ವಿಸ್ಪರರ್ಸ್ʼ ಸಾಕ್ಷ್ಯಚಿತ್ರ ಆಸ್ಕರ್ ಪ್ರಶಸ್ತಿ ಗೆದ್ದಿತು. ದೀಪಿಕಾ ಪಡುಕೋಣೆ ಅವರು ಭಾರತವನ್ನು ಪ್ರತಿನಿಧಿಸಿದ ಆಸ್ಕರ್ ಅಂಗಳದಲ್ಲಿ ನಿರೂಪಣೆ ಮಾಡಿದ್ದರು. ಆಸ್ಕತ್ ಪ್ರಶಸ್ತಿಯ ಬಳಿಕ ಬೊಮ್ಮನ್- ಬೆಳ್ಳಿ ಜನಪ್ರಿಯತೆ ಪಡೆದರು.

    ಆಸ್ಕರ್ ಪ್ರಶಸ್ತಿ ಪಡೆದ ‘ದಿ ಎಲಿಫೆಮಂಟ್ ವಿಸ್ಪರರ್ಸ್’ನಲ್ಲಿ ಮುಖ್ಯವಾಗಿ ಕಾಣಿಸಿಕೊಂಡ ಬೊಮ್ಮನ್- ಬೆಳ್ಳಿಯನ್ನು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸನ್ಮಾನಿಸಿದರು. ಆನೆ ಮರಿಗಳನ್ನು ನೋಡಿಕೊಳ್ಳಲು ಜೀವನ ಮುಡಿಪಿಟ್ಟ ಅವರನ್ನು ಶ್ಲಾಘಿಸಲಾಯಿತು ಎಂದು ರಾಷ್ಟ್ರಪತಿ ಟ್ವಿಟ್ಟರ್ ಖಾತೆ ಮೂಲಕ ಟ್ವೀಟ್ ಮಾಡಲಾಗಿದೆ.

    ಬೊಮ್ಮನ್-ಬೆಳ್ಳಿ ಅವರು ತಮಿಳುನಾಡಿನ ಮುದುಮಲೈ ಹುಲಿ ಸಂರಕ್ಷಿತ ಅರಣ್ಯದ ತೆಪ್ಪಕಾಡು ಆನೆ ಶಿಬಿರದಲ್ಲಿ ವಾಸವಾಗಿದ್ದಾರೆ. ಇಲ್ಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 9ರಂದು ಭೇಟಿ ನೀಡಿದ್ದರು. ಬೆಳ್ಳಿ ಮತ್ತು ಬೊಮ್ಮನ್ ದಂಪತಿ ಜೊತೆ ಭೇಟಿಯಾದ ಮೋದಿ ಅವರ ಫೋಟೋ ಸಖತ್ ವೈರಲ್ ಆಗಿತ್ತು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಆಸ್ಕರ್ ನಗೆ ಬೀರಿದ್ದ ಬೊಮ್ಮನ್-ಬೆಳ್ಳಿ ಬದುಕು ಮೂರಾಬಟ್ಟೆ

    ಆಸ್ಕರ್ ನಗೆ ಬೀರಿದ್ದ ಬೊಮ್ಮನ್-ಬೆಳ್ಳಿ ಬದುಕು ಮೂರಾಬಟ್ಟೆ

    ಹೇಳೋದಕ್ಕೆ ಇವರು ಆಸ್ಕರ್ (Oscar) ಪ್ರಶಸ್ತಿ ಪುರಸ್ಕೃತರು. ಆದರೆ ಆಶ್ರಯಕ್ಕೆ ಸೂರಿಲ್ಲ. ಕುಡಿಯೋದಕ್ಕೆ ನೀರಿಲ್ಲ. ಮೋದಿ ಭೇಟಿಯಾದ್ರೂ ಭಾಗ್ಯದ ಬಾಗಿಲು ತೆರೆಯಲಿಲ್ಲ. ಜಗತ್ತೇ ಗುರುತಿಸಿದ ಸ್ಟಾರ್ ಆಗಿದ್ರೂ ಬದುಕು ಬದಲಾಗ್ಲಿಲ್ಲ. ಹೀಗೆ ಭರವಸೆಯ ಬೆಳಕಿನ ಕಡೆ ಇಣುಕುತ್ತಿರುವ ಆಸ್ಕರ್ ಪ್ರಶಸ್ತಿ ಪುರಸ್ಕೃತ ಡಾಕ್ಯುಮೆಂಟ್ರಿ ನಾಯಕ ದಂಪತಿಯೇ ಬೊಮ್ಮನ್ (Bomman) ಹಾಗೂ ಬೆಳ್ಳಿ. `ದಿ ಎಲಿಫೆಂಟ್ ವಿಸ್ಪರರ್ಸ್‌’ ಆಸ್ಕರ್ ಡಾಕ್ಯುಮೆಂಟ್ರಿಯ ಕಥಾ ನಾಯಕ ನಾಯಕಿ. ಹೇಗಿದೆ ಇವರ ಬದುಕೀಗ? ಆಸ್ಕರ್ ಬಂದ್ಮೇಲೆ ಬದಲಾಯಿತೆ? ಆಸ್ಕರ್ ಪ್ರಶಸ್ತಿ ಹಿಡಿದ ಕೈಗಳಿಗೆ ಕೊನೆ ಪಕ್ಷ ಮೂರ್ ಹೊತ್ತು ಸರಿಯಾಗಿ ಊಟ ಸಿಗುತ್ತಿದೆಯೇ? ಅದರ ಗ್ರೌಂಡ್ ರಿಪೋರ್ಟ್ ಇಲ್ಲಿದೆ.

    ಕಮರ್ಷಿಯಲ್ ಸಿನಿಮಾಗಳನ್ನೇ ನೋಡದಿರುವ ಈ ಕಾಲದಲ್ಲಿ ಇಡೀ ವಿಶ್ವ ಒಂದು ಸಾಕ್ಷ್ಯಚಿತ್ರದತ್ತ ತಿರುಗಿ ನೋಡುತ್ತದೆ ಎಂದರೆ ಅದಕ್ಕೆ ಕಾರಣ ಆಸ್ಕರ್ ಪ್ರಶಸ್ತಿ. 2022ನೇ ಸಾಲಿನ ಆಸ್ಕರ್ ಪ್ರಶಸ್ತಿಯನ್ನ ಮುಡಿಗೇರಿಸಿಕೊಂಡ ಭಾರತದ ಸಾಕ್ಷ್ಯ ಚಿತ್ರವೇ `ದಿ ಎಲಿಫೆಂಟ್ ವಿಸ್ಪರರ್ಸ್‌’ (The Elephant the elephant Whisperers). ಆನೆ ಹಾಗೂ ಆನೆಯ ಪೋಷಕರ ಸಾಕ್ಷ್ಯಚಿತ್ರವಿದು. ಆಡಂಬರದಿಂದ ತೋರಿಸೋಕೆ ಇದು ಸಿನಿಮಾವಲ್ಲ ಡಾಕ್ಯುಮೆಂಟ್ರಿ. ನಿರಾಶ್ರಿತ ಆನೆಗಳನ್ನ ತಂದು ಪಳಗಿಸಿ ಮಕ್ಕಳಂತೆ ಸಾಕಿ ಸಲಹುವ ಅಸಲಿ ಹೀರೋ ಬೊಮ್ಮನ್ ದಂಪತಿ ಹಾಗೂ ಆನೆಯ ನಂಟಿನ ಕಥೆಯೇ ದಿ ಎಲಿಫೆಂಟ್ ವಿಸ್ಪರರ್ಸ್.  ಮಧುಮಲೈ ಅರಣ್ಯ ವ್ಯಾಪ್ತಿಯ ತೆಪ್ಪಕಾಡು ಅರಣ್ಯ ಪ್ರದೇಶದಲ್ಲಿ ಆನೆ ಶಿಬಿರವಿದೆ. ಇದೇ ಶಿಬಿರದಲ್ಲಿ ಆನೆ ಮಾವುತರು ವಾಸವಾಗಿದ್ದಾರೆ. ಆನೆಗಳನ್ನ ಪೋಷಿಸಿ ಪಾಲಿಸಿ ಮಕ್ಕಳಂತೆ ನೋಡಿಕೊಳ್ಳುತ್ತಾರೆ. ಈ ತಂಡದಲ್ಲಿ ದಿ ಎಲಿಫೆಂಟ್ ವಿಸ್ಪರರ್ಸ್ ಸಾಕ್ಷ್ಯ ಚಿತ್ರದಲ್ಲಿ ಕಾಣಿಸಿಕೊಂಡ ದಂಪತಿಗಳು ಬೊಮ್ಮನ್ ಹಾಗೂ ಬೆಳ್ಳಿ.

    ಪಟ್ಟಣದ ಸಂಪರ್ಕವೇ ಇಲ್ಲದೆ ಪ್ರಕೃತಿ ಜೊತೆ ಬಾಂಧವ್ಯ ಬೆಳೆಸಿಕೊಂಡಿರುವ ಬೊಮ್ಮನ್ ಬೆಳ್ಳಿಗೆ (Belli) ಅವರು ಅವರಾಗಿಯೇ ನಟಿಸಿದ ಡಾಕ್ಯುಮೆಂಟ್ರಿಗೆ ಆಸ್ಕರ್ ಬಂದ್ಮೇಲೆ ಜಗತ್ಪಸಿದ್ಧರಾದ್ರು. ಎಲ್ಲರೂ ಹುಡುಕಿಕೊಂಡು ಬಂದ್ರು. ಆಸ್ಕರ್ ಟ್ರೋಫಿ ಕೈಗಿಟ್ಟು ಫೋಟೋ ತೆಗೆಸಿಕೊಂಡ್ರು. ಅರಣ್ಯ ಅಧಿಕಾರಿಗಳು, ಗಣ್ಯರು ಸೇರಿ ಡಾಕ್ಯುಮೆಂಟ್ರಿ ನಿರ್ಮಾಪಕ, ನಿರ್ದೇಶಕಿಯೂ ಸೇರಿದಂತೆ ಬೊಮ್ಮನ್ ಬೆಳ್ಳಿಯ ಬೆನ್ನು ತಟ್ಟಿದ್ರು. ಆದರೆ ಇದರಿಂದ ಬೊಮ್ಮನ್ ಬೆಳ್ಳಿ ದಂಪತಿಯ ಹೊಟ್ಟೆ ತುಂಬಬೇಕಲ್ಲ. ಹೇಳೋದಕ್ಕೆ `ದಿ ಎಲಿಫೆಂಟ್ ವಿಸ್ಪರರ್ಸ್’ ತಂಡಕ್ಕೆ ಆಸ್ಕರ್ ಬಂದಿದೆ. ಬೊಮ್ಮನ್ ಬೆಳ್ಳಿ ಬದುಕು ಮೂರಾಬಟ್ಟೆಯಾಗಿದೆ. ಪ್ರಶಸ್ತಿ ಬಂದಿರೋದೇ ಇವರಿಗೆ ಶಾಪವಾಗಿ ಪರಿಣಮಿಸಿದೆ. ಅವರು ಬಂದ್ರಂತೆ, ಇವರು ಬಂದ್ರಂತೆ, ಅಷ್ಟು ಕೊಟ್ರಂತೆ, ಇಷ್ಟು ಕೊಟ್ರಂತೆ ಅನ್ನೋದು ಬರೀ ಸುದ್ದಿಯಾಗಿದೆ ಹೊರತು ಸಫಲವಾಗಲಿಲ್ಲ. ಆನೆ ಶಿಬಿರಕ್ಕೆ ಪ್ರಧಾನಿ ಮೋದಿ ಬಂದಾಗ ಹತ್ತಿರದಲ್ಲೇ ನಿಂತು ಮಾತನಾಡುವ ಅವಕಾಶ ಸಿಕ್ಕರೂ ಬೇಡಿಕೆ ಇಡಲು ಅಧಿಕಾರಿಗಳು ಇವರಿಗೆ ಅವಕಾಶ ಕೊಡಲಿಲ್ಲ.

    ದಿ ಎಲಿಫೆಂಟ್ ವಿಸ್ಪರರ್ಸ್ ಗೆ  ಆಸ್ಕರ್ ಗೌರವ ಸಿಕ್ಕ ಬಳಿಕ ಓಟಿಟಿಯಲ್ಲಿ ಒಳ್ಳೆಯ ಬೆಲೆಗೆ ಸೇಲಾಗಿದೆ. ಕೋಟಿಗಟ್ಟಲೆ ಬಹುಮಾನಗಳನ್ನ ತಂಡ ಪಡೆದುಕೊಂಡಿದೆ. ಆದರೆ ಅದರಲ್ಲಿ ನಯಾಪೈಸೆಯೂ ಬೊಮ್ಮನ್ ಬೆಳ್ಳಿಗೆ ಸಿಗಲಿಲ್ಲ ಅನ್ನೋದೇ ದುರಂತ. ತಮಿಳುನಾಡು ಸಿಎಂ ಸ್ಟಾಲಿನ್ 1 ಲಕ್ಷ ರೂಪಾಯಿ ಹಣ ಕೊಟ್ಟಿದ್ದು ಬಿಟ್ರೆ ಈ ದಂಪತಿಯ ಬದುಕಿನಲ್ಲಿ ವಿಧಿ ಬರೆದ ಹಣೆಬರಹ ಬದಲಾಗಲಿಲ್ಲ.  ಕಾಡಿನಲ್ಲೊಂದು ಪುಟ್ಟ ಗುಡಿಸಲು. ಹೇಳಿ ಕೇಳಿ ಹೆಚ್ಚು ಮಳೆಕಾಡಿನ ಭಾಗ. ಆಸ್ತಿ ಪಾಸ್ತಿ ಸಂಪಾದನೆ ಏನೂ ಇಲ್ಲ. ಸರ್ಕಾರ ನೇಮಿಸಿಕೊಂಡ ಕೂಲಿಗಳಿವರು. ಸರ್ಕಾರದ ಅನುಮತಿ ಪಡೆದು ಡಾಕ್ಯುಮೆಂಟ್ರಿ ಚಿತ್ರೀಕರಣಕ್ಕೆ ಅವಕಾಶ ಪಡೆದುಕೊಂಡು ಬಂದಿತ್ತು ತಂಡ. ಅವರು ಹೇಳಿದಂತೆ ನಡೆದುಕೊಂಡು ಬಂದ್ರು ಬೊಮ್ಮನ್ ಬೆಳ್ಳಿ ದಂಪತಿ. ಆಸ್ಕರ್ ಗೌರವ ಏನೆಂಬುದರ ಅರಿವೂ ಇಲ್ಲದ ಮುಗ್ಧಜೀವಗಳಿಗೆ ತಮ್ಮ ಸುತ್ತಮುತ್ತ ಏನಾಗ್ತಿದೆ ಅನ್ನೋ ಅರಿವೂ ಇಲ್ಲ. ಆದರೆ ಸಹ ಮಾವುತರು ಮಾತ್ರ ಅಸೂಯೆ ಪಟ್ಕೊಂಡು ಇನ್ನಷ್ಟು ಸಂಕಷ್ಟಕ್ಕೆ ದೂಡಿಕೊಳ್ಳುವಂತಾಗಿದೆ ಬೊಮ್ಮನ್ ಕುಟುಂಬದ ಸ್ಥಿತಿ.

    ನೆತ್ತಿಮೇಲೆ ಸರಿಯಾದ ಸೂರಿಲ್ಲ. ಕುಡಿಯಲು ಒಳ್ಳೆಯ ನೀರೂ ಇಲ್ಲ. ಹೀಗೇ 56 ವರ್ಷ ದೂಡಿದ್ದಾರೆ ಬೊಮ್ಮನ್. ಬಂಡೀಪುರದಲ್ಲಿ ಹುಟ್ಟಿದ್ರಿಂದ ಇವರಿಗೆ ಕನ್ನಡ ಮಾತನಾಡಲು ಬರುತ್ತೆ. ಕಾಡಿನಲ್ಲೇ ಜನನ. ಕಾಡಿನಲ್ಲೇ ಬದುಕು. ಆನೆಗಳೇ ಇವರ ಸ್ನೇಹಿತರು.  ಇಂದು ಬೊಮ್ಮನ್ ಬೆಳ್ಳಿ ಹೆಸರಿಗೆ ಆಸ್ಕರ್ ಸಿಕ್ಕಿರೋ ದೊಡ್ಡ ಗೌರವ ಇದೆ. ಆದರೆ ಬಡತನದ ಬೇಗೆಯಲ್ಲೇ ಬೇಯುತ್ತಿರುವ ಕುಟುಂಬಕ್ಕೆ ಹಸಿವಿನ ಮುಂದೆ ಬೇರೆ ಯಾವುದೂ ಲೆಕ್ಕಕ್ಕೆ ಬರೋದಿಲ್ಲ. ಬದುಕು ಬವಣೆಯ ಹಾದಿಯಲ್ಲಿ ಅದೆಷ್ಟೋ ಕಷ್ಟ ಕಣ್ಣಾರೆ ಕಂಡ ಇವರು ಹಿಂದೆ ಕಾಡುಗಳ್ಳ ವೀರಪ್ಪನ್ ಕಥೆಯ ನೆನಪಿಗೆ ಬರ‍್ತಾರೆ. ಡಾ.ರಾಜ್‌ಕುಮಾರ್‌ ಅವರನ್ನ ವೀರಪ್ಪನ್ ಕಿಡ್ನ್ಯಾಪ್ ಮಾಡಿದ್ದ ವೇಳೆಯೂ ಅದೇ ಕಾಡಿನಲ್ಲಿದ್ದ ಬೊಮ್ಮನ್ ಆ ಪರಿಸ್ಥಿತಿಯನ್ನ ಕಣ್ಣಾರೆ ಕಂಡಿದ್ದಾರೆ. ಸರ್ಕಾರದಿಂದ ಆ ವೇಳೆ ಅನೇಕ ಕಟ್ಟೆಚ್ಚರಗಳು ಶಿಬಿರದ ಮಾವುತರಿಗೆ ಹೇರಲಾಗಿತ್ತು. ಆ ಘಟನೆಯನ್ನೂ ನೆನಪು ಮಾಡಿಕೊಳ್ತಾರೆ ಬೊಮ್ಮನ್.

     

    ಬೊಮ್ಮನ್ ಬೆಳ್ಳಿ ಹುಟ್ಟಿದಾಗಿಂದ ಕಾಡು, ಕಾಡುಪ್ರಾಣಿಗಳು, ಆನೆಗಳನ್ನ ಬಿಟ್ರೆ ಬೇರೇನನ್ನೂ ಕಂಡಿಲ್ಲ ನೋಡಿಲ್ಲ. ಅವರಿಗೆ ಇನ್ಯಾವ ದೊಡ್ಡ ಆಸೆಯೂ ಇಲ್ಲ. ಸಣ್ಣದೊಂದು ಸೌಕರ್ಯದ ಬೇಡಿಕೆ ಇಡ್ತಾರೆ. ಬೆಚ್ಚನೆ ಮಲಗಲೊಂದು ಸೂರು, ಆರೋಗ್ಯದಿಂದಿರಲು ಶುದ್ಧ ಕುಡಿಯುವ ನೀರು. ಆಸ್ಕರ್ ಪುರಸ್ಕೃತರಿಗೆ ಇಷ್ಟೂ ಸೌಲಭ್ಯಗಳಿಲ್ಲವೇ? ಅಸಲಿಗೆ ಬೊಮ್ಮನ್ ಬೆಳ್ಳಿ ಬದುಕೇ ಮಾವುತರ ಕೈಗೆ ಸಿಕ್ಕಿರುವ ಆನೆಯಂತಾಗಿದೆ. ಇದೇ ನೋಡಿ ವಾಸ್ತವ.

     

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]

  • ಮೋದಿ ನಮಗೆ ಹಣ ಕೊಟ್ಟಿಲ್ಲ, ಸ್ಟಾಲಿನ್ 1 ಲಕ್ಷ ಚೆಕ್ ಕೊಟ್ಟಿದ್ದಾರೆ: ಬೊಮ್ಮನ್

    ಮೋದಿ ನಮಗೆ ಹಣ ಕೊಟ್ಟಿಲ್ಲ, ಸ್ಟಾಲಿನ್ 1 ಲಕ್ಷ ಚೆಕ್ ಕೊಟ್ಟಿದ್ದಾರೆ: ಬೊಮ್ಮನ್

    ಚಾಮರಾಜನಗರ: ಬಂಡೀಪುರ ಸಫಾರಿ ಬಳಿಕ ಪ್ರಧಾನಿ ಮೋದಿ ಎಲಿಫೆಂಟ್ ವಿಸ್ಪರರ್ಸ್ (The Elephant Whisperers) ಖ್ಯಾತಿಯ ಬೊಮ್ಮನ್- ಬೆಳ್ಳಿ (Bomman- Belly) ದಂಪತಿ ಹಾಗೂ ಕೆಲ ಮಾವುತರ ಕಷ್ಟ ಸುಖ ಆಲಿಸಿದ್ದರು. ಅಗತ್ಯ ನೆರವಿನ ಭರವಸೆಯನ್ನೂ ನೀಡಿದ್ದರು. ಇದೇ ವಿಚಾರ ಮುಂದಿಟ್ಟುಕೊಂಡು ಕಾಂಗ್ರೆಸ್ (Congress), ಮೋದಿ (Narendra Modi) ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಆರೋಪ ಮಾಡಿದೆ. ಮಾವುತರಿಗೆ ಮೋದಿ ಒಂದು ಲಕ್ಷ ರೂ ಹಣ ಕೊಟ್ಟಿದ್ದಾರೆಂದು ದೂರಿದೆ. ಆದರೆ ಈ ಆರೋಪವನ್ನು ಅಲ್ಲಗಳೆಯುವ ಮೂಲಕ ಬೊಮ್ಮನ್ ವಿವಾದಕ್ಕೆ ತೆರೆ ಎಳೆದಿದ್ದಾರೆ.

    MK Stalin (1)

    ಬೊಮ್ಮನ್ ಹೇಳಿದ್ದೇನು..?: ಕಾಂಗ್ರೆಸ್ ಆರೋಪದ ಕುರಿತು ತಮಿಳುನಾಡಿನ ಮುದುಮಲೈನ ತೆಪ್ಪಕಾಡು ಆನೆ ಶಿಬಿರದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಬೊಮ್ಮನ್, ಪ್ರಧಾನಿ ಮೋದಿ ನಮಗೆ ಭರವಸೆ ಕೊಟ್ಟಿಲ್ಲ, ಪ್ರೀತಿ ಕೊಟ್ಟಿದ್ದಾರೆ. ದೆಹಲಿಗೆ ಬರಲೂ ಹೇಳಿದ್ದಾರೆ. ನಮಗೆ ಹಣ ಕೊಟ್ಟಿದ್ದು ಮೋದಿಯಲ್ಲ, ತಮಿಳುನಾಡು ಸಿಎಂ ಸ್ಟಾಲಿನ್. ಮೋದಿ ಬಂದಿದ್ದು ತುಂಬಾ ಖುಷಿಯಿದೆ. ಡಾಕ್ಯುಮೆಂಟರಿಯಲ್ಲಿರುವ ರೋ ಆನೆಗೆ ಕಬ್ಬು ಕೊಟ್ಟರು. ಬೇರೆ ಆನೆಗಳಿಗೂ ಕಬ್ಬು ಕೊಟ್ಟಿದ್ದಾರೆ. ಅವರು ಭೇಟಿ ಕೊಟ್ಟಿದ್ದು ಮುದುಮಲೈ ಅರಣ್ಯಕ್ಕೆ ಹೆಮ್ಮೆಯ ವಿಚಾರವಾಗಿದೆ ಎಂದರು. ಇದನ್ನೂ ಓದಿ: ಪ್ರಧಾನಿ ಮೋದಿ ಬಂಡೀಪುರ ವೀಕೆಂಡ್‌ ಸಫಾರಿ – ಇಲ್ಲಿವೆ ನೋಡಿ Photos

    ಸ್ಟಾಲಿನ್ (Stalin) ಚೆನ್ನೈನಲ್ಲಿ ಕಾರ್ಯಕ್ರಮ ಮಾಡಿ ಆಸ್ಕರ್ ಅವಾರ್ಡ್ ಬಂದಿದ್ದಕ್ಕೆ ಒಂದು ಲಕ್ಷ ಹಣ ಕೊಟ್ಟಿದ್ದಾರೆ. ಕ್ಯಾಂಪ್‍ನಲ್ಲಿರುವ ಮಾವುತ, ಕಾವಾಡಿಗಳಿಗೂ ಹಣ ಕೊಟ್ಟಿದ್ದಾರೆ. ಮೋದಿ ಬಂದ ವೇಳೆ ಯಾವುದೇ ಗಿಫ್ಟ್, ಹಣ ಕೊಟ್ಟಿಲ್ಲ. ಇದನ್ನೂ ಓದಿ: ನೂರು ಕೋಟಿ ಕ್ಲಬ್ ಸೇರಿದ ಚುನಾವಣೆ ಅಕ್ರಮ- ಹಣಕ್ಕಿಂತ ಕುಕ್ಕರ್, ತವಾಗಳದ್ದೇ ಮೇಲುಗೈ

    ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಎಲಿಫೆಂಟ್ ವಿಸ್ಪರರ್ಸ್ ಸಾಕ್ಷ್ಯ ಚಿತ್ರಕ್ಕೆ ಆಸ್ಕರ್ ಬಂದಾಗ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ತಮ್ಮನ್ನು ಸನ್ಮಾನಿಸಿದ್ದರು. ಈ ಸಂದರ್ಭದಲ್ಲಿ ಒಂದು ಲಕ್ಷ ರೂ. ಹಣವನ್ನೂ ಕೊಟ್ಟಿದ್ದರು. ಈ ವಿಚಾರವನ್ನು ನಾನು ಎಲ್ಲರೊಂದಿಗೂ ಹಂಚಿಕೊಂಡಿದ್ದೆ. ಆದರೆ ಅದನ್ನೇ ತಪ್ಪಾಗಿ ಅರ್ಥೈಸಿಕೊಳ್ಳಲಾಗಿದ್ದು, ಮೋದಿ ಅವರು ಹಣ ಕೊಟ್ಟಿಲ್ಲ. ಪ್ರೀತಿ ಕೊಟ್ಟು, ಹತ್ತಿರದಲ್ಲಿ ಕೂರಿಸಿಕೊಂಡು ಮಾತಾಡಿದ್ದಾರೆ. ಮೋದಿ ಬಳಿ ನಮ್ಮ ಸಮಸ್ಯೆ ಹೇಳಿಕೊಂಡಿದ್ವಿ. ಅದನ್ನು ಇಲ್ಲಿನ ಅಧಿಕಾರಿಗಳು ಕೂಡ ಜೊತೆಗೂಡಿ ಬಗೆಹರಿಸ್ತೇವೆ ಅಂದಿದ್ದಾರೆಂದು ಬೊಮ್ಮನ್ ಸ್ಪಷ್ಟಪಡಿಸಿದ್ದಾರೆ.

  • ಆಸ್ಕರ್ ಪಡೆದ ಡಾಕ್ಯುಮೆಂಟರಿಯ ಬೆಳ್ಳಿ-ಬೊಮ್ಮನ್ ದಂಪತಿಗೆ ನಾಳೆ ಪ್ರಧಾನಿ ಸನ್ಮಾನ

    ಆಸ್ಕರ್ ಪಡೆದ ಡಾಕ್ಯುಮೆಂಟರಿಯ ಬೆಳ್ಳಿ-ಬೊಮ್ಮನ್ ದಂಪತಿಗೆ ನಾಳೆ ಪ್ರಧಾನಿ ಸನ್ಮಾನ

    ದಿ ಎಲಿಫೆಂಟ್ ವಿಸ್ಪರರ್ಸ್ (The Elephant Whisperers)  ಡಾಕ್ಯುಮೆಂಟರಿಯ ಹೀರೋ ಬೊಮ್ಮನ್ ಹಾಗೂ ನಾಯಕಿ ಬೆಳ್ಳಿಗೆ ನಾಳೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಗೌರವಿಸಲಿದ್ದಾರೆ. ಆಸ್ಕರ್ ಪ್ರಶಸ್ತಿ ಬಂದ ಬೆನ್ನಲ್ಲೇ ದಂಪತಿ ಇರುವ ಸ್ಥಳಕ್ಕೆ ಪ್ರಧಾನಿ ಭೇಟಿಯಾಗಲಿದ್ದು, ಅಲ್ಲಿ ಅವರಿಗೆ ಸನ್ಮಾನ ಮಾಡಲಿದ್ದಾರೆ. ಈ ಹಿಂದೆ ಸೋಷಿಯಲ್ ಮೀಡಿಯಾ ಮೂಲಕ ಈ ದಂಪತಿಗೆ ಮೋದಿ ಶುಭಾಶಯ ಕೋರಿದ್ದರು.

    ಈ ಬಾರಿ ಭಾರತಕ್ಕೆ ಎರಡು ಆಸ್ಕರ್ ಪ್ರಶಸ್ತಿಗಳು ಬಂದ ಬೆನ್ನಲ್ಲೇ ಅಭಿಮಾನದ ಮಹಾಪೂರವೇ ಹರಿದು ಬಂದಿತ್ತು. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ನಾಡಿನ ಬಹುತೇಕ ಗಣ್ಯರು ಎರಡೂ ಚಿತ್ರತಂಡಕ್ಕೆ ಮನಸಾರೆ ಪ್ರಶಂಸಿಸಿದ್ದರು. ಶುಭಾಶಯ ತಿಳಿಸಿದ್ದರು.  ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ (MK Stalin) ಮತ್ತೊಂದು ಹೆಜ್ಜೆ ಮುಂದೆ ಹೋಗಿ, ಆಸ್ಕರ್ ಪ್ರಶಸ್ತಿ ವಿಜೇತ ಡಾಕ್ಯುಮೆಂಟರಿಯ ಕಥಾ ನಾಯಕ ಮತ್ತು ನಾಯಕಿಗೆ ಭರ್ಜರಿ ಬಹುಮಾನ ಘೋಷಿಸಿದ್ದರು.

    ದಿ ಎಲಿಫೆಂಟ್ ವಿಸ್ಪರರ್ಸ್ ಡಾಕ್ಯುಮೆಂಟರಿಯ ನಿಜವಾದ ಹೀರೋ ಬೊಮ್ಮನ್ (Bomman) ಮತ್ತು ಹೀರೋಯಿನ್ ಬೆಳ್ಳಿ (Belli) ಎಂಬ ಮಾವುತ ದಂಪತಿಗಳು. ಈ ಡಾಕ್ಯುಮೆಂಟರಿ ಇವರ ಬದುಕನ್ನೇ ಕೇಂದ್ರೀಕರಿಸಿ ಮಾಡಿದ್ದು. ಹಾಗಾಗಿ ಸ್ಟಾಲಿನ್ ಇವರಿಬ್ಬರನ್ನೂ ಸಿಎಂ ಕಚೇರಿಗೆ ಕರೆಯಿಸಿಕೊಂಡು ನೆನಪಿನ ಫಲಕ ಮತ್ತು ಎರಡು ಲಕ್ಷ ರೂಪಾಯಿ ಬಹುಮಾನ ನೀಡಿದ್ದಾರೆ.

    ಕೇವಲ ಈ ಇಬ್ಬರಿಗೆ ಮಾತ್ರ ಬಹುಮಾನ ನೀಡಿಲ್ಲ. ಆನೆ ಶಿಬಿರದಲ್ಲಿ ಕೆಲಸ ಮಾಡುತ್ತಿರುವ 91 ಮಾವುತರಿಗೂ ತಲಾ ಒಂದೊಂದು ಲಕ್ಷ ರೂಪಾಯಿಯನ್ನು ನೀಡಿದ್ದಾರೆ. ಅಷ್ಟೇ ಅಲ್ಲ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಮಾವುತರಿಗೆ ಮನೆ ಕಟ್ಟಿಕೊಡಲು 9.1 ಕೋಟಿ ರೂಪಾಯಿ ಅನುದಾನ ನೀಡುವುದಾಗಿ ಘೋಷಿಸಿದ್ದಾರೆ. ದಂಪತಿಗೆ ಸನ್ಮಾನಿಸಿ ಚೆಕ್ ನೀಡಿರುವ ಫೋಟೋವನ್ನು ಸ್ಟಾಲಿನ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು ಆ ರಾಜ್ಯದ ಅಧಿಕಾರಿಗಳು. ಸ್ಟಾಲಿನ್ ನಡೆಗೆ ಶ್ಲ್ಯಾಘನೆ ವ್ಯಕ್ತವಾಗಿತ್ತು. ಇದೀಗ ಮೋದಿ ಕೂಡ ಸನ್ಮಾನ ಮಾಡುವ ಮೂಲಕ ಗೌರವಿಸುತ್ತಿದ್ದಾರೆ.

  • ಆಸ್ಕರ್ ಪ್ರಶಸ್ತಿ : ಮಾವುತರಿಗೆ ಬಂಪರ್ ಬಹುಮಾನ ಘೋಷಿಸಿದ ಸಿಎಂ ಸ್ಟಾಲಿನ್

    ಆಸ್ಕರ್ ಪ್ರಶಸ್ತಿ : ಮಾವುತರಿಗೆ ಬಂಪರ್ ಬಹುಮಾನ ಘೋಷಿಸಿದ ಸಿಎಂ ಸ್ಟಾಲಿನ್

    ಬಾರಿ ಭಾರತಕ್ಕೆ ಎರಡು ಆಸ್ಕರ್ ಪ್ರಶಸ್ತಿಗಳು ಬಂದ ಬೆನ್ನಲ್ಲೇ ಅಭಿಮಾನದ ಮಹಾಪುರವೇ ಹರಿದು ಬರುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ನಾಡಿನ ಬಹುತೇಕ ಗಣ್ಯರು ಎರಡೂ ಚಿತ್ರತಂಡಕ್ಕೆ ಮನಸಾರೆ ಪ್ರಂಶಸಿಸಿದ್ದಾರೆ. ಶುಭಾಶಯ ತಿಳಿಸಿದ್ದಾರೆ. ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ (MK Stalin) ಮತ್ತೊಂದು ಹೆಜ್ಜೆ ಮುಂದೆ ಹೋಗಿ, ಆಸ್ಕರ್ ಪ್ರಶಸ್ತಿ ವಿಜೇತ ಡಾಕ್ಯುಮೆಂಟರಿಯ ಕಥಾ ನಾಯಕ ಮತ್ತು ನಾಯಕಿಗೆ ಭರ್ಜರಿ ಬಹುಮಾನ ಘೋಷಿಸಿದ್ದಾರೆ.

    ಈ ಬಾರಿ ತೆಲುಗಿನ ಆರ್.ಆರ್.ಆರ್ ಸಿನಿಮಾದ ನಾಟು ನಾಟು ಹಾಡಿಗೆ ಮತ್ತು ತಮಿಳಿನ ‘ದಿ ಎಲಿಫೆಂಟ್ ವಿಸ್ಪರರ್ಸ್’ (The Elephant Whisperers) ಸಾಕ್ಷ್ಯಚಿತ್ರಕ್ಕೆ ಆಸ್ಕರ್ ಬಂದಿರುವ ವಿಚಾರ ಗೊತ್ತೇ ಇದೆ. ದಿ ಎಲಿಫೆಂಟ್ ವಿಸ್ಪರರ್ಸ್ ಡಾಕ್ಯುಮೆಂಟರಿಯ ನಿಜವಾದ ಹೀರೋ ಬೊಮ್ಮನ್ (Bomman) ಮತ್ತು ಹಿರೋಯಿನ್ ಬೆಳ್ಳಿ (Belli) ಎಂಬ ಮಾವುತ ದಂಪತಿಗಳು. ಈ ಡಾಕ್ಯುಮೆಂಟರಿ ಇವರ ಬದುಕನ್ನೇ ಕೇಂದ್ರಿಕರಿಸಿದ್ದು ಮಾಡಿದ್ದು. ಹಾಗಾಗಿ ಸ್ಟಾಲಿನ್ ಇವರಿಬ್ಬರನ್ನೂ ಸಿಎಂ ಕಚೇರಿಗೆ ಕರೆಯಿಸಿಕೊಂಡು ನೆನಪಿನ ಫಲಕ ಮತ್ತು ಎರಡು ಲಕ್ಷ ರೂಪಾಯಿ ಬಹುಮಾನ ನೀಡಿದ್ದಾರೆ. ಇದನ್ನೂ ಓದಿ:  ‘ಟ್ವಿಂಕಲ್’ ಹಾಡು ಹೇಳುತ್ತಾ ಬಂದ ಶಿವಾಜಿ ಸುರತ್ಕಲ್ 2

    ಕೇವಲ ಈ ಇಬ್ಬರಿಗೆ ಮಾತ್ರ ಬಹುಮಾನ ನೀಡಿಲ್ಲ. ಆನೆ ಶಿಬಿರದಲ್ಲಿ ಕೆಲಸ ಮಾಡುತ್ತಿರುವ 91 ಮಾವುತರಿಗೂ ತಲಾ ಒಂದೊಂದು ಲಕ್ಷ ರೂಪಾಯಿಯನ್ನು ನೀಡಿದ್ದಾರೆ. ಅಷ್ಟೇ ಅಲ್ಲ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಮಾವುತರಿಗೆ ಮನೆ ಕಟ್ಟಿಕೊಡಲು 9.1 ಕೋಟಿ ರೂಪಾಯಿ ಅನುದಾನ ನೀಡುವುದಾಗಿ ಘೋಷಿಸಿದ್ದಾರೆ. ದಂಪತಿಗೆ ಸನ್ಮಾನಿಸಿ ಚೆಕ್ ನೀಡಿರುವ ಫೋಟೋವನ್ನು ಸ್ಟಾಲಿನ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ ಆ ರಾಜ್ಯದ ಅಧಿಕಾರಿಗಳು. ಸ್ಟಾಲಿನ್ ನಡೆಗೆ ಶ್ಲ್ಯಾಘಿಸಿದ್ದಾರೆ.