Tag: ಬೊಜ್ಜು

  • ಭಾರತದಲ್ಲಿ ಬೊಜ್ಜು  ಹೆಚ್ಚಾಗಲು ಕಾರಣವೇನು? ನಿಯಂತ್ರಣ ಹೇಗೆ?

    ಭಾರತದಲ್ಲಿ ಬೊಜ್ಜು ಹೆಚ್ಚಾಗಲು ಕಾರಣವೇನು? ನಿಯಂತ್ರಣ ಹೇಗೆ?

    ಸಾಮಾನ್ಯವಾಗಿ ನಾವೆಲ್ಲರೂ ಅಡುಗೆಗೆ ಎಣ್ಣೆಯನ್ನು ಬಳಸುತ್ತೇವೆ. ಒಂದೊಂದು ರೀತಿಯ ಎಣ್ಣೆಯೂ ನಮ್ಮ ದೇಹದಲ್ಲಿನ ಬೊಜ್ಜಿನಾಂಶವನ್ನು ಹೆಚ್ಚಿಸುತ್ತದೆ. ಆದರೆ ದೇಹದ ಮಿತಿಮೀರಿ ಬೊಜ್ಜು ಬೆಳೆದಾಗ ಅದು ದೇಹಕ್ಕೆ ಕ್ರಮೇಣವಾಗಿ ಹಾನಿಯುಂಟು ಮಾಡುತ್ತದೆ.

    ಹೌದು, ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ, ತಮ್ಮ ಮನ್‌ ಕೀ ಬಾತ್‌ ರೇಡಿಯೋ ಕಾರ್ಯಕ್ರಮದಲ್ಲಿ ಬೊಜ್ಜು ಕುರಿತಾಗಿ ಮಾತನಾಡಿದರು. ಈ ಮೂಲಕ ಮೋದಿ ದೇಶ್ಯಾದ್ಯಂತ ಬೊಜ್ಜು ಕರಗಿಸುವ ಅಭಿಯಾನವನ್ನು ಪ್ರಾರಂಭಿಸಿದರು. ಈ ಅಭಿಯಾನ ಬೊಜ್ಜು ಕರಗಿಸಲು ಉತ್ತೇಜನ ನೀಡುವುದರ ಜೊತೆಗೆ, ಈ ಸಮಸ್ಯೆಯನ್ನು ಆದಷ್ಟು ಬೇಗ ಕಡಿಮೆ ಮಾಡುವ ನಿಟ್ಟಿನಲ್ಲಿ ಈ ನಿರ್ಧಾರವನ್ನು ಕೈಗೊಂಡಿದ್ದಾರೆ. ಬೊಜ್ಜು ಕರಗಿಸುವ ಅಭಿಯಾನದಲ್ಲಿ 10 ವ್ಯಕ್ತಿಗಳ ಹೆಸರನ್ನು ನಾಮ ನಿರ್ದೇಶನ ಮಾಡಿದ್ದಾರೆ.

    ಲ್ಯಾನ್ಸೆಟ್ ಅಧ್ಯಯನದ ಪ್ರಕಾರ, ಬೊಜ್ಜಿನ ಸಮಸ್ಯೆಯನ್ನು ಎದುರಿಸುತ್ತಿರುವವರ ಪೈಕಿ ಅಮೆರಿಕ, ಚೀನಾ ದೇಶಗಳ ಬಳಿಕ ಭಾರತ ಮೂರನೇ ಸ್ಥಾನದಲ್ಲಿದೆ. ಭಾರತದಲ್ಲಿ ಸುಮಾರು 80 ಮಿಲಿಯನ್‌ ಜನರು ಬೊಜ್ಜಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಬೊಜ್ಜು ಎಂದರೆ ದೇಹದಲ್ಲಿ ಅಸಹಜ ಅಥವಾ ಅತಿಯಾದ ಕೊಬ್ಬಿನ ಶೇಖರಣೆಯಾಗಿದ್ದು, ಇದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಮಿತಿಮೀರಿದ ಬೊಜ್ಜು ದೇಹದಲ್ಲಿ ಸಂಗ್ರಹವಾದಾಗ ಅಪಾಯಗಳಿಗೆ ಕಾರಣವಾಗುತ್ತದೆ.

    ಇತ್ತೀಚಿನ ದಿನಗಳಲ್ಲಿ ವಯಸ್ಕರು ಸೇರಿದಂತೆ ಮಕ್ಕಳಲ್ಲಿಯೂ ಬೊಜ್ಜು ಬೆಳೆಯುವುದು ಹೆಚ್ಚಾಗಿದೆ. ಇದಕ್ಕೆಲ್ಲ ಕಾರಣ ಈಗಿನ ಮಕ್ಕಳು ತಿನ್ನುವ ಆಹಾರ ಇದರ ಪ್ರಮುಖ ಪರಿಣಾಮ ಬೀರುತ್ತದೆ. ಲ್ಯಾನ್ಸೆಟ್ ಅಧ್ಯಯನದ ಪ್ರಕಾರ, 5 ರಿಂದ 19 ವರ್ಷದೊಳಗಿನ ಭಾರತೀಯ ಮಕ್ಕಳಲ್ಲಿ ಬೊಜ್ಜು 1990ರಲ್ಲಿ 0.4 ಮಿಲಿಯನ್‌ನಿಂದ 2022ರಲ್ಲಿ 12.5 ಮಿಲಿಯನ್ ಮಕ್ಕಳಲ್ಲಿ ಹೆಚ್ಚಾಗಿದೆ ಎಂದು ವರದಿ ಮಾಡಿದೆ. 20 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಲ್ಲಿ ಬೊಜ್ಜು 1990 ರಲ್ಲಿ 2.4 ಮಿಲಿಯನ್ ಮಹಿಳೆಯರಿಂದ 2022 ರಲ್ಲಿ 44 ಮಿಲಿಯನ್‌ಗೆ ಪಟ್ಟು ಹೆಚ್ಚಾಗಿದೆ. 2022 ರಲ್ಲಿ 197 ದೇಶಗಳ ಪೈಕಿ ಬೊಜ್ಜು ಹರಡುವಿಕೆಯಲ್ಲಿ ಭಾರತವು 182ನೇ ಸ್ಥಾನದಲ್ಲಿದೆ. ಪುರುಷರಲ್ಲಿ 180ನೇ ಸ್ಥಾನದಲ್ಲಿದೆ. ಹುಡುಗಿಯರು ಮತ್ತು ಹುಡುಗರಿಬ್ಬರಿಗೂ ಸಂಬಂಧಿಸಿದಂತೆ ದೇಶವು ವಿಶ್ವದಲ್ಲಿ 174ನೇ ಸ್ಥಾನದಲ್ಲಿದೆ ಎಂದು ವರದಿ ತಿಳಿಸಿದೆ. 2022ರ ಯುನಿಸೆಫ್‌ನ ವಿಶ್ವ ಬೊಜ್ಜು ಅಟ್ಲಾಸ್ ಪ್ರಕಾರ, 2030ರ ವೇಳೆಗೆ ಭಾರತದಲ್ಲಿ 27 ಮಿಲಿಯನ್‌ಗಿಂತಲೂ ಹೆಚ್ಚು ಬೊಜ್ಜು ಮಕ್ಕಳು ಹೊಂದಿರುವ ಮಕ್ಕಳು ಇರುತ್ತಾರೆ ಎಂದು ಊಹಿಸಲಾಗಿದೆ.

    ಪುರುಷರಿಗಿಂತ ಮಹಿಳೆಯರು ಹೆಚ್ಚು ಬೊಜ್ಜು ಹೊಂದಿರಲು ಕಾರಣವೇನು?
    ಮದ್ರಾಸ್ ಡಯಾಬಿಟಿಸ್ ರಿಸರ್ಚ್ ಫೌಂಡೇಶನ್‌ನ ಸಂಶೋಧನಾ ಕಾರ್ಯಾಚರಣೆಗಳು ಮತ್ತು ಮಧುಮೇಹ ತೊಡಕುಗಳ ವಿಭಾಗದ ಮುಖ್ಯಸ್ಥೆ ಮತ್ತು ಅಧ್ಯಯನದ ಸಹ-ಲೇಖಕಿ ಡಾ. ಪ್ರದೀಪ ಗುಹಾ ಅವರ ಪ್ರಕಾರ, ಒತ್ತಡ, ಸರಿಯಾಗದ ನಿದ್ರೆ, ಆಹಾರ ಪದ್ಧತಿ ಎಲ್ಲವೂ ಕಾರಣವಾಗುತ್ತದೆ. ಜೊತೆಗೆ ಗರ್ಭಧಾರಣೆ, ಹಾರ್ಮೋನ್‌ ಋತುಚಕ್ರದಂತಹ ಜೈವಿಕ ಅಂಶಗಳು ಮಹಿಳೆಯ ತೂಕದ ಮೇಲೆ ಪರಿಣಾಮ ಬೀರುತ್ತವೆ

    WHO ಪ್ರಕಾರ, 2022ರಲ್ಲಿ 18 ವರ್ಷ ಮತ್ತು ಹೆಚ್ಚಿನ ವಯಸ್ಸಿನ 2.5 ಬಿಲಿಯನ್ ವಯಸ್ಕರು ಅಧಿಕ ತೂಕ ಹೊಂದಿದ್ದರು, ಇದರಲ್ಲಿ 890 ಮಿಲಿಯನ್‌ಗಿಂತಲೂ ಹೆಚ್ಚು ವಯಸ್ಕರು ಬೊಜ್ಜು ಹೊಂದಿದ್ದರು. ಇದು 18 ವರ್ಷ ಮತ್ತು ಹೆಚ್ಚಿನ ವಯಸ್ಸಿನ ವಯಸ್ಕರಲ್ಲಿ 43% (ಪುರುಷರಲ್ಲಿ 43% ಮತ್ತು ಮಹಿಳೆಯರು 44%) ಅಧಿಕ ತೂಕ ಹೊಂದಿದ್ದರು, 1990ರಲ್ಲಿ ಹೆಚ್ಚಳ, ಆಗ 25% ವಯಸ್ಕರು ಅಧಿಕ ತೂಕ ಹೊಂದಿದ್ದರು.

    2022 ರಲ್ಲಿ ವಿಶ್ವಾದ್ಯಂತ 18 ವರ್ಷ ಮತ್ತು ಹೆಚ್ಚಿನ ವಯಸ್ಸಿನ ವಯಸ್ಕರಲ್ಲಿ ಸುಮಾರು 16% ಜನರು ಬೊಜ್ಜು ಹೊಂದಿದ್ದರು. 2022 ರಲ್ಲಿ, 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಂದಾಜು 37 ಮಿಲಿಯನ್ ಮಕ್ಕಳು ಅಧಿಕ ತೂಕ ಹೊಂದಿದ್ದರು. ಹೆಚ್ಚುವರಿಯಾಗಿ, 2035ರ ವೇಳೆಗೆ ಸುಮಾರು 3.3 ಬಿಲಿಯನ್ ವಯಸ್ಕರು ಬೊಜ್ಜುತನವನ್ನು ಎದುರಿಸುತ್ತಾರೆ ಮತ್ತು 5 ರಿಂದ 19 ವರ್ಷ ವಯಸ್ಸಿನ ಯುವ ವಯಸ್ಕರು ಅದೇ ವರ್ಷದ ವೇಳೆಗೆ 770 ಮಿಲಿಯನ್‌ಗಿಂತಲೂ ಹೆಚ್ಚಾಗುತ್ತಾರೆ ಎಂದು 2024ರ ವರ್ಲ್ಡ್ ಒಬೆಸಿಟಿ ಅಟ್ಲಾಸ್ ತಿಳಿಸಿದೆ

    ಬೊಜ್ಜು ಕಡಿಮೆಗೊಳಿಸುವುದು, ಆಹಾರ ಪದ್ಧತಿ ನಿಯಂತ್ರಿಸುವುದು ಹೇಗೆ?
    ಉತ್ತಮ ಆಹಾರ ಪದ್ಧತಿ, ಹೃದಯ ಮತ್ತು ವ್ಯಾಯಾಮ ಮೂರನ್ನು ಒಟ್ಟಾಗಿ ಮಾಡುವುದರಿಂದ ಸ್ಥಿರವಾದ ತೂಕವನ್ನು ಕಾಪಾಡಿಕೊಳ್ಳಲು ಮತ್ತು ನಿಮ್ಮನ್ನು ಸದೃಢವಾಗಿರಿಸಿಕೊಳ್ಳಲು ಸಹಾಯ ಮಾಡುತ್ತದೆ. ಧೂಮಪಾನವನ್ನು ಕಡಿಮೆ ಮಾಡುವುದು ಅಥವಾ ತ್ಯಜಿಸುವುದು, ಸಂಯಮದ ಆಹಾರ ಪದ್ಧತಿ, ತಿಂಡಿಗಳು ಮತ್ತು ಅತಿಯಾಗಿ ತಿನ್ನುವುದನ್ನು ಮೇಲ್ವಿಚಾರಣೆ ಮಾಡುವ ಬಗ್ಗೆ ನಿರ್ದಿಷ್ಟ ಗಮನ ನೀಡಬೇಕು. ಸೋಡಾ, ಸಿಹಿಗೊಳಿಸಿದ ಕಾಫಿ ಮತ್ತು ಪಾನೀಯಗಳ ರೂಪದಲ್ಲಿ ಸೇರಿಸಿದ ಸಕ್ಕರೆ ಸೇವನೆಯು ದೇಹಕ್ಕೆ ಅಪಾಯಕಾರಿ.

    ಸದೃಢರಾಗಿ ಮತ್ತು ಆರೋಗ್ಯವಾಗಿರಲು ದಿನಕ್ಕೆ ಕನಿಷ್ಠ 60 ನಿಮಿಷಗಳ ದೈಹಿಕ ಚಟುವಟಿಕೆಯನ್ನು ಶಿಫಾರಸು ಮಾಡಲಾಗಿದೆ. ಮಕ್ಕಳಿಗೆ ಅನಾರೋಗ್ಯಕರ ಆಹಾರ ಮತ್ತು ಪಾನೀಯಗಳ ಮಾರಾಟ, ಮಕ್ಕಳನ್ನು ಗುರಿಯಾಗಿಸಿಕೊಂಡು ಜಂಕ್ ಫುಡ್ ಜಾಹೀರಾತುಗಳನ್ನು ನಿರ್ಬಂಧಿಸುವುದು, ಪೌಷ್ಠಿಕಾಂಶದ ಲೇಬಲಿಂಗ್ ಅನ್ನು ಸ್ಪಷ್ಟಪಡಿಸುವುದು ಮತ್ತು ಶಾಲಾ ಕೆಫೆಟೇರಿಯಾಗಳಲ್ಲಿ ಆರೋಗ್ಯಕರ ಆಯ್ಕೆಗಳನ್ನು ಉತ್ತೇಜಿಸುವುದು ಅತ್ಯಗತ್ಯ. ಮಕ್ಕಳು ಶಾಲೆಯಿಂದ ಹಿಂದಿರುಗಿದ ನಂತರ ಫೋನ್‌ಗಳು, ಗ್ಯಾಜೆಟ್‌ಗಳು ಅಥವಾ ಟಿವಿ ನೋಡುವುದರಲ್ಲಿ ಹೆಚ್ಚು ಸಮಯ ಕಳೆಯುವ ಬದಲು ಹೊರಾಂಗಣ ಆಟಗಳು ಮತ್ತು ಕ್ರೀಡೆಗಳಂತಹ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಮತ್ತು ಮನೆಕೆಲಸಗಳನ್ನು ಮಾಡಬೇಕು ಎಂದು ತಜ್ಞರು ಶಿಫಾರಸು ಮಾಡುತ್ತಾರೆ.

  • ಬೊಜ್ಜು ವಿರುದ್ಧ ಅಭಿಯಾನ – ಒಮರ್ ಅಬ್ದುಲ್ಲಾ, ಆನಂದ್ ಮಹೀಂದ್ರಾ ಸೇರಿ 10 ಗಣ್ಯರ ನಾಮ ನಿರ್ದೇಶನ ಮಾಡಿದ ಮೋದಿ

    ಬೊಜ್ಜು ವಿರುದ್ಧ ಅಭಿಯಾನ – ಒಮರ್ ಅಬ್ದುಲ್ಲಾ, ಆನಂದ್ ಮಹೀಂದ್ರಾ ಸೇರಿ 10 ಗಣ್ಯರ ನಾಮ ನಿರ್ದೇಶನ ಮಾಡಿದ ಮೋದಿ

    ನವದೆಹಲಿ: ಬೊಜ್ಜು ವಿರುದ್ಧದ ಹೋರಾಟವನ್ನು ಬಲಪಡಿಸಲು, ಆಹಾರದಲ್ಲಿ ಖಾದ್ಯಗಳಲ್ಲಿ ಅಡುಗೆ ಎಣ್ಣೆಯ ಬಳಕೆಯನ್ನು ಕಡಿಮೆ ಮಾಡುವ ಬಗ್ಗೆ ಜಾಗೃತಿ ಮೂಡಿಸಲು ಪ್ರಧಾನಿ ನರೇಂದ್ರ ಮೋದಿ (Narendra Modi) ದೇಶದ ಪ್ರಮುಖ ಹತ್ತು ವ್ಯಕ್ತಿಗಳ ಹೆಸರಗಳನ್ನು ನಾಮ ನಿರ್ದೇಶನ ಮಾಡಿದ್ದಾರೆ.

    ಇತ್ತೀಚಿಗೆ ಮನ್ ಕೀ ಬಾತ್‌ನಲ್ಲಿ (Mann Ki Baat) ಈ ಬಗ್ಗೆ ಮಾತನಾಡಿದ್ದ ಪ್ರಧಾನಿ ಮೋದಿ ಹತ್ತು ಹೆಸರುಗಳನ್ನು ನಾಮ ನಿರ್ದೇಶನ ಮಾಡುವುದಾಗಿ ಹೇಳಿದ್ದರು. ಅದರಂತೆ ಹತ್ತು ಹೆಸರುಗಳನ್ನು ಎಕ್ಸ್ ಖಾತೆಯಲ್ಲಿ ಅವರು ಹಂಚಿಕೊಂಡಿದ್ದಾರೆ.

     

    ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ (Anand Mahindra), ಅಜಂಗಢದ ಮಾಜಿ ಬಿಜೆಪಿ ಸಂಸದ ಮತ್ತು ಭೋಜ್‌ಪುರಿ ನಟ ದಿನೇಶ್ ಲಾಲ್ ಯಾದವ್ ‘ನಿರಹುವಾ’, ಕ್ರೀಡಾಪಟು ಮನು ಭಾಕರ್, ಕ್ರೀಡಾಪಟು ಮೀರಾಬಾಯಿ ಚಾನು, ಹಿರಿಯ ಮಲೆಯಾಳಂ ಚಲನಚಿತ್ರ ನಟ ಮೋಹನ್ ಲಾಲ್, ಇನ್ಫೋಸಿಸ್ ಸಹ-ಸಂಸ್ಥಾಪಕ ನಂದನ್ ನಿಲೇಕಣಿ, ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಹಿಂದಿ ಮತ್ತು ತಮಿಳು ಚಲನಚಿತ್ರ ನಟ ಆರ್. ಮಾಧವನ್, ಖ್ಯಾತ ಹಿನ್ನೆಲೆ ಗಾಯಕಿ ಶ್ರೇಯಾ ಘೋಷಾಲ್ ಮತ್ತು ಇನ್ಫೋಸಿಸ್ ಸಂಸ್ಥಾಪಕಿ ಮತ್ತು ರಾಜ್ಯಸಭಾ ಸಂಸದೆ ಸುಧಾ ಮೂರ್ತಿ ಹೆಸರನ್ನು ಮೋದಿ ನಾಮ ನಿರ್ದೇಶನ ಮಾಡಿದ್ದಾರೆ. ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿ ವೇಳೆ ವಿದೇಶಿಯರ ಅಪಹರಣಕ್ಕೆ ಇಸ್ಲಾಮಿಕ್ ಸ್ಟೇಟ್ ಸಂಚು – ಪಾಕ್ ಗುಪ್ತಚರ ಸಂಸ್ಥೆ ಎಚ್ಚರಿಕೆ

    ಹೆಸರುಗಳನ್ನು ಹಂಚಿಕೊಂಡ ಪ್ರಧಾನಿ ಮೋದಿ ನಾಮ ನಿರ್ದೇಶನಗೊಂಡ ವ್ಯಕ್ತಿಗಳು ಇತರ 10 ಜನರನ್ನು ನಾಮನಿರ್ದೇಶನ ಮಾಡುವಂತೆ ವಿನಂತಿಸಿದರು. ಪ್ರಧಾನಿ ಮೋದಿಯವರ ಟ್ವೀಟ್‌ಗೆ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ (Omar Abdullah) ಪ್ರತಿಕ್ರಿಯಿಸಿ, ಅಭಿಯಾನಕ್ಕೆ ಸೇರಲು ಸಂತೋಷ ವ್ಯಕ್ತಪಡಿಸಿದರು. ಈ ಅಭಿಯಾನ ಉತ್ತೇಜಿಸಲು ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ನಟಿ ದೀಪಿಕಾ ಪಡುಕೋಣೆ ಮತ್ತು ಕ್ರಿಕೆಟ್ ಆಟಗಾರ ಇರ್ಫಾನ್ ಪಠಾಣ್ ಸೇರಿದಂತೆ ಇತರ 10 ಜನರನ್ನು ನಾಮನಿರ್ದೇಶನ ಮಾಡಿದರು.

    ಪ್ರಧಾನಿ ಮೋದಿ ಭಾನುವಾರ ತಮ್ಮ ‘ಮನ್ ಕಿ ಬಾತ್’ ಭಾಷಣದಲ್ಲಿ ಜನರು ಆಹಾರದಲ್ಲಿ ಕಡಿಮೆ ಎಣ್ಣೆಯನ್ನು ಬಳಸಬೇಕೆಂದು ಮತ್ತು ತೈಲ ಸೇವನೆಯನ್ನು ಶೇ. 10 ರಷ್ಟು ಕಡಿಮೆ ಮಾಡುವ ಸವಾಲನ್ನು ಇತರ 10 ಜನರಿಗೆ ರವಾನಿಸಬೇಕೆಂದು ಮನವಿ ಮಾಡಿದ್ದರು.

    2022 ರಲ್ಲಿ ಪ್ರಪಂಚದಾದ್ಯಂತ ಸುಮಾರು 250 ಕೋಟಿ ಜನರು ಅಧಿಕ ತೂಕ ಹೊಂದಿದ್ದರು. ಒಂದು ಅಧ್ಯಯನದ ಪ್ರಕಾರ ಇಂದು ಪ್ರತಿ 8 ಜನರಲ್ಲಿ ಒಬ್ಬರು ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕಳೆದ ವರ್ಷಗಳಲ್ಲಿ ಬೊಜ್ಜಿನ ಪ್ರಕರಣಗಳು ದ್ವಿಗುಣಗೊಂಡಿವೆ. ಇನ್ನೂ ಆತಂಕದ ವಿಷಯ ಏನೆಂದರೆ ಮಕ್ಕಳಲ್ಲಿಯೂ ಬೊಜ್ಜಿನ ಸಮಸ್ಯೆ ನಾಲ್ಕು ಪಟ್ಟು ಹೆಚ್ಚಾಗಿದೆ. ಆದರೆಈ ಸವಾಲನ್ನು ಸಣ್ಣ ಪ್ರಯತ್ನಗಳಿಂದ ನಿಭಾಯಿಸಬಹುದು ಎಂದು ಹೇಳಿದರು.

     

  • ಬೊಜ್ಜನ್ನು ಕರಗಿಸಲು ಸರಳ ಉಪಾಯವೇನು ಗೊತ್ತಾ?

    ಬೊಜ್ಜನ್ನು ಕರಗಿಸಲು ಸರಳ ಉಪಾಯವೇನು ಗೊತ್ತಾ?

    ರೋಗ್ಯವೇ ಭಾಗ್ಯ ಎನ್ನುವ ಮಾತಿದೆ. ಆರೋಗ್ಯದಲ್ಲಿ ಏರಿಳಿತವಾಗುವುದು ಸರ್ವೆ ಸಾಮಾನ್ಯವಾಗಿದೆ. ನಾವು ಸೇವಿಸುವ ಆಹಾರ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ದೇಹ ತೂಕ ಹೆಚ್ಚಾಗುವುದರ ಜೊತೆಗೆ ಅನಾರೋಗ್ಯ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಯಾವ ಆಹಾರವನ್ನು ಸೇವಿಸಬೇಕು, ನಮ್ಮ ಆಹಾರ ಕ್ರಮ ಹೇಗಿದ್ದರೆ ಒಳ್ಳೆಯದು ಎನ್ನುವ ಗೊಂದಲಗಳಿರುತ್ತವೆ.

    ದೇಹದ ತೂಕ ಹೆಚ್ಚಾಗಿದ್ದರೆ ಅದಕ್ಕೆ ಖಂಡಿತವಾಗಿಯೂ ಬೊಜ್ಜು ಕಾರಣವಾಗುವುದು. ಬೊಜ್ಜು ಕರಗಿಸಲು ಹೆಚ್ಚಿನವರು ತುಂಬಾ ಶ್ರಮ ಪಡುತ್ತಾರೆ. ಅಂತಹವರು ಯಾವ ಆಹಾರ ಸೇವಿಸಬೇಕು ಎನ್ನುವ ಮಾಹಿತಿ ಈ ಕೆಳಗಿನಂತಿದೆ.

    * ಹೊಟ್ಟೆಯ ಕೊಬ್ಬು ಹೆಚ್ಚಾಗಲು ಕಾರಣ ಪ್ರತಿದಿನ ಸೇವಿಸುವ ಸಿಹಿ ಪದಾರ್ಥಗಳಾಗಿವೆ. ಹೀಗಾಗಿ ಸಕ್ಕರೆ ಮಿಶ್ರಿತ ತಿನಿಸುಗಳಾದ ಬೇಕರಿ ತಿನಿಸುಗಳು, ಕೆಲವೊಂದು ಬಗೆಯೆ ಐಸ್‍ಕ್ರೀಮ್‍ಗಳು ಮತ್ತು ಸಿಹಿ ತಿಂಡಿಗಳಿಂದ ದೂರವಿರಿ.

    * ಒಂದೆರಡು ಟೀ ಚಮಚ ಜೀರಿಗೆಯನ್ನು ನೀರಿನೊಂದಿಗೆ ಚೆನ್ನಾಗಿ ಕುದಿಸಿ, ಉಗುರು ಬೆಚ್ಚಗಿರುವಾಗಲೇ ಪ್ರತಿದಿನ ಒಂದೊಂದು ಲೋಟ ಕುಡಿಯುತ್ತಾ ಬಂದರೆ ಕಿಬ್ಬೊಟ್ಟೆ ಹಾಗೂ ಸೊಂಟದ ಸುತ್ತಲೂ ಶೇಖರಣೆ ಗೊಂಡ ಕೊಬ್ಬು ಸುಲಭವಾಗಿ ಕರಗಿಸುತ್ತದೆ.

    * ಹಸಿ ಶುಂಠಿ ಜೀರ್ಣ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ದೇಹದ ಬಿಸಿಯನ್ನು ಏರಿಸುವ ಮೂಲಕ ದೇಹದಲ್ಲಿ ಸಂಗ್ರಹವಾಗಿದ್ದ ಕೊಬ್ಬು ಕರಗಲು ನೆರವಾಗುತ್ತದೆ. ಇದನ್ನೂ ಓದಿ:  ಒಡೆದ ಹಿಮ್ಮಡಿಯ ಆರೈಕೆಗೆ ಏನು ಮಾಡಬೇಕು ಗೊತ್ತಾ?

    * ಪ್ರತಿ ದಿನ ಎರಡು ಗ್ಲಾಸ್ ಹಾಲಿಲ್ಲದ ಗ್ರೀನ್ ಟೀ ಸೇವಿಸಿದರೆ, ದೇಹದ ತೂಕ ಕಡಿಮೆಯಾಗುವುದರ ಜೊತೆಗೆ ಕೊಬ್ಬನ್ನು ಕರಗಿಸಲೂ ಸಾಧ್ಯವಾಗುತ್ತದೆ.

    * ಹೊಟ್ಟೆಯ ಬೊಜ್ಜು ಕರಗಿಸಲು ಇವುಗಳ ಬದಲಿಗೆ ರುಚಿಕರವಾದ ನೀರನ್ನು ಕುಡಿಯಿರಿ. ಇದಕ್ಕಾಗಿ ನೀವು ಒಂದು ಜಗ್ ನೀರಿನಲ್ಲಿ ಸ್ವಲ್ಪ ಸ್ಟ್ರಾಬೆರಿ, ತುಳಸಿ, ಹುಳಿ ಅಥವಾ ಲಿಂಬೆ ಹಾಕಿಕೊಂಡು ಇಡಬೇಕು. ಇದು ಕುಡಿಯಲು ತುಂಬಾ ರುಚಿಕರವಾಗಿರುವುದು ಮತ್ತು ಇದರಲ್ಲಿ ಕ್ಯಾಲರಿ ಕೂಡ ತುಂಬಾ ಕಡಿಮೆ ಇರುವುದು. ಇದರಿಂದ ನೀವು ಮತ್ತಷ್ಟು ನೀರು ಕುಡಿಯಲು ಪ್ರೇರಣೆ ಕೂಡ ಸಿಗುವುದು. ಇದನ್ನೂ ಓದಿ: ಹೊಟ್ಟೆ ಸಮಸ್ಯೆ ನಿವಾರಣೆಗೆ ಇಲ್ಲಿದೆ ಮನೆಮದ್ದು

    * ಹಣ್ಣು, ಮೊಸರಿನಿಂದ ತಯಾರಿಸಿದ ಸ್ಮೂತಿ ಅಥವಾ ಸಲಾಡ್‍ ತಯಾರಿಸಿ ಸೇವಿಸಬಹುದಾಗಿದೆ. ಇದನ್ನೂ ಓದಿ: ಪಳ ಪಳ ಹೊಳೆಯುವ ಹಲ್ಲು ನಿಮ್ಮದಾಗ ಬೇಕಾ? ಹಾಗಿದ್ರೆ ಒಮ್ಮೆ ಟ್ರೈ ಮಾಡಿ

  • ಬೊಜ್ಜು ಕರಗಿಸಿ ಸ್ಲಿಮ್‌ ಆಗಲು ಸ್ಕಲ್ಪ್ಟ್‌ಗೆ ಭೇಟಿ ನೀಡಿ

    ಬೊಜ್ಜು ಕರಗಿಸಿ ಸ್ಲಿಮ್‌ ಆಗಲು ಸ್ಕಲ್ಪ್ಟ್‌ಗೆ ಭೇಟಿ ನೀಡಿ

    ನೀವು ದಪ್ಪಗಿದ್ದೀರಾ? ನಿಮ್ಮ ತೂಕವನ್ನು ಕಡಿಮೆ ಮಾಡಬೇಕು ಎಂದು ಆಲೋಚಿಸುತ್ತಿದ್ದೀರಾ? ಹಾಗಾದ್ರೆ ನೀವು ಚಿಂತೆ ಮಾಡಬೇಕಾದ ಅಗತ್ಯವೇ ಇಲ್ಲ. ನಿಮ್ಮ ದೇಹಕ್ಕೆ ಅನುಗುಣವಾಗಿ ಸಲಹೆಗಳನ್ನು ನೀಡಿ ತೂಕವನ್ನು ಕಡಿಮೆ ಮಾಡುವ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿರುವ ಹೆಸರಾಂತ ಸಂಸ್ಥೆ ಬೆಂಗಳೂರಿನಲ್ಲಿದೆ.

    ಪ್ರಸಿದ್ಧ ಸ್ಕಲ್ಪ್ಟ್‌ ಸಂಸ್ಥೆ ಬೆಂಗಳೂರಿನಲ್ಲಿ ತನ್ನ ಸೇವೆಯನ್ನು ನೀಡುತ್ತಿದೆ. ಸೌಂದರ್ಯ ಕ್ಷೇತ್ರದಲ್ಲಿ 2 ದಶಕಗಳ ಅನುಭವ ಹೊಂದಿರುವ ಗೀತಾ ಪಾಲ್‌ ಅವರು ಈ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಪ್ರತಿಯೊಬ್ಬರೂ ಸುಂದರವಾಗಿ ಜನಿಸಿದ್ದಾರೆ. ಸುಂದರವಾಗಿ ಜನಿಸಿದವರಿಗೆ ಸ್ವಲ್ಪ ಮಾರ್ಗದರ್ಶನ ನೀಡಿ ಅವರನ್ನು ಮತ್ತಷ್ಟು ಹೊಳೆಯುವಂತೆ ಮಾಡುವುದೇ ನಮ್ಮ ಧ್ಯೇಯ ಎಂದು ಸ್ಕಲ್ಪ್ಟ್‌ ಹೇಳಿಕೊಂಡಿದೆ.

    ಕೇವಲ ತೂಕ ಕಡಿಮೆ ಮಾತ್ರ ಅಲ್ಲ ಇಲ್ಲಿ ಲೇಸರ್‌ ಕೇಶ ಮಂಡನ(ಲೇಸರ್‌ ಹೇರ್‌ ರಿಮೂವಲ್‌) ಕೂದಲ ಕಸಿ( ಹೇರ್‌ ಟ್ರಾನ್ಸ್ಪಾಂಟ್‌), ಸೌಂದರ್ಯ ಸೇವೆ ಸಿಗುತ್ತದೆ. ಈ ಸೇವೆ ನೀಡಲೆಂದು ಸುಶಿಕ್ಷಿತ ಸಲಹೆಗಾರರು, ಪೌಷ್ಟಿಕತಜ್ಞರು, ಭೌತ ಚಿಕಿತ್ಸಕರು, ವೈದ್ಯರು, ತಂತ್ರಜ್ಞರು ತಂಡವೇ ಇದೆ.

    ಸ್ಲಿಮ್ಮಿಂಗ್ ಮತ್ತು ಸೌಂದರ್ಯದ ಇತ್ತೀಚಿನ ತಂತ್ರಜ್ಞಾನದ ಪ್ರಯೋಜನ ಸ್ಕಲ್ಪ್ಟ್‌ನಲ್ಲಿ ಸಿಗುವುದು ವಿಶೇಷ. ಭಾರತೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಅತ್ಯುತ್ತಮ ಚಿಕಿತ್ಸೆಯನ್ನು ಇಲ್ಲಿ ಗ್ರಾಹಕರಿಗೆ ನೀಡಲಾಗುತ್ತದೆ.

    ಬೊಜ್ಜು ಕರಗಿಸುವುದು ಅಂದರೆ ಅದು ಸುಲಭವಲ್ಲ. ವ್ಯಕ್ತಿಯ ಆರೋಗ್ಯ, ಆಹಾರ ಇವುಗಳನ್ನೂ ಅಧ್ಯಯನ ಮಾಡಬೇಕಾಗುತ್ತದೆ. ಈ ಕಾರಣಕ್ಕೆ ಇಲ್ಲಿ ನುರಿತ ತಂಡವಿದ್ದು ಗ್ರಾಹಕರನ್ನು ಸಂಪೂರ್ಣವಾಗಿ ಪರೀಕ್ಷೆಗೆ ಒಳಪಡಿಸಿ ಹಿತಮಿತವಾದ ಡಯಟ್‌ ಬಗ್ಗೆ ಸುಲಭವಾಗಿ ಅರ್ಥವಾಗುವ ಹಾಗೆ ಹೇಳಿಕೊಡುತ್ತಾರೆ. ಹೇಗೆ ಗ್ರಾಹಕರು ಬದಲಾಗಿದ್ದಾರೆ ಎಂದರೆ 86 ಕೆಜಿ ತೂಕದ19 ವರ್ಷದ ಯುವತಿ 53 ಕೆಜಿಗೆ ಇಳಿದಿದ್ದರೆ 10 ವಾರದಲ್ಲೇ 13.8 ಕೆಜಿ ತೂಕವನ್ನು ಇಳಿಸಿದ ಗ್ರಾಹಕರಿದ್ದಾರೆ.

    ಅಕ್ಟೋಬರ್‌ 16, 2016ರಂದು ಆರಂಭಗೊಂಡ ಸಂಸ್ಥೆಗೆ 20 ಸಾವಿರಕ್ಕೂ ಹೆಚ್ಚು ಮಂದಿ ಗ್ರಾಹಕರಿದ್ದಾರೆ. ಗುಣಮಟ್ಟದ ಸೇವೆ ನೀಡುತ್ತಿರುವ ಕಾರಣ ವರ್ಷದಿಂದ ವರ್ಷಕ್ಕೆ ಗ್ರಾಹಕರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಗ್ರಾಹಕರಿಗೆ ಸುಲಭವಾಗಲೆಂದು ಬೆಂಗಳೂರಿನ ಕೋರಮಂಗಲ, ಜಯನಗರ, ಸದಾಶಿವ ನಗರ, ಇಂದಿರಾ ನಗರದಲ್ಲಿ ಸ್ಕಲ್ಪ್ಟ್‌ ತನ್ನ ಕಚೇರಿಯನ್ನು ತೆರೆದಿದೆ.

    ಸಂಪರ್ಕ ಹೇಗೆ?
    www.sculptbygp.com ವೆಬ್‌ಸೈಟಿಗೆ ಭೇಟಿ ನೀಡಬಹುದು. ಅಲ್ಲಿ ನಿಮಗೆ ಯಾವ ಸೇವೆ ಬೇಕು ಎನ್ನುವುದನ್ನು ತಿಳಿಯಬಹುದು. ಒಂದು ಏನಾದರೆ ಸಂದೇಹಗಳಿದ್ದರೆ ಚಾಟ್‌ ಮಾಡುವ ಮೂಲಕ ಪ್ರಶ್ನಿಸಬಹುದು. ಒಂದು ವೇಳೆ ನೇರವಾಗಿ ಕರೆ ಮಾಡಬೇಕಾದರೆ 91080 80012 ಸಂಖ್ಯೆಗೆ ಕರೆ ಮಾಡಬಹುದು. ಸೋಮವಾರದಿಂದ ಭಾನುವಾರದವರೆಗೆ ಬೆಳಗ್ಗೆ 7 ರಿಂದ ರಾತ್ರಿ 9 ಗಂಟೆಯವರೆಗೆ ಸ್ಕಲ್ಪ್ಟ್‌ ಕಚೇರಿಯನ್ನು ಸಂಪರ್ಕ ಮಾಡಬಹುದು.

    ಸ್ಕಲ್ಪ್ಟ್‌ನಲ್ಲಿ ಕೇವಲ ಕೂದಲ ಕಸಿ, ಬೊಜ್ಜು ಕರಗಿಸುವುದು ಮಾತ್ರ ಅಲ್ಲ ಮುಖದ ಮೇಕಪ್‌ ಹೇಗಿರಬೇಕು ಮತ್ತು ಯಾವ ರೀತಿ ಹೇರ್‌ ಸ್ಟೈಲ್‌ ಮಾಡಬಹುದು? ಇವುಗಳ ಬಗ್ಗೆ ಕೋರ್ಸ್‌ ಸಹ ಇಲ್ಲಿ ನೀಡಲಾಗುತ್ತದೆ. ಈ ವಿಷಯದ ತಜ್ಞರು ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಾರೆ.

    ಇನ್ಯಾಕೆ ತಡ ಈ ಮೇಲಿನ ವಿಷಯದಲ್ಲಿ ನಿಮಗೆ ಮತ್ತಷ್ಟು ವಿವರ ಬೇಕಿದ್ದರೆ ಕೂಡಲೇ www.sculptbygp.com ಭೇಟಿ ನೀಡಿ ನಿಮ್ಮ ಸಮಸ್ಯೆಯನ್ನು ಬಗೆ ಹರಿಸಿ ಲೈಫ್‌ ಲಾಂಗ್‌ ಸಂತೋಷವಾಗಿರಿ.

  • ಕೊರೊನಾ ಬಳಿಕ ಮಕ್ಕಳನ್ನ ಕಾಡ್ತಿದೆ ಒಬೆಸಿಟಿ ಪ್ರಾಬ್ಲಂ

    ಕೊರೊನಾ ಬಳಿಕ ಮಕ್ಕಳನ್ನ ಕಾಡ್ತಿದೆ ಒಬೆಸಿಟಿ ಪ್ರಾಬ್ಲಂ

    ಬೆಂಗಳೂರು: ದೇಶದಲ್ಲಿ ಮಹಾಮಾರಿ ಕೊರೊನಾ ಇನ್ನೇನು ಕಡಿಮೆಯಾಗುತ್ತಿದೆ ಎನ್ನುವಷ್ಟರಲ್ಲಿ ಮಕ್ಕಳಲ್ಲಿ ಇದೀಗ ಒಬೆಸಿಟಿ ಸಮಸ್ಯೆ ಕಾಡುತ್ತಿದೆ.

    ಡೆಡ್ಲಿ ಕೊರೊನಾ ಬಂದಿದ್ದೇ ತಡ, ಒಂದಿಲ್ಲ ಒಂದು ಸಮಸ್ಯೆ ದಿನ ದಿನ ಕಾಡುತ್ತಲೆ ಇದೆ. ಕೊರೊನಾ ಬಂದಾಗಿನಿಂದ ಜನರ ಲೈಫ್‍ಸ್ಟೈಲ್ ಬದಲಾಗಿದೆ. ಒಂದೆಡೆ ಮಕ್ಕಳಿಗೆ ಆನ್‍ಲೈನ್ ಕ್ಲಾಸ್, ಇನ್ನೊಂದೆಡೆ ದೊಡ್ಡವರಿಗೆ ವರ್ಕ್ ಫ್ರಮ್ ಹೋಂ ಇದೆ. ಇದರಿಂದ ಮಕ್ಕಳ ಜೀವನ ಶೈಲಿ ಮೇಲೆ ಸಾಕಷ್ಟು ಪರಿಣಾಮ ಬೀರಿದೆ.

    ಪ್ರಪಂಚದಾದ್ಯಂತ ಕೊರೊನಾ ತಾಂಡವವಾಡುತ್ತಿದ್ದ ವೇಳೆ ಜನರು ಲಾಕ್‍ಡೌನ್ ಆಗಬೇಕಾಗಿತ್ತು. ಅಲ್ಲದೆ ಡೆಡ್ಲಿ ಕೊರೊನಾದಿಂದ ಮಕ್ಕಳು ಕೂಡ ಮನೆಯಲ್ಲಿಯೇ ಇದ್ದಾರೆ. ಹೀಗಾಗಿ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಬೊಜ್ಜಿನ ಪ್ರಮಾಣ ದಿಢೀರ್ ಜಾಸ್ತಿಯಾಗಿದೆ. ಮಕ್ಕಳಿಗಂತೂ ಅತಿಯಾಗಿ ಆರೋಗ್ಯ ಸಮಸ್ಯೆ ಕಾಡುತ್ತಿದೆ.

    ಇನ್ನೂ ಒಬೆಸಿಟಿ ಸಮಸ್ಯೆಯನ್ನು ಹೊಂದಿರುವ ಶೇ.75ರಷ್ಟು ಪೇಷೆಂಟ್ ಗಳು ಹೆಚ್ಚಾಗಿ ಆಸ್ಪತ್ರೆಗೆ ಬರುತ್ತಿದ್ದಾರೆ. ನಾಲ್ಕು ಗೋಡೆಗಳ ಮಧ್ಯೆ ಇದ್ದರಿಂದ ಜನರು ವಿಟಮಿನ್ ಎ, ವಿಟಮಿನ್ ಡಿ, ಅನಿಮಿಯಾ ಎಂಬ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಹಾಗಾಗಿ ಇವೆಲ್ಲವನ್ನು ದೂರ ಮಾಡಿ ನಮ್ಮ ದೇಹದಲ್ಲಿ ಇಮ್ಯೂನಿಟಿ ಹೆಚ್ಚಿಸಿಕೊಳ್ಳಬೇಕಾದರೆ ಗುಡ್ ಲೈಫ್‍ಸ್ಟೈಲ್ ಬೆಳೆಸಿಕೊಳ್ಳ ಬೇಕು ಎಂದು ಮಕ್ಕಳ ತಜ್ಞರಾದ ವೈ ಡಾ. ಸೌಮ್ಯ ನಾಗರಾಜ್ ಹೇಳಿದ್ದಾರೆ.

  • ಮಧುಮೇಹ, ಬೊಜ್ಜು ತಡೆಯೋದಕ್ಕೆ ಸಂಸ್ಕೃತ ಮಾತಾಡಿ: ಬಿಜೆಪಿ ಸಂಸದ

    ಮಧುಮೇಹ, ಬೊಜ್ಜು ತಡೆಯೋದಕ್ಕೆ ಸಂಸ್ಕೃತ ಮಾತಾಡಿ: ಬಿಜೆಪಿ ಸಂಸದ

    ನವದೆಹಲಿ: ಮಧುಮೇಹ, ಬೊಜ್ಜಿನಂತಹ ಸಮಸ್ಯೆಗಳನ್ನು ತಡೆಯಲು ಸಂಸ್ಕೃತ ಮಾತನಾಡಿ ಎಂದ ಬಿಜೆಪಿ ಸಂಸದರೊಬ್ಬರ ಹೇಳಿಕೆ  ಭಾರೀ ಚರ್ಚೆಗೆ ಗ್ರಾಸವಾಗಿದೆ.

    ಗುರುವಾರ ಸದನದಲ್ಲಿ ಸಂಸ್ಕೃತಕ್ಕೆ ಸಂಬಂಧಿಸಿದ ಸಂವಾದದಲ್ಲಿ ಮಾತನಾಡುವ ವೇಳೆ ಬಿಜೆಪಿ ಸಂಸದ ಗಣೇಶ್ ಸಿಂಗ್ ಅವರು ಈ ಹೇಳಿಕೆ ಕೊಟ್ಟಿದ್ದಾರೆ. ನೀವು ಸಕ್ಕರೆ ಕಾಯಿಲೆ ಬರದಂತೆ ನೋಡಿಕೊಳ್ಳಲು ಪ್ರಯತ್ನಿಸುತ್ತಿದ್ದೀರಾ? ಬೊಜ್ಜಿನ ಸಮಸ್ಯೆ ನಿಮ್ಮನ್ನು ಕಾಡುತ್ತಿದೆಯಾ? ಇದನ್ನೆಲ್ಲಾ ತಡೆಯಲು ನೀವು ನಿತ್ಯ ಸಂಸ್ಕೃತ ಮಾತನಾಡಿ. ಆಗ ಈ ಕಾಯಿಲೆಗಳು ನಿಮ್ಮನ್ನು ಕಾಡುವುದಿಲ್ಲ ಎಂದು ಗಣೇಶ್ ಸಿಂಗ್ ಹೇಳಿಕೆ ನೀಡಿದ್ದಾರೆ. ಸಂಸದರ ಈ ಹೇಳಿಕೆ ಸಿಕ್ಕಾಪಟ್ಟೆ ಚರ್ಚೆಗೆ ಗ್ರಾಸವಾಗಿದ್ದು, ನಗೆಪಾಟಲಿಗೆ ಕಾರಣವಾಗಿದೆ.

    ಅಮೆರಿಕ ಮೂಲದ ಸಂಸ್ಥೆಯೊಂದು ಈ ಬಗ್ಗೆ ಅಧ್ಯಯನ ನಡೆಸಿದೆ. ಪ್ರತಿದಿನ ಸಂಸ್ಕೃತದಲ್ಲಿ ಮಾತನಾಡುವುದರಿಂದ ಮನುಷ್ಯನ ನರಗಳಿಗೆ ಹೊಸ ಚೈತನ್ಯ ಸಿಗುತ್ತದೆ. ಇದರಿಂದ ಮಧುಮೇಹ ಹಾಗೂ ಬೊಜ್ಜು ಸಮಸ್ಯೆ ನಮ್ಮಿಂದ ದೂರ ಉಳಿಯುತ್ತದೆ ಎಂದು ಅಮೆರಿಕದವರ ಅಧ್ಯಯನದಿಂದ ಬೆಳಕಿಗೆ ಬಂದಿದೆ. ಆದ್ದರಿಂದ ಸಂಸ್ಕೃತ ಮಾತನಾಡಿ ನೀವು ಆರೋಗ್ಯವಾಗಿರಬಹುದು ಎಂದು ತಿಳಿಸಿದ್ದರು.

    ಅಷ್ಟೇ ಅಲ್ಲದೆ ಕಂಪ್ಯೂಟರ್ ಕೋಡಿಂಗ್ ಬಗ್ಗೆ ಕೂಡ ಪ್ರತಿಕ್ರಿಯಿಸಿ, ಸದ್ಯ ಕಂಪ್ಯೂಟರ್ ಕೋಡಿಂಗ್ ಇಂಗ್ಲಿಷ್‍ನಲ್ಲಿದೆ. ಆದರೆ ಅದನ್ನು ಸಂಸ್ಕೃತದಲ್ಲಿ ಮಾಡಿದರೆ ದೋಷವೆಂಬುದೇ ಇರುವುದಿಲ್ಲ. ಸಂಸ್ಕೃತ ಕಂಪ್ಯೂಟರ್ ಗೆ ಹೊಂದಾಣಿಕೆ ಆಗುವ ಸೂಕ್ತ ಭಾಷೆ ಎಂದರು ಅಭಿಪ್ರಾಯ ವ್ಯಕ್ತಪಡಿಸಿದರು.

    ಹಾಗೆಯೇ ವಿಶ್ವದ ಶೇ.97 ಭಾಷೆಗಳಿಗೆ ಸಂಸ್ಕೃತದ ಹಿನ್ನೆಲೆ ಇದೆ. ಕೆಲ ಇಸ್ಲಾಮಿಕ್ ಭಾಷೆಗಳ ಮೇಲೂ ಸಂಸ್ಕೃತ ಪ್ರಭಾವ ಬೀರಿದೆ. ಆದ್ದರಿಂದ ಸಂಸ್ಕೃತ ಭಾಷೆಯ ಹಿರಿಮೆ ದೊಡ್ಡದು ಎಂದು ಹೇಳಿದರು.

    ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ ಅವರು ಈ ಬಗ್ಗೆ ಮಾತನಾಡಿ, ಸಂಸ್ಕೃತ ಭಾಷೆಗೆ ಬೇಗ ಹೊಂದಿಕೊಳ್ಳಬಹುದು, ಅಲ್ಲದೆ ಸಂಸ್ಕೃತದಲ್ಲಿ ಒಂದು ವಾಕ್ಯವನ್ನು ಹಲವು ರೀತಿಯಲ್ಲಿ ಮಾತನಾಡಬಹುದು. ಅಷ್ಟೇ ಅಲ್ಲದೆ ಇಂಗ್ಲಿಷ್‍ನ ಹಲವು ಪದಗಳು ಸಂಸ್ಕೃತದಿಂದಲೇ ಬಂದಿದೆ. ಆದ್ದರಿಂದ ಈ ಪ್ರಾಚೀನ ಭಾಷೆಗೆ ಪ್ರಾಮುಖ್ಯತೆ ಕೊಡುವುದರಿಂದ ಬೇರೆ ಯಾವ ಭಾಷೆಗಳ ಮೇಲೂ ದುಷ್ಪರಿಣಾಮಗಳು ಬೀರುವುದಿಲ್ಲ ಎಂದಿದ್ದರು.