Tag: ಬೊಗೋಟಾ

  • ಕೊಲಂಬಿಯಾದ ಬಲಪಂಥೀಯ ಅಧ್ಯಕ್ಷೀಯ ಅಭ್ಯರ್ಥಿ ಮೇಲೆ ಗುಂಡೇಟು

    ಕೊಲಂಬಿಯಾದ ಬಲಪಂಥೀಯ ಅಧ್ಯಕ್ಷೀಯ ಅಭ್ಯರ್ಥಿ ಮೇಲೆ ಗುಂಡೇಟು

    ಬೊಗೋಟಾ: ಕೊಲಂಬಿಯಾದ ಅಧ್ಯಕ್ಷೀಯ ಅಭ್ಯರ್ಥಿ ಮಿಗುಯೆಲ್ ಉರಿಬೆ (Colombian Senator Miguel Uribe) ಮೇಲೆ ಶನಿವಾರ ಗುಂಡಿನ (Shot) ದಾಳಿ ನಡೆದಿದೆ.

    ಬೊಗೋಟಾದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಮಿಗುಯೆಲ್ ಉರಿಬೆ ಮೇಲೆ ಗುಂಡು ಹಾರಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ಉರಿಬೆ ಅವರನ್ನು ಆಸ್ಪತ್ರೆಗೆ (Hospital) ದಾಖಲಿಸಲಾಗಿದ್ದು ಪರಿಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.

    ದಕ್ಷಿಣ ಅಮೆರಿಕ ಖಂಡದಲ್ಲಿರುವ ಕೊಲಂಬಿಯಾದಲ್ಲಿ 2026ರಲ್ಲಿ ಚುನಾವಣೆ (Election) ನಡೆಯಲಿದೆ. ಮಿಗುಯೆಲ್ ಉರಿಬೆ ಸೆನೆಟರ್‌ ಆಗಿದ್ದು ಬಲಪಂಥೀಯ ರಾಜಕಾರಣಿಯಾಗಿದ್ದಾರೆ. ಇದನ್ನೂ ಓದಿ: ರಷ್ಯಾದ ಏರ್‌ಬೇಸ್‌ ಉಡೀಸ್‌ ಮಾಡೋಕೆ ಉಕ್ರೇನ್ ಬಳಸಿದ FPV ಡ್ರೋನ್‌ ವಿಶೇಷವೇನು ಗೊತ್ತಾ?

    ಈ ದಾಳಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಓರ್ವ ಶಂಕಿತನನ್ನು ಬಂಧಿಸಲಾಗಿದ್ದು, ಇತರರು ಭಾಗಿಯಾಗಿದ್ದಾರೆಯೇ ಎಂಬುದರ ಕುರಿತು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ಕೊಲಂಬಿಯಾದ ರಕ್ಷಣಾ ಸಚಿವ ಪೆಡ್ರೊ ಸ್ಯಾಂಚೆಜ್ ಹೇಳಿದ್ದಾರೆ.

    ಉರಿಬೆ ಕೊಲಂಬಿಯಾದ ಪ್ರಮುಖ ಕುಟುಂಬದಿಂದ ಬಂದವರಾಗಿದ್ದು, ದೇಶದ ಲಿಬರಲ್ ಪಕ್ಷದೊಂದಿಗೆ ಸಂಪರ್ಕ ಹೊಂದಿದ್ದಾರೆ. ಅವರ ತಂದೆ ಉದ್ಯಮಿ ಮತ್ತು ಯೂನಿಯನ್ ನಾಯಕಿಯಾಗಿದ್ದರು. ಅವರ ತಾಯಿ, ಪತ್ರಕರ್ತೆ ಡಯಾನಾ ಟರ್ಬೇ ಅವರನ್ನು 1990 ರಲ್ಲಿ ಸಶಸ್ತ್ರ ಗುಂಪು ಅಪಹರಣ ಮಾಡಿತ್ತು. ರಕ್ಷಣಾ ಕಾರ್ಯಾಚರಣೆಯ ಸಮಯದಲ್ಲಿ ಅವರನ್ನು ಹತ್ಯೆ ಮಾಡಲಾಗಿತ್ತು. ಇದನ್ನೂ ಓದಿ: 5 ನಿಮಿಷ ತಬ್ಬಿಕೊಳ್ಳಲು 600 ರೂ. ಕೊಡ್ತಾರಂತೆ ಚೀನಾ ಮಹಿಳೆಯರು!

    ಕೊಲಂಬಿಯಾ ದಶಕಗಳಿಂದ ಎಡಪಂಥೀಯ ಬಂಡುಕೋರರು ಮತ್ತು ಸರ್ಕಾರದ ನಡುವಿನ ಸಂಘರ್ಷದಲ್ಲಿ ಸಿಲುಕಿಕೊಂಡಿದೆ.

  • ಪ್ರವಾಸಿಗರನ್ನು ಆಕರ್ಷಿಸುತ್ತಿದೆ ತಲೆಕೆಳಗಾದ ಈ ಮನೆ!

    ಪ್ರವಾಸಿಗರನ್ನು ಆಕರ್ಷಿಸುತ್ತಿದೆ ತಲೆಕೆಳಗಾದ ಈ ಮನೆ!

    ಬೊಗೋಟಾ: ತಲೆಕೆಳಗಾದ ಮನೆಯನ್ನು ಕೊಲಂಬಿಯಾದಲ್ಲಿ ನಿರ್ಮಿಸಲಾಗಿದ್ದು, ಈ ಮನೆ ಇದೀಗ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋಗಳು ಹರಿದಾಡುತ್ತಿದ್ದು, ಸಖತ್ ವೈರಲ್ ಆಗುತ್ತಿದೆ.

    ರಾಜಧಾನಿ ಬೊಗೋಟಾದಿಂದ ಸ್ವಲ್ಪ ದೂರದಲ್ಲಿರುವ ಕೊಲಂಬಿಯಾದ ಗ್ವಾಟಾವಿಟಾದಲ್ಲಿ ಕೊರೊನಾ ಸಮಯದಲ್ಲಿ ತಲೆಕೆಳಗಾದ ಮನೆಯನ್ನು ಕಟ್ಟಲಾಗಿದೆ. ಈಗ ಈ ಮನೆ ಇಲ್ಲರ ಆಕರ್ಷಕ ತಾಣವಾಗಿದೆ. ಈ ಮನೆ ನೋಡಲು ಕೊಲಂಬಿಯಾ ಮಾತ್ರವಲ್ಲ ದೇಶ-ವಿದೇಶಗಳಿಂದಲೂ ಪ್ರವಾಸಿರು ಬರುತ್ತಿದ್ದಾರೆ. ಇದನ್ನೂ ಓದಿ: ಎಂದಿಗೂ ಮನೆಗೆ ಬಾರದ ಮಾಲಕಿಗಾಗಿ ಕಾಯುತ್ತಿರುವ ನಾಯಿ – ವೀಡಿಯೋ ವೈರಲ್!

    ಈ ಮನೆಯನ್ನು ಕೊಲಂಬಿಯಾ ನಿವಾಸಿ ಆಸ್ಟ್ರಿಯನ್ ಮಾಲೀಕ ಫ್ರಿಟ್ಜ್ ಶಾಲ್ ವಿನ್ಯಾಸಗೊಳಿಸಿದ್ದು, ಮನೆಯ ಒಳಗೆ, ಪ್ರವಾಸಿಗರು ಮಹಡಿಗಳಿರುವ ಛಾವಣಿಗಳ ಮೇಲೆ ನಡೆಯುತ್ತಾರೆ. ಆದರೆ ಸೋಫಾಗಳನ್ನು ಕೆಳಗೆ ಇರಿಸಲಾಗಿದೆ. ಈ ಹೊಸ ರೀತಿಯ ಮನೆ ನೋಡಿದ ಜನರು ಅಚ್ಚರಿಕೊಂಡಿದ್ದು, ಫುಲ್ ಎಂಜಾಯ್ ಮಾಡುತ್ತಿದ್ದಾರೆ.

    ಈ ಕುರಿತು ಮಾತನಾಡಿದ ಶಾಲ್, ವಿಭಿನ್ನವಾಗಿ ಮನೆಯನ್ನು ಕಟ್ಟುತ್ತೇನೆಂದು ನಾನು ಮೊದಲು ಜನರಿಗೆ ಹೇಳಿದಾಗ ಎಲ್ಲರೂ ನನ್ನನ್ನು ಹುಚ್ಚನಂತೆ ನೋಡಿದ್ದರು. ನಾನು ಏನೇ ಹೇಳಿದರು ಅವರು ನಂಬಲಿಲ್ಲ ಎಂದು ತಿಳಿಸಿದರು.

    2015ರಲ್ಲಿ ನಾನು ಮೊಮ್ಮಕ್ಕಳೊಂದಿಗೆ ಸ್ಥಳೀಯ ಆಸ್ಟ್ರಿಯಾಕ್ಕೆ ಪ್ರವಾಸಕ್ಕೆ ಹೋಗಿದ್ದೆ. ಆಗ ಇದೇ ರೀತಿಯ ಮನೆಯನ್ನು ನಾನು ನೋಡಿದ್ದೆ. ಅದರಿಂದ ಸ್ಫೂರ್ತಿ ಬಂದು ಈ ಮನೆಯನ್ನು ವಿನ್ಯಾಸಗೊಳಿಸಿದೆ. ಕೊರೊನಾ ಸಮಯದಲ್ಲಿ ಮನೆ ಕಟ್ಟುವುದು ಸ್ವಲ್ಪ ಕಷ್ಟವಾಗಿತ್ತು. ಕೊನೆಗೂ ಈ ಮನೆಯನ್ನು ಕಟ್ಟಿ ಮುಗಿಸಿದ್ದೇನೆ ಎಂದು ಸಂತೋಷದಿಂದ ಹೇಳಿದರು. ಇದನ್ನೂ ಓದಿ: ಸೋದರಮಾವನ ಜೊತೆ ಸೇರಿ ಪತಿಯನ್ನೇ ಕೊಂದಳು!

    ವೈರಸ್ ನಮ್ಮನ್ನು ಸ್ವಲ್ಪಮಟ್ಟಿಗೆ ನಿಧಾನಗೊಳಿಸಿತು. ಆದರೆ ನನ್ನ ಕನಸಿನ ಮನೆಯನ್ನು ನಾನು ಕಟ್ಟಿದ್ದೇನೆ. ಈ ಮನೆಯನ್ನು ಮೂರು ವಾರಗಳ ಹಿಂದೆ ಉದ್ಘಾಟಿಸಿದ್ದೇನೆ. ಈ ಮನೆ ಕೊರೊನಾದಿಂದ ಬೇಸತ್ತ ಜನರಿಗೆ ಸಂತೋಷ ನೀಡಲಿದೆ ಎಂದು ತಿಳಿಸಿದರು.