Tag: ಬೊಂಬಾಟ್ ಭೋಜನ

  • ‘ಬೊಂಬಾಟ್ ಭೋಜನ’ದಲ್ಲಿ ಶಿಲ್ಪಿ ಅರುಣ್ ಯೋಗಿರಾಜ್

    ‘ಬೊಂಬಾಟ್ ಭೋಜನ’ದಲ್ಲಿ ಶಿಲ್ಪಿ ಅರುಣ್ ಯೋಗಿರಾಜ್

    ಸ್ಟಾರ್ ಸುವರ್ಣ ವಾಹಿಯಲ್ಲಿ ಸಾವಿರ ಸಂಚಿಕೆಗಳನ್ನು ದಾಟಿ, ಹೊಸ ಮೈಲಿಗಲ್ಲು ಸೃಷ್ಟಿಸಿರುವ  ಅಡುಗೆ ಶೋ ‘ಬೊಂಬಾಟ್ ಭೋಜನ’ದಲ್ಲಿ (Bombat Bhoja) ಈ ಬಾರಿ ರಾಮನವಮಿ ಹಬ್ಬದ ಪ್ರಯುಕ್ತ ವಿಶೇಷ ಸಂಚಿಕೆಯನ್ನು ಪ್ರಸಾರ ಮಾಡಲಾಗುತ್ತಿದೆ.

    ಈ ರಾಮನವಮಿಯ ವಿಶೇಷ ಸಂಚಿಕೆಯನ್ನು ಅಯೋಧ್ಯೆಯ ರಾಮಲಲ್ಲಾ ವಿಗ್ರಹವನ್ನು ಕೆತ್ತಿರುವ ಶಿಲ್ಪಿ ಅರುಣ್ ಯೋಗಿರಾಜ್ ರವರ ಮನೆಯಲ್ಲಿ ಸಂಭ್ರಮದಿಂದ ಆಚರಿಸಲಾಗಿದೆ. ಕನ್ನಡ ಕಿರುತೆರೆಯಲ್ಲಿ ಇದೇ ಮೊದಲ ಬಾರಿಗೆ ಅರುಣ್ ಯೋಗಿರಾಜ್ ರವರ ತುಂಬು ಕುಟುಂಬವನ್ನು ನೀವು ಈ ವಿಶೇಷ ಸಂಚಿಕೆಯಲ್ಲಿ ಕಾಣಬಹುದು. ಇನ್ನು ರಾಮಲಲ್ಲಾ ವಿಗ್ರಹದ ಬಗ್ಗೆ, ಅದನ್ನು ಕೆತ್ತುವಾಗ ಆದ ಅನುಭವದ ಬಗ್ಗೆ ಈ ವಿಶೇಷ ಸಂಚಿಕೆಯಲ್ಲಿ ಎಳೆಎಳೆಯಾಗಿ ಹೇಳಿದ್ದಾರೆ.

    ಬೊಂಬಾಟ್ ಭೋಜನದ ರೂವಾರಿಯಾಗಿರುವ ಸಿಹಿ ಕಹಿ ಚಂದ್ರು (Sihi Kahi Chandru)ರವರು ಅರುಣ್ ಯೋಗಿರಾಜ್ Arun Yogiraj ಗೆ ಗೌರವಾರ್ಪಣೆಯೊಂದಿಗೆ, ಸನ್ಮಾನಿಸಿದ್ದಾರೆ. ಜೊತೆಗೆ ಈ ವಿಶೇಷ ಸಂಚಿಕೆಯಲ್ಲಿ ಗಾಯಕರಾದ  ಶ್ರೀ ಚಿನ್ಮಯಿ ಅತ್ರೇಯಸ್ ರವರು ಅತಿಥಿಯಾಗಿ ಆಗಮಿಸಿದ್ದು, ರಾಮನಾಮವನ್ನು ಭಕ್ತಿಯಿಂದ ಹಾಡಿ ಮನರಂಜಿಸಿದ್ದಾರೆ.

     

    ಬೊಂಬಾಟ್ ಭೋಜನದಲ್ಲಿ ರಾಮನವಮಿ ವಿಶೇಷ ಸಂಚಿಕೆಯು ಇದೇ ಬುಧವಾರ (ಏ.17) ಮಧ್ಯಾಹ್ನ 12 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.

  • ‘ಬೊಂಬಾಟ್ ಭೋಜನ’ದಲ್ಲಿ ಯುಗಾದಿ ಸಂಭ್ರಮ-ಹಬ್ಬದೂಟಕ್ಕೆ ಆಗಮಿಸಿದ ಸ್ಯಾಂಡಲ್ವುಡ್ ಸ್ಟಾರ್ಸ್

    ‘ಬೊಂಬಾಟ್ ಭೋಜನ’ದಲ್ಲಿ ಯುಗಾದಿ ಸಂಭ್ರಮ-ಹಬ್ಬದೂಟಕ್ಕೆ ಆಗಮಿಸಿದ ಸ್ಯಾಂಡಲ್ವುಡ್ ಸ್ಟಾರ್ಸ್

    ಸ್ಟಾರ್ ಸುವರ್ಣ ವಾಹಿಯಲ್ಲಿ ಸಾವಿರ ಸಂಚಿಕೆಗಳನ್ನು ದಾಟಿ, ಹೊಸ ಮೈಲಿಗಲ್ಲು ಸೃಷ್ಟಿಸಿ ಕರುನಾಡಿನ ಮನಗೆದ್ದ ಅಡುಗೆ ಶೋ ಬೊಂಬಾಟ್ ಭೋಜನದಲ್ಲಿ (Bombat Bhojana) ಇದೀಗ ನವ ಸಂವತ್ಸರದ ಮೊದಲ ಹಬ್ಬ ಯುಗಾದಿಯ (Ugadi) ಸಂಭ್ರಮಾಚರಣೆ ಬೊಂಬಾಟ್ ಆಗಿ ನಡೆಯುತ್ತಿದೆ. ಇದನ್ನೂ ಓದಿ: ಮದುವೆಗೂ ಮುನ್ನ ಮೊದಲ ಪ್ರೀತಿಯ ಬಗ್ಗೆ ಸನ್ನಿ ಶಾಕಿಂಗ್ ಕಾಮೆಂಟ್

    ಸಿಹಿ ಕಹಿ ಚಂದ್ರು (Sihi Kahi Chandru) ಅವರ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಈ ಶೋ, ಮನೆ ಮಂದಿಗೆ ರುಚಿಕರವಾದ ಅಡುಗೆಯನ್ನು ಮಾಡಿ ಬಡಿಸುವಲ್ಲಿ ವೀಕ್ಷಕರಿಗೆ ಸಹಾಯಕವಾಗಿದೆ. ಪ್ರಸ್ತುತ 4ನೇ ಆವೃತ್ತಿಯೊಂದಿಗೆ ಮುಂದುವರಿಯುತ್ತಿರುವ ‘ಬೊಂಬಾಟ್ ಭೋಜನ’ ಕಾರ್ಯಕ್ರಮದಲ್ಲಿ ಈ ಬಾರಿ ವರ್ಷದ ಮೊದಲ ಹಬ್ಬ ಯುಗಾದಿಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದ್ದು, ವಾರವಿಡೀ ಸ್ಯಾಂಡಲ್‌ವುಡ್ ತಾರೆಗಳು ಆಗಮಿಸಲಿದ್ದಾರೆ.

    ಬೇವು ಬೆಲ್ಲದ ಸವಿ ಹಂಚಲು ಇದೇ ಏಪ್ರಿಲ್ 8ರಂದು ಸೋಮವಾರ ನಟ ಸತೀಶ್ ನೀನಾಸಂ, ಮಂಗಳವಾರ ನಟಿ ನಿಶ್ವಿಕಾ ನಾಯ್ಡು (Nishvika Naidu) ಹಾಗೂ ಬೆಳ್ಳುಳ್ಳಿ ಕಬಾಬ್ ಖ್ಯಾತಿಯ ಚಂದ್ರು, ಬುಧವಾರ ನಟ ದಿಗಂತ್, ಗುರುವಾರ ಶಿವರಾಜ್ ಕೆಆರ್ ಪೇಟೆ, ಶುಕ್ರವಾರ ಕಿರುತೆರೆ ನಟ ಕಿರಣ್ ರಾಜ್ (Kiran Raj) ಹಾಗೂ ಶನಿವಾರ ‘ಸರ್ಕಾರಿ ಹಿ.ಪ್ರಾ.ಶಾಲೆ ಕಾಸರಗೋಡು’ ಸಿನಿಮಾ ಖ್ಯಾತಿಯ ದಡ್ಡ ಪ್ರವೀಣ ಆಗಮಿಸುತ್ತಿದ್ದಾರೆ. ಹೀಗಾಗಿ ವಾರಪೂರ್ತಿ ಮಧ್ಯಾಹ್ನ ವೀಕ್ಷಕರಿಗೆ ಬೊಂಬಾಟ್ ಮನರಂಜನೆ ಸಿಗಲಿದೆ.

    ಯುಗಾದಿಯ ಪ್ರಯುಕ್ತ ಬೊಂಬಾಟ್ ಭೋಜನದಲ್ಲಿ ಬರುತ್ತಿದೆ ಹಬ್ಬದ ವಿಶೇಷ ಸಂಚಿಕೆಗಳು ಏಪ್ರಿಲ್ 8ರಿಂದ ಏಪ್ರಿಲ್ 14 ರವರೆಗೆ ಸೋಮ-ಶನಿವಾರ ಮಧ್ಯಾಹ್ನ 12 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ತಪ್ಪದೇ ವೀಕ್ಷಿಸಿ.

  • ಸಾವಿರ ಸಂಚಿಕೆ ಮುಗಿಸಿದ ಬೊಂಬಾಟ್ ಭೋಜನ

    ಸಾವಿರ ಸಂಚಿಕೆ ಮುಗಿಸಿದ ಬೊಂಬಾಟ್ ಭೋಜನ

    ಟ-ನಿರ್ದೇಶಕ ಸಿಹಿಕಹಿ ಚಂದ್ರು (Sihi Kahi Chandru) ಸ್ಟಾರ್ ಸುವರ್ಣದಲ್ಲಿ ನಡೆಸಿಕೊಡುತ್ತಿರುವ ‘ಬೊಂಬಾಟ್‍ ಭೋಜನ’ ((Bombat Bhojana)) ಕಾರ್ಯಕ್ರಮವು ಇದೀಗ 1000 ಸಂಚಿಕೆಗಳನ್ನು ಪೂರೈಸಿದೆ.   ಈ ಕಾರ್ಯಕ್ರಮದ ಮೂರನೇ ಆವೃತ್ತಿ ಇದೀಗ ಮುಗಿದಿದ್ದು, ಜನವರಿ 15ರಂದು ಮಕರ ಸಂಕ್ರಾಂತಿಯಂದು ನಾಲ್ಕನೇ ಆವೃತ್ತಿ ಆರಂಭವಾಗಲಿದೆ.

    ಮೂರನೇ ಸೀಸನ್‍ 1000 ಕಂತುಗಳನ್ನು ಮುಗಿಸಿರುವ ಹಾಗೂ  ನಾಲ್ಕನೆಯ ಆವೃತ್ತಿ ಆರಂಭವಾಗಲಿರುವ ಈ ಹೊತ್ತಿನಲ್ಲಿ ಚಂದ್ರು ಸಂಭ್ರಮದ ಸಮಾರಂಭವೊಂದನ್ನು ಆಯೋಜಿಸಿದ್ದರು.  ಆಪ್ತರು, ಮಿತ್ರರು ಮತ್ತು ವಾಹಿನಿಯವರನ್ನು ಆಮಂತ್ರಿಸಿ ಒಂದು ವಿಶೇಷ ಕಾರ್ಯಕ್ರಮವನ್ನು ಮಾಡಿ, ಬಂದವರಿಗೆ “ಬೊಂಬಾಟ್ ಭೋಜನ” ಹಾಕಿಸಿ ಕಾರ್ಯಕ್ರಮದ ಬಗ್ಗೆ ಹೆಚ್ಚಿನ ವಿವರಣೆ ನೀಡಿದರು.

    ಮೂರನೆಯ ಆವೃತ್ತಿಯ ಬಗ್ಗೆ  ಮಾತನಾಡಿದ ಚಂದ್ರು, ‘ನಾಡಿನ ಹಲವು ಜಿಲ್ಲೆಗಳಿಗೆ ಹೋಗಿ ಅಲ್ಲಿನ ಮಹಿಳಾ ಮಂಡಳಿ ಸದಸ್ಯರಿಗೆ ಅಡಿಗೆ ಮಾಡಿ ತೋರಿಸಲಾಗಿದೆ. ಆಹ್ವಾನಿಸಿದವರ ಮನೆಗೆ ಹೋಗಿ ಅವರು ಪ್ರೀತಿಯಿಂದ ಮಾಡಿದ ತಿಂಡಿಯನ್ನು ಸವಿದು ಬಂದಿದ್ದೇನೆ. ಬರೀ ಅಡುಗೆಯಷ್ಟೇ ಅಲ್ಲ, ‘ಅಂದ ಚೆಂದ’ ಎಂಬ ಹೊಸ ವಿಭಾಗಗಳ ಮೂಲಕ ಮಹಿಳೆಯರು ತಮ್ಮ ಅಂದ ಹೆಚ್ಚಿಸಿಕೊಳ್ಳು ಮೇಕಪ್‍, ಕೇಶವಿನ್ಯಾಸ ತರಬೇತಿ ನೀಡಲಾಗಿದೆ. ಗೌರಿಯಮ್ಮ ನಡೆಸಿಕೊಡುವ ‘ಅಂಗೈಲಿ ಆರೋಗ್ಯ’ ವಿಭಾಗದಲ್ಲಿ ಹಲವು ಆರೋಗ್ಯದ ಟಿಪ್ಸ್ ಗಳನ್ನು ನೀಡಲಾಗಿದೆ. ಈ ಬಾರಿ ಅಮೇರಿಕಾ, ಆಫ್ರಿಕಾ ಮುಂತಾದ ಕಡೆ ಹೋಗಿ ಅಡುಗೆ ಕಾರ್ಯಕ್ರಮ ಮಾಡಿ ಬಂದಿರುವುದು ವಿಶೇಷ ಎಂದರು.

    ‘ಬೊಂಬಾಟ್ ಭೋಜನ ” ಸೀಸನ್ 3ರಲ್ಲಿ  ‘ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಭಾಸ್ಕರ್ ರಾವ್‍, ಸುಧಾ ಮೂರ್ತಿ, ಗುರುರಾಜ ಕರ್ಜಗಿ ಸೇರಿದಂತೆ ಹಲವರು ಗಣ್ಯರು  ಭಾಗವಹಿಸಿದ್ದಾರೆ. ನಾನು ಶಿವಕುಮಾರ್ ‍ಇಬ್ಬರೂ ಬಾಲ್ಯ ಸ್ನೇಹಿತರು. ಯಾವತ್ತೂ ಏನೂ ಕೇಳಿರಲಿಲ್ಲ. ಈ ಕಾರ್ಯಕ್ರಮಕ್ಕೆ ಬರುವಂತೆ ಕೇಳಿದಾಗ, ಸಂತೋಷದಿಂದ ಬಂದು ಭಾಗವಹಿಸಿದರು. ಗುರುರಾಜ ಕರ್ಜಗಿ ನಮ್ಮ ಮೇಷ್ಟ್ರು. ಅವರು ಸಹ ಪ್ರೀತಿಯಿಂದ ಬಂದರು. ಹೀಗೆ ಹಲವು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ’ ಎಂದು ಚಂದ್ರು ತಿಳಿಸಿದರು.

    ‘ಬೊಂಬಾಟ್‍ ಭೋಜನ’ ಮೂರು ಸೀಸನ್‍ಗಳಿಂದ 2000ಕ್ಕೂ ಹೆಚ್ಚು ಕಂತುಗಳು ಪ್ರಸಾರವಾಗಿವೆ. ಇದೊಂದು ದಾಖಲೆ ಎಂದು ಮಾಹಿತಿ ನೀಡಿದ ಸಿಹಿಕಹಿ ಚಂದ್ರು, ಮುಂದಿನ ದಿನಗಳಲ್ಲಿ ನೋಡಿಕೊಂಡು ಗಿನ್ನೀಸ್‍ ಅಥವಾ ಲಿಮ್ಕಾ ಬುಕ್‍ ಆಫ್‍ ರೆಕಾರ್ಡ್ಸ್ ಸಂಸ್ಥೆಗಳಿಗೆ  ಸೂಕ್ತ ದಾಖಲೆ ಸಲ್ಲಿಸುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ‘ಬೊಂಬಾಟ್‍ ಭೋಜನ 3’ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಹಾಗೆಯೇ, ಚಂದ್ರು ಅವರನ್ನು ಸ್ಟಾರ್ ಸುವರ್ಣ ವಾಹಿನಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.

  • ಸಾವಿರದ ಗಡಿ ದಾಟಿದ ‘ಬೊಂಬಾಟ್’ ಶೋನಲ್ಲಿ ಮಾಲಾಶ್ರೀ

    ಸಾವಿರದ ಗಡಿ ದಾಟಿದ ‘ಬೊಂಬಾಟ್’ ಶೋನಲ್ಲಿ ಮಾಲಾಶ್ರೀ

    ಬೆಳ್ಳಿತೆರೆ ಹಾಗೂ ಕಿರುತೆರೆಯಲ್ಲಿ ಪಾತ್ರಕ್ಕೆ ಮಸಾಲೆ ಹಾಕಿ ನಗುವನ್ನು ಹಂಚಿದ  ಸಿಹಿಕಹಿ ಚಂದ್ರು (Shihkahi Chandru) ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ “ಬೊಂಬಾಟ್ ಭೋಜನ” (Bombat Bhojana)  ಕಾರ್ಯಕ್ರಮದಲ್ಲಿ ಪಾತ್ರೆಗೆ ಮಸಾಲೆ ಹಾಕಿ ಭೋಜನ ಪ್ರಿಯರಿಗೆ ರಸದೌತಣವನ್ನು ಬಡಿಸುತ್ತ ಅಮೋಘ 1000 ಸಂಚಿಕೆಗಳನ್ನು ಯಶಸ್ವಿಯಾಗಿ ಪೂರೈಸಿದ್ದು, ರಾಜ್ಯದ ಮೂಲೆ ಮೂಲೆಗಳಿಂದ ಪ್ರಶಂಸೆಗಳ ಮಹಾಪೂರವೇ ಹರಿದುಬರುತ್ತಿದೆ.

    ಬೊಂಬಾಟ್ ಭೋಜನದ ಮೂರನೇ ಆವೃತ್ತಿ ಇದಾಗಿದ್ದು, ಈ ಆವೃತ್ತಿಯು ಸಾಕಷ್ಟು ವೈಶಿಷ್ಟ್ಯತೆಗಳಿಂದ ತುಂಬಿದೆ. ನಮ್ಮೂರ ಊಟ, ಮನೆ ಊಟ, ಸವಿ ಊಟ, ಕೈ ರುಚಿ, ಅಂಗೈಯಲ್ಲಿ ಆರೋಗ್ಯ, ಅಂದ ಚೆಂದ ಹಾಗೂ ಅತಿಥಿ ದೇವೋಭವ ಎಂಬ ವಿಭಾಗಗಳನ್ನು ಹೊಂದಿದ್ದು ಮನೆ ಮಂದಿಯ ಮನಗೆದ್ದು ಮನೆ ಮಾತಾಗಿದೆ.

    ಹೀಗೆ ಹತ್ತು ಹಲವು ವಿಶೇಷತೆಗಳಿಂದ ಕೂಡಿರುವ “ಬೊಂಬಾಟ್ ಭೋಜನ ಶೋ” 1000 ಸಂಚಿಕೆಗಳನ್ನು ಯಶಸ್ವಿಯಾಗಿ ಪೂರೈಸಿದ್ದು ಸಾವಿರದ ಸಂಚಿಕೆಯಲ್ಲಿ ಕನ್ನಡ ಚಿತ್ರರಂಗದ ಕನಸಿನ ರಾಣಿ ಮಾಲಾಶ್ರೀ  (Malashree) ಭಾಗಿಯಾಗಲಿದ್ದಾರೆ. ತಪ್ಪದೇ ವೀಕ್ಷಿಸಿ  ಇದೇ ಮಂಗಳವಾರ ಮಧ್ಯಾಹ್ನ 12 ಗಂಟೆಗೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ.

  • ಗೆಳೆಯ ಸಿಹಿಕಹಿ ಚಂದ್ರು ಕಾರ್ಯಕ್ರಮದಲ್ಲಿ ‘ಬೊಂಬಾಟ್ ಭೋಜನ’ ಸವಿದ ಡಿಕೆಶಿ

    ಗೆಳೆಯ ಸಿಹಿಕಹಿ ಚಂದ್ರು ಕಾರ್ಯಕ್ರಮದಲ್ಲಿ ‘ಬೊಂಬಾಟ್ ಭೋಜನ’ ಸವಿದ ಡಿಕೆಶಿ

    ನ್ನಡ ಕಿರುತೆರೆಯ ಖ್ಯಾತ ನಟ ಸಿಹಿಕಹಿ ಚಂದ್ರು (Sihikahi Chandru) ನಡೆಸಿಕೊಡುವ ಬೊಂಬಾಟ್ ಭೋಜನ (Bombat Bhojana) ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (DK Shivakumar) ಭಾಗಿಯಾಗಿದ್ದಾರೆ. ರಾಜಕೀಯ ಒತ್ತಡಗಳ ನಡುವೆಯೂ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಡಿ.ಕೆ. ಶಿವಕುಮಾರ್, ಗೆಳೆಯನ ಕೈ ರುಚಿಯನ್ನು ಸವಿದಿದ್ದಾರೆ.

    ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಡಿಕೆಶಿ, ‘ನನ್ನ ಆತ್ಮೀಯ ಸ್ನೇಹಿತ‌‌ ಹಾಗೂ ನಟ ಶ್ರೀ ಸಿಹಿಕಹಿ‌ ಚಂದ್ರು ಅವರು ನಡೆಸಿಕೊಡುವ ಬೊಂಬಾಟ್ ಭೋಜನ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡು ರುಚಿಕರ ಆಹಾರ ಸವಿದೆ. ಪಾಕ ಪ್ರವೀಣರೂ ಆಗಿರುವ ಚಂದ್ರು ಅವರ ಕೈರುಚಿಯ ಅಡುಗೆ ಸವಿದು ಬಹಳ ಕಾಲವಾಗಿತ್ತು, ಅದಕ್ಕೆ ಕಾಲ ಕೈಗೂಡಿರುವುದು ಖುಷಿಯ ಸಂಗತಿ’ ಎಂದು ಹೇಳಿದ್ದಾರೆ.

    ಸಿಹಿಕಹಿ ಚಂದ್ರು ಮತ್ತು ಡಿ.ಕೆ.ಶಿವಕುಮಾರ್ ಆತ್ಮೀಯ ಸ್ನೇಹಿತರು. ಈ ಹಿಂದೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಸಾಧಕರ ಸೀಟಿನಲ್ಲಿ ಡಿಕೆಶಿ ಕುಳಿತಾಗ ಚಂದ್ರು ಆ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ನೆಚ್ಚಿನ ಗೆಳೆಯನ ಬಗ್ಗೆ ಹೆಮ್ಮೆಯ ಮಾತುಗಳನ್ನೂ ಅವರು ಆಡಿದ್ದರು. ಇದೀಗ ಗೆಳೆಯನ ಕಾರ್ಯಕ್ರಮಕ್ಕೆ ಡಿಕೆಶಿ ಬರುವ ಮೂಲಕ ಕೊಡುಕೊಳ್ಳುವಿಕೆಗೆ ನಿಜವಾದ ಮುನ್ನುಡಿ ಬರೆದಿದ್ದಾರೆ.  ಇದನ್ನೂ ಓದಿ:‘ಸಂಜೆ ಮೇಲೆ ಸುಮ್ನೆ ಹಂಗೆ’ ಅಂತಿದ್ದಾರೆ ನೀನಾಸಂ ಸತೀಶ್: ಮ್ಯಾಟ್ನಿ ಹಾಡು ವೈರಲ್

     

    ಸಿಹಿಕಹಿ ಚಂದ್ರು ನಡೆಸಿಕೊಂಡು ಬರುತ್ತಿರುವ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಈ ಕಾರ್ಯಕ್ರಮ ಯಶಸ್ವಿ 850 ಕಂತುಗಳನ್ನು ಪೂರೈಸಿ ಸಾವಿರದತ್ತ ಹೆಜ್ಜೆ ಹಾಕುತ್ತಿದೆ. ಈ ಕಾರ್ಯಕ್ರಮದ ವಿಶೇಷತೆ ಅಂದರೆ ಬಯಲೂಟ, ಮನೆಯೂಟ, ಸವಿಯೂಟ, ನಮ್ಮೂರ ಊಟ, ಅತಿಥಿ ದೇವೋಭವ ಎಂಬ ವಿಭಾಗಗಳಿದ್ದು, ಆರೋಗ್ಯಕ್ಕೆ ಸಂಬಂಧಿಸಿದ ಹಾಗೆ ಆರೋಗ್ಯ ಆಹಾರ ಹಾಗೂ ಅಂಗೈಯಲ್ಲಿ ಆರೋಗ್ಯ ಎಂಬ ಹೆಸರಿನಲ್ಲಿ ಮನೆಮದ್ದುಗಳ ಕುರಿತಾಗಿಯೂ ಮಾಹಿತಿ ನೀಡಲಾಗುತ್ತದೆ.

     

    ವೈದ್ಯರಾದ ಗೌರಿ ಸುಬ್ರಹ್ಮಣ್ಯ ಮನೆಮದ್ದು ಮಾಹಿತಿ ನೀಡಿದರೆ, ಎಂ.ಎನ್ ನರಸಿಂಹಮೂರ್ತಿ ಟೈಮ್ ಪಾಸ್ ಜೋಕ್ಸ್ ನಡೆಸಿಕೊಡುತ್ತಾರೆ. ಖುಷಿ ಚಂದ್ರಶೇಖರ್ ಬ್ಯೂಟಿ ಟಿಪ್ಸ್ ಹೇಳಿದರೆ, ಅಲ್ಲದೇ ಈ ಪಾಕಶಾಲೆಯಲ್ಲಿ ಮೂಡಿ ಬಂದ ಭೋಜನದ ವಿವರವನ್ನು ಒಳಗೊಂಡಂತಹ ಪುಸ್ತಕವನ್ನೂ ಸಿಹಿಕಹಿ ಚಂದ್ರು ಹೊರ ತಂದಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಿಹಿಕಹಿ ಚಂದ್ರು ಸಾರಥ್ಯದಲ್ಲಿ ‘ಬೊಂಬಾಟ್ ಭೋಜನ ಸೀಸನ್ 3’ ಶುರು

    ಸಿಹಿಕಹಿ ಚಂದ್ರು ಸಾರಥ್ಯದಲ್ಲಿ ‘ಬೊಂಬಾಟ್ ಭೋಜನ ಸೀಸನ್ 3’ ಶುರು

    ಟನಾಗಿ ಜನಮನಸೂರೆಗೊಂಡಿರುವ ಸಿಹಿಕಹಿ ಚಂದ್ರು (Shihkahi Chandru), ‘ಬೊಂಬಾಟ್ ಭೋಜನ’ (Bombat Bhoja)ದ ಮೂಲಕ ರಚಿಕರ ಅಡುಗೆ ಮಾಡಿ ಎಲ್ಲರ ಮನವನ್ನು ಗೆದ್ದಿದ್ದಾರೆ. ಪ್ರಸ್ತುತ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಎರಡು ಸೀಸನ್ ಪೂರ್ಣಗೊಳಿಸಿರುವ ‘ಬೊಂಬಾಟ್ ಭೋಜನ’ ಕಾರ್ಯಕ್ರಮದ ಮೂರನೇ ಸೀಸನ್ ಈಗ ಆರಂಭವಾಗಿದೆ. ಈ ಬಗ್ಗೆ ಮಾಹಿತಿ ನೀಡಲು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಸಿಹಿಕಹಿ ಚಂದ್ರು ಸೇರಿದಂತೆ ಅನೇಕರು ಕಾರ್ಯಕ್ರಮದ ಬಗ್ಗೆ ಮಾತನಾಡಿದರು.

    ಸ್ಟಾರ್ ಸುವರ್ಣ ವಾಹಿನಿಯಲ್ಲಿ 2019 ರಲ್ಲಿ ಮೊದಲ ಸೀಸನ್ ಶುರು ಮಾಡಿದ್ದೆ. ಈಗ ಎರಡನೇ ಸೀಸನ್ ಕೂಡ ಮುಕ್ತಾಯವಾಗಿ, ಮೂರನೇ ಸೀಸನ್ ಆರಂಭವಾಗಿದೆ. ಈ ಸೀಸನ್ ನಲ್ಲಿ ‘ಬಯಲೂಟ’, ‘ಸವಿಯೂಟ’, ‘ಮನೆಊಟ’, ‘ಅಂದ ಚಂದ’, ‘ಅಂಗೈ ಅಲ್ಲಿ ಆರೋಗ್ಯ’, ‘ಟಿಪ್ ಟಿಪ್ ಟಿಪ್’ ಹಾಗೂ ‘ಅತಿಥಿ ದೇವೋಭವ’ ಎಂಬ ಏಳು ಬಗೆಯ ವಿಶೇಷತೆಗಳಿವೆ. ಅದಕ್ಕೆ ಸಂಬಂಧಿಸಿದಂತೆ ಪರಿಣಿತರು ಮಾಹಿತಿ ನೀಡುತ್ತಾರೆ. ಇನ್ನೂ ವಿಶೇಷವೆಂದರೆ ಆರೋಗ್ಯದ ಕುರಿತು ಮನೆಮದ್ದುಗಳನ್ನು ಡಾ.ಗೌರಿ ಸುಬ್ರಹ್ಮಣ್ಯ ತಿಳಿಸುತ್ತಾರೆ. ಕಾರ್ಯಕ್ರಮದ ಕೊನೆಯಲ್ಲಿ ದುಂಡಿರಾಜ್ ಅವರ ಹನಿಗವನ ಒಂದನ್ನು ಹೇಳುತ್ತೇನೆ. ಸೋಮವಾರದಿಂದ ಶನಿವಾರದ ತನಕ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮಧ್ಯಾಹ್ನ 12ಗಂಟೆಗೆ ‘ಬೊಂಬಾಟ್ ಭೋಜನ ಸೀಸನ್ 3’ ಪ್ರಸಾರವಾಗಲಿದೆ ಎಂದು ಕಾರ್ಯಕ್ರಮದ ಕುರಿತು ಸಂಪೂರ್ಣ ಮಾಹಿತಿಯನ್ನು ಸಿಹಿಕಹಿ ಚಂದ್ರು ನೀಡಿದರು. ಇದನ್ನೂ ಓದಿ: ಅದ್ದೂರಿಯಾಗಿ ನಡೆಯಿತು `ಗಿಚ್ಚಿ ಗಿಲಿಗಿಲಿ’ ಖ್ಯಾತಿಯ ಪ್ರಿಯಾಂಕಾ ಕಾಮತ್ ಎಂಗೇಜ್‌ಮೆಂಟ್

    ಆರೋಗ್ಯಕ್ಕೆ ಸಂಬಂಧಿಸಿದ ಚಿಕ್ಕಚಿಕ್ಕ ವಿಷಯಗಳಿಗೆ ಆಸ್ಪತ್ರೆಗೆ ಹೋಗಬೇಡಿ. ಅದಕ್ಕೆ ಮನೆಯಲ್ಲೇ ಅನೇಕ ಮದ್ದುಗಳಿದೆ ಎಂದು ಡಾ.ಗೌರಿ ಸುಬ್ರಹ್ಮಣ್ಯ ಹೇಳಿದರು.  ಸಾಹಿತಿ ದುಂಡಿರಾಜ್ (Dundiraj), ಸಿಹಿಕಹಿ ಗೀತಾ, ಖುಷಿ, ಶ್ರೀಪಾದ, ಪರಿ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k