Tag: ಬೈಸಿಕಲ್

  • ಮೆಟ್ರೋ ಟ್ರೈನ್‍ನಲ್ಲಿ ಬೈಸಿಕಲ್ ಕೊಂಡೊಯ್ಯಲು ಅವಕಾಶ

    ಮೆಟ್ರೋ ಟ್ರೈನ್‍ನಲ್ಲಿ ಬೈಸಿಕಲ್ ಕೊಂಡೊಯ್ಯಲು ಅವಕಾಶ

    ಬೆಂಗಳೂರು: ಬೈಸಿಕಲ್ ಕೊಂಡೊಯ್ಯಲು ಮೆಟ್ರೋ ಟ್ರೈನ್‍ನಲ್ಲಿ ಅವಕಾಶ ಕಲ್ಪಿಸಬೇಕು ಎಂದು ಬಿಎಂಆರ್‌ಸಿಎಲ್ ನಿರ್ಧರಿಸಿದೆ.

    ಮೆಟ್ರೋ ಟ್ರೈನ್‍ನಲ್ಲಿ ಮಡಚಬಹುದಾದ ಬೈಸಿಕಲ್ ಕೊಂಡೊಯ್ಯಲು ಅವಕಾಶ ನೀಡಲಾಗುವುದು. ಈ ಬೈಸಿಕಲ್ 15 ಕೆಜಿ ತೂಕವನ್ನು ಮೀರದಂತೆ ಇರಬೇಕು. ಅಲ್ಲದೇ ಬೈಸಿಕಲ್ ಕೊಂಡೊಯ್ಯಲು ಲಗೇಜ್ ಶುಲ್ಕ ವಿನಾಯಿತಿ ಇದೆ ಎಂದು ಬಿಎಂಆರ್‌ಸಿಎಲ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಮದುವೆಗೆ ಹೋಗುತ್ತಿದ್ದವರು ಮಸಣಕ್ಕೆ: ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ 8 ಮಂದಿ ದುರ್ಮರಣ

    ಹಸಿರು ಉಪಕ್ರಮವನ್ನು ಉತ್ತೇಜಿಸಲು, ಮಡಿಸಬಹುದಾದ ಬೈಸಿಕಲ್‌ನ ಗಾತ್ರವು 60CM X 45CM X 25CM ಮತ್ತು 15 ಕೆಜಿ ತೂಕವನ್ನು ಮೀರಬಾರದು. ಮಟ್ರೋ ನಿಲ್ದಾಣ ಪ್ರವೇಶದ ಸಮಯದಲ್ಲಿ ಬ್ಯಾಗೇಜ್ ಸ್ಕ್ಯಾವರ್‌ ಮೂಲಕ ಭದ್ರತಾ ತಪಾಸಣೆಗೆ ಒಳಪಡಿಸಲಾಗುತ್ತದೆ. ಮೆಟ್ರೋ ಬೋಗಿಗಳ ಒಳಭಾಗದಲ್ಲಿ ಹಾನಿಯಾಗದಂತೆ ಬೈಸಿಕಲ್ ಅನ್ನು ಸರಿಯಾಗಿ ಪ್ಯಾಕ್ ಮಾಡಿರಬೇಕು. ಅಲ್ಲದೆ, ಇದು ಪಕ್ಕದ ಪ್ರಯಾಣಿಕರಿಗೆ ಅನಾನುಕೂಲತೆ ಉಂಟಾಗದಂತೆ ಕೊಂಡೊಯ್ಯಬೇಕು.

  • ವಲಸೆ ಕಾರ್ಮಿಕರು ಬಿಟ್ಟು ಹೋದ ಸೈಕಲ್‌ಗಳಿಂದ ಬಂತು ಲಕ್ಷ – ಲಕ್ಷ ಆದಾಯ

    ವಲಸೆ ಕಾರ್ಮಿಕರು ಬಿಟ್ಟು ಹೋದ ಸೈಕಲ್‌ಗಳಿಂದ ಬಂತು ಲಕ್ಷ – ಲಕ್ಷ ಆದಾಯ

    ಲಕ್ನೋ: ಕೊರೊನಾ ತೀವ್ರವಾಗಿ ವ್ಯಾಪಿಸಿದ್ದ 2020ರ ವೇಳೆ ದೇಶಾದ್ಯಂತ ಲಾಕ್‌ಡೌನ್‌ ಘೋಷಿಸಲಾಗಿ, ಬಹುತೇಕ ವಲಸೆ ಕಾರ್ಮಿಕರು ಅನಿವಾರ್ಯವಾಗಿ ತಮ್ಮ ರಾಜ್ಯಗಳಿಗೆ ಹೋಗಲೇಬೇಕಿತ್ತು.

    ಬಹುತೇಕರು ತಾವು ತಲುಪುವುದೇ ಕಷ್ಟವಾಗಿದ್ದರಿಂದ ತಮ್ಮ ವಸ್ತುಗಳನ್ನು ತಾವಿದ್ದ ಸ್ಥಳಗಳಲ್ಲೇ ಬಿಟ್ಟು ಹೋಗಿದ್ದರು. ಇನ್ನೂ ದಿನಗೂಲಿ ಕಾರ್ಮಿಕರು ಹೆಚ್ಚಾಗಿ ಬಳಸುತ್ತಿದ್ದ ಸೈಕಲ್ ಪಾಡಂತೂ ಕೇಳೋರೇ ಇಲ್ಲದಂತಾಗಿತ್ತು. ಇದರಿಂದ ಸಾವಿರಾರು ಮಂದಿ ತಮ್ಮ ಬೈಸಿಕಲ್‌ಗಳನ್ನು ಇಲ್ಲಿಯೇ ಬಿಟ್ಟುಹೋದರು. ಇಂತಹ ಬಿಟ್ಟು ಹೋಗಿದ್ದ ಸೈಕಲ್‌ಗಳು ಇದೀಗ ಲಕ್ಷಾಂತರ ರೂಪಾಯಿ ಆದಾಯ ತಂದುಕೊಟ್ಟಿವೆ. ಇದನ್ನೂ ಓದಿ: ಬಿಜೆಪಿ ಎಚ್ಚೆತ್ತುಕೊಂಡಿರುವುದು ಮುಸ್ಲಿಮರ ಭಾವನೆಗೆ ಧಕ್ಕೆಯುಂಟಾಗಿದೆ ಎಂದಲ್ಲ: ಒಮರ್ ಅಬ್ದುಲ್ಲಾ

    UP

    ರಾಶಿ-ರಾಶಿ ಸೈಕಲ್‌ಗಳು: ಕೋವಿಡ್ ಮೊದಲ ಅಲೆಯಲ್ಲಿ ಉಂಟಾದ ಲಾಕ್‌ಡೌನ್ ವೇಳೆ ಉತ್ತರ ಪ್ರದೇಶ ಮತ್ತು ಬಿಹಾರದ ವಲಸೆ ಕಾರ್ಮಿಕರು ಬಿಟ್ಟು ಹೋಗಿದ್ದ 5,400 ಬೈಸಿಕಲ್‌ಗಳನ್ನು ಸಹರಾನ್‌ಪುರ ಜಿಲ್ಲಾಡಳಿತವು 2 ವರ್ಷಗಳ ನಂತರ ಹರಾಜು ಮಾಡಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಎಚ್ಚೆತ್ತುಕೊಂಡಿರುವುದು ಮುಸ್ಲಿಮರ ಭಾವನೆಗೆ ಧಕ್ಕೆಯುಂಟಾಗಿದೆ ಎಂದಲ್ಲ: ಒಮರ್ ಅಬ್ದುಲ್ಲಾ

    21.2 ಲಕ್ಷ ಸಂಗ್ರಹ: 5,400 ಬೈಸಿಕಲ್‌ಗಳನ್ನು ಹರಾಜು ಮಾಡಲಾಗಿದ್ದು ಇದರಿಂದ 21.2 ಲಕ್ಷ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ಹರಿದು ಬಂದಿದೆ ಎಂದು ಸದರ್‌ನ ಉಪವಿಭಾಗೀಯ ಮ್ಯಾಜಿಸ್ಟ್ರೇಟ್‌ (SDM) ಕಿನ್‌ಶುಕ್ ಶ್ರೀವಾಸ್ತವ ತಿಳಿಸಿದ್ದಾರೆ.

  • 30 ನಿಮಿಷದಲ್ಲಿ 33 ಹಂತ, 768 ಮೆಟ್ಟಿಲು ಏರಿದ ಯುವಕ – ವೀಡಿಯೋ ವೈರಲ್

    30 ನಿಮಿಷದಲ್ಲಿ 33 ಹಂತ, 768 ಮೆಟ್ಟಿಲು ಏರಿದ ಯುವಕ – ವೀಡಿಯೋ ವೈರಲ್

    ಕ್ಯಾನ್ಬೆರಾ: ಒಬ್ಬ ಮನುಷ್ಯ 33 ಹಂತವನ್ನು ಏರಲು ಎಷ್ಟು ಸಮಯ ಬೇಕಾಗುತ್ತದೆ? ಅದರಲ್ಲೂ ಪಾದವನ್ನು ನೆಲಕ್ಕೆ ತಾಕಿಸದೆ ಬೈಸಿಕಲ್ ನಲ್ಲಿ ಮೆಟ್ಟಿಲು ಏರಲು ಸಾಧ್ಯವೇ ಇಲ್ಲ. ಆದರೆ ಫ್ರೆಂಚ್ ಮೂಲದ ಸೈಕಲಿಷ್ಟ್ ಮತ್ತು ಮೌಂಡೆನ್ ಬೈಕರ್ ಯುರೆಲಿಯನ್ ಫಾಂಟೆನಾಯ್ ಎಂಬವನು ಕೇವಲ 30 ನಿಮಿಷಗಳಲ್ಲಿ 768 ಮಟ್ಟಿಲುಗಳನ್ನು ಬೈಸಿಕಲ್ ಮೂಲಕ 33ನೇ ಹಂತ ಏರಿದ್ದಾನೆ. ಇದೀಗ ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.

     

    ಪ್ಯೂಟಾಕ್ಸ್ ಟವರ್ ನಲ್ಲಿ ಹೊಸದಾಗಿ ನಿರ್ಮಿಸಲಾದ ಗಗನವನ್ನೇ ಚುಂಬಿಸುವಂತಿರುವ ಟ್ರಿನಿಟಿ ಟವರ್ ಕಟ್ಟಡವನ್ನು ತನ್ನ ಪಾದಗಳನ್ನು ನೆಲಕ್ಕೆ ತಾಗಿಸದೇ 33ನೇ ಹಂತ ಬರುವವರೆಗೂ ಬೈಸಿಕಲ್ ನಲ್ಲಿಯೇ ಏರಿದ್ದಾನೆ. ಹೀಗೆ ಅಸಾಧ್ಯವಾದದ್ದನ್ನು ಸಾಧಿಸಿ ತೋರಿಸಿದ್ದಾನೆ. ಈ ವೀಡಿಯೋ ಇದೀಗ ಟ್ವಿಟ್ಟರ್ ಮತ್ತು ಯುಟ್ಯೂಬ್ ಗಳಲ್ಲಿ ಹರಿದಾಡುತ್ತಿದೆ.

    ಈ ವೀಡಿಯೋದಲ್ಲಿ ಯುರೆಲಿಯನ್ ಸವಾಲನ್ನು ಮೊದಲ ಮೆಟ್ಟಿಲಿಂದ ಆರಂಭಿಸಿ, ಅಂಕು ಡೊಂಕಾಗಿರುವ ಮೆಟ್ಟಲಿನ ಮೇಲೆ ನಿಧಾನಗತಿಯಲ್ಲಿ ಬೈಸಿಕಲ್ ಮೂಲಕ 33 ಹಂತದ ಮೆಟ್ಟಿಲುಗಳನ್ನು ಏರುತ್ತಿರುವುದು ಕಂಡು ಬಂದಿದೆ. ಅಲ್ಲದೆ ಸಾರ್ವಜನಿಕರು ಆತನಿಗೆ ಹಿಂದಿನಿಂದ ಚಪ್ಪಾಳೆ ತಟ್ಟಿ ಪ್ರೇರೆಪಿಸುತ್ತಿರುವುದನ್ನು ಕಾಣಬಹುದಾಗಿದೆ.

  • ಬಾಗಿಲು ಮುಚ್ಚಿದ ಅಟ್ಲಾಸ್ ಸೈಕಲ್ ಕಂಪನಿ – ಸಾವಿರಾರು ನೌಕರರು ಬೀದಿಗೆ

    ಬಾಗಿಲು ಮುಚ್ಚಿದ ಅಟ್ಲಾಸ್ ಸೈಕಲ್ ಕಂಪನಿ – ಸಾವಿರಾರು ನೌಕರರು ಬೀದಿಗೆ

    ಲಕ್ನೋ: ಭಾರತದ ಪ್ರಸಿದ್ಧ ಸೈಕಲ್ ತಯಾರಕಾ ಕಂಪನಿಯಾದ ‘ಅಟ್ಲಾಸ್’ ವಿಶ್ವ ಬೈಸಿಕಲ್ ದಿನಾಚರಣೆಯ ದಿನದಂದೇ ದಿಢೀರ್ ಸ್ಥಗಿತಗೊಂಡಿದೆ. ಯಾವುದೇ ಸೂಚನೆ ನೀಡದೇ ಬಾಗಿಲು ಮುಚ್ಚಿದ ಪರಿಣಾಮ ಸಾವಿರಕ್ಕೂ ಹೆಚ್ಚು ಮಂದಿ ಉದ್ಯೋಗ ಕಳೆದುಕೊಂಡು ಬೀದಿಗೆ ಬಂದಿದ್ದಾರೆ.

    ಭಾರೀ ನಷ್ಟದ ಕಾರಣ ಕಂಪನಿಯನ್ನು ಸ್ಥಗಿತಗೊಳಿಸಲಾಗುತ್ತಿದೆ ಎಂದು ಹೇಳಿ ಉತ್ತರ ಪ್ರದೇಶದ ಘಾಝಿಯಾಬಾದ್‍ನಲ್ಲಿದ್ದ ಅತೀ ದೊಡ್ಡ ಫ್ಯಾಕ್ಟರಿ ಮುಚ್ಚಲಾಗಿದೆ ಎಂದು ತಿಳಿಸಿದೆ. ಈ ಮೂಲಕ ಭಾರತದ ಸೈಕಲ್ ತಯಾರಿಕಾ ಕಂಪೆನಿಯ ಅಂತಿಮ ಘಟಕವೂ ಬಾಗಿಲು ಮುಚ್ಚಿದಂತಾಗಿದೆ.

    ಕೋವಿಡ್ 19 ಲಾಕ್‍ಡೌನ್ ಘೋಷಣೆ ಹಿನ್ನೆಲೆಯಲ್ಲಿ ಕಳೆದ 2 ತಿಂಗಳಿನಿಂದ ಕಂಪನಿಯನ್ನು ಮುಚ್ಚಲಾಗಿತ್ತು. ಜೂನ್ 1 ರಂದು ಕಂಪನಿಯನ್ನು ತೆರೆಯಲಾಗಿತ್ತು. ನೌಕರರು ಸಂಭ್ರಮದಿಂದಲೇ ಕೆಲಸಕ್ಕೆ ಹಾಜರಾಗಿದ್ದರು. 2 ದಿನ ಕೆಲಸ ಮಾಡಿದ್ದ ನೌಕರರು, ಜೂನ್ 3 ರಂದು ಕೆಲಸಕ್ಕೆ ಬೆಳಗ್ಗೆ ತೆರಳಿದಾಗ ಕಂಪನಿಯ ಮುಖ್ಯ ದ್ವಾರದಲ್ಲಿದ್ದ ನೋಟಿಸ್ ನೋಡಿ ಶಾಕ್ ಆಗಿದ್ದಾರೆ. ಆರ್ಥಿಕ ನಷ್ಟ ಸರಿದೂಗಿಸಲು ಸಾಧ್ಯವಾಗದ ಕಾರಣ ಕಂಪನಿಯನ್ನು ಮುಚ್ಚಲಾಗಿದೆ ಎಂದು ನೋಟಿಸ್ ನಲ್ಲಿ ತಿಳಿಸಲಾಗಿತ್ತು.

     

    ಈ ಮೊದಲು 2014ರ ಡಿಸೆಂಬರ್ ವೇಳೆ ಮಧ್ಯಪ್ರದೇಶದ ಮಲಾನ್‍ಪುರ, 2018ರ ಫೆಬ್ರವರಿಯಲ್ಲಿ ಹಯಾರ್ಣದ ಸೋನಿಪತ್ ನಲ್ಲಿದ್ದ  ಘಟಕವನ್ನು ಕಂಪನಿ ಮುಚ್ಚಿತ್ತು. 1989ರಲ್ಲಿ ಆರಂಭವಾದ ಘಾಝಿಯಾಬಾದ್ ಘಟಕ ಅಟ್ಲಾಸ್ ಸಂಸ್ಥೆಯ ಅತ್ಯಂತ ದೊಡ್ಡ ಘಟಕವಾಗಿದ್ದು ಹೆಚ್ಚಿನ ಸಂಖ್ಯೆಯ ಕಾರ್ಮಿಕರು ಆರಂಭದಿಂದಲೂ ಇಲ್ಲೇ ಕೆಲಸ ಮಾಡುತ್ತಿದ್ದಾರೆ. ತಿಂಗಳಿಗೆ ಸುಮಾರು 2 ಲಕ್ಷಕ್ಕೂ ಹೆಚ್ಚು ಸೈಕಲ್ ಗಳನ್ನು ಇಲ್ಲಿ ತಯಾರಿಸಲಾಗುತ್ತಿತ್ತು.

    ನೋಟಿಸ್ ನೀಡದೇ ಕಂಪನಿಯನ್ನು ಮುಚ್ಚಲಾಗಿದೆ. ದಿಢೀರ್ ಬಂದ್ ಮಾಡಿದರೆ ನಾವು ಮುಂದೆ ಏನು ಮಾಡಬೇಕು ಎಂದು ನೌಕರರು ಕಣ್ಣೀರು ಹಾಕಿದ್ದಾರೆ. ನೌಕರರು ಈಗ ಕೋರ್ಟ್ ಮೊರೆ ಹೋಗಿದ್ದು, ಶುಕ್ರವಾರ ಅರ್ಜಿ ವಿಚಾರಣೆಗೆ ಬರಲಿದೆ.

    1951ರಲ್ಲಿ ಸೋನಿಪತ್‍ನಲ್ಲಿ ತಗಡಿನ ಚಪ್ಪರದಲ್ಲಿ ಜಾನಕಿದಾಸ್ ಕಪೂರ್ ಅಟ್ಲಾಸ್ ಸೈಕಲ್ ಇಂಡಸ್ಟ್ರೀಸ್ ಲಿ. ನ ಪ್ರಥಮ ಘಟಕವನ್ನು ಸ್ಥಾಪಿಸಿದ್ದರು. ಒಂದು ವರ್ಷದಲ್ಲಿ ಘಟಕ 25 ಎಕರೆಗೆ ವಿಸ್ತಾರಗೊಂಡಿತ್ತು. ಮೊದಲ ವರ್ಷವೇ 12 ಸಾವಿರ ಸೈಕಲ್ ತಯಾರಿಸಿ ಮಾರಾಟ ಮಾಡಿತ್ತು. 1965ರ ವೇಳೆಗೆ ಭಾರತದ ಅತ್ಯಧಿಕ ಸೈಕಲ್ ಉತ್ಪಾದಿಸುವ ಸಂಸ್ಥೆಯೆಂಬ ಹೆಗ್ಗಳಿಕೆ ಪಡೆದಿದ್ದ ಅಟ್ಲಾಸ್ ಕಂಪನಿ 1978ರಲ್ಲಿ ಭಾರತದ ಪ್ರಥಮ ರೇಸಿಂಗ್ ಬೈಸಿಕಲ್ ತಯಾರಿಸಿತ್ತು.

  • 100 ಕಿ.ಮೀ ಏಕಾಂಗಿಯಾಗಿ ಸೈಕಲ್ ಸವಾರಿ- ವಾಪಸ್ ಪತ್ನಿಯ ಜೊತೆ ಬಂದ

    100 ಕಿ.ಮೀ ಏಕಾಂಗಿಯಾಗಿ ಸೈಕಲ್ ಸವಾರಿ- ವಾಪಸ್ ಪತ್ನಿಯ ಜೊತೆ ಬಂದ

    – ಸಾಮಾನ್ಯ ಉಡುಪಿನಲ್ಲೇ ಮದುವೆ

    ಲಕ್ನೋ: ಈಗಾಗಲೇ ಕೊರೊನಾ ಲಾಕ್‍ಡೌನ್‍ನಿಂದ ಅನೇಕರು ಬೈಕಿನಲ್ಲಿ ವಧುವಿನ ಮನೆಗೆ ತೆರಳಿ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದರೆ ಇಲ್ಲೊಬ್ಬ ಯುವಕ ಸೈಕಲ್ ಮೇಲೆ ಸವಾರಿ ಮಾಡಿಕೊಂಡು ಹೋಗಿ ಮದುವೆಯಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ಹಮೀರ್ ಪುರ ಜಿಲ್ಲೆಯ ಪೌಥಿಯಾ ಗ್ರಾಮದ ಕಲ್ಕು ಪ್ರಜಾಪತಿ (23) ಸೈಕಲ್ ಮೂಲಕ ವಧು ರಿಂಕಿ ಮನೆಗೆ ಹೋಗಿ ಮದುವೆಯಾಗಿದ್ದಾನೆ. ವರ ತಾನು ಮದುವೆಯಾಗುವ ವಧುವಿನ ಮನೆಗೆ ತಲುಪಲು ಸುಮಾರು 100 ಕಿ.ಮೀ ದೂರದವರೆಗೂ ಸೈಕಲ್ ತುಳಿದಿದ್ದಾನೆ. ತಮ್ಮ ಮದುವೆಯ ದಿನಾಂಕವನ್ನು ಮುಂದೂಡಲಾಗದೆ ಒಂಟಿಯಾಗಿ ಹೋಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾನೆ. ಇದನ್ನೂ ಓದಿ: ದಿನಸಿ ತರಲು ಕಳುಹಿಸಿದ್ರೆ ಪತ್ನಿ ಜೊತೆ ಬಂದ ಮಗ – ತಾಯಿ ಶಾಕ್

    ಕಲ್ಕು ಪ್ರಜಾಪತಿ ಏಪ್ರಿಲ್ 25 ರಂದು ತಮ್ಮ ಮದುವೆಗೆ ಜಿಲ್ಲಾಡಳಿತದ ಅನುಮತಿಗಾಗಿ ಕಾಯುತ್ತಿದ್ದನು. ಆದರೆ ಜಿಲ್ಲಾಡಳಿತ ಅನುಮತಿ ನೀಡದ ಹಿನ್ನೆಲೆಯಲ್ಲಿ ಕೊನೆಗೆ ಲಕ್ನೋದಿಂದ 100 ಕಿ.ಮೀ ದೂರದಲ್ಲಿರುವ ಮಹೋಬಾ ಜಿಲ್ಲೆಯ ಪುನಿಯಾ ಗ್ರಾಮದಲ್ಲಿರುವ ವಧು ರಿಂಕಿಯ ಮನೆಗೆ ತನ್ನ ಬೈಸಿಕಲ್‍ನಲ್ಲಿ ಏಕಾಂಗಿಯಾಗಿ ಹೋಗಲು ನಿರ್ಧರಿಸಿದ್ದನು. ಅದರಂತೆಯೇ ಸೈಕಲ್ ಮೂಲಕ ಹೋಗಿ ಹಳ್ಳಿಯ ದೇವಸ್ಥಾನವೊಂದರಲ್ಲಿ ಪ್ರಜಾಪತಿ ಮತ್ತು ರಿಂಕಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ವಧು-ವರ ಇಬ್ಬರು ಮದುವೆ ಉಡುಪನ್ನು ಧರಿಸಿದೆ ಸಾಮಾನ್ಯ ಉಡುಪಿನಲ್ಲಿ ಮದುವೆಯಾಗಿದ್ದಾರೆ. ನಮ್ಮ ಮದುವೆಗೆ ಸ್ಥಳೀಯ ಪೊಲೀಸರಿಂದ ಅನುಮತಿ ಸಿಗಲಿಲ್ಲ. ಹೀಗಾಗಿ ನಾನು ಸೈಕಲ್ ಮೂಲಕ ಹೋಗುವುದನ್ನು ಬಿಟ್ಟು ಬೇರೆ ದಾರಿಯಿಲ್ಲ. ನನ್ನ ಬಳಿ ಬೈಕ್ ಇದೆ. ಆದರೆ ಡ್ರೈವಿಂಗ್ ಲೈಸೆನ್ಸ್ ಇರಲಿಲ್ಲ. ಕೊನೆಗೆ ಸೈಕಲ್ ಮೂಲಕ ಹೋದೆ. ಆದರೆ ಸೋಂಕಿನಿಂದ ನನ್ನನ್ನು ರಕ್ಷಿಸಿಕೊಳ್ಳಲು ನನ್ನ ಬಾಯಿಗೆ ಕರವಸ್ತ್ರ ಕಟ್ಟಿಕೊಂಡಿದ್ದೆ. ಅಲ್ಲದೇ ಜೀನ್ಸ್ ಮತ್ತು ಟೀ ಶರ್ಟ್ ಧರಿಸಿಕೊಂಡು ಹೋಗಿದ್ದೆ ಎಂದು ರೈತ ಪ್ರಜಾಪತಿ ಹೇಳಿದರು.

    ಮದುವೆಗೆ ನಾವು ಕಾರ್ಡ್ ಕೂಡ ರೆಡಿ ಮಾಡಿಸಿದ್ದು, ಸಂಬಂಧಿಕರಿಗೆ ನೀಡಿದ್ದೆವು. ಆದರೆ ಲಾಕ್‍ಡೌನ್‍ನಿಂದ ಅದ್ಧೂರಿ ಮದುವೆಯಾಗಲು ಸಾಧ್ಯವಾಗಿಲ್ಲ. ಆದರೆ ವಾಪಸ್ ಬರುವಾಗ ಪತ್ನಿಯ ಜೊತೆ ಬಂದಿದ್ದೇನೆ. ಎರಡೂ ಕುಟುಂಬದವರು ನಮ್ಮ ಮದುವೆಯನ್ನು ಸಂತೋಷದಿಂದ ಒಪ್ಪಿಕೊಂಡಿದ್ದಾರೆ. ನಮ್ಮ ಮನೆಯಲ್ಲಿ ತಾಯಿ ಅನಾರೋಗ್ಯದಿಂದ ಬಳುತ್ತಿದ್ದಾರೆ. ಹೀಗಾಗಿ ಅಡುಗೆ ಮಾಡಲು ಯಾರೂ ಇಲ್ಲದಿರುವುದರಿಂದ ಅನಿವಾರ್ಯವಾಗಿ ಮದುವೆಯಾಗಬೇಕಿತ್ತು. ಇದಲ್ಲದೆ ಲಾಕ್‍ಡೌನ್ ಮುಗಿಯಲು ಎಷ್ಟು ದಿನವಾಗುತ್ತದೋ ಗೊತ್ತಿಲ್ಲ. ಹೀಗಾಗಿ ಏಕಾಂಕಿಯಾಗಿ ಸೈಕಲ್ ನಲ್ಲಿ ಹೋಗಿ ವಿವಾಹವಾದೆ ಎಂದು ವರ ಹೇಳಿದನು.

  • ಸೈಕಲಿಗೆ ಸಿಲುಕಿ ಕೋಳಿ ಮರಿ ಸಾವು – ಬಾಲಕನ ಕಾರ್ಯಕ್ಕೆ ಫಿದಾ ಆದ ನೆಟ್ಟಿಗರು!

    ಸೈಕಲಿಗೆ ಸಿಲುಕಿ ಕೋಳಿ ಮರಿ ಸಾವು – ಬಾಲಕನ ಕಾರ್ಯಕ್ಕೆ ಫಿದಾ ಆದ ನೆಟ್ಟಿಗರು!

    ಐಜ್ವಾಲ್: ಮಕ್ಕಳು ಶುದ್ಧ ಮನಸ್ಸಿನ ದೇವರ ಪ್ರತಿರೂಪಗಳು ಎಂಬುದು ಈಗಾಗಲೇ ಎಲ್ಲರಿಗೂ ತಿಳಿದಿದೆ. ಸದ್ಯ ಈ ಮಾತಿಗೆ ನೈಜ ಸಾಕ್ಷಿಯಂತೆ ಮಿಜೋರಾಂನ ಸೈರಂಗ್ ಬಾಲಕ ಮಾಡಿದ ಮುಗ್ಧ ಮನಸ್ಸಿನ ಕಾರ್ಯ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.

    ನಡೆದಿದ್ದೇನು?
    ಆಟವಾಡುವ ವೇಳೆ ಬಾಲಕ ತುಳಿಯುತ್ತಿದ್ದ ಸೈಕಲ್ ಕೋಳಿ ಮರಿ ಮೇಲೆ ಹರಿದಿದ್ದು, ಪರಿಣಾಮ ಅದು ಸ್ಥಳದಲ್ಲೇ ಸಾವನ್ನಪ್ಪಿದೆ. ಕೂಡಲೇ ತನ್ನಿಂದಲೇ ಕೋಳಿ ಮರಿ ಸಾವನ್ನಪ್ಪಿದೆ ಎಂದು ತಿಳಿಸಿದ ಬಾಲಕ ತಾನು ಕೂಡಿಟ್ಟಿದ್ದ ಹಣದೊಂದಿಗೆ ಕೋಳಿ ಮರಿಯನ್ನು ಕೈಯಲ್ಲಿ ಹಿಡಿದುಕೊಂಡು ಆಸ್ಪತ್ರೆಗೆ ತೆರಳಿದ್ದಾನೆ.

    ಆಸ್ಪತ್ರೆಗೆ ತೆರಳಿದ ಬಾಲಕ ವೈದ್ಯರಿಗೆ ತಾನು ತಂದಿದ್ದ ಹಣವನ್ನು ನೀಡಿ ಕೋಳಿ ಮರಿಗೆ ಚಿಕಿತ್ಸೆ ನೀಡಲು ಮನವಿ ಮಾಡಿದ್ದಾನೆ. ಬಾಲಕನ ಈ ಫೋಟೋದೊಂದಿಗೆ ಆತನ ವಿವರಗಳನ್ನು ‘ಸಂಗಾ’ ಹೆಸರಿನ ವ್ಯಕ್ತಿಯೊಬ್ಬರು ಫೇಸ್‍ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

    ಬಾಲಕನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಈ ಪೋಸ್ಟಿಗೆ ಇದುವರೆಗೂ 1 ಲಕ್ಷ ಮಂದಿ ಲೈಕ್ ಮಾಡಿದ್ದಾರೆ. 74 ಸಾವಿರ ಮಂದಿ ಶೇರ್ ಮಾಡಿದ್ದರೆ, 9 ಸಾವಿರಕ್ಕೂ ಹೆಚ್ಚು ಮಂದಿ ಕಮೆಂಟ್ ಮಾಡಿ ಪ್ರತಿಕ್ರಿಯೆ ನೀಡಿದ್ದಾರೆ. ಬಾಲಕನ ಈ ನಡೆಗೆ ಮೆಚ್ಚುಗೆ ಸೂಚಿಸಿರುವ ಹಲವು ಮಂದಿ ಆತನ ಪೋಷಕರು ಬಾಲಕನನ್ನು ಬೆಳೆಸಿದ ಪರಿಗೂ ಶಹಬ್ಬಾಶ್ ಗಿರಿ ನೀಡಿದ್ದಾರೆ.

  • ನಿರಂತರ 24 ದಿನ, 600 ಕಿ.ಮೀ. ಸೈಕಲ್ ತುಳಿದ ಬಳಿಕ ಕೊನೆಗೂ ಪತ್ನಿಯನ್ನ ಹುಡುಕಿದ ಪತಿ!

    ನಿರಂತರ 24 ದಿನ, 600 ಕಿ.ಮೀ. ಸೈಕಲ್ ತುಳಿದ ಬಳಿಕ ಕೊನೆಗೂ ಪತ್ನಿಯನ್ನ ಹುಡುಕಿದ ಪತಿ!

    ರಾಂಚಿ: ಪತಿ ಸಾಹಸ ಮಾಡಿ ನಾಪತ್ತೆಯಾಗಿದ್ದ ಪತ್ನಿಯನ್ನು 24 ದಿನಗಳ ನಂತರ ಪತ್ತೆ ಹಚ್ಚಿರುವ ಘಟನೆ ಜಾರ್ಖಂಡ್ ನ ಜಮ್ಶೆದ್‍ಪುರನಲ್ಲಿ ನಡೆದಿದೆ.

    ಮನೋಹರ ನಾಯಕ್ ತನ್ನ ಪತ್ನಿಗಾಗಿ 24 ದಿನಗಳಲ್ಲಿ ಸುಮಾರು 600 ಕಿಲೋಮೀಟರ್ ಸೈಕಲ್ ನಲ್ಲಿ ಸುತ್ತಾಡಿ ಕೊನೆಗೂ ಪತ್ನಿಯನ್ನು ಹುಡುಕಿದ್ದಾರೆ. ಇವರು ಮುಸಬಾನಿ ಬಾಲಿಗೊಡಾ ಗ್ರಾಮದವರು. ಇವರ ಪತ್ನಿ ಅನಿತಾ ಜನವರಿ 14ರಂದು ಸಂಕ್ರಾಂತಿ ಹಬ್ಬಕ್ಕೆಂದು ಕುಮಾರ್ಸಾಲ್ ಹಳ್ಳಿಯ ತವರಿಗೆ ಹೋಗಿದ್ದಾಗ ಕಾಣೆಯಾಗಿದ್ದರು.

    ಆದರೆ ಎರಡು ದಿನಗಳಾದರೂ ಪತ್ನಿ ಹಿಂದಿರುಗದಿದ್ದಾಗ ಮನೋಹರ್, ಮುಸಬಾನಿ ಮತ್ತು ದುಮಾರಿಯಾ ಪೊಲೀಸ್ ಠಾಣೆಗಳಿಗೆ ದೂರು ನೀಡಿದ್ದರು. ಮನೋಹರ್ ಕಾರ್ಮಿಕರಾಗಿದ್ದು, ಪತ್ನಿ ಬಗ್ಗೆ ಪೊಲೀಸರಿಗೆ ಯಾವುದೇ ಸುಳಿವು ಸಿಗದಿದ್ದಾಗ ಕೊನೆಗೆ ತಾವೇ ಪತ್ನಿಯನ್ನ ಹುಡುಕುವ ದೃಢ ನಿರ್ಧಾರ ಮಾಡಿದರು. ಮನೋಹರ್ ಪತ್ನಿ ಅನಿತಾ ಅವರ ಮಾನಸಿಕ ಸ್ಥಿತಿ ಚೆನ್ನಾಗಿರಲಿಲ್ಲ ಹಾಗೂ ಅವರಿಗೆ ಸರಿಯಾಗಿ ಮಾತನಾಡಲು ಬರುತ್ತಿರಲಿಲ್ಲವಾದ ಕಾರಣ ತಾನಾಗಿಯೇ ಪತ್ನಿಯನ್ನ ಹುಡುಕಿ ಹೊರಟರು.

    ನಾನು ನನ್ನ ಹಳೆಯ ತುಕ್ಕು ಹಿಡಿದ ಸೈಕಲ್ ರಿಪೇರಿ ಮಾಡಿ ಒಂದು ಗ್ರಾಮದಿಂದ ಮತ್ತೊಂದು ಗ್ರಾಮಕ್ಕೆ ಪ್ರಯಾಣಿಸಿದೆ. ಎಷ್ಟು ದೂರ ಬಂದಿದ್ದೇನೆ ಎಂಬುದು ನನಗೆ ಗೊತ್ತಿರಲಿಲ್ಲ ಎಂದು ಮನೋಹರ್ ಹೇಳಿದ್ದಾರೆ.

    ಮನೋಹರ್ ದಿನಕ್ಕೆ 25 ಕಿ.ಮೀ. ದೂರ ಸೈಕಲ್ ತುಳಿದು 24 ದಿನಗಳಲ್ಲಿ ಸುಮಾರು 65 ಗ್ರಾಮಗಳನ್ನು ಸುತ್ತಾಡಿದ್ದಾರೆ. ಆದ್ರೆ ನಿಂತರವಾಗಿ ಪತ್ನಿಯನ್ನ ಹುಡುಕಿದರೂ ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ಕೊನೆಗೆ ಪತ್ನಿಯ ಫೋಟೋವನ್ನು ಸ್ಥಳೀಯ ಪತ್ರಿಕೆಗಳಿಗೆ ನೀಡಿ ಕಾಣೆಯಾದ ವ್ಯಕ್ತಿಗಳ ಅಂಕಣದಲ್ಲಿ ಪ್ರಕಟಿಸಲು ಕೇಳಿದ್ದರು. ಫೋಟೋ ನೋಡಿದವರೊಬ್ಬರು ಮನೋಹರ್ ಪತ್ನಿ ಕೊಲ್ಕತ್ತಾದ ಖರಗ್‍ಪುರದಲ್ಲಿ ರಸ್ತೆಬದಿಯ ಅಂಗಡಿಯೊಂದರಲ್ಲಿ ಕುಳಿತಿರುವುದನ್ನ ನೋಡಿ ಗುರುತು ಹಿಡಿದು, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದರು. ನಂತರ ಅಲ್ಲಿಂದ ಮುಸಬಾನಿ ಪೊಲೀಸರಿಗೆ ಮಾಹಿತಿ ರವಾನೆಯಾಗಿದ್ದು, ಅವರು ಮನೋಹರ್ ಗೆ ಮಾಹಿತಿ ತಿಳಿಸಿದ್ದಾರೆ. ಮನೋಹರ್ ಅಲ್ಲಿಗೆ ಹೋಗಿ ತಮ್ಮ ಪತ್ನಿಯನ್ನು ಮನೆಗೆ ಕರೆತಂದಿದ್ದಾರೆ.

    ನಾವು ಕೂಡಲೇ ಅಧಾರ್ ಕಾರ್ಡ್ ಸಮೇತ ಅಲ್ಲಿಗೆ ಹೋಗುವಂತೆ ಮನೋಹರ್ ಗೆ ಹೇಳಿದೆವು. ಫೆಬ್ರವರಿ 10ರಂದು ಮನೋಹರ್ ಹಾಗೂ ಪತ್ನಿ ಅನಿತಾ ಜೊತೆಯಾಗಿದ್ದಾರೆ ಎಂದು ಮುಸಬಾನಿ ಎಸ್‍ಹೆಚ್‍ಓ ಸುರೇಶ್ ಲಿಂಡಾ ಹೇಳಿದ್ದಾರೆ. ಫೆಬ್ರವರಿ 11ರಂದು ದಂಪತಿ ಮನೆಗೆ ವಾಪಸ್ ಬಂದಿದ್ದಾರೆ.