Tag: ಬೈರಾಗಿ

  • ಶ್ರೀಲೀಲಾಗೆ ಹೋಲಿಕೆ ಮಾಡಿದ್ದಕ್ಕೆ ‘ರಣವಿಕ್ರಮ’ ನಟಿ ಅಂಜಲಿ ಗರಂ

    ಶ್ರೀಲೀಲಾಗೆ ಹೋಲಿಕೆ ಮಾಡಿದ್ದಕ್ಕೆ ‘ರಣವಿಕ್ರಮ’ ನಟಿ ಅಂಜಲಿ ಗರಂ

    ನ್ನಡದ ರಣವಿಕ್ರಮ, ಬೈರಾಗಿ(Bhairagi), ಹೊಂಗನಸು ಚಿತ್ರಗಳ ನಾಯಕಿ ಅಂಜಲಿ ಮತ್ತೆ ಸುದ್ದಿಯಲ್ಲಿದ್ದಾರೆ. ಶ್ರೀಲೀಲಾರನ್ನ ಹೋಲಿಕೆ ಮಾಡಿದ್ದಕ್ಕೆ ಅಂಜಲಿ ಗರಂ ಆಗಿದ್ದಾರೆ. ಶ್ರೀಲೀಲಾ (Sreeleela) ವಿಚಾರಕ್ಕೆ ಅಂಜಲಿ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ:‘ಯುಐ’ ಟೀಸರ್ ಸಂಭ್ರಮಕ್ಕೆ ಸಾಕ್ಷಿಯಾಗಲಿದ್ದಾರೆ ಕಿಚ್ಚ, ಶಿವಣ್ಣ, ಅಲ್ಲು ಅರವಿಂದ್

    ಸೌತ್ ನಟಿ ಅಂಜಲಿ(Anjali) ಅವರು ಹೊಸ ಹೊಸ ಪ್ರಾಜೆಕ್ಟ್‌ಗಳನ್ನು ಒಪ್ಪುವ ಮೂಲಕ ಟಾಕ್‌ನಲ್ಲಿದ್ದಾರೆ. ಹೊಸ ಸಿನಿಮಾವೊಂದರ ಪ್ರಚಾರ ಕಾರ್ಯದಲ್ಲಿ ನಟಿ ರಾಂಗ್ ಆಗಿದ್ದಾರೆ. ಶ್ರೀಲೀಲಾ ಮತ್ತು ಅವರ ಸಿನಿಮಾ ಕೆರಿಯರ್ ಸಂಬಂಧಿಸಿದ ಕೆಲ ಪ್ರಶ್ನೆಗಳು ಅಂಜಲಿಗೆ ಕೇಳಲಾಗಿದೆ. ಈ ವೇಳೆ, ನಟಿ ಗರಂ ಆಗಿದ್ದಾರೆ.

    ನಾನು ನಿಮ್ಮ ಅಭಿಮಾನಿ, ತೆಲುಗಿನ ಹುಡುಗಿ ಎಂಬ ಕಾರಣಕ್ಕೆ ನಿಮಗೆ ಸರಿಯಾದ ಬ್ರೇಕ್ ಸಿಕ್ಕಿಲ್ಲ ಎಂದು ಎಂದಾದರೂ ಅಂದುಕೊಂಡಿದ್ದೀರಾ? ಎನ್ನುವ ಪ್ರಶ್ನೆ ಎದುರಾಗಿತ್ತು. ಇದಕ್ಕೆ ಕೊಂಚ ಖಾರವಾಗಿಯೇ ಅಂಜಲಿ ಉತ್ತರಿಸಿದ್ದಾರೆ. ನನಗೆ ಬ್ರೇಕ್ ಸಿಗದೇ ಇದ್ದರೆ ನೀವು ಹೇಗೆ ನನಗೆ ಅಭಿಮಾನಿ ಆಗುತ್ತಿದ್ದಿರಿ? ಎಂದು ಪ್ರಶ್ನಿಸಿದ್ದಾರೆ. ತೆಲುಗಿನಲ್ಲಿ ನಾನು ಸಿನಿಮಾಗಳನ್ನು ಮಾಡದೇ ಇರಬಹುದು, ತಮಿಳಿನಲ್ಲೂ ಸಿನಿಮಾ ಮಾಡುತ್ತಿದ್ದೇನೆ ಎಂದರು. ಪತ್ರಕರ್ತೆಯೊಬ್ಬರು ಮಾತು ಮುಂದುವರೆಸಿ ಶ್ರೀಲೀಲಾ (Sreeleela) ರೇಂಜ್‌ನಲ್ಲಿ ನೀವು ಯಾಕೆ ಯಶಸ್ವಿಯಾಗಲಿಲ್ಲ ಎಂದು ಮತ್ತೆ ಕೇಳಿದ್ದಾರೆ. ಸಿಟ್ಟಾದ ಅಂಜಲಿ, ನಾನು ಈ ನಂಬರ್ ಗೇಮ್‌ಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ, ನನಗೆ ಇಷ್ಟವಾದ ಪಾತ್ರಗಳನ್ನು ನಾನು ಮಾಡುತ್ತೇನೆ ಎಂದಿದ್ದಾರೆ.

    ತೆಲುಗಿನಲ್ಲಿ (Tollywood) ಸಿನಿಮಾ ಮಾಡುತ್ತಿಲ್ಲ ಎಂದ ಮಾತ್ರಕ್ಕೆ ನಾನು ಖಾಲಿ ಕೂತಿಲ್ಲ. ಬೇರೆ ಭಾಷೆಗಳಲ್ಲಿಯೂ ನಟಿಸುತ್ತಿದ್ದೇನೆ. ಸಿನಿಮಾಗಳ ಜೊತೆಗೆ ವೆಬ್ ಸೀರಿಸ್‌ಗಳಲ್ಲಿ ಬ್ಯುಸಿಯಾಗಿದ್ದೀನಿ. ಹಾಗಾಗಿ ತೆಲುಗಿನಲ್ಲಿ ನಾನು ಕಡಿಮೆ ನಟಿಸುವಂತೆ ನಿಮಗೆ ಅನ್ನಿಸಬಹುದು ಎಂದು ಹೇಳಿದ್ದಾರೆ.

  • ಶಿವರಾಜ್ ಕುಮಾರ್ 60 ನೇ ವರ್ಷದ ಹುಟ್ಟುಹಬ್ಬ: ಸಿಂಪಲ್ಲಾಗಿ ಮಾಡುವುದಕ್ಕೆ ನಿರ್ಧಾರ

    ಶಿವರಾಜ್ ಕುಮಾರ್ 60 ನೇ ವರ್ಷದ ಹುಟ್ಟುಹಬ್ಬ: ಸಿಂಪಲ್ಲಾಗಿ ಮಾಡುವುದಕ್ಕೆ ನಿರ್ಧಾರ

    ಸೆಂಚ್ಯುರಿ ಸ್ಟಾರ್ ಶಿವರಾಜ್ ಕುಮಾರ್ ಅವರ ಹುಟ್ಟು ಹಬ್ಬವನ್ನು ಈ ಬಾರಿ ಅದ್ಧೂರಿ ಮತ್ತು ಸಡಗರದಿಂದ ಆಚರಿಸಲು ಅಭಿಮಾನಿಗಳು ಸಿದ್ಧತೆ ಮಾಡಿಕೊಂಡಿದ್ದರು. ಈ ವರ್ಷ ಅವರಿಗೆ 60 ವರ್ಷ ತುಂಬುತ್ತಿರುವ ಹೊತ್ತಿನಲ್ಲಿ ಗ್ರ್ಯಾಂಡ್ ಆಗಿಯೇ ಹುಟ್ಟು ಹಬ್ಬ ಆಚರಿಸಬೇಕೆಂದು ಅಭಿಮಾನಿಗಳು ಆಸೆ ಪಟ್ಟಿದ್ದರು. ಆದರೆ, ಪುನೀತ್ ರಾಜ್ ಕುಮಾರ್ ನಿಧನದ ಹಿನ್ನೆಲೆಯಲ್ಲಿ  ಸಿಂಪಲ್ಲಾಗಿ ಹುಟ್ಟು ಹಬ್ಬವನ್ನು ಆಚರಿಸಲು ನಿರ್ಧರಿಸಿದ್ದಾರೆ ಶಿವರಾಜ್ ಕುಮಾರ್.

    ಒಂದು ಬೈರಾಗಿ ಸಿನಿಮಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಿವರಾಜ್ ಕುಮಾರ್, ‘ಸರಳವಾಗಿ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. ಅಲ್ಲದೇ, ಬೈರಾಗಿ ಸಿನಿಮಾ ಕುರಿತು ಹಲವು ಕಾರ್ಯಕ್ರಮಗಳನ್ನು ಹುಟ್ಟು ಹಬ್ಬಕ್ಕೂ ಮುನ್ನ ಚಿತ್ರತಂಡ ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ. ಶಿವರಾಜ್ ಕುಮಾರ್ ಹುಟ್ಟು ಹಬ್ಬಕ್ಕಾಗಿ ಹತ್ತು ದಿನ ಮೊದಲೇ ಬೈರಾಗಿ ಸಿನಿಮಾ ರಿಲೀಸ್ ಆಗುತ್ತಿದ್ದು, ಚಾಮರಾಜನಗರದಲ್ಲಿ ಪ್ರಿ ರಿಲೀಸ್ ಇವೆಂಟ್ ನಡೆಯಲಿದೆ. ಇದನ್ನೂ ಓದಿ: ಬಿಗ್‌ಬಿ ಮೊಮ್ಮಗಳ ಜೊತೆ `ಗಲ್ಲಿಬಾಯ್’ ನಟನ ಡೇಟಿಂಗ್ ಸ್ಟೋರಿ

    ಜೂ.25 ರಂದು ಚಾಮರಾಜ ನಗರದಲ್ಲಿ ಪ್ರೀ ಇವೆಂಟ್ ಕಾರ್ಯಕ್ರಮ ಆಯೋಜನೆಯಾಗಿದ್ದರೆ, 24 ರಂದು ರಾಮನಗರದಿಂದ ಮೈಸೂರುವರೆಗೆ ರೋಡ್ ಶೋ ನಡೆಯಲಿದೆ. 24 ರಂದು ರಾತ್ರಿ ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ಮಾಡಿ, ಮರುದಿನವೇ ಈವೆಂಡ್ ನಡೆಯಲಿದೆ ಎಂದು ಶಿವರಾಜ್ ಕುಮಾರ್ ತಿಳಿಸಿದ್ದಾರೆ. ಈಗಾಗಲೇ ಈ ಸಿನಿಮಾ ಟೀಸರ್ ಮತ್ತು ಹಾಡುಗಳಿಂದ ನಿರೀಕ್ಷೆ ಮೂಡಿಸಿದ್ದು, ವಿಜಯ್ ಮಿಲ್ಟನ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬಂದಿದೆ.

  • ನಮ್ಮ ಇಂಡಸ್ಟ್ರಿ ಏನು, ನಮ್ಮ ಗೌರವ ಏನು ಎಲ್ಲರಿಗೂ ಗೊತ್ತು: ತೆಲಗು ನಿರ್ದೇಶಕನಿಗೆ ಶಿವಣ್ಣ ತಿರುಗೇಟು

    ನಮ್ಮ ಇಂಡಸ್ಟ್ರಿ ಏನು, ನಮ್ಮ ಗೌರವ ಏನು ಎಲ್ಲರಿಗೂ ಗೊತ್ತು: ತೆಲಗು ನಿರ್ದೇಶಕನಿಗೆ ಶಿವಣ್ಣ ತಿರುಗೇಟು

    ಕಾರವಾರ: ಯಾರೋ ಏನೋ ಹೇಳಿದರೂ ಎಂದು ಕೇಳವುದು ಬೇಡ. ಕನ್ನಡ ಇಂಡಸ್ಟ್ರಿ ಏನು ಅಂತಾ ಜಗತ್ತಲ್ಲಿ ಸಾಬೀತಾಗಿದೆ ಎಂದು ತೆಲಗು ನಿರ್ದೇಶಕ ಗೀತಕೃಷ್ಣ ಅವರಿಗೆ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ತಿರುಗೇಟು ಕೊಟ್ಟರು.

    Century Star Shivarajkumar shows no signs of slowing down- The New Indian Express

    ಸ್ಯಾಂಡಲ್‍ವುಡ್ ಇಂಡಸ್ಟ್ರಿ ಡರ್ಟಿ ಎಂದು ಗೀತಕೃಷ್ಣ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದರು. ಈ ಹೇಳಿಕೆಯನ್ನು ವಿರೋಧಿಸಿದ ಶಿವರಾಜ್ ಕುಮಾರ್ ಶಿರಸಿಯಲ್ಲಿ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ಕೊಟ್ಟಿದ್ದು, ಕನ್ನಡ ಇಂಡಸ್ಟ್ರಿ ಬಗ್ಗೆ ಇಡೀ ಜಗತ್ತಿಗೆ ಗೊತ್ತಾಗಿದೆ. ಕೆಜಿಎಫ್-2 ಸಿನಿಮಾದಿಂದ ಅದು ಪ್ರೂ ಆಗಿದೆ. ಯಾರು ಏನೇ ಹೇಳಿದ್ರು ಈ ಕಿವಿಯಲ್ಲಿ ಕೇಳಬೇಕು ಈ ಕಿವಿಯಲ್ಲಿ ಬಿಡಬೇಕು. ಅವರ ಮಾತು ಅವರ ಯೋಗ್ಯತೆಯನ್ನ ತೋರಿಸುತ್ತೆ. ಇಂತವರ ಬಗ್ಗೆ ಪ್ರತಿಕ್ರಿಯೆ ಕೊಟ್ಟಷ್ಟು ಅವರಿಗೆ ಲಾಭ ಆಗುತ್ತೆ ಎಂದು ತಿಳಿಸಿದರು.

    ನಮ್ಮ ಇಂಡಸ್ಟ್ರಿ ಏನು, ನಮ್ಮ ಗೌರವ ಏನು ಎಲ್ಲರಿಗೂ ಗೊತ್ತು. ಅಪ್ಪಾಜಿ ಕಾಲದಿಂದ ಹಿಡಿದು ಇಲ್ಲಿಯವರಗೆ ಎಲ್ಲ ಕಲಾವಿದರು ಇಂಡಸ್ಟ್ರಿಯನ್ನ ದೊಡ್ಡ ಮಟ್ಟಕ್ಕೆ ಬೆಳೆಸಿದ್ದಾರೆ. ಇಂತವರ ಕೀಳು ಮಾತಿಗೆ ಕಿವಿ ಕೊಡದೆ, ಅವರು ಯಾರು ಅಂತಾ ನೆಗ್ಲೆಟ್ ಮಾಡಬೇಕು ಎಂದರು. ಇದನ್ನೂ ಓದಿ: ತೃತೀಯ ರಂಗ ರಚನೆಗೆ ದೇವೇಗೌಡರ ಜೊತೆ ಚಂದ್ರಶೇಖರ್ ರಾವ್ ಚರ್ಚೆ 

    Shocking: Death threat to Shivarajkumar | Kannada Movie News - Times of India

    ‘ಬೈರಾಗಿ’ ಸಿನಿಮಾ ಕುರಿತು ಮಾತನಾಡಿದ ಅವರು, ನನ್ನ ಮುಂದಿನ ಸಿನಿಮಾ ‘ಬೈರಾಗಿ’ ಯಾವುದೇ ಪ್ಯಾನ್ ಇಂಡಿಯಾವಲ್ಲ. ಭಾವನೆಗಳ ಕಥೆ ಇದು. ಪ್ರತಿಯೊಂದು ಪಾತ್ರಕ್ಕೂ ಒಂದೊಂದು ಅರ್ಥವಿದೆ. ನನ್ನ ಪಾಲಿಗೆ ಬಂದ ಸಿನಿಮಾಗಳನ್ನ ಮಾಡುತ್ತಿದ್ದೇನೆ ಎಂದರು.

  • ಶಿವಣ್ಣನ ಹುಲಿ ಅವತಾರ: ಬೈರಾಗಿ ಹಾಡಿಗೆ ಭೀಮನ ಬಲ

    ಶಿವಣ್ಣನ ಹುಲಿ ಅವತಾರ: ಬೈರಾಗಿ ಹಾಡಿಗೆ ಭೀಮನ ಬಲ

    ಶಿವರಾಜ್ ಕುಮಾರ್ ನಟನೆಯ ಬೈರಾಗಿ ಸಿನಿಮಾದ ಹಾಡೊಂದು ಬಿಡುಗಡೆ ಆಗಿದ್ದು, ಈ ಹಾಡಿನಲ್ಲಿ ಶಿವರಾಜ್ ಕುಮಾರ್ ಹುಲಿವೇಷ ಹಾಕಿದ್ದಾರೆ. ಇದು ರಿಲೀಸ್ ಆಗುತ್ತಿರುವ ಈ ಸಿನಿಮಾದ ಮೊದಲ ಹಾಡಾಗಿದ್ದು, ದುನಿಯಾ ವಿಜಯ್ ಈ ಗೀತೆಯನ್ನು ಬಿಡುಗಡೆ ಮಾಡಿದ್ದಾರೆ. ಸಿನಿಮಾದಲ್ಲಿ ಈ ಹಾಡು ಶಿವಣ್ಣನ ಎಂಟ್ರಿ ಸಾಂಗ್ ಆಗಿದ್ದು ಸಖತ್ ಮಾಸ್ ಆಗಿ ಮೂಡಿಬಂದಿದೆ. ಡಾ. ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ, ಅನೂಪ್ ಸೀಳಿನ್ ಬ್ಯಾಂಡು ಬಜಾಯಿಸಿರುವ ಈ ಹಾಡಿಗೆ ಆ್ಯಂಥೋನಿ ದಾಸನ್ ದನಿಗೂಡಿಸಿರುವುದು ವಿಶೇಷ. ಇದನ್ನೂ ಓದಿ : ಗೋವಾ ಸಿಎಂ ಭೇಟಿಯಾದ ಯಶ್, ರಾಧಿಕಾ ಪಂಡಿತ್

    ‘ಟಕರಟಕ ಟಕರಟಕ ಎಗರಿಬಂತೋ ಕಾಡಹುಲಿ…’ ಎಂಬ ಸಾಹಿತ್ಯದಿಂದ ಶುರುವಾಗುವ ಈ ಸಾಂಗ್ ಕುರಿತು ಮಾತನಾಡಿರುವ ದುನಿಯಾ ವಿಜಯ್,  ‘ಮಾಸ್ ಬೀಟ್, ಕೇಳಿದಾಕ್ಷಣ ಕುಣಿಸುವ ಸಂಗೀತ ಈ ಹಾಡಿನಲ್ಲಿದೆ. ಆ್ಯಂಥೋನಿ ದಾಸ್ ವಾಯ್ಸ್ ಕೇಳಿದಾಕ್ಷಣ ಥ್ರಿಲ್ ಆಗಿಹೋದೆ. ಶಿವಣ್ಣನ ಎನರ್ಜಿಗೆ ಸರಿದೂಗುವಂಥ ಹಾಡಿದು. ನಾನಂತೂ ಸಖತ್ ಎಂಜಾಯ್ ಮಾಡಿದೆ. ಈ ಹಾಡನ್ನು ಕೇಳಿದವರೂ ಇಷ್ಟಪಡುತ್ತಾರೆ ಎಂಬ ಭರವಸೆಯಿದೆ’ ಎಂದಿದ್ದಾರೆ. ಇದನ್ನೂ ಓದಿ : ‘ಟಕ್ಕರ್’ ಮೂಲಕ ಪ್ರೇಕ್ಷಕರ ಮನಗೆಲ್ಲೋಕೆ ರೆಡಿಯಾದ ಮನೋಜ್ ಕುಮಾರ್

    ‘ನೂರಾರು ಡಾನ್ಸರ್ಸ್, ಬೃಹತ್ ಸೆಟ್, ಕಲರ್’ಫುಲ್ ಕಾಸ್ಟ್ಯೂಮ್’ನಲ್ಲಿ ಶಿವಣ್ಣಈ ಹಾಡಿಗೆ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಬನೇರುಘಟ್ಟ ಸಮೀಪದ ದೇವಸ್ಥಾನವೊಂದರ ಬಳಿ ಜಾತ್ರೆ ಸೆಟ್ ಹಾಕಲಾಗಿತ್ತು. ದೊಡ್ಡ ಮಟ್ಟದಲ್ಲಿ ಈ ಹಾಡು ಮೂಡಿಬಂದಿದೆ’ ಎನ್ನುತ್ತಾರೆ ನಿರ್ಮಾಪಕ ಕೃಷ್ಣ ಸಾರ್ಥಕ್.  ವಿಜಯ್ ಮಿಲ್ಟನ್‌ ನಿರ್ದೇಶನ ಹಾಗೂ ಛಾಯಾಗ್ರಹಣವಿರುವ ಈ ಸಿನಿಮಾಕ್ಕೆ ಅವರೇ ಕಥೆ, ಚಿತ್ರಕಥೆ ಒದಗಿಸಿದ್ದಾರೆ. ಗುರು ಕಶ್ಯಪ್ ಸಂಭಾಷಣೆ ಈ ಚಿತ್ರಕ್ಕಿದೆ.

  • ‘ಜೇಮ್ಸ್’ ಜೊತೆ ‘ಬೈರಾಗಿ’ ಟೀಸರ್ – ಪುನೀತ್ ಹುಟ್ಟುಹಬ್ಬಕ್ಕೆ ಶಿವಣ್ಣನ ಝಲಕ್

    ‘ಜೇಮ್ಸ್’ ಜೊತೆ ‘ಬೈರಾಗಿ’ ಟೀಸರ್ – ಪುನೀತ್ ಹುಟ್ಟುಹಬ್ಬಕ್ಕೆ ಶಿವಣ್ಣನ ಝಲಕ್

    ಸೆಂಚುರಿ ಸ್ಟಾರ್ ಶಿವರಾಜ್‍ಕುಮಾರ್ ನಟನೆಯ 123ನೇ ಸಿನಿಮಾ ‘ಬೈರಾಗಿ’ ಇತ್ತೀಚೆಗಷ್ಟೇ ಶೂಟಿಂಗ್ ಮುಗಿಸಿದೆ. ಸದ್ಯ ಪೋಸ್ಟ್‌ ಪ್ರೊಡಕ್ಷನ್ ಹಂತದಲ್ಲಿರುವ ಈ ಚಿತ್ರದ ಟೀಸರ್ ಪುನೀತ್ ರಾಜ್‍ಕುಮಾರ್ ಹುಟ್ಟುಹಬ್ಬದ ದಿನ ವಿಶೇಷವಾಗಿ ಬಿಡುಗಡೆ ಮಾಡಲು ‘ಬೈರಾಗಿ’ ತಂಡ ತೀರ್ಮಾನಿಸಿದೆ. ‘ಜೇಮ್ಸ್’ ಬಿಡುಗಡೆಯಾಗುವ ಎಲ್ಲ ಸಿನಿಪರದೆಗಳಲ್ಲೂ ‘ಬೈರಾಗಿ’ ದರ್ಶನವಾಗಲಿದೆ ಎಂಬುದು ವಿಶೇಷ.

    After Puneeth Rajkumar's death, elder brother Shiva Rajkumar's Bhajrangi 2 shows cancelled - Movies News

    ಪುನೀತ್ ಅವರ ಸವಿನೆನಪಿಗಾಗಿ ಈ ಟೀಸರ್ ರಿಲೀಸ್ ಮಾಡುತ್ತಿರುವುದಾಗಿ ಚಿತ್ರತಂಡ ಘೋಷಿಸಿದೆ. ‘ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ನಮ್ಮ ತಂಡದ ಜತೆ ಅಪ್ಪು ಒಡನಾಟವಿದೆ. ಹೀಗಾಗಿ ಅವರ ಹುಟ್ಟುಹಬ್ಬದ ಉಡುಗೊರೆಯಾಗಿ ‘ಬೈರಾಗಿ’ ಟೀಸರ್ ಬಿಡುಗಡೆ ಮಾಡುತ್ತಿದ್ದೇವೆ. ಇದು ಪುನೀತ್ ಹಾಗೂ ಶಿವಣ್ಣನ ಅಭಿಮಾನಿಗಳಿಗೆ ಸಂತಸದ ವಿಷಯ’ ಎಂಬಿದು ಚಿತ್ರತಂಡದ ಅನಿಸಿಕೆ. ಇದನ್ನೂ ಓದಿ: ಅಪ್ಪು ಬೇಡವೆಂದ ಸಾಂಗ್ ಮತ್ತೆ ಪ್ರೇಕ್ಷಕರ ಮುಂದೆ – ಯಾವುದು ಈ ಸಾಂಗ್?

    ವಿಜಯ್ ಮಿಲ್ಟನ್ ನಿರ್ದೇಶನವಿರುವ ಈ ಚಿತ್ರಕ್ಕೆ ಕೃಷ್ಣ ಸಾರ್ಥಕ ‘ಕೃಷ್ಣ ಕ್ರಿಯೇಷನ್ಸ್’ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ‘ಟಗರು’ ಬಳಿಕ ‘ಡಾಲಿ’ ಧನಂಜಯ್ ಈ ಸಿನಿಮಾದಲ್ಲಿ ಶಿವರಾಜ್‍ಕುಮಾರ್ ಜೊತೆ ನಟಿಸಿದ್ದಾರೆ. ಹಿರಿಯ ನಟ ಶಶಿಕುಮಾರ್, ಅಂಜಲಿ, ಯಶ್ ಶಿವಕುಮಾರ್ ಸೇರಿದಂತೆ ದೊಡ್ಡ ತಾರಾಬಳಗವೇ ಈ ಸಿನಿಮಾದಲ್ಲಿ ಕೂಡಿದೆ. ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿರುವ ಈ ಚಿತ್ರಕ್ಕೆ ಗುರು ಕಶ್ಯಪ್ ಸಂಭಾಷಣೆ ಬರೆದಿದ್ದಾರೆ.