Tag: ಬೈಕ್ ವ್ಹೀಲಿಂಗ್

  • ಎಚ್ಚರ: ಬೈಕ್ ವ್ಹೀಲಿಂಗ್ ಮಾಡಿ ಫೇಸ್‍ಬುಕ್ ಗೆ ಹಾಕಿದ್ರೆ ಬಂಧಿಸ್ತಾರೆ ಪೊಲೀಸ್ರು!

    ಎಚ್ಚರ: ಬೈಕ್ ವ್ಹೀಲಿಂಗ್ ಮಾಡಿ ಫೇಸ್‍ಬುಕ್ ಗೆ ಹಾಕಿದ್ರೆ ಬಂಧಿಸ್ತಾರೆ ಪೊಲೀಸ್ರು!

    ಬೆಂಗಳೂರು: ನಗರದಲ್ಲಿ ಇತ್ತೀಚೆಗೆ ಬೈಕ್ ವ್ಹೀಲಿಂಗ್ ಹೆಚ್ಚಾಗುತ್ತಿದ್ದು, ಇದಕ್ಕೆ ಬ್ರೇಕ್ ಹಾಕಲು ಪೊಲೀಸರು ಮುಂದಾಗಿದ್ದಾರೆ.

    ಯುವಕರ ಅಪಾಯಕಾರಿ ಬೈಕ್ ವ್ಹೀಲಿಂಗ್ ಹಾವಳಿ ಹೆಚ್ಚಾಗುತ್ತಿದ್ದ ಹಿನ್ನೆಲೆಯಲ್ಲಿ ವಿಶೇಷವಾಗಿ ಪೊಲೀಸ್ ತಂಡವೊಂದು ರಚನೆಯಾಗಿದೆ. ಈ ಪೊಲೀಸ್ ತಂಡ ವ್ಹೀಲಿಂಗ್ ಮಾಡಿ ಅದನ್ನು ಫೇಸ್‍ಬುಕ್ ಗೆ ಪೋಸ್ಟ್ ಮಾಡಿದರೆ ಅವರನ್ನು ಬಂಧಿಸುತ್ತಾರೆ. ಈಗಾಗಲೇ ಆರ್ ಟಿ ನಗರ ಸಂಚಾರಿ ಪೊಲೀಸರಿಂದ ಬೈಕ್ ವ್ಹೀಲಿಂಗ್ ಮಾಡುತ್ತಿದ್ದ ಬಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಬಾಲಕ ಆರ್ ಟಿ ನಗರದ ಮುಖ್ಯ ರಸ್ತೆಯ ಕಬಾಬ್ ಮ್ಯಾನರ್ ಹೊಟೆಲ್ ಬಳಿ ವ್ಹೀಲಿಂಗ್ ಮಾಡುತ್ತಿದ್ದನು. ನಂತರ ವ್ಹೀಲಿಂಗ್ ಮಾಡಿದ್ದ ತನ್ನ ಫೋಟೋವನ್ನ ಫೇಸ್ ಬುಕ್‍ ನಲ್ಲಿ ಅಪ್ಲೋಡ್ ಮಾಡಿದ್ದನು. ಇದನ್ನು ಗಮನಿಸಿದ ಪೊಲೀಸರು ಫೇಸ್‍ಬುಕ್ ಪೋಸ್ಟ್ ನೋಡಿ ಬಾಲಕನ ಮನೆಗೆ ಬಂದು ಪೋಷಕರಿಗೆ ನೋಟೀಸ್ ಕೊಟ್ಟಿದ್ದಾರೆ.

    ಈ ಸಂಬಂಧ ಆರ್ ಟಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವ್ಹೀಲಿಂಗ್ ವೇಳೆ ಬಾಲಕ ಬಳಸಿದ್ದ ಡಿಯೋ ಬೈಕನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

  • ನೈಸ್ ರಸ್ತೆಯಲ್ಲಿ ಯುವಕರ ಡೆಡ್ಲಿ ವ್ಹೀಲಿಂಗ್ – ಮುಖಾಮುಖಿ ಡಿಕ್ಕಿಯಾಗಿ ಇಬ್ಬರೂ ದುರ್ಮರಣ

    ನೈಸ್ ರಸ್ತೆಯಲ್ಲಿ ಯುವಕರ ಡೆಡ್ಲಿ ವ್ಹೀಲಿಂಗ್ – ಮುಖಾಮುಖಿ ಡಿಕ್ಕಿಯಾಗಿ ಇಬ್ಬರೂ ದುರ್ಮರಣ

    -ಎರಡು ಬೈಕ್‍ಗಳು ಪೀಸ್ ಪೀಸ್

    ಬೆಂಗಳೂರು: ನಗರದಲ್ಲಿ ಯುವಕರ ಅಪಾಯಕಾರಿ ಬೈಕ್ ವ್ಹೀಲಿಂಗ್ ಹೆಚ್ಚಾಗುತ್ತಿದ್ದು, ಹೀಗೆ ವ್ಹೀಲಿಂಗ್ ಮಾಡುವಾಗ ಬೈಕ್ ಗಳು ಮುಖಮುಖಿ ಡಿಕ್ಕಿಯಾಗಿ ಯುವಕರಿಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.

    ಈ ಘಟನೆ ಭಾನುವಾರ ಸಂಜೆ ಸುಮಾರು 4.30 ರ ಸುಮಾರಿಗೆ ಬೆಂಗಳೂರಿನ ನೈಸ್ ರಸ್ತೆಯ ಸೋಮ್ ಪುರ ಬಳಿ ಸಂಭವಿಸಿದೆ. ಮೃತರನ್ನು ಚಾಮರಾಜಪೇಟೆ ನಿವಾಸಿಗಳು ಎಂದು ಗುರುತಿಸಲಾಗಿದೆ. ಭಾನುವಾರ ರಜೆ ಇದ್ದ ಕಾರಣ ಯುವಕರು ನೈಸ್ ರಸ್ತೆಯಲ್ಲಿ ಅಪಾಯಕಾರಿ ವ್ಹೀಲಿಂಗ್ ಮಾಡುತ್ತಿದ್ದರು. ಈ ವೇಳೆ ವ್ಹೀಲಿಂಗ್ ಮಾಡುತ್ತಿದ್ದ ಇಬ್ಬರು ಯುವಕರು ಮುಖಾಮುಖಿ ಡಿಕ್ಕಿ ಹೊಡೆದಿದ್ದಾರೆ.

    ಡಿಕ್ಕಿ ಹೊಡೆದ ರಭಸಕ್ಕೆ ಸ್ಥಳದಲ್ಲೇ ಯುವಕರಿಬ್ಬರು ಮೃತಪಟ್ಟಿದ್ದಾರೆ. ಅಪಘಾತದ ರಭಸಕ್ಕೆ ಬೈಕ್ ಗಳೆರಡೂ ಪೀಸ್ ಪೀಸ್ ಆಗಿದೆ. ಇತ್ತೀಚೆಗೆ ಯುವಕರ ತಂಡ ಪ್ರವಾಸ ಹೋಗುವಾಗ ಅತಿ ವೇಗವಾಗಿ ಬೈಕ್ ಚಲಾಯಿಸಿಕೊಂಡು ಬಂದು ರಸ್ತೆಯ ತಡೆಗೋಡೆಗೆ ಡಿಕ್ಕಿ ಹೊಡೆದು ವೈದ್ಯರೊಬ್ಬರು ಮೃತಪಟ್ಟಿದ್ದರು.

    ಈ ಘಟನೆ ಸಂಬಂಧ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಯುವಕರ ಬೈಕ್ ವ್ಹೀಲಿಂಗ್ ಹುಚ್ಚಿಗೆ 4 ವರ್ಷದ ಕಂದಮ್ಮ ಬಲಿಯಾಯ್ತು!

    ಯುವಕರ ಬೈಕ್ ವ್ಹೀಲಿಂಗ್ ಹುಚ್ಚಿಗೆ 4 ವರ್ಷದ ಕಂದಮ್ಮ ಬಲಿಯಾಯ್ತು!

    ಬೆಂಗಳೂರು: ಪೊಲೀಸರು ವ್ಹೀಲಿಂಗ್ ನಿಯಂತ್ರಣಕ್ಕೆ ಕ್ರಮಕೈಗೊಳ್ಳುತ್ತಿದ್ದೇವೆ ಎಂದು ಪದೇ ಪದೇ ಹೇಳುತ್ತಿದ್ದರೂ ವ್ಹೀಲಿಂಗ್ ಮಾಡುವವರಿಗೆ ಮಾತ್ರ ಇನ್ನೂ ಬುದ್ಧಿ ಬಂದಂತಿಲ್ಲ. ಯುವಕರಿಬ್ಬರ ಬೈಕ್ ವ್ಹೀಲಿಂಗ್ ಹುಚ್ಚಿಗೆ 4 ವರ್ಷದ ಮಗುವೊಂದು ಸಾವನ್ನಪ್ಪಿದ ದಾರುಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಚಿಕ್ಕಜಾಲದ ಉತ್ನಳ್ಳಿ ಬಳಿ ಇಂದು ಸಂಜೆ 5.30ಕ್ಕೆ ಘಟನೆ ನಡೆದಿದ್ದು ರಾಜು ಅಲಿಯಾಸ್ ಬಂಗಾರಿ ಎಂಬಾತ ತನ್ನ ಸ್ನೇಹಿತನ ಜೊತೆ ಬೈಕ್ ವ್ಹೀಲಿಂಗ್ ಮಾಡುತ್ತಿದ್ದ. ಈ ವೇಳೆ ನಿಯಂತ್ರಣ ತಪ್ಪಿದ ಬೈಕ್ ರಸ್ತೆ ಬದಿಯಲ್ಲಿ ನಿಂತಿದ್ದ ಮಗು ಸಹನಾಗೆ ಡಿಕ್ಕಿ ಹೊಡೆದಿದೆ. ಬೈಕ್ ಗುದಿದ್ದ ರಭಸಕ್ಕೆ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ.

    ಆದರೆ ಅಪಘಾತವಾಗುತ್ತಿದ್ದಂತೆ ರಾಜು ಸ್ಥಳದಿಂದ ಪರಾರಿಯಾಗಿದ್ದಾನೆ. ಹಿಂಬದಿ ಕುಳಿತಿದ್ದ ಸವಾರ ಕೆಳಗೆ ಬಿದ್ದಿದ್ದಾನೆ. ತಕ್ಷಣ ಸ್ಥಳೀಯರು ಹೋಗಿ ಹಿಂಬದಿ ಸವಾರನನ್ನು ಹಿಡಿದು ಥಳಿಸಿದ್ದಾರೆ. ಬಳಿಕ ಚಿಕ್ಕಜಾಲ ಟ್ರಾಫಿಕ್ ಠಾಣೆಯ ಪೊಲೀಸರಿಗೊಪ್ಪಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.