Tag: ಬೈಕ್ ವ್ಹೀಲಿಂಗ್

  • ತಡರಾತ್ರಿ ತಲ್ವಾರ್ ಝಳಪಿಸುತ್ತ ವ್ಹೀಲಿಂಗ್ ಮಾಡಿದ್ದ ಪುಂಡರ ಮೇಲೆ ರೌಡಿಶೀಟ್

    ತಡರಾತ್ರಿ ತಲ್ವಾರ್ ಝಳಪಿಸುತ್ತ ವ್ಹೀಲಿಂಗ್ ಮಾಡಿದ್ದ ಪುಂಡರ ಮೇಲೆ ರೌಡಿಶೀಟ್

    * 14 ವ್ಹೀಲಿಂಗ್ ಪುಂಡರಿಗೆ ಖಾಕಿಯಿಂದ ಡ್ರಿಲ್

    ಬೆಂಗಳೂರು: ನಡುರಸ್ತೆಯಲ್ಲಿ ವ್ಹೀಲಿಂಗ್ ಮಾಡುತ್ತಾ ತಲ್ವಾರ್ ಝಳಪಿಸಿದ್ದ ಪುಂಡರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.

    ಡಿಜೆ ಹಳ್ಳಿಯಿಂದ ಹೊಸಕೋಟೆವರೆಗೆ ವ್ಹೀಲಿಂಗ್ ಮಾಡ್ತಾ ಆಟೋಟೋಪ ಮೆರೆದಿದ್ದ 14 ಪುಂಡರ ಮೇಲೆ ರೌಡಿಶೀಟ್ ಓಪನ್ ಮಾಡಲಾಗಿದೆ.

    ಷಬೇ-ಎ-ಬಾರತ್ ಧಾರ್ಮಿಕ ಹಬ್ಬದ ದಿನ ಕೆಲ ಪುಂಡರು ಡಿಜೆ ಹಳ್ಳಿಯಿಂದ ಹೊಸಕೋಟೆ ವರೆಗೆ ಹೋಗಿ, ಮತ್ತೆ ವಾಪಸ್ ಡಿಜೆ ಹಳ್ಳಿವರೆಗೆ ಮಾರಕಾಸ್ತ್ರ ಹಿಡಿದು ಪುಂಡಾಟಿಕೆ ಮೆರೆದಿದ್ದಾರೆ.

    ಎಲ್ಲಾ 14 ಮಂದಿ ಆರೋಪಿಗಳಿಗೆ ಸರಿಯಾಗಿಯೇ ಬುದ್ದಿ ಕಲಿಸಿರುವ ಖಾಕಿ ಎಲ್ಲರ ಮೇಲೆ ರೌಡಿಶೀಟ್ ತೆರೆಯಲಾಗಿದೆ. ಏಳು ಬೈಕ್‌ಗಳಲ್ಲಿ ಮಾರಕಾಸ್ತ್ರ ಹಿಡಿದು ವ್ಹೀಲಿಂಗ್ ಮಾಡುತ್ತಾ ಪುಂಡಾಟ ಮೆರೆದಿದ್ದ ನಯೀಮ್ ಪಾಷಾ, ಅರಫತ್, ಸಾಹೀಲ್, ಅದ್ನಾನ್, ನಂಜಾಮ್ಮದ್, ಆಸೀಫ್, ಸಮೀರ್, ಜುಬೇರ್, ರಿಹಾನ್, ಹುಸೇನ್, ಜುನೇದ್, ಅಯಾನ್, ಆಫ್ತಾಪ್ ಸೇರಿದಂತೆ 14 ಮಂದಿಯನ್ನ ಪೊಲೀಸರು ಬಂಧಿಸಿದ್ದಾರೆ.

    ಎಫ್‌ಐಆರ್ ದಾಖಲಾಗುತ್ತಿದ್ದಂತೆ 14 ಮಂದಿ ಪುಂಡರ ಗ್ಯಾಂಗ್ ಬಂಧಿಸಿದ್ದ ಖಾಕಿ ಎಲ್ಲರ ವಿರುದ್ಧವೂ ರೌಡಿಶೀಟ್ ತೆರೆದಿದ್ದಾರೆ. ಮಾರಕಾಸ್ತ್ರ ಹಿಡಿದು ರಸ್ತೆಯಲ್ಲಿ ಪುಂಡಾಟಿಕೆ ಮೆರೆದ ಹಿನ್ನೆಲೆ ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ರೌಡಿಶೀಟ್ ಓಪನ್ ಮಾಡಲಾಗಿದೆ. ಬೈಕ್‌ಗಳಲ್ಲಿ ವ್ಹೀಲಿಂಗ್ ಮಾಡುತ್ತಾ ಸ್ಟಂಟ್ ಮಾಡಿ ಬೆಂಗಳೂರು ಕಾನೂನು ಸುವ್ಯವಸ್ಥೆ ಬಗ್ಗೆ ಸವಾಲೆಸೆದಿದ್ದರು. ಆರೋಪಿಗಳ ಪೂರ್ವಪರ ಕಲೆ ಹಾಕಿ ರೌಡಿಶೀಟ್ ಓಪನ್ ಮಾಡಲಾಗಿದೆ. ಅಲ್ಲದೇ, ಆರೋಪಿಗಳ ಪೋಷಕರನ್ನ ಕರೆಸಿ ವಾರ್ನಿಂಗ್ ನೀಡಿ ಮುಚ್ಚಳಿಕೆ ಬರೆಸಿ ಕಳಿಸಲಾಗಿದೆ.

  • ರಾಜಧಾನಿಯಲ್ಲಿ ಮಿತಿಮೀರಿದ ಪುಂಡರ ಹಾವಳಿ – ಮಧ್ಯರಾತ್ರಿ ಮಾರಕಾಸ್ತ್ರ ಹಿಡಿದು ಬೈಕ್ ವ್ಹೀಲಿಂಗ್

    ರಾಜಧಾನಿಯಲ್ಲಿ ಮಿತಿಮೀರಿದ ಪುಂಡರ ಹಾವಳಿ – ಮಧ್ಯರಾತ್ರಿ ಮಾರಕಾಸ್ತ್ರ ಹಿಡಿದು ಬೈಕ್ ವ್ಹೀಲಿಂಗ್

    ಬೆಂಗಳೂರು: ರಾಜಧಾನಿಯಲ್ಲಿ ಪುಂಡರ ಹಾವಳಿ ಮಿತಿಮೀರಿದ್ದು, ಮಧ್ಯರಾತ್ರಿ ನಡುರಸ್ತೆಯಲ್ಲಿ ಮಾರಕಾಸ್ತ್ರ ಹಿಡಿದು ಬೈಕ್ ವ್ಹೀಲಿಂಗ್ ಮಾಡುತ್ತಿದ್ದಾರೆ.ಇದನ್ನೂ ಓದಿ: ಬೆಳ್ಳಂಬೆಳಿಗ್ಗೆ ಮೈಕ್ರೋ ಫೈನಾನ್ಸ್, ಅಕ್ರಮ ಬಡ್ಡಿ ದಂಧೆಕೋರರ ಮನೆಗಳ ಮೇಲೆ ಪೊಲೀಸರ ದಾಳಿ

    ಬೆಂಗಳೂರಿನ ರಾಮಮೂರ್ತಿನಗರ, ಕೆ.ಆರ್.ಪುರಂ ಫ್ಲೈ ಓವರ್ ಮಾರ್ಗವಾಗಿ ಸಿನಿಮೀಯ ರೀತಿಯಲ್ಲಿ ಸಾಲು ಸಾಲಾಗಿ ಬೈಕ್‌ಗಳಲ್ಲಿ ಲಾಂಗ್ ಹಿಡಿದು, ವಾಹನ ಸವಾರರಿಗೆ ಭಯ ಬೀಳಿಸುತ್ತಿದ್ದಾರೆ. ಪೊಲೀಸರ ಭಯವೇ ಇಲ್ಲದೇ ಹತ್ತಾರು ಮಂದಿ ಪುಂಡರು ಲಾಂಗ್ ಹಿಡಿದುಕೊಂಡು ರಾಜಾರೋಷವಾಗಿ ಬೈಕ್ ಚಲಾಯಿಸುತ್ತಿದ್ದಾರೆ.

    ಪುಂಡರ ಗುಂಪೊಂದು ಹವಾ ಮೆಂಟೇನ್ ಮಾಡುವುದಕ್ಕೆ ಭಯಬೀಳಿಸುವಂತೆ ಕೈಯಲ್ಲಿ ಕತ್ತಿ, ಲಾಂಗು, ಡ್ರ್ಯಾಗರ್‌ ಹಿಡಿದು ಅಟ್ಟಹಾಸ ಮೆರೆಯುತ್ತಿದ್ದಾರೆ. ರಸ್ತೆಯಲ್ಲಿ ಬೆಂಕಿ ಬರುವಂತೆ ಕತ್ತಿ ಹಾಗೂ ಲಾಂಗ್‌ನಿಂದ ಬೀಸುತ್ತಿದ್ದು, ಪುಂಡರ ಹಾವಳಿಗೆ ವಾಹನ ಸವಾರರು ಬೆಚ್ಚಿಬಿದ್ದಿದ್ದಾರೆ.ಇದನ್ನೂ ಓದಿ: ಮುಖ್ಯ ಶಿಕ್ಷಕರಿಗೆ ಬಿಸಿ ಮುಟ್ಟಿಸಿದ ಇಲಾಖೆ – ಬೇಕಾಬಿಟ್ಟಿ ಸಭೆ, ಸಮಾರಂಭಗಳಿಗೆ ಹೋಗುವುದಕ್ಕೆ ಬ್ರೇಕ್‌

     

  • ಪುಂಡರಿಂದ ವ್ಹೀಲಿಂಗ್‌ ಹುಚ್ಚಾಟ; ಬೈಕ್‌ಗಳನ್ನು ಕಿತ್ತುಕೊಂಡು ಫ್ಲೈಓವರ್‌ನಿಂದ ಎಸೆದ ಸಾರ್ವಜನಿಕರು

    ಪುಂಡರಿಂದ ವ್ಹೀಲಿಂಗ್‌ ಹುಚ್ಚಾಟ; ಬೈಕ್‌ಗಳನ್ನು ಕಿತ್ತುಕೊಂಡು ಫ್ಲೈಓವರ್‌ನಿಂದ ಎಸೆದ ಸಾರ್ವಜನಿಕರು

    – ತುಮಕೂರು ಹೆದ್ದಾರಿಯಲ್ಲಿ ಬೈಕ್‌ ವ್ಹೀಲಿಂಗ್‌ ವಿರುದ್ಧ ಜನರ ಆಕ್ರೋಶ

    ತುಮಕೂರು: ಬೈಕ್‌ ವೀಲ್ಹಿಂಗ್‌ ಮಾಡುತ್ತಾ ಪ್ರಯಾಣಿಕರಿಗೆ ತೊಂದರೆ ಕೊಡುತ್ತಿದ್ದ ಪುಂಡರ ಬೈಕ್‌ಗಳನ್ನು ಸಾರ್ವಜನಿಕರು ಫ್ಲೈಓವರ್‌ನಿಂದ ಕೆಳಗೆ ಎಸೆದ ಘಟನೆ ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

    ಬೈಕನ್ನು ಫ್ಲೈಓವರ್‌ನಿಂದ ಕೆಳಗೆ ಎಸೆಯುತ್ತಿರುವ ದೃಶ್ಯದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಸ್ವಾತಂತ್ರ್ಯ ದಿನಾಚರಣೆಯಂದು ಬೆಂಗಳೂರಿಂದ ತುಮಕೂರು ಕಡೆಗೆ ಎರಡು ದ್ವಿಚಕ್ರ ವಾಹನಗಳಲ್ಲಿ ಚಲಿಸುತ್ತಿದ್ದ ಪುಂಡರು ವೀಲ್ಹಿಂಗ್‌ ಮಾಡುತ್ತಿದ್ದರು. ಇದನ್ನೂ ಓದಿ: TB Dam- ಎಲ್ಲಾ ಸ್ಟಾಪ್ ಲಾಗ್ ಗೇಟ್ ಅಳವಡಿಕೆ ಯಶಸ್ವಿ

    ಅವರನ್ನು ಅಡ್ಡಗಟ್ಟಿ ಕೆಲ ಪ್ರಯಾಣಿಕರು ಪ್ರಶ್ನಿಸಿದ್ದಾರೆ. ನಂತರ ಅವರಿಗೆ ಬುದ್ದಿ ಕಲಿಸಲು ದ್ವಿಚಕ್ರ ವಾಹನವನ್ನು ಹೆದ್ದಾರಿಯ ಮೇಲ್ಸೇತುವೆಯಿಂದ ಕೆಳಗೆ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ನೆಲಮಂಗಲ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೈಕ್‌ಗಳನ್ನು ವಶಕ್ಕೆ ಪಡೆದ ಪ್ರಕರಣ ದಾಖಲಿಸಿಕೊಂಡಿದ್ದಾರೆಂದು ತಿಳಿದುಬಂದಿದೆ. ಇದನ್ನೂ ಓದಿ: ನಾನ್ಯಾಕೆ ರಾಜೀನಾಮೆ ನೀಡಲಿ? ರಾಜ್ಯಪಾಲರೇ ರಾಜೀನಾಮೆ ನೀಡಬೇಕು: ಸಿಎಂ

  • ಪೊಲೀಸರಿಗೂ ಕ್ಯಾರೆ ಅನ್ನದೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಡೆಡ್ಲಿ ಬೈಕ್ ರೈಡ್

    ಪೊಲೀಸರಿಗೂ ಕ್ಯಾರೆ ಅನ್ನದೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಡೆಡ್ಲಿ ಬೈಕ್ ರೈಡ್

    ನೆಲಮಂಗಲ: ತಮ್ಮ ಪ್ರಾಣದ ಜೊತೆಗೆ ಇತರೆ ಬೈಕ್ (Bike) ಸವಾರರ ಜೀವದ ಜೊತೆಗೂ ಚೆಲ್ಲಾಟ ಆಡ್ತಿರೋ ಯುವಕರ ಪುಂಡಾಟದ ದೃಶ್ಯ ಎದೆ ಝಲ್ಲೆನ್ನಿಸುವಂತಿದೆ.

    ಹೌದು. ಬೆಂಗಳೂರು (Bengaluru) ಹೊರವಲಯ ನೆಲಮಂಗಲ ತಾಲೂಕಿನ ಬೂದಿಹಾಳ್ ನಿಂದ ಡಾಬಸ್ ಪೇಟೆಯವರೆಗಿನ ಎನ್.ಎಚ್-48 ಹೆದ್ದಾರಿಯಲ್ಲಿ (NH-48) ಕೆಲ ಯುವಕರು ಪುಂಡಾಟ ಮೆರೆದಿದ್ದಾರೆ. ಹೆದ್ದಾರಿಯಲ್ಲಿ ಭಾರೀ ವಾಹನಗಳ ಸಂಚಾರದ ನಡುವೆಯೂ ಕೆಲ ಪುಂಡರು ಬೈಕ್ ವ್ಹೀಲಿಂಗ್ (Bike Wheeling) ಮಾಡಿದ್ದಾರೆ. ಇದನ್ನೂ ಓದಿ: ಕೋಲಾರದಲ್ಲಿ ಅಖಾಡಕ್ಕಿಳಿದ ಸಿದ್ದರಾಮಯ್ಯಗೆ ನೂರೆಂಟು ವಿಘ್ನ- ಸಿದ್ದು ಸೋಲಿಸೋದಾಗಿ HDK ಶಪಥ

    ಪೊಲೀಸರಿಗೂ (Police) ಕ್ಯಾರೆ ಎನ್ನದೇ ಮರ‍್ನಾಲ್ಕು ಬೈಕ್ ಸವಾರರು ರಾಜರೋಷವಾಗಿ ವ್ಹೀಲಿಂಗ್ ಮಾಡಿದ್ದಾರೆ. ಇನ್ನೂ ಇಂತಹ ಅಪಾಯಕಾರಿಯಿಂದ ವೇಗದ ಚಾಲನೆ ಕೂಡ ಮೃತ್ಯುಕೂಪದ ದಾರಿಗೆ ಕಾರಣವಾಗಿದೆ. ಅಲ್ಲದೇ ಅಪಘಾತವಾದ್ರೆ ಸಾವು ನೋವಾಗುವ ಸಂದರ್ಭ ಕೂಡ ಜಾಸ್ತಿಯಾಗಿರುತ್ತದೆ. ಇಂತಹ ಅಪಾಯಕಾರಿ ಡೆಡ್ಲಿ ಬೈಕ್ ವ್ಹೀಲಿಂಗ್ ನಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಇತರ ವಾಹನ ಸವಾರರಿಗೂ ಆತಂಕ ಉಂಟಾಗಿದೆ. ಇದನ್ನೂ ಓದಿ: ವಿದ್ಯಾರ್ಥಿಗಳ ಬಾಳಲ್ಲಿ ಶಿಕ್ಷಣ ಸಂಸ್ಥೆಗಳ ಎಡವಟ್ಟು- ಫಲಿತಾಂಶ ಪ್ರಕಟ ವಿಳಂಬ, ವಿದ್ಯಾರ್ಥಿಗಳಿಗೆ ಆತಂಕ

    ಆದ್ದರಿಂದ ನಿತ್ಯ ನೂರೆಂಟು ಕೆಲಸದಲ್ಲಿರುವ ಪೊಲೀಸರ ಮೇಲೆ ಒತ್ತಡ ತರೋದಕ್ಕಿಂತ ಪೋಷಕರು ತಮ್ಮ ಮಕ್ಕಳ ಮೇಲೆ ನಿಗಾವಹಿಸುವಂತೆ ಸಲಹೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರಾತ್ರೋರಾತ್ರಿ ವ್ಹೀಲಿಂಗ್ ಮಾಡುತ್ತಾ ಯುವಕರ ಪುಂಡಾಟ-ನೆಲಮಂಗಲ ಫ್ಲೈಓವರ್‌ನಲ್ಲಿ ಮೋಜು ಮಸ್ತಿ

    ರಾತ್ರೋರಾತ್ರಿ ವ್ಹೀಲಿಂಗ್ ಮಾಡುತ್ತಾ ಯುವಕರ ಪುಂಡಾಟ-ನೆಲಮಂಗಲ ಫ್ಲೈಓವರ್‌ನಲ್ಲಿ ಮೋಜು ಮಸ್ತಿ

    ಬೆಂಗಳೂರು: ನೆಲಮಂಗಲ ಫ್ಲೈಓವರ್ ಮೇಲೆ ಯುವಕರು ವ್ಹೀಲಿಂಗ್ ಮಾಡುತ್ತಾ ಇತರ ವಾಹನಗಳಿಗೆ ತೊಂದರೆ ಕೊಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಬೆಂಗಳೂರಿನಲ್ಲಿ ಸಾಲು ಸಾಲು ರಸ್ತೆ ಅಪಘಾತಗಳಾದರೂ ಯುವಕರು ಬುದ್ಧಿ ಕಲಿಯುತ್ತಿಲ್ಲ. ನಗರದಲ್ಲಿ ಯುವಕರ ಹುಚ್ಚಾಟ ಮುಂದುವರಿದಿದ್ದು, ಪೊಲೀಸರ ಕಣ್ಣು ತಪ್ಪಿಸಿ ರಾತ್ರಿ ವೇಳೆ ಬೈಕ್ ವ್ಹೀಲಿಂಗ್ ನಡೆಸಿ ಮೋಜು ಮಸ್ತಿ ಮಾಡುತ್ತಿದ್ದಾರೆ. ಇದನ್ನೂ ಓದಿ: ದಳ ತೊರೆದು ಕೈ ಹಿಡಿಯಲು ನಿರ್ಧರಿಸಿದ ಕೋಲಾರ ಶಾಸಕ ಶ್ರೀನಿವಾಸಗೌಡ

    ನೆಲಮಂಗಲ ಫ್ಲೈಓವರ್‌ನಲ್ಲಿ ರಾತ್ರಿ ವೇಳೆ ವ್ಹೀಲಿಂಗ್ ಮಾಡುತ್ತಾ 15 ಹುಡುಗರ ತಂಡ ಇತರೆ ವಾಹನ ಸವಾರರಿಗೆ ತೊಂದರೆ ಕೊಟ್ಟಿದ್ದಾರೆ. ಒಂದು ಕಿಲೋಮೀಟರ್ ದಾರಿಯುದ್ದಕ್ಕೂ ವ್ಹೀಲಿಂಗ್ ಮಾಡುತ್ತಾ, ರಸ್ತೆಯಲ್ಲಿ ಚಲಿಸುವ ಇತರ ವಾಹನಗಳಿಗೆ ಸೈಡ್ ಬೀಡದೆ ಪುಂಡಾಟಿಕೆ ನಡೆಸಿದ್ದಾರೆ. ಇದೇ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರು ಚಾಲಕರೊಬ್ಬರು ಯುವಕರ ವ್ಹೀಲಿಂಗ್ ದೃಶ್ಯವನ್ನು ತಮ್ಮ ಮೊಬೈಲ್‍ನಲ್ಲಿ ಚಿತ್ರಿಕರಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಇದೀಗ ವೈರಲ್ ಆಗಿದೆ. ಈ ವೀಡಿಯೋ ಸುಮಾರು ಮೂರ್ನಾಲ್ಕು ದಿನಗಳ ಹಿಂದಿನದು ಎಂದು ಹೇಳಲಾಗಿದೆ.  ಇದನ್ನೂ ಓದಿ: 20 ಕೋಟಿಗೂ ಅಧಿಕ ತೆರಿಗೆ ವಂಚಿಸಿದ್ದಾರೆ ಸೋನು ಸೂದ್: ಆದಾಯ ತೆರಿಗೆ ಇಲಾಖೆ

    ಕೆಲ ದಿನಗಳಲ್ಲಿ ಹಿಂದೆಯಷ್ಟೆ ಯುವಕರ ತಂಡವೊಂದು ವ್ಹೀಲಿಂಗ್ ಮಾಡಿ ಪೊಲೀಸರಿಗೆ ಸಿಕ್ಕಿಬಿದ್ದಿತ್ತು. ಯುವಕರಿಗೆ ಪೊಲೀಸರು ದಂಡ ಹಾಕಿ ಇನ್ನೊಮ್ಮೆ ಈ ರೀತಿ ಮಾಡಬಾರದು ಎಂದು ಎಚ್ಚರಿಕೆಯನ್ನು ಸಹ ಕೊಟ್ಟಿದ್ದಾರೆ. ಆದರೂ ಯುವಕರು ಪದೇ ಪದೇ ಹೈವೆಗಳಲ್ಲಿ ರೀತಿ ವ್ಹೀಲಿಂಗ್ ಮಾಡುತ್ತಿರುವುದು ವಾಹನ ಸವಾರರಿಗೆ ಕಿರಿಕಿರಿಯಾಗಿದ್ದು, ಪೊಲೀಸರು ಯಾವ ರೀತಿಯ ಕ್ರಮ ತೆಗೆದುಕೊಳ್ಳುತ್ತಾರೆ ಕಾದು ನೋಡಬೇಕಿದೆ.

  • ಹೆದ್ದಾರಿಯಲ್ಲಿ ಯುವಕರಿಂದ ಬೈಕ್ ವ್ಹೀಲಿಂಗ್

    ಹೆದ್ದಾರಿಯಲ್ಲಿ ಯುವಕರಿಂದ ಬೈಕ್ ವ್ಹೀಲಿಂಗ್

    – ಪೊಲೀಸರಿಂದ 10 ಬೈಕ್ ವಶ

    ಚಿಕ್ಕಬಳ್ಳಾಪುರ: ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ವ್ಹಿಲಿಂಗ್ ಮಾಡ್ತಿದ್ದವರನ್ನ ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸರು ವಶಕ್ಕೆ ಪಡೆದು, 10 ಬೈಕ್ ಗಳನ್ನ ಜಪ್ತಿ ಮಾಡಿದ್ದಾರೆ.

    ಬೆಂಗಳೂರು – ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ದೇವನಹಳ್ಳಿ ಕಡೆಯಿಂದ ಚಿಕ್ಕಬಳ್ಳಾಪುರ ಮಾರ್ಗವಾಗಿ ಸಂಚಾರ ಮಾಡ್ತಿದ್ದ 15 ಯುವಕರ ಗುಂಪು ಬೈಕ್ ಗಳಲ್ಲಿ ವ್ಹೀಲಿಂಗ್ ಮಾಡ್ತಾ ಇತರೆ ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡ್ತಿದ್ರು. ಅಪಾಯಕಾರಿ ವ್ಹೀಲಿಂಗ್ ಮಾಡುತ್ತಾ ಕೇಕೆ ಶಿಳ್ಳೆ ಹಾಕ್ತಾ ಮೋಜು ಮಸ್ತಿ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಚಿಕ್ಕಬಳ್ಳಾಪುರ ಸಂಚಾರಿ ಠಾಣಾ ಪೊಲೀಸರು ಹೆದ್ದಾರಿಯಲ್ಲಿ ವ್ಹೀಲಿಂಗ್ ಮಾಡುತ್ತಾ ಬರುತ್ತಿದ್ದ ಬೈಕ್ ಗಳನ್ನ ಅಡ್ಡಗಟ್ಟಿದ್ದಾರೆ.

    ಕೆಲವರು ಬೈಕ್ ಸಮೇತ ಎಸ್ಕೇಪ್ ಆಗಲು ಯತ್ನಿಸಿದರೆ, ಕೆಲವರು ಬೈಕ್ ಬಿಟ್ಟು ಪರಾರಿಯಾಗಿದ್ದಾರೆ. ಈ ವೇಳೆ ಚೇಸ್ ಮಾಡಿ ಕೆಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆಯ ಆವರಣದಲ್ಲಿ ಬೈಕ್ ಗಳನ್ನ ಇರಿಸಲಾಗಿದೆ. ಇದನ್ನೂ ಓದಿ: ಚಿಕ್ಕಬಳ್ಳಾಪುರ-ಆರೋಗ್ಯ ಇಲಾಖೆಯ ಒಂದೇ ಕಾರ್​​​ನಲ್ಲಿ 10 ಮಂದಿ ಪ್ರಯಾಣ

    ದುಬಾರಿ ಬೆಲೆಯ ಡ್ಯುಕ್ ಸೇರಿದಂತೆ ಸೇರಿದಂತೆ ಡಿಯೋ ಬೈಕ್ ಗಳನ್ನ ಸೀಝ್ ಮಾಡಲಾಗಿದೆ. ಇನ್ನೂ ಕಳೆದ ವಾರವಷ್ಟೇ ಇದೇ ಹೆದ್ದಾರಿಯಲ್ಲಿ ಕಾರಿಗೆ ಬೈಕ್ ನಲ್ಲಿ ವ್ಹೀಲಿಂಗ್ ಮಾಡ್ತಾ ಚಮಕ್ ಕೊಟ್ಟ ಬೈಕ್ ನ್ನ ಕಾರು ಚಾಲಕ ಸುಟ್ಟು ಹಾಕಿ ಕೋಪ ಹೊರಹಾಕಿದ್ದ. ಇದಾದ ಬೆನ್ನಲ್ಲೇ ಎಚ್ಚೆತ್ತಿರುವ ಪೊಲೀಸರು ಈಗ ಪುಂಡರಿಗೆ ಬ್ರೇಕ್ ಹಾಕಿದ್ದಾರೆ. ಇದನ್ನೂ ಓದಿ: ಚಿಕ್ಕಬಳ್ಳಾಪುರದ ರೇಷ್ಮೆ ಸೀರೆ- ಕುಗ್ರಾಮದ ನೇಕಾರನಿಗೆ ಒಲಿಯಿತು ರಾಜ್ಯ ಮಟ್ಟದ ಪ್ರಶಸ್ತಿ

  • ಬೈಕ್ ಮಾಡ್ಯುಲೇಷನ್ ಮಾಡಿ ವ್ಹೀಲಿಂಗ್- 16 ಮಂದಿ ಅರೆಸ್ಟ್

    ಬೈಕ್ ಮಾಡ್ಯುಲೇಷನ್ ಮಾಡಿ ವ್ಹೀಲಿಂಗ್- 16 ಮಂದಿ ಅರೆಸ್ಟ್

    ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಹೆಚ್ಚಾಯ್ತು ಬೈಕ್ ವ್ಹೀಲಿಂಗ್ ಹಾವಳಿ ಹೆಚ್ಚಾಗುತ್ತಿದ್ದು, ಇದೀಗ ಪೊಲೀಸರು 16 ಮಂದಿಯನ್ನು ಬಂಧಿಸಿದ್ದಾರೆ.

    ಬಂಧಿತರನ್ನು ಇರ್ಷಾದ್, ಉಮ್ರಾಜ್, ರವಿಕುಮಾರ್, ದ್ರಾವಿಡ್, ಪ್ರಶಾಂತ್, ರಂಜಿತ್, ರೆಹಮಾನ್ ಖಾನ್, ಸೈಯದ್ ಸುಲ್ತಾನ್, ಅರ್ಜುನ್, ಮರಿಲಿಂಗ, ಶೇಖ್ ವಾಜಿದ್ ಮತ್ತು ದರ್ಶನ್ ಎಂದು ಗುರುತಿಸಲಾಗಿದೆ. ಸಿಟಿ ಸೆಂಟರ್ ರಸ್ತೆ ಹಾಗೂ ನಗರದ ಬಸವನಗುಡಿಯಲ್ಲೂ ವಾಹನಸವಾರರಿಗೆ ಬೈಕ್ ವ್ಹೀಲಿಂಗ್ ಕಾಟ ಎದುರಾಗಿದೆ. ಸುಮಾರು 16ಕ್ಕೂ ಹೆಚ್ಚು ಮಂದಿಯ ಗ್ಯಾಂಗ್ ಬಸವನಗುಡಿ ಅಂಡರ್ ಪಾಸ್ ನಲ್ಲಿ ವ್ಹೀಲಿಂಗ್ ಮಾಡಿ ಸಿಕ್ಕಿಬಿದ್ದಿದ್ದಾರೆ.

    ಬೈಕ್ ಮಾಡ್ಯುಲೇಷನ್ ಮಾಡ್ಕೊಂಡು ಹಾಡಹಗಲೇ ಅಂಡರ್ ಪಾಸ್ ನಲ್ಲಿ ಪುಂಡರು ವ್ಹೀಲಿಂಗ್ ಮಾಡುತ್ತಿದ್ದರು. ಈ ಗ್ಯಾಂಗ್‍ನಿಂದಾಗಿ ವಾಹನಸವಾರರು ಕೂಡ ಹೈರಾಣಾಗಿದ್ದಾರೆ. ಬಸವನಗುಡಿ ಟ್ರಾಫಿಕ್ ಪೊಲೀಸರು 16 ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರ ಮೇಲೆ ಕೇಸ್ ದಾಖಲು ಮಾಡಲಾಗಿದ್ದು, ಬೈಕ್ ಗಳನ್ನು ಜಪ್ತಿ ಮಾಡಿದ್ದಾರೆ.

    ಬೈಕ್ ಮಾಡುಲೇಷನ್ ಮಾಡಿದ ಗ್ಯಾರೇಜ್ ಮಾಲೀಕರಿಗೂ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಸೈಲೆನ್ಸರ್ ಡೆಕೋರೇಟ್ ಮಾಡಿ ಕೊಟ್ಟಿದ್ದಕ್ಕೆ ಕೇಸ್ ಹಾಕಿದ್ದಾರೆ.

  • ಬೆಂಗ್ಳೂರು-ತುಮಕೂರು ಹೈವೇಯಲ್ಲಿ ವ್ಹೀಲಿಂಗ್ – ಪೊಲೀಸರಿಗೂ ಹೆದರದೇ ಬ್ಯುಸಿ ರೋಡ್‍ನಲ್ಲಿ ಡೇಂಜರಸ್ ಸರ್ಕಸ್

    ಬೆಂಗ್ಳೂರು-ತುಮಕೂರು ಹೈವೇಯಲ್ಲಿ ವ್ಹೀಲಿಂಗ್ – ಪೊಲೀಸರಿಗೂ ಹೆದರದೇ ಬ್ಯುಸಿ ರೋಡ್‍ನಲ್ಲಿ ಡೇಂಜರಸ್ ಸರ್ಕಸ್

    ಬೆಂಗಳೂರು: ಯುವಕರಿಗೆ ಪುಂಡಾಟವಾದ್ರೆ, ರೋಡಲ್ಲಿ ಓಡಾಡೋ ಅಮಾಯಕ ಜೀವಗಳಿಗೆ ಪ್ರಾಣಸಂಕಟ. ಯಾಕಂದ್ರೆ ರಾತ್ರಿ ಹೊತ್ತು ಯುವಕರು ವ್ಹೀಲಿಂಗ್ ಮಾಡುತ್ತಾರೆ.

    ಹೌದು. ರಾಷ್ಟ್ರೀಯ ಹೆದ್ದಾರಿಗಳಲ್ಲಿ ದಿನದ 24 ಗಂಟೆಯೂ ವಾಹನಗಳು ಸಂಚರಿಸುತ್ತಲೇ ಇರುತ್ತವೆ. ಕೆಲ ಪುಂಡ ಯುವಕರು ಕೂಡ ಇದೇ ಹೆದ್ದಾರಿಯಲ್ಲಿ ವ್ಹೀಲಿಂಗ್ ಮಾಡುವ ಮೂಲಕ ವಾಹನ ಸವಾರರಿಗೆ ಅಡ್ಡಿಯುಂಟು ಮಾಡುತ್ತಿದ್ದಾರೆ.

    ಭಾನುವಾರ ರಾತ್ರಿಯೂ ನೆಲಮಂಗಲದ ತುಮಕೂರು ರಸ್ತೆಯಲ್ಲಿ ವ್ಹೀಲಿಂಗ್ ಮಾಡಿದ ಪುಂಡರು ವಾಹನ ಸವಾರರಿಗೆ ಕಿರಿಕ್ ಮಾಡಿದ್ದಾರೆ. ಪುಂಡ ಯುವಕರ ಗುಂಪು ಹೀಗೆ ವ್ಹೀಲಿಂಗ್ ಮಾಡುತ್ತಿದ್ದರೆ, ಗಸ್ತು ತಿರುಗುವ ಪೊಲೀಸರು ಏನು ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

  • ನಿಲ್ಲದ ಪಡ್ಡೆ ಹುಡ್ಗರ ಬೈಕ್ ವ್ಹೀಲಿಂಗ್- 6 ಯುವಕರು ಅರೆಸ್ಟ್

    ನಿಲ್ಲದ ಪಡ್ಡೆ ಹುಡ್ಗರ ಬೈಕ್ ವ್ಹೀಲಿಂಗ್- 6 ಯುವಕರು ಅರೆಸ್ಟ್

    ಬೆಂಗಳೂರು: ಬೈಕ್ ವ್ಹೀಲಿಂಗ್ ಮಾಡಬಾರದೆಂದು ಎಷ್ಟೇ ಜಾಗೃತಿ ಮೂಡಿಸಿದ್ರೂ ಪಡ್ಡೆ ಹುಡುಗರ ಬೈಕ್ ವ್ಹೀಲಿಂಗ್ ಕ್ರೇಜ್ ಮಾತ್ರ ನಿಂತಿಲ್ಲ. ಹೀಗಾಗಿ ಸಿಲಿಕಾನ್ ಸಿಟಿಯಲ್ಲಿ ಇದೀಗ ಆರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ:ಎಚ್ಚರ: ಬೈಕ್ ವ್ಹೀಲಿಂಗ್ ಮಾಡಿ ಫೇಸ್‍ಬುಕ್ ಗೆ ಹಾಕಿದ್ರೆ ಬಂಧಿಸ್ತಾರೆ ಪೊಲೀಸ್ರು!

    ರಾತ್ರಿ ವೇಳೆ ನೈಸ್ ರೋಡ್ ಮತ್ತು ಮೈಸೂರು ರಸ್ತೆಯಲ್ಲಿ ವ್ಹೀಲಿಂಗ್ ಮಾಡ್ತಿದ್ದ ಯುವಕರನ್ನು ಬ್ಯಾಟರಾಯನಪುರ ಸಂಚಾರಿ ಪೊಲೀಸರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಅಲ್ಲದೇ ಬಂಧಿತ ಯುವಕರಿಂದ ಬೈಕ್ ಗಳನ್ನು ಕೂಡ ಜಪ್ತಿ ಮಾಡಿದ್ದಾರೆ. ಇದನ್ನೂ ಓದಿ: ಬೈಕ್ ವ್ಹೀಲಿಂಗ್ ಮಾಡಿ ಫೇಸ್‍ಬುಕ್ ಪೋಸ್ಟ್ ಮಾಡಿದ್ದ ಮತ್ತೊಬ್ಬ ಬಾಲಕ ಅರೆಸ್ಟ್!

    ಬೆಂಗಳೂರು ಸಂಚಾರಿ ಪೊಲೀಸರು ವ್ಹೀಲಿಂಗ್ ಗೆ ಬ್ರೇಕ್ ಹಾಕಲು ವಿಶೇಷ ಕಾರ್ಯಾಚರಣೆ ಆರಂಭಿಸಿದ್ದರು. ಇತ್ತೀಚೆಗೆ ಏರ್ ಪೋರ್ಟ್ ರೋಡಲ್ಲಿ ವ್ಹೀಲಿಂಗ್ ಮಾಡುತ್ತಿದ್ದ ವಿಡಿಯೋ ಮಾಡಿ ಬಳಿಕ ಅದನ್ನು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದ ಅಸಾಮಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದರು. ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಸಿಲಿಕಾನ್ ಸಿಟಿಯಲ್ಲಿ ಬೈಕ್ ವ್ಹೀಲಿಂಗ್ – ಪೊಲೀಸ್ ಸ್ಟೇಷನ್ ಮುಂದೆಯೇ ಸರ್ಕಸ್

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬೈಕ್ ವ್ಹೀಲಿಂಗ್ ಮಾಡಿ ಫೇಸ್‍ಬುಕ್ ಪೋಸ್ಟ್ ಮಾಡಿದ್ದ ಮತ್ತೊಬ್ಬ ಬಾಲಕ ಅರೆಸ್ಟ್!

    ಬೈಕ್ ವ್ಹೀಲಿಂಗ್ ಮಾಡಿ ಫೇಸ್‍ಬುಕ್ ಪೋಸ್ಟ್ ಮಾಡಿದ್ದ ಮತ್ತೊಬ್ಬ ಬಾಲಕ ಅರೆಸ್ಟ್!

    ಬೆಂಗಳೂರು: ಬೈಕ್ ವ್ಹೀಲಿಂಗ್ ಮಾಡಿ ಫೇಸ್‍ಬುಕ್ ಪೋಸ್ಟ್ ಮಾಡಿದ್ದ ಬಾಲಕನನ್ನು ಆರ್.ಟಿ ನಗರ ಸಂಚಾರಿ ಪೊಲೀಸರು ಬಂಧಿಸಿದ್ದಾರೆ.

    ಬಾಲಕ ಬೈಕ್ ವ್ಹೀಲಿಂಗ್ ಮಾಡಿ ಫೇಸ್ ಬುಕ್‍ನಲ್ಲಿ ಪೋಸ್ಟ್ ಹಾಕಿದ್ದನು. ಫೇಸ್ ಬುಕ್ ಪೋಸ್ಟ್ ಆಧರಿಸಿ ಆರ್.ಟಿ ನಗರ ಸಂಚಾರಿ ಪೊಲೀಸರು ಬೈಕ್ ವ್ಹೀಲಿಂಗ್ ಮಾಡುತ್ತಿದ್ದ ಬಾಲಕನನ್ನು ಬಂಧಿಸಿದ್ದಾರೆ. ಆರ್.ಟಿ ನಗರದ ಡಾಲರ್ಸ್ ಕಾಲೋನಿಯ 1ನೇ ಮುಖ್ಯರಸ್ತೆಯ ಬಳಿ ಬಾಲಕ ವ್ಹೀಲಿಂಗ್ ಮಾಡಿದ್ದು, ನಂತರ ಫೋಟೋವನ್ನು ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದನು. ಫೇಸ್‍ಬುಕ್ ಪೋಸ್ಟ್ ನೋಡಿದ ಪೊಲೀಸರು ಬಾಲಕನ ಮನೆಗೆ ಹೋಗಿ ಆತನನ್ನು ಬಂಧಿಸಿದ್ದಾರೆ.

    ವ್ಹೀಲಿಂಗ್ ವೇಳೆ ಬಾಲಕ ಬಳಸಿದ್ದ ಯಮಹ ಬೈಕ್‍ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಾಲಕ ಅಪ್ರಾಪ್ತನಾಗಿರುವುದರಿಂದ ಪೋಷಕರ ಮೇಲೂ ಆರ್.ಟಿ ನಗರ ಸಂಚಾರಿ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ. ಸದ್ಯ ಆರ್.ಟಿ ನಗರ ಪೊಲೀಸ್ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಯುವಕರ ಅಪಾಯಕಾರಿ ಬೈಕ್ ವ್ಹೀಲಿಂಗ್ ಹಾವಳಿ ಹೆಚ್ಚಾಗುತ್ತಿದ್ದ ಹಿನ್ನೆಲೆಯಲ್ಲಿ ವಿಶೇಷವಾಗಿ ಪೊಲೀಸ್ ತಂಡವೊಂದು ರಚನೆಯಾಗಿದೆ. ಈ ಪೊಲೀಸ್ ತಂಡ ವ್ಹೀಲಿಂಗ್ ಮಾಡಿ ಅದನ್ನು ಫೇಸ್‍ಬುಕ್ ಗೆ ಪೋಸ್ಟ್ ಮಾಡಿದರೆ ಅವರನ್ನು ಬಂಧಿಸುತ್ತಾರೆ. ಈಗಾಗಲೇ ಆರ್.ಟಿ ನಗರ ಸಂಚಾರಿ ಪೊಲೀಸರಿಂದ ಬೈಕ್ ವ್ಹೀಲಿಂಗ್ ಮಾಡುತ್ತಿದ್ದ ಬಾಲಕನನ್ನು ವಶಕ್ಕೆ ಪಡೆದುಕೊಂಡಿದ್ದರು.

    ಬಾಲಕ ಆರ್.ಟಿ ನಗರದ ಮುಖ್ಯ ರಸ್ತೆಯ ಕಬಾಬ್ ಮ್ಯಾನರ್ ಹೊಟೆಲ್ ಬಳಿ ವ್ಹೀಲಿಂಗ್ ಮಾಡುತ್ತಿದ್ದನು. ನಂತರ ವ್ಹೀಲಿಂಗ್ ಮಾಡಿದ್ದ ತನ್ನ ಫೋಟೋವನ್ನ ಫೇಸ್ ಬುಕ್‍ನಲ್ಲಿ ಅಪ್ಲೋಡ್ ಮಾಡಿದ್ದನು. ಇದನ್ನು ಗಮನಿಸಿದ ಪೊಲೀಸರು ಫೇಸ್‍ಬುಕ್ ಪೋಸ್ಟ್ ನೋಡಿ ಬಾಲಕನ ಮನೆಗೆ ಬಂದು ಪೋಷಕರಿಗೆ ನೋಟೀಸ್ ಕೊಟ್ಟಿದ್ದಾರೆ. ಈ ಸಂಬಂಧ ಆರ್.ಟಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವ್ಹೀಲಿಂಗ್ ವೇಳೆ ಬಾಲಕ ಬಳಸಿದ್ದ ಡಿಯೋ ಬೈಕನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews