Tag: ಬೈಕ್ ವೀಲ್ಹಿಂಗ್

  • ಬೆಂಗ್ಳೂರಿನಲ್ಲಿ ನಿಲ್ಲದ ವೀಲ್ಹಿಂಗ್ ಪುಂಡರ ಹಾವಳಿ – ಪೊಲೀಸರಿಗೂ ಡೋಂಟ್‌ ಕೇರ್‌

    ಬೆಂಗ್ಳೂರಿನಲ್ಲಿ ನಿಲ್ಲದ ವೀಲ್ಹಿಂಗ್ ಪುಂಡರ ಹಾವಳಿ – ಪೊಲೀಸರಿಗೂ ಡೋಂಟ್‌ ಕೇರ್‌

    ಬೆಂಗಳೂರು: ಬೈಕ್ ಕ್ರೇಜ್ ಅನ್ನೋದು ಎಲ್ಲ ಯುವಕರಿಗೂ ಇದ್ದೆ ಇರುತ್ತೆ. ತಂದೆ ತಾಯಿ ಬಳಿ ಹೇಗೋ ಕಾಡಿ ಬೇಡಿ ಬೈಕ್ ತಗೆಸಿಕೊಳ್ಳುತ್ತಾರೆ. ಆದರೇ ಅದರಲ್ಲಿ ಅದೆಷ್ಟೋ ಯುವಕರು ಬೈಕ್ ನಲ್ಲಿ ಸ್ಟಂಟ್ಸ್ ಮಾಡೋ ಹುಚ್ಚು ಸಾಹಸಕ್ಕೆ ಹೋಗಿ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಅದ್ರೂ ಇನ್ನೂ ಬುದ್ಧಿ ಕಲಿಯದ ಇತಂಹ ಯುವಕರು ವೀಲ್ಹಿಂಗ್ ಮಾಡಿ ಬೇರೆ ವಾಹನ ಸವಾರರಿಗೂ ಕಿರಿಕಿರಿ ಮಾಡ್ತಿದ್ದಾರೆ.

    ಪುಂಡ ಯುವಕರು ವೀಲ್ಹಿಂಗ್ ಮಾಡೋ ಸಮಯದಲ್ಲಿ ಸಾರ್ವಜನಿಕರು ಆರ್ನ್ ಸಹ ಮಾಡುವಂತಿಲ್ಲ. ಮಾಡಿದ್ರೂ ಅವರ ವಿರುದ್ಧವೇ ಮುಗಿ ಬೀಳ್ತಾರೆ. ದನ್ನೂ ಓದಿ: ಕಾರಿಗೆ ಡಿಕ್ಕಿ ಹೊಡೆದಿದ್ದಕ್ಕೆ ರಿಕ್ಷಾ ಚಾಲಕನ ಕಾಲರ್ ಎಳೆದಾಡಿ ಕಪಾಳಮೋಕ್ಷ ಮಾಡಿದ್ಲು

    ಪೊಲೀಸರ ಭಯವಿಲ್ಲದೇ ವೀಲ್ಹಿಂಗ್‌: ಬೈಕ್‌ಗಳಿಗೆ ಎರಡು ವೀಲ್ ಕೊಟ್ಟಿರೋದು ಯಾಕೇ ಅನ್ನೋ ಪ್ರಶ್ನೆ ಇತಂಹ ಯುವಕರು ಬೈಕ್ ಓಡಿಸುವಾಗ ಮೂಡದೇ ಇರದು. ತಮ್ಮ ಹುಚ್ಚಾಟಕ್ಕೆ ಅಕ್ಕಪಕ್ಕ ಬರೋ ವಾಹನ ಸವಾರರಿಗೂ ಆತಂಕ ಮೂಡಿಸುತ್ತಾ ಬೈಕ್ ರೈಡ್ ಮಾಡ್ತಾರೆ. ವೀಲ್ಹಿಂಗ್ ಮಾಡಿ ಅದೆಷ್ಟೋ ಯುವಕರು ಕೈಕಾಲು ಮುರಿದುಕೊಂಡಿದ್ದಾರೆ, ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಇನ್ನೂ ಬೇರೆ ವಾಹನಗಳಿಗೂ ಸಮಸ್ಯೆ ಉಂಟುಮಾಡಿದ್ದಾರೆ.

    ಹೌದು ನಿನ್ನೆ ಮಧ್ಯಾಹ್ನ ಯಶವಂತಪುರದಿಂದ ವಿಜಯನಗರಕ್ಕೆ ಹೋಗುವ ವೆಸ್ಟ್ ಆಫ್ ಗಾರ್ಡ್ ರೋಡ್ ನಲ್ಲಿ ಎರಡು ಬೈಕ್ ಗಳಲ್ಲಿ ಹೋಗ್ತಿದ್ದ ನಾಲ್ವರು ಯುವಕರ ತಂಡ ವೀಲ್ಹಿಂಗ್ ಮಾಡ್ತಾ ರಸ್ತೆಯಲ್ಲಿ ಹುಚ್ಚಾಟ ಆಡ್ತ ಹೋಗಿದ್ದಾರೆ. ಇದನ್ನೂ ಓದಿ: 5,000 ರೂಪಾಯಿಯಿಂದ ಕೋಟ್ಯಧಿಪತಿಯಾದ ಜುಂಜುನ್‌ವಾಲ ಜೀವನ ರೋಚಕ

    ಇತಂಹ ವೀಲ್ಹಿಂಗ್ ನಿಂದ ಅವ್ರ ಜೀವಕ್ಕೆ ಮಾತ್ರವಲ್ಲ ರಸ್ತೆಯಲ್ಲಿ ಸಂಚಾರ ಮಾಡೋ ಇತರ ವಾಹನ ಸವಾರರಿಗೂ ಜೀವ ಭಯ ಸೃಷ್ಟಿಯಾಗ್ತಿದೆ. ಹೌದು ಹೀಗೆ ವೀಲ್ಹಿಂಗ್ ಮಾಡೋದನ್ನ ತಡೆಯಲು ಪೊಲೀಸ್ರು ಸಾಕಷ್ಟು ಕ್ರಮ ಕೈಗೊಂಡಿದ್ರು. ಇತಂಹ ಯುವಕರು ಮಾತ್ರ ಯಾವುದಕ್ಕೂ ಕ್ಯಾರೇ ಎನ್ನುತ್ತಿಲ್ಲ. ಇವರಿಗೆ ಪೊಲೀಸರು ಫೈನ್ ಹಾಕೋದರ ಜೊತೆಗೆ ಕಠಿಣ ಶಿಕ್ಷೆ ನೋಡೋ ಕಾನೂನು ಜಾರಿಗೆ ತಂದ್ರೇ ಆಗಲಾದ್ರು ಕಡಿವಾಣ ಬೀಳಬಹುದು ಅನ್ನೋದು ಸಾರ್ವಜನಿಕರ ಅಭಿಪ್ರಾಯವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಬೈಕ್ ವೀಲಿಂಗ್ ಮಾಡುತ್ತಾ ಬಂದ ಪುಂಡರ ಚಳಿ ಬಿಡಿಸಿದ ಎಸ್‍ಪಿ

    ಬೈಕ್ ವೀಲಿಂಗ್ ಮಾಡುತ್ತಾ ಬಂದ ಪುಂಡರ ಚಳಿ ಬಿಡಿಸಿದ ಎಸ್‍ಪಿ

    ಶಿವಮೊಗ್ಗ: ನಗರದಲ್ಲಿ ಗಾಂಜಾ ಮತ್ತರಾಗಿ ಡ್ಯೂಕ್ ಬೈಕ್ ಗಳಲ್ಲಿ ವೀಲಿಂಗ್ ಮಾಡುತ್ತಾ ಬಂದ ಪುಂಡರಿಗೆ ಶಿವಮೊಗ್ಗ ಎಸ್ಪಿ ಅಭಿನವ್ ಖರೆ ರಸ್ತೆ ಮಧ್ಯದಲ್ಲೇ ಚಳಿಜ್ವರ ಬಿಡಿಸಿದ್ದಾರೆ.

    ಭದ್ರಾವತಿ ಮಾರ್ಗದಲ್ಲಿ ವೀಲಿಂಗ್ ಮಾಡುತ್ತಾ ಎರಡು ಬೈಕ್ ಗಳಲ್ಲಿ ಬಂದಿದ್ದಾರೆ. ಹೀಗೆ ಬರುವಾಗ ಈ ಪುಂಡರು ಈ ಮಾರ್ಗದಲ್ಲಿ ಬಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಗಳಿಗೆ ಅಡ್ಡಾದಿಡ್ಡಿ ಬೈಕ್ ಓಡಿಸುತ್ತಿದ್ದರು. ಅಷ್ಟೇ ಅಲ್ಲದೇ ಮಲವಗೊಪ್ಪ ಬಳಿ ಒಂದು ಬಸ್ ಗೆ ಅಡ್ಡ ಹಾಕಿ ಪ್ರಯಾಣಿಕರ ಎದುರೇ ಚಾಲಕನನ್ನು ಥಳಿಸಿದ್ದಾರೆ.

    ಈ ಬಗ್ಗೆ ಮಾಹಿತಿ ಪಡೆದ ಗ್ರಾಮಸ್ಥರು ಹಾಗೂ ಇನ್ನಿತರ ಬಸ್ ಗಳ ಚಾಲಕರು ಹರಿಗೆ ಬಸ್ ನಿಲ್ದಾಣದ ಬಳಿ ಯುವಕರನ್ನು ಹಿಡಿದಿದ್ದಾರೆ. ಈ ವೇಳೆಯೂ ಚಾಲಕರ ಮೇಲೆ ಯುವಕರು ಹಲ್ಲೆಗೆ ಯತ್ನಿಸಿದ್ದಾರೆ. ಆಗ ಡ್ರೈವರ್ ಗಳು ಹಾಗೂ ಚಾಲಕರು ಯುವಕರನ್ನು ಥಳಿಸಿದ್ದಾರೆ. ಅಷ್ಟರಲ್ಲೇ ಅದೇ ಮಾರ್ಗದಲ್ಲಿ ಬಂದ ಎಸ್ಪಿ ಅಭಿನವ್ ಖರೆ, ಈ ಪುಂಡರನ್ನು ಹಿಡಿದು ಹೊಡೆದಿದ್ದಾರೆ.

    ಈ ವೇಳೆ ಯುವಕರು ತಕ್ಷಣ ಪರಾರಿ ಆಗಲು ಯತ್ನಿಸಿದ್ದು, ಒಬ್ಬ ಯುವಕನ್ನು ಎಸ್ಪಿ ಅವರೇ ಹಿಡಿದಿದ್ದಾರೆ. ಬಳಿಕ ಕೂಡಲೇ ಪೊಲೀಸ್ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿ, ಪುಂಡರನ್ನು ಠಾಣೆಗೆ ಕಳುಹಿಸಿದ್ದಾರೆ. ಈ ಬಗ್ಗೆ ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.