Tag: ಬೈಕ್ ವೀಲಿಂಗ್

  • ಬೈಕ್ ವ್ಹೀಲಿಂಗ್ ಪ್ರಶ್ನಿಸಿದ್ದಕ್ಕೆ ಪೊಲೀಸರ ಮೇಲೆಯೇ ಹಲ್ಲೆ – ಆರೋಪಿಗಳ ಅರೆಸ್ಟ್

    ಬೈಕ್ ವ್ಹೀಲಿಂಗ್ ಪ್ರಶ್ನಿಸಿದ್ದಕ್ಕೆ ಪೊಲೀಸರ ಮೇಲೆಯೇ ಹಲ್ಲೆ – ಆರೋಪಿಗಳ ಅರೆಸ್ಟ್

    ಕೊಪ್ಪಳ: ಬೈಕ್ ವ್ಹೀಲಿಂಗ್ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಮೂವರು ಬೈಕ್ ಸವಾರರು ಪೊಲೀಸರ ಮೇಲೆ ನಡು ರಸ್ತೆಯಲ್ಲೇ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಗಂಗಾವತಿ (Gangavathi) ತಾಲೂಕಿನ ದಾಸನಾಳ ಗ್ರಾಮದ ತುಂಗಭದ್ರಾ ಕಾಲುವೆ ಸೇತುವೆಯ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ನಡೆದಿದೆ.

    ಬಂಧಿತ ಆರೋಪಿಗಳನ್ನು ಗಂಗಾವತಿ ನಗರದ ನಿವಾಸಿಗಳಾದ ಅರ್ಭಾಜ್, ಪಂಪನಗೌಡ, ವೆಂಕಟೇಶ ಎಂದು ಗುರುತಿಸಲಾಗಿದ್ದು, ಗಂಗಾವತಿ ಗ್ರಾಮೀಣ ಪೊಲೀಸ್ ಮುಖ್ಯಪೇದೆ ಬಸವರಾಜ, ಚಾಲಕ ಕನಕಪ್ಪ ಅವರ ಮೇಲೆ ಹಲ್ಲೆ ನಡೆದಿದೆ.ಇದನ್ನೂ ಓದಿ:ಮುಖ್ಯಮಂತ್ರಿ ಬದಲಾವಣೆ ಇಲ್ಲ, ಸಿಎಂ ಬದಲಾವಣೆ ಕೇವಲ ಊಹಾಪೋಹ: ಸತೀಶ್ ಜಾರಕಿಹೊಳಿ

    ಗಂಗಾವತಿ ತಾಲೂಕಿನ ಹೇಮಗುಡ್ಡದ ದುರ್ಗಾದೇವಿ ದಸರಾ ಮಹೋತ್ಸದ ಪಾರ್ಕಿಂಗ್ ವ್ಯವಸ್ಥೆ ನೋಡಿಕೊಂಡು, ಪೊಲೀಸರು ಗಂಗಾವತಿ ಕಡೆಗೆ ಬರುತ್ತಿದ್ದರು. ಇದನ್ನು ನೋಡಿದ ಆರೋಪಿಗಳು ಆರ್‌ಎಕ್ಸ್ ಬೈಕ್‌ನ್ನು ವ್ಹೀಲಿಂಗ್ ಮಾಡಿಕೊಂಡು ಪೊಲೀಸರ ವಾಹನದ ಬಲ ಭಾಗದಿಂದ ಓವರ್ ಟೇಕ್ ಮಾಡಿದ್ದಾರೆ. ಇದನ್ನು ಕಂಡ ಪೊಲೀಸರು ನಿಲ್ಲುವಂತೆ ಹೇಳಿದ್ದು, ಅಷ್ಟರಲ್ಲೇ ಆಯತಪ್ಪಿ ಬೈಕ್ ಕೆಳಗೆ ಬಿದ್ದಿದೆ. ಕೂಡಲೇ ತಮ್ಮ ವಾಹನದಿಂದ ಕೆಳಗಿಳಿದು ಬಂದಿರುವ ಪೊಲೀಸರು ಆರೋಪಿಗಳಿಗೆ ಬೈಕ್ ಸೈಡ್‌ಗೆ ಹಾಕುವಂತೆ ಸೂಚಿಸಿದ್ದು, ತಾವೇ ಬೈಕ್ ಎತ್ತಿಕೊಳ್ಳಲು ಮುಂದಾಗಿದ್ದಾರೆ.

    ಇದರಿಂದ ಆಕ್ರೋಶಗೊಂಡ ಅರ್ಭಾಜ್, ಪಂಪನಗೌಡ ಮತ್ತು ವೆಂಕಟೇಶ ಏಕಾಏಕಿ ಹಲ್ಲೆ ಮಾಡಲು ಮುಂದಾಗಿದ್ದಾರೆ. ಘಟನೆಯನ್ನು ವಿಡಿಯೋ ಮಾಡಲು ಮುಂದಾದ ಮುಖ್ಯಪೇದೆ ಬಸವರಾಜನ ಮೊಬೈಲ್ ಕಿತ್ತುಕೊಂಡು ಕಾಲುವೆಗೆ ಎಸೆದಿದ್ದಾರೆ. ಬಳಿಕ ದುಷ್ಕರ್ಮಿಗಳು ಅವರ ಮೇಲೆಯೂ ಹಲ್ಲೆ ಮಾಡಿದ್ದಾರೆ.

    ಮೂವರು ದುಷ್ಕರ್ಮಿಗಳು ಸೇರಿಕೊಂಡು ಇಬ್ಬರು ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ. ಕೂಡಲೇ ಮತ್ತಷ್ಟು ಪೊಲೀಸರನ್ನು ಸ್ಥಳಕ್ಕೆ ಕರೆಯಿಸಿಕೊಂಡು, ಆರೋಪಿಗಳನ್ನು ಬೈಕ್ ಸಮೇತ ಪೊಲೀಸ್ ಠಾಣೆಗೆ ಕರೆತರಲಾಗಿದೆ. ಹಲ್ಲೆಗೆ ಒಳಗಾದ ಇಬ್ಬರು ಪೊಲೀಸರು ಗಂಗಾವತಿ ಉಪವಿಭಾಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಇದನ್ನೂ ಓದಿ: ನಾರಿಮಣಿಯರ ಗಮನ ಸೆಳೆದ ಕಟೌಟ್ ಪ್ಯಾಂಟ್‌ಸೂಟ್

  • ಪೊಲೀಸರಿಗೇ ಚಳ್ಳೆಹಣ್ಣು – ನಂಬರ್ ಪ್ಲೇಟ್ ತೆಗೆದಿಟ್ಟು, ಬೈಕ್ ವೀಲಿಂಗ್

    ಪೊಲೀಸರಿಗೇ ಚಳ್ಳೆಹಣ್ಣು – ನಂಬರ್ ಪ್ಲೇಟ್ ತೆಗೆದಿಟ್ಟು, ಬೈಕ್ ವೀಲಿಂಗ್

    ಬೆಂಗಳೂರು: ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುವ ಖತರ್ನಾಕ್ ಟೀಮ್ ಒಂದು ಬೆಂಗಳೂರು ಹೊರವಲಯದಲ್ಲಿ ಪುಲ್ ಆಕ್ಟೀವ್ ಆಗಿದೆ. ಒಂದೇ ಕೈಯಲ್ಲಿ ಭಯಾನಕ ವೀಲಿಂಗ್ ಮಾಡುವುದಲ್ಲದೇ ನಂಬರ್ ಪ್ಲೇಟ್ ಇಲ್ಲದೆ ಬೈಕ್ ರೈಡ್ ಮಾಡುವ ಈ ಪುಂಡರ ಗ್ಯಾಂಗ್ ಜನರಲ್ಲಿ ಆತಂಕ ಮೂಡಿಸಿದೆ.

    ನಂಬರ್ ಪ್ಲೇಟ್ ಇದ್ರೆ ಪೊಲೀಸರಿಗೆ ಮಾಹಿತಿ ಸಿಗುತ್ತದೆ ಎಂದು ನಂಬರ್ ಪ್ಲೇಟ್ ತೆಗೆದಿಟ್ಟು, ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಭಯಾನಕವಾಗಿ ರಾತ್ರಿ ವೇಳೆಯಲ್ಲಿ ಬೈಕ್ ವೀಲಿಂಗ್ ಮಾಡುತ್ತಾರೆ. ಇದನ್ನೂ ಓದಿ: ಖಾಸಗಿ ಬಸ್, ಕಂಟೈನರ್ ಮುಖಾಮುಖಿ- 6ಕ್ಕೂ ಹೆಚ್ಚು ಮಂದಿ ಸಜೀವ ದಹನ

    ನೆಲಮಂಗಲ ತಾಲೂಕಿನ ರಾಷ್ಟ್ರೀಯ ರಸ್ತೆಯಲ್ಲಿ ವೀಲಿಂಗ್ ಮಾಡುವ ಪುಂಡರ ಹಾವಳಿಗೆ ಅಕ್ಕಪಕ್ಕದ ವಾಹನ ಸವಾರರು ಜೀವ ಭಯದಲ್ಲಿ ಓಡಾಡುವಂತಾಗಿದೆ. ಪುಂಡರು ಪೊಲೀಸರ ಭಯವಿಲ್ಲದೆ ಹೆದ್ದಾರಿಯಲ್ಲಿ ಭಯಾನಕ ಬೈಕ್ ವೀಲಿಂಗ್ ಮಾಡುವುದಲ್ಲದೇ ಅದರ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದಾರೆ. ಇದನ್ನೂ ಓದಿ: 2 ವರ್ಷದಿಂದ ಬಗೆಹರಿಯದ ಮಂಡ್ಯ ವ್ಯಕ್ತಿಯ ಸಮಸ್ಯೆಗೆ ಎರಡೇ ದಿನದಲ್ಲಿ ಪರಿಹಾರ ಕೊಟ್ಟ ಮೋದಿ

    ಇದೀಗ ಪುಂಡರ ಖತರ್ನಾಕ್ ಕೆಲಸಕ್ಕೆ ಬ್ರೇಕ್ ಹಾಕಬೇಕಾಗಿ ಜನರು ಆಗ್ರಹಿಸಿದ್ದಾರೆ.

  • ಯುವಕರ ಬೈಕ್ ವೀಲಿಂಗ್‍ಗೆ ಬ್ರೇಕ್- 37 ಬೈಕ್ ಗಳನ್ನು ಸೀಜ್ ಮಾಡಿದ ಪೊಲೀಸರು

    ಯುವಕರ ಬೈಕ್ ವೀಲಿಂಗ್‍ಗೆ ಬ್ರೇಕ್- 37 ಬೈಕ್ ಗಳನ್ನು ಸೀಜ್ ಮಾಡಿದ ಪೊಲೀಸರು

    ತುಮಕೂರು: ಜಿಲ್ಲೆಯ ಶಿರಾದಲ್ಲಿ ಯುವಕರ ಬೈಕ್ ವೀಲಿಂಗ್ ಕ್ರೇಜ್ ಸಾರ್ವಜನಿಕರಿಗೆ ತಲೆನೋವಾಗಿ ಪರಿಣಮಿಸಿತ್ತು. ವೀಲಿಂಗ್ ಪರಿಣಾಮ ಪ್ರತಿದಿನ ಒಂದಲ್ಲಾ ಒಂದು ಅಪಘಾತಗಳು ನಡೆಯುತ್ತಿತ್ತು ಈಗ ವೀಲಿಂಗ್ ಪುಂಡರಿಗೆ ಪೊಲೀಸರು ಬ್ರೇಕ್ ಹಾಕಿದ್ದಾರೆ. ಬೈಕ್ ವೀಲಿಂಗ್ ಮಾಡುತ್ತಿದ್ದ ಯುವಕರ ಸಹಿತ 37 ಬೈಕ್ ಗಳನ್ನ ಪೊಲೀಸರು ಸೀಜ್ ಮಾಡಿದ್ದಾರೆ.

    ಶಿರಾನಗರ ಹಾಗೂ ರಾಷ್ಟ್ರೀಯ ಹೆದ್ದಾರಿ 04ರಲ್ಲಿ ವ್ರೂಂ… ವ್ರೂಂ… ಅಂತಾ ಕ್ರೇಜಿ ಬಾಯ್ಸ್ ಪಡೆ ಬೈಕ್ ವೀಲಿಂಗ್ ನಡೆಸಿ ಹಲವರ ಪ್ರಾಣಕ್ಕೆ ಸಂಚಕಾರ ತಂದಿದ್ದರು. ವೀಲಿಂಗ್ ಮಾಡುವ ಭರದಲ್ಲಿ ಚಿಗುರು ಮೀಸೆಯ ಯುವಕರು ಹೈವೇ ಎನ್ನದೇ, ಜನನಿಬಿಡ ರಸ್ತೆ ಎನ್ನದೇ ಅಡ್ಡಾದಿಡ್ಡಿಯಾಗಿ ವೀಲಿಂಗ್ ಮಾಡುತ್ತಾ ಶೋ ಕೊಡುತ್ತಿದ್ದರು. ಇವರ ವೀಲಿಂಗ್ ಕಾಟಕ್ಕೆ ಹಲವಾರು ಅಪಘಾತಗಳು ನಡೆದು ಕೆಲ ಜೀವಗಳೂ ಬಲಿಯಾಗಿವೆ. ಇದರಿಂದ ಎಚ್ಚೆತ್ತುಕೊಂಡ ಶಿರಾನಗರ ಪೊಲೀಸರು ಬೈಕ್ ವೀಲಿಂಗ್‍ಗೆ ಬ್ರೇಕ್ ಹಾಕಿದ್ದಾರೆ. ವೀಲಿಂಗ್ ಮಾಡುತ್ತಿದ್ದ 37 ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ. 37 ಯುವಕರ ಮೇಲೂ ಕೇಸ್ ಹಾಕಲಾಗಿದೆ.

    ಕೇವಲ ಬೈಕ್ ವೀಲಿಂಗ್ ಶೂರರಿಗೆ ಮಾತ್ರ ಬ್ರೇಕ್ ಬಿದ್ದಿಲ್ಲ. ಅಪ್ರಾಪ್ತ ಬೈಕ್ ಸವಾರರ ಮೇಲೂ ಶಿರಾ ಪೊಲಿಸರು ಕಣ್ಣಿಟ್ಟು ಕೆಲವರಿಗೆ ದಂಡ ಹಾಕಲಾಗಿದೆ. ಅಪ್ರಾಪ್ತರ ಪೋಷಕರಿಗೆ ಕರೆದು ಸಭೆ ನಡೆಸಿ ಮಕ್ಕಳಿಗೆ ತಿಳಿ ಹೇಳುವಂತೆ ತಾಕೀತು ಮಾಡಲಾಗಿದೆ. ಬೈಕ್ ವೀಲಿಂಗ್‍ಗೆ ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದರಿಂದ ಶಿರಾನಗರದ ಜನತೆ ಹಾಗೂ ಹೆದ್ದಾರಿ ಸವಾರರು ಪೊಲೀಸರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

    ಶಿರಾ ಪೊಲೀಸರ ಬೈಕ್ ವೀಲಿಂಗ್ ವಿರುದ್ಧ ಕಾರ್ಯಾಚರಣೆಯಿಂದಾಗಿ ನಗರದಲ್ಲಿ ಸುಗಮ ಸಂಚಾರಕ್ಕೆ ಅನುಕೂಲವಾಗಿದೆ. ಅಲ್ಲದೆ ಜನತೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬೈಕ್ ವ್ಹೀಲಿಂಗ್ ವೇಳೆ ಪಾದಾಚಾರಿಗೆ ಡಿಕ್ಕಿ – ಆಕ್ರೋಶಗೊಂಡ ಸಾರ್ವಜನಿಕರು ಮಾಡಿದ್ದೇನು?

    ಬೈಕ್ ವ್ಹೀಲಿಂಗ್ ವೇಳೆ ಪಾದಾಚಾರಿಗೆ ಡಿಕ್ಕಿ – ಆಕ್ರೋಶಗೊಂಡ ಸಾರ್ವಜನಿಕರು ಮಾಡಿದ್ದೇನು?

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಬೈಕ್ ವೀಲ್ಹಿಂಗ್ ಹಾವಳಿ ಹೆಚ್ಚಾಗಿದ್ದು, ವ್ಹೀಲಿಂಗ್ ಮಾಡುವ ವೇಳೆ ಯುವಕನೊಬ್ಬ ಪಾದಾಚಾರಿಗೆ ಡಿಕ್ಕಿ ಹೊಡೆದಿರುವ ಘಟನೆ ನಗರದ ಹೆಚ್‍ಬಿಆರ್ ಲೇಔಟ್‍ನಲ್ಲಿ ನಡೆದಿದೆ.

    ಅಪಘಾತವಾಗುತ್ತಿದ್ದಂತೆಯೇ ಡಿಕ್ಕಿಯಾದ ವ್ಯಕ್ತಿಗೆ ಏನಾಗಿದೆ ಎಂದು ಬಂದು ನೋಡದ ಯುವಕ ಸ್ಥಳದಲ್ಲೇ ಬೈಕ್ ಬಿಟ್ಟು ಎಸ್ಕೇಪ್ ಆಗಿದ್ದಾನೆ. ಘಟನೆ ಬಳಿಕ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಆದರೆ ಸರಿಯಾದ ಸಮಯಕ್ಕೆ ಪೊಲೀಸರು ಆಗಮಿಸದ ಕಾರಣ ಅಸಮಾಧಾನಗೊಂಡ ಸಾರ್ವಜನಿಕರು ಬೈಕ್ ಅನ್ನು ಅದೇ ಮಾರ್ಗದ ಮರವೊಂದಕ್ಕೆ ಕಟ್ಟಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಬೈಕ್ ಮರಕ್ಕೆ ಕಟ್ಟಿ ವ್ಹೀಲಿಂಗ್ ಮಾಡುವವರಿಗೆ ಎಚ್ಚರಿಕೆಯನ್ನು ನೀಡಿರುವ ಸಾರ್ವಜನಿಕರು. ವ್ಹೀಲಿಂಗ್ ಮಾಡಿದವರಿಗೂ ಹೀಗೆ ಮಾಡುತ್ತೇವೆ ಎಂದು ಫಲಕ ಬರೆದು ಬೈಕಿಗೆ ನೇತು ಹಾಕಿದ್ದಾರೆ. ಸೆಪ್ಟೆಂಬರ್ 25ರ ರಾತ್ರಿ 10.30ಕ್ಕೆ ಈ ಘಟನೆ ನಡೆದಿದ್ದು, ನಗರದ ಹಲವೆಡೆ ಇಂತಹ ಪ್ರಕರಣಗಳು ಹೆಚ್ಚಾಗುತ್ತಿದೆ. ಇಂತಹವರ ವಿರುದ್ಧ ಪೊಲೀಸರು ಕಠಿಣ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬೈಕ್ ವೀಲಿಂಗ್ ಮಾಡ್ತಿದ್ದವರ ಮೇಲೆ ಪೊಲೀಸ್ ದಾಳಿ- 30 ಬೈಕ್, 45 ಜನರು ವಶಕ್ಕೆ

    ಬೈಕ್ ವೀಲಿಂಗ್ ಮಾಡ್ತಿದ್ದವರ ಮೇಲೆ ಪೊಲೀಸ್ ದಾಳಿ- 30 ಬೈಕ್, 45 ಜನರು ವಶಕ್ಕೆ

    ಬೆಂಗಳೂರು: ಮಧ್ಯರಾತ್ರಿ ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಭಯಾನಕ ಬೈಕ್ ವೀಲಿಂಗ್ ಮಾಡುತ್ತಿದ್ದ ಸವಾರರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.

    ಈ ಕಾರ್ಯಚರಣೆಯನ್ನು ಬೆಂಗಳೂರು ಹೊರವಲಯ ನೆಲಮಂಗಲ ಪೊಲೀಸರು ನಡೆಸಿದ್ದು, 30 ಬೈಕ್ 45 ಜನರನ್ನ ವಶಕ್ಕೆ ಪಡೆದಿದ್ದಾರೆ. ಎಲ್ಲ ಸವಾರರು ನೆಲಮಂಗಲ ತಾಲೂಕಿನ ಇಸ್ಲಾಂಪುರ ಹಾಗೂ ಬೆಂಗಳೂರು ನಗರ ಮೂಲದವರು ಎಂದು ತಿಳಿದು ಬಂದಿದೆ.

    ಬೈಕ್ ಸವಾರರು ಪ್ರತಿದಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಯಾನಕ ಬೈಕ್ ವೀಲಿಂಗ್ ಮಾಡುತ್ತಿದ್ದರಿಂದ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದರು. ಈ ಬಗ್ಗೆ ಇತ್ತೀಚೆಗೆ ನಿಮ್ಮ ಪಬ್ಲಿಕ್ ಟಿವಿಯಲ್ಲಿ ವರದಿಯನ್ನು ಪ್ರಸಾರ ಮಾಡಿತ್ತು.

    ಈ ಹಿನ್ನಲೆಯಲ್ಲಿ ನೆಲಮಂಗಲ ಪೊಲೀಸ್ ಉನ್ನತ ಅಧಿಕಾರಿಗಳ ಆದೇಶದಂತೆ ರಾತ್ರಿ ದಾಳಿ ನಡೆಸಿದ ಪೊಲೀಸರು 45 ಜನರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

  • ಬೆಳ್ಳಂಬೆಳಗ್ಗೆ ಸಿಲಿಕಾನ್ ಸಿಟಿಯಲ್ಲಿ ಬೈಕ್ ವ್ಹೀಲಿಂಗ್ – ಪೊಲೀಸ್ ಸ್ಟೇಷನ್ ಮುಂದೆಯೇ ಸರ್ಕಸ್

    ಬೆಳ್ಳಂಬೆಳಗ್ಗೆ ಸಿಲಿಕಾನ್ ಸಿಟಿಯಲ್ಲಿ ಬೈಕ್ ವ್ಹೀಲಿಂಗ್ – ಪೊಲೀಸ್ ಸ್ಟೇಷನ್ ಮುಂದೆಯೇ ಸರ್ಕಸ್

    ಬೆಂಗಳೂರು: ಬೆಳ್ಳಂಬೆಳಗ್ಗೆ ಸಿಲಿಕಾನ್ ಸಿಟಿಯಲ್ಲಿ ಪುಂಡರ ಗುಂಪೊಂದು ಬೈಕ್ ವ್ಹೀಲಿಂಗ್ ಮಾಡಿ ವಾಹನ ಸವಾರರಿಗೆ ಶಾಕ್ ನೀಡಿದ್ದಾರೆ.

    ನಗರದ ಕನ್ನಿಂಗ್ ಹ್ಯಾಮ್ ರಸ್ತೆಗೆ ಐದಾರು ಬೈಕ್ ಗಳಲ್ಲಿ ಯುವಕ ಗುಂಪು ಬಂದಿದ್ದು, ಯಾವುದೇ ಭಯವಿಲ್ಲದೇ ಹೈಗ್ರೌಂಡ್ಸ್ ಪೊಲೀಸ್ ಠಾಣೆ ಮುಂಭಾಗವೇ ಬೈಕ್ ವ್ಹೀಲಿಂಗ್ ಮಾಡಿದ್ದಾರೆ.

    ಯುವಕರ ಗ್ಯಾಂಗ್ ಒಂದೇ ಬಾರಿ ಎಲ್ಲರೂ ವ್ಹೀಲಿಂಗ್ ಮಾಡಿದ್ದಾರೆ. ಇದರಿಂದ ವಾಹನ ಸವಾರರಿಗೆ ಗಾಬರಿ ಹುಟ್ಟಿಸಿದೆ. ಯುವಕರ ಗುಂಪು ಹೈಗ್ರೌಂಡ್ಸ್ ಪೊಲೀಸ್ ಠಾಣೆ ಮುಂಭಾಗದಲ್ಲೇ ಯಾವುದೇ ಭಯವಿಲ್ಲದೇ ವ್ಹೀಲಿಂಗ್ ಮಾಡಿದ್ದು, ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದೆ.

  • ನಡುರಸ್ತೆಯಲ್ಲಿ ಬೈಕ್ ವೀಲಿಂಗ್ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಯುವಕನಿಗೆ ಚಾಕು ಇರಿತ!

    ನಡುರಸ್ತೆಯಲ್ಲಿ ಬೈಕ್ ವೀಲಿಂಗ್ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಯುವಕನಿಗೆ ಚಾಕು ಇರಿತ!

    ತುಮಕೂರು: ನಡು ರಸ್ತೆಯಲ್ಲಿ ಬೈಕ್ ವೀಲಿಂಗ್ ಮಾಡಿದ್ದನ್ನು ಪ್ರಶ್ನಿಸಿದಕ್ಕೆ ಪುಂಡರ ಗುಂಪೊಂದು ಯುವಕನೋರ್ವನಿಗೆ ಚಾಕು ಇರಿದ ಘಟನೆ ನಡೆದಿದೆ.

    ಜಿಲ್ಲೆಯ ಪಾವಗಡ ಪಟ್ಟಣದ ಪೊಲೀಸ್ ಠಾಣೆ ಸಮೀಪ ಈ ಘಟನೆ ಸಂಭವಿಸಿದೆ. ದವಡಬೆಟ್ಟ ತಾಂಡಾದ ಯುವಕರು ಒಂದೇ ಸಮನೆ ಬೈಕ್ ವೀಲಿಂಗ್ ಮಾಡುತ್ತಿದ್ದರು. ಅದನ್ನು ಕಂಡ ಪಾದಾಚಾರಿ ಯುವಕ ತೇಜು ಪ್ರಶ್ನಿಸಿದ್ದಾನೆ.

    ತೇಜು ಪ್ರಶ್ನೆಯಿಂದ ಕೋಪಗೊಂಡ ಪುಂಡರ ತಂಡ ಯುವಕ ತೇಜು ಮೇಲೆ ಹಿಗ್ಗಾಮುಗ್ಗವಾಗಿ ಹಲ್ಲೆ ನಡೆಸಿದ್ದಾರೆ. ಅಲ್ಲದೇ ಚಾಕುವಿನಿಂದ ಕುತ್ತಿಗೆ ಮತ್ತು ಬೆನ್ನಿನ ಭಾಗಕ್ಕೆ ಇರಿದಿದ್ದಾರೆ. ಪರಿಣಾಮ ರಕ್ತದ ಮಡುವಿನಲ್ಲಿ ಬಿದ್ದಿದ್ದ ಗಾಯಾಳುವನ್ನು ಸಾರ್ವಜನಿಕರು ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದಾರೆ.

    ಘಟನೆಯ ಬಳಿಕ ಪರಾರಿಯಾಗಿದ್ದ ಆರೋಪಿಗಳಾದ ಶ್ರೀನಿವಾಸದ ನಾಯ್ಕ್, ಧನಸಿಂಗ್ ನಾಯ್ಕ್, ರಾಜೇಶ್ ನಾಯ್ಕ್, ಹಾಗೂ ಶೇಖರ್ ನಾಯಕರನ್ನು ಪಾವಗಡ ಪೊಲೀಸರು ಬಂಧಿಸಿದ್ದಾರೆ.

  • ವಿಡಿಯೋ: ರಾಷ್ಟ್ರೀಯ ಹೆದ್ದಾರಿಯಲ್ಲಿ ವೀಲಿಂಗ್ ಮಾಡಿ ಬೈಕ್, ಕಾರುಗಳಿಗೆ ಡಿಕ್ಕಿ – ಆಕ್ರೋಶಗೊಂಡ ಸ್ಥಳೀಯರಿಂದ ಗೂಸಾ

    ವಿಡಿಯೋ: ರಾಷ್ಟ್ರೀಯ ಹೆದ್ದಾರಿಯಲ್ಲಿ ವೀಲಿಂಗ್ ಮಾಡಿ ಬೈಕ್, ಕಾರುಗಳಿಗೆ ಡಿಕ್ಕಿ – ಆಕ್ರೋಶಗೊಂಡ ಸ್ಥಳೀಯರಿಂದ ಗೂಸಾ

    ಬೆಂಗಳೂರು: ವೀಲಿಂಗ್ ಮಾಡುತ್ತಿದ್ದ ಬೈಕ್ ಸವಾರರಿಗೆ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ನಡೆದಿದೆ.

    ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವೀಲಿಂಗ್ ಮಾಡುವಾಗ ಬೈಕ್ ಹಾಗೂ ಕಾರುಗಳಿಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಇದರಿಂದ ಆಕ್ರೋಶಗೊಂಡ ಸಾರ್ವಜನಿಕರು ಬೈಕ್ ಸವಾರರನ್ನ ಹಿಡಿದು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

    ನೆಲಮಂಗಲ ಸಮೀಪದ ದೇವಣ್ಣನಪಾಳ್ಯ ಬಳಿ ಈ ಘಟನೆ ನಡೆದಿದ್ದು, ನಾಲ್ವರು ಯುವಕರು ವಿಲಿಂಗ್ ಮಾಡುತ್ತಿದ್ದ ವೇಳೆ ಒಂದು ಬೈಕ್ ಹಾಗೂ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ಇದರಿಂದ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಘಟನೆಯಿಂದ ರೊಚ್ಚಿಗೆದ್ದ ಇತರೆ ವಾಹನ ಸವಾರರು ಬೈಕ್ ಸವಾರರನ್ನು ಅಡ್ಡಗಟ್ಟಿ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ.

    ಈ ಘಟನೆ ಸಂಬಂಧ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೈಕ್ ಸಾವಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆಯಿಂದಾಗಿ ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಸಂಭವಿಸಿತ್ತು. ಸುಮಾರು ಒಂದು ಕಿಲೋಮೀಟರ್ ನಿಂದ ಈ ಯುವಕರು ವೀಲಿಂಗ್ ಮಾಡುತ್ತಿದ್ದರು ಎನ್ನಲಾಗಿದೆ.

    https://www.youtube.com/watch?v=6sQ74zRnkeY