Tag: ಬೈಕ್ ರೈಡ್

  • ಅಭಿಮಾನಿಗಳಿಗಾಗಿ ಬೈಕ್ ರೈಡ್ ಮಾಡಿ ದರ್ಶನ್ ಪ್ರಚಾರ

    ಅಭಿಮಾನಿಗಳಿಗಾಗಿ ಬೈಕ್ ರೈಡ್ ಮಾಡಿ ದರ್ಶನ್ ಪ್ರಚಾರ

    ಮಂಡ್ಯ: ಲೋಕಸಭಾ ಚುನಾವಣೆಗೆ ಮಂಡ್ಯದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ಪ್ರಚಾರಕ್ಕಿಳಿದಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸ್ವತಃ ತಾವೇ ಬೈಕ್ ಓಡಿಸುವ ಮೂಲಕ ಮತ್ತೊಮ್ಮೆ ಅಭಿಮಾನಿಗಳ ಮನ ಗೆದ್ದಿದ್ದಾರೆ.

    ಇಂದು ಮಳವಳ್ಳಿ ತಾಲೂಕಿನಲ್ಲಿ ಡಿ ಬಾಸ್ ಸುಮಲತಾ ಅವರ ಪರವಾಗಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಈ ವೇಳೆ ರಾಮಂದೂರು ಗ್ರಾಮಕ್ಕೆ ತೆರಳಿದ್ದು, ಅವರ ಅಭಿಮಾನಿಗಳು ಪ್ರೀತಿಯಿಂದ ದರ್ಶನ್‍ರನ್ನು ಸ್ವಾಗತಿಸಿ ಬೈಕ್ ಓಡಿಸುವಂತೆ ಕೋರಿದ್ದಾರೆ. ಆದ್ದರಿಂದ ಫ್ಯಾನ್ಸ್ ಬಲವಂತಕ್ಕೆ ಮನಸೋತ ದಚ್ಚು ಸ್ವತಃ ತಾವೇ ಬೈಕ್ ಓಡಿಸಿ ಅವರನ್ನು ಖುಷಿಪಡಿಸಿದರು.

    ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಬೈಕ್‍ನಲ್ಲಿ ಹಿಂದೆ ಒಬ್ಬ ಅಭಿಮಾನಿಯನ್ನು ಕೂರಿಸಿಕೊಂಡು, ದರ್ಶನ್ ಊರೊಳಗೆ ಒಂದು ರೌಂಡ್ ಹೋಗಿ ಬಂದಿದ್ದಾರೆ. ಈ ವೇಳೆ ಅಭಿಮಾನಿಗಳು ಕೂಡ ಡಿ ಬಾಸ್‍ಗೆ ಸಾಥ್ ನೀಡಿದ್ದು, ಅವರ ಬೈಕ್ ಹಿಂದೆಯೇ ತಾವು ಹೋಗಿ ಅಭಿಮಾನ ಮೆರೆದರು.

    ಗುರುವಾರದಂದು ಕೆಆರ್ ಪೇಟೆ ಸೋಮನಹಳ್ಳಿಯಲ್ಲಿ ಪ್ರಚಾರಕ್ಕೆ ತೆರಳಿದ್ದ ವೇಳೆ ಅಭಿಮಾನಿ ಚಂದ್ರು ಅವರ ಮನೆಗೆ ಡಿ ಬಾಸ್‍ ಆಗಮಿಸಿದ್ದರು. ಆಗ ಅಲ್ಲಿದ್ದ ಹಸುವಿನ ಹಾಲು ಕರೆದು ಅಭಿಮಾನಿಗಳ ಮನ ಗೆದ್ದಿದ್ದರು. ಈಗ ಅಭಿಮಾನಿಗಳಿಗಾಗಿ ಬೈಕ್ ರೈಡ್ ಮಾಡಿ ಮತ್ತೊಮ್ಮೆ ದಚ್ಚು ಎಲ್ಲರ ಗಮನ ಸೆಳೆದಿದ್ದಾರೆ.

  • ಬೈಕ್ ರೈಡ್ ಮಾಡ್ಕೊಂಡು ಜನರ ಸಮಸ್ಯೆ ಆಲಿಸಿದ ಕಾಂಗ್ರೆಸ್  ಶಾಸಕ- ವಿಡಿಯೋ ವೈರಲ್

    ಬೈಕ್ ರೈಡ್ ಮಾಡ್ಕೊಂಡು ಜನರ ಸಮಸ್ಯೆ ಆಲಿಸಿದ ಕಾಂಗ್ರೆಸ್ ಶಾಸಕ- ವಿಡಿಯೋ ವೈರಲ್

    ರಾಯಚೂರು: ಕಾಂಗ್ರೆಸ್ ಶಾಸಕರೊಬ್ಬರು ಬೈಕ್ ಓಡಿಸಿಕೊಂಡು ಜನರ ಸಮಸ್ಯೆಗಳನ್ನು ಆಲಿಸಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಜನರ ಮೆಚ್ಚುಗೆ ಪಡೆದಿದೆ.

    ಅಧಿಕಾರದಲ್ಲಿದ್ದವರು ಕಾರಲ್ಲಿಯೇ ಓಡಾಡುವುದು ಹೆಚ್ಚು. ಆದ್ರೆ ಜಿಲ್ಲೆಯ ಲಿಂಗಸುಗೂರು ಕ್ಷೇತ್ರದ ಶಾಸಕ ಡಿ.ಎಸ್ ಹೂಲಿಗೇರಿ ಅವರು ಪಟ್ಟಣದಲ್ಲಿ ಬೈಕ್ ರೈಡ್ ಮಾಡಿಕೊಂಡೇ ಜನರ ಸಮಸ್ಯೆಗಳನ್ನ ಆಲಿಸಿ ಗಮನ ಸೆಳೆದಿದ್ದಾರೆ. ಲಿಂಗಸುಗೂರಿನ ಗಲ್ಲಿ ಗಲ್ಲಿಗಳಲ್ಲಿ ಬೈಕ್ ರೈಡ್ ಮಾಡಿ ಕುಡಿಯುವ ನೀರು, ರಸ್ತೆ, ಚರಂಡಿ ವ್ಯವಸ್ಥೆಗಳನ್ನ ಪರಿಶೀಲಿಸಿದ ಶಾಸಕರು, ಅಲ್ಲಿನ ನಿವಾಸಿಗಳ ಜೊತೆ ಮಾತನಾಡಿ ಸಮಸ್ಯೆಗಳ ಕುರಿತು ಮಾಹಿತಿ ಪಡೆದು ಸಮಸ್ಯೆಗಳನ್ನು ಬಗೆಹರಿಸುವಂತೆ ಭರವಸೆ ನೀಡಿದ್ದಾರೆ.

    ಕಾರನ್ನು ಬದಿಗಿಟ್ಟು ಶಾಸಕರು ಬೈಕ್‍ನಲ್ಲಿ ಹೋಗಿದ್ದರಿಂದ ಅಧಿಕಾರಿಗಳು ಸಹ ಬೈಕ್‍ನಲ್ಲಿಯೇ ಅವರನ್ನು ಹಿಂಬಾಲಿಸಿದರು. ಈ ವೇಳೆ ಸಿಸಿ ರಸ್ತೆಗಳು (ಕಾಂಕ್ರೀಟ್ ರೋಡ್) ಇಲ್ಲದ ಬಡಾವಣೆಗಳನ್ನ ಗುರುತಿಸಿ ಮಾಹಿತಿ ಕೊಡುವಂತೆ ಪುರಸಭೆ ಮುಖ್ಯ ಅಧಿಕಾರಿಗಳಿಗೆ ಶಾಸಕ ಹೂಲಿಗೇರಿ ಸೂಚಿಸಿದ್ದಾರೆ. ಕಾಂಗ್ರೆಸ್ ಶಾಸಕ ಡಿ.ಎಸ್ ಹೂಲಿಗೇರಿ ಅವರು ಬೈಕ್ ರೈಡ್ ಮಾಡಿ ಪಟ್ಟಣದಲ್ಲಿ ಓಡಾಡಿರೋ ದೃಶ್ಯವನ್ನು ಸ್ಥಳೀಯರು ವಿಡಿಯೋ ಮಾಡಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    https://www.youtube.com/watch?v=WiT7lberodA

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬೈಕ್ ಟ್ಯಾಂಕ್ ಮೇಲೆ ಯುವತಿಯನ್ನ ಕೂರಿಸಿಕೊಂಡು ರೈಡಿಂಗ್- ಬೈಕಿನಲ್ಲೇ ಮುತ್ತಿನ ಸುರಿಮಳೆ

    ಬೈಕ್ ಟ್ಯಾಂಕ್ ಮೇಲೆ ಯುವತಿಯನ್ನ ಕೂರಿಸಿಕೊಂಡು ರೈಡಿಂಗ್- ಬೈಕಿನಲ್ಲೇ ಮುತ್ತಿನ ಸುರಿಮಳೆ

    ಚಿಕ್ಕಬಳ್ಳಾಪುರ: ವಿಶ್ವವಿಖ್ಯಾತ ಪ್ರಸಿದ್ಧ ಪ್ರವಾಸಿ ತಾಣ ಜಿಲ್ಲೆಯ ನಂದಿಗಿರಿಧಾಮದ ರಸ್ತೆಯಲ್ಲಿ ಅಂಕು ಡೊಂಕಿನ ರಸ್ತೆಯಲ್ಲಿ ಬೈಕಿನ ಹಿಂಬದಿ ಸೀಟಿನಲ್ಲಿ ಕೂತು ಸಾಗಬೇಕಾದ ಯುವತಿಯೊಬ್ಬಳು ಬೈಕಿನ ಪೆಟ್ರೋಲ್ ಟ್ಯಾಂಕ್ ಮೇಲೆ ಕೂತು ಸಾಗಿದ್ದಾಳೆ.

    ಪ್ರೇಮಿಗಳಿಬ್ಬರು ನಂದಿಗಿರಿಧಾಮದ ರಸ್ತೆಯಲ್ಲಿ ಅಸಭ್ಯವಾಗಿ ಬೈಕ್ ಚಲಾಯಿಸಿರುವ ವಿಡಿಯೋವೊಂದು ಲಭ್ಯವಾಗಿದೆ. ತನ್ನ ಪ್ರೇಮಿಯನ್ನು ಬೈಕಿನ ಟ್ಯಾಂಕ್ ಮೇಲೆ ಕೂರಿಸಿಕೊಂಡು ಪ್ರಿಯಕರ ಬೈಕ್ ಓಡಿಸಿದ್ದಾನೆ. ಪ್ರೇಮಿಗಳ ಜಾಲಿ ರೈಡನ್ನು ಅವರ ಹಿಂದೆ ಬರುತ್ತಿದ್ದ ಸವಾರರು ವಿಡಿಯೋ ಮಾಡಿದ್ದಾರೆ.

    ಯುವತಿಯೊಬ್ಬಳು ತನ್ನ ಪ್ರಿಯಕರನ್ನ ತನ್ನ ತೋಳಲ್ಲಿ ಬಂಧಿ ಮಾಡಿಕೊಂಡು ಬೈಕಿನ ಟ್ಯಾಂಕ್ ಮೇಲೆ ಕುಳಿತು ಹೋಗಿದ್ದಾಳೆ. ಇತ್ತ ಬೈಕ್ ರೈಡ್ ಮಾಡುತ್ತಿದ್ದ ಪ್ರಿಯಕರ ಲೋಕದ ಪರಿವೇ ಇಲ್ಲದಂತೆ ಬೈಕ್ ರೈಡ್ ಮಾಡುತ್ತಿದ್ದನು. ಅಸಲಿಗೆ ಕಾನೂನನ್ನ ಗಾಳಿಗೆ ತೂರಿ ಈ ರೀತಿ ಅಸಭ್ಯವಾಗಿ ನಡೆದುಕೊಂಡಿದ್ದಾರೆ. ಈ ಜೋಡಿಯ ಹುಚ್ಚಾಟ ಇತರೆ ಪ್ರವಾಸಿಗರಿಗೆ ಇರುಸು ಮುರುಸು ಉಂಟುಮಾಡಿತ್ತು ಎಂದು ಪ್ರವಾಸಿಗ ಚಿಕ್ಕ ಅಂಜಿನಪ್ಪ ಹೇಳಿದ್ದಾರೆ.

    ಪ್ರೇಮಿಗಳ ಪಾಲಿನ ಸ್ವರ್ಗ ತಾಣದಲ್ಲಿ ವಿಹರಿಸಿ ಬಂದಿದ್ದ ಈ ಜೋಡಿ ಇಡೀ ಲೋಕದ ಪರಿವೆಯನ್ನ ಮರೆತಿದ್ದರು. ಬೈಕಿನ ಮುಂಭಾಗದ ಪೆಟ್ರೋಲ್ ಟ್ಯಾಂಕ್ ಮೇಲೆ ಕುಳಿತು ತನ್ನ ಪ್ರಿಯಕರನ್ನ ಬಿಗಿದಪ್ಪಿಕೊಂಡಿದ್ದು, ತನ್ನ ಪ್ರಿಯತಮೆಯ ತೋಳಲ್ಲಿ ಬಂಧಿಯಾಗಿದ್ದ ಆ ಯುವಕ ಜಾಂ ಜೂಮ್ ಅಂತ ಬೈಕ್ ರೈಡ್ ಮಾಡುತ್ತಿದ್ದನು. ನಡುರಸ್ತೆಯಲ್ಲಿ ಯಾರಿಗೂ ಡೋಂಟ್ ಕೇರ್ ಎಂಬಂತೆ ಬೈಕಿನಲ್ಲಿ ಸಾಗುತ್ತಿದ್ದ ಈ ಜೋಡಿಯ ಹುಚ್ಚಾಟ ಇತರೆ ವಾಹನ ಸವಾರರಿಗೆ ಮುಜುಗರವನ್ನುಂಟು ಮಾಡಿತ್ತು. ಇದು ಇದೊಂದು ಜೋಡಿಯ ಕಥೆ ಅಲ್ಲ ಬಹುತೇಕರದ್ದು ಇದೆ ತರ ಅಂತ ಪ್ರವಾಸಿಗರು ಬೇಸರ ವ್ಯಕ್ತಪಡಿಸಿದ್ದಾರೆ.

    ನಂದಿಗಿರಿಧಾಮ ಹೇಳಿ ಕೇಳಿ ಪ್ರೇಮಿಗಳ ಪಾಲಿನ ಅಚ್ಚು ಮೆಚ್ಚಿನ ತಾಣವಾಗಿದೆ. ಆದರೆ ಪ್ರೇಮದ ಹೆಸರಲ್ಲಿ ನಡುರಸ್ತೆಯಲ್ಲೇ ಯಾರಿಗೂ ಡೋಂಟ್ ಕೇರ್ ಮಾಡದ ಜೋಡಿ ಹಕ್ಕಿಗಳು ಸಭ್ಯತೆಯ ಎಲ್ಲೆಯನ್ನೇ ಮೀರಿ ನಡೆದುಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವೀಕೆಂಡ್ ನಲ್ಲಿ `ಕಿರಿಕ್ ಜೋಡಿ’ ಜಾಲಿ ಬೈಕ್ ರೈಡ್

    ವೀಕೆಂಡ್ ನಲ್ಲಿ `ಕಿರಿಕ್ ಜೋಡಿ’ ಜಾಲಿ ಬೈಕ್ ರೈಡ್

    ಬೆಂಗಳೂರು: ಸಾಮಾನ್ಯವಾಗಿ ಸ್ಟಾರ್ ನಟ-ನಟಿಯರ ಬಳಿ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಐಶಾರಾಮಿ ಕಾರುಗಳಿರುತ್ತವೆ. ಕಾರ್ ಇದ್ದಾಗ ಬೈಕ್‍ ನಲ್ಲಿ ಸುತ್ತಾಟ ಮಾಡೋದು ತುಂಬಾ ಕಮ್ಮಿ. ಆದರೆ ಈ ವೀಕೆಂಡ್ ನಲ್ಲಿ ನಟ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಜೋಡಿ ಬೈಕ್‍ ನಲ್ಲಿ ಸ್ವಚ್ಛಂದವಾಗಿ ಬೆಂಗಳೂರಿನ ಬೀದಿಬೀದಿಗಳಲ್ಲಿ ಹಾರಾಡಿದೆ.

    ಸ್ಯಾಂಡಲ್ ವುಡ್‍ ನಲ್ಲಿ ಸದ್ಯಕ್ಕಂತೂ ಅಭಿಮಾನಿಗಳ ಹಾಟ್ ಫೆವರೇಟ್ ಜೋಡಿ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ. ಇವರು ಎಂಗೇಜ್ಡ್ ಕಪಲ್ ಎನ್ನುವುದು ಸೀಕ್ರೇಟ್ ಆಗಿ ಉಳಿದಿರೋ ವಿಷಯವಂತೂ ಅಲ್ಲ. ಹೀಗಾಗಿ ಸ್ಟಾರ್ ಜೋಡಿ ಈ ವೀಕೆಂಡ್ ನಲ್ಲಿ ಬೈಕ್ ರೈಡ್ ಮಾಡೋಕೆ ಮನಸ್ಸು ಮಾಡಿತ್ತು.

    ಭಾನುವಾರ ಶೂಟಿಂಗ್ ಗೆ ಗೇಟ್‍ಪಾಸ್ ಕೊಟ್ಟು `ಹಾರ್ಲೇ ಡೇವಿಡ್‍ಸನ್ ಬ್ರೇಕ್‍ ಔಟ್’ ಬೈಕ್ ಏರಿ ಔಟ್ ಹೋಗಿತ್ತು ಕಿರಿಕ್ ಜೋಡಿ. ಭಾನುವಾರ ಮಧ್ಯಾಹ್ನ ಬೆಂಗಳೂರಿನ ಬೆಸ್ಟ್ ರೆಸ್ಟೋರೆಂಟ್ ಒಂದರಲ್ಲಿ ಊಟ ಮುಗಿಸಿ ಬೀದಿ ಬೀದಿಗಳಲ್ಲಿ ಸಖತ್ ರೈಡ್ ಮಾಡಿದರು. ಅದೃಷ್ಟವಶಾತ್ ಇಬ್ಬರ ಮುಖ ಹೆಲ್ಮೆಟ್‍ ನಿಂದ ಮುಚ್ಚಿದ್ದೇ ಪುಣ್ಯ ಇಲ್ಲವಾದರೆ ರಸ್ತೆಯಲ್ಲೇ ಅಭಿಮಾನಿಗಳ ಸೆಲ್ಫಿಗಾಗಿ ಕಿರಿಕ್ ಮಾಡುತ್ತಿದ್ದರೋ ಏನೋ?

    ವೀಕೆಂಡ್ ನಲ್ಲಿ ಜಾಲಿ ರೈಡ್ ಹೋಗೋಕೆ ಕಾಯುತ್ತಿದ್ದ ಪ್ರೇಮಪಕ್ಷಿಗಳಿಗೆ ಸಿನಿಮಾ ಕೂಡ ಮುಖ್ಯ. ಈ ವಾರ ರಶ್ಮಿಕಾ ಮಂದಣ್ಣ ಅಭಿನಯದ ಅಂಜನಿಪುತ್ರ ಬಿಡುಗಡೆಯಾಗೋದಕ್ಕೆ ರೆಡಿಯಾಗಿದೆ. ಹೀಗಾಗಿ ಬೆಂಗಳೂರಿನ ಖಾಸಗಿ ಸ್ಟಾರ್ ಹೋಟೆಲ್ ನಲ್ಲಿ ಏರ್ಪಡಿಸಲಾಗಿದ್ದ ದಿಢೀರ್ ಪತ್ರಿಕಾಗೋಷ್ಠಿಗೂ ರಶ್ಮಿಕಾ ಬರಲೇಬೇಕಿತ್ತು. ಹೀಗಾಗಿ ಸ್ಟಾರ್ ಹೊಟೇಲ್ ಗೂ ರಶ್ಮಿಕಾಗೆ ಭಾವೀ ಪತಿ ರಕ್ಷಿತ್ ಶೆಟ್ಟಿ ಬೈಕ್‍ ನಲ್ಲೇ ಡ್ರಾಪ್ ಮಾಡಿದರು.

    ಬೆಂಗಳೂರು ಎಂದರೆ ಹೆವೀ ಟ್ರಾಫಿಕ್. ಕಾರ್ ಏರಿ ಹೊರಟರಂತೂ ಇನ್ನೂ ಹೆಚ್ಚು ಟೈಂ ಬೇಕೇ ಬೇಕು. ಹೀಗಾಗೇ ಭಾನುವಾರವೊಂದೆ ಫ್ರೀ ಇರುವ ರಕ್ಷಿತ್- ರಶ್ಮಿಕಾ ತಾರಾ ಜೋಡಿ ಆಗಾಗ ಬೈಕ್‍ ನಲ್ಲೇ ರೈಡ್ ಹೋಗುತ್ತಾರಂತೆ. ಹೇಳಿ ಕೇಳಿ ರಕ್ಷಿತ್‍ ಗಂತೂ ಬೈಕ್ ಎಂದರೆ ಪ್ರೀತಿ. ಇನ್ನು ಹುಡುಗಿಯರಿಗಂತೂ ಬಿಡಿ ಬೈಕ್‍ ನಲ್ಲಿ ಸುತ್ತಾಡೋದರಲ್ಲಿ ಇರೋ ಖುಷಿನೇ ಬೇರೆ.

  • ಮೈಸೂರು ಕಾಲೇಜು ವಿದ್ಯಾರ್ಥಿಗಳ ಬೈಕ್ ಸ್ಟಂಟ್‍ನ ರಸದೌತಣ !

    ಮೈಸೂರು ಕಾಲೇಜು ವಿದ್ಯಾರ್ಥಿಗಳ ಬೈಕ್ ಸ್ಟಂಟ್‍ನ ರಸದೌತಣ !

    ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕಾಲೇಜು ವಿದ್ಯಾರ್ಥಿಗಳಿಂದ ನಡೆದ ಬೈಕ್ ಸ್ಟಂಟ್ ಪ್ರೇಕ್ಷಕರಿಗೆ ಫುಲ್ ಕಿಕ್ ನೀಡಿದೆ.

    ಮೈಸೂರಿನ ಜೆಎಸ್‍ಎಸ್ ಮೆಡಿಕಲ್ ಕಾಲೇಜಿನ 9ನೇ ವರ್ಷದ ತತ್ವಮ್ ಫೆಸ್ಟ್‍ನಲ್ಲಿ ಬೈಕ್ ಹಾಗೂ ಕಾರುಗಳ ಮೇಳವನ್ನು ಆಯೋಜಿಸಲಾಗಿತ್ತು. ಈ ಮೇಳದಲ್ಲಿ 15 ಸೂಪರ್ ಬೈಕ್‍ಗಳು, 15 ವಿನ್ಟೇಜ್ ಕಾರುಗಳನ್ನು ಪ್ರದರ್ಶನ ಮಾಡಲಾಯಿತು. ನಂತರ ರಾಜ್ಯದ ಬೇರೆ ಬೇರೆ ಭಾಗಗಳಿಂದ ಆಗಮಿಸಿದ ವಿದ್ಯಾರ್ಥಿಗಳಿಂದ ಬೈಕ್ ಸ್ಟಂಟ್ ಮಾಡಿಸಲಾಯಿತು.

    ಈ ವೇಳೆಯಲ್ಲಿ ಬಿಂದಾಸ್ ಬೈಕ್ ರೈಡ್‍ನಲ್ಲಿ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಮಾಡಿದ ಬೈಕ್ ಸ್ಟಂಟ್ ಗೆ ಪ್ರೇಕ್ಷಕರು ಫುಲ್ ಫಿದಾ ಆದರು. ನೋಡುಗರಿಗೆ ಮೈ ಜುಮ್ ಅನ್ನುವಂತೆ ವಿದ್ಯಾರ್ಥಿಗಳು ರಸದೌತಣ ನೀಡಿದರು.

    ಯುವಕರಿಗಿಂತ ನಾನೇನೂ ಕಡಿಮೆ ಇಲ್ಲವೆಂಬಂತೆ ಯುವತಿಯೂ ಕೂಡ ಬಿಂದಾಸ್ ಹಾಗೆ ಬೈಕ್ ಸ್ಟಂಟ್ ಮಾಡಿದರು. ಇವರು ಬೈಕ್ ಹೋಡೆಯೋ ಸ್ಟೈಲ್ ನೆರೆದಿದ್ದವರಿಗೆ ಬಾಯಿಮೇಲೆ ಬೆರಳು ಇಟ್ಟುಕೊಳ್ಳುವಂತೆ ಮಾಡಿತು. ಅಲ್ಲಿ ಇದ್ದಂತಹ ಜನರು ವಿದ್ಯಾರ್ಥಿಗಳು ದೊಡ್ಡವರು ಚಿಕ್ಕವರೆನ್ನದೆ ಈ ಯುವತಿಯ ಬೈಕ್ ರೈಡಿಂಗ್ ಗೆ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು.

    ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಈ ಕಾರ್ಯಕ್ರಮದಲ್ಲಿ ಬೈಕ್ ಸ್ವಂಟ್ ಜೊತೆ ವಿನ್ಟೇಜ್ ಕಾರುಗಳ ಪ್ರದರ್ಶನವೂ ಕೂಡ ನೋಡುಗರ ಮನಸೂರೆಗೊಳಿಸಿತು.

  • 30 ತಿಂಗಳು, 40 ದೇಶ, 1 ಲಕ್ಷ ಕಿ.ಮೀ. ಬೈಕ್‍ನಲ್ಲೇ ದಂಪತಿ ಪ್ರಯಾಣ!

    ಬಳ್ಳಾರಿ: ಗಂಡ ಹೆಂಡತಿ ಇಬ್ಬರೂ ಬೈಕ್ ರೈಡ್ ಮಾಡುತ್ತಾ ಮೂವತ್ತು ತಿಂಗಳು, ನಲವತ್ತು ದೇಶ ಹಾಗೂ ಒಂದು ಲಕ್ಷ ಕಿಲೋ ಮೀಟರ್ ಪ್ರಯಾಣ ಮಾಡಿ ಇದೀಗ ವಿಶ್ವ ವಿಖ್ಯಾತ ಹಂಪಿಗೆ ಬಂದಿದ್ದಾರೆ.

    ಬೈಕ್ ರೈಡ್ ಕ್ರೇಜ್ ಯಾರಿಗೆ ಇಷ್ಟವಿಲ್ಲ ಹೇಳಿ ಕೊಲಂಬಿಯಾದಲ್ಲಿ ವೃತ್ತಿಯಲ್ಲಿ ಇಂಜಿನೀಯರ್ ಆಗಿರುವ ಜಾರ್ಜ್ ಓಸೋರಿಯೋ, ಪತ್ನಿ ಅನಾ ಕಳೆದ ಮೂವತ್ತು ತಿಂಗಳಿನಿಂದ ಬೈಕ್ ಪ್ರಯಾಣ ಆರಂಭಿಸಿ ಈಕ್ವೆಡಾರ್, ಪೆರು, ಬುಲೊವಾಯೋ, ಬ್ರಿಜಿಲ್, ವೆನಿಜುವೆಲಾ, ಉರುಗ್ವೆ, ಅರ್ಜೈಂಟೆನಾ, ಚಿಲಿ, ಸೆಹಗಲ್, ಹಂಗೇರಿಯಾ, ಪರುಗ್ವೇ, ಪನಾಮ, ಜರ್ಮನಿ, ಆಸ್ಟ್ರೀಯಾ, ಸ್ಲೋವೇನಿಯಾ, ಪೋಲೆಂಡ್, ಇಟಲಿ, ಸ್ವಿಜರ್ಲ್ಯಾಂಡ್, ಸುತ್ತಿ ಒಂದು ತಿಂಗಳಿನಿಂದ ಭಾರತವನ್ನು ಸುತ್ತುತ್ತಿದ್ದಾರೆ.

    ತಮ್ಮ ಬೈಕ್‍ಗೆ ಟಿ.ವಿ.ಯಿಂದ ದೂರವಿರಿ, ದುಶ್ಚಟಗಳಿಗೆ ದಾಸರಾಗಬೇಡಿ ಎನ್ನುವ ಸಂದೇಶಗಳನ್ನು ಸಾರುತ್ತಾ ತಾವು ಆ ದೇಶ ಸುತ್ತಿದ ನೆನಪಿಗಾಗಿ ರಾಷ್ಟ್ರಧ್ವಜವನ್ನು ಬೈಕಿಗೆ ಅಂಟಿಸಿಕೊಂಡಿದ್ದಾರೆ ತಾವು ಸುತ್ತುವ ದೇಶದ ಚಿತ್ರಗಳನ್ನು ತಮ್ಮದೇ ವೆಬ್ ಸೈಟ್ ನಲ್ಲಿ ಹಾಕಿ ಆ ದೇಶದ ಕಲೆ ಸಂಸ್ಕೃತಿ ಪರಿಚಯಿಸುತ್ತಿದ್ದಾರೆ.

    ಕೊಪ್ಪಳದ ಜಿಲ್ಲೆಯ ಅಂಜನಾದ್ರಿ, ಪಂಪಾಸರೋವರ ನೋಡಿ ಇದೀಗ ವಿಶ್ವ ವಿಖ್ಯಾತ ಹಂಪಿಗೆ ಆಗಮಿಸದ್ದಾರೆ ಸ್ಮಾರಕಗಳನ್ನು ನೋಡಿ ಹಂಪಿ ಬಜಾರ್ ನಲ್ಲಿ ವಿಶ್ರಾಂತಿ ಪಡೆಯುವಾಗ ದೇಶಿ ವಿದೇಶಿ ಪ್ರವಾಸಿಗರು ಮಾತನಾಡಿಸಿ ಅವರ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ತಮ್ಮ ಕ್ಯಾಮರಾಗಳಲ್ಲಿ ಬೈಕ್ ಫೋಟೋ ಕ್ಲಿಕಿಸುತ್ತಿದ್ದರು. ಭಾರತದಲ್ಲಿ ರಸ್ತೆಯು ಬಹಳ ಚೆನ್ನಾಗಿವೆ ಇಲ್ಲಿ ಅನೇಕ ಐತಿಹಾಸಿಕ ಸ್ಥಳಗಳನ್ನು ವಿಶ್ವ ವಿಖ್ಯಾತ ಸ್ಮಾರಕಗಳನ್ನು ನೋಡಿ ಖುಷಿಯಾಗಿದೆ ಎಂದು ಓಸೋರಿಯಾ ದಂಪತಿ ತಿಳಿಸಿದರು.