Tag: ಬೈಕ್ ರೈಡರ್ಸ್

  • ಬೈಕ್ ರೈಡರ್ಸ್ ಸಹೋದರರು ಇದೀಗ ಅಂಬುಲೆನ್ಸ್ ಡ್ರೈವರ್ಸ್

    ಬೈಕ್ ರೈಡರ್ಸ್ ಸಹೋದರರು ಇದೀಗ ಅಂಬುಲೆನ್ಸ್ ಡ್ರೈವರ್ಸ್

    ಬೆಂಗಳೂರು: ದೇಶದಲ್ಲಿ ಕೊರೊನಾ ಎರಡನೇ ಅಲೆಯಿಂದಾಗಿ ಜನ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಜನರ ಕಷ್ಟವನ್ನು ನೋಡಲಾಗದೆ ನಗರದ ಇಬ್ಬರು ಹವ್ಯಾಸಿ ಬೈಕ್ ರೈಡರ್ಸ್ ಸಹೋದರರು ಅಂಬುಲೆನ್ಸ್ ಡ್ರೈವರ್‍ ಗಳಾಗಿ ಜನರ ಸಹಾಯಕ್ಕೆ ಮುಂದಾಗಿದ್ದಾರೆ.

    ಬೆಂಗಳೂರಿನ ಸಹೋದರರಾದ ಮುರ್ತಾಜಾ ಜುನೈದ್ ಮತ್ತು ಮುತೀಬ್ ಜೊಹೆಬ್ ಹವ್ಯಾಸಿ ಬೈಕ್ ರೈಡರ್ಸ್ ಆಗಿ ಹಲವು ಊರುಗಳನ್ನು ಸುತ್ತಿದ್ದಾರೆ. ಆದರೆ ಇದೀಗ ಕೊರೊನಾ ಎರಡನೇ ಅಲೆಯಿಂದ ಜನ ಅನುಭವಿಸುತ್ತಿರುವ ಕಷ್ಟವನ್ನು ನೋಡಿ ಜನರ ಸೇವೆ ಮಾಡಲು ಅಂಬುಲೆನ್ಸ್ ಒಂದರಲ್ಲಿ ಡ್ರೈವರ್‍ಗಳಾಗಿ ಕೊರೊನಾ ಸೋಂಕಿತರಿಗೆ ನೆರವಾಗುತ್ತಿದ್ದಾರೆ.

    ಈ ಕುರಿತು ಸ್ಥಳೀಯ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿರುವ ಮುರ್ತಾಜಾ ಜುನೈದ್, ಕೊರೊನಾ ಎರಡನೇ ಅಲೆಯಿಂದಾಗಿ ಜನ ಸಾಕಷ್ಟು ಕಷ್ಟ ಅನುಭವಿಸುತ್ತಿದ್ದಾರೆ. ನಾನು ನೋಡಿದಂತೆ ಜನ ಆಕ್ಸಿಜನ್, ಬೆಡ್ ಮತ್ತು ಅಂಬುಲೆನ್ಸ್ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಹಲವು ಜನ ಆಟೋ, ಬೈಕ್‍ಗಳಲ್ಲಿ ಆಸ್ಪತ್ರೆಗೆ ಹೋಗುವುದನ್ನು ನೋಡೊದ್ದೇನೆ. ಹಾಗಾಗಿ ಅಂತವರ ನೆರವಿಗೆ ಬರಲು ಕಳೆದ ಮೂರು ವಾರಗಳಿಂದ ಅಂಬುಲೆನ್ಸ್ ಒಂದರಲ್ಲಿ ಡ್ರೈವರ್‍ ಗಳಾಗಿ ಸೇವೆ ಮಾಡುತ್ತಿದ್ದೇವೆ ಎಂದಿದ್ದಾರೆ.

    ಜನರ ಕಷ್ಟ ಕಾಲದಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಯು ಇತರರಿಗೆ ನೆರವಾಗಬೇಕು. ಇದೀಗ ನಾವು ಅಂಬುಲೆನ್ಸ್ ಡ್ರೈವರ್ಸ್ ಆಗುವ ಮೂಲಕ ಜನರ ನೆರವಿಗೆ ಮುಂದಾಗಿರುವುದು ಖುಷಿ ಕೊಡುತ್ತಿದೆ ಎಂದು ತಿಳಿಸಿದ್ದಾರೆ.

    ದೇಶದಲ್ಲಿ ಕಳೆದ 24 ಗಂಟೆಯಲ್ಲಿ ಬರೋಬ್ಬರಿ 2,67,334 ಮಂದಿಗೆ ಕೊರೊನಾ ಪಾಸಿಟಿವ್ ಆಗಿದ್ದು, ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,54,96,330ಕ್ಕೆ ಏರಿಕೆ ಕಂಡಿದೆ.

  • ಕ್ಯಾನ್ಸರ್ ರೋಗಿಗಳಿಗೆ ನೆರವಾಗಿ – ಬೈಕ್ ರೈಡರ್ಸ್ ತಂಡದಿಂದ ಅಭಿಯಾನ

    ಕ್ಯಾನ್ಸರ್ ರೋಗಿಗಳಿಗೆ ನೆರವಾಗಿ – ಬೈಕ್ ರೈಡರ್ಸ್ ತಂಡದಿಂದ ಅಭಿಯಾನ

    ಬೆಂಗಳೂರು: ನವೆಂಬರ್ ತಿಂಗಳಿನಲ್ಲಿ ಶೇವ್ ಗೆ ಬಳಸುವ ದುಡ್ಡನ್ನು ಕ್ಯಾನ್ಸರ್ ರೋಗಿಗಳಿಗೆ ತಲುಪಿಸಲು ಬೆಂಗಳೂರಿನ ಬೈಕ್ ರೈಡರ್ಸ್ ತಂಡ ಮುಂದಾಗಿದೆ.

    ‘ಬ್ರೋಸ್ ಅನ್ ವೀಲ್ಸ್’ ಹೆಸರಿನ ರೈಡರ್ಸ್ ತಂಡ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುತ್ತಾ,  ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆಗೆ ನೆರವಾಗುವುದು ಮತ್ತು ಅವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಮಾಡುತ್ತಿದೆ.

    ಈ ತಿಂಗಳು ಯಾರೂ ಶೇವ್ ಮಾಡ್ಬೇಡಿ. ನಿಮ್ಮ ಶೇವ್ ಗೆ ಬಳಸುವ ಹಣವನ್ನು ಮಿಲ್ಯಾಪ್ ಮೂಲಕ ಬೆಂಗಳೂರಿನ ಕುಂದನಳ್ಳಿಯಲ್ಲಿರುವ ಕರುಣಾಶ್ರಯದಲ್ಲಿರುವ ಕ್ಯಾನ್ಸರ್ ಪೀಡಿತರಿಗೆ ತಲುಪಿಸಲಾಗುತ್ತದೆ. ಕ್ಯಾನ್ಸರ್ ಕೊನೆಯ ಸ್ಟೇಜ್ ನಲ್ಲಿರುವವರಿಗೆ ನೀಡಲಾಗುತ್ತದೆ ಎಂದು ತಂಡ ಹೇಳಿದೆ.

    ತಂಡ ೨ ಲಕ್ಷ ರೂ. ಹಣವನ್ನು ಸಂಗ್ರಹಿಸುವ ಗುರಿಯನ್ನು ಹಾಕಿಕೊಂಡಿದ್ದು, 4  ದಿನದಲ್ಲಿ 14 ಸಾವಿರ ರೂ. ಸಂಗ್ರಹಗೊಂಡಿದೆ. ನವೆಂಬರ್ 30 ರವರೆಗೆ ಜನರು ಹಣವನ್ನು ಹಾಕಬಹುದಾಗಿದೆ.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಬಹುದಾಗಿದೆ – www.milaap.org/fundraisers/support-no-shave-november