Tag: ಬೈಕ್ ರೈಡರ್

  • ಕುರ್ಚಿ ಪಾಲಿಟಿಕ್ಸ್ ಗೇಮ್ ನಂಗೆ ಕಷ್ಟ – ರಿವೀಲ್ ಆಯ್ತು ಅರವಿಂದ್ ಕಥೆ

    ಕುರ್ಚಿ ಪಾಲಿಟಿಕ್ಸ್ ಗೇಮ್ ನಂಗೆ ಕಷ್ಟ – ರಿವೀಲ್ ಆಯ್ತು ಅರವಿಂದ್ ಕಥೆ

    ಬಿಗ್‍ಬಾಸ್ ಕೊಟ್ಟ ಕುರ್ಚಿ ಪಾಲಿಟಿಕ್ಸ್ ಗೇಮ್‍ನಿಂದ ಬೈಕ್ ರೈಡರ್ ಅರವಿಂದ್ ಹಿಂದೆ ಸರಿದಿದ್ದರು. ಇದೀಗ ಈ ಗೇಮ್‍ನಿಂದ ಅರವಿಂದ್ ಹಿಂದೆ ಸರಿಯಲು ಏನು ಕಾರಣ ಎಂಬುದನ್ನು ‘ವಾರದ ಕಥೆ ಕಿಚ್ಚನ ಜೊತೆ’ಕಾರ್ಯಕ್ರಮದಲ್ಲಿ ರೀವಿಲ್ ಮಾಡಿದ್ದಾರೆ.

    ಸುದೀಪ್ ಅವರು ಒಂದೊಂದು ಟಾಸ್ಕ್ ಗೆ ಒಂದೊಂದು ಸ್ಕಿಲ್ ಬೇಕು. ಹಾಗೆ ಇಂತಹ ಒಂದು ಟಾಸ್ಕ್ ಕಷ್ಟ ಎಂದು ನೀವು ಹೇಳಲು ಕಾರಣ ಏನು ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ಅರವಿಂದ್ ನನಗೆ ಅಷ್ಟೊತ್ತು ಕೂತುಕೊಳ್ಳಲು ಆಗುವುದಿಲ್ಲ. ನನಗೆ ಮೊದಲೇ ಕಾಲಿನಲ್ಲಿ ಗಾಯ ಇರುವ ಕಾರಣ ಈ ಗೇಮ್‍ನಿಂದ ಹಿಂದಕ್ಕೆ ಸರಿಯುವ ನಿರ್ಧಾರ ಮಾಡಿದೆ ಎಂದು ಉತ್ತರಿಸಿದ್ದಾರೆ.

    ನೀವು ರೇಸಿಂಗ್ ಹೋದಾಗ ಎಷ್ಟೊತ್ತು ಕೂರುತ್ತೀರಿ ಎಂದು ಕಿಚ್ಚ ಮರು ಪ್ರಶ್ನೆ ಹಾಕಿದ್ದಾರೆ. ಇದಕ್ಕೆ ಉತ್ತರಿಸಿದ ಅರವಿಂದ್, ಬೆಳಿಗ್ಗೆ 4 ಗಂಟೆಗೆ ಪ್ರಾರಂಭ ಮಾಡಿದರೆ ಸ್ವಲ್ಪ ಕಿಲೋಮೀಟರ್ ಲಿಯೊಸಾನ್ ಇರುತ್ತದೆ. ಆದಾದ ಬಳಿಕ 400 ರಿಂದ 500 ಕಿಲೋಮೀಟರ್ ಸ್ಟೇಜಸ್ ಇರುತ್ತದೆ, ಮತ್ತೆ ವಾಪಸ್ 100ರಿಂದ 200 ಕಿಲೋಮೀಟರ್ ಲಿಯೊಸಾನ್ ಇರುತ್ತದೆ. ಮತ್ತೆ ಬಿ ವಾಕ್ ಇರುತ್ತದೆ. ಈ ಸಂದರ್ಭ ನಮಗೆ ಲಿಯೊಸಾನ್ ಸುತ್ತಿನಲ್ಲಿ ಮಾತ್ರ ಕೂತುಕೊಂಡು ಬೈಕ್ ರೈಡ್ ಮಾಡಲು ಅವಕಾಶ ಅದು ಕೂಡ ಒಂದೇ ರೀತಿ ಕೂತು ಇರಲ್ಲ ಬೇರೆ ಬೇರೆ ಸ್ಟೆಪ್‍ಗಳನ್ನು ತೆಗೆದುಕೊಂಡಿರುತ್ತೇವೆ. ಇದನ್ನೂ ಓದಿ: ಬಿಗ್‍ಬಾಸ್ ಮನೆಗೆ ಬಟ್ಟೆ ಒಗೆಯೊಕೆ ಬಟ್ಟೆ ತಂದವರ್ಯಾರು ಗೊತ್ತಾ?

    ಬೈಕ್ ರೈಡಿಂಗ್ ವೇಳೆ ಕೂತಂತೆ ಕಾಣಿಸುತ್ತದೆ. ಆದರೆ ಕೂತಿರಲ್ಲ ನಾವು ಜಾಕಿ ತರ ಸ್ಕಾಟ್ ಮಾಡುತ್ತಾ ಇರುತ್ತೇವೆ. ಹಾಗಾಗಿ ಏನು ತೊಂದರೆ ಆಗುವುದಿಲ್ಲ. ಆದರೆ ತುಂಬಾ ಹೊತ್ತು ಒಂದೇ ರೀತಿ ಕೂತಿದ್ದರೆ ಮಾಂಸಖಂಡಗಳು ಸೆಳೆತಕ್ಕೆ ಒಳಗಾಗುವ ಸಾಧ್ಯತೆ ಇರುವ ಕಾರಣ ಈ ಟಾಸ್ಕ್ ನಿಂದ ಹಿಂದೆ ಸರಿದೆ ಎಂದಿದ್ದಾರೆ.

  • ಬೈಕ್ ರೈಡರ್‌ನನ್ನು ನಿಲ್ಲಿಸಿ ಮಾನವೀಯತೆ ಮೆರೆದ ಪೊಲೀಸ್ ಪೇದೆ

    ಬೈಕ್ ರೈಡರ್‌ನನ್ನು ನಿಲ್ಲಿಸಿ ಮಾನವೀಯತೆ ಮೆರೆದ ಪೊಲೀಸ್ ಪೇದೆ

    – ಪೊಲೀಸ್ ನೀಡಿದ ಮಿಷನ್ ಪೂರ್ಣಗೊಳಿಸಿದ ಕನ್ನಡಿಗ
    – ವೀಡಿಯೋ ವೈರಲ್

    ಚೆನ್ನೈ: ರಸ್ತೆಯಲ್ಲಿ ಸಂಚರಿಸುವ ಬೈಕ್ ಕಾರುಗಳನ್ನು ನಿಲ್ಲಿಸಿ ತಪಾಸಣೆ ನಡೆಸುವುದು ಪೊಲೀಸರ ಕರ್ತವ್ಯ. ಆದರೆ ಇಲ್ಲೊಬ್ಬರು ಪೊಲೀಸ್ ಪೇದೆ ಪ್ರವಾಸಿಗನ ಬೈಕನ್ನು ನಿಲ್ಲಿಸಿ ಮುಂದೆ ಚಲಿಸುತ್ತಿರುವ ಬಸ್ಸ್ ನಲ್ಲಿರುವ ಮಹಿಳೆಯೊಬ್ಬರಿಗೆ ಔಷಧಿಯ ಬಾಟಲ್ ಕೊಡುವಂತೆ ಮನವಿ ಮಾಡಿಕೊಂಡು ಮಾನವೀಯತೆ ಮೆರೆದಿದ್ದಾರೆ.

    ಕರ್ನಾಟಕ ಮೂಲದ ಪ್ರವಾಸಿಗರೊಬ್ಬರು ಬೈಕ್‍ನಲ್ಲಿ ತಮಿಳುನಾಡಿನ ತೆಂಕಾಸಿ ಬಳಿ ಪ್ರಯಾಣಿಸುತ್ತಿದ್ದರು. ಈ ವೇಳೆ ತಮಿಳುನಾಡಿನ ಪೊಲೀಸ್ ಪೇದೆ ಬೈಕ್ ನಿಲ್ಲಿಸಿ ಬೈಕ್ ರೈಡರ್ ಬಳಿ ಯಾವ ಊರು ಎಂದು ವಿಚಾರಿಸಿದ್ದಾರೆ. ಬೈಕ್ ರೈಡರ್ ಕರ್ನಾಟಕದಿಂದ ಬಂದಿದ್ದೇನೆ ಎನ್ನುತ್ತಾರೆ. ನಂತರ ಪೇದೆ ನೀವು ಚಲಿಸುವ ಮುಂದಿನ ದಾರಿಯಲ್ಲಿ ರಾಜ್ಯದ ಸರ್ಕಾರಿ ಬಸ್ ಹೋಗುತ್ತಿದೆ. ಅದರಲ್ಲಿ ಪ್ರಯಾಣಿಸುವ ಮಹಿಳೆಯೊಬ್ಬರು ಔಷಧಿಯ ಬಾಟಲ್ ಬೀಳಿಸಿಕೊಂಡು ಹೋಗಿದ್ದಾರೆ, ಅವರಿಗೆ ಔಷಧಿಯನ್ನ ತಲುಪಿಸಬಹುದೇ ಎಂದು ವಿನಂತಿ ಮಾಡಿಕೊಂಡಿದ್ದಾರೆ. ಬೈಕ್ ರೈಡರ್ ತಲುಪಿಸುವುದಾಗಿ ತಿಳಿಸಿ ಔಷಧಿ ಬಾಟಲ್ ಪಡೆದುಕೊಂಡು ಬಸ್‍ನ್ನು ಹಿಂಬಾಲಿಸಿ ಮಹಿಳೆಗೆ ಕೊಟ್ಟಿದ್ದಾರೆ.

    ಈ ವೀಡಿಯೋವನ್ನು ಅನ್ನಿಅರುಣ್ ಎಂಬ ಹೆಸರಿನ ಯೂಟ್ಯೂಬ್ ಚಾನೆಲ್ ನಲ್ಲಿ ಅಪ್ಲೋಡ್ ಮಾಡಲಾಗಿದೆ. ಹರಿಬಿಟ್ಟಿದ್ದಾರೆ ವೀಡಿಯೋ ವೀಕ್ಷಿಸಿರುವ ಜನರು ಪೇದೆ ಮತ್ತು ಬೈಕ್ ರೈಡರ್ ನ ಸಂಭಾಷಣೆಯನ್ನು ಕೇಳಿ ಖುಷಿ ಪಟ್ಟಿದ್ದಾರೆ.

    ಬೈಕ್ ರೈಡರ್ ಪೇದೆಯ ಕೈಯಿಂದ ಔಷಧಿ ಬಾಟಲ್ ಪಡೆದುಕೊಂಡು ಬಸ್‍ನ್ನು ಹಿಂಬಾಲಿಸಿಕೊಂಡು ಬಂದು ತಡೆದು ನಿಲ್ಲಿಸಿದ್ದಾರೆ. ಬಸ್‍ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಔಷಧಿ ಯನ್ನು ನೀಡಿ ಮಿಷನ್ ಕಂಪ್ಲೀಟ್ ಎಂದು ಹೇಳಿದ್ದಾರೆ. ಈ ವೀಡಿಯೋವನ್ನು ಎರಡು ದಿನಗಳಲ್ಲಿ 15 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು ಹಲವು ರೀತಿಯ ಕಮೆಂಟ್‍ಗಳನ್ನು ಹಾಕಿ ಶೇರ್ ಮಾಡುತ್ತಿದ್ದಾರೆ.