Tag: ಬೈಕ್ ರೇಸ್

  • ಚೆನ್ನೈನ ಬೈಕ್ ರೇಸ್‌ನಲ್ಲಿ ಅಪಘಾತ – ಬೆಂಗಳೂರು ಮೂಲದ 13ರ ಪ್ರತಿಭೆ ದುರ್ಮರಣ

    ಚೆನ್ನೈನ ಬೈಕ್ ರೇಸ್‌ನಲ್ಲಿ ಅಪಘಾತ – ಬೆಂಗಳೂರು ಮೂಲದ 13ರ ಪ್ರತಿಭೆ ದುರ್ಮರಣ

    ಬೆಂಗಳೂರು: ಚೆನ್ನೈನ ಮದ್ರಾಸ್ ಇಂಟರ್‌ನ್ಯಾಶನಲ್ ಸರ್ಕ್ಯೂಟ್‌ನಲ್ಲಿ ಶನಿವಾರ ನಡೆದ ಎಂಆರ್‌ಎಫ್ ಎಂಎಂಎಸ್‌ಸಿ ಎಫ್‌ಎಂಎಸ್‌ಸಿಐ ಇಂಡಿಯನ್ ನ್ಯಾಷನಲ್ ಮೋಟಾರ್‌ಸೈಕಲ್ ರೇಸಿಂಗ್ ಚಾಂಪಿಯನ್‌ಶಿಪ್‌ನ ಮೂರನೇ ಸುತ್ತಿನಲ್ಲಿ ಅಪಘಾತಕ್ಕೀಡಾಗಿ ಬೆಂಗಳೂರು ಮೂಲದ 13 ವರ್ಷದ ಕೊಪ್ಪರಂ ಶ್ರೇಯಸ್ ಹರೀಶ್‌ (Copparam Shreyas Hareesh) ದುರ್ಮರಣ ಹೊಂದಿದ್ದಾನೆ.

    ಟರ್ನ್-1 ನಿಂದ ನಿರ್ಗಮಿಸಿದ ಶ್ರೇಯಸ್ ತಿರುವಿನಲ್ಲಿ ಆಯತಪ್ಪಿ ಬೈಕ್ ಉರುಳಿದ್ದು, ಈ ವೇಳೆ ಆತನ ತಲೆಗೆ ಹಾಕಲಾಗಿದ್ದ ಹೆಲ್ಮೆಟ್ ಕಳಚಿಕೊಂಡಿತ್ತು. ಹಿಂದಿನಿಂದ ಬರುತ್ತಿದ್ದ ಇನ್ನೊಬ್ಬ ಸ್ಪರ್ಧಿಯ ಬೈಕ್ ಶ್ರೇಯಸ್ ಮೇಲೆ ಹರಿದು ಮುಂದೆ ಸಾಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

    ತಕ್ಷಣ ಸ್ಪರ್ಧೆಯನ್ನು ಸ್ಥಗಿತಗೊಳಿಸಿ, ಶ್ರೇಯಸ್‌ನನ್ನು ಅಂಬುಲೆನ್ಸ್‌ನಲ್ಲಿ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಶ್ರೇಯಸ್ ಆಸ್ಪತ್ರೆ ತಲುಪುವಷ್ಟರಲ್ಲಿ ಸಾವನ್ನಪ್ಪಿದ್ದಾನೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಎನ್‌ಕೌಂಟರ್ – ಒಬ್ಬ ಭಯೋತ್ಪಾದಕನನ್ನು ಹೊಡೆದುರುಳಿಸಿದ ಭದ್ರತಾ ಪಡೆ

    2010 ಜುಲೈ 26ರಂದು ಜನಿಸಿದ ಶ್ರೇಯಸ್ ಬೆಂಗಳೂರಿನ ಕೆನ್ಸ್ರಿ ಶಾಲೆಯಲ್ಲಿ ವಿದ್ಯಾರ್ಥಿಯಾಗಿದ್ದ. ಚಿಕ್ಕ ವಯಸ್ಸಿನಿಂದಲೇ ಬೈಕ್ ರೇಸ್‌ನಲ್ಲಿ ಅತೀವ ಆಸಕ್ತಿ ಹೊಂದಿದ್ದ. ಪೆಟ್ರೋನಾಸ್‌ನ ರೂಕಿ ವಿಭಾಗದಲ್ಲಿ ಸ್ಪರ್ಧಿಸಿ ರಾಷ್ಟ್ರಮಟ್ಟ ಸೇರಿದಂತೆ ಸತತ 4 ಬಾರಿ ರೇಸ್‌ಗಳನ್ನು ಗೆದ್ದಿದ್ದ.

    ಈ ದುರ್ಘಟನೆ ಬಳಿಕ ಮದ್ರಾಸ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ ಶನಿವಾರ ಹಾಗೂ ಭಾನುವಾರ ನಿಗದಿಯಾಗಿದ್ದ ಉಳಿದ ರೇಸ್‌ಗಳನ್ನು ರದ್ದುಗೊಳಿಸಿದೆ. ಇದನ್ನೂ ಓದಿ: 20 ನಿಮಿಷದಲ್ಲಿ 2 ಲೀಟರ್‌ ನೀರು ಕುಡಿಯಲು ಹೋಗಿ ಮಹಿಳೆ ಸಾವು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 2023ರಲ್ಲಿ ನಡೆಯಲಿದೆ ಭಾರತದ ಮೊದಲ MotoGP ರೇಸ್‌

    2023ರಲ್ಲಿ ನಡೆಯಲಿದೆ ಭಾರತದ ಮೊದಲ MotoGP ರೇಸ್‌

    ನವದೆಹಲಿ: ಬೈಕ್‌ ರೇಸ್‌ ಪ್ರಿಯರಿಗೆ ಗುಡ್‌ ನ್ಯೂಸ್‌. ಟಿವಿಯಲ್ಲಿ ವೀಕ್ಷಿಸುತ್ತಿದ್ದ ಮೋಟೋ ಜಿಪಿ ಸ್ಪರ್ಧೆಯನ್ನು ಇನ್ನು ಮುಂದೆ ನೀವು ಭಾರತದಲ್ಲೇ ನೋಡಬಹುದು. ಬುದ್ಧ ಇಂಟರ್ನ್ಯಾಷನಲ್ ಸರ್ಕ್ಯೂಟ್‌ನಲ್ಲಿ(Buddh International Circuit) 2023ರಲ್ಲಿ ದೇಶದ ಮೊದಲ ಮೋಟೋ ಜಿಪಿ(MotoGP) ರೇಸ್‌ ಆಯೋಜನೆಯಾಗಲಿದೆ.

    ಈ ಸಂಬಂಧ ಮೋಟೋ ಜಿಪಿ ಅಧಿಕೃತ ಹೇಳಿಕೆಯನ್ನು ನೀಡಿದ್ದು, ಇಂಡಿಯನ್‌ ಜಿಪಿ (Indian Grand Prix) ಹೆಸರಿನಲ್ಲಿ ಈ ರೇಸ್‌ ಸ್ಪರ್ಧೆ ನಡೆಯಲಿದೆ. ಭಾರತ ನಿಜವಾದ ಆರ್ಥಿಕ ಮತ್ತು ಸಾಂಸ್ಕೃತಿಕ ಶಕ್ತಿ ಕೇಂದ್ರವಾಗಿದೆ ಎಂದು ತಿಳಿಸಿದೆ.

    ಭಾರತವು ಮೋಟಾರ್‌ಸೈಕಲ್ ಉದ್ಯಮಕ್ಕೆ ಪ್ರಮುಖ ಮಾರುಕಟ್ಟೆಯಾಗಿದೆ. 1.4 ಶತಕೋಟಿಗೂ ಹೆಚ್ಚು ಜನಸಂಖ್ಯೆ ಮತ್ತು 20 ಕೋಟಿಗೂ ಹೆಚ್ಚು ಮೋಟಾರ್‌ಸೈಕಲ್‌ಗಳನ್ನು ಹೊಂದಿದೆ. ನಾವು ಭಾರತದಲ್ಲಿ ಬಹಳಷ್ಟು ಅಭಿಮಾನಿಗಳನ್ನು ಹೊಂದಿದ್ದೇವೆ ಮತ್ತು ಅವರಿಗೆ ಕ್ರೀಡೆಯನ್ನು ತರಲು ನಾವು ಉತ್ಸುಕರಾಗಿದ್ದೇವೆ ಎಂದು ತಿಳಿಸಿದೆ. ಇದನ್ನೂ ಓದಿ: T20 ವಿಶ್ವಕಪ್ ಗೆದ್ದವರಿಗೆ ಸಿಗಲಿದೆ 13.2 ಕೋಟಿ ರೂ.

    2023ರಲ್ಲಿ ನಡೆಯಲಿರುವ ರೇಸ್‌ ಕ್ಯಾಲೆಂಡರ್‌ ಬಿಡುಗಡೆಯಾಗಿದ್ದು, ಮೋಟೋ ಜಿಪಿಯ 14ನೇ ರೇಸ್‌ ಭಾರತದಲ್ಲಿ ಸೆ.22 ರಂದು 24 ರವರೆಗೆ ನಡೆಯಲಿದೆ. ಕೇಂದ್ರ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ ಪ್ರತಿಕ್ರಿಯಿಸಿ, ಇದು ಕ್ರೀಡಾ ಉದ್ಯಮಕ್ಕೆ ಐತಿಹಾಸಿಕ ದಿನ ಮತ್ತು ಭಾರತದ 75ನೇ ವರ್ಷದ ಸಂಭ್ರಮಾಚರಣೆಗೆ ಸಿಗುತ್ತಿರುವ ಗೌರವ ಎಂದು ಹೇಳಿದ್ದಾರೆ.

    ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಉತ್ತರ ಪ್ರದೇಶವು ಇಂತಹ ಜಾಗತಿಕ ಕಾರ್ಯಕ್ರಮವನ್ನು ಆಯೋಜಿಸುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ. ಮೋಟೋಜಿಪಿ ಭಾರತ್‌ಗೆ ನಮ್ಮ ಸರ್ಕಾರ ಸಂಪೂರ್ಣ ಬೆಂಬಲವನ್ನು ನೀಡುತ್ತದೆ ಎಂದಿದ್ದಾರೆ.

    ಉತ್ತರ ಪ್ರದೇಶದ ಗ್ರೇಟರ್‌ ನೋಯ್ಡಾದಲ್ಲಿ 5.125 ಕಿ.ಮೀ ಉದ್ದದ ಬುದ್ಧ ಸರ್ಕ್ಯೂಟ್‌ ಇದ್ದು 2011 ರಲ್ಲಿ ಅಧಿಕೃತವಾಗಿ ಉದ್ಘಾಟನೆಯಾಗಿದೆ. ಜೆಪಿ ಗ್ರೂಪ್‌ ಮಾಲೀಕತ್ವವನ್ನು ಹೊಂದಿರುವ ಈ ರೇಸ್‌ ಟ್ರ್ಯಾಕ್‌ನಲ್ಲಿ ಫಾರ್ಮುಲಾ ಒನ್‌ ಸ್ಪರ್ಧೆಗಳು ನಡೆದಿದ್ದವು. 2014ರಲ್ಲಿ ಅಖಿಲೇಶ್‌ ಯಾದವ್‌ ಅಧಿಕಾರದ ಅವಧಿಯಲ್ಲಿ ತೆರಿಗೆ ವಿವಾದ ಉಂಟಾಗಿ ಫಾರ್ಮುಲಾ ಒನ್‌ ಸ್ಪರ್ಧೆ ಸ್ಥಗಿತಗೊಂಡಿತ್ತು. ಪ್ರಸ್ತುತ ಇಲ್ಲ ಫಾರ್ಮುಲಾ ರಿಜಿನಲ್‌ ಇಂಡಿಯನ್‌ ಚಾಂಪಿಯನ್‌ಶಿಪ್‌ ಮತ್ತು ಫಾರ್ಮುಲಾ 4 ಇಂಡಿಯನ್‌ ಚಾಂಪಿಯನ್‌ಶಿಪ್‌ ಸ್ಪರ್ಧೆ ನಡೆಯುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಜನಮನ ಸೆಳೆದ ಡರ್ಟ್ ಟ್ರ್ಯಾಕ್ ಮೋಟಾರ್ ಸೈಕಲ್ ರೇಸ್

    ಜನಮನ ಸೆಳೆದ ಡರ್ಟ್ ಟ್ರ್ಯಾಕ್ ಮೋಟಾರ್ ಸೈಕಲ್ ರೇಸ್

    ಚಿಕ್ಕೋಡಿ: ತಾಲೂಕಿನ ಮುಗಳಿ ಗ್ರಾಮದ ಬಸವೇಶ್ವರ ಜಾತ್ರೆ ಅಂಗವಾಗಿ  ಡರ್ಟ್ ಟ್ರ್ಯಾಕ್ ಮೋಟಾರ್ ಸೈಕಲ್ ರೇಸ್ ಸ್ಪರ್ಧೆ ನಡೆಯಿತು.

    ಗಜಾನನ ರೇಸಿಂಗ್ ಸಂಘಟನಾ ಕಮಿಟಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಓಪನ್ ಕ್ಲಾಸ್, 125ಸಿಸಿ ಮೋಟಾರ್ ಸೈಕಲ್ ರೇಸ್ ವಿಭಾಗದಲ್ಲಿ ಇಚಲಕರಂಜಿ  ಧಾರವಾಡ, ಬೆಳಗಾವಿ, ಸಾಂಗ್ಲಿ ಕೊಲ್ಲಾಪುರ, ಪಣಜಿ, ಪುಣೆ ಸಾಂಗಲಿ, ನಗರ ಸೇರಿದಂತೆ ಗಡಿಭಾಗದ ಮೂರು ರಾಜ್ಯದ ಸುಮಾರು 150ಕ್ಕೂ ಹೆಚ್ಚಿನ ಸ್ಪರ್ಧಾಳುಗಳು ಪಾಲ್ಗೊಂಡಿದ್ದರು. ಇದನ್ನೂ ಓದಿ: ಎಲ್ಲೆಂದರಲ್ಲಿ ಕಾಣಿಸುತ್ತಿದೆ Z ಸಿಂಬಲ್ – ಇದು ರಷ್ಯಾದ ಯುದ್ಧದ ಸಂಕೇತ!

    ಬೈಕ್ ರೇಸ್‍ಗೆ ಚಾಲನೆ ನೀಡಿ ಮಾತನಾಡಿದ ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಮುಗಳಿ ಗ್ರಾಮದ ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಮಲ್ಲಪ್ಪಾ ಬಡಿಗೇರ ಅವರ ನೇತೃತ್ವದಲ್ಲಿ ಸಣ್ಣ ಪ್ರಮಾಣದಲ್ಲಿ ಆರಂಭಗೊಂಡ ಬೈಕ್ ರೇಸ್ ರಾಷ್ಟ್ರ ಮಟ್ಟದ ಡರ್ಟ್ ಟ್ರ್ಯಾಕ್ ಬೈಕ್ ರೇಸ್‍ಗೆ ಬೆಳೆದು ನಿಂತಿದ್ದು ಶ್ಲಾಘನೀಯ ಎಂದರು. ಇದನ್ನೂ ಓದಿ: ವಿಧಾನಸಭೆಗೆ ಕುದುರೆ ಏರಿ ಬಂದ ಕಾಂಗ್ರೆಸ್ ಶಾಸಕಿ ಅಂಬಾ ಪ್ರಸಾದ್

    ಯರನಾಳದ ಬ್ರಹ್ಮಾನಂದ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು ಗ್ರಾಮ ಪಂಚಾಯತ್ ಅಧ್ಯಕ್ಷ ರಮೇಶ್ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ವಿಜಯ ಕೋಟೆವಾಲೆ, ವಿಳಾಸ ಪಾಲ, ರಾಜು ಪಾಟೀಲ್ ದುಂಡಪ್ಪಾ ಬೆಂಡವಾಡೆ, ರುದ್ರಪ್ಪಾ ಸಂಗಪ್ಪಗೋಳ, ರಾಜು ಹರಗನ್ನವರ, ಆಯೋಜಕ ಮಲ್ಲಪ್ಪ ಬಡಿಗೇರ್, ಬಿ.ಕೆ.ಪಾಟೀಲ್, ಎಲ್.ಎಸ್.ಹಂಚಿನಾಳೆ ಉಪಸ್ಥಿತರಿದ್ದರು.

  • ಹೊಂಡಗುಂಡಿ ರಸ್ತೆಯಲ್ಲಿ ಡರ್ಟ್ ರೇಸ್ ಪ್ರೊಟೆಸ್ಟ್ – ಗೆದ್ದವರಿಗೆ ಟ್ರೋಫಿ ಜೊತೆ ಮುಲಾಮು

    ಹೊಂಡಗುಂಡಿ ರಸ್ತೆಯಲ್ಲಿ ಡರ್ಟ್ ರೇಸ್ ಪ್ರೊಟೆಸ್ಟ್ – ಗೆದ್ದವರಿಗೆ ಟ್ರೋಫಿ ಜೊತೆ ಮುಲಾಮು

    ಉಡುಪಿ: ಕಾರ್ಕಳ ನಗರದ ಸಾಲು, ಸಾಲು ಹೊಂಡದ ರಸ್ತೆಯಲ್ಲಿ ಬೈಕ್ ರೇಸ್ ಮಾಡುವ ಮೂಲಕ ಕಾಂಗ್ರೆಸ್ ವಿಭಿನ್ನವಾಗಿ ಪ್ರತಿಭಟಿಸಿದೆ. ಗೆದ್ದವರಿಗೆ ಟ್ರೋಫಿ ಮತ್ತು ಬೆನ್ನು ನೋವಿಗೆ ಮುಲಾಮು ನೀಡಿ ರಾಜ್ಯ ಸರ್ಕಾರವನ್ನು ಮತ್ತು ಸ್ಥಳೀಯ ಶಾಸಕ, ಇಂಧನ ಮತ್ತು ಕನ್ನಡ ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಅವರನ್ನು ಕಾಂಗ್ರೆಸ್ ಲೇವಡಿ ಮಾಡಿದೆ.

    ಕಾರ್ಕಳ ನಗರ ಭಾಗದಲ್ಲಿ ಸುಮಾರು 3 ಕಿಲೋಮೀಟರ್ ರಸ್ತೆ ನೂರಾರು ಹೊಂಡ ಗುಂಡಿಗಳಿಂದ ಕೂಡಿದೆ. ಈ ಬಗ್ಗೆ ಸಾಕಷ್ಟು ಬಾರಿ ರಾಜ್ಯ ಸರ್ಕಾರವನ್ನು, ವಿವಿಧ ಇಲಾಖೆಗಳ ಗಮನ ಸೆಳೆದರೂ ಗುಂಡಿಗಳನ್ನು ಮುಚ್ಚಿಸುವ ಕೆಲಸ ಆಗಿಲ್ಲ. ವಿಭಿನ್ನ ರೀತಿಯಲ್ಲಿ ಹಿಂದೆ ಮೂರ್ನಾಲ್ಕು ಬಾರಿ ಪ್ರತಿಭಟನೆ ನಡೆಸಿದರೂ ಅಧಿಕಾರಿಗಳು ಈ ಬಗ್ಗೆ ಎಚ್ಚೆತ್ತುಕೊಂಡಿಲ್ಲ. ಇದನ್ನೂ ಓದಿ: ಮದುವೆ ದಿಬ್ಬಣದ ಬಸ್ ಪಲ್ಟಿ – 2 ಸಾವು, 16 ಮಂದಿಗೆ ಗಾಯ

    ಇಂದು ಕಾರ್ಕಳ ತಾಲೂಕು ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ್ ನೇತೃತ್ವದಲ್ಲಿ ವಿಭಿನ್ನವಾಗಿ ಪ್ರತಿಭಟನೆ ನಡೆಯಿತು. ಹೊಂಡಗುಂಡಿ ರಸ್ತೆಯಲ್ಲಿ ಬೈಕ್ ರೇಸ್ ಆಯೋಜನೆ ಮಾಡುವ ಮೂಲಕ ರಾಜ್ಯ ಸರ್ಕಾರವನ್ನು ಮತ್ತೆ ಸೆಳೆಯುವ ಪ್ರಯತ್ನ ಮಾಡಲಾಗಿದೆ. ಬೈಕ್ ರೇಸ್ ನಲ್ಲಿ ಗೆದ್ದವರಿಗೆ ಬೆನ್ನು ನೋವು ನಿವಾರಣೆಗೆ ಬಳಸುವ ಮುಲಾಮುಗಳನ್ನು ಹಂಚಲಾಯಿತು. ಸುನೀಲ್ ಕುಮಾರ್, ಪುರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯ್ತು. ಮಳೆ ನಿಂತಿದೆ ಕೂಡಲೇ ರಸ್ತೆ ದುರಸ್ತಿ ಕಾರ್ಯ ನಡೆಸದಿದ್ದರೆ, ರಸ್ತೆ ತಡೆ ಮಾಡುವುದಾಗಿ ಕಾಂಗ್ರೆಸ್ ನಾಯಕರು ಎಚ್ಚರಿಕೆ ನೀಡಿದರು.

    ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಕಾಂಗ್ರೆಸ್ ನಾಯಕ ಶುಭದ್ ರಾವ್, ಅಭಿವೃದ್ಧಿಯ ಮಂತ್ರವನ್ನು ಯಾವಾಗಲೂ ಜಪಿಸುವ ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರು ಕಾರ್ಕಳದ ರಸ್ತೆಗಳ ಬಗ್ಗೆ ಯಾಕೆ ಮೌನವಹಿಸಿದ್ದಾರೆ. ಹೊಂಡ ಬಿದ್ದ ರಸ್ತೆಯಲ್ಲಿ ಜನರ ಓಡಾಟ ಎಷ್ಟು ಕಷ್ಟ ಇದೆ ಎಂಬುದು ನಿಮಗೆ ಗೊತ್ತಿದೆಯೇ? ಈಗಾಗಲೇ ಮಳೆ ಕಡಿಮೆಯಾಗಿದೆ ರಸ್ತೆಯ ದುರಸ್ತಿ ಮಾಡಿ ಒಳಚರಂಡಿ ವ್ಯವಸ್ಥೆಯನ್ನು ಸರಿ ಮಾಡಿ ಇಲ್ಲದಿದ್ದರೆ ನಿರಂತರ ಪ್ರತಿಭಟನೆ ಮಾಡುವುದಾಗಿ ಕಿಡಿಕಾರಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನಕ್ಕೆ ಇಂಡಿಯಾದವ್ರು ಹೆಂಗೆ ಮಂಜಾ ಕೊಡ್ತಾರೆ ನೋಡಿ: ಜಮೀರ್

  • ಸೂಪರ್‍ಬೈಕ್ ರೇಸಿಂಗ್ ವೇಳೆ ಯುವಕ ಸಾವು- ಅಪಘಾತದ ದೃಶ್ಯ ಕ್ಯಾಮೆರಾದಲ್ಲಿ ಸೆರೆ

    ಸೂಪರ್‍ಬೈಕ್ ರೇಸಿಂಗ್ ವೇಳೆ ಯುವಕ ಸಾವು- ಅಪಘಾತದ ದೃಶ್ಯ ಕ್ಯಾಮೆರಾದಲ್ಲಿ ಸೆರೆ

     

    ನವದೆಹಲಿ: 24 ವರ್ಷದ ಯುವಕನೊಬ್ಬ ತನ್ನ ಇಬ್ಬರು ಸ್ನೇಹಿತರೊಂದಿಗೆ ರೇಸಿಂಗ್ ಮಾಡುವ ವೇಳೆ ಅಪಘಾತವಾಗಿ ಮೃತಪಟ್ಟ ಘಟನೆ ಸೋಮವಾರದಂದು ದೆಹಲಿಯಲ್ಲಿ ನಡೆದಿದೆ.

    ಸ್ಪೀಡ್ ರೇಸ್‍ನ ದೃಶ್ಯ ಹಾಗೂ ಇಲ್ಲಿನ ಮಂಡಿ ಹೌಸ್ ಮೆಟ್ರೋ ಸ್ಟೇಷನ್ ಬಳಿ ನಡೆದ ಅಪಘಾತದ ಸಂಪೂರ್ಣ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮೃತ ಯುವಕ ಹಿಮಾಂಶು ಬನ್ಸಲ್ ಜೊತೆಗೆ ರೇಸಿಂಗ್ ಹೋಗಿದ್ದ ಸ್ನೇಹಿತರಲ್ಲೊಬ್ಬ ವಿಡಿಯೋ ಮಾಡುತ್ತಿದ್ದಾಗ ಅಪಘಾತದ ದೃಶ್ಯವೂ ಸೆರೆಯಾಗಿದೆ.

    ಮೂವರು ಸ್ನೇಹಿತರು ಪಾರ್ಟಿ ಮುಗಿಸಿಕೊಂಡು ಬೈಕ್‍ನಲ್ಲಿ ಅತೀ ವೇಗದಲ್ಲಿ ಸೆಂಟ್ರಲ್ ದೆಹಲಿಯ ಕೊನ್ನಾಟ್ ಪ್ಲೇಸ್‍ನಿಂದ ಮಂಡಿ ಹೌಸ್ ಕಡೆಗೆ ಹೋಗುತ್ತಿದ್ರು ಅಂತ ಪೊಲೀಸರು ಹೇಳಿದ್ದಾರೆ.

    ಮೃತ ಯುವಕ ಹಿಮಾಂಶು ಬನ್ಸಲ್ ಬೆನೆಲ್ಲಿ ಟಿಎನ್‍ಟಿ 600ಐ ಬೈಕ್ ಚಾಲನೆ ಮಾಡುತ್ತಿದ್ದು, ಮತ್ತೊಬ್ಬ ಸವಾರನಿಗಿಂತ ಮುಂದಿದ್ದ. ಹಿಂದಿದ್ದ ಸವಾರ 300ಸಿಸಿ ಯ ಕವಾಸಾಕಿ ನಿಂಜಾ 300 ಬೈಕ್‍ನಲ್ಲಿ ಬರ್ತಿದ್ದು, ಆತನ ಹೆಲ್ಮೆಟ್‍ಗೆ ಆಕ್ಷನ್ ಕ್ಯಾಮೆರಾವೊಂದನ್ನ ಅಳವಡಿಸಲಾಗಿತ್ತು. ಹೀಗಾಗಿ ರೇಸ್‍ನ ದೃಶ್ಯ ಆ ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಲಾಗ್ತಿತ್ತು. ಮೂರನೇ ಬೈಕ್ ಸವಾರ ಬೆನೆಲ್ಲಿ ಟಿಎನ್‍ಟಿ 600ಐನ 600ಸಿಸಿ ಬೈಕ್‍ನಲ್ಲಿ ಬರುತ್ತಿದ್ದ. ಈ ಎಲ್ಲಾ ಬೈಕ್‍ಗಳು ತುಂಬಾ ದುಬಾರಿಯಾಗಿದ್ದು 4ರಿಂದ 6 ಲಕ್ಷ ರೂ ಬೆಲೆಯದ್ದಾಗಿವೆ. ಕೆಲವೇ ಸೆಕೆಂಡ್‍ಗಳಲ್ಲಿ ಗಂಟೆಗೆ 200 ಕಿಮೀ ವರೆಗೆ ಗರಿಷ್ಠ ವೇಗವನ್ನ ತಲುಪಬಹುದಾಗಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಮೃತ ಸವಾರ ಹಿಂಮಾಂಶು ದೆಹಲಿಯ ವಿವೇಕ್ ವಿಹಾರ್‍ನ ಉದ್ಯಮಿಯೊಬ್ಬರ ಮಗ ಎಂದು ಅವರು ಹೇಳಿದ್ದಾರೆ.

    ಕವಾಸಾಕಿ ನಿಂಜಾ 300ಬೈಕ್ ಸವಾರನ ಕ್ಯಾಮೆರಾದಲ್ಲಿ ಸೆರೆಯಾದ ವಿಡಿಯೋದಲ್ಲಿ ಹಿಮಾಂಶು ಟ್ರಾಫಿಕ್ ನಡುವೆ ಅತೀ ವೇಗವಾಗಿ ಹೋಗುತ್ತಿರೋದನ್ನ ಕಾಣಬಹುದು. ಅಲ್ಲದೆ ಕೆಲವು ಬಾರಿ ಅಪಾಯಕರ ರೀತಿಯಲ್ಲಿ ಓವರ್ ಟೇಕ್ ಕೂಡ ಮಾಡೋದನ್ನ ನೋಡಬಹುದು.

    ವೇಗವಾಗಿ ಚಲಾಯಿಸುತ್ತಿದ್ದಾಗ ಮೆಟ್ರೋ ಹೌಸ್ ಸ್ಟೇಷನ್ ಬಳಿ ವ್ಯಕ್ತಿಯೊಬ್ಬರು ರಸ್ತೆ ದಾಡುತ್ತಿದ್ದು, ಈ ವೇಳೆ ಹಿಮಾಂಶು ಡಿಕ್ಕಿ ತಪ್ಪಿಸಲು ಯತ್ನಿಸಿ ಕೊನೆಗೆ ವ್ಯಕ್ತಿಗೆ ಗುದ್ದಿದ್ದಾನೆ. ಬೈಕ್ ನಿಯಂತ್ರಣ ತಪ್ಪಿ ಎಡಕ್ಕೆ ಹೋಗಿ ಬಿದ್ದಿದೆ. ಹಿಂಮಾಂಶು ಬೈಕ್‍ನಿಂದ ಹೊರಗೆಸೆಯಲ್ಪಟ್ಟು, ಲೇಡಿ ಇರ್ವಿನ್ ಕಾಲೇಜ್‍ನ ಸೈಡ್‍ವಾಕ್‍ಗೆ ಡಿಕ್ಕಿಯಾಗಿದ್ದಾನೆ. ಬೈಕ್ ಕೆಲವು ಮೀಟರ್ ಮುಂದಕ್ಕೆ ಹೋಗಿ ಬಿದ್ದಿದೆ.

    ಘಟನೆ ನಂತರ ಹಿಮಾಂಶುವನ್ನ ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದ್ರೂ ಅದಾಗಲೇ ತಡವಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

  • ಕಾಫಿನಾಡಲ್ಲಿ ಕಣ್ಮನ ತಣಿಸಿದ ಬೈಕ್ ರೇಸ್

    ಕಾಫಿನಾಡಲ್ಲಿ ಕಣ್ಮನ ತಣಿಸಿದ ಬೈಕ್ ರೇಸ್

    ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನ ಮುಗುಳುವಳ್ಳಿಯಲ್ಲಿ ನಡೆದ ಮನಮೋಹಕ ಬೈಕ್ ರೇಸ್ ನೋಡುಗರ ಮನ ತಣಿಸ್ತು. ಕಳೆದ 10 ವರ್ಷಗಳಿಂದ ನಿಂತಿದ್ದ ಬೈಕ್ ರೇಸ್‍ಗೆ ಇಂದು ಚಾಲನೆ ಸಿಕ್ಕಂತಾಗಿದ್ದು ಮುಂದಿನ ದಿನಗಳಲ್ಲಿ ಕಾರ್ ರೇಸ್‍ನಂತೆ ಬೈಕ್ ರೇಸನ್ನೂ ಪ್ರತಿವರ್ಷ ನಡೆಸೋದಾಗಿ ಆಯೋಜಕರು ವಿಶ್ವಾಸ ವ್ಯಕ್ತಪಡಿಸಿದ್ರು. ಇಷ್ಟು ದಿನಗಳ ಕಾಲ ಕಾಫಿನಾಡಿನ ಕಾರ್ ರೇಸನ್ನೇ ನೋಡಿ ಎಂಜಾಯ್ ಮಾಡ್ತಿದ್ದ ಕಾಫಿನಾಡಿಗರು ಇಂದು ಬೈಕ್ ರೇಸ್ ನೋಡಿ ಪುಳಕಗೊಂಡ್ರು.

    ಚಿಕ್ಕಮಗಳೂರು 13 ತಂಡದ ನೇತೃತ್ವದಲ್ಲಿ ನಡೆದ ಬೈಕ್ ರೇಸ್‍ಗೆ ಚಿಕ್ಕಮಗಳೂರು, ಮಂಡ್ಯ, ಮೈಸೂರು, ಶಿವಮೊಗ್ಗ, ಬೆಂಗಳೂರು, ತುಮಕೂರು, ಉಡುಪಿ ಸೇರಿದಂತೆ ಕೇರಳ, ಕೊಚ್ಚಿ, ತಿರುವನಂತಪುರ, ಮುಂಬೈ ಸೇರಿದಂತೆ ಅಂತಾರಾಷ್ಟ್ರೀಯ ರೈಡರ್‍ಗಳು ಭಾಗವಹಿಸಿ ನೋಡುಗರನ್ನು ರಂಜಿಸಿದ್ರು. ರೇಸ್‍ನಲ್ಲಿ ಯಾವುದೇ ಅನಾಹುತ ಸಂಭವಿಸದಂತೆ ಈ ರೇಸ್‍ಗೆ ಕಾರ್ ರೇಸ್ ನಡೆಸಿ ಅನುಭವವಿರೋ ಚಿಕ್ಕಮಗಳೂರು ಮೋಟರ್ ಸ್ಪೋರ್ಟ್ಸ್  ಕ್ಲಬ್ ಕೂಡ ಸಾಥ್ ನೀಡಿತ್ತು.

    ಒಟ್ಟು 150ಕ್ಕೂ ಹೆಚ್ಚು ಬೈಕ್‍ಗಳು ಭಾಗವಹಿಸಿದ್ವು. ಓರ್ವ ರೈಡರ್‍ಗಿಂತ ಮತ್ತೊಬ್ಬ ಚಾಣಾಕ್ಷನಂತೆ ಡ್ರೈವ್ ಮಾಡ್ತಿದ್ದಿದ್ದನ್ನ ಕಂಡ ನೋಡುಗರಿಗೆ ಮಿಂಚಿನ ವೇಗದಲ್ಲಿ ಓಡ್ತಿರೋ ಬೈಕಿನ ರೈಡ್‍ಗಳು ತಮ್ಮ ಎದೆಮೇಲೆ ಓಡಿದಂತಹ ಅನುಭವವಾಗ್ತಿತ್ತು. ಒಂದೇ ಬಾರಿಗೆ 10ಕ್ಕೂ ಹೆಚ್ಚು ಬೈಕ್‍ಗಳು ಟ್ರ್ಯಾಕ್ ಇಳಿದಾಗ ಗೆಲುವಿನ ಜಿದ್ದಾಜಿದ್ದಿಗೋಸ್ಕರ ನಾಮುಂದು-ತಾಮುಂದು ಅಂತಾ ರೈಡರ್‍ಗಳು ರೈಡ್ ಮಾಡುವಾಗ ನೋಡುಗರು ಕೂಡ ಈ ಟ್ರ್ಯಾಕ್‍ನಿಂದ ಆ ಟ್ರ್ಯಾಕ್‍ಗೆ ಓಡಿ ಚಪ್ಪಾಳೆ, ಶಿಳ್ಳೆ ಹೊಡೆದು ರೈಡರ್‍ಗಳಿಗೆ ಸಾಥ್ ನೀಡಿದ್ರು. ರೈಡರ್‍ಗಳು ಕೂಡ ನೋಡುಗರಿಗೆ ರಂಜಿಸೋಕೆ ಕೆಲಸ ಸಾಹಸದ ಸ್ಟಂಟ್‍ಗಳನ್ನ ಮಾಡಿದ್ರು.

    ಸದಾ ತಂಪೆರೆಯೋ ಕಾಫಿನಾಡಿನ ವಾತಾವರಣ ಬೈಕ್ ರೇಸ್‍ಗೆ ವ್ಯತಿರಿಕ್ತ ಪರಿಣಾಮ ಬೀರಿತ್ತು. ಈ ಬಾರಿಯ ಭೀಕರ ಬರಗಾಲದಿಂದ ಬೈಕ್ ರೇಸ್‍ಯ ಟ್ರ್ಯಾಕ್ ನೋಡಿದ್ರೆ ಇದು ಚಿಕ್ಕಮಗಳೂರೋ ಇಲ್ಲ ಉತ್ತರಕರ್ನಾಟಕವೋ ಎಂದು ನೋಡುಗರಿಗೆ ಭಾಸವಾಗ್ತಿತ್ತು. ಆದ್ರೆ, ಈ ಟ್ರ್ಯಾಕ್ ಬೈಕ್ ರೇಸ್‍ಗೆ ಹೇಳಿ ಮಾಡಿಸಿದಂತಿತ್ತು. 10ಕ್ಕೂ ಹೆಚ್ಚು ಬೈಕ್‍ಗಳು ಗೆಲುವಿಗಾಗಿ ಟ್ರ್ಯಾಕ್‍ಗೆ ಇಳಿದಾಗ ಮುನ್ನುಗ್ಗೋ ವೇಗದಲ್ಲಿ ರೈಡರ್‍ಗಳು ಎಕ್ಸಲೇಟರ್ ರೈಸ್ ಮಾಡಿದಂತೆ ಕ್ರೀಡಾಂಗಣವೆಲ್ಲಾ ಧೂಳುಮಯವಾಗ್ತಿತ್ತು. ನೋಡುಗರಿಗೆ ಯಾವ ಬೈಕ್ ಎಲ್ಲಿದೆ ಎಂಬುದೇ ಅರ್ಥವಾಗದಂತ ಪರಿಸ್ಥಿತಿ ನಿರ್ಮಾಣವಾಗ್ತಿತ್ತು. ಆದ್ರೂ, ಉರಿಯೋ ಬಿಸಿಲಲ್ಲೂ ಜನ ಬೈಕ್ ರೇಸ್ ಕಂಡು ಖುಷಿ ಪಟ್ರು.

    ಮೂರು ವಿಭಾಗದಲ್ಲಿ ನಡೆಯುತ್ತಿರೋ ರೇಸ್‍ಯಲ್ಲಿ ಒಂದೊಂದು ವಿಭಾಗಕ್ಕೂ ಪ್ರತ್ಯೇಕ ಬಹುಮಾನವಿದ್ದು, ಇಲ್ಲಿ ಗೆದ್ದೋರು ರಾಷ್ಟ್ರ ಮಟ್ಟದಲ್ಲೂ ಭಾಗವಹಿಸೋ ಅವಕಾಶ ಸಿಗಬಹುದು ಅನ್ನೋದು ಆಯೋಜಕರ ಅಭಿಲಾಷೆ. ರೇಸ್‍ಯಲ್ಲಿ ಲೋಕಲ್ ರೈಡರ್‍ಗಳಿಗೂ ಉತ್ತೇಜಿಸೋ ದೃಷ್ಟಿಯಿಂದ ಅವರಿಗೂ ಒಂದು ಹಂತದಲ್ಲಿ ಭಾಗವಹಿಸೋ ಅವಕಾಶ ಕಲ್ಪಿಸಿದ್ರು ಆಯೋಜಕರು. ಯಾಕಂದ್ರೆ, ದಾರಿ, ಜನವಸತಿ ಪ್ರದೇಶದಲ್ಲಿ ವೇಗವಾಗಿ ಅಥವಾ ವಿಭಿನ್ನವಾಗಿ ಬೈಕ್ ಓಡಿಸಿ ಅನಾಹುತ ಮಾಡೋದಕ್ಕಿಂತ ಇಂತಹಾ ರೇಸ್‍ಯಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನ ಇಲ್ಲಿ ತೋರಿಸಲಿ ಎಂಬ ಕಾರಣಕ್ಕೆ ಅವಕಾಶ ನೀಡಿದ್ವಿ, ಇಂತಹಾ ರೇಸ್‍ಗಳು ಪ್ರತಿವರ್ಷ ನಡೆದ್ರೆ ರಸ್ತೆಯಲ್ಲಿ ಬೈಕ್ ರೇಸ್ ನಡೆಸೋರ ಸಂಖ್ಯೆ ಕಡಿಮೆಯಾಗಲಿದೆ ಅನ್ನೋ ನಂಬಿಕೆ ಇದೆ, ನಮ್ಮ ಈ ಉದ್ದೇಶ ಶೇ.50 ರಷ್ಟು ಈಡೇರುತ್ತೆ ಅಂತಾರೆ ಆಯೋಜಕರು. ರೇಸ್‍ನಲ್ಲಿ ರಾಷ್ಟ್ರಮಟ್ಟದ ರೈಡರ್‍ಗಳಿಗೂ ಸ್ಥಳಿಯ ರೈಡರ್‍ಗಳು ಸೆಡ್ಡು ಹೊಡೆಯೋ ರೀತಿಯಲ್ಲಿ ರೈಡ್ ಮಾಡಿ ನೋಡುಗರ ಮನಸೂರೆಗೊಳಿಸಿದ್ರು.

    ಇನ್ನು ಬೈಕ್ ರೇಸ್‍ಗೆ ತಕ್ಕಂತೆ ಟ್ರ್ಯಾಕ್ ಕೂಡ ನಿರ್ಮಾಣವಾಗಿತ್ತು. ಹಾವು ಬಳುಕಿನ ಮೈಕಟ್ಟಿನ ಟ್ರ್ಯಾಕ್‍ನಲ್ಲಿ ಅದೇ ಆಕಾರದಲ್ಲಿ ವೇಗವಾಗಿ ಬೈಕ್‍ಗಳು ಓಡ್ತಿದ್ರೆ ನೋಡುಗರ ದೃಷ್ಟಿ ಕೂಡಾ ಅಷ್ಟೇ ವೇಗವಾಗಿರ್ತಿತ್ತು. ಟ್ರ್ಯಾಕ್‍ನ ಒಂದು ಸುತ್ತು ಬರುವಷ್ಟರಲ್ಲಿ ಅಂದಾಜು ಒಂದರಿಂದ ಒಂದೂವರೆ ಕಿ.ಮೀ. ಸಾಗಿದಂತಾಗ್ತಿತ್ತು. ಒಂದು ಸುತ್ತನ್ನ ಮುಗಿಸಲು ಈ ಟ್ರ್ಯಾಕ್‍ನಲ್ಲಿ ಐದು ಬಾರಿ ರೌಂಡ್ ಹೊಡೆಯಬೇಕಿತ್ತು. ಟ್ರ್ಯಾಕ್‍ನಲ್ಲಿ ಅಲ್ಲಲ್ಲೇ ಹಾಕಿದ್ದ ಸಣ್ಣ-ಸಣ್ಣ ಹಂಪ್‍ಗಳು, ಚಿಕ್ಕ-ಚಿಕ್ಕ ಗುಂಡಿಗಳಲ್ಲಿ ಬೈಕ್ ಹಾರುವಾಗ ನೋಡುಗರು ಕುಣಿದು ಕುಪ್ಪಳಿಸಿ ಕೇಕೆ ಹಾಕಿ ಸಂಭ್ರಮಿಸಿದ್ರು.

    ರಾಜ್ಯದೆದುರು ಕಾಫಿನಾಡು ಹಲವು ವಿಚಾರಗಳಲ್ಲಿ ಉಳಿದೆಲ್ಲಾ ಜಿಲ್ಲೆಗಳಿಗಿಂತ ತುಸು ಭಿನ್ನ ಎಂದೇ ಹೇಳಬಹುದು. ಯಾಕಂದ್ರೆ, ಕ್ರೀಡೆಯನ್ನೇ ಕೇಂದ್ರೀಕೃತವಾಗಿ ಹೇಳೋದಾದ್ರೆ ಕಾಫಿನಾಡಲ್ಲಿ ಆಗಾಗ ಕೆಸರುಗದ್ದೆ ಓಟ, ಕೆಸರುಗದ್ದೆ ವಾಲಿಬಾಲ್, ಎತ್ತಿನಗಾಡಿ ಸ್ಫರ್ದೆ, ಕಬ್ಬಡ್ಡಿ, ಕುಸ್ತಿ ಸೇರಿದಂತೆ ಪುರಾತನವಾದ ಸಾಂಪ್ರದಾಯಿಕ ಕ್ರೀಡೆಗಳು ಕಾಫಿನಾಡಲ್ಲಿ ಇಂದಿಗೂ ಜೀವಂತ. ಇದ್ರ ಜೊತೆ ಆಗಾಗ್ಗೆ ಕ್ರಿಕೆಟ್, ವಾಲಿಬಾಲ್‍ನಂತಹಾ ಆಧುನಿಕ ಕ್ರೀಡೆಗಳು ನಡೆಯುತ್ತಿರುತ್ವೆ. ಕಾಫಿನಾಡು ಚಿಕ್ಕಮಗಳೂರು ಆಧುನಿಕ ಜಗತ್ತಿಗೂ ಒಗ್ಗಿಕೊಂಡು ಬದುಕ್ತಾ, ಪುರಾತನ ಕ್ರೀಡೆಯನ್ನೂ ಉಳಿಸಿ-ಬೆಳೆಸಿ ಪೋಷಿಸ್ತಿದೆ ಅಂದ್ರೆ ತಪ್ಪಿಲ್ಲ.