Tag: ಬೈಕ್ ಕಳ್ಳತನ

  • ನಕಲಿ ಕೀ ಬಳಸಿ ಬ್ಯಾಂಕ್ ಮುಂದೆ ನಿಲ್ಲಿಸಿದ ಬೈಕ್ ಕಳ್ಳತನ – ದೃಶ್ಯ ಸಿಸಿಟಿವಿಯಲ್ಲಿ ಸೆರೆ!

    ನಕಲಿ ಕೀ ಬಳಸಿ ಬ್ಯಾಂಕ್ ಮುಂದೆ ನಿಲ್ಲಿಸಿದ ಬೈಕ್ ಕಳ್ಳತನ – ದೃಶ್ಯ ಸಿಸಿಟಿವಿಯಲ್ಲಿ ಸೆರೆ!

    ಹಾವೇರಿ: ಬ್ಯಾಂಕ್ ಮುಂದೆ ನಿಲ್ಲಿಸಿದ್ದ ಬೈಕ್‌ವೊಂದನ್ನು ನಕಲಿ ಕೀ ಬಳಿಸಿ ಕಳ್ಳತನ (Bike Theft) ಮಾಡಿರುವ ಘಟನೆ ಹಾವೇರಿ ಜಿಲ್ಲೆಯ ರಾಣೇಬೆನ್ನೂರು (Rane Bennur) ನಗರದಲ್ಲಿ ನಡೆದಿದೆ.

    ನಗರದ ಬ್ಯಾಂಕ್‌ವೊಂದರ (Bank) ಮುಂದೆ ಬೈಕ್‌ ನಿಲ್ಲಿಸಿ ಗ್ರಾಹಕ ಬ್ಯಾಂಕ್‌ನಲ್ಲಿ ತನ್ನ ಕೆಲಸ ಮುಗಿಸಿಬರಲು ಹೋಗಿದ್ದ. ವಾಪಸ್‌ ಬರುವಷ್ಟರಲ್ಲಿ ಬೈಕ್ ಕಳ್ಳತನವಾಗಿದೆ. ಬೈಕ್ ಇಲ್ಲದ್ದನ್ನ ಕಂಡು ಬೈಕ್ ಸವಾರ ಕಂಗಾಲಾಗಿದ್ದಾನೆ. ಇದನ್ನೂ ಓದಿ: ಭತ್ತ, ರಾಗಿ, ಹತ್ತಿ ಸೇರಿ 22 ಬೆಳೆಗಳಿಗೆ ಎಂಎಸ್‌ಪಿ ಹೆಚ್ಚಿಸಿದ ಕೇಂದ್ರ – ಇಲ್ಲಿದೆ ನೋಡಿ ದರ ಪಟ್ಟಿ..

    ನಕಲಿ ಕೀ ಬಳಿಸಿ, ಬೈಕ್ ಹ್ಯಾಂಡಲ್ ಲಾಕ್ ತೆಗೆದು ಬೈಕ್ ಕಳ್ಳತನ ಮಾಡಿಕೊಂಡು ಕ್ಷಣಾರ್ಧದಲ್ಲಿ ಖದೀಮ ಎಸ್ಕೇಪ್‌ ಆಗಿದ್ದಾನೆ. ಬೈಕ್ ಕಳ್ಳತನ ಮಾಡಿದ ಕಳ್ಳತನದ ಕರಾಮತ್ತು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗ್ರಾಹಕನ ಚಲನವಲನ ಕಂಡು ಬೈಕ್ ಕಳ್ಳತನ ಮಾಡಿದ್ದಾನೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ.

    ರಾಣೇಬೆನ್ನೂರು ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆಸಿದ್ದು, ಇನ್ನೂ ಪ್ರಕರಣ ದಾಖಲಾಗಿಲ್ಲ. ಇದನ್ನೂ ಓದಿ: ಗ್ಯಾರಂಟಿ ಯೋಜನೆಯ ಫಲವನ್ನು ಆರ್ಥಿಕ ಸ್ಥಿತಿವಂತರು ಬಿಡಬೇಕು :ಸಚಿವ ಮಂಕಾಳು ವೈದ್ಯ

  • ಬೈಕ್ ಕದ್ದು ಹಳ್ಳಿ ಕಡೆ ಮಾರಾಟ ಮಾಡುತ್ತಿದ್ದ ಎಜುಕೇಟೆಡ್ ಕಳ್ಳ ಬಂಧನ

    ಬೈಕ್ ಕದ್ದು ಹಳ್ಳಿ ಕಡೆ ಮಾರಾಟ ಮಾಡುತ್ತಿದ್ದ ಎಜುಕೇಟೆಡ್ ಕಳ್ಳ ಬಂಧನ

    ಬೆಂಗಳೂರು: ಲಾಕ್ ಬ್ರೇಕ್‍ನಲ್ಲಿ ನೈಪುಣ್ಯತೆ ಹೊಂದಿ 19 ಬೈಕ್ ಕಳ್ಳತನ ಮಾಡಿ ಹಳ್ಳಿಗಳಲ್ಲಿ ಮಾರಾಟ ಮಾಡುತ್ತಿದ್ದ ಸುಶಿಕ್ಷಿತ ಕಳ್ಳನನ್ನು ಹೊಸಕೋಟೆ ಪೊಲೀಸರು ಬಂಧಿಸಿದ್ದಾರೆ.

    ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ನಸಿರ್ಂಗ್ ಕೆಲಸ ಮಾಡುತ್ತಿದ್ದ ಹೇಮಂತ್ ಕುಮಾರ್(20) ಬಂಧಿತ ಆರೋಪಿ. ಈತ ನಗರಗಳಲ್ಲಿ ಬೈಕ್‍ಗಳನ್ನು ಕದ್ದು, ಯಾರಿಗೂ ಅನುಮಾನ ಬಾರದಂತೆ ಹಳ್ಳಿಗಳಲ್ಲಿ ಮಾರಾಟ ಮಾಡುತ್ತಿದ್ದ.

    ಎರಡು ಬುಲೆಟ್, ಆರು ಡಿಯೋ, ನಾಲ್ಕು ಆರ್ ಎಕ್ಸ್ ವಾಹನ, ನಾಲ್ಕು ಪಲ್ಸರ್ ಸೇರಿದಂತೆ ಒಟ್ಟು 20 ಬೈಕ್‍ಗಳನ್ನು ಕದ್ದು ಮಾರಾಟ ಮಾಡಿದ್ದಾನೆ. ಬೆಂಗಳೂರು ಗ್ರಾಮಾಂತರ ಹೊಸಕೋಟೆ ನಗರದಲ್ಲಿ ಬೈಕ್ ಕಳ್ಳತನ ಮಾಡಲು ಹೋಗಿ ಸಿಕ್ಕಿಬಿದ್ದ ಈತನನ್ನು ವಿಚಾರಣೆ ಮಾಡಿದಾಗ ಸೂಲಿಬೆಲೆ, ಹಾಸನ, ಹಿರಿಸಾವೆ ಹಳ್ಳಿಗಳಲ್ಲಿ ಬೈಕ್‍ಗಳನ್ನು ಮಾರಾಟ ಮಾಡಿರುವುದು ತಿಳಿದುಬಂದಿದೆ. ಇದನ್ನೂ ಓದಿ: ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರುವ ಪ್ರಯತ್ನ ನಿಲ್ಲಲ್ಲ: ಮೋದಿ

    ದುಶ್ಚಟಗಳಿಗೆ ಬಿದ್ದು ಕಳ್ಳತನ ಹವ್ಯಾಸ ಮಾಡಿಕೊಂಡಿದ್ದ ಈತ ಹೊಸಕೋಟೆ ನಗರದ ಬಿಎಂಟಿಸಿ ಬಸ್ ನಿಲ್ದಾಣದ ಬಳಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ನಂಬರ್ ಪ್ಲೇಟ್ ಇಲ್ಲದ ಬುಲೆಟ್ ಬೈಕ್‍ನಲ್ಲಿ ಬರುತ್ತಿದ್ದಾಗ ಪೊಲೀಸರು ಅಡ್ಡಗಟ್ಟಿ ವಿಚಾರಣೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ತನ್ನ ಹೆಸರನ್ನು ಹೇಳಲು ತಡಪಡಿಸುತ್ತಿದ್ದಾಗ ಪೊಲೀಸರು ಅನುಮಾನಗೊಂಡು ಆತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ. ಇದನ್ನೂ ಓದಿ: ನಮಗೆ ಇನ್ನೂ ಐದು ವರ್ಷ ಕೊಡಿ : ಅಮಿತ್ ಶಾ

    ವಿಚಾರಣೆ ವೇಳೆ ಆರೋಪಿ ಹೆಚ್‍ಎಸ್‍ಆರ್ ಲೇಔಟ್, ಬೊಮ್ಮನಹಳ್ಳಿ, ಹುಳಿಮಾವು, ಹೆಬ್ಬಾಳ, ಉಪ್ಪಾರಪೇಟೆ, ಶೇಷಾದ್ರಿಪುರಂ, ಬನಶಂಕರಿ, ಹೈಗ್ರೌಂಡ್, ಅಶೋಕ ನಗರ, ಪರಪ್ಪನ ಅಗ್ರಹಾರ, ನೆಲಮಂಗಲ ಟೌನ್, ಮಲ್ಲೇಶ್ವರಂ, ಮಾದನಾಯಕನಹಳ್ಳಿ, ಕೊಡಿಗೆಹಳ್ಳಿ, ಅಶೋಕನಗರ, ಬೊಮ್ಮನಹಳ್ಳಿ ಹಾಗೂ ಬೆಂಗಳೂರು ನಗರ ಠಾಣಾ ಸರಹದ್ದಿನಲ್ಲಿ ಒಟ್ಟು 15 ಲಕ್ಷ ಮೌಲ್ಯದ 19 ಬೈಕುಗಳನ್ನು ಕಳವು ಮಾಡಿರುವುದಾಗಿ ತಿಳಿದು ಬಂದಿದೆ. ಆರೋಪಿಯಿಂದ 19 ಬೈಕುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿವೈಎಸ್‍ಪಿ ಉಮಾಶಂಕರ್ ತಿಳಿಸಿದ್ದಾರೆ.

  • ಬೈಕ್. ಸರಗಳ್ಳತನ ಮಾಡುತ್ತಿದ್ದ 8 ಜನ ಆರೋಪಿಗಳು ಅರೆಸ್ಟ್

    ಬೈಕ್. ಸರಗಳ್ಳತನ ಮಾಡುತ್ತಿದ್ದ 8 ಜನ ಆರೋಪಿಗಳು ಅರೆಸ್ಟ್

    ಬೆಂಗಳೂರು: ರಾಜಧಾನಿಯಲ್ಲಿ ಬೈಕ್ ಹಾಗೂ ಸರಗಳ್ಳತನ ಮಾಡುತ್ತಿದ್ದ 8 ಜನ ಆರೋಪಿಗಳನ್ನು ನಗರದ ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ.

    ದೊಂಬರಹಳ್ಳಿ ಮಂಜಕಳ್ ಮಂಜ, ದೀಪಕ್ ಪಾಕ, ಮನು, ದಯನಂದ್, ಮುನಿಸ್ವಾಮಿ, ಸತೀಶ್, ಕಳ್ ಮಂಜನ ಜೊತೆ ಸಹಕರಿಸಿದ್ದ ಅವನ ತಾಯಿ ಪ್ರೇಮಾ, ತಂಗಿ ಅನ್ನಪೂರ್ಣ ಬಂಧಿತ ಆರೋಪಿಗಳು.
    ಬಂಧಿತರಿಂದ 44 ಲಕ್ಷ ಬೆಲೆಬಾಳುವ 23 ಬೈಕ್, 2 ಕಾರು ಹಾಗೂ ಚಿನ್ನಾಭರಣಗಳನ್ನು ಜಪ್ತಿ ಮಾಡಲಾಗಿದೆ. ಇದನ್ನೂ ಓದಿ: ಸಣ್ಣ ಸುಳಿವು ಸಿಗದಂತೆ ಹತ್ಯೆ ಮಾಡಿದ್ದ ಹಂತಕ ಕೊನೆಗೂ ಖಾಕಿ ಬಲೆಗೆ!

    ಈ ಹಿಂದೆ ಬಾಡಿಗೆ ಮನೆ ನೋಡುವ ನೆಪದಲ್ಲಿ ಲಾಂಗ್ ತೋರಿಸಿ ಬೆದರಿಸಿ ಬಾಗಲಗುಂಟೆಯಲ್ಲಿ ಶಿಕ್ಷಕಿಯ ಸರಗಳವು ಮಾಡಿದ್ದರು. ಮಾದನಾಯಕನಹಳ್ಳಿಯಲ್ಲಿ ಬುಲೆಟ್ ಬೈಕ್‍ನಲ್ಲಿ ಮಹಿಳೆಯನ್ನ ಅಡ್ಡಗಟ್ಟಿ ಸರಗಳವು ಮಾಡಿದ್ದರು. ಕಳ್ಳತನ ಮಾಡುವ ವೇಳೆ ಏನೂ ಸಿಕ್ಕಿಲ್ಲ ಅಂದರೆ ಕುರಿ-ಮೇಕೆ, ಸಾಕಿದ್ದ ಹಂದಿಯನ್ನು ಕೂಡಾ ಬಿಡದೇ ಕದಿಯುತ್ತಿದ್ದರು. ಬಳಿಕ ಗ್ಯಾಂಗ್ ಎಲ್ಲರೂ ಸೇರಿ ಭರ್ಜರಿ ಬಾಡೂಟ ಮಾಡಿ ಪಾರ್ಟಿ ಮಾಡುತ್ತಿದ್ದರು. ಕದ್ದ ಚಿನ್ನದ ಸರಗಳನ್ನು ಕಳ್ ಮಂಜನ ಜೊತೆ ಸಹಕರಿಸುತ್ತಿದ್ದ ಅವನ ತಾಯಿ ಹಾಗೂ ತಂಗಿಯ ಮುಖಾಂತರವಾಗಿ ಸೇಠುಗಳಿಗೆ ಮಾರುತ್ತಿದ್ದರು. ಇದನ್ನೂ ಓದಿ: ಕುಂದಾನಗರಿ ಬೆಳಗಾವಿಯಲ್ಲಿ ಮತ್ತೆ ಆ್ಯಕ್ಟಿವ್ ಆಯ್ತಾ ಇರಾನಿ ಗ್ಯಾಂಗ್?

    ಪೊಲೀಸರ ತಂಡವೊಂದು ಶಿಕ್ಷಕಿಯ ಸರ ಕದ್ದ ಬುಲೆಟ್ ಬೈಕ್ ಹಿಂದೆ ಬಿದ್ದಿದ್ದು ತಂಡಕ್ಕೆ ಇದು ಭರ್ಜರಿ ಪತ್ತೆ ಕಾರ್ಯವಾಗಿತ್ತು. ಆರೋಪಿಗಳು ಬಾಗಲಗುಂಟೆ, ಪೀಣ್ಯಾ, ನೆಲಮಂಗಲ, ಮಾದನಾಯಕನಹಳ್ಳಿ, ಕಾಮಾಕ್ಷಿ ಪಾಳ್ಯ, ವರ್ತೂರು, ನಂದಿನಿಲೇಔಟ್, ರಾಜಗೋಪಾಲ ನಗರ, ಹೆಣ್ಣೂರು, ಸೋಲದೇವನಹಳ್ಳಿ ಸೇರಿದಂತೆ 30 ಠಾಣಾ ವ್ಯಾಪ್ತಿಯಲ್ಲಿ ಈ ಕೃತ್ಯಗಳಲ್ಲಿ ಭಾಗಿಯಾಗಿದ್ದರು.

    ಈ ಕುರಿತು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ರಕ್ಷಿಸಬೇಕಾದ ಆರಕ್ಷಕನೇ ಕಳ್ಳನಾದ – ಬೈಕ್ ಕಳ್ಳತನ ಮಾಡಿಸ್ತಿದ್ದ ಕಾನ್‍ಸ್ಟೇಬಲ್ ಅರೆಸ್ಟ್

    ರಕ್ಷಿಸಬೇಕಾದ ಆರಕ್ಷಕನೇ ಕಳ್ಳನಾದ – ಬೈಕ್ ಕಳ್ಳತನ ಮಾಡಿಸ್ತಿದ್ದ ಕಾನ್‍ಸ್ಟೇಬಲ್ ಅರೆಸ್ಟ್

    ಬೆಂಗಳೂರು: ಅಪ್ರಾಪ್ತರನ್ನು ಬಳಸಿಕೊಂಡು ಬೈಕ್‍ಗಳನ್ನು ಕಳ್ಳತನ ಮಾಡಿಸುತ್ತಿದ್ದ ಕಾನ್‍ಸ್ಟೇಬಲ್‍ನನ್ನು ಅದೇ ಇಲಾಖೆಯ ಪೊಲೀಸರೇ ಬಂಧಿಸಿರುವ ಘಟನೆ ನಗರದ ಮಾಗಡಿ ರಸ್ತೆಯಲ್ಲಿ ನಡೆದಿದೆ.

    ಪೊಲೀಸ್ ಕಾನ್‍ಸ್ಟೇಬಲ್ ಹೊನ್ನಪ್ಪ ರವಿ ಬಂಧಿತ ಆರೋಪಿ. ಈತ ಅಪ್ರಾಪ್ತರನ್ನು ಬಳಸಿಕೊಂಡು ಬೆಂಗಳೂರು, ಬೆಂಗಳೂರು ಹೊರವಲಯ, ಹಾವೇರಿಯ ರಾಣಿಬೆನ್ನೂರು ಸೇರಿದಂತೆ ಅನೇಕ ಕಡೆ ಬೈಕ್‍ಗಳನ್ನು ಕಳ್ಳತನ ಮಾಡಿಸುತ್ತಿದ್ದ. ಈವರೆಗೂ ಹೊನ್ನಪ್ಪ ರವಿ ಮಾರಾಟ ಮಾಡಿದ್ದ 53 ಬೈಕ್‍ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಹೊನ್ನಪ್ಪ, ರಾಜಸ್ಥಾನದ ರಮೇಶ್, ಇಬ್ಬರು ಅಪ್ರಾಪ್ತರು ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಮೀಟರ್ ಬಡ್ಡಿ ದಂಧೆಗೆ ಮಹಿಳೆ ಬಲಿ – ಸೆಲ್ಫಿ ವೀಡಿಯೋ ಮಾಡಿ ಆತ್ಮಹತ್ಯೆ

    2016ರ ಬ್ಯಾಚ್‍ನ ಸಿವಿಲ್ ಕಾನ್‍ಸ್ಟೇಬಲ್ ಆಗಿರುವ ಹೊನ್ನಪ್ಪ ರವಿ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಆಗಿ ಕಾರ್ಯನಿರ್ವಹಿಸುತ್ತಿದ್ದ. ಸದ್ಯ ಒಒಡಿ ಮೇಲೆ ಐಪಿಎಸ್ ಅಧಿಕಾರಿಯೊಬ್ಬರ ಪರ್ಸನಲ್ ಕಾರು ಡ್ರೈವರ್ ಆಗಿರುವ ಹೊನ್ನಪ್ಪ ಮಾರಾಟ ಮಾಡಿದ ಬೈಕ್‍ನಿಂದ ಬಂದ ಹಣದಲ್ಲಿ ಐದರಿಂದ ಆರು ಸಾವಿರ ಹಣವನ್ನು ಹುಡುಗರಿಗೆ ನೀಡುತ್ತಿದ್ದ. ಇದನ್ನೂ ಓದಿ: ಫುಡ್ ಡೆಲಿವರಿ ಬಾಯ್ ಮೇಲೆ ಮಹಿಳಾ ಸಿಬ್ಬಂದಿ ದರ್ಪ

    ಸದ್ಯ ಕಾನ್‍ಸ್ಟೇಬಲ್‍ನನ್ನು ಬಾಡಿ ವಾರೆಂಟ್ ಮೇಲೆ ವಶಕ್ಕೆ ಪಡೆದಿರುವ ಮಾಗಡಿ ರೋಡ್ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಅಪರಾಧಗಳನ್ನು ನಿಯಂತ್ರಿಸಬೇಕಾದ ಆರಕ್ಷಕನೇ ಕಳ್ಳನಾಗಿರುವುದು ವಿಪರ್ಯಾಸ.

  • ಮಾಳಮಾರುತಿ ಪೊಲೀಸರ ಭರ್ಜರಿ ದಾಳಿ- ಖತರ್ನಾಕ್ ಕಳ್ಳ ಅಂದರ್

    ಮಾಳಮಾರುತಿ ಪೊಲೀಸರ ಭರ್ಜರಿ ದಾಳಿ- ಖತರ್ನಾಕ್ ಕಳ್ಳ ಅಂದರ್

    – ಕಳ್ಳನಿಂದ 10 ಬೈಕ್ ಜಪ್ತಿ

    ಬೆಳಗಾವಿ: ಖತರ್ನಾಕ್ ಬೈಕ್ ಕಳ್ಳನಿಗೆ ಹೆಡೆಮುರಿ ಕಟ್ಟುವಲ್ಲಿ ಬೆಳಗಾವಿಯ ಪೊಲೀಸರು ಯಶಸ್ವಿಯಾಗಿದ್ದಾರೆ.

    ಕಳ್ಳರನ್ನು ಬಂಧಿಸಿರುವ ಪೊಲೀಸರು ಬರೊಬ್ಬರಿ 10 ಬೈಕ್ ಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ. ಎಸಿಪಿ ಸದಾಶಿವ ಕಟ್ಟಿಮನಿ ಹಾಗೂ ಮಾಳಮಾರುತಿ ಠಾಣೆ ಸಿಪಿಐ ಸುನೀಲ್ ಪಾಟೀಲ್ ನೇತೃತ್ವದ ತಂಡವು ಬೆಳಗಾವಿ ಸುತ್ತಮುತ್ತಲು ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಇದನ್ನೂ ಓದಿ: ಯಡಿಯೂರಪ್ಪ ವ್ಯಕ್ತಿ ಅಲ್ಲ ದೊಡ್ಡ ಶಕ್ತಿ: ಶ್ರೀರಾಮುಲು

    ಬಂಧಿತ ಆರೋಪಿಯಿಂದ 7 ಲಕ್ಷ ಮೌಲ್ಯದ ವಿವಿಧ ಕಂಪನಿಗಳ 10 ಬೈಕ್ ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವ ಮಾಳಮಾರುತಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಮಾಳಮಾರುತಿ ಪೊಲೀಸರ ಕಾರ್ಯಾಚರಣೆಗೆ ಬೆಳಗಾವಿ ನಗರ ಹಿರಿಯ ಪೊಲೀಸ್ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿ ನಗದು ಬಹುಮಾನ ಘೋಷಿಸಿದ್ದಾರೆ.

  • ಕೆರೆಯ ಬಳಿ ಮದ್ಯಪಾನ ಮಾಡಿ ಗುಂಡಿನ ದಾಳಿ – FSL ತಂಡದಿಂದ ಪರಿಶೀಲನೆ

    ಕೆರೆಯ ಬಳಿ ಮದ್ಯಪಾನ ಮಾಡಿ ಗುಂಡಿನ ದಾಳಿ – FSL ತಂಡದಿಂದ ಪರಿಶೀಲನೆ

    – ಬೈಕ್ ಕಳ್ಳರ ಗುಂಡಿನ ದಾಳಿ ಸುತ್ತ ಅನುಮಾನದ ಹುತ್ತ

    ಚಿಕ್ಕಬಳ್ಳಾಪುರ: ಬೈಕ್ ಕಳ್ಳತನ ಮಾಡಿಕೊಂಡು ಪರಾರಿಯಾಗುತ್ತಿದ್ದ ಇಬ್ಬರು ಕಳ್ಳರನ್ನು ಹಿಡಿಯಲು ಹೋದ ಗ್ರಾಮಸ್ಥರ ಮೇಲೆ ನಿನ್ನೆ ರಾತ್ರಿ ಗುಂಡು ಹೊಡೆದು ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

    ಚಿಕ್ಕಬಳ್ಳಾಪುರ ತಾಲೂಕಿನ ಮರವೇನಹಳ್ಳಿ ಗ್ರಾಮದ ಬಳಿ ರಾತ್ರಿ ಈ ಘಟನೆ ನಡೆದಿತ್ತು. ಘಟನೆಯಲ್ಲಿ ಗ್ರಾಮದ ಗಂಗರಾಜುಗೆ ಗುಂಡು ತಗುಲಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುಂಡು ಹೊಡೆದು ಪರಾರಿಯಾಗಿರುವ ಕಳ್ಳರಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ. ಇದನ್ನೂ ಓದಿ:  ಇಬ್ಬರ ಜಗಳದಲ್ಲಿ ಬೀದಿಯಲ್ಲಿ ನಿಂತ ದೇವರ ಬಸವ

    ಹಳೆ ಬೈಕ್ ಕಳ್ಳತನ ಮಾಡಲು ಗನ್ ಎಲ್ಲಿಂದ ತಂದಿದ್ದರು? ಏಕೆ ತಂದಿದ್ದರು? ಯಾವ ರೀತಿಯ ಗನ್ ಬಳಸಿದ್ದಾರೆ? ಎನ್ನುವ ಕುರಿತು ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಮತ್ತೊಂದೆಡೆ ಬೆಂಗಳೂರಿನ ಎಫ್‍ಎಸ್‍ಎಲ್ ತಂಡದ ಅಧಿಕಾರಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ್ದಾರೆ.

    ದಾಳಿ ಮಾಡಿದ ಗನ್ ಯಾವುದು ಎಂದು ಪತ್ತೆ ಹಚ್ಚುವ ಕೆಲಸಕ್ಕೆ ಮುಂದಾಗಿದ್ದಾರೆ. ಕಳ್ಳರು ಗುಂಡು ಹಾರಿಸಿದ ನಂತರ ಬಿದ್ದಿರುವ ಖಾಲಿ ಗುಂಡುಗಳು ಸ್ಥಳದಲ್ಲಿ ಸಿಕ್ಕಿದ್ದು, ಪರಿಶೀಲನೆ ನಡೆಸಿದ್ದಾರೆ. ಪತ್ತೆಯಾಗಿರುವ ಗುಂಡುಗಳನ್ನು ಪರಿಶೀಲಿಸಿ ಕಳ್ಳರು ಯಾವ ರೀತಿಯ ಗನ್ ಬಳಸಿದ್ದಾರೆ. ಆ ರೀತಿಯ ಗನ್ ಗಳು ಎಲ್ಲಿ ಸಿಗುತ್ತವೆ ಅಥವಾ ಮಾರಾಟವಾಗುತ್ತವೆ ಎನ್ನುವ ಕುರಿತು ಪೊಲೀಸರಿಗೆ ಮಾಹಿತಿ ನೀಡಲಿದ್ದಾರೆ. ಇದನ್ನೂ ಓದಿ:  ತಂದೆ ತಾಲಿಬಾನ್ ವಿರೋಧಿಯಾಗಿದ್ದಕ್ಕೆ ಮಗುವನ್ನು ಗಲ್ಲಿಗೇರಿಸಿದ್ರು

    ಇನ್ನೊಂದೆಡೆ ಗ್ರಾಮದ ರಾಮಚಂದ್ರರೆಡ್ಡಿ ಎನ್ನುವವರ ಬೈಕ್ ಕಳ್ಳತನ ಮಾಡುವುದಕ್ಕೂ ಮುನ್ನ ಕಳ್ಳರು ಕೆರೆಯ ಬಳಿ ಮದ್ಯಪಾನ ಮಾಡಿದ್ದಾರೆ. ಕಳ್ಳರು ಬಳಸಿದ ಮದ್ಯದ ಬಾಟಲಿಯನ್ನು ವಶಕ್ಕೆ ಪಡೆದು ಪೊಲೀಸರು ಅದರ ಬ್ಯಾಚ್, ಸರಬರಾಜು ಆಗಿದ್ದ ಅಂಗಡಿಯ ಬಗ್ಗೆಯೂ ಮಾಹಿತಿ ಕಲೆ ಹಾಕುತ್ತಿದ್ದಾರೆ. ಘಟನೆಯ ನಂತರ ಕಳ್ಳರು ತಾವು ತಂದಿದ್ದ ಬೈಕ್ ನ್ನು ಸ್ಥಳದಲ್ಲಿ ಬಿಟ್ಟು ಪರಾರಿಯಾಗಿದ್ದಾರೆ.

    ಸ್ಥಳದಲ್ಲಿ ಕಳ್ಳರ ಬ್ಯಾಗ್ ಪತ್ತೆಯಾಗಿದ್ದು, ಅದರಲ್ಲಿ ಬಟ್ಟೆಗಳು ಹಾಗೂ ನಕಲಿ ಬೈಕ್ ನಂಬರ್ ಪ್ಲೇಟ್ ಗಳು ಪತ್ತೆಯಾಗಿದೆ. ನಂಬರ್ ಪ್ಲೇಟ್ ಹಾಕುವ ರೇಡಿಯಂ ಸ್ಟಿಕ್ಕರ್ ಕಟಿಂಗ್ ಅಂಗಡಿಗಳಲ್ಲೂ ಮಾಹಿತಿ ಕಲೆ ಹಾಕುತ್ತಿದ್ದಾರೆ. ಕಳ್ಳರು ಹೊಡೆದ ಗುಂಡಿನಿಂದ ಗಾಯಗೊಂಡು ಆಸ್ಪತ್ರೆ ಸೇರಿರುವ ಗಂಗರಾಜು ಅವರಿಗೆ ಚಿಕಿತ್ಸೆ ಮುಂದುವರೆದಿದೆ. ಇದನ್ನೂ ಓದಿ:  ಕುರ್ಚಿಗಾಗಿ ಹಗಲುಗಸು ಕಾಣ್ತಿದ್ದಾರೆ ಹೀಗಾಗಿ ಏನೇನೋ ಮಾತನಾಡುತ್ತಿದ್ದಾರೆ: ಶ್ರೀರಾಮುಲು

  • ಪೊಲೀಸರ ವಶದಲ್ಲಿದ್ದ ಬೈಕನ್ನೇ ಕದ್ದ ಕಳ್ಳರು

    ಪೊಲೀಸರ ವಶದಲ್ಲಿದ್ದ ಬೈಕನ್ನೇ ಕದ್ದ ಕಳ್ಳರು

    ಚಿಕ್ಕಬಳ್ಳಾಪುರ: ಪೊಲೀಸ್ ಠಾಣೆ ಬಳಿ ನಿಲ್ಲಿಸಿದ್ದ ಬೈಕನ್ನೇ ಕಳ್ಳರು ಕಳವು ಮಾಡಿರುವ ಘಟನೆ ತಾಲೂಕಿನ ಪೇರೆಸಂದ್ರ ಹೊರ ಪೊಲೀಸ್ ಠಾಣೆ ಬಳಿ ನಡೆದಿದೆ.

    ಗುಡಿಬಂಡೆ ಪೊಲೀಸ್ ಠಾಣಾ ವ್ಯಾಪಿ ಪೇರೇಸಂದ್ರ ಹೊರ ಠಾಣೆ ಬಳಿ ನವೆಂಬರ್ 11 ರಂದು ಪ್ರಕರಣವೊಂದರಲ್ಲಿ ವಶಕ್ಕೆ ಪಡೆಯಲಾಗಿದ್ದ ಬೈಕನ್ನು ನಿಲ್ಲಿಸಿಲಾಗಿತ್ತು. ಇಷ್ಟು ದಿನ ಠಾಣೆ ಬಳಿಯೇ ಇದ್ದ ಬೈಕ್ ಡಿಸೆಂಬರ್ 29ರ ನಂತರ ಕಾಣೆಯಾಗಿದೆ.

    ಬೈಕನ್ನು ಕಳ್ಳರು ಕಳವು ಮಾಡಿದ್ದಾರೆ. ಈ ಸಂಬಂಧ ಹೊರ ಠಾಣೆಯ ಎಎಸ್‍ಐ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಬೈಕ್ ಕಳವು ಪ್ರಕರಣ ದಾಖಲಿಸಿದ್ದಾರೆ. ಕೆಎ-02 ಎಸ್ 9731 ನೊಂದಣಿಯ ಬೈಕ್ ಕಳವಾಗಿದ್ದು, ಬೈಕ್ ಪತ್ತೆ ಮಾಡಿಕೊಡುವಂತೆ ದೂರು ದಾಖಲಾಗಿದೆ.

    ಇತ್ತೀಚೆಗೆ ಚಿಕ್ಕಬಳ್ಳಾಪುರ ನಂದಿಗಿರಿಧಾಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸ್ ಪೇದೆಯ ಬೈಕನ್ನು ಕಳ್ಳರು ಕಳವು ಮಾಡಿದ್ದರು. ನಂದಿಗಿರಿಧಾಮ ಪೊಲೀಸ್ ಠಾಣೆಯ ಪೊಲೀಸ್ ಪೇದೆ ಮಧುಸೂದನ್ ಅವರ ಬೈಕ್ ಕಳವು ಮಾಡಲಾಗಿತ್ತು. ಇವರು ನಂದಿ ಕ್ರಾಸ್ ಸರ್ವೀಸ್ ರಸ್ತೆ ಪಕ್ಕದ ಕೆಂಪಣ್ಣನವರ ಬಿಲ್ಡಿಂಗ್ ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಬಾಡಿಗೆ ಮನೆ ಬಳಿ ನಿಲ್ಲಿಸಲಾಗಿದ್ದ ಬೈಕ್ ನ್ನು ಕಳವು ಮಾಡಲಾಗಿತ್ತು.

  • ಮನೆಯ ಗೇಟ್ ಒಳಗಡೆ ನಿಲ್ಲಿಸಿದ್ದ ಬೈಕ್‍ಗಳೇ ಕಳ್ಳತನ

    ಮನೆಯ ಗೇಟ್ ಒಳಗಡೆ ನಿಲ್ಲಿಸಿದ್ದ ಬೈಕ್‍ಗಳೇ ಕಳ್ಳತನ

    – ಮಿತಿ ಮೀರುತ್ತಿದೆ ಕಳ್ಳರ ಹಾವಳಿ
    – ವಾರದಲ್ಲಿ 15ಕ್ಕೂ ಹೆಚ್ಚು ಬೈಕ್ ಕಳ್ಳತನ

    ಬೆಂಗಳೂರು: ಮನೆ ಮುಂದೆ, ರಸ್ತೆ ಬದಿ ಬೈಕ್ ನಿಲ್ಲಿಸಿರೋದು ಇರಲಿ, ಇನ್ನು ಮನೆಯ ಗೇಟ್ ಒಳಗೆ ಬೈಕ್ ನಿಲ್ಲಿಸಿ ಗೇಟಿಗೆ ಭದ್ರವಾಗಿ ಬೀಗ ಹಾಕಿ ನಿಶ್ಚಿಂತೆಯಾಗಿ ಮಲಗುತ್ತಿದ್ದವರಿಗೂ ಚಿಂತೆ ಶುರುವಾಗಿದೆ.

    ಹೌದು ಮನೆಯ ಗೇಟ್ ಒಳಗಡೆ ಬೈಕ್ ಇಟ್ಟು ಬೀಗ ಹಾಕಿ ಮಲಗಿದರೂ ಸಹ ಕ್ಷಣಾರ್ಧದಲ್ಲಿ ಬೈಕುಗಳನ್ನು ಕಳ್ಳತನ ಮಾಡುವ ಚಾಲಾಕಿ ಕಳ್ಳರು ಹೆಚ್ಚಾಗುತ್ತಿದ್ದಾರೆ.

    ಬೆಂಗಳೂರು ಹೊರವಲಯ ಆನೇಕಲ್ ಪಟ್ಟಣದ ಮುನಿವೆಂಕಟಪ್ಪ ಬಡಾವಣೆಯಲ್ಲಿ ನಿನ್ನೆ ರಾತ್ರಿ ಸುಮಾರು 12 ಗಂಟೆ ಸಮಯದಲ್ಲಿ ನಾಲ್ವರು ಖದೀಮರು ಶ್ರೀನಿವಾಸ್ ಎಂಬುವವರ ಮನೆಯ ಪಾರ್ಕಿಂಗಿನಲ್ಲಿ ನಿಲ್ಲಿಸಲಾಗಿದ್ದ 2 ಬುಲೆಟ್ ಬೈಕುಗಳನ್ನು ಕದ್ದು ಪರಾರಿಯಾಗಿದ್ದಾರೆ.

    ಮನೆಯ ಗೇಟ್ ಒಳಭಾಗದಲ್ಲಿ ಬೈಕ್ ನಿಲ್ಲಿಸಿ ಗೇಟಿಗೆ ಬೀಗ ಹಾಕಿ ನೆಮ್ಮದಿಯಿಂದ ಮಲಗಿದ್ದ ಬೈಕ್ ಮಾಲೀಕರು ಬೆಳಗ್ಗೆ ಎದ್ದು ನೋಡುತ್ತಿದ್ದಂತೆ ಬೈಕುಗಳು ಇಲ್ಲದಿರುವುದನ್ನು ಕಂಡು ಶಾಕ್ ಆಗಿದ್ದಾರೆ. ತಕ್ಷಣ ಮನೆಗೆ ಅಳವಡಿಸಿದ್ದ ಸಿಸಿ ಕ್ಯಾಮರಾ ಚೆಕ್ ಮಾಡಿದ್ದು, ಕಳ್ಳರ ಕೈಚಳಕ ಬೆಳಕಿಗೆ ಬಂದಿದೆ. ಈ ಸಂಬಂಧ ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ಇತ್ತೀಚೆಗೆ ಆನೇಕಲ್ ಪಟ್ಟಣದಲ್ಲಿ ಬೈಕ್ ಕಳ್ಳರ ಹಾವಳಿ ಹೆಚ್ಚಾಗಿದ್ದು, ಪಟ್ಟಣದ ಒಂದಲ್ಲ ಒಂದು ಕಡೆ ದಿನ ನಿತ್ಯ ಬೈಕ್ ಕಳ್ಳತನ ನಡೆಯುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ಕಳೆದ ಒಂದು ವಾರದಲ್ಲಿ ಸುಮಾರು 15ಕ್ಕೂ ಹೆಚ್ಚು ಬೈಕ್ ಗಳು ಕಳ್ಳತನವಾಗಿರುವುದು ಪೊಲೀಸರ ಕಾರ್ಯವೈಖರಿ ಮೇಲೆ ಅನುಮಾನ ಮೂಡುವಂತೆ ಮಾಡಿದೆ. ಇಷ್ಟೆಲ್ಲ ಬೈಕ್ ಗಳು ಕಳವಾಗಿದ್ದರೂ ಪೊಲೀಸರು ಅಲರ್ಟ್ ಆಗಿಲ್ಲವೇ ಎನ್ನುವ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡುತ್ತಿದೆ.