– ರಿಷಬ್, ಪ್ರಶಾಂತ್ ನೀಲ್, ಪ್ರಮೋದ್ ಕುಟುಂಬ ಜೊತೆ ದೇವರ ದರ್ಶನ
ಉಡುಪಿ: ಕೊಲ್ಲೂರು ಮೂಕಾಂಬಿಕೆ (Kollur Mookambika Temple) ದೇವಿಯ ದರ್ಶನಕ್ಕೆ ನಟ ಜೂ.ಎನ್‌ಟಿಆರ್ (Junior NTR) ಕುಟುಂಬ ಆಗಮಿಸಿದೆ. ಕರಾವಳಿ ಜಿಲ್ಲೆ ಉಡುಪಿ (Udupi) ಎರಡನೇ ದಿನದ ಪ್ರವಾಸದಲ್ಲಿರುವ ತಾರಕ್ ರಾಮ್ ಮಧ್ಯಾಹ್ನ ಮಹಾಪೂಜೆ ಸಂದರ್ಭಗಳಲ್ಲಿ ದೇವಸ್ಥಾನಕ್ಕೆ ಆಗಮಿಸಿ ತಾಯಿ ಕೊಲ್ಲೂರಮ್ಮನ ದರ್ಶನ ಮಾಡಿದ್ದಾರೆ.
ಉಡುಪಿ ಜಿಲ್ಲೆಯ ಬೈಂದೂರಿನ ಕೊಲ್ಲೂರು ದೇಗುಲದಲ್ಲಿ ನಟ, ನಿರ್ದೇಶಕ ರಿಷಬ್ ಶೆಟ್ಟಿ, ಕೆಜಿಎಫ್ ಖ್ಯಾತಿಯ ಡೈರೆಕ್ಟರ್ ಪ್ರಶಾಂತ್ ನೀಲ್ ಕುಟುಂಬವೂ ಜೊತೆಯಾಯಿತು. ಲಾಫಿಂಗ್ ಬುದ್ಧ ನಟ ಪ್ರಮೋದ್ ಶೆಟ್ಟಿ ಸಹ ಜೊತೆಗೆ ಬಂದು ದೇವರ ದರ್ಶನ ಮಾಡಿದರು. ನಾಲ್ಕು ಕುಟುಂಬಗಳು ಕೊಲ್ಲೂರಿನಲ್ಲಿ ಜೊತೆಯಾಗಿ ಬಂದು ದರ್ಶನ ಪಡೆದು ಪ್ರಸಾದ ಸ್ವೀಕಾರ ಮಾಡಿದರು. ಇದನ್ನೂ ಓದಿ: ಚಿತ್ರರಂಗದಲ್ಲಿ ಬಾಲಯ್ಯ ಹಾಫ್ ಸೆಂಚುರಿ – ತಲೈವಾ ಗ್ರೇಟ್ ವಿಶ್!
ನಾಲ್ಕು ದಶಕದ ನಂತರ ಜೂ.ಎನ್‌ಟಿಆರ್ ತಾಯಿ ಶಾಲಿನಿ ನಂದಮೂರಿ ಕರಾವಳಿಗೆ ಬಂದಿದ್ದಾರೆ. ಪತ್ನಿ ಲಕ್ಷ್ಮಿ ಪ್ರಣತಿ, ಪ್ರಗತಿ ರಿಷಬ್, ಪ್ರಶಾಂತ್ ನೀಲ್, ಲಿಖಿತಾ ನೀಲ್ ಮೂಕಾಂಬಿಕೆಯ ದರ್ಶನ ಮಾಡಿ ಪ್ರಾಂಗಣದಲ್ಲಿರುವ ಗುಡಿಗಳಿಗೆ ಭೇಟಿ ಕೊಟ್ಟು ಪ್ರಸಾದ ಸ್ವೀಕರಿಸಿದರು. ಕೊಲ್ಲೂರು ಆಡಳಿತದಿಂದ ನಟರಿಗೆ ಗೌರವ ಸಮರ್ಪಣೆ ಮಾಡಲಾಯಿತು. ಇದನ್ನೂ ಓದಿ: ಕೈದಿ ನಂಬರ್ ಆಯ್ತು.. ಈಗ ದರ್ಶನ್ ಧರಿಸಿದ್ದ ಟೀ ಶರ್ಟ್ ಟ್ರೆಂಡ್
ರಿಷಬ್ ಜೊತೆ ಗೆಳೆತನ ಓಡಾಟ ಮಾಡುತ್ತಿರೋದರಿಂದ ಕಾಂತಾರ ಫ್ರೀಕ್ವೆಲ್‌ನಲ್ಲಿ ತಾರಕ್ ನಟಿಸುತ್ತಾರಾ ಎಂಬ ಪ್ರಶ್ನೆ ಓಡಾಡುತ್ತಿದೆ. ಇದಕ್ಕೆ ಉತ್ತರಿಸಿದ ಅವರು, ರಿಷಬ್ ಶೆಟ್ಟಿ ಅವರೇ ಈ ಬಗ್ಗೆ ಪ್ಲಾನ್ ಮಾಡಬೇಕು. ಅವರು ಏನು ಪ್ಲಾನ್ ಮಾಡಿದರೂ ನಾನು ರೆಡಿ ಎಂದರು. ದೇವಸ್ಥಾನದಲ್ಲಿ ಆ ವಿಚಾರ ನಾನು ಮಾತನಾಡುವುದಿಲ್ಲ. ಪ್ರಮೋದ್ ಶೆಟ್ಟಿ ನಟನೆಯ ಲಾಫಿಂಗ್ ಬುದ್ಧ ಸಿನಿಮಾ ನೋಡುತ್ತೇನೆ. ಲಾಫಿಂಗ್ ಬುದ್ಧ ಯಶಸ್ಸಿಗೆ ಪ್ರಮೋದ್ ಶೆಟ್ಟಿಗೆ ರಿಷಬ್ ಅಭಿನಂದಿಸಿದರು. ಇದನ್ನೂ ಓದಿ: ನಾನು ಪವರ್ ಗ್ರೂಪ್‌ನಲ್ಲಿಲ್ಲ, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ – ಹೇಮಾ ಕಮಿಷನ್ ವರದಿಗೆ ಮೋಹನ್‌ಲಾಲ್ ರಿಯಾಕ್ಷನ್
ಉಡುಪಿ: ನಮಗೆ ಫ್ರೀ ಬಸ್ ಬೇಡ, ಹೆಚ್ಚುವರಿ ಬಸ್ಸುಗಳನ್ನು ಹಳ್ಳಿಯಲ್ಲಿ ಓಡಿಸಿ ಸಹಾಯ ಮಾಡಿ ಎಂದು ಸರ್ಕಾರದ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ (Student Protest) ಮಾಡಿದ ಘಟನೆ ಉಡುಪಿ (Udupi) ಜಿಲ್ಲೆಯಲ್ಲಿ ನಡೆದಿದೆ.
ಸರಿಯಾದ ಸಮಯಕ್ಕೆ ಓಡುವ ಹೆಚ್ಚುವರಿ ಬಸ್ಸುಗಳನ್ನು ಕೊಡಿ. ನಾವು ಪಾಸ್ ಮಾಡಿಸುತ್ತೇವೆ. ಹಣಕೊಟ್ಟು ಪ್ರಯಾಣ ಮಾಡುತ್ತೇವೆ ಎಂದು ಏರು ಧ್ವನಿಯಲ್ಲಿ ಉಡುಪಿ ಜಿಲ್ಲೆಯ ಬೈಂದೂರಿನ ವಿದ್ಯಾರ್ಥಿನಿ ಕೆಎಸ್‌ಆರ್‌ಟಿಸಿ ಅಧಿಕಾರಿ (KSRTC Officer) ಮುಂದೆ ಸಮಸ್ಯೆ ತೋಡಿಕೊಂಡಿದ್ದಾಳೆ. ಎಬಿವಿಪಿ (ABVP) ನೇತೃತ್ವದಲ್ಲಿ ಕುಂದಾಪುರದಲ್ಲಿ (Kundapura) ಪ್ರತಿಭಟನೆ ನಡೆದ ಸಂದರ್ಭ ತಮಗಾಗುವ ಬಸ್ ಸಮಸ್ಯೆಗಳ ವಿರುದ್ಧ ಸರ್ಕಾರದ ಇಲಾಖೆಯ ವಿರುದ್ಧ ಧಿಕ್ಕಾರ ಕೂಗಿದರು. ಉಚಿತ ಬಸ್ಸಿನಿಂದಾಗಿ ವಿದ್ಯಾರ್ಥಿಗಳು ಅಲೆದಾಡುವಂತಾಗಿದೆ. ಬೆಳಗ್ಗೆ, ಸಂಜೆ ಬಸ್ಸಿನಲ್ಲಿ ಸೀಟ್ ಸಿಗುವುದಿಲ್ಲ. ಸರಿಯಾದ ಸಮಯಕ್ಕೆ ಮನೆ ತಲುಪುವುದು ಕಷ್ಟವಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಹೆಚ್ಚುವರಿ ಬಸ್ಸುಗಳನ್ನು ಓಡಿಸಿ ಸಹಾಯ ಮಾಡಿ ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಇನ್ನು 5 ದಿನ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಭಾರೀ ಮಳೆ
ಈ ಕುರಿತು ವಿದ್ಯಾರ್ಥಿನಿಯೊಬ್ಬಳು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿರುವ ವೀಡಿಯೋ ವೈರಲ್ ಆಗಿದೆ. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರ ಕೊಡಿ. ಅವರ ಸಮಸ್ಯೆಯನ್ನು ಕೇಳಿ, ಅದಕ್ಕೆ ಏನು ಪರಿಹಾರ ಕೊಡುತ್ತೀರಿ ಕೊಡಿ. ವಿದ್ಯಾರ್ಥಿಗಳಿಗೆ ಸಮಸ್ಯೆಯಾದರೆ ಅವರೊಂದಿಗೆ ಶಾಸಕನಾಗಿ ನಾನು ಕೂಡ ಮಕ್ಕಳೊಂದಿಗೆ ಪ್ರತಿಭಟನೆಯಲ್ಲಿ ಕುಳಿತುಕೊಳ್ಳುತ್ತೇನೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಎಚ್ಚರಿಸಿದರು. ಇದನ್ನೂ ಓದಿ: ಮೋದಿ 3.0 ಯುಗಾರಂಭಕ್ಕೆ ಕ್ಷಣಗಣನೆ – ರಾಷ್ಟ್ರಪತಿ ಭವನಕ್ಕೆ ಮೂರು ಹಂತದ ಭದ್ರತೆ!
ಒಂದು ವಾರದ ಒಳಗೆ ಸಮಸ್ಯೆ ಬಗೆಹರಿಸದೆ ಇದ್ದರೆ ರಸ್ತೆ ತಡೆ ಮಾಡಿ ಪ್ರತಿಭಟಿಸುತ್ತೇವೆ ಎಂದು ಎಚ್ಚರಿಸಿದರು. ವಿದ್ಯಾರ್ಥಿಗಳ ಮನವಿಗೆ ಗೌರವಿಸಿ ಮೇಲಧಿಕಾರಿಗಳಿಗೆ ತಾಲೂಕಿನ ಸಮಸ್ಯೆಯನ್ನು ತಲುಪಿಸಿ ಎಂದು ಸೂಚಿಸಿದರು. ಇದನ್ನೂ ಓದಿ: ಮೋದಿ ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಖರ್ಗೆ
ಉಡುಪಿ: ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಕಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್ ನಾಯಕರನ್ನು ಸೃಷ್ಟಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಸಿಬಿ ಪೊಲೀಸರ (CCB Police) ತನಿಖೆ ನಡೆಸುತ್ತಿದ್ದಾರೆ. ಚೈತ್ರಾ ಕುಂದಾಪುರ (Chaitra Kundapura) ಮತ್ತು ಏಳು ಜನ ಸಹಚರರು ಪೊಲೀಸರ ವಶದಲ್ಲಿದ್ದಾರೆ. ಈ ನಡುವೆ ಮೋಸಕ್ಕೊಳಗಾದ ಉದ್ಯಮಿ ಗೋವಿಂದ ಬಾಬು ಪೂಜಾರಿ (Govind Babu Poojari) ಅವಧೂತ ವಿನಯ ಗುರೂಜಿಯವರಿಗೆ (Vinay Guruji) ಪತ್ರ ಬರೆದು ಆಗಿರುವ ವೃತ್ತಾಂತವನ್ನೆಲ್ಲ ವಿವರಿಸಿದ್ದಾರೆ.
ಕಷ್ಟಕರ ಪರಿಸ್ಥಿತಿಯಲ್ಲಿ ನಾನು ಏಳನೇ ತರಗತಿ ವಿದ್ಯಾಭ್ಯಾಸ ಮಾಡಿ ಮುಂಬೈಗೆ ಹೋದೆ. ಮುಂಬೈ ಹೋಟೆಲುಗಳಲ್ಲಿ ಪ್ಲೇಟ್ ತೊಳೆದು ಜೀವನವನ್ನು ರೂಪಿಸಿದ್ದೇನೆ. ಕೆಲಸ ಮಾಡುತ್ತಾ ಮಾಡುತ್ತಾ ಫೈವ್ ಸ್ಟಾರ್ ಹೋಟೆಲ್ ಗೆ ಸೇರಿಕೊಂಡೆ.
ಐದು ಜನರಿಂದ ಒಂದು ಉದ್ಯಮವನ್ನು ನಾನು ಆರಂಭ ಮಾಡಿದೆ. ತಮಿಳುನಾಡು ಗುಜರಾತ್ ಆಂಧ್ರದಲ್ಲಿ ಮನೆ ಕಂಪನಿಗೆ ಫುಡ್ ಸರ್ವಿಸ್ ಶುರು ಮಾಡಿದೆ. ಲಾಭದಲ್ಲಿ ವೃದ್ಧಾಶ್ರಮ ಅನಾಥಾಶ್ರಮ ಕೋವಿಡ್ ಸಂದರ್ಭ ಶಿಕ್ಷಣಕ್ಕೆ ಸಹಾಯ ಮಾಡಿದೆ. ನನ್ನ ಜೀವನದಲ್ಲಿ ಈವರೆಗೆ 15 ರಿಂದ 20 ಸಾವಿರ ಮನೆ/ ಜನಗಳಿಗೆ ಸಹಾಯ ಮಾಡಿದ್ದೇನೆ. ಹಿರಿಯರ ಮಾರ್ಗದರ್ಶನದಂತೆ ನಾನು ಆರ್‌ಎಸ್‌ಎಸ್‌ನ ಐಟಿಸಿ ಕೋರ್ಸ್ ಅನ್ನು ಮುಗಿಸಿದೆ. ಊರಿನವರ ಆಪ್ತರ ಹಿತೈಷಿಗಳ ಮಾರ್ಗದರ್ಶನದಂತೆ ಬಿಜೆಪಿ ಸೇರ್ಪಡೆಯಾದೆ.
ಕಳೆದ ಆರು ವರ್ಷಗಳಿಂದ ನಾನು ಬಿಜೆಪಿಯ ಸದಸ್ಯತ್ವ ಸ್ವೀಕರಿಸಿದ್ದೇನೆ. ನನ್ನ ಜೊತೆ ಕೆಲಸ ಮಾಡುತ್ತಿದ್ದ ಪ್ರಸಾದ್ ಬೈಂದೂರು ಚೈತ್ರಾಳನ್ನು ಮೊದಲು ಪರಿಚಯ ಮಾಡಿದ್ದಾನೆ. ಚೈತ್ರಾ ನಂತರ ಗಗನ್ ಕಡೂರು ಪರಿಚಯ ಮಾಡಿಸಿದಳು. ಬಿಜೆಪಿ ಮತ್ತು ಆರ್ ಎಸ್ ಎಸ್ ಎಂದು ವಿಶ್ವನಾಥ್ ಜಿ, ಅಭಿನವ ಸ್ವಾಮೀಜಿ , ನಾಯ್ಕ್ ಒಬ್ಬೊಬ್ಬರಾಗಿ ಪರಿಚಯಿಸಿದರು. ಆಮೇಲೆ ಚಿಕ್ಕಮಗಳೂರು ಬೆಂಗಳೂರು, ಮಂಗಳೂರಿನಲ್ಲಿ ಅಂತ ಹಂತವಾಗಿ 5.50ಕೋಟಿ ಪಡೆದರು. ಮತ್ತಷ್ಟು ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ.
ಹರಿದ 10 ರೂ. ನೋಟು ಮೂಲಕ ಹಣ ವರ್ಗಾವಣೆಯಾಗಿದೆ. ಅರ್ಧ ಅರ್ಧ ನೋಟಿನ ಕೋಡ್ ವಾರ್ಡ್ ಮೂಲಕ ನಾವು ಹಣ ಹಸ್ತಾಂತರ ಮಾಡಿದ್ದೇವೆ. ನನ್ನ ಆಸ್ತಿಯನ್ನು ಅಡ ಇಟ್ಟು ಒಮ್ಮೆ ಮೂರು ಕೋಟಿ ಸಾಲ ಪಡೆದಿದ್ದೇನೆ. ಇನ್ನೆರಡು ಕೋಟಿ ಬೇಕು ಎಂದು ಚೈತ್ರ ಗ್ಯಾಂಗ್ ಬೇಡಿಕೆ ಇಟ್ಟಿದ್ದು, ಮತ್ತೆ ಖಾಸಗಿ ಫೈನಾನ್ಸ್ ನಿಂದ 2 ಕೋಟಿ ಸಾಲ ಪಡೆದುಕೊಂಡೆ ಎಂದು ವಿವರಿಸಿದ್ದಾರೆ.
ಅವಧೂತ ಗುರೂಜಿಗೆ ಗೋವಿಂದ ಬಾಬು ಪೂಜಾರಿ ಪತ್ರದ ಕೊನೆಗೆ ವಿನಂತಿ ಮಾಡಿದ್ದಾರೆ. ರಾಷ್ಟ್ರೀಯ ಪಕ್ಷ, ಆರ್‌ಎಸ್‌ಎಸ್ ಸಂಘ ಎಂದು ಹೇಳಿ ನನಗೆ ಮೋಸ ಮಾಡಿದರು. ರಾಜಕೀಯದ ಆಮೀಷ ತೋರಿಸಿ ನನ್ನನ್ನು ಹಳ್ಳಕ್ಕೆ ತಳ್ಳಿದರು. ಹಿರಿಯರಾದ ತಾವು ನನಗೆ ದಾರಿ ತೋರಿಸಬೇಕು. ಕಾನೂನು ಮತ್ತು ಪೊಲೀಸ್ ವ್ಯವಸ್ಥೆ ಮೇಲೆ ನನಗೆ ನಂಬಿಕೆ ಇದೆ. ನನಗೆ ನ್ಯಾಯ ಒದಗಿಸಲು ಸಹಕಾರ ಮಾಡಿ ಎಂದು ಹೇಳುವ ಮೂಲಕ ಪತ್ರ ಕೊನೆಗೊಳಿಸಿದ್ದಾರೆ. ಅದರ ಜೊತೆ ಎರಡು ವಾಯ್ಸ್ ನೋಟ್ ಗಳು ಲಭ್ಯವಾಗಿದೆ.
ಬೆಂಗಳೂರು: ಚೈತ್ರಾ ಕುಂದಾಪುರ (Chaitra Kundapur) ವಂಚನೆ ಪ್ರಕರಣ ಸಂಬಂಧ ದೂರು ನೀಡಿದ್ದ ಉದ್ಯಮಿ ಗೋವಿಂದ ಬಾಬು ಪೂಜಾರಿ (Govind Babu Poojari) ಕರ್ನಾಟಕ ವಿಧಾನಸಭಾ ಚುನಾವಣೆಯ (Karnataka Election) ಸಮಯದಲ್ಲಿ ಬೈಂದೂರು (Byndoor) ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಮಾಡಿದ್ದರು.
ಚುನಾವಣಾ ಸಮಯದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರನ್ನು ಉದ್ಯಮಿ ಗೋವಿಂದ ಬಾಬು ಪೂಜಾರಿ ಭೇಟಿ ಮಾಡಿದ್ದರು. ಬಿಜೆಪಿ ನಾಯಕರೇ ಅಮಿತ್ ಶಾಗೆ ಪರಿಚಯ ಮಾಡಿಸಿದ್ದರು. ಈ ವೇಳೆ ಶಾಗೆ ಹೂ ಗುಚ್ಚ ಕೊಟ್ಟು ಶುಭಾಶಯ ಹೇಳಿದ್ದರು.
ರಾಷ್ಟ್ರೀಯ ನಾಯಕರ ಹತ್ತಿರ ಸುಳಿಯಲು ಭಾರೀ ಪ್ರಭಾವಿಯಾಗಿರಬೇಕು. ಈ ಬಾರಿ ಟಿಕೆಟ್ ನಿಮಗೆ ಸಿಗಲಿದೆ ಎಂದು ಬಿಜೆಪಿ ನಾಯಕರೇ ಭರವಸೆ ನೀಡಿದ್ದರು. ಆದರೆ ಬಿಜೆಪಿ ನಾಯಕರಿಗೆ ಟಿಕೆಟ್ ವಿಚಾರದ ಬಗ್ಗೆ ಎಲ್ಲವೂ ಗೊತ್ತಿತ್ತು. ಗೊತ್ತಿದ್ದರೂ ರಾಜ್ಯ ಬಿಜೆಪಿ ನಾಯಕರು ಸುಮ್ಮನಾಗಿದ್ದೆ ಗೋವಿಂದ ಬಾಬು ಪೂಜಾರಿ ದೂರು ನೀಡಲು ಪ್ರಮುಖ ಕಾರಣ ಎನ್ನಲಾಗುತ್ತಿದೆ.
ಉಡುಪಿ: ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ (Election) ಕಾಂಗ್ರೆಸ್ (Congress) ಕಳೆದ ಮೂರು ದಶಕದಲ್ಲೇ ದಾಖಲೆಯ ಸಾಧನೆ ಮಾಡಿದೆ. ಕಾಂಗ್ರೆಸ್ 136 ಸ್ಥಾನಗಳನ್ನು ಗೆದ್ದಿದ್ದು, 65 ಸೀಟು ಗೆದ್ದ ಬಿಜೆಪಿ (BJP) ಅಧಿಕಾರದಿಂದ ಹೊರಬಿದ್ದಿದೆ. ಜೆಡಿಎಸ್ (JDS) 19 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ರಾಜ್ಯದ ಚಿತ್ರಣ ಅದಲು ಬದಲಾದರೂ ಕೂಡ ಉಡುಪಿಯಲ್ಲಿ (Udupi) ಬಿಜೆಪಿಯ ಹಿಂದಿನ ದಾಖಲೆ ಹಾಗೆಯೇ ಉಳಿದಿದೆ. ಉಡುಪಿಯಲ್ಲಿ ಐದಕ್ಕೆ ಐದು ಕ್ಷೇತ್ರವನ್ನು ಬಿಜೆಪಿ ತನ್ನದಾಗಿಸಿಕೊಂಡಿದೆ.
ಇದು ಕಾರ್ಯಕರ್ತರ ಗೆಲುವು. ಬಿಜೆಪಿ ಪಕ್ಷದ ಗೆಲುವು. ಕೇವಲ ಒಂದು ತಿಂಗಳೊಳಗೆ ಇಡೀ ವಿಧಾನಸಭಾ ಕ್ಷೇತ್ರದ ಮನೆಗಳಿಗೆ ಜನರ ಮನಗಳಿಗೆ ನನ್ನನ್ನು ಮುಟ್ಟಿಸುವಲ್ಲಿ ಯಶಸ್ವಿ ಆಗಿದ್ದಾರೆ. ಶಾಸಕ ಸುಕುಮಾರ ಶೆಟ್ಟಿ ಬಹಿರಂಗ ಪ್ರಚಾರ ನಡೆಸದಿದ್ದರೂ ಅಂತರಂಗದಿಂದ ಪಕ್ಷಕ್ಕೆ ಆಶೀರ್ವಾದ ಮಾಡಿದ್ದಾರೆ. ಜನರ ಅಶೋತ್ತರಗಳಿಗೆ ಸ್ಪಂದಿಸಿ ಕೆಲಸ ಮಾಡುತ್ತೇನೆ. ಸರ್ಕಾರದ ಕೆಲಸದ ಜೊತೆಗೆ ಸಂಘಟನೆಯ ಕೆಲಸಗಳೂ ಬಹಳ ಮುಖ್ಯವಾಗಿದೆ ಎಂದು ಗುರುರಾಜ ಶೆಟ್ಟಿ ಗಂಟಿಹೊಳೆ (Gururaj Shetty Gantihole) ಹೇಳಿದ್ದಾರೆ. ಇದನ್ನೂ ಓದಿ: ಈ ಬಾರಿ ಸಿಎಂ ಸ್ಥಾನವನ್ನು ಒಕ್ಕಲಿಗರಿಗೆ ನೀಡಬೇಕು: ಉಮಾಪತಿ ಶ್ರೀನಿವಾಸ ಗೌಡ
ಕಾಂಗ್ರೆಸ್ ಅಭ್ಯರ್ಥಿ ಗೋಪಾಲ ಪೂಜಾರಿ, ಇದೊಂದು ಅಚ್ಚರಿಯ ಫಲಿತಾಂಶವಾಗಿದ್ದು, ನಾವು ಇದನ್ನು ನಿರೀಕ್ಷೆಯೇ ಮಾಡಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ. 2018ರಲ್ಲಿ ಸೋತ ನಂತರ ಐದು ವರ್ಷ ಕ್ಷೇತ್ರದಲ್ಲೇ ಓಡಾಡಿ ಜನರ ಜೊತೆಗಿದ್ದೆ. ಚುನಾವಣೆಯಲ್ಲಿ ಸೋತು ನನ್ನ ರಾಜಕೀಯ ಜೀವನ ಮುಗಿಸುವ ಬದಲು, ಜನಸೇವೆ ಮಾಡುವ ಅವಕಾಶವನ್ನು ಕೇಳಿದ್ದೆ. ಈ ಫಲಿತಾಂಶದಿಂದ ನನಗೆ ನೋವಾಗಿದೆ. ಬೈಂದೂರು ಜನತೆಯ ಪ್ರೀತಿಗೆ, ಈಗ ನೀಡಿರುವ ಅಭಿಪ್ರಾಯಕ್ಕೆ ನನ್ನ ಎರಡು ಮಾತುಗಳು ಇಲ್ಲ. ನಾನು ಜನರ ಜೊತೆ ಇರುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಸರ್.. ಭಯ ಪಡಬೇಡಿ, ನಿಮ್ಮ ಜೊತೆ ನಾವಿದ್ದೇವೆ: ಸೋತು ಮಂಕಾಗಿದ್ದ ಸಿ.ಟಿ.ರವಿ ಸಂತೈಸಿದ ಬಾಲಕ
ಬೈಂದೂರಿನ ಜಿದ್ದಾಜಿದ್ದಿ ಹೇಗಿತ್ತು? ಯಾರಿಗೆಷ್ಟು ಮತ?
ಬೈಂದೂರು (Byndoor) ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರುರಾಜ ಶೆಟ್ಟಿ ಗಂಟಿಹೊಳೆ ಅವರು 98,628 ಮತಗಳನ್ನು ಪಡೆದು 16,153 ಮತಗಳ ಅಂತರದಿಂದ ಜಯಗಳಿಸಿರುತ್ತಾರೆ. ಕಾಂಗ್ರೆಸ್‌ನ ಗೋಪಾಲ ಪೂಜಾರಿ ಅವರು 82,475 ಮತಗಳನ್ನು ಪಡೆದು ಸೋಲನ್ನು ಅನುಭವಿಸಿದ್ದಾರೆ. ಉಳಿದಂತೆ ಜೆಡಿಎಸ್ ಅಭ್ಯರ್ಥಿ ಮನ್ಸೂರ್ ಇಬ್ರಾಹಿಂ 841 ಮತಗಳನ್ನು ಪಡೆದಿದ್ದರೆ, ಆಮ್ ಆದ್ಮಿ ಪಕ್ಷದ ಸಿ.ಎ ರಮಾನಂದ ಪ್ರಭು 187 ಮತಗಳನ್ನು ಪಡೆದಿದ್ದಾರೆ. ಅಲ್ಲದೇ ಉತ್ತಮ ಪ್ರಜಾಕೀಯ ಪಕ್ಷದ ಪ್ರಸಾದ್.ಎಸ್ 626 ಮತಗಳು, ರಾಷ್ಟ್ರೀಯ ಸಮಾಜದಳ (ಆರ್) ಪಕ್ಷದ ಕೊಲ್ಲೂರು ಮಂಜುನಾಥ ನಾಯಕ್ 171, ಪಕ್ಷೇತರ ಅಭ್ಯರ್ಥಿಗಳಾದ ಜಿ. ಚಂದ್ರಶೇಖರ 613, ಬಿ.ಶ್ಯಾಮ 296 ಹಾಗೂ ಬಿ.ಹೆಚ್ ಸುರೇಶ್ ಪೂಜಾರಿ ಅವರು 638 ಮತಗಳನ್ನು ಪಡೆದಿರುತ್ತಾರೆ. ಇಷ್ಟು ಮಾತ್ರವಲ್ಲದೇ 1,208 ನೋಟಾ ಮತದಾನವಾಗಿರುತ್ತದೆ. ಇದನ್ನೂ ಓದಿ: ಗುರುವನ್ನು ಸೋಲಿಸಿದ ಶಿಷ್ಯ: ಸಿಟಿ ರವಿ ಸೋತಿದ್ದು ಎಲ್ಲಿ?
ಕಾಂಗ್ರೆಸ್ ಗೆಲ್ಲುತ್ತದೆ ಎಂಬ ನಂಬಿಕೆ ಇದ್ದ ಕ್ಷೇತ್ರದಲ್ಲಿ ಬೈಂದೂರು ಕೂಡ ಒಂದು ಆದರೆ ಬರಿಗಾಲ ಸಂತ 20 ದಿನದಲ್ಲಿ ಮ್ಯಾಜಿಕ್ ಮಾಡಿ ಕ್ಷೇತ್ರದ ಜನರ ಮನ ಗೆದ್ದಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಅತಿ ಹೆಚ್ಚು ಬೇಡಿಕೆಗಳು ಇರುವ ಕ್ಷೇತ್ರವೆಂದರೆ ಅದು ಬೈಂದೂರು. ವಿಪಕ್ಷದಲ್ಲಿ ಕೂತು ಜನಸೇವೆ ಮಾಡುವುದು ಗುರುರಾಜ ಶೆಟ್ಟಿ ಗಂಟಿ ಹೊಳೆ ಅವರ ಮುಂದೆ ಇರುವ ದೊಡ್ಡ ಸವಾಲು. ಇದನ್ನೂ ಓದಿ: ಸಿ.ಟಿ ರವಿ ಸೋಲಿಸಿದ್ದಕ್ಕೆ ಭೋಜೇಗೌಡರಿಗೆ ಹಾಲಿನ ಅಭಿಷೇಕ
ಉಡುಪಿ: ನನ್ನ ಮನಸ್ಸಿಗೆ ಆಗಿರುವ ನೋವು, ಆಘಾತ ಇನ್ನೂ ಕಡಿಮೆಯಾಗಿಲ್ಲ. ನಾನು ಈ ಕ್ಷಣದವರೆಗೆ ತಟಸ್ಥವಾಗಿದ್ದೇನೆ. ನಾಡಿದ್ದು ಹೋಗಿ ಬಿಜೆಪಿಗೆ (BJP) ಮತ ಹಾಕುತ್ತೇನೆ ಎಂದು ಉಡುಪಿ ಜಿಲ್ಲೆಯ ಬೈಂದೂರು (Baindur) ಶಾಸಕ ಸುಕುಮಾರ ಶೆಟ್ಟಿ (Sukumar Shetty) ತಿಳಿಸಿದರು.
ಟಿಕೆಟ್ ತಪ್ಪಿದ ಶಾಸಕರು ಒಂದೋ ಪಕ್ಷಾಂತರ ಮಾಡಿದ್ದಾರೆ. ಇಲ್ಲ ಪಕ್ಷದ ನಿಯಮವನ್ನು ಒಪ್ಪಿ ಅಭ್ಯರ್ಥಿಗಳ ಜೊತೆ ಗೆಲುವಿಗಾಗಿ ಹೋರಾಟವನ್ನು ನಡೆಸುತ್ತಿದ್ದಾರೆ. ಕರಾವಳಿ ಜಿಲ್ಲೆಯ ಪೈಕಿ ಸುಕುಮಾರ ಶೆಟ್ಟಿ ಮಾತ್ರ ವಿಭಿನ್ನ ನಿಲುವನ್ನ ತಳೆದಿದ್ದಾರೆ. ಬೇಸರವನ್ನು ಇನ್ನು ಉಳಿಸಿಕೊಂಡಿದ್ದಾರೆ. ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಸುಕುಮಾರಶೆಟ್ಟಿ ಮಾತನಾಡಿದ ಅವರು, ಪಕ್ಷ ವಿರೋಧಿ ಚಟುವಟಿಕೆ ಮಾಡುವ ಸಣ್ಣ ಮನುಷ್ಯ ನಾನಲ್ಲ. ಎದುರಾಳಿ ಪಕ್ಷದ ಜೊತೆ ಕೈಜೋಡಿಸಿದ್ದೇನೆ ಎಂದು ಆರೋಪಿಸುವವರು ಕೀಳು ಮನಸ್ಸಿನವರು. ಪಕ್ಷಾಂತರ ಪಕ್ಷವಿರೋಧಿ ಚಟುವಟಿಕೆ ಮಾಡಿಲ್ಲ ಎಂದು ಹೇಳಿದರು.
ಹಿರಿಯ ನಾಯಕರ ಮೇಲೆ ಗೌರವ ಇದೆ. ಆದರೆ ಪಕ್ಷಕ್ಕೆ ನನ್ನ ಅಭ್ಯರ್ಥಿತನ ಬೇಡವಾಗಿದೆ. ಹಾಗಾಗಿ ನಾನು ಯಾವುದೇ ಪ್ರಚಾರ ಸಭೆ, ರಾಲಿಗಳಲ್ಲಿ ಭಾಗಿ ಆಗಿಲ್ಲ ಯಾವ ಕಾರಣಕ್ಕೆ ನನಗೆ ಟಿಕೆಟ್ ಕೊಡಲಿಲ್ಲ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮೋದಿ, ಶಾ, ನಡ್ಡಾ, ಸಿಎಂ ಬಂದ್ರು ಸುಕುಮಾರ್ ಶೆಟ್ಟಿ ಬಂದಿಲ್ಲ: ಕರಾವಳಿ ಜಿಲ್ಲೆ ಉಡುಪಿಯ (Udupi) ಚುನಾವಣಾ (Election) ಕದನ ಕುತೂಹಲ ಕೆರಳಿಸಿದೆ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರದ ಪೈಕಿ 4 ಕಡೆ ಈ ಬಾರಿ ಹೊಸ ಅಭ್ಯರ್ಥಿಗಳು ನಾಲ್ವರು ಹಾಲಿ ಶಾಸಕರ ಪೈಕಿ ಬೈಂದೂರು ಶಾಸಕರು ತಟಸ್ಥವಾಗಿದ್ದಾರೆ. ಟಿಕೆಟ್ ತಪ್ಪಿದ ಬೇಸರದಿಂದ ಸುಕುಮಾರಶೆಟ್ಟಿ ಇನ್ನೂ ಹೊರ ಬಂದಿಲ್ಲ. ಚುನಾವಣಾ ಪ್ರಚಾರ ನಡೆಸುತ್ತಿಲ್ಲ ಯಾವುದೇ ಸಭೆಗೂ ಶಾಸಕ ಸುಕುಮಾರ ಶೆಟ್ಟಿ ಬರುತ್ತಿಲ್ಲ.
ದಕ್ಷಿಣ ಕನ್ನಡ (Dakshina Kannada) ಮತ್ತು ಉಡುಪಿ ಜಿಲ್ಲೆಯ 13 ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದರು. ಎಲ್ಲಾ ಶಾಸಕರು, ಅಭ್ಯರ್ಥಿಗಳು ಭಾಗವಹಿಸಬೇಕಿತ್ತು. ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಸುಕುಮಾರಶೆಟ್ಟಿ ಗೈರಾಗಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ವತಃ ಬೈಂದೂರು ವಿಧಾನಸಭಾ ಕ್ಷೇತ್ರದ ಸಿದ್ದಾಪುರಕ್ಕೆ ಬಂದು ಅಭ್ಯರ್ಥಿ ಗುರುರಾಜ್ ಗಂಟೆ ಹೊಳೆ ಪರ ಮತಯಾಚನೆ ಮಾಡಿದ್ದಾರೆ. ಈ ರೋಡ್ ಶೋದಲ್ಲೂ ಶಾಸಕ ಸುಕುಮಾರ ಶೆಟ್ಟಿ ಭಾಗಿಯಾಗಿಲ್ಲ. ಇದನ್ನೂ ಓದಿ: ಬೆಂಗಳೂರಿನಲ್ಲಿ ಮೋದಿ ಮೆಗಾ ರೋಡ್ ಶೋ – ಯಾವ ಸಮಯದಲ್ಲಿ ಎಲ್ಲಿ? ಯಾವ ರಸ್ತೆಯಲ್ಲಿ ಸಂಚಾರ?
ಸುಮಾರು 20,000 ಕಾರ್ಯಕರ್ತರು ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ವೇಳೆ ಜಮಾಯಿಸಿದ್ದರು. ಈ ಕಾರ್ಯಕ್ರಮದಿಂದಲೂ ಶಾಸಕ ಶೆಟ್ಟಿ ದೂರ ಉಳಿದಿದ್ದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಕುಂದಾಪುರ ವಿಧಾನಸಭಾ ಕ್ಷೇತ್ರಕ್ಕೆ ಬಂದಾಗಲೂ ಕರೆ ಮಾಡಿದ್ದರು. ಅದಕ್ಕೂ ಸುಕುಮಾರ್ ಶೆಟ್ಟಿ ಪೂರಕವಾಗಿ ಸ್ಪಂದನೆ ಮಾಡಿಲ್ಲ. ಸಿಎಂ ಬಸವರಾಜ ಬೊಮ್ಮಾಯಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ಕೊಡುವ ಸಂದರ್ಭವು ಸುಕುಮಾರಶೆಟ್ಟಿ ಭೇಟಿಯಾಗದೆ ಸಬೂಬು ಹೇಳಿದ್ದರು.
ರಾಜ್ಯದ ಬಿಜೆಪಿ ಹಿರಿಯ ನಾಯಕ ಬಿ.ಎಸ್ ಯಡಿಯೂರಪ್ಪ 4 ಬಾರಿ ಫೋನ್ ಕರೆ ಮಾಡಿ ಚುನಾವಣಾ ಓಡಾಟದಲ್ಲಿ ಭಾಗಿ ಆಗುವಂತೆ ಅಭ್ಯರ್ಥಿ ಪರ ಪ್ರಚಾರ ಮಾಡುವಂತೆ ಕೇಳಿಕೊಂಡಿದ್ದರು. ಇದಕ್ಕೂ ಸುಕುಮಾರ ಶೆಟ್ಟಿ ಒಪ್ಪಿಲ್ಲ. ಬಿ.ವೈ ರಾಘವೇಂದ್ರ ರಾಜ್ಯದ ಸಚಿವರು ಆರ್ ಎಸ್ ಎಸ್, ಸಂಘ ಪರಿವಾರದ ಮುಖಂಡರು ಮನವೊಲಿಸಿದರು ಸುಕುಮಾರಶೆಟ್ಟಿ ಕರಗಿಲ್ಲ. ಇದನ್ನೂ ಓದಿ: ರೋಡ್ ಶೋನಲ್ಲಿ ಸರ್ಕಾರದ ಸಾಧನೆ, ಬೆಂಗಳೂರು ಕೊಡುಗೆಗಳ ಉಲ್ಲೇಖದ ಫ್ಲೆಕ್ಸ್ ಅಳವಡಿಕೆ
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ನಟ, ನಿರ್ದೇಶಕ ರಿಷಬ್ ಶೆಟ್ಟಿ ಬಿಜೆಪಿ ಪರವಾಗಿ ಕೆಲಸ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಕಾಂತಾರ ಗೆಲುವಿನ ಬೆನ್ನಲ್ಲೇ ಬಿಜೆಪಿಯು (BJP) ಶೆಟ್ಟರಿಗೆ ಗಾಳ ಹಾಕಲಾಗುತ್ತಿದೆ ಎನ್ನುವ ಸುದ್ದಿಯೂ ಹರಿದಾಡಿತ್ತು. ತಾವು ರಾಜಕೀಯ ಕ್ಷೇತ್ರಕ್ಕೆ ಬರುವುದಿಲ್ಲ ಎಂದು ರಿಷಬ್ ಶೆಟ್ಟಿ ಹೇಳಿದ್ದರೂ, ಆಗಾಗ್ಗೆ ರಾಜಕೀಯ ಪಡಸಾಲೆಯಲ್ಲಿ ಅವರ ಹೆಸರು ಕೇಳುವುದು ನಿಂತಿರಲಿಲ್ಲ. ಇದೀಗ ರಿಷಬ್ ಶೆಟ್ಟಿ ಬದಲಾಗಿ ಅವರ ಆಪ್ತರಿಬ್ಬರು ಬಿಜೆಪಿ ಪರ ಕಣಕ್ಕೆ ಇಳಿದಿದ್ದಾರೆ.
ರಿಷಬ್ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿ ಟೀಮ್ ನಲ್ಲಿ ಗುರುತಿಸಿಕೊಂಡಿರುವ ಹಾಗೂ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಪ್ರಮೋದ್ ಶೆಟ್ಟಿ (Pramod Shetty) ಮತ್ತು ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ (Shine Shetty) ಈ ಬಾರಿ ರಾಜಕೀಯ ಅಖಾಡಕ್ಕೆ ಇಳಿದಿದ್ದಾರೆ. ಬೈಂದೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರುರಾಜ ಗಂಟಿಹೊಳೆ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ಇದನ್ನೂ ಓದಿ:ಬಣ್ಣದ ಲೋಕಕ್ಕೆ ಡಾ ಬ್ರೋ- ‘ಡೇರ್ ಡೆವಿಲ್ ಮುಸ್ತಾಫಾ’ಗೆ ಬೆಂಬಲ
ತಮ್ಮ ಪರವಾಗಿ ಪ್ರಚಾರ ಮಾಡಲು ಬಂದಿರುವ ಪ್ರಮೋದ್ ಶೆಟ್ಟಿ ಮತ್ತು ಶೈನ್ ಶೆಟ್ಟಿ ಜೊತೆಗಿನ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಗುರುರಾಜ ಗಂಟಿಹೊಳೆ (Gururaj Gantihole) ಇಬ್ಬರೂ ಕಲಾವಿದರಿಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ನಿಮ್ಮಿಂದಾಗಿ ಈ ಬಾರಿ ಬೈಂದೂರಲ್ಲಿ (Bynduru) ಮತ್ತೆ ಬಿಜೆಪಿ ಗೆಲ್ಲಲಿದೆ ಎಂದು ಬರೆದುಕೊಂಡಿದ್ದಾರೆ.
ರಕ್ಷಿತ್ ಶೆಟ್ಟಿ ಮತ್ತು ರಿಷಬ್ ಶೆಟ್ಟಿ ರಾಜಕಾರಣದಿಂದ ದೂರ ಉಳಿದಿದ್ದರೂ ಆಪ್ತ ಪ್ರಮೋದ್ ಪ್ರಚಾರಕ್ಕೆ ಬಂದಿರುವುದು ಅನೇಕರಿಗೆ ಅಚ್ಚರಿ ಮೂಡಿಸಿದೆ. ಶೆಟ್ಟಿ ಅಂಡ್ ಟೀಮ್ ಈ ಬಾರಿ ಯಾವುದೇ ಪಕ್ಷದ ಪರವಾಗಿ ಕೆಲಸ ಮಾಡುವುದಿಲ್ಲ ಎಂದೇ ಹೇಳಲಾಗುತ್ತಿತ್ತು. ಆದರೆ, ಪ್ರಮೋದ್ ಅದನ್ನು ಸುಳ್ಳಾಗಿಸಿದ್ದಾರೆ.
ಉಡುಪಿ: ಬಿಜೆಪಿಯಲ್ಲಿ ಒಬ್ಬ ಕಾರ್ಯಕರ್ತನಿಗೂ ಅವಕಾಶ ಇದೆ ಎಂಬ ದೊಡ್ಡ ಸಂದೇಶವನ್ನು ವರಿಷ್ಠರು ಕರ್ನಾಟಕಕ್ಕೆ (Karnataka) ರವಾನೆ ಮಾಡಿದ್ದಾರೆ. ಉಡುಪಿ ಜಿಲ್ಲೆಯ ಐದು ಹಾಲಿ ಶಾಸಕರ ಬದಲು ನಾಲ್ಕು ಹೊಸ ಮುಖಕ್ಕೆ ಅವಕಾಶ ಕೊಡುವ ಮೂಲಕ ಇದು ಕಾರ್ಯಕರ್ತರ ಪಕ್ಷ ಎಂದು ಕಾಂಗ್ರೆಸ್‌ಗೂ (Congress) ಟಾಂಗ್ ನೀಡಿದೆ.
ಬೈಂದೂರು ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಸುಕುಮಾರ ಶೆಟ್ಟಿಗೆ ಜಾಗಕ್ಕೆ 39 ವರ್ಷದ ಗುರುರಾಜ್ ಶೆಟ್ಟಿ ಗಂಟಿಹೊಳೆ (Gururaj Shetty Gantihole) ಅವರಿಗೆ ಬಿಜೆಪಿ (BJP) ಮಣೆ ಹಾಕಿದೆ. ಪಕ್ಷದ ಪ್ರಮುಖರು, ಸಂಘ ಪರಿವಾರದ ಹಿರಿಯರು, ಬಿಜೆಪಿ ಕಾರ್ಯಕರ್ತರ ಅಭ್ಯರ್ಥಿಯಾಗಿರುವ ಗುರುರಾಜ್ ಗಂಟಿಹೊಳೆ ಹೆಸರು ಈಗ ಬೈಂದೂರು ಕ್ಷೇತ್ರದಲ್ಲಿ ಸಂಚಲನ ಮೂಡಿಸಿದೆ.
ಗುರುರಾಜ್ ಅವರ ಹುಟ್ಟೂರು ಬೈಂದೂರು (Baindur) ತಾಲೂಕು ಉಪ್ಪುಂದದ ಗಂಟಿಹೊಳೆ. ಗುರುರಾಜ್ ಶೆಟ್ಟಿ ಆರಂಭಿಕ ಶಿಕ್ಷಣವನ್ನು ಪೂರೈಸುವಾಗಲೇ ರಾಷ್ಟ್ರೀಯ ಸ್ವಯಂ ಸೇವಕ (RSS) ಸಂಘದ ಉಪ್ಪುಂದ ನಿತ್ಯ ಶಾಖೆಗೆ ಹೋಗುತ್ತಿದ್ದರು. ನಂತರ ಉನ್ನತ ಶಿಕ್ಷಣಕ್ಕಾಗಿ ಮಂಗಳೂರಿನತ್ತ ಮುಖ ಮಾಡಿ ಸಂಘನಿಕೇತನದಲ್ಲಿ ಬೆಳೆದರು. ಪತ್ರಿಕೋದ್ಯಮದಲ್ಲಿ ಎಂ.ಎ ಪೂರೈಸಿದ ನಂತರ 10 ವರ್ಷಗಳ ಕಾಲ ಆರ್‌ಎಸ್‌ಎಸ್‌ನ ಪೂರ್ಣಾವಧಿ ಕಾರ್ಯಕರ್ತರಾಗಿ ಓಡಾಡಿದರು. ಇದನ್ನೂ ಓದಿ: ಗುರುವಿನ ಋಣ ತೀರಿಸಲು ರಾಜಕೀಯ ನಿವೃತ್ತಿ ಘೋಷಿಸಿದ ಹಾಲಾಡಿ ಶ್ರೀನಿವಾಸ ಶೆಟ್ಟಿ
ಈ ದೇಶಕ್ಕಾಗಿ ಕೆಟ್ಟದನ್ನು ನಾನೇ ಮೆಟ್ಟಿ ನಿಲ್ಲುತ್ತೇನೆ ಎಂದು ಶಪಥ ಮಾಡಿದ ಗುರುರಾಜ್ ಶೆಟ್ಟಿ ಗಂಟಿಹೊಳೆ ಕಾಲಿಗೆ ಚಪ್ಪಲಿ ಹಾಕುವುದಿಲ್ಲ. ಸಂಘಟನೆ ಒಳಗೆ ಬರಿಗಾಲ ಸಂತ ಎಂದೇ ಫೇಮಸ್ ಆಗಿದ್ದಾರೆ. ಪೂರ್ಣಾವಧಿ ಕಾರ್ಯಕರ್ತನಾಗಿ ಮಡಿಕೇರಿಯ ಉಳಿದುಕೊಂಡಿದ್ದ ಇವರು ನಂತರ ಬೆಳ್ತಂಗಡಿಗೆ ಬಂದು, ಸಂಘದ ಕಾರ್ಯಕ್ಕೆ ಮುಡಿಪಾಗಿಟ್ಟರು. ಸಂಘಟನೆಯಲ್ಲಿ ತಾಲೂಕು, ಜಿಲ್ಲಾ ಜವಾಬ್ದಾರಿಗಳು ನಿಭಾಯಿಸಿದ್ದಾರೆ. ನಾಗಪುರದಲ್ಲಿ ಒಟಿಸಿ ಕ್ಯಾಂಪ್ ಮುಗಿಸಿ ಶಿಕ್ಷಣ ಪೂರೈಸಿ ಬಂದ ಗುರುರಾಜ್ ಗೆ 3 ವರ್ಷ ಉಡುಪಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿದ್ದರು. ನಂತರ 3 ವರ್ಷ ಬಿಜೆಪಿ ಉಪಾಧ್ಯಕ್ಷ ಹುದ್ದೆ ಸಿಕ್ಕಿತ್ತು.
ಈ ಮಧ್ಯೆ ಉದ್ಯಮದತ್ತ ಹೊರಳಿ ನೂರಾರು ಜನರಿಗೆ ಉದ್ಯೋಗ ಕೊಟ್ಟರು. ಉದ್ಯಮ ವಿಸ್ತರಿಸಲು ಪ್ರಯತ್ನಿಸಿ ಸೋತರು. ಮಣಿಪುರ (Manipura) ಭಾಗದ ಮಕ್ಕಳಿಗೆ ವಿದ್ಯಾಭ್ಯಾಸದ ಕೊರತೆಯಿತ್ತು. ಆ ಮಕ್ಕಳಿಗೆ ಹಣವಿಲ್ಲ ಎಂಬ ಕಾರಣಕ್ಕೆ ವಿದ್ಯಾಭ್ಯಾಸ ನಿಲ್ಲಿಸಬೇಡಿ ಎಂದು ಭರವಸೆ ನೀಡಿದರು. ಆ ಮಕ್ಕಳನ್ನು ಬೈಂದೂರಿಗೆ ಕರೆತಂದು ಮಣಿಪುರ ನೂರಾರು ಮಕ್ಕಳಿಗೆ ವಿದ್ಯಾಭ್ಯಾಸ ನೀಡಿದ್ದಾರೆ.
ಅಖಿಲ ಭಾರತ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯನಾಗಿ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರ, ತೆಲಂಗಾಣ, ರಾಜ್ಯಗಳ ಜವಾಬ್ದಾರಿ ವಹಿಸಿಕೊಂಡಿದ್ದರು. ಎರಡು ಪುಸ್ತಕ ಬರೆದಿದ್ದಾರೆ. ನೂರಾರು ಆರ್‌ಎಸ್‌ಎಸ್ (RSS) ಶಾಖೆ ತೆರೆದು ಸಂಘಟನೆ ಮಾಡಿದ್ದಾರೆ. 2013 ಮತ್ತು 2018ರಲ್ಲಿಯೇ ಶಾಸಕರಾಗುವ ಆಯ್ಕೆಗಳು ಇತ್ತು. ಪಕ್ಷ ಸಂಘಟನೆಯೇ ಎಲ್ಲಕ್ಕಿಂತ ಮಿಗಿಲು ಎಂಬ ಕಾರಣಕ್ಕೆ ಬೈಂದೂರಿನ ಪ್ರತಿ ಹಳ್ಳಿ ಹಳ್ಳಿಗೂ ಸಂಚರಿಸಿ ಕಾರ್ಯಕರ್ತರನ್ನು ಗುರುತಿಸಿ, ಪ್ರಮುಖರನ್ನು ಹುರಿದುಂಬಿಸಿ ಬಿಜೆಪಿಯನ್ನು ಚಿಗುರಿಸಿದ್ದಾರೆ ಎಂದು ಗುರುರಾಜ್ ಶೆಟ್ಟಿ ಗಂಟಿಹೊಳೆ ಬಗ್ಗೆ ಆಪ್ತ ಪ್ರವೀಣ್ ಮಾಹಿತಿ ನೀಡಿದರು.