Tag: ಬೇಸ್ ಬಾಲ್

  • ಯುವತಿಯ ಬಿಯರ್ ಗ್ಲಾಸ್ ಗೆ ಬಿತ್ತು ಬೇಸ್ ಬಾಲ್ – ವಿಡಿಯೋ ವೈರಲ್

    ಯುವತಿಯ ಬಿಯರ್ ಗ್ಲಾಸ್ ಗೆ ಬಿತ್ತು ಬೇಸ್ ಬಾಲ್ – ವಿಡಿಯೋ ವೈರಲ್

    ವಾಷಿಂಗ್ಟನ್: ಆಟಗಾರ ಹೊಡೆದ ಬೇಸ್ ಬಾಲ್ ನೇರವಾಗಿ ಯುವತಿಯ ಬಿಯರ್ ಗ್ಲಾಸ್ ಬಿದ್ದಿದ್ದು, ಈಗ ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಅಟ್ಲಾಂಟಾ ನಗರದಲ್ಲಿ ಮಂಗಳವಾರ ರಾತ್ರಿ ಈ ಘಟನೆ ನಡೆದಿದ್ದು, ಪಾಡ್ರೆಸ್-ಬ್ರೇವ್ಸ್ ತಂಡಗಳ ನಡುವೆ ಬೇಸ್ ಬಾಲ್ ಆಟ ನಡೆಯುತ್ತಿತ್ತು. ಪ್ರೇಕ್ಷಕರೆಲ್ಲರೂ ನೋಡುತ್ತಾ ಕುಳಿತಿದ್ದರು. ಆಗ ಆಟಗಾರನೊಬ್ಬನ ಭರ್ಜರಿ ಹೊಡೆತಕ್ಕೆ ಕೈ ಹಾಕಿದ್ದು, ಬಾಲ್ ಆಟವನ್ನು ನೋಡುತ್ತಾ ಕುಳಿತಿದ್ದ ಪ್ರೇಕ್ಷಕರ ಮಧ್ಯೆ ಇದ್ದ ಯುವತಿಯ ಬಿಯರ್ ಗ್ಲಾಸ್ ಗೆ ನೇರವಾಗಿ ಹೋಗಿ ಬಿದ್ದಿದೆ.

    ಗ್ಲಾಸ್ ಬಿದ್ದ ತಕ್ಷಣ ಯುವತಿ ಎದ್ದು ನಿಂತು, ಬಾಲ್ ಅನ್ನು ಸುತ್ತ ಕುಳಿತಿದ್ದ ಪ್ರೇಕ್ಷಕರಿಗೆ ಸಂತಸದಿಂದ ತೋರಿಸುತ್ತಾ ನಂತರ ಎಲ್ಲರಿಗೂ ಚೀಯರ್ಸ್ ಮಾಡಿ ಬಾಲ್ ತೆಗೆಯದೇ ಬಿಯರ್ ಕುಡಿದಿದ್ದಾಳೆ. ಈ ಎಲ್ಲಾ ದೃಶ್ಯಗಳು ವಿಡಿಯೋದಲ್ಲಿ ಕಾಣಬಹುದು.

    ಆಟಗಾರ ಹೊಡೆದ ರಭಸಕ್ಕೆ ಬಾಲ್ ನನ್ನ ಹಿಂದೆ ಬರುತ್ತಿತ್ತು. ಆಗ ನಾನು ಬಾಲ್ ಹಿಡಿಯಲು ಪ್ರಯತ್ನಿಸುತ್ತಿದ್ದೆ. ಆದರೆ ಅಷ್ಟರಲ್ಲಿ ಅದು ಗ್ಲಾಸಿಗೆ ಬಂದು ಬಿತ್ತು ಎಂದು ಯುವತಿ ಹೇಳಿದ್ದಾಳೆ.

    ಸದ್ಯಕ್ಕೆ ಯುವತಿಯ ಬಿಯರ್ ಗ್ಲಾಸಿಗೆ ಬಿದ್ದ ಬಾಲ್ ಮತ್ತು ಬಾಲ್ ಸಮೇತ ಚೀಯರ್ಸ್ ಮಾಡಿ ಯುವತಿ ಬಿಯರ್ ಕುಡಿದಿರೋ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವೈರಲ್ ಆಗಿದೆ.

  • ಪ್ರೇಯಸಿಯ ತಲೆಗೂದಲು ಹಿಡಿದು ರಾಕ್ಷಸನಂತೆ ಹಲ್ಲೆ ಮಾಡಿದ ಬೇಸ್ ಬಾಲ್ ಆಟಗಾರ – ವಿಡಿಯೋ ವೈರಲ್

    ಪ್ರೇಯಸಿಯ ತಲೆಗೂದಲು ಹಿಡಿದು ರಾಕ್ಷಸನಂತೆ ಹಲ್ಲೆ ಮಾಡಿದ ಬೇಸ್ ಬಾಲ್ ಆಟಗಾರ – ವಿಡಿಯೋ ವೈರಲ್

    ವಾಷಿಂಗ್ಟನ್: ವೆನೆಜುವೆಲಾದ ಬೇಸ್ ಬಾಲ್ ಆಟಗಾರನೊಬ್ಬ ತನ್ನ ಗೆಳತಿ ಮೇಲೆ ರಾಕ್ಷಸನಂತೆ ಹಲ್ಲೆ ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಈ ಘಟನೆ 2016ರಲ್ಲಿ ನಡೆದಿದ್ದು, ಇತ್ತೀಚೆಗಷ್ಟೆ ವಿಡಿಯೋ ಬಿಡುಗಡೆ ಮಾಡಲಾಗಿದೆ. ಈಗ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ. ಅಮೆರಿಕದ ಮೈನರ್ ಲೀಗ್ ನಲ್ಲಿ ಆಡುವ ವೆನೆಜುವೆಲಾದ ಬೇಸ್ ಬಾಲ್ ಆಟಗಾರನಾದ ಡಾನ್ರಿ ವಾಸ್ಕ್ವೆಜ್ ಈ ಕೃತ್ಯವೆಸಗಿದ್ದಾನೆ. ಈ ವಿಡಿಯೋ ರಿಲೀಸ್ ಆದ ಬೆನ್ನಲ್ಲೇ ವಾಸ್ಕ್ವೆಜ್ ವಿರುದ್ಧ ಖಂಡನೆ ವ್ಯಕ್ತವಾಗಿದೆ. ಆತನನ್ನ ಲಾಂಕಾಸ್ಟರ್ ಬಾರ್ನ್‍ಸ್ಟಾರ್ಮರ್ಸ್ ತಂಡದಿಂದ ತೆಗೆದುಹಾಕಲಾಗಿದೆ.

    ಡಾನ್ರಿ ವಾಸ್ಕ್ವೆಜ್ ಮೆಟ್ಟಿಲು ಇಳಿದುಕೊಂಡು ಬರುತ್ತಿದ್ದ ಸಂದರ್ಭದಲ್ಲಿ ಪ್ರೇಯಸಿಯನ್ನು ಎಳೆದು, ಆಕೆಯ ತಲೆ ಕೂದಲು ಹಿಡಿದು ಕೆನ್ನೆಗೆ ಹೊಡೆದಿದ್ದಾನೆ. ಅಷ್ಟೇ ಅಲ್ಲದೇ ಅಲ್ಲಿ ಪ್ರೇಯಸಿಯನ್ನು ನಿಲ್ಲಿಸಿ ಮತ್ತೆ ಬಂದು ಹೊಡೆದಿದ್ದಾನೆ. ಈ ಎಲ್ಲಾ ದೃಶ್ಯಗಳು ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ.

    ಈ ಘಟನೆ ನಡೆದ ಸಂದರ್ಭದಲ್ಲಿ ವಾಸ್ಕ್ವೆಜ್, ಕಾರ್ಪಸ್ ಕ್ರಿಸ್ಟಿ ಹುಕ್ಸ್ ತಂಡದ ಪರ ಆಟ ಆಡುತ್ತಿದ್ದನು, ಕೌಟುಂಬಿಕ ಹಿಂಸೆ ಆರೋಪದ ಮೇಲೆ ಅವನನ್ನು ಬಂಧಿಸಲಾಗಿತ್ತು. ಆದರೆ ಆತ ದಂಡ ಪಾವತಿಸಿ, ಪಾಠ ತೆಗೆದುಕೊಂಡ ಬಳಿಕ ಪ್ರಕರಣ ವಜಾ ಮಾಡಲಾಗಿತ್ತು.

    ಈ ಬಗ್ಗೆ ಕ್ಲಬ್ ಹೇಳಿಕೆ ನೀಡಿದ್ದು, ಇತ್ತೀಚೆಗೆ ಬಿಡುಗಡೆ ಆಗಿರುವ ವಿಡಿಯೋದಲ್ಲಿ ವಾಸ್ಕ್ವೆಜ್ ಕೌಟುಂಬಿಕ ಹಿಂಸೆ ನೀಡಿರುವುದು ಕಂಡು ಬಂದಿದೆ. ಘಟನೆಯ ಸ್ವರೂಪ ಅರಿತು, ಆಟಗಾರನ ಜೊತೆಗಿನ ಒಪ್ಪಂದವನ್ನ ಬಾರ್ನ್‍ಸ್ಟಾರ್ಮರ್ಸ್ ಮುರಿದುಕೊಳ್ಳುತ್ತಿದೆ ಎಂದು ಹೇಳಿದೆ.

    https://www.youtube.com/watch?v=KE_KstZpgiY