Tag: ಬೇಸಿಗೆಗಾಲ

  • ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆ

    ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆ

    ಬೆಂಗಳೂರು: ಸಮುದ್ರ ಮೇಲ್ಮೈ ಸುಳಿಗಾಳಿ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಂಗಳವಾರ ಗುಡುಗು ಸಹಿತ ಮಳೆಯಾಗಿದ್ದು, ಬುಧವಾರವೂ ಮಳೆಯಾಗುವ (Rain) ಸಾಧ್ಯತೆಯಿದೆ.

    ಈಗಾಗಲೇ ರಾಜ್ಯದಲ್ಲಿ ಬೇಸಿಗೆ ಆರಂಭವಾಗಿದ್ದು, ಬಿಸಿಲಿನ ಧಗೆ ಹೆಚ್ಚುತ್ತಿರುವುದರ ನಡುವೆಯೂ ಮುಂದಿನ 5 ದಿನಗಳ ಕಾಲ ರಾಜ್ಯದಲ್ಲಿ ಸಾಧಾರಣ ಮಳೆ ಆಗುವ ಸಾಧ್ಯತೆಯಿದೆ ಎಂದು ಮಂಗಳವಾರ ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು.

    weather

    ಇದೀಗ ಉತ್ತರ ಕನ್ನಡ (Uttara Kannada) ಜಿಲ್ಲೆಯಾದ್ಯಂತ ಬುಧವಾರ ಮೋಡದ ವಾತಾವರಣ ಇದ್ದು, ಇಂದು ಮತ್ತು ನಾಳೆ ಜಿಲ್ಲೆಯಲ್ಲಿ ಮಳೆ ಸುರಿಯುವ ಸೂಚನೆಯನ್ನು ಹವಾಮಾನ (Weather) ಇಲಾಖೆ ನೀಡಿದೆ. ಕರಾವಳಿ ಭಾಗದಲ್ಲಿ ಬಿಸಿ ವಾತಾವರಣದ ನಡುವೆ ಆಕಾಶದಲ್ಲಿ ಮೋಡಗಟ್ಟಿದ ವಾತಾವರಣ ಇದೆ. ಮಂಗಳವಾರವೂ ಕೂಡ ಉತ್ತರ ಕನ್ನಡ ಜಿಲ್ಲೆಯ ಕೆಲವು ಭಾಗಗಳಲ್ಲಿ ಸಾಧಾರಣ ಮಳೆ ಆಗಿತ್ತು. ಇದನ್ನೂ ಓದಿ: ರಾಜ್ಯದಲ್ಲಿ ಮುಂದಿನ 5 ದಿನ ಸಾಧಾರಣ ಮಳೆ

    ಮಂಗಳವಾರ ದಕ್ಷಿಣ ಕನ್ನಡ, ಚಿಕ್ಕಮಗಳೂರು ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಿದೆ. ಇನ್ನೂ ಕೊಡಗು ಜಿಲ್ಲೆಯ ಸುಂಟಿಕೊಪ್ಪದ ಆಸುಪಾಸಿನಲ್ಲಿ ಮಂಗಳವಾರ ಆಲಿಕಲ್ಲು ಸಹಿತ ಮಳೆಯಾಗಿದೆ. ಇದನ್ನೂ ಓದಿ: ಕಮಲ ಹುಟ್ಟುವುದು ಕೆಸರಲ್ಲಿ, ಅರಳಿದ ಮೇಲೆ ಮುದುಡಲೇ ಬೇಕು – ಸುರೇಶ್‌ಗೌಡ

  • ರಾಜ್ಯದಲ್ಲಿ ಹೆಚ್ಚಾದ ಬಿಸಿಗಾಳಿ – ಬೇಸಿಗೆ ಗೈಡ್‌ಲೈನ್ಸ್ ಹೊರಡಿಸಿದ ಆರೋಗ್ಯ ಇಲಾಖೆ

    ರಾಜ್ಯದಲ್ಲಿ ಹೆಚ್ಚಾದ ಬಿಸಿಗಾಳಿ – ಬೇಸಿಗೆ ಗೈಡ್‌ಲೈನ್ಸ್ ಹೊರಡಿಸಿದ ಆರೋಗ್ಯ ಇಲಾಖೆ

    ಬೆಂಗಳೂರು: ರಾಜಧಾನಿ ಬೆಂಗಳೂರು (Bengaluru) ಸೇರಿದಂತೆ ರಾಜ್ಯದಾದ್ಯಂತ ಬಿಸಿಗಾಳಿ ಹೆಚ್ಚಾಗಿದ್ದು, ಬೇಸಿಗೆಕಾಲದ (Summer Season) ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ವಹಿಸಲು ಆರೋಗ್ಯ ಇಲಾಖೆ ಸೂಚನೆ ನೀಡಿದೆ.

    ಈ ಬಾರಿ ಅಧಿಕ ಉಷ್ಣಾಂಶವಿದ್ದು, ಇದರಿಂದಾಗಿ ನಾನಾ ರೀತಿಯ ಅನಾರೋಗ್ಯ ಸಮಸ್ಯೆ ಕಾಡುವ ಸಂಭವವಿದೆ. ಈ ಹಿನ್ನೆಲೆಯಲ್ಲಿ ಎಚ್ಚರಿಕೆ ವಹಿಸುಬೇಕು ಎಂದು ಹೇಳಿದೆ. ಜೊತೆಗೆ ಬೇಸಿಗೆ ಗೈಡ್‌ಲೈನ್ಸ್ ಅನ್ನು ರಾಜ್ಯ ಆರೋಗ್ಯ ಇಲಾಖೆ ಹೊರಡಿಸಿದೆ.

    ಆರೋಗ್ಯ ಇಲಾಖೆಯ ಗೈಡ್‌ಲೈನ್ಸ್‌ ಪ್ರಕಾರ, ಬಾಯಾರಿಕೆ ಇಲ್ಲದಿದ್ದರೂ ಪದೇ ಪದೇ ನೀರು ಕುಡಿಯಬೇಕು. ಪ್ರಯಾಣದ ಸಮಯದಲ್ಲೂ ನೀರು ತೆಗೆದುಕೊಂಡು ಹೋಗಬೇಕು. ಹಣ್ಣು ಮತ್ತು ತರಕಾರಿಗಳನ್ನು ಹೆಚ್ಚು ಸೇವಿಸಬೇಕು. ಕಾಟನ್ ಬಟ್ಟೆ ಧರಿಸುವುದು ಉತ್ತಮವಾಗಿದೆ. ಮಧ್ಯಾಹ್ನ 12 ರಿಂದ 3ರ ವರೆಗಿನ ಬಿಸಿಲಿಗೆ ಹೊರಗಡೆ ಓಡಾಡಬಾರದು. ಇದನ್ನೂ ಓದಿ: ಬರ್ಮುಡಾ ಧರಿಸಿ ರೇಣುಕಾಚಾರ್ಯ ಜಯಂತಿ ಆಚರಿಸಿದ ಸಿಬ್ಬಂದಿ – ಸ್ವಾಮೀಜಿ ಕಾಲಿಗೆ ಬಿದ್ದು ತಹಶೀಲ್ದಾರ್ ಕ್ಷಮೆ

    weather

    ಸಾಧ್ಯವಾದಷ್ಟು ಮನೆಯ ಕಿಟಕಿಗಳನ್ನು ಓಪನ್ ಮಾಡಿಡಿ. ಅಡುಗೆ ಕೋಣೆಗೆ ವೆಂಟಿಲೇಷನ್ ಖಚಿತಪಡಿಸಿಕೊಳ್ಳಿ. ಹೊರಗಡೆ ಕೆಲಸ ಮಾಡುವವರು ಪ್ರತಿ 20 ನಿಮಿಷಕ್ಕೊಮ್ಮೆ ಬಾಯಾರಿಕೆ ಇಲ್ಲದಿದ್ದರೂ ನೀರು ಕುಡಿಯಬೇಕು. ಮಕ್ಕಳು, ವೃದ್ಧರು, ಸಾಕು ಪ್ರಾಣಿಗಳನ್ನು ಕಾರಿನ ಒಳಗೆ ಕೂರಿಸಿ ಹೊರಗಿಂದ ಲಾಕ್ ಮಾಡಬಾರದು. ಟೀ, ಕಾಫಿ, ಮದ್ಯ ಸೇವಿಸುವುದನ್ನು ಅವಾಯ್ಡ್ ಮಾಡಿ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪ್ರೀತಿಸಿದವಳು ಮತ್ತೊಬ್ಬನೊಂದಿಗೆ ಮದುವೆಯಾಗಿ ಚೆನ್ನಾಗಿರುವುದನ್ನು ಸಹಿಸದೇ ಗೃಹಿಣಿಯ ಕೊಲೆಗೈದ ಪಾಗಲ್ ಪ್ರೇಮಿ

  • ಬೇಸಿಗೆಯಲ್ಲಿ ನಿಮ್ಮ ತ್ವಚೆ ರಕ್ಷಣೆಗೆ ಹೀಗೆ ಮಾಡಿ

    ಬೇಸಿಗೆಯಲ್ಲಿ ನಿಮ್ಮ ತ್ವಚೆ ರಕ್ಷಣೆಗೆ ಹೀಗೆ ಮಾಡಿ

    ಬೇಸಿಗೆ ಕಾಲ ಆರಂಭವಾಗುತ್ತಿದೆ. ಈಗಾಗಲೇ ರಾಜ್ಯದಲ್ಲಿ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬಿಸಿಲು ಮತ್ತು ಬೆವರು ಇವೆರಡು ತ್ವಚೆಯನ್ನು ಹಾಳು ಮಾಡುತ್ತವೆ. ಇದರ ಜೊತೆಗೆ ತ್ವಚೆಯನ್ನು ಸೂರ್ಯನ ಬೆಳಕಿನಿಂದ ಕಾಪಾಡಿಕೊಳ್ಳುವುದು ಸಹ ತುಂಬಾ ಮುಖ್ಯವಾಗಿದೆ. ಹೀಗಾಗಿ ಬಿಸಿಲಿನಲ್ಲಿ ತ್ವಚೆಯನ್ನು (Skin Care) ಆರೈಕೆಗೆ ಕೆಲವೊಂದು ಸಲಹೆಗಳನ್ನು ಅನುಸರಿಸಿ.

    ದಿನಕ್ಕೆ ಕನಿಷ್ಠ 2 ಬಾರಿ ಮುಖ ಸ್ವಚ್ಛಗೊಳಿಸಿ: ಬೇಸಿಗೆಕಾಲದಲ್ಲಿ ಬಿಸಿಲಿನಿಂದಾಗಿ ಹೆಚ್ಚಾಗಿ ಬೆವರುತ್ತೇವೆ. ಅಷ್ಟೇ ಅಲ್ಲದೇ ಚರ್ಮದಲ್ಲಿಯೂ ಹೆಚ್ಚು ಎಣ್ಣೆ ಅಂಶ ಕಾಣಿಸುತ್ತದೆ. ಇದರಿಂದಾಗಿ ದಿನಕ್ಕೆ 2 ಬಾರಿ ಮುಖವನ್ನು ಸ್ವಚ್ಛಗೊಳಿಸುವುದು ಒಳ್ಳೆಯದು. ಉಗುರು ಬೆಚ್ಚಗಿನ ನೀರಿನಿಂದ ಮುಖವನ್ನು ತೊಳೆಯುವ ಮೊದಲು ಒಂದು ನಿಮಿಷಗಳ ಕಾಲ ಮುಖದ ಮೇಲೆ ಮೃದುವಾದ ಮಸಾಜ್ ಮಾಡಿ.

    ಸನ್‍ಸ್ಕ್ರೀನ್ ಹೆಚ್ಚು ಬಳಸಿ: ಬಿಸಿಲಿನ ಕಿರಣದಿಂದಾಗಿ ಚರ್ಮವು ಸುಡುವುದಷ್ಟೇ ಅಂದ ಕೆಡುತ್ತದೆ. ಹೀಗಾಗಿ ನೀವು ಹೊರಗಡೆ ಹೋಗುವ ಮುನ್ನ ಸನ್‍ಸ್ಕ್ರೀನ್‍ಗಳನ್ನು ಬಳಸುವುದು ಅಗತ್ಯವಾಗಿದೆ. ಇದರಿಂದಾಗಿ ತಕ್ಕಮಟ್ಟಿಗೆ ನಿಮ್ಮ ಚರ್ಮದ ತ್ವಚೆಯು ಕೆಡದಂತೆ ನೋಡಿಕೊಳ್ಳಲು ಸಾಧ್ಯವಾಗುತ್ತದೆ.

    ಅಲೋವೆರಾ (Elovera): ಲೋಳೆರಸ ಬಿಸಿಲಿನಿಂದ ಸುಟ್ಟ ಗಾಯಕ್ಕೆ ಶಮನ ನೀಡುವುದಲ್ಲದೆ, ಚರ್ಮದಲ್ಲಿ ತೇವಾಂಶವನ್ನು ಧನಾತ್ಮಕವಾಗಿ ಕಾಪಾಡುತ್ತದೆ. ತಾಜಾ ಅಲೋವೆರಾ ತೆಗೆದು ಅದನ್ನು ಸಂಪೂರ್ಣವಾಗಿ ಮುಖಕ್ಕೆ ಮಸಾಜ್ ಮಾಡಿ. ಅಲೋವೆರಾ ಲೋಳೆಯನ್ನು ಐಸ್ ಟ್ರೇಗೆ ಹಾಕಿಟ್ಟು ಬಳಿಕ ಅದನ್ನು ಮುಖಕ್ಕೆ ಉಜ್ಜಿಕೊಳ್ಳಿ. ಇದನ್ನೂ ಓದಿ: ತೂಕ ಇಳಿಸಲು ತಲೆಕೆಡಿಸಿಕೊಳ್ಳಬೇಡಿ ತಿನ್ನಿ ಕಲ್ಲಂಗಡಿ ಹಣ್ಣು

    ಸೌತೆಕಾಯಿ: ಸೌತೆಕಾಯಿ (Cucumber) ಬೇಸಿಗೆಯಲ್ಲಿ ಚರ್ಮಕ್ಕೆ ಹಿತ ನೀಡುವುದಲ್ಲದೆ, ತಾಜಾ ಮತ್ತು ಹೊಳೆಯುವಂತೆ ಮಾಡುತ್ತದೆ. ದಿನನಿತ್ಯವು ಸೌತೆಕಾಯಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ. ಇದರಿಂದ ಬಿಸಿಲಿನಿಂದಾಗುವ ಕಪ್ಪು ಕಲೆಗಳು ಕಡಿಮೆಯಾಗುತ್ತದೆ. ಮುಖಕ್ಕೆ ಸೌತೆಕಾಯಿ, ಮೊಸರು ಲೇಪನವನ್ನು ಹಚ್ಚಿದರೆ ತಂಪಾಗುತ್ತದೆ. ಜೊತೆಗೆ ಹೊಳಪು ಬರುತ್ತದೆ. ಇದನ್ನೂ ಓದಿ: ಮಧುಮೇಹಿಗಳಿಗೆ ಆಹಾರದ ಹೊರತಾಗಿ ಸಕ್ಕರೆ ಮಟ್ಟ ನಿಯಂತ್ರಿಸಲು ಇಲ್ಲಿದೆ ಕೆಲವು ಸಲಹೆ

    ಮಲಗುವ ಮುನ್ನ ಚರ್ಮಕ್ಕೆ ಆರೈಕೆ ಹೀಗಿರಲಿ: ಬೇಸಿಗೆಯಲ್ಲಿ (Summer) ರಾತ್ರಿ ಸಮಯದಲ್ಲಿ ಚರ್ಮದ ಆರೈಕೆಯನ್ನು ಕಡೆಗಣಿಸುವಂತಿಲ್ಲ. ಮಲಗುವ ಮುನ್ನ ಕೊಬ್ಬರಿ ಎಣ್ಣೆ ಹಾಗೂ ನೈಟ್ ಕ್ರೀಮ್‍ಗಳನ್ನು ಬಳಸಿ. ಇದರಿಂದಾಗಿ ಚರ್ಮದದಲ್ಲಿ ಉಂಟಾದ ಡ್ಯಾಮೇಜ್‍ಗಳನ್ನು ಸರಿಪಡಿಸಬಹುದಾಗಿದೆ. ಇದನ್ನೂ ಓದಿ: ನೀವು ವೈನ್‌ ಕುಡಿಯುತ್ತೀರಾ? ವೈನ್‌ ಸೇವಿಸಿದ್ರೆ ಈ 6 ಆರೋಗ್ಯ ಪ್ರಯೋಜನ ಗ್ಯಾರಂಟಿ

  • ಹೆಚ್ಚುತ್ತಿರುವ ತಾಪಮಾನ, ಮಾರ್ಚ್‌ನಿಂದ ಮೇವರೆಗೂ ಹೈ ಅಲರ್ಟ್ 

    ಹೆಚ್ಚುತ್ತಿರುವ ತಾಪಮಾನ, ಮಾರ್ಚ್‌ನಿಂದ ಮೇವರೆಗೂ ಹೈ ಅಲರ್ಟ್ 

    ನವದೆಹಲಿ: ಮುಂಬರುವ ದಿನಗಳಲ್ಲಿ ವಾತಾವರಣದಲ್ಲಿ (Weather) ತಾಪಮಾನ ಹೆಚ್ಚುವ ಸಾಧ್ಯತೆ ಹಿನ್ನೆಲೆಯಲ್ಲಿ ಜನರು ಮಧ್ಯಾಹ್ನ 12 ರಿಂದ 3ಗಂಟೆವರೆಗೂ ಮನೆಯಿಂದ ಹೊರ ಬರುವುದನ್ನು ಕಡಿಮೆ ಮಾಡಿ. ನಿಗದಿತವಾಗಿ ನಿಂಬೆ ಹಣ್ಣಿನ ಜ್ಯೂಸ್ ಸೇರಿದಂತೆ ತಂಪು ಪಾನಿಯಗಳನ್ನು ಸೇವಿಸಲು ಕೇಂದ್ರ ಆರೋಗ್ಯ ಇಲಾಖೆ (Central Health Department) ಮನವಿ ಮಾಡಿದೆ.

    ಮಾರ್ಚ್‌ನಿಂದ ಮೇವರೆಗೂ ಬಿಸಿಗಾಳಿ ಬೀಸಲಿದ್ದು, ತಾಪಮಾನದಲ್ಲಿ ಏರಿಕೆ ಕಂಡು ಬರಲಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯದ ಬಗ್ಗೆ ಗಮನ ಹರಿಸಲು ಹಲವು ಸಲಹೆಗಳನ್ನು ಕೇಂದ್ರ ಆರೋಗ್ಯ ಇಲಾಖೆ ನೀಡಿದೆ‌. ಬಾಯಾರಿಕೆಯಾಗದಿದ್ದರೂ ನಿರಂತರವಾಗಿ ನೀರು ಕುಡಿಯಬೇಕು. ಓರಲ್ ರೀಹೈಡ್ರೇಶನ್ ಸೊಲ್ಯೂಷನ್ (ORS) ಅನ್ನು ಬಳಸುವಂತೆ ಕೇಳಿಕೊಂಡಿದೆ.

    ನೇರ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವಾಗ ತೆಳು, ಸಡಿಲವಾದ ಹತ್ತಿಯ ಉಡುಪುಗಳನ್ನು ಧರಿಸಲು ಮತ್ತು ಛತ್ರಿ, ಟೋಪಿ, ಕ್ಯಾಪ್, ಟವೆಲ್ ಮತ್ತು ಇತರ ಸಾಂಪ್ರದಾಯಿಕ ವಸ್ತುಗಳನ್ನು ಬಳಸಬೇಕು. ಹಗಲಿನಲ್ಲಿ ಸೂರ್ಯನ ಕಿರಣಗಳು ನೇರವಾಗಿ ಬೀಳುವ ಕಿಟಕಿಗಳನ್ನು ಬಂದ್ ಮಾಡಿ, ರಾತ್ರಿ ವೇಳೆಯಲ್ಲಿ ಮಾತ್ರ ತೆರೆಯುವಂತೆ ಮನವಿ ಮಾಡಿದೆ.

    weather

    ಶಿಶುಗಳು ಮತ್ತು ಚಿಕ್ಕ ಮಕ್ಕಳು, ಗರ್ಭಿಣಿಯರು, ಹೊರಾಂಗಣದಲ್ಲಿ ಕೆಲಸ ಮಾಡುವ ಜನರು, ಮಾನಸಿಕ ಅಸ್ವಸ್ಥತೆ ಹೊಂದಿರುವ ಜನರು, ದೈಹಿಕವಾಗಿ ಅಸ್ವಸ್ಥರಾಗಿರುವ ಜನರು, ವಿಶೇಷವಾಗಿ ಹೃದ್ರೋಗ ಅಥವಾ ಅಧಿಕ ರಕ್ತದೊತ್ತಡ ಹೊಂದಿರುವವರು, ತಂಪಾದ ವಾತಾವರಣದಿಂದ ಬಿಸಿ ವಾತಾವರಣಕ್ಕೆ ಬರುವ ಜನರು ಹೆಚ್ಚು ನೀರು ಸೇವಿಸಬೇಕು ಎಂದು ಸಲಹೆಯಲ್ಲಿ ಹೇಳಿದೆ. ಇದನ್ನೂ ಓದಿ: ಕಿಡ್ನಿ ಸಮಸ್ಯೆಯಿಂದ ಪ್ರಧಾನಿ ಮೋದಿ ಸಹೋದರ ಆಸ್ಪತ್ರೆಗೆ ದಾಖಲು

    weather

    ಆಲ್ಕೋಹಾಲ್, ಚಹಾ, ಕಾಫಿ ಮತ್ತು ಕಾರ್ಬೊನೇಟೆಡ್ ತಂಪು ಪಾನೀಯಗಳು ಅಥವಾ ಹೆಚ್ಚಿನ ಪ್ರಮಾಣದ ಸಕ್ಕರೆಯೊಂದಿಗೆ ಪಾನೀಯಗಳು ದೇಹದಲ್ಲಿ ನೀರಿನ ಅಂಶ ನಷ್ಟಕ್ಕೆ ಕಾರಣವಾಗಬಹುದು ಅಥವಾ ಹೊಟ್ಟೆ ನೋವಿಗೆ ಕಾರಣವಾಗಬಹುದು. ಈ ಹಿನ್ನೆಲೆಯಲ್ಲಿ ಇವುಗಳನ್ನು ಸೇವಿಸದಂತೆ ಹೆಚ್ಚಿನ ಪ್ರೋಟೀನ್ ಆಹಾರ ಮತ್ತು ಹಳಸಿದ ಆಹಾರವನ್ನು ತ್ಯಜಿಸಲು ಸೂಚಿಸಿದೆ.

    ಫೆಬ್ರವರಿಯಲ್ಲಿ ಈ ವರ್ಷ ತಾಪಮಾನದಲ್ಲಿ ಅಸಹಜ ಏರಿಕೆ ಕಂಡುಬಂದಿದೆ. ಶಿಮ್ಲಾದಲ್ಲಿ ಫೆಬ್ರವರಿಯಲ್ಲಿ ದಾಖಲಾದ ಗರಿಷ್ಠ ತಾಪಮಾನ ದಾಖಲಾಗಿದೆ. ಫೆಬ್ರವರಿ 21ರವರೆಗೆ ಗುಜರಾತ್ ಮತ್ತು ಮಹಾರಾಷ್ಟ್ರ-ಗೋವಾ ಪ್ರದೇಶದ ಕೆಲವು ಭಾಗಗಳಲ್ಲಿ ತಾಪಮಾನ ಏರಿಕೆಯಾಗಿದ್ದು, ಮುಂಬರುವ ದಿನಗಳಲ್ಲಿ ಉಳಿದ ರಾಜ್ಯಗಳಲ್ಲಿ ವಾತಾವರಣದಲ್ಲಿ ಬಿಸಿ ಹೆಚ್ಚಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ರಾಷ್ಟ್ರೀಯ ನಾಯಕರು ಎಲ್ಲಿದ್ದಾರೆ – ಈಶ್ವರಪ್ಪ ಪ್ರಶ್ನೆ

  • ಬೇಸಿಗೆ ಆರಂಭದಲ್ಲೇ ಹಣ್ಣು, ತರಕಾರಿ ಏರಿಕೆ

    ಬೇಸಿಗೆ ಆರಂಭದಲ್ಲೇ ಹಣ್ಣು, ತರಕಾರಿ ಏರಿಕೆ

    ಬೆಂಗಳೂರು : ಸಿಲಿಕಾನ್ ಸಿಟಿ ಜನರಿಗೆ ಬೇಸಿಗೆ ಧಗೆ ಒಂದ್ಕಡೆಯಾದ್ರೆ, ಹಣ್ಣು, ತರಕಾರಿಗಳ (Vegetables) ಬೆಲೆ ಗಗನಕ್ಕೇರಿ ಗ್ರಾಹಕರ ಜೇಬು ಸುಡಲಾರಂಭಿಸಿದೆ.

    ಕಳೆದೊಂದು ವಾರದಿಂದ ಬೆಂಡೆಕಾಯಿ, ಟೊಮೆಟೋ (Tometo), ಕ್ಯಾರೆಟ್ ಸೇರಿ ಹಲವು ತರಕಾರಿಗಳ ಬೆಲೆ ಏರಿಕೆಯಾಗಿದೆ. ಪೂರೈಕೆಯಲ್ಲಿ ಕೊರತೆಯಿರುವುದು ಹಾಗೂ ಕೆಲವು ಹಣ್ಣುಗಳ ಋತುಮಾನ ಮುಗಿಯುತ್ತಿರುವುದೇ ದಿಢೀರ್‌ ಬೆಲೆ ಏರಿಕೆಗೆ ಕಾರಣ ಎಂದು ಹಾಪ್ ಕಾಮ್ಸ್ ಅಧ್ಯಕ್ಷ‌ ದೇವರಾಜ್ ಹೇಳಿದರು.

    ಒಂದು ಕೆಜಿ ಟೊಮೆಟೋ ಬೆಲೆ 30 ರಿಂದ 40 ರೂಪಾಯಿ, ಒಂದು ಕೆಜಿ ಬಿನ್ಸ್ ಬೆಲೆ 40ರಿಂದ 70 ರೂಪಾಯಿ, ಒಂದು ಕೆಜಿ ಕ್ಯಾರೆಟ್ ಬೆಲೆ 20ರಿಂದ 50 ರೂಪಾಯಿ ಹಾಪ್ ಕಾಮ್ಸ್‌ನಲ್ಲಿ ಆಗಿದೆ. ಹಾಗೆಯೇ ಹಣ್ಣುಗಳಾದ ಒಂದು ಕೆಜಿ ಸೇಬು ಹಣ್ಣಿನ ಬೆಲೆ 170 ರಿಂದ 200 ರೂ, ಒಂದು ಕೆಜಿ ಬ್ಲ್ಯಾಕ್ ದ್ರಾಕ್ಷಿ 150 ರಿಂದ 220 ರೂ., ಒಂದು ಕೆಜಿ ದಾಳಿಂಬೆ 120 ರಿಂದ 190 ರೂ.ವರೆಗೆ ಏರಿಕೆಯಾಗಿದೆ. ಇದನ್ನೂ ಓದಿ: ಅನಿತಾ ಕುಮಾರಸ್ವಾಮಿ ಆತ್ಮಾವಲೋಕನ ಮಾಡಿಕೊಳ್ಳಲಿ: ಅಶ್ವಥ್ ನಾರಾಯಣ್

    ಬೇಸಿಗೆ ಆರಂಭವಾಗುತ್ತಿದ್ದಂತೆ ತರಕಾರಿ ಹಾಗೂ ಹಣ್ಣುಗಳ ಬೆಲೆ ಗಗನನಕ್ಕೇರಿದೆ. ಒಟ್ಟಿನಲ್ಲಿ ಬೇಸಿಗೆ ಆರಂಭದಲ್ಲೇ ಈ ರೇಟ್ ಆದ್ರೇ ಏಪ್ರಿಲ್-ಮೇ ವೇಳೆಗೆ ತರಕಾರಿ, ಹಣ್ಣುಗಳ ಬೆಲೆ ಹೆಚ್ಚಾಗೋ ನಿರೀಕ್ಷೆ ಇದೆ. ಇದನ್ನೂ ಓದಿ: ಹಣವಿಲ್ಲದೇ ಸ್ಥಳೀಯ ಚುನಾವಣೆಯನ್ನು ಮುಂದೂಡಿದ ಶ್ರೀಲಂಕಾ

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k