Tag: ಬೇಸರ

  • ಬಿಗ್ ಬಾಸ್ ಕಂಟೆಸ್ಟೆಂಟ್ ಬಗ್ಗೆ ಬೇಸರ ವ್ಯಕ್ತ ಪಡಿಸಿದ ದೀಪಿಕಾ ದಾಸ್

    ಬಿಗ್ ಬಾಸ್ ಕಂಟೆಸ್ಟೆಂಟ್ ಬಗ್ಗೆ ಬೇಸರ ವ್ಯಕ್ತ ಪಡಿಸಿದ ದೀಪಿಕಾ ದಾಸ್

    ರಡು ಬಾರಿ ಬಿಗ್ ಬಾಸ್ ಸ್ಪರ್ಧಿಯಾಗಿ ರಂಜಿಸಿರುವ ನಟಿ ದೀಪಿಕಾ ದಾಸ್ (Deepika Das) ಯಾಕೋ ಬಿಗ್ ಬಾಸ್ ಮೇಲೆ (Bigg Boss Kannada) ಕೋಪಿಸಿಕೊಂಡಿದ್ದಾರೆ. ಬಿಗ್ ಬಾಸ್ ಸೀಸನ್ ಹತ್ತರ ಕಂಟೆಸ್ಟೆಂಟ್ (Contestant) ಬಗ್ಗೆ ಅವರು ಗರಂ ಆಗಿದ್ದಾರೆ. ಜೊತೆಗೆ ತಮ್ಮ ಮನದಾಳದ ಅಭಿಪ್ರಾಯವನ್ನೂ ಅವರು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ.

    ಎರಡೆರಡು ಬಾರಿ ಬಿಗ್ ಬಾಸ್ ಮನೆಯೊಳಗೆ ಹೋಗಲು ಅವಕಾಶ ಸಿಗುವುದು ತುಂಬಾ ವಿರಳ. ಅಂಥದ್ದೊಂದು ಅವಕಾಶವನ್ನು ದೀಪಿಕಾ ಪಡೆದುಕೊಂಡಿದ್ದರು. ಎರಡೂ ಬಾರಿಯೂ ಅವರು ಉತ್ತಮ ಕಂಟೆಸ್ಟೆಂಟ್ ಆಗಿಯೇ ಜನಪ್ರಿಯತೆ ಪಡೆದರು. ಹಾಗಾಗಿ ಈ ಬಾರಿಯ ಕಂಟೆಸ್ಟೆಂಟ್ ಬಗ್ಗೆ ಅವರು ಕೋಪವಿದೆ. ಅಲ್ಲದೇ, ದೊಡ್ಮನೆಯ ಸದಸ್ಯರು ಆಡುತ್ತಿರುವ ಟಾಸ್ಕ್ ಬಗ್ಗೆ ಅವರಿಗೆ ಅಸಮಾಧಾನವಿದೆ. ಹಾಗಾಗಿಯೇ ಅವರು ಸೋಷಿಯಲ್ ಮೀಡಿಯಾದಲ್ಲಿ ತಮಗೆ ಅನಿಸಿದ್ದನ್ನು ಬರೆದುಕೊಂಡಿದ್ದಾರೆ.

    ಬಿಗ್ ಬಾಸ್ ಸ್ಪರ್ಧಿಗಳಿಂದ ಇಂತಹ ಹುಚ್ಚುತನ, ಸಂವೇದನಾರಹಿತ ನಡೆ ಮತ್ತು ಅಸಹಿಷ್ಣುತೆಯ ವರ್ತನೆಯನ್ನು ಸಹಿಸಿಕೊಳ್ಳಲು ಅಸಾಧ್ಯ. ನಾನು ಮಾಜಿ ಸ್ಪರ್ಧಿ ಆಗಿರುವುದರಿಂದ ಯಾರನ್ನು ದೂಷಿಸಬೇಕು ಎಂದು ಅರ್ಥವಾಗುತ್ತಿಲ್ಲ. ಬಿಗ್ ಬಾಸ್ ಅವರನ್ನು ದೂಷಿಸಬೇಕಾ? ಸ್ಪರ್ಧಿಗಳನ್ನಾ ಅಥವಾ ಈ ಕಾರ್ಯಕ್ರಮ ನೋಡುವ ಪ್ರೇಕ್ಷಕರನ್ನಾ? ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಯಾರನ್ನೂ ವೈಯಕ್ತಿಕ ಗುರಿಯಾಗಿಸೋದು ಸ್ಪರ್ಧೆ ಆಗಲ್ಲ. ನನ್ನ ಪ್ರಕಾರ ಆಟವು ಆಟದಂತೆಯೇ ಇರಬೇಕು ಎಂದು ಅವರು ಸಲಹೆ ಕೂಡ ನೀಡಿದ್ದಾರೆ.

    ನಿನ್ನೆಯ ಬೈಗುಳದ ಟಾಸ್ಕ್ ಬಗ್ಗೆ ಸಾಕಷ್ಟು ಜನರು ಅಸಮಾಧಾನ ತೋಡಿಕೊಂಡಿದ್ದಾರೆ. ಅದೊಂದು ರೀತಿಯ ಪರ್ಸನಲ್ ಅಟ್ಯಾಕ್ ಆಗಿತ್ತು ಎಂದು ದೂರಿದ್ದಾರೆ. ಸ್ನೇಹಿತ್ ಆಡಿದ ಮಾತಿಗೆ ಸ್ವತಃ ತನಿಷಾ ಕಣ್ಣೀರಿಟ್ಟಿದ್ದಾರೆ. ಕಾರ್ತಿಕ್ ಮತ್ತು ಸಂಗೀತಾಗೆ ಸ್ನೇಹಿತ್ ಮತ್ತು ನಮ್ರತಾ ಆಡಿದ ಮಾತಿಗೆ ಅನೇಕರು ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಇವುಗಳ ಬಗ್ಗೆ ಸಾಕಷ್ಟು ನೆಗೆಟಿವ್ ಕಾಮೆಂಟ್ ಕೂಡ ಬಂದಿದೆ. ಹಾಗಾಗಿ ನಟಿ ದೀಪಿಕಾ ದಾಸ್ ಕೂಡ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಈ ಕುರಿತು ಸುದೀಪ್ ಯಾವ ರೀತಿಯಲ್ಲಿ ಕಾಮೆಂಟ್ ಮಾಡುತ್ತಾರೆ ಎನ್ನುವುದನ್ನು ಕಾದನೋಡಬೇಕು.

  • ‘ಬಿಗ್ ಬಾಸ್’ ಮನೆಯಲ್ಲಿ ತುಕಾಲಿ ಸಂತುಗೆ ಬೇಸರ ಮಾಡಿದ ಇಶಾನಿ

    ‘ಬಿಗ್ ಬಾಸ್’ ಮನೆಯಲ್ಲಿ ತುಕಾಲಿ ಸಂತುಗೆ ಬೇಸರ ಮಾಡಿದ ಇಶಾನಿ

    ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ಮೊದಲ ದಿನವೇ ಕಾಮಿಡಿ ನಟ ತುಕಾಲಿ ಸಂತುಗೆ (Tukali Santu) ಬೇಸರ ಮೂಡಿಸಿದ್ದಾರೆ ರಾಪರ್ ಇಶಾನಿ (Aishani). ದೊಡ್ಮನೆಗೆ ಬಂದ ಮೊದಲ ದಿನವೇ ಸಂತುಗೆ ‘ಅಣ್ಣ’ ಎಂದು ಕರೆದು ಆಘಾತ ಮೂಡಿಸಿದ್ದಾರೆ. ನೀನು ಪದೇ ಪದೇ ಅಣ್ಣ ಎಂದು ಕರೆಯೋದು ಬೇಡ ಎಂದು ಸಂತು ಹೇಳಿದರೂ, ಇಶಾನಿ ಮಾತ್ರ ಕರೆಯುವುದನ್ನು ನಿಲ್ಲಿಸುತ್ತಿಲ್ಲ. ಈ ನಡೆ ಸಂತುಗೆ ಬೇಸರ ಮೂಡಿಸಿದೆ. ಅದನ್ನು ಅವರು ಬಹಿರಂಗವಾಗಿಯೇ ಎಲ್ಲರ ಮುಂದೂ ಹೇಳಿಕೊಂಡು ಮನೆಯಲ್ಲಿ ಓಡಾಡುತ್ತಿದ್ದಾರೆ.

    ದೊಡ್ಮನೆ ಒಳಗೆ ಕಾಲಿಡುವುದಕ್ಕೂ ಮುನ್ನ ಪತ್ನಿಯ ಜೊತೆ ವೇದಿಕೆಗೆ ಆಗಮಿಸಿದ್ದ ಸಂತು, ‘ಒಂದಷ್ಟು ದಿನ ಹೆಂಡತಿಯಿಂದ ದೂರವಿದ್ದು ಎಂಜಾಯ್ ಮಾಡ್ಕೊಂಡು ಬರ್ತೀನಿ’ ಎಂದು ತಮಾಷೆಯಾಗಿ ಹೇಳಿದ್ದರು. ಸಂತು ಪತ್ನಿ ಕೂಡ ಮತ್ತೊಂದು ರೀತಿಯಲ್ಲಿ ಜೋಕ್ ಕಟ್ ಮಾಡಿದ್ದರು. ಪತ್ನಿಯೊಂದಿಗೆ ತಮಾಷೆಯಾಗಿ ಮಾತನಾಡಿ, ಬಿಗ್ ಬಾಸ್ ಮನೆಯೊಳಗೆ ಕಾಲಿಟ್ಟವರು ಆ ಮನೆಯಲ್ಲಿ ಹುಡುಗಿಯರ ಜೊತೆ ಹೇಗಿರ್ತಾರೆ ಎನ್ನುವ ಕುತೂಹಲವಿತ್ತು. ನಿನ್ನೆಯ ಎಪಿಸೋಡ್ ನಲ್ಲಿ ಸಂತು, ಇಶಾನಿ ಕೈ ಕೈ ಹಿಡಿದುಕೊಂಡು ಮನೆ ತುಂಬಾ ಓಡಾಡುತ್ತಿದ್ದಾರೆ.

    ಹಾಗಂತ ಇಶಾನಿಯನ್ನು ಒಂದೇ ದಿನಕ್ಕೆ ಸಂತು ಇಷ್ಟಪಟ್ಟರಾ? ಇರಲಿರಕ್ಕಿಲ್ಲ.. ಅವರು ತಮಾಷೆಯಾಗಿಯೇ ಆ ರೀತಿ ಮಾತನಾಡುತ್ತಿರಬಹುದು. ಒಳ್ಳೆಯ ಭಾವನೆಯನ್ನೇ ಇಟ್ಟುಕೊಂಡು ಇಶಾನಿ ಜೊತೆ ಕೈ ಕೈ ಹಿಡಿದುಕೊಂಡು ಓಡಾಡುತ್ತಿರಬಹುದು. ಸಂತು ಹೆಂಡತಿ ಅದನ್ನು ತಮಾಷೆಯಾಗಿಯೇ ತೆಗೆದುಕೊಳ್ಳಬಹುದು. ಆದರೆ, ಇಂದಿನ ಸೀಸನ್ ನಲ್ಲಿ ಹೀಗೆಯೇ ತಮಾಷೆ ಮಾಡ್ತಾ, ಒಬ್ಬರಿಗೊಬ್ಬರು ಅಂಟಿಕೊಂಡೇ ಓಡಾಡ್ತಾ, ಆಮೇಲೆ ಏನೆಲ್ಲ ಆಟವಾಡಿದರು ಎನ್ನುವ ಉದಾಹರಣೆ ಇದೆ.

    ಕನ್ನಡದಲ್ಲಿ ಮಾತ್ರವಲ್ಲ, ಬೇರೆ ಬೇರೆ ಭಾಷೆಗಳ ಬಿಗ್ ಬಾಸ್ ನಲ್ಲೂ ಹೀಗೆಯೇ ಅಣ್ಣ-ತಂಗಿ, ಬೆಸ್ಟ್ ಫ್ರೆಂಡ್ ಅಂತೆಲ್ಲ ಹೇಳಿಕೊಂಡವರು ಬಿಗ್ ಬಾಸ್ ಮನೆಯಲ್ಲೇ ಪ್ರೀತಿಸಿ, ಆಚೆ ಬಂದ ನಂತರ ಮದುವೆಯಾದವರೂ ಇದ್ದಾರೆ. ಸಂತು ಮತ್ತು ಇಶಾನಿ ಮಧ್ಯ ಹಾಗೆ ನಡೆಯುವುದಕ್ಕೇ ಸಾಧ್ಯವೇ ಇಲ್ಲ. ಯಾಕೆಂದರೆ ಸಂತು ಮದುವೆ ಆಗಿದೆ. ಈ ವಿಷಯವು ಇಶಾನಿಗೂ ಗೊತ್ತಿದೆ. ಇಬ್ಬರೂ ತಮಾಷೆ ಮಾಡಿಕೊಂಡು ದೊಡ್ಮನೆ ದಿನಗಳನ್ನು ಎಂಜಾಯ್ ಮಾಡುತ್ತಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬ್ಯೂಟಿ ಬಗ್ಗೆ ಮತ್ತೆ ಮತ್ತೆ ಪ್ರಶ್ನೆ ಮಾಡಿದ್ದಕ್ಕೆ ಬೇಸರಿಸಿಕೊಂಡ ಹನಿ ರೋಸ್

    ಬ್ಯೂಟಿ ಬಗ್ಗೆ ಮತ್ತೆ ಮತ್ತೆ ಪ್ರಶ್ನೆ ಮಾಡಿದ್ದಕ್ಕೆ ಬೇಸರಿಸಿಕೊಂಡ ಹನಿ ರೋಸ್

    ಸೌಂದರ್ಯಕ್ಕೆ ಮತ್ತೊಂದು ಹೆಸರೇ ಹನಿ ರೋಸ್ (Honey Rose). ಇವರು ಮಾಡಿದ ಸಿನಿಮಾಗಳಿಗಿಂತ ಇವರ ಹಾಟ್ ಹಾಟ್ ಫೋಟೋಗಳು ಸಖತ್ ಸದ್ದು ಮಾಡುತ್ತವೆ. ನಡು ವಯಸ್ಸಿಗೆ ಹತ್ತಿರವಾಗಿರುವ ಹನಿ ಸೌಂದರ್ಯದ (Beauty) ಬಗ್ಗೆ ಹಲವರು ಕಾಮೆಂಟ್ ಮಾಡುತ್ತಲೇ ಇರುತ್ತಾರೆ. ಅದಕ್ಕೆ ಸ್ಪಷ್ಟನೆ ಕೊಟ್ಟರೂ ಈ ಪ್ರಶ್ನೆಗಳು ಮಾತ್ರ ನಿಲ್ಲದೇ ಇರುವುದಕ್ಕೆ ಹನಿಗೆ ಬೇಸರವಿದೆಯಂತೆ.

    ಮಾನಸ್ಟರ್, ಬಿಗ್ ಬ್ರದರ್, ವೀರ ಸಿಂಹ ರೆಡ್ಡಿ (Veera Simha Reddy) ಸಿನಿಮಾಗಳಲ್ಲಿ ನಾಯಕಿಯಾಗಿ ಹನಿ ರೋಸ್ ನಟಿಸಿದ್ದಾರೆ. ಮೋಹನ್ ಲಾಲ್, ಬಾಲಯ್ಯ (Balayya) ಅವರಂತಹ ದಿಗ್ಗಜ ನಟರಿಗೆ ನಾಯಕಿಯಾಗಿ ಮೋಡಿ ಮಾಡಿದ್ದಾರೆ. ನೋಡಲು ಫಿಟ್ ಮತ್ತು ಮುದ್ದಾಗಿರೋ ಹನಿ ರೋಸ್ ಅವರು ಶಸ್ತ್ರಚಿಕಿತ್ಸೆ ಮಾಡಿಸಿದ್ದಾರೆ. ಅದಕ್ಕೆ ಅವರು ಇಷ್ಟು ಮುದ್ದಾಗಿ ಕಾಣ್ತಿದ್ದಾರೆ ಅಂತೆಲ್ಲಾ ಸುದ್ದಿ ಹರಿದಾಡುತ್ತಲೇ ಇರುತ್ತದೆ. ಈಗಾಗಲೇ ಅದಕ್ಕೆ ಸ್ಪಷ್ಟನೆ ಕೊಟ್ಟಿದ್ದರೂ, ಮತ್ತೆ ಇದೀಗ  ಇನ್ನೊಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ:‘ಬಾಹುಬಲಿ’ ಪ್ರಭಾಸ್ ಫೇಸ್‌ಬುಕ್ ಅಕೌಂಟ್ ಹ್ಯಾಕ್

    ಸೋಷಿಯಲ್ ಮೀಡಿಯಾದಲ್ಲಿ ಅವರ ಬೋಲ್ಡ್ ಫೋಟೋಗಾಗಿಯೇ ಕಾಯುವ ಫ್ಯಾನ್ಸ್ ಇದ್ದಾರೆ. ಹನಿ ರೋಸ್ ಕಾಸ್ಮೆಟಿಕ್ ಸರ್ಜರಿ ಮಾಡಿಸಿಕೊಂಡಿದ್ದು, ಇದೇ ಅವರ ಸೀಕ್ರೆಟ್ ಎಂದು ಅನೇಕರು ಆರೋಪಿಸಿದ್ರು. ಈಗ ನಟಿ ತಾನು ಯಾವುದೇ ಶಸ್ತ್ರಚಿಕಿತ್ಸೆಗೆ ಒಳಗಾಗಿಲ್ಲ ಎಂದು ಮತ್ತೆ ಸ್ಪಷ್ಟಪಡಿಸಿದ್ದಾರೆ. ನನಗೆ ದೇವರು ಈ ಅಂದ ಕೊಟ್ಟಿದ್ದು ಬಿಟ್ರೆ ಬೇರೇನೂ ಇಲ್ಲ ಎಂದಿದ್ದಾರೆ. ನಾನು ಯಾವುದೇ ಸರ್ಜರಿ ಮಾಡಿಸಿಕೊಂಡು ಸೌಂದರ್ಯ ಹೆಚ್ಚಿಸಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೂ, ಪ್ರಶ್ನೆಗಳು ನಿಲ್ಲದೇ ಇರುವುದಕ್ಕೆ ಬೇಸರಿಸಿಕೊಂಡಿದ್ದಾರೆ.

     

    ಸದ್ಯ ‘ರಾಚೆಲ್’ (Rachel) ಎಂಬ ಮಹಿಳಾ ಪ್ರಧಾನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಭಿನ್ನವಾಗಿರುವ ಪಾತ್ರದ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ. ನಟಿ ಫಸ್ಟ್ ಲುಕ್ ಕೂಡ ಅಭಿಮಾನಿಗಳ ಗಮನ ಸೆಳೆದಿದೆ. ಕನ್ನಡ, ಮಲಯಾಳಂ ಸೇರಿದಂತೆ ಬಹುಭಾಷೆಗಳಲ್ಲಿ ರಾಚೆಲ್ ಸಿನಿಮಾ ಮೂಡಿ ಬರಲಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬ್ಲೈಂಡ್ ಸಿನಿಮಾ ನೇರವಾಗಿ ಓಟಿಟಿಯಲ್ಲಿ : ಬೇಸರಿಸಿಕೊಂಡ ಸೋನಂ ಕಪೂರ್

    ಬ್ಲೈಂಡ್ ಸಿನಿಮಾ ನೇರವಾಗಿ ಓಟಿಟಿಯಲ್ಲಿ : ಬೇಸರಿಸಿಕೊಂಡ ಸೋನಂ ಕಪೂರ್

    ಬಾಲಿವುಡ್ (Bollywood) ನಟಿ ಸೋನಂ ಕಪೂರ್ ತಮ್ಮ ಚಿತ್ರದ ನಿರ್ಮಾಪಕರ ಮೇಲೆ ಬೇಸರಿಸಿಕೊಂಡಿದ್ದಾರೆ. ತಾವು ಅತೀ ನಿರೀಕ್ಷೆ ಮಾಡುತ್ತಿದ್ದ ‘ಬ್ಲೈಂಡ್’ (Blind) ಸಿನಿಮಾವನ್ನು ನಿರ್ಮಾಪಕರು ಏಕಾಏಕಿ ಓಟಿಟಿಯಲ್ಲಿ (OTT)  ನೇರವಾಗಿ ಬಿಡುಗಡೆ ಮಾಡುತ್ತಿದ್ದಾರೆ. ಇದರಿಂದಾಗಿ ಸಹಜವಾಗಿಯೇ ನಟಿಗೆ ಬೇಸರವಾಗಿದೆ. ಚಿತ್ರಮಂದಿರಗಳಲ್ಲಿ ನೋಡಬೇಕಾದ ಸಿನಿಮಾವನ್ನು ಓಟಿಟಿಯಲ್ಲಿ ರಿಲೀಸ್ ಮಾಡುವುದು ಎಷ್ಟು ಸರಿ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

    ಮದುವೆ ಮತ್ತು ಮಗುವಾದ ನಂತರ ಸೋನಂ ಕಪೂರ್ (Sonam Kapoor) ಸಿಕ್ಕ ಸಿಕ್ಕ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಭರವಸೆ ಮೂಡಿಸಬಲ್ಲ ಚಿತ್ರಗಳನ್ನು ಮಾತ್ರ ಅವರು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಆ ಚಿತ್ರಗಳು ಮೊದಲು ಥಿಯೇಟರ್ ನಲ್ಲಿ ಬರಲಿ, ಆನಂತರ ಓಟಿಟಿಯಲ್ಲಿ ಪ್ರಸಾರ ಕಾಣಲಿ ಎನ್ನುವುದು ಅವರ ಆಸೆ. ಆದರೆ, ಬ್ಲೈಂಡ್ ಸಿನಿಮಾದ ನಿರ್ಮಾಪಕರು ಆ ಆಸೆಗೆ ತಣ್ಣೀರು ಎರೆಚಿದ್ದಾರೆ ಎನ್ನುವುದು ಅವರ ನೋವು. ಇದನ್ನೂ ಓದಿ:Bigg Boss OTT 2: ದೊಡ್ಮನೆಯಿಂದ ನವಾಜುದ್ದೀನ್ ಸಿದ್ಧಿಕಿ ಪತ್ನಿ ಆಲಿಯಾ ಔಟ್

    ಮದುವೆ ಮತ್ತು ಮಗುವಾದ ನಂತರ ನಾಲ್ಕು ವರ್ಷಗಳಿಂದ ಸೋನಂ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. ನಾಲ್ಕು ವರ್ಷಗಳ ನಂತರ ಬರುತ್ತಿರುವ ಸಿನಿಮಾವಿದು. ದೊಡ್ಡ ಮಟ್ಟದಲ್ಲೇ ಈ ಸಿನಿಮಾವನ್ನು ರಿಲೀಸ್ ಮಾಡುತ್ತಾರೆ ಎಂದು ನಂಬಿಕೊಂಡಿದ್ದೆ. ಓಟಿಟಿಯಲ್ಲಿ ಬರುತ್ತಿರುವ ವಿಚಾರವನ್ನೂ ನಿರ್ಮಾಪಕರು ನನ್ನ ಬಳಿ ಹೇಳಲಿಲ್ಲ ಎಂದು ಸೋನಂ ಅವರ ಆಪ್ತರ ಬಳಿ ನೋವನ್ನು ಹಂಚಿಕೊಂಡಿದ್ದಾರೆ.

     

    ಹಾಗಂತ ಬ್ಲೈಂಡ್ ನೇರ ಸಿನಿಮಾ ಏನೂ ಅಲ್ಲ. 2011ರಲ್ಲಿ ಬಿಡುಗಡೆಯಾದ ಕೊರಿಯನ್ (Korean) ಭಾಷೆಯ ಬ್ಲೈಂಡ್ ಚಿತ್ರದ ರಿಮೇಕ್. ಹಾಗಾಗಿಯೇ ನಿರ್ಮಾಪಕರು ಇಂಥದ್ದೊಂದು ಆಲೋಚನೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಈ ನಡೆ ಸೋನಂಗೆ ಮತ್ತು ಅವರ ಅಭಿಮಾನಿಗಳಿಗೆ ಬೇಸರ ತರಿಸಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಯುವಕರಿಗೆ ಪಬ್, ಬಾರ್ ನಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡ್ಬೇಕಾ? : ಅನಂತ್ ಬೇಸರ

    ಯುವಕರಿಗೆ ಪಬ್, ಬಾರ್ ನಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡ್ಬೇಕಾ? : ಅನಂತ್ ಬೇಸರ

    ಳೆದ ಸಲಕ್ಕೆ ಹೋಲಿಸಿದರೆ ಈ ಬಾರಿಯ ವಿಧಾನಸಭೆ (Assembly) ಚುನಾವಣೆಯ ಮತದಾನದ (Voting) ಪ್ರಮಾಣ ಹೆಚ್ಚಳವಾಗುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ. ಆದರೂ, ಯುವ ಜನಾಂಗ ಮತದಾನ ಕೇಂದ್ರದತ್ತ ಸುಳಿಯದೇ ಇರುವುದು ಕೆಲವರ ಆಕ್ರೋಶಕ್ಕೆ ಕಾರಣವಾಗಿದೆ. ಬೆಂಗಳೂರಿನ ಯುವಜನತೆ ಬೂತ್ ನತ್ತ ಮುಖಮಾಡಿಲ್ಲವೆಂದು ಬೆಳಗ್ಗೆಯೇ ನಟಿ ಮೇಘನಾ ರಾಜ್ ಬೇಸರ ವ್ಯಕ್ತಪಡಿಸಿದ್ದರು. ಈ ಮಾತಿನ ಬೆನ್ನಲ್ಲೇ ಹಿರಿಯ ನಟ ಅನಂತ್ ನಾಗ್ (Anant Nag) ಕೂಡ ಇದೇ ಮಾತುಗಳನ್ನು ಆಡಿದ್ದಾರೆ.

    ಆರ್.ಎಂ.ವಿ ಸೆಕೆಂಡ್ ಸ್ಟೇಜ್ ನಲ್ಲಿ ಮತದಾನ ಮಾಡಿ, ಮಾಧ್ಯಮಗಳೊಂದಿಗೆ ಮಾತನಾಡಿದ ಅನಂತ್ ನಾಗ್, ‘ಮತದಾರರು ಮತದಾನ (Election) ಮಾಡುವುದಕ್ಕೆ ನಿರಾಸಕ್ತಿ ತೋರಿಸುತ್ತಿದ್ದಾರೆ. ಇದು ಸರಿಯಾದದ್ದು ಅಲ್ಲ. ಅದರಲ್ಲೂ ಯುವಕ ಯುವತಿಯರು ಹೆಚ್ಚೆಚ್ಚು ಬರಬೇಕಿತ್ತು. ಅವರೂ ಕಾಣುತ್ತಿಲ್ಲ. ಹಿರಿಯ ನಾಗರೀಕರಿಗೆ ಮನೆಯಲ್ಲೇ ಮತದಾನದ ವ್ಯವಸ್ಥೆ ಮಾಡಿದಂತೆ ಅವರಿಗೆ ಮಾಡಬೇಕಿತ್ತೇನೋ’ ಎಂದು ಬೇಸರ ವ್ಯಕ್ತ ಪಡಿಸಿದರು ಅನಂತ್ ನಾಗ್. ಇದನ್ನೂ ಓದಿ:ರಾಣಾ ದಗ್ಗುಭಾಟಿ ಪತ್ನಿ ಪ್ರೆಗ್ನೆಂಟ್? ಮಿಹಿಕಾ ಬಜಾಜ್ ಪ್ರತಿಕ್ರಿಯೆ

    ಮುಂದುವರೆದು ಮಾತನಾಡಿದ ಅನಂತ್ ನಾಗ್, ‘ಬಹುಶಃ ಯುವಕ ಯುವತಿಯರಿಗೆ ಮತದಾನದ ಬೂತ್ ಅನ್ನು ಪಬ್ ಒಳಗೋ, ಬಾರ್ ಒಳಗೋ ಮಾಡಬೇಕಿತ್ತು ಅನಿಸತ್ತೆ. ಪವಿತ್ರಾ ಕಾರ್ಯಕ್ಕೆ ಯಾಕಿಷ್ಟು ಅಸಡ್ಡೆ’ ಎಂದು ಅನಂತ್ ನಾಗ್ ಕಿಡಿಕಾರಿದರು. ಮತದಾನದ ಪ್ರಮಾಣ ಹೆಚ್ಚಾಗಬೇಕು ಎಂದು ಅವರ ಇದೇ ಸಂದರ್ಭದಲ್ಲಿ ಮನವಿ ಮಾಡಿಕೊಂಡರು.

  • ಬೆಂಗಳೂರಿಗರೇ ವೋಟು ಮಾಡಿ: ಬೇಸರ ಹೊರಹಾಕಿದ ನಟಿ ಮೇಘನಾ

    ಬೆಂಗಳೂರಿಗರೇ ವೋಟು ಮಾಡಿ: ಬೇಸರ ಹೊರಹಾಕಿದ ನಟಿ ಮೇಘನಾ

    ಬೆಂಗಳೂರಿನ (Bangalore) ಜೆಪಿ ನಗರದ ಮತದಾನ (Voting) ಕೇಂದ್ರಕ್ಕೆ ನಾನು ಮತ್ತು ನನ್ನ ತಂದೆ ಬಂದಾಗ ನಮ್ಮ ಕುಟುಂಬ ಬಿಟ್ಟು ಬೇರೆ ಯಾರೂ ಇರಲಿಲ್ಲ. ನಿಜಕ್ಕೂ ನನಗೆ ಶಾಕ್ ಆಯಿತು. ಮತದಾನ ಮಾಡುವಂತೆ ಏನೆಲ್ಲ ಮನವಿ ಮಾಡಿಕೊಂಡಿದ್ದಾರೆ. ಚುನಾವಣೆ ಆಯೋಗ ಸಾಕಷ್ಟು ಶ್ರಮ ಪಟ್ಟಿದೆ. ಆದರೆ, ಯುವಜನರಿಂದ ಮತದಾನಕ್ಕೆ ನೀರಸ ಪ್ರತಿಕ್ರಿಯೆ ಸಿಕ್ಕಿರುವುದು ನನಗಂತೂ ತುಂಬಾ ಬೇಸರವಾಗಿದೆ ಎಂದು ನಟಿ ಮೇಘನಾ ರಾಜ್ ಸರ್ಜಾ (Meghna Raj) ಹೇಳಿದರು.

    ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಯುವಜನರ ನೀರಸ ಪ್ರತಿಕ್ರಿಯೆ ಬೇಸರ ತಂದಿದೆ. ಅಲ್ಲದೇ, ಸೋಷಿಯಲ್ ಮೀಡಿಯಾದಲ್ಲಿ ಕ್ಯಾಂಪೇನ್ ಮಾಮಾಡ್ತಾರೆ. ಬೆಂಗಳೂರಿಗೆ ಸಮಸ್ಯೆಯಾದಾಗ ಸೋಷಿಯಲ್ ಮೀಡಿಯಾದಲ್ಲಿ ಸೌಂಡ್ ಆಗುತ್ತೆ. ಆದರೆ, ರಿಯಾಲಿಟಿಯಲ್ಲಿ ಮತದಾನ ಮಾಡೋಕೆ ಮಾತ್ರ ಹಿಂದೇಟು ಯಾಕೆ?’ ಎಂದು ಅವರು ಪ್ರಶ್ನೆ ಮಾಡಿದರು. ಇದನ್ನೂ ಓದಿ:ನಾನ್ ವೆಜ್ ತಿನ್ನಲ್ಲ ಅಂತಾ ಹೇಳಿ ತಗ್ಲಾಕೊಂಡ ರಶ್ಮಿಕಾ ಮಂದಣ್ಣಗೆ ನೆಟ್ಟಿಗರಿಂದ ತರಾಟೆ

    ಹುರುಪಿನಿಂದಲೇ ನಾನು ಮತ್ತು ನನ್ನ ಕುಟುಂಬ ಮತದಾನ ಮಾಡುವುದಕ್ಕೆ ಬಂದೆವು. ಬೂತ್ ಗೆ ಬಂದಾಗ ನಮ್ಮ ಕುಟುಂಬ ಬಿಟ್ಟು ಬೇರೆ ಯಾರು ಇರಲಿಲ್ಲ. ಮತದಾನ ನಡೆಯುತ್ತಿದೆಯಾ ಅಥವಾ ಇಲ್ಲವಾ ಎಂದು ನಮಗೆ ಗೊಂದಲವಾಗುವಂತೆ ಜನರು ಇದ್ದರು. ಹೀಗೆ ಆಗಬಾರದು. ಕಡ್ಡಾಯವಾಗಿ ಎಲ್ಲರೂ ಮತದಾನ ಮಾಡಬೇಕು ಎಂದು ಮೇಘನಾ ಹಾಗೂ ತಂದೆ ಸುಂದರ್ ರಾಜ್ ಬೇಸರ ವ್ಯಕ್ತಪಡಿಸಿದರು.

  • ದಿವ್ಯಾ ಉರುಡುಗ ಮೇಲೆ ಹಲವು ಅನುಮಾನ ವ್ಯಕ್ತ ಪಡಿಸಿದ ಆರ್ಯವರ್ಧನ್ ಗುರೂಜಿ

    ದಿವ್ಯಾ ಉರುಡುಗ ಮೇಲೆ ಹಲವು ಅನುಮಾನ ವ್ಯಕ್ತ ಪಡಿಸಿದ ಆರ್ಯವರ್ಧನ್ ಗುರೂಜಿ

    ಬಿಗ್ ಬಾಸ್ ಮನೆಯಲ್ಲಿ ಚೆನ್ನಾಗಿಯೇ ಆಟವಾಡಿ, ಇನ್ನೇನು ಫಿನಾಲೆ ವೇದಿಕೆಯ ಮೇಲೆ ಆರ್ಯವರ್ಧನ್ ಗುರೂಜಿ ಕಾಣಿಸಿಕೊಳ್ಳುತ್ತಾರೆ ಎನ್ನುತ್ತಿರುವಾಗಲೇ ಮಿಡ್ ನೈಟ್ ಎಲಿಮಿನೇಷನ್ ನಲ್ಲಿ ರಾತ್ರೋರಾತ್ರಿ ಮನೆಗೆ ಬಂದರು. ಎಲ್ಲರೊಂದಿಗೆ ಬೆರೆತು, ಚೆನ್ನಾಗಿಯೇ ಆಟವಾಡಿ, ಮನರಂಜನೆ ಕೊಟ್ಟು, ಮೆಚ್ಚುಗೆಗೆ ಪಾತ್ರರಾದರೂ, ತಮಗೆ ಮಾತ್ರ ಯಾಕೆ ಈ ಎಲಿಮಿನೇಟ್ ಶಿಕ್ಷೆ ಎಂದು ಬಹಿರಂಗವಾಗಿಯೇ ಅವರು ಕೇಳಿದ್ದಾರೆ. ಜೊತೆಗೆ ದಿವ್ಯಾ ಉರುಡುಗ ಮೇಲೆ ಸಾಕಷ್ಟು ಅನುಮಾನ ವ್ಯಕ್ತ ಪಡಿಸಿದ್ದಾರೆ.

    ದಿವ್ಯಾ ಉರುಡುಗ ಜೊತೆ ತಮ್ಮನ್ನು ಕಂಪೇರ್ ಮಾಡಿಕೊಂಡಿರುವ ಗುರೂಜಿ, ಆ ಹುಡುಗಿಗಿಂತಲೂ ನಾನು ಚೆನ್ನಾಗಿ ಆಡಿದ್ದೇನೆ. ಕಿಚ್ಚನಿಂದ ಚಪ್ಪಾಳೆ, ಮೆಚ್ಚುಗೆ ತಗೆದುಕೊಂಡಿದ್ದಾರೆ. ದಿವ್ಯಾಗೆ ಯಾವತ್ತೂ ಚೆಪ್ಪಾಳೆ ಸಿಕ್ಕಿಲ್ಲ. ಆದರೂ, ಅವರು ಫಿನಾಲೆಗೆ ಹೋದರು ಎಂದು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಈ ಹಿಂದೆಯೂ ಇಂಥದ್ದೊಂದು ಅಸಮಾಧಾನವನ್ನು ಸುದೀಪ್ ಮುಂದೆಯೇ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಅದೃಷ್ಟದಿಂದಲೇ ಇಷ್ಟು ದಿನ ಬಿಗ್ ಬಾಸ್‌ನಲ್ಲಿದ್ದರು: ದಿವ್ಯಾಗೆ ಸಂಬರ್ಗಿ ಟಾಂಗ್

    ಆರ್ಯವರ್ಧನ್ ಗುರೂಜಿ ಈ ಬಾರಿ ಫಿನಾಲೆ ವೇದಿಕೆಯ ಮೇಲೆ ಇರಲಿದ್ದಾರೆ ಎಂದು ಬಹುತೇಕರು ನಂಬಿದ್ದರು. ಹಾಗಾಗಿ ಹಲವು ವಾರಗಳ ಕಾಲ ಗುರೂಜಿಯನ್ನು ಅಭಿಮಾನಿಗಳು ಉಳಿಸಿಕೊಂಡೇ ಬಂದರು. ಹಲವು ಬಾರಿ ನಾಮಿನೇಟ್ ಆಗಿದ್ದರೂ, ಎಲಿಮಿನೇಷನ್ ಕತ್ತಿಯಿಂದ ಬಚಾವ್ ಆಗುತ್ತಲೇ ಬಂದರು. ಹೀಗಾಗಿ ಈ ಸೀಸನ್ ನಲ್ಲಿ ಗುರೂಜಿ ಫಿನಾಲೆ ವೇದಿಕೆಯ ಮೇಲೆ ಮತ್ತಷ್ಟು ಮನರಂಜನೆ ನೀಡುತ್ತಾರೆ ಎಂದು ನಂಬಲಾಗಿತ್ತು. ಆದರೆ, ನಡುರಾತ್ರಿಯ ಎಲಿಮಿನೇಷನ್ ಅದಕ್ಕೆ ಅವಕಾಶ ಕೊಡಲಿಲ್ಲ.

    ಇದರಿಂದಾಗಿ ಗುರೂಜಿ ಬೇರೆ ಸ್ಪರ್ಧಿಗಳ ಜೊತೆ ತಮ್ಮನ್ನು ಕಂಪೇರ್ ಮಾಡಿಕೊಂಡು, ನಾನು ಹಾಗೆ ಇದ್ದೆ, ಅವರು ಹೀಗಿದ್ದರು ಎಂದು ತಮ್ಮ ನೋವುಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಗುರೂಜಿಯ ಈ ನಡೆ ಸ್ವತಃ ದಿವ್ಯಾ ಅವರಿಗೆ ಬೇಸರ ತರಿಸಿದೆ. ಫಿನಾಲೆ ವೇದಿಕೆಯ ಮೇಲೆಯೇ ದಿವ್ಯಾ ಅವರು ಗುರೂಜಿಯ ಬಗ್ಗೆ ಬೇಸರದಿಂದಲೇ ಮಾತನಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಇನ್ಸ್ಟಾಗ್ರಾಂ ವಿರುದ್ಧ ಗರಂ ಆದ ಕಂಗನಾ ರಣಾವತ್: ಇನ್ಸ್ಟಾ ವೇಸ್ಟ್ ಅಂದ ನಟಿ

    ಇನ್ಸ್ಟಾಗ್ರಾಂ ವಿರುದ್ಧ ಗರಂ ಆದ ಕಂಗನಾ ರಣಾವತ್: ಇನ್ಸ್ಟಾ ವೇಸ್ಟ್ ಅಂದ ನಟಿ

    ಸಾಮಾಜಿಕ ಜಾಲತಾಣಗಳ ಬಗ್ಗೆ ಆಗಾಗ್ಗೆ ಕಿಡಿಕಾರುತ್ತಲೇ ಇರುತ್ತಾರೆ ಬಾಲಿವುಡ್ ನಟಿ ಕಂಗನಾ ರಣಾವತ್. ಮನಸ್ಸಿಗೆ ಬಂದಿದ್ದನ್ನು ಹಾಕುತ್ತಾ, ವಿವಾದಿತ ಪೋಸ್ಟ್ ಗಳನ್ನು ಮಾಡುತ್ತಾ ಒಂದಿಲ್ಲೊಂದು ಎಡವಟ್ಟು ಮಾಡಿಕೊಳ್ಳುವ ಕಂಗನಾ,  ಈ ಬಾರಿ ಇನ್ಸ್ಟಾಗ್ರಾಂ ವಿರುದ್ಧ ತಿರುಗಿ ಬಿದ್ದಿದ್ದಾರೆ. ಅದನ್ನೂ ಇನ್ಸ್ಟಾದಲ್ಲೇ ಬರೆದು ಅಚ್ಚರಿ ಮೂಡಿಸಿದ್ದಾರೆ.

    ಇನ್ಸ್ಟಾದಿಂದ ಸಾಕಷ್ಟು ತಾರೆಯರು ದುಡ್ಡು ಮಾಡಿಕೊಳ್ಳುತ್ತಿದ್ದಾರೆ. ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಸಾಕಷ್ಟು ಜನರಿಗೆ ಇದು ವರವಾಗಿದೆ. ಆದರೆ, ಈ ಜಾಲತಾಣವನ್ನೇ ಕಂಗನಾ ವೇಸ್ಟ್ ಎಂದು ಕರೆದಿದ್ದಾರೆ. ಇದೊಂದು ಕೆಲಸಕ್ಕೆ ಬಾರದ ಜಾಲತಾಣವೆಂದು ಮೂದಲಿಸಿದ್ದಾರೆ. ಇಲ್ಲಿ ಹೊತ್ತು ಕಳೆಯುವುದನ್ನು ಬಿಟ್ಟು ಮೈಮುರಿದು ಕೆಲಸ ಮಾಡಿ ಎಂದು ಪುಕ್ಕಟೆ ಸಲಹೆಯನ್ನೂ ಅವರು ನೀಡಿದ್ದಾರೆ. ಇದನ್ನೂ ಓದಿ:ನನ್ನ ಮೊಮ್ಮಗ ಸೂಪರ್ ಸ್ಟಾರ್ ಆಗ್ತಾನೆ ಎಂದು ಭವಿಷ್ಯ ನುಡಿದ ಸುಂದರ್ ರಾಜ್

    ಈ ಹಿಂದೆ ಟ್ವಿಟರ್ ಬಗ್ಗೆಯೂ ಕಂಗನಾ ಮಾತನಾಡಿದ್ದರು. ವಿವಾದಿತ ಪೋಸ್ಟ್ ಗಳನ್ನು ಹಾಕಿದ ಕಾರಣಕ್ಕಾಗಿ ಅವರನ್ನು ಟ್ವಿಟರ್ ನಿಂದ ಬ್ಯಾನ್ ಮಾಡಲಾಗಿತ್ತು. ಆ ನಂತರ ಟ್ವಿಟರ್ ಬಗ್ಗೆ ಸಾಕಷ್ಟು ಕಾಮೆಂಟ್ ಗಳನ್ನು ಅವರು ಮಾಡಿದ್ದರು. ಇದೀಗ ಇನ್ಸ್ಟಾ ಮೇಲೆ ಗೂಬೆ ಕೂರಿಸಿದ್ದಾರೆ. ಅದಕ್ಕೆ ಕಾರಣ ಬೇರೆಯೇ ಇದೆ ಎನ್ನುತ್ತಾ ಹಲವರು. ಟ್ವಿಟರ್ ಖರೀದಿಸಿರುವ ಎಲನ್ ಮಸ್ಕ್ ಅನ್ನು ಮೆಚ್ಚಿಸುವುದಕ್ಕಾಗಿ ಇಂಥದ್ದೊಂದು ಪೋಸ್ಟ್ ಮಾಡಿದ್ದಾರೆ ಎನ್ನಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಮನೆಗಾಗಿ ಭಿಕ್ಷೆ ಬೇಡುತ್ತಿಲ್ಲ, ಇಂದು ಕೊನೆಯ ಪತ್ರ ಬರೆಯುವೆ- ಸರ್ಕಾರದ ವಿರುದ್ಧ ಹೊರಟ್ಟಿ ಬೇಸರ

    ಮನೆಗಾಗಿ ಭಿಕ್ಷೆ ಬೇಡುತ್ತಿಲ್ಲ, ಇಂದು ಕೊನೆಯ ಪತ್ರ ಬರೆಯುವೆ- ಸರ್ಕಾರದ ವಿರುದ್ಧ ಹೊರಟ್ಟಿ ಬೇಸರ

    ಹುಬ್ಬಳ್ಳಿ: ಮನೆ ಕೊಡುವಂತೆ ನಾನು ಭಿಕ್ಷೆ ಬೇಡುತ್ತಿಲ್ಲ. ಮನೆ ಕೊಟ್ಟರೆ ಕೊಡಲಿ, ಬಿಟ್ಟರೆ ಬಿಡಲಿ. ನಾನು ಇನ್ನು ಮುಂದೆ ಮನೆ ಕೇಳುವುದಿಲ್ಲ. ಇಂದು ಮತ್ತೆ ಸರ್ಕಾರಕ್ಕೆ ಪತ್ರ ಬರೆಯುವೆ. ಇದು ನನ್ನ ಕೊನೇಯ ಪತ್ರ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

    ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮತದಾನ ಮಾಡಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಮನೆ ನೀಡುವ ವಿಚಾರವಾಗಿ ಸರ್ಕಾರ ವಿಳಂಬ ಮಾಡುತ್ತಿರುವುದರ ವಿರುದ್ಧ ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಸೆ.30ರವರೆಗೆ ಭಾರತದಲ್ಲಿರುವ ವಿದೇಶಿಗರ ವೀಸಾ ವಿಸ್ತರಣೆ

    ಶಾಲೆಗಳ ಆರಂಭದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, 1 ರಿಂದ 6 ನೇ ತರಗತಿಯ ಶಾಲೆಗಳನ್ನು ಆರಂಭ ಮಾಡಬೇಕು. ಶಾಲೆ ಆರಂಭ ಮಾಡುವ ಅವಶ್ಯಕತೆ ಇದೆ. ನಾನು ಈ ಹಿಂದೆಯೇ ಶಾಲೆ ಆರಂಭ ಮಾಡಬೇಕು ಎಂದು ಸಲಹೆ ನೀಡಿದ್ದೆ ಎಂದರು.

    ಮೌಲ್ಯಧಾರಿತ ರಾಜಕಾರಣ ಕುಸಿಯುತ್ತಿದೆ. ಗೆದ್ದ ಅಭ್ಯರ್ಥಿಗಳು ಸ್ವಾರ್ಥ ಬಿಟ್ಟು ಅಭಿವೃದ್ಧಿಯತ್ತ ಗಮನ ಹರಿಸಬೇಕು. ಜನಪರವಾದ ಕೆಲಸ ಎಲ್ಲಿಯವರೆಗೆ ಮಾಡುವುದಿಲ್ಲವೋ ಅಲ್ಲಿಯವರೆಗೂ ಇದು ಹೀಗೆ ನಡೆಯುತ್ತೆ. ಆಯ್ಕೆಯಾದವರು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ನಮ್ಮದು ಪ್ರಜಾಪ್ರಭುತ್ವ ದೇಶ, ಎಲ್ಲರೂ ಜನಪರ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

  • ಯಡಿಯೂರಪ್ಪ ಇಲ್ಲದ ಬಿಜೆಪಿ ನಾಶವಾಗುತ್ತೆ- ಬೂಕನಕೆರೆಯಲ್ಲಿ ಬಿಎಸ್‍ವೈ ಅಭಿಮಾನಿ ಕಣ್ಣೀರು

    ಯಡಿಯೂರಪ್ಪ ಇಲ್ಲದ ಬಿಜೆಪಿ ನಾಶವಾಗುತ್ತೆ- ಬೂಕನಕೆರೆಯಲ್ಲಿ ಬಿಎಸ್‍ವೈ ಅಭಿಮಾನಿ ಕಣ್ಣೀರು

    ಮಂಡ್ಯ: ಸಿಎಂ ಸ್ಥಾನಕ್ಕೆ ಬಿ.ಎಸ್.ಯಡಿಯೂರಪ್ಪನವರು ರಾಜೀನಾಮೆ ನೀಡಿರುವ ಹಿನ್ನೆಲೆ ಅವರ ಹುಟ್ಟೂರಾದ ಜಿಲ್ಲೆಯ ಬೂಕನಕೆರೆಯಲ್ಲಿ ಅಭಿಮಾನಿ ಕಣ್ಣೀರು ಹಾಕಿದ್ದಾರೆ.

    ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆಯ ಮಧುಸೂದನ್ ಅವರು ಕಣ್ಣೀರು ಹಾಕಿದ್ದಾರೆ. ಯಡಿಯೂರಪ್ಪ ಅವರು ನಮ್ಮೂರಿನ ಮಗ ಎಂಬುವ ಹೆಮ್ಮೆ ನಮಗೆ ಇದೆ. ಬಿಜೆಪಿ ಪಕ್ಷವನ್ನು ಕರ್ನಾಟಕದಲ್ಲಿ ತಳಮಟ್ಟದಿಂದ ಕಟ್ಟಿದವರು ಯಡಿಯೂರಪ್ಪನವರು. ಅವರನ್ನು ಸಂಪೂರ್ಣ ಅವಧಿಯಲ್ಲಿ ಸಿಎಂ ಆಗಿ ನೋಡಬೇಕು ಎನ್ನುವ ಆಸೆ ನಮಗೆ ಇತ್ತು. ಇದೀಗ ಅವರನ್ನು ಸಿಎಂ ಸ್ಥಾನದಿಂದ ಕೆಳಗೆ ಇಳಿಸಿರುವುದು ಬೇಸರತಂದಿದೆ ಎಂದಿದ್ದಾರೆ.

    ರಾಜೀನಾಮೆಯಿಂದ ಬೂಕನಕೆರೆಯಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದೆ. ಕೇಂದ್ರದವರು ಒತ್ತಡ ಹಾಕಿ ರಾಜೀನಾಮೆ ತೆಗೆದುಕೊಂಡಿರುವುದು ಸರಿಯಲ್ಲ. ಬಿಜೆಪಿ ಹೆಸರು ಗೊತ್ತಿಲ್ಲ ಎನ್ನುವ ಸಂದರ್ಭದಲ್ಲಿ ಯಡಿಯೂರಪ್ಪ ಅವರು ಪಕ್ಷ ಸಂಘಟನೆ ಮಾಡಿದ್ದಾರೆ. ಇಂತಹ ವ್ಯಕ್ತಿಗೆ ಅನ್ಯಾಯವಾಗಿರುವುದು ಖಂಡನೀಯ. ನಮ್ಮ ಮನೆ ದೇವರ ಮೇಲೆ ಆಣೆ ಯಡಿಯೂರಪ್ಪ ಅವರು ಇಲ್ಲ ಎಂದರೆ ರಾಜ್ಯದಲ್ಲಿ ಬಿಜೆಪಿ ನಿರ್ನಾಮವಾಗುತ್ತದೆ. ಬಿಜೆಪಿಯವರು ಯಡಿಯೂರಪ್ಪ ಅವರ ಋಣ ತೀರಿಸಲು ಅವರ ಮಗನಿಗಾದರು ಸಿಎಂ ಸ್ಥಾನ ನೀಡಬೇಕು ಎಂದರು.