Tag: ಬೇಸನ್ ಲಾಡು

  • ಗಣೇಶನಿಗೆ ಪ್ರಿಯವಾದ ಬೇಸನ್ ಲಾಡು ಮಾಡುವ ಸರಳ ವಿಧಾನ

    ಗಣೇಶನಿಗೆ ಪ್ರಿಯವಾದ ಬೇಸನ್ ಲಾಡು ಮಾಡುವ ಸರಳ ವಿಧಾನ

    ವಿಘ್ನವನ್ನು ನಿವಾರಿಸುವ ವಿನಾಯಕನ ಚತುರ್ಥಿಯನ್ನು ನಾಡಿನಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಹಬ್ಬಕ್ಕೆ ಸಿಹಿ ತಿಂಡಿ ಇಲ್ಲವೆಂದರೆ ಹಬ್ಬಕ್ಕೆ ಮೆರಗು ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ಹಬ್ಬಕ್ಕೆ ಈ ಬಾರಿ ಬೇಸನ್ ಲಾಡು ಮಾಡಿ.

    ಕೆಲವೇ ಸಮಯದಲ್ಲಿ ತಯಾರಿಸಬಹುದಾದ ಈ ಲಾಡು ನಿಮ್ಮ ಮನೆಮಂದಿಯ ಮೆಚ್ಚುಗೆಗೆ ಪಾತ್ರವಾಗುತ್ತದೆ. ಹಬ್ಬಕ್ಕೆಂದು ಮನೆಗೆ ಬರುವ ಅತಿಥಿಗಳಿಗೆ ಖಂಡಿತ ಇಷ್ಟವಾಗುತ್ತದೆ. ಇನ್ನೇಕೆ ತಡ, ಕೆಳಗೆ ನಾವು ಹೇಳಿರುವ ಸಾಮಗ್ರಿಗಳನ್ನು ಬಳಸಿಕೊಂಡು ಬೇಸನ್ ಲಾಡು ಮಾಡುವ ಸರಳ ವಿಧಾನಗಳು ಇಲ್ಲಿದೆ.

    ಬೇಕಾಗುವ ಸಾಮಗ್ರಿಗಳು:
    * ಕಡಲೆ ಹಿಟ್ಟು – 1 ಕಪ್
    * ಪುಡಿ ಸಕ್ಕರೆ – ಅರ್ಧ ಕಪ್
    * ತುಪ್ಪ – ಅರ್ಧ ಕಪ್
    * ಗೋಡಂಬಿ ಬೀಜ – ಅರ್ಧ ಕಪ್
    * ಏಲಕ್ಕಿ ಪುಡಿ – ಅರ್ಧ ಚಮಚ

    ಮಾಡುವ ವಿಧಾನ:
    * ಕಡಲೆ ಹಿಟ್ಟನ್ನು ಹುರಿದುಕೊಂಡು ಅದನ್ನು ಪಕ್ಕದಲ್ಲಿಡಿ.
    * ಪಾತ್ರೆಯಲ್ಲಿ ಒಂದು ಚಮಚದಷ್ಟು ತುಪ್ಪವನ್ನು ಬಿಸಿ ಮಾಡಿಕೊಳ್ಳಿ ಮತ್ತು ಕತ್ತರಿಸಿದ ಗೇರುಬೀಜವನ್ನು ಹಾಕಿ ಹುರಿದುಕೊಳ್ಳಿ.

    * ನಾನ್ ಸ್ಟಿಕ್ ಪಾತ್ರೆಯಲ್ಲಿ ತುಪ್ಪವನ್ನು ಹಾಕಿ ಬಿಸಿ ಮಾಡಿಕೊಂಡು ಹುರಿದ ಕಡಲೆ ಹಿಟ್ಟನ್ನು ಹಾಕಿ ಚೆನ್ನಾಗಿ ಹುರಿಯಬೇಕು.
    * ನಂತರ ಇದಕ್ಕೆ ಏಲಕ್ಕಿ ಪುಡಿಯನ್ನು ಸೇರಿಸಿ ಮಿಶ್ರ ಮಾಡಿಕೊಳ್ಳಿ.

    * ನಂತರ ಗ್ಯಾಸ್ ಆರಿಸಿ ಈ ಮಿಶ್ರಣಕ್ಕೆ ಹುಡಿ ಸಕ್ಕರೆ, ಗೋಡಂಬಿ, ತುಪ್ಪವನ್ನು ಹಾಕಿ ಚೆನ್ನಾಗಿ ಮಿಶ್ರ ಮಾಡಿಕೊಂಡು ಬಳಿಕ ಇದನ್ನು ಒಂದು ಪಾತ್ರೆಗೆ ವರ್ಗಾಯಿಸಿ.
    * ನಿಮ್ಮ ಕೈಗಳಿಗೆ ಸ್ವಲ್ಪ ತುಪ್ಪ ಹಚ್ಚಿಕೊಂಡು ಹಿಟ್ಟಿನಿಂದ ಲಾಡಿನ ಉಂಡೆಗಳನ್ನು ಕಟ್ಟಲು ಪ್ರಾರಂಭಿಸಿದರೆ ರುಚಿಯಾದ ಬೇಸನ್ ಲಾಡು ಸವಿಯಲು ಸಿದ್ಧವಾಗುತ್ತದೆ.