Tag: ಬೇಸನ್ ಲಡ್ಡು

  • ಎಷ್ಟೊಂದು ರುಚಿಕರ ಕಡಲೆ ಹಿಟ್ಟಿನ ಲಡ್ಡು – ನೀವೂ ಟ್ರೈ ಮಾಡಿ

    ಎಷ್ಟೊಂದು ರುಚಿಕರ ಕಡಲೆ ಹಿಟ್ಟಿನ ಲಡ್ಡು – ನೀವೂ ಟ್ರೈ ಮಾಡಿ

    ಸಾಂಪ್ರದಾಯಿಕ ಭಾರತೀಯ ಸಿಹಿ ತಿಂಡಿಗಳಲ್ಲೊಂದು ಕಡಲೆ ಹಿಟ್ಟಿನ ಲಡ್ಡು. ಏಲಕ್ಕಿ ತುಪ್ಪದ ಮಿಶ್ರಣದೊಂದಿಗೆ ಮಾಡುವ ಈ ಸಿಹಿ ಎಂಹವರ ಬಾಯಲ್ಲೂ ನೀರೂರಿಸುತ್ತದೆ. ಗಣೇಶ ಚತುರ್ಥಿ ಹತ್ತಿರದಲ್ಲಿದ್ದು, ಈ ಸಂದರ್ಭದಲ್ಲಿ ತಯಾರಿಸಬಹುದಾದ ಸಿಹಿಗಳಲ್ಲಿ ಇದು ಕೂಡಾ ಒಂದಾಗಿದೆ. ಭಾರತದಾದ್ಯಂತ ಫೇಮಸ್ ಆಗಿರುವ ಕಡಲೆ ಹಿಟ್ಟಿನ ಲಡ್ಡನ್ನು ಮನೆಯಲ್ಲಿಯೇ ಹೇಗೆ ತಯಾರಿಸಬಹುದು ಎಂಬುದನ್ನು ಇಲ್ಲಿ ನೋಡಿ ಕಲಿಯಿರಿ.

    ಬೇಕಾಗುವ ಪದಾರ್ಥಗಳು:
    * ತುಪ್ಪ – ಅರ್ಧ ಕಪ್
    * ಕಡಲೆ ಹಿಟ್ಟು – 2 ಕಪ್
    * ಸಕ್ಕರೆ – 1 ಕಪ್
    * ಏಲಕ್ಕಿ – 4
    * ಒಣ ಕಲ್ಲಂಗಡಿ ಬೀಜಗಳು – 2 ಟೀಸ್ಪೂನ್
    * ಕತ್ತರಿಸಿದ ಗೋಡಂಬಿ – 2 ಟೀಸ್ಪೂನ್

    ಮಾಡುವ ವಿಧಾನ:
    * ಮೊದಲಿಗೆ ದೊಡ್ಡ ಕಡಾಯಿಯಲ್ಲಿ ತುಪ್ಪವನ್ನು ಬಿಸಿ ಮಾಡಿ, ಅದಕ್ಕೆ ಕಡಲೆ ಹಿಟ್ಟು ಸೇರಿಸಿ, ಕಡಿಮೆ ಉರಿಯಲ್ಲಿ ಹುರಿಯಿರಿ. ಮಿಶ್ರಣ ಒಣ ಎನಿಸಿದರೆ ಇನ್ನಷ್ಟು ತುಪ್ಪ ಸೇರಿಸಬಹುದು.
    * 20 ನಿಮಿಷಗಳ ಬಳಿಕ ಹಿಟ್ಟು ತುಪ್ಪವನ್ನು ಬಿಡುಗಡೆ ಮಾಡಲು ಪ್ರಾರಂಭಿಸುತ್ತದೆ. ಹಿಟ್ಟು ಗೋಲ್ಡನ್ ಬ್ರೌನ್ ಬಣ್ಣಕ್ಕೆ ತಿರುಗುವವರೆಗೂ ಹುರಿಯಿರಿ. ಇದು ಸುಮಾರು 30 ನಿಮಿಷ ತೆಗೆದುಕೊಳ್ಳಬಹುದು.
    * ಬಳಿಕ ಮಿಶ್ರಣವನ್ನು ದೊಡ್ಡ ಬಟ್ಟಲಿಗೆ ಹಾಕಿ, ಸ್ವಲ್ಪ ತಣ್ಣಗಾಗಲು ಬಿಡಿ.
    * ಈ ನಡುವೆ ಒಣ ಹುರಿದ ಕಲ್ಲಂಗಡಿ ಬೀಜ ಹಾಗೂ ಗೋಡಂಬಿಯನ್ನು ಕಡಿಮೆ ಉರಿಯಲ್ಲಿ ಹುರಿದು, ಕಡಲೆ ಹಿಟ್ಟಿನ ಮಿಶ್ರಣಕ್ಕೆ ಹಾಕಿ.
    * ಈಗ ಸಕ್ಕರೆ ಹಾಗೂ ಏಲಕ್ಕಿಯನ್ನು ಬ್ಲೆಂಡರ್‌ಗೆ ಹಾಕಿ ಚೆನ್ನಾಗಿ ಪುಡಿ ಮಾಡಿ. ಬಳಿಕ ತಣ್ಣಗಾದ ಕಡಲೆ ಹಿಟ್ಟಿನ ಮಿಶ್ರಣಕ್ಕೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. (ಹಿಟ್ಟು ಬೆಚ್ಚಗಿದ್ದರೆ ಸಕ್ಕರೆಯನ್ನು ಸೇರಿಸಬೇಡಿ. ಇದರಿಂದ ಸಕ್ಕರೆ ಕರಗುವ ಸಾಧ್ಯತೆ ಇರುತ್ತದೆ.)
    * ಈಗ ಮಿಶ್ರಣವನ್ನು ಪುಟ್ಟ ಪುಟ್ಟ ಉಂಡೆಗಳನ್ನಾಗಿ ಮಾಡಿ, ಲಡ್ಡನ್ನು ತಯಾರಿಸಿ.
    * ಈಗ ಕಡಲೆ ಹಿಟ್ಟಿನ ಲಡ್ಡು ತಯಾರಾಗಿದ್ದು, ಸವಿಯಲು ಸಿದ್ಧವಾಗಿದೆ. ಇದನ್ನು ಗಾಳಿಯಾಡದ ಡಬ್ಬಿಯಲ್ಲಿ ಇಟ್ಟರೆ, 2 ವಾರಗಳ ಕಾಲ ಕೆಡುವುದಿಲ್ಲ.

    Live Tv
    [brid partner=56869869 player=32851 video=960834 autoplay=true]