Tag: ಬೇವು

  • ಬೇವು-ಬೆಲ್ಲದ ಸಮರಸವೇ ಜೀವನ ಎಂದು ಸಾರುವ ಹಬ್ಬವೇ ಯುಗಾದಿ

    ಬೇವು-ಬೆಲ್ಲದ ಸಮರಸವೇ ಜೀವನ ಎಂದು ಸಾರುವ ಹಬ್ಬವೇ ಯುಗಾದಿ

    ಹಿಂದೂಗಳಲ್ಲಿ ಹಲವು ಹಬ್ಬಗಳಿವೆ, ಆದರೆ ಯುಗಾದಿ ಹಬ್ಬ ಬಹಳ ಮುಖ್ಯವಾದ ಹಬ್ಬ. ಏಕೆಂದರೆ ಇದು ಹಿಂದೂಗಳಿಗೆ ಹೊಸವರ್ಷದ ಮೊದಲ ದಿನವಾಗಿರುತ್ತೆ. ಹಿಂದೂಗಳು ಹೊಸಸಂಕಲ್ಪಗಳನ್ನು ಹಾಕಿಕೊಂಡು ಮುಂದೆ ನಡೆಯುವ ದಿನ ಇದು. ಯುಗಾದಿ ಎಂಬ ಪದ ಸಂಸ್ಕೃತದ ಯುಗ ಮತ್ತು ಆದಿ ಎಂಬ ಎರಡು ಪದಗಳಿಂದ ಕೂಡಿದೆ. ಈ ಯುಗಾದಿಯು ಕೃತಯುಗದ ಚೈತ್ರ ಶುದ್ಧ ಪಾಡ್ಯ ತಿಥಿ ದಿನದಂದು ಪ್ರಾರಂಭವಾಯಿತು ಎಂಬ ಪ್ರತೀತಿ ಇದೆ.

    Telugu New Year Ugadhi || How to make Ugadhi Pachadi - Subbu Cooks

    ಶತಾಯುರ್ವಜ್ರ ದೇಹಾಯ, ಸರ್ವ ಸಂಪತ್ಕರಾಯ ಚ
    ಸರ್ವಾರಿಷ್ಟ ವಿನಾಶಾಯ, ನಿಂಬಕಂ ದಳ ಭಕ್ಷಣಂ

    ಇದರರ್ಥ, ನೂರು ವರ್ಷಗಳ ಆಯುಷ್ಯ, ಸದೃಢ ಆರೋಗ್ಯ, ಸಕಲ ಸಂಪತ್ತುಗಳ ಪ್ರಾಪ್ತಿಗಾಗಿಯೂ, ಸಕಲಾರಿಷ್ಟ ನಿವಾರಣೆಗಾಗಿಯೂ ಬೇವು ಬೆಲ್ಲ ಸೇವನೆ ಮಾಡುತ್ತೇನೆ. ಈ ಶ್ಲೋಕ ಹೇಳಿ ಬೇವು-ಬೆಲ್ಲ ಸೇವಿಸಬೇಕು. ಬೇವಿನ ಎಲೆಗಳನ್ನು ಸೇವಿಸುವುದರಿಂದ ಸರ್ವ ಅನಿಷ್ಟಗಳು ನಾಶವಾಗುತ್ತೆ ಎಂದು ನಂಬಲಾಗುತ್ತೆ. ಬೆಲ್ಲ ಸಂತೋಷದ ಸಂಕೇತವಾಗಿರುತ್ತೆ. ಇವೆರೆಡು ಮನುಷ್ಯ ಜೀವನದ ಕಷ್ಟ-ಸುಖದ ಪ್ರತೀಕವಾಗಿದೆ.

    ಪುರಾಣದ ಪ್ರಕಾರ ಯುಗದಿ ದಿನದಂದು ಬ್ರಹ್ಮ ದೇವನು ಸೃಷ್ಟಿಯ ಕಾರ್ಯ ಆರಂಭಿಸಿದನೆಂಬ ಪ್ರತೀತಿಯಿದೆ. ಅಂದಿನಿಂದಲೇ ವರ್ಷ, ಖುತುಗಳು, ಮಾಸಗಳು, ಗ್ರಹಗಳು, ನಕ್ಷತ್ರಗಳು ಸೃಷ್ಟಿಸಿದನೆಂಬ ನಂಬಿಕೆಯಿದೆ. ಹಿಂದಿನ ವರ್ಷದ ಸಾಧನೆಗಳನ್ನು ಪರಿಶೀಲಿಸಿ, ಈ ವರ್ಷ ನಾವು ಯಾವ ರೀತಿ ಕಾರ್ಯಪ್ರವೃತ್ತರಾಗಬೇಕು ಎಂದು ಯೋಜನೆ ಹಾಕಿಕೊಳ್ಳುವ ದಿನ ಇಂದು.

    ಯುಗಾದಿ ಹಿನ್ನೆಲೆ: ಅಸುರೀ ಶಕ್ತಿಯ ವಿರುದ್ಧ ಸಾತ್ವಿಕ ಶಕ್ತಿಯ ವಿಜಯವೇ ಯುಗಾದಿಯ ವೈಶಿಷ್ಟ. ಈ ದಿನ ಶ್ರೀ ರಾಮ ರಾವಣನನ್ನು ಕೊಂದು ಅಯೋಧ್ಯೆಗೆ ಬಂದು ರಾಮರಾಜ್ಯವಾಳಲು ಪ್ರಾರಂಭಿಸಿದ. ಅಯೋಧ್ಯೆ ಪ್ರಜೆಗಳು ಸಂತೋಷಪಟ್ಟು, ಮನೆಯ ಮುಂದೆ ವಿಜಯ ಪತಾಕೆ ಹಾರಿಸುವ ದಿನ. ಇಂದಿಗೂ ಸಹ ಈ ಹಬ್ಬದ ದಿನ ಮನೆಯ ಮುಂದೆ ಬಾವುಟ ಹಾರಿಸಿ ನಲಿಯುವ ಪದ್ದತಿ ಇದೆ.

  • ಬೇವು ತಲೆಹೊಟ್ಟಿಗೆ ಮದ್ದು

    ಬೇವು ತಲೆಹೊಟ್ಟಿಗೆ ಮದ್ದು

    ಲೆಹೊಟ್ಟಿನ ಸಮಸ್ಯೆ ಹೆಚ್ಚಾಗಿ ಎಲ್ಲರಲ್ಲಿಯೂ ಕಾಣಿಸಿಕೊಳ್ಳುವ ಸಹಜ ಸಮಸ್ಯೆಯಾಗಿದೆ. ಈ ಸಮಸ್ಯೆಗೆ ಬೇವು ಮದ್ದಾಗಿ ಕಾರ್ಯನಿರ್ವಹಿಸುತ್ತದೆ. ನೀವು ಕೆಮಿಕಲ್ ಅಂಶ ಇರುವ ಶಾಂಪೂ ಬಳಸುವ ಬದಲಾಗಿ ಮನೆಯಲ್ಲಿಯೇ ಸಿಗುವ ಈ ಬೇವನ್ನು ಬಳಸಿ ತಲೆ ಹೊಟ್ಟನ್ನು ನಿವಾರಿಸ ಬಹುದಾಗಿದೆ.

    * ಬೇವಿನ ಎಣ್ಣೆ ಕೂದಲ ಆರೈಕೆಗೆ ಹಾಗೂ ತಲೆಹೊಟ್ಟಿನ ನಿವಾರಣೆಗೆ ಸಹಾಯ ಮಾಡುತ್ತದೆ. ಇದನ್ನೂ ಓದಿ: ಚಾಲೆಂಜಿಂಗ್ ಸ್ಟಾರ್ ದರ್ಶನ್‍ ಹೆಸರಿನಲ್ಲಿ ವಂಚನೆಗೆ ಯತ್ನ – ಮಹಿಳೆಯ ವಿರುದ್ಧ ಯಜಮಾನ ದೂರು

    * ಪ್ರತಿದಿನ ಬೆಳಗ್ಗೆ ಬೇವಿನ ಎಲೆಗಳನ್ನು ತಿನ್ನಬೇಕು. ಇಲ್ಲವಾದಲ್ಲಿ ಬೇವಿನ ಎಲೆಗಳನ್ನು ನೀರಿನಲ್ಲಿ ಕುದಿಸಿ ಅದರ ತಿಳಿ ನೀರನ್ನು ಕುಡಿಯಬಹುದು ಅಥವಾ ಬೇವಿನ ಎಲೆಗಳನ್ನು ಜೇನುತುಪ್ಪದೊಂದಿಗೆ ಸೇವಿಸಬಹುದು. ಒಮ್ಮೆ ನೀವು ಇದನ್ನು ಪ್ರಯತ್ನಿಸಿದರೆ ಇದರ ಲಾಭದ ಅರಿವು ನಿಮಗಾಗುತ್ತದೆ.

    * ಬೇವಿನ ಎಲೆಗಳನ್ನು ತೆಗೆದುಕೊಂಡು ರುಬ್ಬಿಕೊಳ್ಳಿ. ಇದಕ್ಕೆ ಒಂದು ಕಪ್ ಮೊಸರು ಸೇರಿಸಿ. ನಂತರ ತಲೆಗೆ ಹಚ್ಚಿಕೊಳ್ಳಿ. 15-20 ನಿಮಿಷ ಬಿಟ್ಟು ಕೂದಲನ್ನು ತೊಳೆದುಕೊಳ್ಳಿ. ಮೊಸರಿನಲ್ಲಿನ ತಂಪಾದ ಮತ್ತು ಬೇವಿನ ಆ್ಯಂಟಿ ಫಂಗಲ್ ಗುಣಲಕ್ಷಣ ತಲೆಹೊಟ್ಟು ವಿರುದ್ಧ ಹೋರಾಡುತ್ತದೆ.

    * ಬೇವಿನ ಎಲೆಗಳನ್ನು ತೆಗೆದುಕೊಂಡು ರುಬ್ಬಿಕೊಳ್ಳಿ. ಇದಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ. ನಂತರ ಈ ಪೇಸ್ಟನ್ನು ತಲೆಬುರುಡೆಗೆ ಮಾಸ್ಕ್ ಹಾಕಿಕೊಳ್ಳಿ.

    * ಬೇವನ್ನು ನೀವು ಕಂಡೀಶನರ್ ಆಗಿಯೂ ಬಳಸಬಹುದು. ಈ ಬೇವಿನ ಕಂಡೀಶನರ್ ಮಾಡಲು ಕೆಲವು ಬೇವಿನ ಎಲೆಗಳನ್ನು ತೆಗೆದುಕೊಂಡು ಅವುಗಳನ್ನು ಕುದಿಸಿ, ತಣ್ಣಗಾಗಲು ಬಿಡಿ. ನಿಮ್ಮ ಕೂದಲನ್ನು ಶಾಂಪೂ ಮಾಡಿದ ನಂತರ, ಈ ಬೇವಿನ ಮಿಶ್ರಣದಿಂದ ಕೂದಲನ್ನು ತೊಳೆಯಿರಿ.

  • ರೈತರ ಪಾಲಿಗೆ ಸಿಹಿಯಾದ ಬೇವು

    ರೈತರ ಪಾಲಿಗೆ ಸಿಹಿಯಾದ ಬೇವು

    ಕೊಪ್ಪಳ : ಈ ವರ್ಷ ಮುಂಗಾರು ಮಳೆಯಿಲ್ಲದೆ ಕಂಗಾಲಾಗಿದ್ದ ರೈತರ ಪಾಲಿಗೆ ಬೇವು ಈ ವರ್ಷ ಸಿಹಿಯಾಗಿದೆ.

    ಮುಂಗಾರು ಮಳೆಗಳಲ್ಲಿಯೇ ಬೀಜ ಮಳೆ ಎಂದು ಹೆಸರಾಗಿರುವ ರೋಹಿಣಿ ಮಳೆ ಈ ವರ್ಷ ಕೈ ಕೊಟ್ಟ ಹಿನ್ನೆಲೆಯಲ್ಲಿ ರೈತರು ಕಂಗಾಲಾಗಿದ್ದಾರೆ. ಕಂಗಾಲಾಗಿ ಕೈಕಟ್ಟಿ ಕುಳಿತುಕೊಂಡಿರುವ ಈ ಸಂದರ್ಭದಲ್ಲಿ ರೈತರ ಬಾಳೀಗೆ ಸಿಹಿಯಾಗಿ ಬಂದಿದ್ದು, ಬೇವಿನ ಬೀಜ ಎಂದರೆ ತಪ್ಪಾಗಲಾರದು. ಅತ್ಯಂತ ಕಹಿಯಾಗಿರುವ ಮತ್ತು ಔಷಧ ಗುಣಗಳನ್ನು ಹೊಂದಿರುವ ಬೇವು ಮಾತ್ರ (ಬೇವಿನ ಬೀಜ) ರೈತರ ಜೀವನಕ್ಕೆ ಆಸರೆ ಆಗಿರುವುದಂತು ಸತ್ಯ.

    ಈ ವರ್ಷ ಅದರಲ್ಲಿ ವಿಶೇಷವಾಗಿ ಕೊರೊನಾ ವೈರಸ್ ತಡೆಗಾಗಿ ಸರ್ಕಾರ ಜಾರಿಗೆ ಬಂದಿದ್ದ ಲಾಕ್‍ಡೌನ್ ಸಮಯ ಅಲ್ಲದೆ ಇನ್ನೂಳಿದ ದಿನಗಳಲ್ಲಿ ಕೆಲಸಗಳಿಲ್ಲದೆ ಖಾಲಿ ಕುಳಿತುಕೊಂಡಿದ್ದ ರೈತರಿಗೆ ಪಾಲಿಗೆ ಬೇವಿನ ಹಣ್ಣು (ಬೀಜ) ರೈತರ ಜೀವನದ ಮೂಲ ಆಸರೆಯಾಗಿದೆ.

    ಹೆಚ್ಚು ಆವಕ: ಕೊಪ್ಪಳ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಆವಕವಾಗುವುದು ಕುಷ್ಟಗಿ ಎಪಿಎಂಸಿ ಮಾರುಕಟ್ಟೆಯಲ್ಲಿ ಎಂಬುವುದು ವಿಶೇಷವಾಗಿದೆ. ಈ ಭಾಗದಲ್ಲಿ ಹೇರಳವಾಗಿ ಬೇವಿನ ಮರಗಳು ಹೊಂದಿರುವ ಕಾರಣಕ್ಕಾಗಿ ಬೇವಿನ ಹಣ್ಣು ಸೇರಿದಂತೆ ಬೇವಿನ ಬೀಜ ಮಾರುಕಟ್ಟೆಯಲ್ಲಿ ಹೆಚ್ಚು ಆವಕವಾಗುತ್ತವೆ. ನಿತ್ಯ ಒಂದು ಚೀಲಗಳಷ್ಟು ಒಬ್ಬ ರೈತ ಮಹಿಳೆಯರು ಬೇವಿನ ಬೀಜಗಳು ಸೇರಿದಂತೆ ಹಣ್ಣುಗಳನ್ನು ಸಂಗ್ರಹಿಸುತ್ತಾರೆ. ಚೀಲವೊಂದಕ್ಕೆ ಕನಿಷ್ಠ 500 ರಿಂದ 600 ರೂಪಾಯಿಗಳವರೆಗೆ ಈ ವರ್ಷ ದರ ಲಭಿಸಿದೆ.

    ಇಲ್ಲಿಯವರೆಗೂ 4,418 ಕ್ವಿಂಟಲ್ ನಷ್ಟು ಮಾರುಕಟ್ಟೆಗೆ ಬೇವಿನ ಹಣ್ಣು ಸೇರಿದಂತೆ ಬೀಜ ಆವಕವಾಗಿದೆ. ಇನ್ನೂ 15 ದಿನಗಳಿಂದ ತಿಂಗಳವರೆಗೆ ಬೇವಿನ ಹಣ್ಣು ಮಾರುಕಟ್ಟೆಗೆ ಆವಕವಾಗಲಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಸಾವಿರದಿಂದ 1500 ಕ್ವಿಂಟಲ್ ಬೇವು ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹವಾಗಿದೆ ಎಂದು ಎಪಿಎಂಸಿ ಕಾರ್ಯದರ್ಶಿ ಟಿ.ನೀಲಪ್ಪಶೆಟ್ಟಿ ತಿಳಿಸಿದರು.

    ರಾಜ್ಯವಲ್ಲದೆ, ತಮಿಳುನಾಡು ಹಾಗೂ ಮಹಾರಾಷ್ಟ್ರ ರಾಜ್ಯಗಳಿಗೆ ರಫ್ತಾಗಲಿದೆ. ಔಷಧಕ್ಕಾಗಿ ಬಳಕೆಯಾಗುವ ಬೇವು ರೈತರ ಜಮೀನು ಫಲವತ್ತತೆಗಾಗಿ ಬೇವಿನ ಗೊಬ್ಬರವಾಗಿ ಮರಳಿ ತಯಾರಾಗಿ ಬರಲಿದೆ ಎಂದು ಕಾರ್ಯದರ್ಶಿಗಳು ತಿಳಿಸಿದರು.

  • ತಿನ್ನಲು ಕಹಿಯಾದ್ರು ಆರೋಗ್ಯಕ್ಕೆ ಸಿಹಿಯಾದ ಬೇವು

    ತಿನ್ನಲು ಕಹಿಯಾದ್ರು ಆರೋಗ್ಯಕ್ಕೆ ಸಿಹಿಯಾದ ಬೇವು

    ಬೇವು ಎಂದಾಕ್ಷಣ ನೆನಪಾಗೋದು ಕಹಿ. ಆದರೆ ಈ ಬೇವಿನಲ್ಲಿರುವ ಕಹಿ ಅಂಶ ಆರೋಗ್ಯಕ್ಕೆ ಎಷ್ಟು ಸಿಹಿ ಎನ್ನುವ ಬಗ್ಗೆ ಹಲವರಿಗೆ ತಿಳಿದಿರಲ್ಲ. ಜೀವನದಲ್ಲಿ ಸುಖ ದುಃಖಗಳನ್ನು ಸಮಾನವಾಗಿ ಸ್ವೀಕರಿಸಲು ಸಾಂಕೇತಿಕವಾಗಿ ಬೇವು, ಬೆಲ್ಲವನ್ನು ಪ್ರತಿ ಯುಗಾದಿಯಂದು ಹಂಚಲಾಗುತ್ತೆ. ಇದರ ಹಿಂದೆ ಒಂದು ಆರೋಗ್ಯಕರ ಕಾರಣವೂ ಅಡಗಿದೆ. ಪುರಾತನ ಗ್ರಂಥದಲ್ಲಿ ಬೇವಿನ ಆರೋಗ್ಯಕರ ಲಾಭದ ಬಗ್ಗೆ ಉಲ್ಲೇಖವಿದೆ.

    ಬೇವಿನ ಉತ್ತಮ ಗುಣಗಳಲ್ಲಿ ಉರಿಯೂತ ನಿವಾರಕ, ಬ್ಯಾಕ್ಟೀರಿಯಾ ನಿವಾರಕ ಮತ್ತು ಶಿಲೀಂಧ್ರ ನಿವಾರಕಗಳೂ ಸೇರಿದ್ದು, ಈ ಗುಣಗಳು ಮಾನವನ ಆರೋಗ್ಯಕ್ಕೆ ಒಳ್ಳೆದು ಎನ್ನಲಾಗುತ್ತೆ. ಅಷ್ಟೇ ಅಲ್ಲದೇ ಬೇವಿನ ಎಲೆಗಳನ್ನು ಅರೆದು ಅದನ್ನು ಗಾಯಗಳಿಗೆ ಹಚ್ಚಿದರೆ ಗಾಯ ಬೇಗನೇ ಮಾಗುತ್ತವೆ.

    ಸಿಡುಬು (chicken pox), ಅಮ್ಮ (small pox), ದದ್ದು, ಕಾಲಿನ ಮೊಳೆ ಮೊದಲಾದ ತೊಂದರೆಗಳು ಬೇವಿನಿಂದ ಬೇಗನೇ ನಿವಾರಣೆಯಾಗುತ್ತದೆ. ಸುಲಭವಾಗಿ ಬಗ್ಗದ ಹರ್ಪೆಸ್ ವೈರಸ್ (herpes virus) ಕೂಡ ಬೇವು ನಾಶ ಮಾಡುತ್ತದೆ. ಕಹಿ ಬೇವನ್ನು ತಿನ್ನುವುದರ ಲಾಭವೇನು? ಯಾವೆಲ್ಲ ಸಮಸ್ಯೆಗೆ ಇದು ಮದ್ದು ಎನ್ನುವ ಮಾಹಿತಿ ಇಲ್ಲಿದೆ.

    ಬೇವಿನ ಆರೋಗ್ಯಕರ ಲಾಭವೇನು?

    ಲಿವರ್ ಸಮಸ್ಯೆಗೆ ಮದ್ದು:
    ಬೇವಿನ ಎಲೆಗಳನ್ನು ಸೇವಿಸುವುದರಿಂದ ಲೀವರ್ ಕ್ಷಮತೆ ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚುತ್ತದೆ. ಅಲ್ಲದೇ ರಕ್ತದಿಂದ ವಿಷಕಾರಿ ಅಂಶವನ್ನು ಹೊರಹಾಕಲು ನೆರವಾಗುತ್ತದೆ. ಜೊತೆಗೆ ಜೀರ್ಣ ಮತ್ತು ಶ್ವಾಸಕೋಶದ ವ್ಯವಸ್ಥೆಯನ್ನು ಇದು ಉತ್ತಮಗೊಳಿಸುತ್ತದೆ. ಅಲ್ಲದೇ ಬೇವಿನ ಎಣ್ಣೆ ಮತ್ತು ಬೇವಿನ ರಸಗಳನ್ನು ಸೇವಿಸುವುದರಿಂದ ದೇಹದಲ್ಲಿದ್ದ ಕೆಟ್ಟ ಬ್ಯಾಕ್ಟೀರಿಯಾಗಳನ್ನು ನಾಶವಾಗುತ್ತದೆ.

    ಚರ್ಮದ ಸಮಸ್ಯೆಗೆ:
    ಬೇವಿನ ಎಣ್ಣೆಯನ್ನು ಬಿಸಿ ನೀರಿನಲ್ಲಿ ಸೇರಿಸಿ ಸ್ನಾನ ಮಾಡುವುದರಿಂದ ವಿವಿಧ ಚರ್ಮರೋಗಗಳು, ತುರಿಕೆ, ಹುಳಕಡ್ಡಿ ಮೊದಲಾದ ಸಮಸ್ಯೆಗಳು ನಿವಾರಣೆಯಾಗುತ್ತದೆ. ಶೀತ ಮತ್ತು ಎಕ್ಸಿಮಾದಂತಹ ಚರ್ಮರೋಗವೂ ಕೂಡ ಇದರಿಂದ ವಾಸಿಯಾಗುತ್ತದೆ.

    ತ್ವಚೆಯ ಕಲೆ ನಿವಾರಿಸುತ್ತದೆ:
    ಗಾಯ ಮತ್ತು ಮೊಡವೆಗಳು ಮಾಗಿದ ಬಳಿಕ ಚರ್ಮದ ಮೇಲೆ ಕಲೆಗಳು ಉಳಿದು ಬಿಡುತ್ತದೆ. ಈ ಕಲೆಗಳನ್ನು ನಿವಾರಿಸಲು ಬೇವು ಸಹಕಾರಿಯಾಗಿದ್ದು, ಮುಖದಲ್ಲಿ ಮತ್ತೆ ಮೊಡವೆಗಳು ಆಗದಂತೆ ತಡೆಯುತ್ತದೆ.

    ಚಿಕ್ಕಪುಟ್ಟ ಗಾಯಗಳಾದರೆ ಬೇವಿನ ಎಲೆಗಳ ರಸ ಅಥವಾ ಎಲೆಗಳನ್ನು ಅರೆದ ಹಚ್ಚಿದರೆ ಗಾಯಗಳು ಬೇಗ ಮಾಗುತ್ತದೆ. ಅಲ್ಲದೆ ಮೊಡವೆಗಳನ್ನು ನಿಯಂತ್ರಿಸಲು ನಿತ್ಯವೂ ಸ್ನಾನ ಮಾಡುವ ನೀರಿಗೆ ಬೇವಿನ ಎಣ್ಣೆಯ ಕೆಲವು ಹನಿಗಳನ್ನು ಸೇರಿಸಿದರೆ ತ್ವಚೆಯ ದುರ್ಗಂಧ, ಸೋಂಕುಗಳು ನಿವಾರಣೆಯಾಗುತ್ತದೆ ಹಾಗೂ ಚರ್ಮದಲ್ಲಿ ದದ್ದು, ಮೊಡವೆಗಳು ಆಗದಂತೆ ಇದು ನೋಡಿಕೊಳ್ಳುತ್ತದೆ.

    ಮುಖದ ಕಾಂತಿ ಹೆಚ್ಚಿಸುತ್ತದೆ:
    ಬೇವಿನ ಎಲೆಗಳನ್ನು ಹಾಕಿ ಕುದಿಸಿದ ನೀರಿನಲ್ಲಿ ಅದ್ದಿದ ಬಟ್ಟೆಯನ್ನು ಇಡೀ ರಾತ್ರಿ ಮುಖದ ಮೇಲೆ ಇಟ್ಟುಕೊಂಡು ಮಲಗಿದರೆ ಮುಖದ ಕಾಂತಿ ಹೆಚ್ಚಾಗುತ್ತೆ. ಹಾಗೆಯೇ ಈ ನೀರನ್ನು ತಲೆಗೆ ಹಚ್ಚಿ ಸ್ನಾನ ಮಾಡಿದರೆ ಕೂಡಲು ಉದುರುವಿಕೆ, ತಲೆಹೊಟ್ಟಿನ ಸಮಸ್ಯೆ ನಿವಾರಣೆ ಆಗುತ್ತದೆ.

    ರಕ್ತ ಶುದ್ಧೀಕರಣಗೊಳಿಸುತ್ತೆ:
    ಬೇವನ್ನು ತಿಂದರೆ ರಕ್ತ ಶುದ್ಧೀಕರಣಗೊಳ್ಳುತ್ತದೆ ಹಾಗೂ ರಕ್ತದೊತ್ತಡ ಕಡಿಮೆಯಾಗುತ್ತದೆ. ರಕ್ತದಲ್ಲಿರುವ ವಿಷಕಾರಿ ವಸ್ತುಗಳನ್ನು ಹೊರ ಹಾಕಿ, ರಕ್ತಸಂಚಾರ ಉತ್ತಮಗೊಳ್ಳುತ್ತದೆ. ವೃದ್ಧಾಪ್ಯ ಬೇಗನೇ ಆವರಿಸಲು ಕಾರಣವಾಗುವ free radical ಎಂಬ ಕಣಗಳನ್ನು ಬೇವು ಕೊಲ್ಲುವುದರಿಂದ ತಾರುಣ್ಯ ಬಹುಕಾಲ ಉಳಿಯುತ್ತದೆ. ಅಲ್ಲದೇ ಬೇವನ್ನು ಸೇರಿಸಿದರೆ ರಕ್ತನಾಳಗಳಲ್ಲಿ ಸಂಗ್ರಹವಾಗಿದ್ದ ಕೆಟ್ಟ ಕೊಲೆಸ್ಟ್ರಾಲ್ ನಿವಾರಣೆಯಾಗಿ, ದೇಹದಲ್ಲಿ ರಕ್ತಸಂಚಾರ ಸುಗಮಗೊಳ್ಳುತ್ತದೆ. ಇದರಿಂದ ಹೃದಯದ ಮೇಲೆ ಬೀಳುವ ಒತ್ತಡ ಕಡಿಮೆಯಾಗುತ್ತದೆ.

    ಮಲೇರಿಯಾ ಜ್ವರಕ್ಕೆ:
    ಬೇವಿನಲ್ಲಿರುವ ಜೆಡ್ಯುನಿನ್ (Gedunin) ಎಂಬ ರಾಸಾಯನಿಕ ಮಲೇರಿಯಾ ಜ್ವರವನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ಬೇವಿನ ಎಲೆಗಳನ್ನು ಜಜ್ಜಿ ಮನೆಯ ಸುತ್ತ ಮುತ್ತ ಹರಡುವುದರಿಂದ ಆ ವಾಸನೆಗೆ ಸೊಳ್ಳೆಗಳು ಕಡಿಮೆ ಆಗುತ್ತದೆ. ಅಲ್ಲದೆ ಬೇವಿನ ಎಲೆಗಳನ್ನು ತಿಂದರೆ ಅಥವಾ ಅದರ ರಸವನ್ನು ಕುಡಿದರೆ ಮಲೇರಿಯಾ ಜ್ವರ ಕಡಿಮೆ ಆಗುತ್ತದೆ.

    ಕ್ಯಾನ್ಸರ್ ನಿಯಂತ್ರಿಸಲು:
    ನಿಯಮಿತವಾಗಿ ಬೇವಿನ ಎಲೆಗಳನ್ನು ಹಸಿಯಾಗಿ ಸೇವಿಸುವವರಲ್ಲಿ ಕ್ಯಾನ್ಸರ್ ಕಾಯಿಲೆ ಕಾಣಿಸಿಕೊಳ್ಳು ಸಾಧ್ಯತೆ ಕಡಿಮೆ. ಬೇವಿನ ಮರದ ತೊಗಟೆಯಲ್ಲಿ ಕಂಡುಬರುವ Limonoids ಮತ್ತು polysaccharides ಎಂಬ ರಾಸಾಯನಿಕಗಳು ದೇಹದಲ್ಲಿ ಕ್ಯಾನ್ಸರ್ ಮತ್ತು ಗಡ್ಡೆಯುಂಟಾಗುವುದನ್ನು ತಡೆಯುತ್ತದೆ.

    ಸಂಧಿವಾತಕ್ಕೆ:
    ಸಂಧಿವಾತ ಸಮಸ್ಯೆಗೆ ಬೇವಿನ ಎಲೆ ಮತ್ತು ಬೇವಿನ ತೊಗಟೆಯನ್ನು ಅರೆದು ತಯಾರಿಸಿದ ಲೇಪನ ಉತ್ತಮ ಪರಿಹಾರ ನೀಡುತ್ತದೆ. ಇದರಿಂದ ಸಂದುಗಳಲ್ಲಿ ಬಾವು, ನೋವು ಕೂಡ ಕಡಿಮೆಯಾಗುತ್ತದೆ.

    ಬೇವಿನ ಎಣ್ಣೆಯ ಮಸಾಜ್:
    ಬೇವಿನ ಎಣ್ಣೆ ಚರ್ಮಕ್ಕೆ ಒಳ್ಳೆದು. ಈ ಎಣ್ಣೆಯಲ್ಲಿ ಮೈಯನ್ನು ಮಸಾಜ್ ಮಾಡುವುದರಿಂದ ಕೆಳಬೆನ್ನಿನ ನೋವು, ಸಂಧಿವಾತ, ಸ್ನಾಯುಗಳಲ್ಲಿ ನೋವು ಹೀಗೆ ವಿವಿಧ ನೋವುಗಳು ಕಡಿಮೆಯಾಗುತ್ತವೆ.