Tag: ಬೇಲೂರು ಚನ್ನಕೇಶವ

  • ಬೇಲೂರು ರಥೋತ್ಸವಕ್ಕೂ ಕುರಾನ್‍ಗೂ ಏನು ಸಂಬಂಧ: ಪ್ರಮೋದ್ ಮುತಾಲಿಕ್

    ಬೇಲೂರು ರಥೋತ್ಸವಕ್ಕೂ ಕುರಾನ್‍ಗೂ ಏನು ಸಂಬಂಧ: ಪ್ರಮೋದ್ ಮುತಾಲಿಕ್

    ಹಾಸನ: ಬೇಲೂರು ಚನ್ನಕೇಶವ ಸ್ವಾಮಿ ಜಾತ್ರಾ ಮಹೋತ್ಸವದ ಗಳಿಗೆ ತೇರಿನ ದಿನ ರಥ ಎಳೆಯುವ ಮುನ್ನ ಕುರಾನ್ ಪಠಣ ಮಾಡುವುದಕ್ಕೆ ಪ್ರಮೋದ್ ಮುತಾಲಿಕ್ ವಿರೋಧ ವ್ಯಕ್ತಪಡಿಸಿದ್ದು ಬೇಲೂರು ರಥೋತ್ಸವಕ್ಕೂ ಕುರಾನ್‍ಗೂ ಏನು ಸಂಬಂಧ ಎಂದು ಪ್ರಶ್ನಿಸಿದ್ದಾರೆ.

    ಶ್ರೀರಾಮಸೇನೆ ಬೇಲೂರು ತಾಲೂಕು ಘಟಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೇಲೂರು ರಥೋತ್ಸವಕ್ಕೂ ಕುರಾನ್‍ಗೂ ಏನು ಸಂಬಂಧ? ಮುಜರಾಯಿ ಖಾತೆ ಸಚಿವೆ ಶಶಿಕಲಾ ಜೊಲ್ಲೆಯವರಿಗೆ ಎಚ್ಚರಿಕೆ ಕೊಡುತ್ತಿದ್ದೇನೆ. ಮುಂದಿನ ವರ್ಷ ಗಳಿಗೆ ತೇರಿಗೂ ಮುನ್ನ ಕುರಾನ್ ಪಠಣ ಮಾಡಲು ಹೋದರೆ, ಶ್ರೀರಾಮಸೇನೆಯಿಂದ ಪ್ರತಿಭಟನೆ ಎದುರಿಸಬೇಕಾಗುತ್ತದೆ. ಈ ವರ್ಷ ಶ್ರೀರಾಮಸೇನೆ ಸಂಘಟನೆ ಬೇಲೂರಿನಲ್ಲಿ ಇರಲಿಲ್ಲ, ತಾಕತ್ತಿದ್ದರೆ ಮುಂದಿನ ವರ್ಷ ಕುರಾನ್ ಪಠಣ ಮಾಡಿ ನೋಡೋಣ, ಕೂಡಲೇ ಇದನ್ನು ವಾಪಾಸ್ ಪಡೆಯಬೇಕು. ಇಲ್ಲವಾದಲ್ಲಿ ಸಂಘರ್ಷ, ಗಲಾಟೆ, ಗಲಭೆಗಳು ಆಗ್ತವೆ, ಬೆಂಕಿ ಹೊತ್ತಿಕೊಳ್ಳುತ್ತೆ ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಬೇಲೂರು ದೇವಾಲಯದಲ್ಲಿ ಗಳಿಗೆ ತೇರಿನ ದಿನ ಕುರಾನ್ ಪಠಣೆ ನಡೆಯುತ್ತೆ

    ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಬರುವ ದೇವಾಲಯಗಳ ನೂರು ಮೀಟರ್ ವ್ಯಾಪ್ತಿಯಲ್ಲಿ ಹಿಂದೂಯೇತರರಿಗೆ ಅಂಗಡಿಗಳನ್ನು ತೆರೆಯಲು ಅವಕಾಶ ಕೊಡಬಾರದು ಎನ್ನುವ ಕಾನೂನಿದೆ. ಆದರೆ ಬೇಲೂರಿನ ಶ್ರೀಚನ್ನಕೇಶವ ದೇವಾಲಯದ ಮುಂದೆ ಒಬ್ಬ ಮುಸ್ಲಿಂ ವ್ಯಾಪಾರಿಯ ಅಂಗಡಿ ಇದೆ. ನೀವು ನೋಟಿಸ್‌ ನೀಡಿದರೂ ಆತ ಇನ್ನೂ ಅಂಗಡಿ ಖಾಲಿ ಮಾಡಿಲ್ಲ. ಇನ್ನೊಂದು ವಾರದೊಳಗೆ ಆ ಅಂಗಡಿ ಖಾಲಿ ಮಾಡಿಸಬೇಕು, ಇಲ್ಲವಾದಲ್ಲಿ ಖಾಲಿ ಮಾಡಿಸಲು ನಾನೇ ಬರ್ತಿನಿ. ಆಗ ಗಲಾಟೆ ಆಯ್ತು, ಘರ್ಷಣೆ ಆಯ್ತು ಅಂದರೆ ನಾನು ಕೇಳುವುದಿಲ್ಲ. ಮಸೀದಿ ಒಳಗೆ ನಮಗೆ ಪ್ರವೇಶ ಕೊಡ್ತಾರಾ, ಆವರಣದಲ್ಲಿ ವ್ಯಾಪಾರ ಮಾಡಲು ಬಿಡ್ತಾರಾ, ದೇವಾಲಯದ ಆಡಳಿತಾಧಿಕಾರಿ ಅವರೇ ಕಾನೂನನ್ನು ಪಾಲನೆ ಮಾಡಿ ಎಂದು ಕಿಡಿಕಾರಿದರು. ಇದನ್ನೂ ಓದಿ: ಗಳಿಗೆ ತೇರು ಎಳೆಯುವ ಮುನ್ನ ಕುರಾನ್ ಪಠಣ ಮಾಡುವ ಸಂಪ್ರದಾಯವಿದೆ: ಸಯ್ಯದ್ ಸಜ್ಜಾದ್ ಭಾಷಾ ಖಾದ್ರಿ

    ಬೇಲೂರು ಚನ್ನಕೇಶವ ಸ್ವಾಮಿ ಜಾತ್ರಾಮಹೋತ್ಸವದ ಗಳಿಗೆ ತೇರಿನ ದಿನ ಕುರಾನ್ ಪಠಣ ಮಾಡುವುದು ಹಲವಾರು ವರ್ಷಗಳಿಂದ ನಡೆದುಬಂದಿದ್ದು, ಈ ವರ್ಷವೂ ಕೂಡ ಅದು ಮುಂದುವರಿದಿತ್ತು.