Tag: ಬೇಬಿ ಶವರ್

  • ದುಬೈನಲ್ಲಿ ರಾಮ್‌ ಚರಣ್ ಪತ್ನಿ ಉಪಾಸನಾ ಬೇಬಿ ಶವರ್‌ ಸಂಭ್ರಮ

    ದುಬೈನಲ್ಲಿ ರಾಮ್‌ ಚರಣ್ ಪತ್ನಿ ಉಪಾಸನಾ ಬೇಬಿ ಶವರ್‌ ಸಂಭ್ರಮ

    ಟಾಲಿವುಡ್ (Tollywood) ಸ್ಟಾರ್ ರಾಮ್ ಚರಣ್ (Ram Charan) ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ಜ್ಯೂನಿಯರ್ ರಾಮ್ ಚರಣ್ (Jr.ntr) ಮನೆಗೆ ಬರಲು ದಿನಗಣನೆ ಶುರುವಾಗಿದೆ. ಸದ್ಯ ಚರಣ್ ಪತ್ನಿ ಉಪಾಸನಾ (Upasana) ಬೇಬಿ ಶವರ್ (Baby Shower) ಪಾರ್ಟಿಯನ್ನ ದುಬೈನಲ್ಲಿ ಅದ್ದೂರಿಯಾಗಿ ನಡೆದಿದೆ.

    ಮದುವೆಯಾಗಿ 10 ವರ್ಷಗಳ ನಂತರ ತಾಯಿಯಾಗುತ್ತಿರುವ ಉಪಾಸನಾ ಚೊಚ್ಚಲ ಮಗು ಆಗಮನವಾಗುತ್ತಿರುವ ಖುಷಿಯಲ್ಲಿದ್ದಾರೆ. ಸದ್ಯ RRR ಚಿತ್ರದ ಹಾಡಿಗೆ ಆಸ್ಕರ್ ಸಿಕ್ಕ ಸಂತಸದ ಬೆನ್ನಲ್ಲೇ ಪತ್ನಿಯ ಬೇಬಿ ಶವರ್ ಪಾರ್ಟಿ ಮಾಡುವ ಮೂಲಕ ಸಂಭ್ರಮಿಸಿದ್ದಾರೆ.

    ಬೀಚ್ ಬಳಿ ಗ್ರ್ಯಾಂಡ್ ಡೆಕೋರೆಷನ್ ಮಾಡಿ, ಅದ್ದೂರಿಯಾಗಿ ಸೆಲೆಬ್ರೆಟ್ ಮಾಡಿದ್ದಾರೆ. ರಾಮ್ ಚರಣ್- ಉಪಾಸನಾ ಜೊತೆ ಇಡೀ ಕುಟುಂಬದವರು ಕೂಡ‌ ಬೇಬಿ ಶವರ್‌ ಪಾಟಿಯಲ್ಲಿ ಭಾಗಿಯಾಗಿದ್ದಾರೆ. ಉಪಾಸನಾ ಸಹೋದರಿ ಅನುಷ್‌ಪಲಾ & ಸಿಂಧೂರಿ ರೆಡ್ಡಿ ಈ ಪಾರ್ಟಿಯನ್ನ ಆಯೋಜನೆ ಮಾಡಿದ್ದಾರೆ. ಸೆಲೆಬ್ರೇಷನ್ ವೀಡಿಯೋವನ್ನ ಉಪಾಸನಾ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಇದನ್ನೂ ಓದಿ:ಕಿಚ್ಚ ಸುದೀಪ್ ನಡೆಗೆ ಅಚ್ಚರಿಯಲ್ಲ, ನೋವು ತಂದಿದೆ : ಪ್ರಕಾಶ್ ರಾಜ್

    ರಾಮ್ ಚರಣ್ RRR, ಸಕ್ಸಸ್ ನಂತರ ‘ಗೇಮ್ ಚೇಂಜರ್’ ಸಿನಿಮಾದಲ್ಲಿ ಆಕ್ಟ್ ಮಾಡ್ತಿದ್ದಾರೆ. ಚರಣ್-ಕಿಯಾರಾ ಕಾಂಬೋದಲ್ಲಿ ಸಿನಿಮಾ ಮೂಡಿ ಬರುತ್ತಿದೆ. ಈ ಚಿತ್ರವನ್ನ ಶಂಕರ್ ನಿರ್ದೇಶನ ಮಾಡಿದ್ದಾರೆ.

  • ಸೋನಮ್ ಕಪೂರ್ ಗ್ರ್ಯಾಂಡ್ ಬೇಬಿ ಶವರ್‌ಗೆ ದಿನಗಣನೆ: ಗೆಸ್ಟ್ ಲಿಸ್ಟ್ ಔಟ್

    ಸೋನಮ್ ಕಪೂರ್ ಗ್ರ್ಯಾಂಡ್ ಬೇಬಿ ಶವರ್‌ಗೆ ದಿನಗಣನೆ: ಗೆಸ್ಟ್ ಲಿಸ್ಟ್ ಔಟ್

    ಬಾಲಿವುಡ್ ಬ್ಯೂಟಿ ಸೋನಮ್ ಕಪೂರ್ ಮೊದಲ ಮಗುವಿನ ಆಗಮನವಾಗುವ ಖುಷಿಯಲ್ಲಿದ್ದಾರೆ. ಇದೀಗ ಇದೇ ಜುಲೈ 17ಕ್ಕೆ ತಂದೆ ಅನಿಲ್ ಕಪೂರ್ ದಂಪತಿಯ ಸಾರಥ್ಯದಲ್ಲಿ ಸೋನಮ್ ಬೇಬಿ ಶವರ್ ಈವೆಂಟ್ ಮುಂಬೈನಲ್ಲಿ ನಡೆಯಲಿದೆ. ಬಾಲಿವುಡ್‌ನ ಬಿಗ್ ಸ್ಟಾರ್ಸ್‌ ಈ ಕಾರ್ಯಕ್ರಮಕ್ಕೆ ಭಾಗಿಯಾಗಲಿದ್ದಾರೆ. ಯಾರೆಲ್ಲಾ ಅತಿಥಿಗಳು ಕಾರ್ಯಕ್ರಮಕ್ಕೆ ಭಾಗಿಯಾಗುತ್ತಾರೆ ಎಂಬ ಡಿಟೈಲ್ಸ್ ಇಲ್ಲಿದೆ.

    ಬಾಲಿವುಡ್‌ನಲ್ಲಿ ಸಾಕಷ್ಟು ಸಿನಿಮಾಗಳ ಮೂಲಕ ಮೋಡಿ ಮಾಡಿರುವ ನಟಿ ಸೋನಮ್ ಕಪೂರ್, ಮೇ ೮ರಂದು 2018ರಲ್ಲಿ ಆನಂದ್ ಅಹುಜಾ ಅವರ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈಗ ತಾಯ್ತನದ ಖುಷಿಯಲ್ಲಿರುವ ಸೋನಮ್‌ಗೆ ಬೇಬಿ ಶವರ್ ಕಾರ್ಯಕ್ರಮ ಮಾಡಲು ತಂದೆ ಅನಿಲ್ ಕಪೂರ್ ದಂಪತಿ ಭರ್ಜರಿ ಪ್ಲ್ಯಾನ್ ಮಾಡಿದ್ದಾರೆ. ಮುಂಬೈನ ಬಾಂದ್ರಾದಲ್ಲಿ ಅದ್ದೂರಿಯಾಗಿ ಈವೆಂಟ್ ಮಾಡಲು ಭರ್ಜರಿ ತಯಾರಿ ಕೂಡ ನಡೆಯುತ್ತಿದೆ. ಇದನ್ನೂ ಓದಿ:ಈವೆಂಟ್‌ಗೆ ಚಿಯಾನ್ ವಿಕ್ರಮ್ ಎಂಟ್ರಿ: ಆರೋಗ್ಯದ ಕುರಿತು ನಟ ಸ್ಪಷ್ಟನೆ

    ಇದೇ ಜುಲೈ 17ಕ್ಕೆ ಸೋನಮ್ ಕಪೂರ್ ಬೇಬಿ ಶವರ್ ಕಾರ್ಯಕ್ರಮಕ್ಕೆ ದಿನಗಣನೆ ಶುರುವಾಗಿದೆ. ಯಾರೆಲ್ಲಾ ಸೋನಮ್ ಅವರ ಬೇಬಿ ಶವರ್‌ಗೆ ಭಾಗಿಯಾಗುತ್ತಾರೆ ಅನ್ನೋ ಮಾಹಿತಿ ರಿವೀಲ್ ಆಗಿದೆ. ಜಾನ್ವಿ ಕಪೂರ್,ಖುಷಿ ಕಪೂರ್, ಅರ್ಜುನ್ ಕಪೂರ್, ಕರೀಷ್ಮಾ, ಕರೀನಾ ಕಪೂರ್, ಸ್ವರಾ ಭಾಸ್ಕರ್, ಆಲಿಯಾ ಭಟ್, ದೀಪಿಕಾ ಪಡುಕೋಣೆ, ಮಲೈಕಾ ಅರೋರಾ ಈ ಎಲ್ಲಾ ಬಿಟೌನ್‌ ಸ್ಟಾರ್ಸ್‌ ಕಾರ್ಯಕ್ರಮಕ್ಕೆ ಭಾಗಿಯಾಗುತ್ತಿದ್ದಾರೆ.

    2018ರಲ್ಲಿ ಸೋನಮ್ ಅವರ ಮದುವೆಯನ್ನು ಅದ್ದೂರಿಯಾಗಿ ನೆರವೇರಿಸಿದ್ದರು. ಈಗ ಬೇಬಿ ಶವರ್ ಕಾರ್ಯಕ್ರಮವನ್ನ ಇನ್ನು ಗ್ರ್ಯಾಂಡ್ ಆಗಿ ಆಯೋಜಿಸಲು ಭರ್ಜರಿ ತಯಾರಿ ನಡೆಯುತ್ತಿದೆ. ವಿದೇಶದಲ್ಲಿ ಪತಿ ಜತೆ ನೆಲೆಸಿರುವ ಸೋನಮ್‌ಗೆ, ಇತ್ತೀಚೆಗಷ್ಟೇ ಪತಿ ಆನಂದ್ ಅಹುಜಾ ಕುಟುಂಬದವರು ಬೇಬಿ ಶವರ್ ಕಾರ್ಯಕ್ರಮ ಮಾಡಲಾಗಿತ್ತು.

    Live Tv
    [brid partner=56869869 player=32851 video=960834 autoplay=true]

  • ವೈರಲ್ ಆಯ್ತು ಸಂಜನಾ ಗಲ್ರಾನಿ ಬೇಬಿ ಶವರ್ ಸಮಾರಂಭದ ಫೋಟೋಗಳು

    ವೈರಲ್ ಆಯ್ತು ಸಂಜನಾ ಗಲ್ರಾನಿ ಬೇಬಿ ಶವರ್ ಸಮಾರಂಭದ ಫೋಟೋಗಳು

    ಸ್ಯಾಂಡಲ್‌ವುಡ್ ನಟಿ ಸಂಜನಾ ಗಲ್ರಾನಿ ಇತ್ತೀಚೆಗೆ ಸೀಮಂತದ ಸಂಭ್ರಮದ ಕ್ಷಣಗಳನ್ನು ಮತ್ತು ಬೇಬಿ ಬಂಪ್ ಫೋಟೋಶೂಟ್‌ನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದೀಗ ಸಂಜನಾ ಅವರ ಬೇಬಿ ಶವರ್ ಸಮಾರಂಭ ಫೋಟೋಗಳು ಭಾರೀ ವೈರಲ್ ಆಗುತ್ತಿದೆ.

    `ಗಂಡ ಹೆಂಡತಿ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪರಿಚಿತರಾದ ನಟಿ ಸಂಜನಾ, ಬಳಿಕ ಬಹುಭಾಷಾ ನಟಿಯಾಗಿ ಗುರುತಿಸಿಕೊಂಡ್ರು. ಬಳಿಕ ಅಜೀಜ್ ಪಾಷಾ ಅವರೊಂದಿಗೆ ಸಂಜನಾ ವಿವಾಹವಾಗಿದ್ದರು. ಇತ್ತೀಚೆಗೆ ಸೀಮಂತ ಶಾಸ್ತ್ರದ ಸಂಭ್ರಮ ಕ್ಷಣಗಳನ್ನ ಸಂಜನಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಬಳಿಕ ಬೇಬಿ ಬಂಪ್ ಫೋಟೋಗಳು ಕೂಡ ಅಭಿಮಾನಿಗಳ ಗಮನ ಸೆಳೆದಿತ್ತು. ವಿಶ್ವ ಅಮ್ಮಂದಿರ ದಿನದಂದು ಸಂಜನಾ ಅವರ ಬೇಬಿ ಶವರ್ ಸಮಾರಂಭ ನಡೆದಿದೆ. ನಟಿಯ ಸಂಭ್ರಮದ ಕ್ಷಣದ ಫೋಟೋಗಳು ಭಾರೀ ವೈರಲ್ ಆಗುತ್ತಿದೆ.

    ಸಂಜನಾ ಗಲ್ರಾನಿ ಈಗ 9 ತಿಂಗಳ ತುಂಬು ಗರ್ಭಿಣಿಯಾಗಿದ್ದು, ತಮ್ಮ ತಾಯ್ತನದ ಸುಂದರ ಕ್ಷಣಗಳನ್ನು ಅಭಿಮಾನಿಗಳ ಜತೆಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ತಿದ್ದಾರೆ. ಇದೀಗ ಮದರ್ಸ್ ಡೇಯಂದು ಸಂಜನಾ ತಾಯ್ತನದ ಅಮೂಲ್ಯ ಕ್ಷಣಗಳು ವೈರಲ್ ಆಗುತ್ತಿದೆ. ಪತಿ ಜತೆಯಿರೋ ಸಂಜನಾ ಬೇಬಿ ಶವರ್ ಸಮಾರಂಭದ ಫೋಟೋಗಳು ವೈರಲ್ ಆಗುತ್ತಿದೆ.

  • ಸೀಮಂತ ಕಾರ್ಯಕ್ರಮ – ಕೇಕ್ ಕತ್ತರಿಸಿ ಸಂಭ್ರಮಿಸಿದ ಶ್ರುತಿ ಹರಿಹರನ್

    ಸೀಮಂತ ಕಾರ್ಯಕ್ರಮ – ಕೇಕ್ ಕತ್ತರಿಸಿ ಸಂಭ್ರಮಿಸಿದ ಶ್ರುತಿ ಹರಿಹರನ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಶ್ರುತಿ ಹರಿಹರನ್ ಇತ್ತೀಚೆಗೆ ತಾವೂ ಗರ್ಭಿಣಿ ಎಂದು ಅಧಿಕೃತವಾಗಿ ಹೇಳಿಕೊಂಡಿದ್ದರು. ಇದೀಗ ಶ್ರುತಿ ಹರಿಹರನ್ ಅವರು ಸೀಮಂತ ಸಂಭ್ರಮದ ವಿಡಿಯೋವನ್ನು ಪ್ರಕಟಿಸಿದ್ದಾರೆ.

    ನಟಿ ಶ್ರುತಿ ಹರಿಹರನ್ ಅವರು ಬೇಬಿ ಶವರ್ ಕಾರ್ಯಕ್ರಮದ ಕೆಲವು ಫೋಟೋಗಳನ್ನು ಒಂದು ಸ್ಲೈಡ್ ಮಾಡಿ ಆ ವಿಡಿಯೋವನ್ನು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ವಿಡಿಯೋದಲ್ಲಿ ಶ್ರುತಿ ಬಿಳಿ ಬಣ್ಣದ ಗೌನ್ ಧರಿಸಿದ್ದು, ವಿಭಿನ್ನವಾಗಿ ಡಿಸೈನ್ ಆಗಿರುವ ಕೇಕ್ ಕತ್ತರಿಸುವ ಮೂಲಕ ಸಂಭ್ರಮಾಚಾರಣೆ ಮಾಡಿದ್ದಾರೆ. ಜೊತೆಗೆ ಅವರ ಸ್ನೇಹಿತರ ಜೊತೆ ಫೋಟೋಗೆ ಪೋಸ್ಟ್ ಕೊಟ್ಟಿದ್ದು, ಬೇಬಿ ಶವರ್ ಕಾರ್ಯಕ್ರಮವನ್ನು ಸಖತ್ ಎಂಜಾಯ್ ಮಾಡಿದ್ದಾರೆ.

    ಕಾರ್ಯಕ್ರಮದ ವಿಡಿಯೋ ಹಂಚಿಕೊಂಡಿದ್ದು, ಈ ಸಂಭ್ರಮ, ಸಡಗರಕ್ಕೆ ಕಾರಣರಾದ ಸ್ನೇಹಿತರು ಮತ್ತು ಕುಂಟುಂಬದ ಕೆಲವರಿಗೆ ಶ್ರುತಿ ಹರಿಹರನ್ ಧನ್ಯವಾದ ತಿಳಿಸಿದ್ದಾರೆ.

    ಕೆಲವು ದಿನಗಳ ಹಿಂದೆಯಷ್ಟೆ ಶ್ರುತಿ ಬ್ಲರ್ ಆಗಿ ಕ್ಲಿಕ್ಕಿಸಿಕೊಂಡಿರುವ ಫೋಟೋವೊಂದನ್ನು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, “ಈ ಸರ್ಕಸ್‍ಗೆ ನಿನಗೆ ಸ್ವಾಗತ ಪುಟ್ಟ. ನಿನ್ನನ್ನು ನೋಡಲು ನಮಗೆ ಕಾಯಲು ಆಗುತ್ತಿಲ್ಲ. ನಿನ್ನ ತಂದೆ ರಾಮ್ ಕಳಾರಿ ಉತ್ಸುಕರಾಗಿದ್ದಾರೆ” ಎಂದು ಬರೆದುಕೊಂಡಿದ್ದರು. ಈ ಮೂಲಕ ಶ್ರುತಿ ಅವರು ತಾವೂ ಗರ್ಭಿಣಿ ಎಂಬುದನ್ನು ಅಧಿಕೃತವಾಗಿ ಹೇಳಿಕೊಂಡಿದ್ದರು.

    https://www.instagram.com/p/Bz-rVWjJHRH/

    ನಟಿ ಶ್ರುತಿ ಹರಿಹರನ್ ಅವರು ತಾನು ಮದುವೆಯಾಗಿದ್ದೇನೆ ಎನ್ನುವ ವಿಚಾರವನ್ನು ಎಲ್ಲಿಯೂ ಬಹಿರಂಗವಾಗಿ ಹೇಳಿಕೊಂಡಿರಲಿಲ್ಲ. ಆದರೆ ನಟ ಅರ್ಜುನ್ ಸರ್ಜಾ ಅವರ ವಿರುದ್ಧ ಮೀಟೂ ಆರೋಪ ಕೇಳಿ ಬಂದ ಸಂದರ್ಭದಲ್ಲಿ ದೂರು ನೀಡುವಾಗ ಮದುವೆಯಾಗಿದ್ದ ವಿಚಾರ ಬಹಿರಂಗವಾಗಿತ್ತು. ಶ್ರುತಿ ಡ್ಯಾನ್ಸ್ ಮಾಸ್ಟರ್ ಮತ್ತು ಪ್ರಸಿದ್ಧ ಕಲರಿ ಪಟ್ಟು ಕಲಾವಿದರಾಗಿರುವ ರಾಮ್ ಕುಮಾರ್ ಅವರನ್ನು ಮದುವೆಯಾಗಿದ್ದಾರೆ.

    https://www.instagram.com/p/B0DCgkRnLhY/