Tag: ಬೇಬಿ ವೈಆರ್

  • ಅಮ್ಮನ ಜೊತೆ ಬೇಬಿ ವೈಆರ್ ಕ್ಯೂಟ್ ಲುಕ್‍ಗೆ ಫ್ಯಾನ್ಸ್ ಫಿದಾ

    ಅಮ್ಮನ ಜೊತೆ ಬೇಬಿ ವೈಆರ್ ಕ್ಯೂಟ್ ಲುಕ್‍ಗೆ ಫ್ಯಾನ್ಸ್ ಫಿದಾ

    ಬೆಂಗಳೂರು: ಸ್ಯಾಂಡಲ್‍ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಮುದ್ದಾದ ಮಗಳ ಜೊತೆಗಿರುವ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಅಮ್ಮ ಮಗಳ ಈ ಕ್ಯೂಟ್ ಲುಕ್‍ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

    ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಸ್ಯಾಂಡಲ್‍ವುಡ್‍ನ ಕ್ಯೂಟ್ ಕಪಲ್ಸ್. ಇವರ ಮುದ್ದಾದ ಮಗಳ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಲೇ ಇದೆ. ಈಗ ಇದೇ ಸಾಲಿಗೆ ಅಮ್ಮ ಮಗಳ ಮತ್ತೊಂದು ಫೋಟೋ ಸೇರಿಕೊಂಡಿದೆ. ಹೌದು. ಇಂದು ರಾಧಿಕಾ ಪಂಡಿತ್ ತಮ್ಮ ಮಗಳ ಜೊತೆಗಿರುವ ಮುದ್ದಾದ ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ಹಾಕಿದ ನಾಲ್ಕೇ ಗಂಟೆಯಲ್ಲಿ ಬರೋಬ್ಬರಿ 1 ಲಕ್ಷಕ್ಕೂ ಅಧೀಕ ಮಂದಿ ಪೋಸ್ಟ್ ಲೈಕ್ ಮಾಡಿದ್ದಾರೆ.

    https://www.instagram.com/p/ByelbXtgVeD/

    ಫೋಟೋಗೆ ಮುದ್ದಾದ ಕ್ಯಾಪ್ಷನ್ ಹಾಕಿ ರಾಧಿಕಾ ಶೇರ್ ಮಾಡಿದ್ದಾರೆ. ಇವಳು ಹುಟ್ಟಿದ ದಿನದಂದು ನಾನು ಕೂಡ ತಾಯಿಯಾಗಿ ಹುಟ್ಟಿದೆ ಎಂದು ಬರೆದು ಫೋಟೋ ಶೇರ್ ಮಾಡಿ, ಮತ್ತೆ ರಾಧಿಕಾ ಹಾಗೂ ಬೇಬಿ ವೈಆರ್ ಅಭಿಮಾನಿಗಳ ಮನ ಗೆದ್ದಿದ್ದಾರೆ.

    ಈ ಹಿಂದೆ ನಮ್ಮ ಏಂಜೆಲ್ `ಬೇಬಿ ವೈಆರ್’ ಮನೆಗೆ ಬಂದು ಆರು ತಿಂಗಳು ಕಳೆದಿದೆ. ಈ ವಿಶೇಷ ದಿನದಲ್ಲಿ ಅವಳದೊಂದು ಚಿಕ್ಕ ನೋಟ. ಪುತ್ರಿಯ ಮೇಲೆ ನಿಮ್ಮೆಲ್ಲರ ಪ್ರೀತಿ, ಆಶೀರ್ವಾದ ಸದಾ ಇರಲಿ ಎಂದು ರಾಧಿಕಾ ಪಂಡಿತ್ ಇನ್‍ಸ್ಟಾಗ್ರಾಮ್‍ನಲ್ಲಿ ಮಗಳ ಫೋಟೋಶೂಟ್ ವಿಡಿಯೋ ಹಂಚಿಕೊಂಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು.

    https://www.instagram.com/p/ByNE31QgF7K/