Tag: ಬೇಬಿ ಮೂನ್

  • ಗರ್ಭಿಣಿ ಗೆಳತಿ ಜೊತೆಗಿನ ಹಾಟ್ ಫೋಟೋ ಹಂಚಿಕೊಂಡ ಅರ್ಜುನ್ ರಾಂಪಾಲ್

    ಗರ್ಭಿಣಿ ಗೆಳತಿ ಜೊತೆಗಿನ ಹಾಟ್ ಫೋಟೋ ಹಂಚಿಕೊಂಡ ಅರ್ಜುನ್ ರಾಂಪಾಲ್

    ಮುಂಬೈ: ಬಾಲಿವುಡ್ ನಟ ಅರ್ಜುನ್ ರಾಂಪಾಲ್ ಗೆಳತಿ ಜೊತೆಗಿನ ಹಾಟ್ ಆ್ಯಂಡ್ ಸೆಕ್ಸಿ ಫೋಟೋಗಳನ್ನು ಇನ್‍ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ಗೆಳತಿ ಗೈಬ್ರಿಲಾ ದೇಮಿತ್ರಿಯಾದ್ ಜೊತೆಗಿನ ಫೋಟೋಗಳನ್ನು ಇನ್‍ಸ್ಟಾಗ್ರಾಮ್ ನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಗೈಬ್ರಿಲಾ ಗರ್ಭಿಣಿಯಾಗಿದ್ದು, ಬೇಬಿ ಮೂನ್ ಗಾಗಿ ಜೋಡಿ ಮಾಲ್ಡೀವ್ಸ್ ಗೆ ತೆರಳಿ ಎಂಜಾಯ್ ಮಾಡುತ್ತಿದ್ದಾರೆ.

    ಬೇಬಿಮೂನ್ ಫೋಟೋ ಅಪ್ಲೋಡ್ ಮಾಡಿಕೊಂಡಿರುವ ಅರ್ಜುನ್ ರಾಂಪಾಲ್, ನಿಮ್ಮ ದಿನ ಈ ರೀತಿ ಆರಂಭಗೊಂಡರೆ ಯಾವ ದೇವರ ಆಶೀರ್ವಾದಕ್ಕಿಂತ ಕಡಿಮೆ ಇಲ್ಲ ಎಂದು ಬರೆದುಕೊಂಡಿದ್ದಾರೆ. ರಾಂಪಾಲ್ ಮತ್ತು ಗೈಬ್ರಿಲಾ ಇಬ್ಬರು ಲಿವಿಂಗ್ ಟುಗೆದರ್ ನಲ್ಲಿದ್ದು ಇದೂವರೆಗೂ ಮದುವೆ ಆಗಿಲ್ಲ. ಸದ್ಯ ದಿನಗಳು ಚೆನ್ನಾಗಿ ಸಾಗುತ್ತಿವೆ. ಮುಂದಿನ ದಿನಗಳಲ್ಲಿ ಮದುವೆ ಕುರಿತು ಯೋಚಿಸೋಣ ಎಂದು ಜೋಡಿ ಹೇಳಿಕೊಂಡಿದೆ.

    https://www.instagram.com/p/Bw88DIBlDti/

    ಏಪ್ರಿಲ್ 23ರಂದು ಅರ್ಜುನ್ ರಾಂಪಾಲ್ ಗೈಬ್ರಿಲಾ ಜೊತೆಗಿನ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿಕೊಳ್ಳುವ ನಾವಿಬ್ಬರು ರಿಲೇಶನ್‍ಶಿಪ್ ನಲ್ಲಿ ಇದ್ದೇವೆ ಎಂಬುದನ್ನು ಅಭಿಮಾನಿಗಳಿಗೆ ತಿಳಿಸಿದ್ದರು. ಇದಾದ ಬಳಿಕ ಇವರಿಬ್ಬರು ಸಾಲು ಸಾಲು ಫೋಟೋಗಳ್ನು ಅಪ್ಲೋಡ್ ಮಾಡುತ್ತಿದ್ದಾರೆ.

    https://www.instagram.com/p/Bxo8zdahkx7/

  • ರಾಧಿಕಾ ಬೇಬಿ ಮೂನ್ ಫೋಟೋ ವೈರಲ್

    ರಾಧಿಕಾ ಬೇಬಿ ಮೂನ್ ಫೋಟೋ ವೈರಲ್

    ಬೆಂಗಳೂರು: ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಚಂದನವನದ ಯಶ್ ಹಾಗೂ ರಾಧಿಕಾ ಪಂಡಿತ್ ದಂಪತಿ ಬೇಬಿ ಮೂನ್ ಹೋಗಿದ್ದರು. ಸದ್ಯ ರಾಧಿಕಾ ತಮ್ಮ ಬೇಬಿ ಮೂನ್ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿಕೊಳ್ಳುತ್ತಿದ್ದಾರೆ.

    ರಾಧಿಕಾ ಅವರನ್ನು ಯಶ್ ಮಾಲ್ಡೀವ್ಸ್ ಗೆ ಪ್ರವಾಸಕ್ಕಾಗಿ ಕರೆದುಕೊಂಡು ಹೋಗಿದ್ದರು. ಸದಾ ಚಿತ್ರೀಕರಣದಲ್ಲಿ ಬುಸ್ಯಿ ಆಗಿರುವ ಯಶ್ ಸಣ್ಣ ಬ್ರೇಕ್ ತೆಗೆದುಕೊಂಡು ಪತ್ನಿಯೊಂದಿಗೆ ಸಮುದ್ರ ತೀರದಲ್ಲಿ ಸುತ್ತಾಡಿದ್ದಾರೆ. ಈ ಮೂಲಕ ಗರ್ಭಿಣಿ ಪತ್ನಿಯ ಆಸೆ ತೀರಿಸಿದ್ದಾರೆ. ಇದನ್ನೂ ಓದಿ: ಹೇಗಿದೆ ಗರ್ಭಿಣಿ ರಾಧಿಕಾ ಆಹಾರ ಶೈಲಿ

    ಬೇಬಿ ಮೂನ್ ಸಂತಸದ ಕ್ಷಣಗಳ ಫೋಟೋಗಳನ್ನು ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿರುವ ರಾಧಿಕಾ ಪಂಡಿತ್, ಸದ್ಯ ನಾವು ಬೇಬಿ ಮೂನ್ ನಲ್ಲಿದ್ದು, ಇಲ್ಲಿ ಅವರು, ನಾನು, ಸಮುದ್ರ ಮತ್ತು ನಾವು ಮೂವರು ಎಂದು ಬರೆದುಕೊಂಡಿದ್ದಾರೆ. ಫೋಟೋದಲ್ಲಿ ರಾಧಿಕಾ ಪಂಡಿತ್, ಯಶ್ ಕೈ ಕೈ ಹಿಡಿದು ನಡೆದುಕೊಂಡು ಹೋಗುತ್ತಿರುವ ದೃಶ್ಯ ಕಾಣಬಹುದಾಗಿದೆ. ಮತ್ತೊಂದು ಪೋಸ್ಟ್ ನಲ್ಲಿ ಬೇಬಿ ಮೂನ್ ಫೋಟೋಗಳನ್ನು ಶೀಘ್ರದಲ್ಲೇ ನಿರೀಕ್ಷಿಸಿ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಶೂಟಿಂಗ್ ಸೆಟ್ ನಿಂದ ಸನ್ ಗ್ಲಾಸ್ ಕದ್ದ ರಾಧಿಕಾ ಪಂಡಿತ್!

    ರಾಧಿಕಾ ಅವರ ಫೋಟೋಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದು, ಲೈಕ್ ಕಮೆಂಟ್ ಮಾಡಿ ಶುಭ ಹಾರೈಸಿದ್ದಾರೆ. ಅಂದಹಾಗೇ ಹಾಲಿವುಡ್ ಹಾಗೂ ಬಾಲಿವುಡ್ ನಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿದ್ದ ಬೇಬಿ ಮೂನ್ ಯೋಚನೆ ಈ ಮೂಲಕ ಸ್ಯಾಂಡಲ್‍ವುಡ್‍ಗೂ ಪರಿಚಯವಾಗಿದೆ. ಬಾಲಿವುಡ್‍ನ ಹಲವು ಜೋಡಿಗಳು ಕೂಡ ಮಾಲ್ಡೀವ್ಸ್ ದ್ವೀಪವನ್ನೇ ಬೇಬಿ ಮೂನ್‍ಗೆ ಆಯ್ಕೆ ಮಾಡಿಕೊಳ್ಳುತ್ತಾರೆ. ಅಲ್ಲಿನ ನಿಸರ್ಗ, ಸುಂದರ ತಾಣಗಳು ಮಗುವಿನ ಆರೋಗ್ಯಕ್ಕೆ ಉತ್ತಮ ಎನ್ನಲಾಗಿದೆ. ಇದನ್ನೂ ಓದಿ: ಸುದೀಪ್ ದಂಪತಿಗೆ ಧನ್ಯವಾದ ತಿಳಿಸಿದ್ರು ರಾಧಿಕಾ ಪಂಡಿತ್

    ಯಾವಾಗಲೂ ಅಭಿಮಾನಿಗಳೊಂದಿಗೆ ತಮ್ಮ ಸಂತಸ ಕ್ಷಣಗಳನ್ನು ಹಂಚಿಕೊಳ್ಳುವ ಯಶ್-ರಾಧಿಕಾ ಜೋಡಿ ತಮ್ಮ ಜೀವನದ ಬಹುಮುಖ್ಯ ಸಮಯವನ್ನು ಹಂಚಿಕೊಂಡಿದ್ದಾರೆ. ಇತ್ತ ಯಶ್ ಸದ್ಯ `ಮೈ ನೇಮ್ ಇಸ್ ಕಿರಾತಕ’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಬಹು ನಿರೀಕ್ಷಿತ ಕೆಜಿಎಫ್ ಚಿತ್ರ ನವೆಂಬರ್ ನಲ್ಲಿ ಬಿಡುಗಡೆಗೆ ಸಿದ್ಧವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv