Tag: ಬೇಜವಾಬ್ದಾರಿ

  • ಜನರ ಬೇಜವಾಬ್ದಾರಿತನದಿಂದ ಕೊರೊನಾ ಹೆಚ್ಚಾಗುತ್ತಿದೆ: ಈಶ್ವರಪ್ಪ

    ಜನರ ಬೇಜವಾಬ್ದಾರಿತನದಿಂದ ಕೊರೊನಾ ಹೆಚ್ಚಾಗುತ್ತಿದೆ: ಈಶ್ವರಪ್ಪ

    ಶಿವಮೊಗ್ಗ: ಕೇಂದ್ರ ಹಾಗೂ ರಾಜ್ಯ ಸರ್ಕಾರ ಎಷ್ಟೇ ಎಚ್ಚರಿಕೆ ಕ್ರಮ ವಹಿಸಿದರೂ ದೇಶ ಹಾಗೂ ರಾಜ್ಯದಲ್ಲಿ ದಿನೇ ದಿನೇ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿದೆ. ಇದಕ್ಕೆ ಜನರ ಬೇಜವಾಬ್ದಾರಿತನ ಸಹ ಕಾರಣವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

    ಶಿವಮೊಗ್ಗದಲ್ಲಿ ಇಂದು ಮಾಧ್ಯಮದವರ ಜೊತೆ ಮಾತನಾಡಿದ ಸಚಿವರು, ಕೊರೊನಾ ಬಂದ ಆರಂಭದ ದಿನದಿಂದಲೂ ಜನತೆಗೆ ಜಾಗೃತೆಯಿಂದಿರಿ, ಎಚ್ಚರಿಕೆ ವಹಿಸಿ ಅಂತ ನೂರು ಬಾರಿ ಹೇಳಿದರೂ ಗಮನಿಸಿಲಿಲ್ಲ ಅಂದರೆ ಏನು ಮಾಡುವುದಕ್ಕೆ ಆಗುತ್ತೆ ಎಂದು ಗರಂ ಆದರು.

    ಶಿವಮೊಗ್ಗ ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ತರಲು ಜಿಲ್ಲಾಡಳಿತ ಸಾಕಷ್ಟು ಶ್ರಮ ಹಾಕುತ್ತಿದೆ. ಜಿಲ್ಲೆಯಲ್ಲಿ ಅಲ್ಲೊಂದು ಇಲ್ಲೊಂದು ಏರಿಯಾದಲ್ಲಿ ಕೊರೊನಾ ಜಾಸ್ತಿ ಆಗುತ್ತಿದೆ. ಜನರಿಗೆ ನಾನು ಮತ್ತೊಮ್ಮೆ ಪ್ರಾರ್ಥನೆ ಮಾಡುತ್ತೇನೆ. ನಿಮ್ಮ ಬೇಜವಾಬ್ದಾರಿತನ ನಿಮಗೆ ವೈಯಕ್ತಿಕವಾಗಿ ತೊಂದರೆ ಆಗುತ್ತೆ. ಕುಟುಂಬಕ್ಕೆ ಹಾಗೂ ಸಮಾಜಕ್ಕೆ ತೊಂದರೆ ಆಗುತ್ತೆ. ಅದಷ್ಟು ಸಾಮಾಜಿಕ ಅಂತರ ಕಾಪಾಡಿಕೊಂಡು ಮಾಸ್ಕ್ ಧರಿಸಿಕೊಂಡು ಕೊರೊನಾ ಓಡಿಸುಲು ಪ್ರಯತ್ನಿಸಬೇಕಿದೆ ಎಂದು ಸಚಿವರು ತಿಳಿಸಿದರು.

  • ಉಚಿತ ತರಕಾರಿಗಾಗಿ ಮುಗಿಬಿದ್ದ ಜನ – ಸ್ಥಳದಲ್ಲಿಯೇ ಇದ್ದರೂ ಕ್ಯಾರೇ ಎನ್ನದ ತಹಶೀಲ್ದಾರ್

    ಉಚಿತ ತರಕಾರಿಗಾಗಿ ಮುಗಿಬಿದ್ದ ಜನ – ಸ್ಥಳದಲ್ಲಿಯೇ ಇದ್ದರೂ ಕ್ಯಾರೇ ಎನ್ನದ ತಹಶೀಲ್ದಾರ್

    ಯಾದಗಿರಿ: ಜಿಲ್ಲೆಯಲ್ಲಿ ಇಷ್ಟು ದಿನ ಜನಸಾಮಾನ್ಯರು ಲಾಕ್‍ಡೌನ್ ನಿಯಮವನ್ನು ಉಲ್ಲಂಘನೆ ಮಾಡುತ್ತಿದ್ದರು. ಆದರೆ ಈಗ ಅಧಿಕಾರಿಗಳು ಸಹ ಲಾಕ್‍ಡೌನ್‍ಗೆ ಕ್ಯಾರೇ ಮಾಡುತ್ತಿಲ್ಲ ಎನ್ನುವಂತಾಗಿದೆ.

    ಹೌದು. ಯಾದಗಿರಿ ಜಿಲ್ಲೆಯ ಸುರಪುರ ತಹಶೀಲ್ದಾರ್ ನಿಂಗಣ್ಣ ಬಿರಾದಾರ ಅವರು ಜನ ಗುಂಪು ಗುಂಪಾಗಿ ಒಬ್ಬರಿಗೊಬ್ಬರು ಅಂಟಿಕೊಂಡು ನಿಂತಿದ್ದರೂ ಈ ಬಗ್ಗೆ ತಲೆ ಕೆಡಿಸಿಕೊಳ್ಳದಿರುವುದು ಅವರ ಬೇಜವಬ್ದಾರಿಯನ್ನು ತೋರಿಸುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

    ಇಂದು ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದ ಶಾಸಕರ ಕಚೇರಿಯಲ್ಲಿ ಬಡ ಜನರಿಗೆ ಉಚಿತ ತರಕಾರಿ ಹಂಚುವ ಕಾರ್ಯಕ್ರಮವಿತ್ತು. ನಿಗಧಿ ವೇಳೆಗಿಂತ ಮುಂಚೆಯೇ ಜನರು ತರಕಾರಿಗಾಗಿ ಮುಗಿಬಿದ್ದಿದ್ದರು. ಆಗಿನ್ನು ಶಾಸಕ ಶರಣಬಸಪ್ಪ ದರ್ಶನಾಪುರ ಸ್ಥಳಕ್ಕೆ ಬಂದಿರಲಿಲ್ಲ, ಇದೇ ಸಮಯದಲ್ಲಿ ಸ್ಥಳದಲ್ಲಿದ್ದ ತಹಶೀಲ್ದಾರ್‍ರು ಜನರು ಸಾಮಾಜಿಕ ಅಂತರ ಕಾಪಾಡದ ದೃಶ್ಯ ಕಣ್ಣಿಗೆ ಬಿದ್ದರೂ ಈ ಬಗ್ಗೆ ಜನರಿಗೆ ಏನು ಹೇಳಲಿಲ್ಲ. ಆದರೆ ಸ್ಥಳಕ್ಕೆ ಬಂದ ಶಾಸಕರು ಜನರಿಗೆ ಬುದ್ಧಿ ಹೇಳಿ ಸಾಮಾಜಿಕ ಅಂತರ ಕಾಪಾಡುವಂತೆ ಮನವೊಲಿಸಿದರು.

    ತಹಶೀಲ್ದಾರ್‍ರ ವಿರುದ್ಧ ಅನೇಕ ಆರೋಪಗಳನ್ನು ಜಿಲ್ಲೆಯಲ್ಲಿ ಕೇಳಿಬರುತ್ತಿವೆ. ಕೆಲ ಪಡಿತರ ಅಂಗಡಿಗಳ ಅಕ್ರಮದ ಬಗ್ಗೆ, ಲಾಕ್‍ಡೌನ್ ಮಧ್ಯೆಯೂ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ಬಗ್ಗೆ ಗೊತ್ತಿದ್ದರೂ ಕ್ರಮ ಕೈಗೊಳ್ಳದ ಸುರಪುರ ತಹಶೀಲ್ದಾರ್ ಸುಮ್ಮನ್ನಿದ್ದಾರೆ ಎಂದು ಜನರು ಆರೋಪಿಸಿದ್ದಾರೆ.