Tag: ಬೆಳ್ಳಿ ರಥ

  • ಬೆಳ್ಳಿ ರಥದಲ್ಲಿ ಅಪ್ಪು ಭಾವಚಿತ್ರ – ಅಭಿಮಾನಿಗಳಿಂದ ಮೆರವಣಿಗೆ

    ಬೆಳ್ಳಿ ರಥದಲ್ಲಿ ಅಪ್ಪು ಭಾವಚಿತ್ರ – ಅಭಿಮಾನಿಗಳಿಂದ ಮೆರವಣಿಗೆ

    ಚಿಕ್ಕಬಳ್ಳಾಪುರ: ಬೆಳ್ಳಿ ರಥದಲ್ಲಿ ಪುನೀತ್ ಭಾವಚಿತ್ರ ಇರಿಸಿ ಊರೆಲ್ಲಾ ಮೆರವಣಿಗೆ ಮಾಡಿ ಸಡಗರ ಸಂಭ್ರಮದಿಂದ ಪುನೀತ್ ರಾಜ್ ಕುಮಾರ್ ಹುಟ್ಟು ಹಬ್ಬವನ್ನು ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಮೇಲೂರು ಗ್ರಾಮದಲ್ಲಿ ಸಂಭ್ರಮದಿಂದ ಆಚರಣೆ ಮಾಡಲಾಗಿದೆ.

    ರಾಜಕುಮಾರ್ ಅಭಿಮಾನಿ ಬಳಗದ ವತಿಯಿಂದ ಗ್ರಾಮದ ಚೆಂಗಲರಾಯರೆಡ್ಡಿ ವೃತ್ತದಲ್ಲಿ ಪುನೀತ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ವಿಶೇಷ ಪೂಜೆ ಸಲ್ಲಿಸಿ ಅನ್ನಸಂತರ್ಪಣೆ ಮಾಡಲಾಗಿದೆ. ಕೇಕ್ ಕತ್ತರಿಸಿ ಪುನೀತ್ ರಾಜಕುಮಾರ್ ಹುಟ್ಟು ಹಬ್ಬ ಆಚರಿಸಿದ್ದಾರೆ. ತದನಂತರ ಗ್ರಾಮದ ಶಾಲೆಯ ವಿದ್ಯಾರ್ಥಿಗಳಿಗೆ ಸಿಹಿ ಹಂಚಿ ಹುಟ್ಟು ಹಬ್ಬ ಆಚರಿಸಿದ್ದಾರೆ. ಇದನ್ನೂ ಓದಿ: ‘ಜೇಮ್ಸ್’ ಸಿನಿಮಾ ಫಸ್ಟ್ ಹಾಫ್ ಹೇಗಿದೆ? – ಕಣ್ಣಿಗೆ ಹಬ್ಬ, ಮನಸ್ಸಿಗೆ ಬೇಸರ

    ಪೂಜೆ ಸಲ್ಲಿಸಿ ಪುನೀತ್ ರಾಜಕುಮಾರ್ ಅವರನ್ನು ನೆನೆದು ಇಡೀ ಗ್ರಾಮಸ್ಥರು ಪುನೀತ್ ಆಗಲಿಕೆಗೆ ಕಂಬನಿ ಮಿಡಿದಿದ್ದಾರೆ. ಪುನೀತ್ ಅಭಿನಯದ ಜೇಮ್ಸ್ ಚಿತ್ರ ಭರ್ಜರಿ ಪ್ರದರ್ಶನ ಕಾಣಲಿ ಅಂತ ಗ್ರಾಮದ ಅಭಿಮಾನಿಗಳು ಆಶಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಹ್ಯಾಪಿ ಬರ್ತ್ ಡೇ ಅಪ್ಪು : ದಕ್ಷಿಣದ ಸಿನಿತಾರೆಯರ ಭಾವುಕ ಸಂದೇಶ

  • ಮಾದಪ್ಪನಿಗೆ ಬೆಳ್ಳಿ ಕೊಡ್ತೀನಿ ಅಂದು ಆಯ್ತು 2 ವರ್ಷ- ಮಲೆಮಾದೇಶ್ವರನನ್ನೇ ಮರೆತ್ರಾ ಸಿದ್ದರಾಮಯ್ಯ?

    ಮಾದಪ್ಪನಿಗೆ ಬೆಳ್ಳಿ ಕೊಡ್ತೀನಿ ಅಂದು ಆಯ್ತು 2 ವರ್ಷ- ಮಲೆಮಾದೇಶ್ವರನನ್ನೇ ಮರೆತ್ರಾ ಸಿದ್ದರಾಮಯ್ಯ?

    ಚಾಮರಾಜನಗರ: ಪವಾಡ ಪುರುಷ, ಏಳು ಬೆಟ್ಟಗಳ ಒಡೆಯ ಹೀಗೆ ಹಲವು ಹೆಸರುಗಳಿಂದ ಕರೆಯುವ ಮಲೆಮಹದೇಶ್ವರ ಸ್ವಾಮಿಗೆ ಭಕ್ತರು ಹಲವು ಹರಕೆಗಳನ್ನು ಹೊತ್ತುಕೊಂಡು ಬಳಿಕ ತೀರಿಸುತ್ತಾರೆ. ಒಂದು ವೇಳೆ ಹರಕೆ ತೀರಿಸದೇ ಇದ್ದರೆ ತೊಂದರೆಗಳನ್ನು ಅನುಭವಿಸುತ್ತಾರೆ ಎಂದು ಹೇಳುತ್ತಾರೆ. ಅದೇ ರೀತಿ ಇದೀಗ ರಾಜ್ಯದ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಅವರು ಹರಕೆ ತೀರಿಸದೇ ಹಲವು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ.

    ರಾಜಕಾರಣಿಗಳಿಗೂ ಚಾಮರಾಜನಗರಕ್ಕೂ ಎಣ್ಣೆ-ಸೀಗೆಕಾಯಿ ಸಂಬಂಧ. ಚಾಮರಾಜನಗರ ಅಂದರೆ ಸಾಕು ರಾಜಕಾರಣಿಗಳು ಮಾರುದ್ದ ದೂರ ಓಡುತ್ತಾರೆ. ಇಲ್ಲಿಗೆ ಹೋದರೆ 6 ತಿಂಗಳಲ್ಲಿ ಅಧಿಕಾರ ಹೋಗುತ್ತದೆ ಅನ್ನೋ ಮಾತು ಬಹುಕಾಲದಿಂದಲೂ ಇದೆ. ಈ ಹಿಂದೆ ಜೆ.ಎಚ್ ಪಟೇಲ್ ಆದಿಯಾಗಿ ಬಹುತೇಕ ಸಿಎಂಗಳು ಚಾಮರಾಜನಗರ ಪಟ್ಟಣಕ್ಕೆ ಭೇಟಿ ನೀಡುವುದನ್ನು ತಪ್ಪಿಸಿಕೊಂಡಿದ್ದರು.

    ಕುಮಾರಸ್ವಾಮಿ ತಮ್ಮ ಅಧಿಕಾರಾವಧಿಯ ಕಡೆ ದಿನಗಳಲ್ಲಿ ಚಾಮರಾಜನಗರಕ್ಕೆ ಭೇಟಿ ನೀಡಿದ್ದರು. ಕಾಕತಾಳೀಯ ಎಂಬಂತೆ ಅವರು ಮತ್ತೆ ಅಧಿಕಾರದಲ್ಲಿ ಮುಂದುವರಿಯಲಿಲ್ಲ. ಆದರೆ ಇದೆಲ್ಲವನ್ನು ಮಾಜಿ ಸಿಎಂ ಸಿದ್ದರಾಮಯ್ಯ ಹುಸಿ ಮಾಡಿದ್ದರು. ಸಿದ್ದರಾಮಯ್ಯ ಚಾಮರಾಜನಗರ ಪಟ್ಟಣಕ್ಕೆ 10 ಬಾರಿ, ಜಿಲ್ಲೆಗೆ 23 ಬಾರಿ ಭೇಟಿ ಕೊಟ್ಟಿದ್ದರು. ಆದರೆ ಸಿದ್ದರಾಮಯ್ಯ ಅಂದು ಭೇಟಿ ನೀಡಿದಾಗ ಮಲೆಮಾದಪ್ಪನಿಗೆ ಹರಕೆ ಹೊತ್ತಿದ್ದು ಅದನ್ನು ಇಂದಿಗೂ ತೀರಿಸಿಲ್ಲ.

    ಮಾದಪ್ಪನಿಗೆ ಬೆಳ್ಳಿ ರಥ ಮಾಡಿಸಲು ನಾನು ನನಗೆ ಬಂದಿರುವ ಬೆಳ್ಳಿ ಉಡುಗೊರೆಗಳನ್ನು ನೀಡುತ್ತೇನೆ ಎಂದು ಎರಡು ವರ್ಷಗಳ ಹಿಂದೆ ಸಿಎಂ ಆಗಿದ್ದ ವೇಳೆ ಸಿದ್ದರಾಮಯ್ಯ ಹೇಳಿದ್ದರು. ಆದರೆ ಎರಡು ವರ್ಷಗಳು ಕಳೆದರೂ ಮಾದಪ್ಪನಿಗೆ ರಥ ಮಾಡಿಸಲು ಸಿದ್ದರಾಮಯ್ಯ ಅವರು ಬೆಳ್ಳಿಯನ್ನು ಮಾತ್ರ ನೀಡಿಲ್ಲ. ಹಾಗಾಗಿ ಸಿದ್ದರಾಮಯ್ಯ ಇದೀಗ ಮಾದಪ್ಪನ ಕೆಂಗಣ್ಣಿಗೆ ಗುರಿಯಾದಂತೆ ಕಾಣುತ್ತಿದೆ ಎಂದು ದೇವಾಲಯದ ಅರ್ಚಕ ಹೇಳುತ್ತಾರೆ.

    ಎರಡು ವರ್ಷಗಳ ಹಿಂದೆ ಬೆಳ್ಳಿ ರಥ ಮಾಡಿಸೋ ಪ್ರಸ್ತಾವನೆ ಇಟ್ಟಾಗ ತಾನು ಬೆಳ್ಳಿ ಕೊಡುತ್ತೇನೆ. ನೀವು ರಥ ಮಾಡಿಸಿ ಎಂದು ಸಿದ್ದರಾಮಯ್ಯ ಹೇಳಿದ್ದರು. ಮಾದಪ್ಪನಿಗೆ ಬೆಳ್ಳಿಯ ರಥ ಮಾಡಿಸಲು ಮರದ ರಥ ತಯಾರಾಗಿದ್ದು ಅದಕ್ಕೆ ಬೆಳ್ಳಿಯ ಕವಚ ಹಾಕೋದಷ್ಟೇ ಬಾಕಿ ಇದೆ. ಆದರೆ ಸಿದ್ದರಾಮಯ್ಯ ಹರಕೆ ಮಾತ್ರ ನೀಡಿಲ್ಲ. ಇದರಿಂದಲೇ ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲುಂಡರು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಕಳೆದುಕೊಂಡಿತು. ದೋಸ್ತಿ ಸರ್ಕಾರದಲ್ಲೂ ಸಮಸ್ಯೆ ಆಯ್ತು ಅನ್ನೋ ಮಾತುಗಳು ಕೆಳಿ ಬರುತ್ತಿದೆ ಎಂದು ದೇಗುಲದ ಆಡಳಿತ ಕಾರ್ಯದರ್ಶಿ ಅನಂತ್ ಪ್ರಸಾದ್ ಹೇಳಿದ್ದಾರೆ.

    ಅಧಿಕಾರದಲ್ಲಿದ್ದಾಗ ಸಿದ್ದರಾಮಯ್ಯ ಚಾಮರಾಜನಗರದ ಬಗ್ಗೆ ಮಾತನಾಡಿದ್ದೇ ಮಾತನಾಡಿದ್ದು. ಆದರೆ ಅಧಿಕಾರ ಹೋಗಿ ಎರಡು ವರ್ಷವಾಗ್ತಾ ಬಂದರೂ ತಾನು ಕೊಟ್ಟಿದ್ದ ಮಾತು ಉಳಿಸಿಕೊಂಡಿಲ್ಲ. ಈ ಮೂಲಕ ಸಿದ್ದರಾಮಯ್ಯ ಮಲೆಮಾದಪ್ಪನನ್ನೇ ಮರೆತ್ರಾ ಅನ್ನೋ ಚರ್ಚೆ ಎದ್ದಿದೆ.

  • ಶಾಸಕರನ್ನು ಬೆಳ್ಳಿ ರಥದಲ್ಲಿ ಮೆರವಣಿಗೆ ಮಾಡಿಸಿದ ಬೆಂಬಲಿಗರು!

    ಶಾಸಕರನ್ನು ಬೆಳ್ಳಿ ರಥದಲ್ಲಿ ಮೆರವಣಿಗೆ ಮಾಡಿಸಿದ ಬೆಂಬಲಿಗರು!

    ಚಿಕ್ಕಬಳ್ಳಾಪುರ: ಎರಡನೇ ಬಾರಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಡಾ.ಕೆ.ಸುಧಾಕರ್ ಅವರನ್ನ ಬೆಳ್ಳಿ ರಥದಲ್ಲಿ ಮೆರವಣಿಗೆ ಮಾಡಿಸುವುದರ ಮೂಲಕ ಶಾಸಕ ಸುಧಾಕರ್ ಬೆಂಬಲಿಗರು ವಿಶೇಷ ಸನ್ಮಾನ ನೇರವೇರಿಸಿದ್ದಾರೆ.

    ಚಿಕ್ಕಬಳ್ಳಾಪುರ ತಾಲೂಕು ನಂದಿ ಗ್ರಾಮದ ವೃತ್ತದಿಂದ ಶ್ರೀ ಭೋಗನಂಧಿಶ್ವರ ದೇವಾಲಯದ ಮುಂಭಾಗದವರೆಗೂ ಶಾಸಕ ಸುಧಾಕರ್ ಹಾಗೂ ಅವರ ತಂದೆ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಕೇಶವರೆಡ್ಡಿ ಅವರನ್ನು ಕುಳ್ಳಿರಿಸಿ ಸುಧಾಕರ್ ಬೆಂಬಲಿಗರು ಬೆಳ್ಳಿ ರಥದಲ್ಲಿ ಮೆರವಣಿಗೆ ನಡೆಸಿದರು.

    ಅಂದ ಹಾಗೆ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಎರಡನೇ ಬಾರಿ ಮರು ಆಯ್ಕೆಯಾಗುವ ಮೂಲಕ ಇತಿಹಾಸ ಸೃಷ್ಟಿಸಿರುವ ಶಾಸಕ ಸುಧಾಕರ್ ಗೆ ಸುಧಾಕರ್ ಬೆಂಬಲಿಗರು ಸನ್ಮಾನ ಕಾರ್ಯಕ್ರಮ ಆಯೋಜಿಸಿದ್ರು. ಹೀಗಾಗಿ ಶ್ರೀ ಭೋಗನಂಧಿಶ್ವರ ದೇಗುಲಕ್ಕೆ ಭೇಟಿ ನೀಡಿದ ಶಾಸಕ ಸುಧಾಕರ್ ಶ್ರೀ ಭೋಗನಂದೀಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಶಾಸಕ ಸುಧಾಕರ್ ಗೆ ವಿಶೇಷ ಸನ್ಮಾನ ನೇರವೇರಿಸಿದರು. ಇದನ್ನೂ ಓದಿ: ಜೆಡಿಎಸ್ ಮಂತ್ರಿಗಳು ಈಗ ಹೊಸ ಬಟ್ಟೆ ಹಾಕ್ಕೊಂಡು ಓಡಾಡ್ತಿದ್ದಾರೆ- ಸಿದ್ದರಾಮಯ್ಯ ಪರ ಶಾಸಕ ಸುಧಾಕರ್ ಬ್ಯಾಟಿಂಗ್

    ಎರಡನೇ ಬಾರಿ ಶಾಸಕರಾಗಲಿ ಹಾಗೂ ಅತೀ ಹೆಚ್ಚಿನ ಬಹುಮತದಿಂದ ಆಯ್ಕೆಯಾಗಲಿ ಅಂತ ಭೋಗನಂದೀಶ್ವರನಿಗೆ ಹರಕೆ ಹೊತ್ತಿಕೊಂಡಿದ್ದ ಬೆಂಬಲಿಗರು, ಹರಕೆಯಂತೆ ಇಂದು 1001 ತೆಂಗಿನಕಾಯಿ ಹೊಡೆಯುವುದರ ಮೂಲಕ ತಮ್ಮ ಹರಕೆ ತೀರಿಸಿಕೊಂಡರು. ಮತ್ತೊಂದೆಡೆ ಅನ್ನಸಂತರ್ಪಣೆ ಕೂಡ ಆಯೋಜನೆ ಮಾಡಿ ಶಾಸಕ ಸುಧಾಕರ್ ಗೆ ಸಚಿವ ಸ್ಥಾನ ಸಿಗಲಿ ಅಂತ ದೇವರಿಗೆ ಮೊರೆಯಿಟ್ಟಿರು.