ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ (Social Media) ಮಸೀದಿ (Mosque) ಬಗ್ಗೆ ಅಪಪ್ರಚಾರ ಮಾಡಿರೋ ಆರೋಪದಲ್ಲಿ ಮುಸ್ಲಿಂ ಮುಖಂಡನ ವಿರುದ್ಧವೇ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ (Bellare) ಮಸೀದಿ ಆಡಳಿತ ಪೊಲೀಸ್‌ಗೆ ದೂರು ನೀಡಿದೆ.
ಬೆಳ್ಳಾರೆಯ ಇಬ್ರಾಹಿಂ ಖಲೀಲ್ ಎಂಬಾತ ತನ್ನ ಫೇಸ್‌ಬುಕ್ ಪೇಜ್‌ನಲ್ಲಿ ಬೆಳ್ಳಾರೆ ಮಸೀದಿಯಲ್ಲಿ ಭಯೋತ್ಪಾದನೆ ಚಟುವಟಿಕೆ ನಡೆಯುತ್ತಿದೆ ಎಂದು ಪೋಸ್ಟ್ ಮಾಡಿದ್ದ. ಸುಳ್ಳು ದ್ವೇಷದ ಬರಹಗಳನ್ನು ಸಾಮಾಜಿಕ ಜಾಲತಾಣದಲ್ಲಿ ಖಲೀಲ್ ಬರೆಯುತ್ತಿದ್ದಾನೆ. ಪಂಗಡ ಮತ್ತೆ ಜಾತಿಗಳ ನಡುವೆ ವೈಷಮ್ಯ, ವೈರಾಗ್ಯ, ಕೋಮು ಪ್ರಚೋದನೆ ಬರುವ ರೀತಿಯಲ್ಲಿ ಬರೆದಿದ್ದಾನೆ ಎಂದು ಜಮಾಅತ್ ಅಧ್ಯಕ್ಷ ಯುಹೆಚ್ ಅಬೂಬಕ್ಕರ್ ಹಾಜಿ ದೂರು ನೀಡಿದ್ದಾರೆ. ಇದನ್ನೂ ಓದಿ: 1 ಲಕ್ಷ ಕೋಟಿ ಲಾಸ್‌ನಲ್ಲಿರುವ 33 ಕಂಪನಿಗಳು ಚುನಾವಣಾ ಬಾಂಡ್‌ಗೆ 570 ಕೋಟಿ ಹಣ ನೀಡಿವೆ – ಪ್ರಿಯಾಂಕ್ ಖರ್ಗೆ
ಪ್ರವೀಣ್ ನೆಟ್ಟಾರು ಹತ್ಯೆಯನ್ನೂ ಉಲ್ಲೇಖಿಸಿ ಬೆಳ್ಳಾರೆ ಮಸೀದಿಗೆ ತಳುಕು ಹಾಕಿ ಖಲೀಲ್ ಪೋಸ್ಟ್ ಮಾಡಿದ್ದಾನೆ. ಹೀಗಾಗಿ ಮಸೀದಿ ಆಡಳಿತ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ. ಈ ಮಧ್ಯೆ ಇಬ್ರಾಹಿಂ ಖಲೀಲ್ ಪ್ರತಿದೂರು ನೀಡಿದ್ದು, ತನಗೆ ಜೀವ ಬೆದರಿಕೆ ಇದೆ. ಬೆಳ್ಳಾರೆಯ ಜಮಾಲ್ ಮತ್ತು ಅಝರುದ್ದೀನ್ ಎಂಬವರಿಂದ ಜೀವ ಬೆದರಿಕೆ ಇದೆ. 2018ರಿಂದ ನನಗೆ ಕೊಲೆ ಬೆದರಿಕೆ ಹಾಕುತ್ತಿದ್ದಾರೆ. ನನಗೆ ಪರಿಚಯವಿಲ್ಲದ ನಂಬರ್‌ನಿಂದ ಕಾಲ್‌ಗಳು ಬರುತ್ತಿದೆ. ಸೆ.27ರಂದು ನಾನು ಬೆಳ್ಳಾರೆಗೆ ಹೋಗಿದ್ದಾಗ ನನ್ನ ಬೈಕನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ. ಇವರಿಬ್ಬರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖ ಮಾಡಿದ್ದಾನೆ. ಇದನ್ನೂ ಓದಿ: 136 ಶಾಸಕರಿಗೆ 1 ರೂಪಾಯಿ ಅನುದಾನ ಕೊಟ್ಟಿಲ್ಲ, ಇನ್ನೂ ಚನ್ನಪಟ್ಟಣಕ್ಕೆ 500 ಕೋಟಿ ಎಲ್ಲಿಂದ ಬರುತ್ತೆ?- ನಿಖಿಲ್
ಮಂಗಳೂರು: ಖೇಲೋ ಇಂಡಿಯಾ (Khelo India) ರಾಷ್ಟ್ರ ಮಟ್ಟದ ಕಬಡ್ಡಿ (Kabaddi) ಪಂದ್ಯಾಟಕ್ಕೆ ಆಯ್ಕೆಯಾದ ಬೆಳ್ಳಾರೆಯ (Bellare) ಕೆಪಿಎಸ್‌ನ ಇಬ್ಬರು ವಿದ್ಯಾರ್ಥಿಗಳು ಮತ್ತು ಕ್ರೀಡಾಧಿಕಾರಿಯನ್ನು ನಾಗರಿಕರು ಮೆರವಣಿಗೆಯ ಮೂಲಕ ಸಂಸ್ಥೆಗೆ ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ.
ತೆಲಂಗಾಣದಲ್ಲಿ ನಡೆದ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಕರ್ನಾಟಕ (Karnataka) ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದ್ದು, ರಾಜ್ಯದ ಕಬಡ್ಡಿ ತಂಡವನ್ನು ಪ್ರತಿನಿಧಿಸಿದ ಕಿಶನ್ ದ್ರಾವಿಡ್ ಹಾಗೂ ಹೇಮಂತ ಕೆ. ವಿ ಇವರು ಖೇಲೋ ಇಂಡಿಯಾ ರಾಷ್ಟ್ರೀಯ ಕಬಡ್ಡಿ ಪಂದ್ಯಾಟಕ್ಕೆ ಆಯ್ಕೆ ಆಗಿದ್ದಾರೆ. ಇವರ ಜೊತೆ ಖೇಲೋ ಇಂಡಿಯಾ ಕ್ರೀಡಾಧಿಕಾರಿಯಾಗಿ ಬೆಳ್ಳಾರೆ ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಪುಷ್ಪಾವತಿ ಆಯ್ಕೆಗೊಂಡಿದ್ದಾರೆ. ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡ ಪ್ರಕಟ – ಯುಪಿ ಮೂಲದ ಹೊಸ ಆಟಗಾರನಿಗೆ ಚಾನ್ಸ್
ಸುಳ್ಯ ತಾಲೂಕಿನ ಇತಿಹಾಸದಲ್ಲೇ ಪ್ರಥಮ ಬಾರಿಗೆ ಕೆಪಿಎಸ್ ಶಾಲಾ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದ ಖೇಲೋ ಇಂಡಿಯಾಗೆ ಆಯ್ಕೆಯಾಗಿ ಬೆಳ್ಳಾರೆಗೆ ಕೀರ್ತಿ ತಂದಿದ್ದಾರೆ. ಈ ವಿಶೇಷ ಸಾಧನೆಗೆ ಊರಿನ ನಾಗರಿಕರು ತೆಲಂಗಾಣದಿಂದ ಬೆಂಗಳೂರು ಮೂಲಕ ಸುಬ್ರಹ್ಮಣ್ಯ ಮಾರ್ಗವಾಗಿ ಆಗಮಿಸಿದ ಇಬ್ಬರು ಆಟಗಾರರನ್ನು ಮತ್ತು ಕ್ರೀಡಾಧಿಕಾರಿ ಪುಷ್ಪಾವತಿ ಇವರನ್ನು ಬರಮಾಡಿಕೊಂಡು ಸನ್ಮಾನಿಸಿ ಮೆರವಣಿಗೆಯ ಮೂಲಕ ಸಂಸ್ಥೆಗೆ ಬರಮಾಡಿದ್ದಾರೆ.
ಮಂಗಳೂರು: ಮೈರೋಲ್ ಹಣ್ಣು ಎಂದು ಭಾವಿಸಿ ವಿಷಕಾರಿ ಹಣ್ಣಿನ ಜ್ಯೂಸ್ (Fruit Juice) ಮಾಡಿ ಕುಡಿದ ಮಹಿಳೆ ಸಾವನ್ನಪ್ಪಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಶೇಣಿ ಎಂಬಲ್ಲಿ ನಡೆದಿದೆ.
ಶೇಣಿ ಸಮೀಪದ ಕುಳ್ಳಾಜೆ ನಿವಾಸಿ ಲೀಲಾವತಿ (35) ಮೃತ ಮಹಿಳೆ. ಒಂದು ವಾರದ ಹಿಂದೆ ಲೀಲಾವತಿಯ ತಂದೆ ಮೈರೋಲ್ ಹಣ್ಣಿನ ಜ್ಯೂಸ್ ಮಾಡಿ ಕುಡಿದಿದ್ದರು.
ಲೀಲಾವತಿ ಅವರು ಕೂಡ ಮೈರೋಲ್ ಹಣ್ಣಿನ ಜ್ಯೂಸ್ ಸೇವನೆ ಮಾಡಿದ್ದರು. ಪರಿಣಾಮ ಲೀಲಾವತಿ ಅವರಿಗೆ ವಾಂತಿ, ಭೇದಿಯಾಗಿ ಸುಳ್ಯ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ದಾಖಲಿಸುವ ಸಂದರ್ಭ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಹೆತ್ತಪ್ಪನಿಂದಲೇ ಅಪ್ರಾಪ್ತ ಹೆಣ್ಣುಮಕ್ಕಳ ಮೇಲೆ ನಿರಂತರ ಅತ್ಯಾಚಾರ
ಲೀಲಾವತಿಯವರ ತಂದೆ ಅಪಾಯದಿಂದ ಪಾರಾಗಿದ್ದಾರೆ. ಮೈರೋಲ್ ಹಣ್ಣು ಹೆಚ್ಚಾಗಿ ಕಾಡಿನಲ್ಲಿ ಸಿಗುತ್ತದೆ. ಲೀಲಾವತಿ ಅವರು ಮೈರೋಲ್ ಹಣ್ಣಿನ ಬದಲು ಬೇರೆ ವಿಷಕಾರಿ ಅಂಶವಿರುವ ಹಣ್ಣಿನ ಜ್ಯೂಸ್ ಕುಡಿದಿದ್ದರಿಂದ ಈ ಅನಾಹುತ ಸಂಭವಿಸಿದೆ.
ಮಂಗಳೂರು: ಪ್ರವೀಣ್ ಕುಮಾರ್ ನೆಟ್ಟಾರು (Praveen Kumar Nettar) ಹತ್ಯೆ ಪ್ರಕರಣದ ಆರೋಪಿಗಳ ಬೆನ್ನು ಬಿದ್ದಿರುವ (National Investigation Agency) ಎನ್‍ಐಎಗೆ ಮಹತ್ವದ ಸುಳಿವು ಸಿಕ್ಕಿದೆ. ತಲೆ ಮರೆಸಿಕೊಂಡಿರುವ ಪ್ರಮುಖ ಆರೋಪಿಗಳ ಸುಳಿವು ಸಿಕ್ಕಿ ಎನ್‍ಐಎ ವಿದೇಶದತ್ತ ತೆರಳಲು ತಯಾರಿ ನಡೆಸಿದೆ.
2022ರ ಜುಲೈ 27 ರಂದು ದಕ್ಷಿಣ ಕನ್ನಡದ ಬೆಳ್ಳಾರೆಯಲ್ಲಿ (Bellare) ಬಿಜೆಪಿ (BJP) ಮುಖಂಡ ಪ್ರವೀಣ್ ನೆಟ್ಟಾರು ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಪಿಎಫ್‍ಐ ಸಂಘಟನೆ ನಡೆಸಿದ ಈ ಹತ್ಯೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಈ ಹತ್ಯೆ ಪ್ರಕರಣವನ್ನು ಎನ್‍ಐಎಗೆ ಹಸ್ತಾಂತರಿಸಿದ ಬಳಿಕ ತೀವ್ರಗತಿಯಲ್ಲಿ ತನಿಖೆ ನಡೆದಿದ್ದು ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿದ್ದ ಹತ್ತು ಮಂದಿಯನ್ನು ಬಂಧಿಸಿ ಜೈಲಿಗಟ್ಟಲಾಗಿದೆ. ಆದ್ರೆ ಹತ್ಯೆಯ ಮಾಸ್ಟರ್ ಪ್ಲಾನ್ ಮಾಡಿದವರು, ಹಣಕಾಸು ಹಾಗೂ ಆಶ್ರಯ ನೀಡಿದ ಪ್ರಮುಖ ಆರೋಪಿಗಳು ಇನ್ನೂ ತಲೆಮರೆಸಿಕೊಂಡಿದ್ದಾರೆ. ಇವರ ಬಂಧನ ತಲೆನೋವಾಗಿದ್ದ ಎನ್‍ಐಎ ಆರೋಪಿಗಳ ಪತ್ತೆಗೆ ಬಹುಮಾನ ಘೋಷಿಸಿತ್ತು. ಒಟ್ಟು ಆರು ಪ್ರಮುಖ ಆರೋಪಿಗಳನ್ನು ಪತ್ತೆ ಹಚ್ಚಿ ಕೊಟ್ಟವರಿಗೆ ಒಟ್ಟು 22 ಲಕ್ಷ ಬಹುಮಾನ ಘೋಷಿಸಿತ್ತು. ಇದರ ಫಲವಾಗಿಯೇ ಇದೀಗ ಇಬ್ಬರು ಪ್ರಮುಖ ಆರೋಪಿಗಳ ಸುಳಿವು ಸಿಕ್ಕಿದ್ದು ಬಂಧನಕ್ಕೆ ಎನ್‍ಐಎ ಬಲೆ ಬೀಸಿದೆ. ಇದನ್ನೂ ಓದಿ: Praveen Nettaru murder case: 1,500 ಪುಟಗಳ ಸುದೀರ್ಘ ಚಾರ್ಜ್‌ಶೀಟ್ ಸಲ್ಲಿಸಿದ NIA
ಮೊದಲಿಗೆ ನಾಲ್ಕು ಆರೋಪಿಗಳ ಬಂಧನಕ್ಕೆ ಎನ್‍ಐಎ ಬಹುಮಾನ ಘೋಷಿಸಿದ್ದು ಬಳಿಕ ಜನವರಿ 22 ರಂದು ಬಂಟ್ವಾಳದ ಕೋಡಾಜೆ ನಿವಾಸಿ ಮಹಮ್ಮದ್ ಶರೀಫ್ ಹಾಗೂ ನೆಕ್ಕಿಲಾಡಿ ಅಗ್ನಾಡಿ ಹೌಸ್ ನಿವಾಸಿ ಕೆ.ಎ.ಮಸೂದ್ ಪತ್ತೆಗೆ ಒಟ್ಟು ಹತ್ತು ಲಕ್ಷ ಬಹುಮಾನ ಘೋಷಿಸಿತ್ತು. ಈ ಬಹುಮಾನ ಘೋಷಣೆಯ ಕೆಲವೇ ದಿನಗಳಲ್ಲಿ ಎನ್‍ಐಎ ಅಧಿಕಾರಿಗಳಿಗೆ ಅನಾಮಿಕ ವ್ಯಕ್ತಿ ಮಾಹಿತಿ ನೀಡಿದ್ದು ಆರೋಪಿಗಳಿಬ್ಬರೂ ಸೌದಿ ಅರೇಬಿಯಾದಲ್ಲಿ ಇರುವ ಸುಳಿವು ನೀಡಿದ್ದಾನೆ. ಹೀಗಾಗಿ ಎನ್‍ಐಎ ಅಧಿಕಾರಿಗಳು ಈ ಇಬ್ಬರನ್ನೂ ಸೌದಿ ಅರೇಬಿಯಾದಿಂದ ಬಂಧಿಸಿ ತರಲು ತಯಾರಿ ನಡೆಸಿದ್ದಾರೆ. ಇವರ ಬಂಧನಕ್ಕೆ ಬೇಕಾದ ಸಹಾಯಕ್ಕೆ ಸೌದಿ ಅರೇಬಿಯಾ ಸರ್ಕಾರದ ಜೊತೆ ಉನ್ನತ ಅಧಿಕಾರಿಗಳು ಈಗಾಗಲೇ ಮಾತುಕತೆ ನಡೆಸಿದ್ದು, ಕೆಲವೇ ದಿನಗಳಲ್ಲಿ ಬಂಧಿಸಿ ಕರೆ ತರುವ ಸಾಧ್ಯತೆ ಹೆಚ್ಚಿದೆ. ಇದನ್ನೂ ಓದಿ: ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸದಂತೆ ತೀರ್ಮಾನ ಮಾಡಿದ್ದೇನೆ: ಬಿಎಸ್‌ವೈ
ಈ ಹತ್ಯೆ ಪ್ರಕರಣದಲ್ಲಿ ಇನ್ನೂ ನಾಲ್ವರು ಪ್ರಮುಖ ಆರೋಪಿಗಳಿದ್ದು ಅವರ ಬಂಧನಕ್ಕೆ ಮೊದಲ ಹಂತದಲ್ಲಿ 12 ಲಕ್ಷ ರೂ. ಬಹುಮಾನ ಘೋಷಿಸಿದೆ. ಆರೋಪಿಗಳಾದ ಸುಳ್ಯದ ಬೆಳ್ಳಾರೆ ಬೂಡುಮನೆ ನಿವಾಸಿ ಮೊಹಮ್ಮದ್ ಮುಸ್ತಾಫಗೆ 5 ಲಕ್ಷ ರೂ., ಮಡಿಕೇರಿಯ ಗದ್ದಿಗೆ ನಿವಾಸಿ ತುಫೈಲ್ ಎಚ್.ಎಂಗೆ 5 ಲಕ್ಷ ರೂ., ಸುಳ್ಯದ ಕಲ್ಲುಮುಟ್ಲು ನಿವಾಸಿ ಉಮ್ಮರ್ ಫಾರೂಕ್‍ಗೆ 2 ಲಕ್ಷ ರೂ. ಹಾಗೂ ಸುಳ್ಯದ ಬೆಳ್ಳಾರೆ ನಿವಾಸಿ ಅಬೂಬಕ್ಕರ್ ಸಿದ್ದಿಕ್ ಪತ್ತೆಗೆ 2 ಲಕ್ಷ ರೂ. ಬಹುಮಾನ ಈ ಹಿಂದೆಯೇ ಎನ್‍ಐಎ ಘೋಷಿಸಿತ್ತು. ಒಟ್ಟಿನಲ್ಲಿ ಪ್ರವೀಣ್ ನೆಟ್ಟಾರು ಹತ್ಯೆ ಕೇಸನ್ನು ಗಂಭೀರವಾಗಿ ಪರಿಗಣಿಸಿರುವ ಎನ್ಐಎ ಎಲ್ಲಾ ಆರೋಪಿಗಳನ್ನು ಬಂಧಿಸುವವರೆಗೂ ವಿರಮಿಸುವ ಲಕ್ಷಣ ಕಾಣಿಸುತ್ತಿಲ್ಲ.
Live Tv
[brid partner=56869869 player=32851 video=960834 autoplay=true]
ಮಂಗಳೂರು: ರಸ್ತೆ ಅವ್ಯವಸ್ಥೆಯಿಂದಾಗಿ ಬಸ್ಸಿನ ರಾಡ್ ಸೊಂಟಕ್ಕೆ ತಾಗಿ ವ್ಯಕ್ತಿಯ ಬೆನ್ನು ಮೂಳೆ ಮುರಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಕಲ್ಲಡ್ಕದಲ್ಲಿ ನಡೆದಿದೆ.
ವಿಜಯ್ ಕುಮಾರ್ ಬೆನ್ನು ಮೂಳೆ ಮುರಿತಕ್ಕೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿ. ಸುಳ್ಯ ತಾಲೂಕಿನ ಬೆಳ್ಳಾರೆ ನಿವಾಸಿಯಾಗಿರುವ ಇವರು, ಮೊಬೈಲ್ ಟೆಕ್ನೀಷಿಯನ್ ಆಗಿ ಕೆಲಸ ಮಾಡುತ್ತಿದ್ದಾರೆ. ಅಂತೆಯೇ ಇವರು ಮೊಬೈಲ್ ಬಿಡಿಭಾಗಕ್ಕಾಗಿ ಮಂಗಳೂರಿಗೆ ಬಂದಿದ್ದರು. ಮಂಗಳೂರಿನಿಂದ ಮತ್ತೆ ಬೆಳ್ಳಾರೆಗೆ ಹೋಗುವ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ.
ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-75ರ ಕಲ್ಲಡ್ಕ ಪ್ರದೇಶದಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಕುಂಟುತ್ತಾ ಸಾಗುತ್ತಿದೆ. ಈ ರಾಷ್ಟ್ರೀಯ ಹೆದ್ದಾರಿ ಬೃಹತ್ ಗುಂಡಿಗಳಿಂದ ಕೂಡಿದೆ. ವ್ಯಕ್ತಿ ಬಸ್ಸಿನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಸರ್ಕಾರಿ ಬಸ್ ರಸ್ತೆ ಗುಂಡಿಗೆ ಬಿದ್ದಿದೆ. ಈ ವೇಳೆ ವಿಜಯ್ ಸೀಟಿನಿಂದ ಮೇಲೆ ಹಾರಿದ್ದಾರೆ. ಪರಿಣಾಮ ಬಸ್ಸಿನ ರಾಡ್ ತಾಗಿ ವಿಜಯ್ ಕುಮಾರ್ ಬೆನ್ನಿಗೆ ಗಂಭೀರ ಪೆಟ್ಟು ಬಿದ್ದಿದೆ.
ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಜಯ್ ಅವರ ಬೆನ್ನು ಹುರಿ, ಕುತ್ತಿಗೆ ಭಾಗದ ಎಲುಬು ಜಖಂಗೊಂಡಿದೆ. ಬೆನ್ನು ಮೂಳೆ ಆಪರೇಷನ್ ಗೆ ವೈದ್ಯರು ಸೂಚಿಸಿದ್ದಾರೆ. ಸದ್ಯ ವಿಜಯ್ ಕುಮಾರ್ ಅವರು ಮಲಗಿದ ಸ್ಥಿತಿಯಲ್ಲೇ ಇದ್ದಾರೆ. ಇದನ್ನೂ ಓದಿ: ಎಸಿಬಿ ರದ್ದು; ಹೈಕೋರ್ಟ್ ಆದೇಶ ಪಾಲಿಸ್ತೀವಿ, ಸುಪ್ರೀಂಗೆ ಹೋಗಲ್ಲ – ಸಿಎಂ
ಘಟನೆ ಸಂಬಂಧ ಬಸ್ ಚಾಲಕನ ವಿರುದ್ಧ ನಿರ್ಲಕ್ಷ್ಯದ ಚಾಲನೆ ಎಂದು ದೂರು ನೀಡಲಾಗಿದ್ದು, ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Live Tv
[brid partner=56869869 player=32851 video=960834 autoplay=true]
ಮಂಗಳೂರು: ಬಿಜೆಪಿ ಯುವ ಮುಖಂಡ ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆಯ ಆರೋಪಿಗಳಿಗೆ ಪಿಎಫ್‍ಐ ಮತ್ತು ಎಸ್‍ಡಿಪಿಐ ಜೊತೆ ಸಂಬಂಧ ಇರುವುದು ಗೊತ್ತಾಗಿದೆ. ಹತ್ಯೆಯ ಬಳಿಕ ಆರೋಪಿಗಳು ಕಾಸರಗೋಡು ಮಸೀದಿಗೆ ಹೋಗಿದ್ದರು ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ.
ಪ್ರಕರಣದ ಕುರಿತಾಗಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಡಿಜಿಪಿ ಅಲೋಕ್ ಕುಮಾರ್, ಹತ್ಯೆಯಲ್ಲಿ ನೇರವಾಗಿ ಭಾಗಿಯಾಗಿ ಹಲ್ಲೆ ನಡೆಸಿದ ಮೂವರು ಆರೋಪಿಗಳನ್ನು ಇಂದು ಬೆಳಗ್ಗೆ ಮಂಗಳೂರಿನ ತಲಪಾಡಿ ಚೆಕ್ ಪೋಸ್ಟ್ ಬಳಿ ಬಂಧಿಸಲಾಗಿದೆ. ಸುಳ್ಯದ ಶಿಯಾಬ್ (33), ಅಂಕತಡ್ಕದ ರಿಯಾಝ್ (27) ಸುಳ್ಯದ ಎಲಿಮಲೆ ನಿವಾಸಿ ಬಶೀರ್‌ನನ್ನು ಬಂಧಿಸಿದ್ದೇವೆ. ಶಿಯಾಬ್ ಕ್ಯಾಂಪ್ಕೋ ಕಂಪನಿಗೆ ಕೊಕ್ಕೊ ವಿತರಣೆ ಮಾಡುತ್ತಿದ್ದರೆ ರಿಯಾಝ್ ಕೋಳಿ ವ್ಯಾಪಾರ ಮಾಡುತ್ತಿದ್ದ. ಬಶೀರ್ ಹೋಟೆಲ್‍ನಲ್ಲಿ ಕೆಲಸ ಮಾಡುತ್ತಿದ್ದ. ಕೃತ್ಯಕ್ಕೆ ಬ್ಲ್ಯಾಕ್ ಸ್ಪ್ಲೆಂಡರ್ ಬೈಕನ್ನು ಬಳಕೆ ಮಾಡಲಾಗಿದೆ. ಕಾರೊಂದನ್ನು ಸಹ ಬಳಕೆ ಮಾಡಿದ್ದಾರೆ. ಕೃತ್ಯಕ್ಕೆ ಬಳಸಿದ ಸೊತ್ತುಗಳನ್ನು ಸಹ ವಶಪಡಿಸಿಕೊಳ್ಳುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ವಾರದ ಹಿಂದೆಯೇ ಪ್ರವೀಣ್ ಹತ್ಯೆಗೆ ಸ್ಕೆಚ್ – ಕೇರಳದ 7 ಕಡೆ ಆಶ್ರಯ, ಹಂತಕರು ಕೊನೆಗೂ ಅಂದರ್
ಆರೋಪಿಗಳ ಬಗ್ಗೆ ಮೊದಲೇ ನಮಗೆ ಸುಳಿವು ಸಿಕ್ಕಿತ್ತು. ಆದರೆ ನಾವು ಬಹಿರಂಗ ಮಾಡಿರಲಿಲ್ಲ. ಮುಂದೆ ಈ ರೀತಿಯ ಯಾವುದೇ ಕೃತ್ಯ ನಡೆಯದೇ ಕಠಿಣ ಕ್ರಮ ಕೈಗೊಳ್ಳುತ್ತೇವೆ. ವಾರೆಂಟ್ ಇಶ್ಯೂ ಮಾಡಿ ಹಂತಕರು ಮತ್ತು ಹಂತಕರಿಗೆ ಸಹಕಾರ ನೀಡಿದವರ ಆಸ್ತಿಗಳನ್ನು ಮುಟ್ಟುಗೋಲು ಹಾಕುತ್ತೇವೆ. ಯಾವುದೇ ಅಮಾಯಕರನ್ನು ಬಂಧನ ಮಾಡುವುದಿಲ್ಲ. ಆದರೆ ಕೃತ್ಯದಲ್ಲಿ ಭಾಗಿಯಾದವರೆಲ್ಲರನ್ನು ಬಂಧಿಸುತ್ತೇವೆ. ಯಾರನ್ನು ಫಿಕ್ಸ್ ಮಾಡುವುದಕ್ಕೆ ಹೋಗುವುದಿಲ್ಲ. ಯಾರನ್ನೋ ಬಂಧಿಸುವುದಕ್ಕೆ ಇದು ಹುಡುಗಾಟವಲ್ಲ. ನಮಗೆ ಜಾತಿ, ಧರ್ಮ, ಬಣ್ಣ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಈದ್ಗಾ ಮೈದಾನದ ವಿವಾದ- ಸರ್ಕಾರದ ನಿರ್ಧಾರವೇ ಅಂತಿಮ: ಬೊಮ್ಮಾಯಿ
ಎಲ್ಲ ಮಾಹಿತಿಯನ್ನು ನಾವು ಎನ್‍ಐಎಗೆ ನೀಡುತ್ತೇವೆ. ಎನ್‍ಐಎ ಕೂಡಾ ತನಿಖೆ ಮುಂದುವರಿಸುತ್ತಿದೆ. ನಮ್ಮ ಅಧಿಕಾರಿಗಳು ಒಳ್ಳೆಯ ಕೆಲಸ ಮಾಡಿದ್ದಾರೆ. ಪೊಲೀಸ್ ತಂಡಕ್ಕೆ ಸೂಕ್ತ ಬಹುಮಾನ ನೀಡಲಾಗುತ್ತದೆ. ಶತಾಯಗತಾಯವಾಗಿ ಈ ಪ್ರಕರಣ ಭೇದಿಸಬೇಕಾಗಿತ್ತು. ಜನರಲ್ಲಿಯೂ ಸಾಕಷ್ಟು ಆತಂಕವಿತ್ತು. ಪ್ರಕರಣ ಭೇದಿಸಲು ಸಾಕಷ್ಟು ಒತ್ತಡಗಳಿತ್ತು. ಅಧಿಕಾರಿಗಳು ಉತ್ತಮ ಕೆಲಸ ಮಾಡಿದ್ದಾರೆ. ಅಧಿಕಾರಿ ತಂಡಕ್ಕೆ ಬಹುಮಾನವೂ ಘೋಷಿಸಲಾಗುತ್ತದೆ ಎಂದು ತಿಳಿಸಿದರು.
Live Tv
[brid partner=56869869 player=32851 video=960834 autoplay=true]
– ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಹತ್ಯೆ ಕೇಸ್ – ಬೆಳ್ಳಾರೆಯ ಮೂವರು ಆರೋಪಿಗಳು ಅರೆಸ್ಟ್
ಮಂಗಳೂರು: ಬಿಜೆಪಿಯ ಯುವ ನಾಯಕ ಪ್ರವೀಣ್ ನೆಟ್ಟಾರು ಹತ್ಯೆಗೆ ಒಂದು ವಾರ ಹಿಂದೆಯೇ ಹಂತಕರು ಯೋಜನೆ ರೂಪಿಸಿದ್ದರು. ಆದರೆ ಪ್ರತಿ ನಿತ್ಯ ಪತ್ನಿ ಜೊತೆ ಪ್ರವೀಣ್ ಬರುತ್ತಿದ್ದ ಹಿನ್ನೆಲೆಯಲ್ಲಿ ಹತ್ಯೆ ದಿನವನ್ನು ಮುಂದೂಡುತ್ತಿದ್ದರು. ಆದರೆ ಜುಲೈ 26ರ ರಾತ್ರಿ ಪತ್ನಿ ಇಲ್ಲದ ಸಮಯದಲ್ಲಿ ಹತ್ಯೆ ಮಾಡಿದ ವಿಚಾರ ಈಗ ತಿಳಿದು ಬಂದಿದೆ.
ಪ್ರವೀಣ್ ಹತ್ಯೆ ಮಾಡಿದ ಪ್ರಮುಖ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳಾದ ಶಿಯಾಬ್, ರಿಯಾಝ್, ಬಶೀರ್ ಬೆಳ್ಳಾರೆ ಆಸುಪಾಸಿನ ನಿವಾಸಿಗಳಾಗಿದ್ದಾರೆ. ಮಸೂದ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿದ್ದಕ್ಕೆ ಈ ಕೃತ್ಯ ನಡೆದಿದೆ ಎಂಬ ವಿಚಾರ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಪ್ರವೀಣ್ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಇಲ್ಲಿಯವರೆಗೆ 10 ಮಂದಿಯ ಬಂಧನವಾಗಿದೆ.
ಹತ್ಯೆ ಮಾಡಿದ್ದು ಯಾಕೆ?
ಜುಲೈ 19ರಂದು ಬೆಳ್ಳಾರೆಯಲ್ಲಿ ಮಸೂದ್ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಜುಲೈ 21ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮಸೂದ್ ಸಾವನ್ನಪ್ಪಿದ್ದಕ್ಕೆ ಪ್ರತೀಕಾರಕ್ಕಾಗಿ ಜುಲೈ 21ರಂದೇ ಬೆಳ್ಳಾರೆಯಲ್ಲೇ ಸಂಘ ಪರಿವಾರದ ಪ್ರಮುಖನ ಹತ್ಯೆಗೆ ಹಂತಕರು ಸ್ಕೆಚ್ ಹಾಕಿದ್ದರು.
ಬೆಳ್ಳಾರೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಕ್ರೀಯ ಕಾರ್ಯಕರ್ತರಾಗಿದ್ದ ಪ್ರವೀಣ್ ನೆಟ್ಟಾರು ಕೋಳಿ ಉದ್ಯಮವನ್ನೂ ಆರಂಭಿಸಿ ಯಶಸ್ವಿಯಾಗಿದ್ದರು. ಹೀಗಾಗಿ ಪ್ರವೀಣ್ ಅವರನ್ನು ಹತ್ಯೆಯನ್ನು ಮಾಡಲು ಗ್ಯಾಂಗ್ ಸಿದ್ಧತೆ ಮಾಡಿತ್ತು. ಹತ್ಯೆಗಾಗಿ ಒಂದು ವಾರಗಳ ತಯಾರಿ ಮಾಡಿದ್ದ ಹಂತಕರು ಜುಲೈ 21ರ ಬಳಿಕ ಪ್ರತಿದಿನ ಪ್ರವೀಣ್ ಅಂಗಡಿ ಬಳಿ ಬರುತ್ತಿದ್ದರು. ಆದರೆ ಪ್ರವೀಣ್ ಜೊತೆಗೆ ಪತ್ನಿ ಇರುತ್ತಿದ್ದನ್ನು ಗಮನಿಸಿ ಮರಳುತ್ತಿದ್ದರು. ಇದನ್ನೂ ಓದಿ: ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆ ಪ್ರಕರಣದ ಆರೋಪಿಗಳ ಆಸ್ತಿ ಸೀಜ್: ಅಲೋಕ್ ಕುಮಾರ್
ಜುಲೈ 26 ರಂದು ಪ್ರವೀಣ್ ಒಬ್ಬರೇ ಅಂಗಡಿಯಲ್ಲಿ ಇರುವುದನ್ನು ಗಮನಿಸಿದ್ದ ಗ್ಯಾಂಗ್ ಹತ್ಯೆ ಮಾಡಿ ಹಳೆಯ ಸ್ಪ್ಲೆಂಡರ್ ಬೈಕ್ ಏರಿ ಪರಾರಿಯಾಗಿತ್ತು. ನಂಬರ್ ಪ್ಲೇಟ್ ಅಸ್ಪಷ್ಟವಾಗಿ ಕಾಣುತ್ತಿದ್ದ ಬೈಕ್ ಏರಿದ್ದ ಇವರು ಬಳಿಕ ಕಾರಿನನಲ್ಲಿ ಕೇರಳಕ್ಕೆ ಪರಾರಿಯಾಗಿದ್ದರು.
ಮೊದಲೇ ಪ್ಲ್ಯಾನ್:
ಪ್ರವೀಣ್ ಹತ್ಯೆಗೆ ಮೊದಲೇ ಕೇರಳದಲ್ಲಿ ಎಲ್ಲಿ ತಂಗಬೇಕು ಎಂಬುದನ್ನು ಹಂತಕರು ಪ್ಲ್ಯಾನ್ ಮಾಡಿದ್ದರು. ಅದರಂತೆ ಮೊದಲು ತಲಶೇರಿ, ಬಳಿಕ ಕಣ್ಣೂರು, ಮಲ್ಲಪುರಂನಲ್ಲಿರುವ ಅಡಗುತಾಣದಲ್ಲಿ ತಂಗಿದ್ದರು. 15 ದಿನದ ಅಂತರದಲ್ಲಿ ಏಳು ಕಡೆಗಳಲ್ಲಿ ಹಂತಕರು ಅಶ್ರಯ ಪಡೆದಿದ್ದರು. ಹಂತಕರು ನೆಲೆಸಿದ್ದ ಜಾಗ ಪತ್ತೆಯಾಗಿ ಪೊಲೀಸರು ಸ್ಥಳಕ್ಕೆ ಹೋದಾಗ ಆರೋಪಿಗಳು ಸ್ಥಳದಿಂದ ಪರಾರಿಯಾಗುತ್ತಿದ್ದರು.
ಪೊಲೀಸರ ಪ್ಲ್ಯಾನ್ ಏನಿತ್ತು?
ಆರೋಪಿಗಳ ಬುಡಸಮೇತ ಹೆಡೆಮುರಿ ಕಟ್ಟಲು ಎಡಿಜಿಪಿ ಅಲೋಕ್ ಕುಮಾರ್ ಪ್ಲ್ಯಾನ್ ಮಾಡಿದ್ದರು. ಮೊದಲು ಹಂತಕರ ಕುಟುಂಬ ಬಳಿಕ ಹಂತಕರ ಆತ್ಮೀಯರ ತೀವ್ರ ವಿಚಾರಣೆ ನಡೆಸಿದ್ದರು. ಈ ವೇಳೆ ಕೃತ್ಯಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಭಾಗವಹಿಸಿದವರ ಎಲ್ಲರ ಆಸ್ತಿ ಮುಟ್ಟುಗೋಲು ಹಾಕುವುದಾಗಿ ಎಚ್ಚರಿಕೆ ನೀಡಿದ್ದರು. ಅಷ್ಟೇ ಅಲ್ಲದೇ ಹಂತಕರಿಗೆ ಆಶ್ರಯ ನೀಡಿದವರಿಗೂ ಖಡಕ್ ಎಚ್ಚರಿಕೆ ನೀಡಿದ್ದರು.
ಹದಿನೈದು ದಿನದಲ್ಲಿ ಐದು ಬಾರಿ ಬೆಳ್ಳಾರೆಗೆ ಭೇಟಿ ನೀಡಿದ್ದ ಎಡಿಜಿಪಿ ಅಲೋಕ್ ಕುಮಾರ್ ಬುಧವಾರವೂ ಆರು ಜಿಲ್ಲೆಯ ಎಸ್ಪಿಗಳ ಜೊತೆ ಸಭೆ ನಡೆಸಿದ್ದರು. ಹಂತಕರಿಗೆ ಆಶ್ರಯ ನೀಡಿದವರಿಗೆ ಅಡಗುತಾಣಗಳಿಗೆ ಸೇನಾ ಮಾದರಿಯಲ್ಲೇ ಕಾರ್ಯಾಚರಣೆ ಮಾಡಲಾಗುವುದು ಎಚ್ಚರಿಕೆಯ ಸಂದೇಶವನ್ನು ಅಲೋಕ್ ಕುಮಾರ್ ರವಾನಿಸಿದ್ದರು. ಎಚ್ಚರಿಕೆ ನೀಡಿದ ಬೆನ್ನಲ್ಲೇ ಹಂತಕರು ಸೆರೆಯಾಗಿದ್ದಾರೆ ಎಂಬ ವಿಚಾರ ಪೊಲೀಸ್ ಮೂಲಗಳಿಂದ ಸಿಕ್ಕಿದೆ.
ಪ್ರವೀಣ್ ನೆಟ್ಟಾರು ಹಂತಕರ ಬಂಧನಕ್ಕೆ ಪೊಲೀಸರು 6 ವಿಶೇಷ ತಂಡವನ್ನು ರಚಿಸಿತ್ತು. ಪ್ರಕರಣ ಗಂಭೀರ ಸ್ವರೂಪದ್ದಾಗಿದ್ದರಿಂದ ಈ ಹತ್ಯೆ ಕೇಸ್ ತನಿಖೆಯನ್ನು ರಾಜ್ಯ ಸರ್ಕಾರ ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ವರ್ಗಾಯಿಸಿತ್ತು.
Live Tv
[brid partner=56869869 player=32851 video=960834 autoplay=true]
ಮಂಗಳೂರು: ಬಿಜೆಪಿ ಯುವ ಮುಖಂಡ ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದಲ್ಲಿ ತಲೆಮರೆಸಿಕೊಂಡಿದ್ದ ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಪ್ರವೀಣ್ ಹತ್ಯೆಗೈದು ಪ್ರಮುಖ ಮೂವರು ಆರೋಪಿಗಳು ಕೇರಳಕ್ಕೆ ಪರಾರಿಯಾಗಿದ್ದರು. ಆ ಬಳಿಕ ಪೊಲೀಸರು ಆರೋಪಿಗಳ ಪತ್ತೆಗಾಗಿ ಕೇರಳದಲ್ಲಿ ಬೀಡುಬಿಟ್ಟಿದ್ದರು. ಇದೀಗ ಕೇರಳದಲ್ಲಿ ಮೂವರು ಆರೋಪಿಗಳಾದ ಶಿಯಾಬ್, ರಿಯಾಝ್, ಬಶೀರ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳಿಂದ ವರದಿಯಾಗಿದೆ. ಇದನ್ನೂ ಓದಿ: ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆ ಪ್ರಕರಣದ ಆರೋಪಿಗಳ ಆಸ್ತಿ ಸೀಜ್: ಅಲೋಕ್ ಕುಮಾರ್
ಪೊಲೀಸರು ಕೇರಳದಲ್ಲಿ ಆರೋಪಿಗಳನ್ನು ಬಂಧಿಸಿರುವ ಬಗ್ಗೆ ಮಾಹಿತಿ ಇದ್ದು, ಗೌಪ್ಯ ಸ್ಥಳದಲ್ಲಿರಿಸಿ ಮೂವರು ಆರೋಪಿಗಳನ್ನು ವಿಚಾರಣೆ ನಡೆಸುತ್ತಿದ್ದಾರೆ. ಪ್ರವೀಣ್ ಹತ್ಯೆಗೈದ ಪ್ರಮುಖ ಆರೋಪಿಗಳ ಬಂಧನದ ಬಗ್ಗೆ ಇಂದು ಮಧ್ಯಾಹ್ನ 12.30ಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ. ಇದನ್ನೂ ಓದಿ: ಸೇನಾ ಶಿಬಿರದೊಳಗೆ ನುಗ್ಗಲು ಯತ್ನಿಸಿದ್ದ ಇಬ್ಬರು ಉಗ್ರರ ಹತ್ಯೆ- ಮೂವರು ಯೋಧರು ಹುತಾತ್ಮ
ಏನಿದು ಘಟನೆ:
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಪೆರುವಾಜೆ ಕ್ರಾಸ್ ಬಳಿ ಅಕ್ಷಯ್ ಹೆಸರಿನ ಕೋಳಿ ಮಾಂಸದ ಅಂಗಡಿ ಹೊಂದಿದ್ದ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ಕುಮಾರ್ ನೆಟ್ಟಾರು (31), ಜುಲೈ 26 ರಂದು ರಾತ್ರಿ 8 ಗಂಟೆ ಸುಮಾರಿಗೆ ಅಂಗಡಿ ಮುಚ್ಚಿ ಮನೆ ಕಡೆ ಹೊರಟಿದ್ದರು. ಈ ವೇಳೆ ಬೈಕಿನಲ್ಲಿ ಬಂದಿದ್ದ ಮೂವರು ತಲ್ವಾರ್‌ನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ತಕ್ಷಣವೇ ಪುತ್ತೂರು ಆಸ್ಪತ್ರೆಗೆ ದಾಖಲಿಸಿದರೂ ಕುತ್ತಿಗೆಯ ಭಾಗಕ್ಕೆ ತೀವ್ರ ಏಟು ಬಿದ್ದಿದ್ದ ಕಾರಣ ಪ್ರವೀಣ್ ಮೃತಪಟ್ಟಿದ್ದರು.
Live Tv
[brid partner=56869869 player=32851 video=960834 autoplay=true]
ಮಂಗಳೂರು: ಬಿಜೆಪಿ ಮುಖಂಡ ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆ ಪ್ರಕರಣದ ಬಳಿಕ ಪ್ರವೀಣ್ ಪಾರ್ಥಿವ ಶರೀರದ ಮೆರವಣಿಗೆ ವೇಳೆ ಅಂತಿಮ ನಮನ ಸಲ್ಲಿಸಲು ಆಗಮಿಸಿದ್ದ ಬಿಜೆಪಿ ಕಾರ್ಯಕರ್ತರಿಗೆ ಲಾಠಿ ಚಾರ್ಚ್ ಮಾಡಿದ ಪರಿಣಾಮ ಬೆಳ್ಳಾರೆ ಮತ್ತು ಸುಬ್ರಹ್ಮಣ್ಯ ಠಾಣಾ ಎಸ್‍ಐಗಳನ್ನು ವರ್ಗಾವಣೆಗೊಳಿಸಲಾಗಿದೆ.
ಪ್ರವೀಣ್ ಪಾರ್ಥಿವ ಶರೀರದ ಮೆರವಣಿಗೆ ವೇಳೆ ಅಂತಿಮ ನಮನ ಸಲ್ಲಿಸಲು ಬಂದಿದ್ದ ಆರ್‌ಎಸ್‌ಎಸ್‌ನ ಹಿರಿಯ ಕಾರ್ಯಕರ್ತರೊಬ್ಬರ ಮೇಲೆ ಪೊಲೀಸರು ಲಾಠಿ ಬೀಸಿ ಹೆಲ್ಮೆಟ್‌ನಿಂದ ಹೊಡೆದಿದ್ದರು. ಆ ಬಳಿಕ ಬೆಳ್ಳಾರೆ, ಸುಬ್ರಹ್ಮಣ್ಯ ಠಾಣೆಯ ಎಸ್‍ಐ ಮತ್ತು ಇತರ ಪೊಲೀಸರನ್ನು ಅಮಾನತುಗೊಳಿಸಬೇಕೆಂದು ಕೂಗು ಕೇಳಿ ಬಂದಿತ್ತು. ಬಳಿಕ ಇದೀಗ ಇಬ್ಬರು ಎಸ್‍ಐ ಮತ್ತು ಸಿಬ್ಬಂದಿಯನ್ನು ವರ್ಗಾವಣೆಗೊಳಿಸಿ ಅವರ ಸ್ಥಾನಕ್ಕೆ ಇತರ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಇದನ್ನೂ ಓದಿ: ಸುರತ್ಕಲ್‌ನಲ್ಲಿ ಫಾಝಿಲ್ ಹತ್ಯೆ – 14 ಮಂದಿ ವಶಕ್ಕೆ
ಮಂಗಳೂರು: ಕರಾವಳಿಯನ್ನೇ ಬೆಚ್ಚಿಬೀಳಿಸಿದ್ದ ಬಿಜೆಪಿ ಮುಖಂಡ ಪ್ರವೀಣ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಬಂಧಿತ ಆರೋಪಿಗಳು ಹತ್ಯೆಗೆ ನಡೆದಿದ್ದ ಪ್ಲಾನ್ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ.
ಶಫೀಕ್ ಮತ್ತು ಝಾಕೀರ್ ಇಬ್ಬರು ಬಂಧಿತರು. ಹತ್ಯೆಗೆ ನಿಜವಾದ ಕಾರಣರಾದ ಹಂತಕರ ಬಂಧನವಾಗಿಲ್ಲ. ಹಂತಕರಿಗಾಗಿ ಪೊಲೀಸರ ತಂಡ ರಚಿಸಿದ್ದು. ಐಪಿಎಸ್ ಅಧಿಕಾರಿ ನೇತೃತ್ವದ ತಂಡ ಕೇರಳದಲ್ಲಿ ಬೀಡುಬಿಟ್ಟಿದೆ. ಮಾಹಿತಿಯ ಪ್ರಕಾರ ಇಬ್ಬರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎನ್ನಲಾಗಿದೆ. ಶಫೀಕ್ ಮಾಹಿತಿ ಆಧರಿಸಿ ಕೇರಳದ ಗ್ರಾಮವೊಂದರಲ್ಲಿ ಇಬ್ಬರು ಶಂಕಿತರ ವಶಕ್ಕೆ ಪಡೆಯಲಾಗಿದೆ. ಇವರೇ ಆ ಹಂತಕರು ಎನ್ನುವುದು ಸ್ಪಷ್ಟವಾಗಬೇಕಿದೆ. ಸದ್ಯ ಬಂಧಿತ ಶಫೀಕ್ ಮತ್ತು ಝಾಕೀರ್ ಹತ್ಯೆಗೆ ಸಹಾಯ ಮಾಡಿದವರಾಗಿದ್ದು, ಹಂತಕರು ತಪ್ಪಿಸಿಕೊಳ್ಳಲು ದಾರಿ ತೋರಿಸಿದವರಾಗಿದ್ದಾರೆ. ವಿಚಾರಣೆ ವೇಳೆ ಇದನ್ನು ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ: ಪ್ರವೀಣ್ ಹತ್ಯೆಗೆ ರಾಜಸ್ಥಾನ ಸಿಎಂ ಖಂಡನೆ
ಇಬ್ಬರಿಗೂ ಆಗಸ್ಟ್ 11ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಅಗತ್ಯವಿದ್ದರೆ ಅವರನ್ನು ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸುವುದಾಗಿ ಪೊಲೀಸರು ಹೇಳಿದ್ದಾರೆ. ಈ ನಡುವೆ ಸಿಸಿಟಿವಿ ದೃಶ್ಯವೊಂದು ಸಿಕ್ಕಿದ್ದು ಅದರಿಂದ ಭಯಾನಕ ಸತ್ಯ ಹೊರಬಿದ್ದಿದೆ. ಆರೋಪಿಗಳಲ್ಲಿ ಒಬ್ಬನಾದ ಶಫೀಕ್ ವ್ಯಕ್ತಿಯೊಬ್ಬನನ್ನು ದ್ವಿಚಕ್ರ ವಾಹನದಲ್ಲಿ ಕರೆದುಕೊಂಡು ಬಂದು ಬೆಳ್ಳಾರೆಯ ಕೋಳಿ ವ್ಯಾಪಾರಿ ಪೃಥ್ವಿರಾಜ್‍ನನ್ನು ದೂರದಿಂದಲೇ ತೋರಿಸಿ ಹೋಗಿದ್ದಾನೆ. ಆದರೆ, ಪೃಥ್ವಿರಾಜ್ ಬದಲಿಗೆ ಪ್ರವೀಣ್ ಹತ್ಯೆ ಆಗಿದ್ದು, ಪ್ರವೀಣ್ ಹತ್ಯೆ ಹಿಂದೆ ಯಾರ ಕೈವಾಡವಿದೆ? ಪೃಥ್ವಿರಾಜ್‍ನನ್ನು ಕೊಲೆ ಮಾಡಲು ಬಂದು ಪ್ರವೀಣ್‍ನ ಕಥೆ ಮುಗಿಸಿದ್ರಾ? ತಪ್ಪು ಮಾಹಿತಿಯಿಂದ ಈ ಕೊಲೆ ನಡೀತಾ? ಹೀಗೆ ಸಾಲು, ಸಾಲು ಪ್ರಶ್ನೆಗಳು ಎದುರಾಗಿದೆ. ಈ ಎಲ್ಲ ಆಯಾಮಗಳಲ್ಲೂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಇದನ್ನೂ ಓದಿ: ಪ್ರವೀಣ್ ಕುಟುಂಬಕ್ಕೆ 50 ಲಕ್ಷ ಪರಿಹಾರ ವಿತರಣೆ
Live Tv
[brid partner=56869869 player=32851 video=960834 autoplay=true]